Thursday, August 30, 2018

ಕೊಲೆಗಳು ಹಾಗೂ ಸೈದ್ಧಾಂತಿಕ ಚರ್ಚೆ

ಸೈದ್ಧಾಂತಿಕ ಚರ್ಚೆಗಳು ಹಾಗೂ ಕೊಲೆಗಳು

ಜಗತ್ತು ತುಂಬ ಮುಂದುವರೆದು ಅಪಾರ ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸುತ್ತಿದೆ ಅಂದುಕೊಂಡಿದ್ದೇವೆ.
ಆದರೆ ಯಾಕೋ ಮನಸು ಮುದುಡಿ ನಡುಗುತಿದೆ.‌ ಮೇಲೆ ಸುರಿಯುವ ಧಾರಾಕಾರ ಮಳೆ, ಮೈಯಲ್ಲಿ ನಡುಕ, ನಿರಾಶೆ, ಹೇಳಲಾಗದ ಬೇಗುದಿ.

ಅಭಿವ್ಯಕ್ತಿ ಸ್ವಾತಂತ್ರ್ಯ ತನ್ನ ಕಸುವು ಕಳೆದುಕೊಂಡಿದೆಯೆಂಬ ಭಯ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ಕಾಲಘಟ್ಟ ಬೇರೆ.‌ ಆಗ ಪೌರೋಹಿತ್ಯದ ಅಟ್ಟಹಾಸ. ಆರ್ಥಿಕ, ಸಾಮಾಜಿಕ ಸಮಾನತೆಯ ಆಧಾರದ ಮೇಲೆ ಕಟ್ಟಿದ ಅನುಭವ ಮಂಟಪದ ಮೌಲ್ಯಗಳು ವಿಜ್ರಂಭಿಸಲಾರಬಿಸಿದವು.

ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ದೇವರ ಹೆಸರಿನ ಚಾತುರ್ವಣ ವ್ಯವಸ್ಥೆಗೆ ಪೆಟ್ಟು ಬಿದ್ದು ಪುರೋಹಿತಶಾಹಿಗಳು ನಿರುದ್ಯೋಗಿಗಳಾದರು.
ಹೊಟ್ಟೆಯಲ್ಲಿ ಉರಿಬಿತ್ತು ಮತ್ತದೇ ರಾಜಸತ್ತೆಯ ಮೂಲಕ ಇಡೀ ಚಳುವಳಿಯ ಹತ್ತಿಕ್ಕುವ ಪ್ರಯತ್ನ ಅದೂ ಅದೇ ಹಿಂಸೆಯ ಮಾರ್ಗದ ಮೂಲಕ!

ಆನೆ ಕಾಲ ತುಳಿತದ ಅಮಾನವೀಯತೆಯ ಅಟ್ಟಹಾಸ. ಚದುರಿ ಹೋದ ಚಳುವಳಿ ಆದರೆ ಮೌಲ್ಯಗಳು ಚದುರಲಿಲ್ಲ ವಚನಗಳ ಮೂಲಕ ಇಂದಿಗೂ ಜೀವಂತ.

ಹೊಸ ಹೊಳವು, ಹೊಸ ವ್ಯಾಖ್ಯಾನ ಮತ್ತೆ ಹೋರಾಟದ ಪುನರುತ್ಥಾನ.
ಇಪ್ಪತ್ತನೇ ಶತಮಾನದಲಿ ಮತ್ತೆ ಅರಳಿದ ವಚನ ಚಿಂತನೆ. ಇಪ್ಪತ್ತೊಂದನೇ ಶತಮಾನದ ಆದಿಗೆ ಬಸವಾದಿ ಶರಣರ  ಲಿಂಗಾಯತ ಧರ್ಮಕೆ ಹೊಸ ಹೊಳಪಿನ ಅರಿವು.

ಮತ್ತದೇ ಕರಾಳ ಇತಿಹಾಸದ ಛಾಯೆ. ತಲ್ಲಣಗೊಂಡ ಪುರೋಹಿತಶಾಹಿಗಳು. ಜಾತ್ಯಾತೀತ ಮೌಲ್ಯಗಳಿಗೆ ಸಂವಿಧಾನಿಕ‌ ಮುದ್ರೆ ಬಿದ್ದದ್ದೇ ಸಾಕಾಗಿತ್ತು.

ಈಗ ಲಿಂಗಾಯತರು ಹಿಂದುಗಳಲ್ಲ ಎಂಬುದು ಪಿಸುಮಾತಿನಲ್ಲಿತ್ತು. ಬರು ಬರುತ್ತ ಘರ್ಜಿಸಲಾರಂಭಿಸಿತು.
ನಾಲ್ಕು ಗೋಡೆಗಳ ಮಧ್ಯೆ ಮಠಮಾನ್ಯಗಳಲಿ‌ ಸಾಗುತ್ತಿದ್ದ ಚರ್ಚೆ ಬೀದಿಗೆ ಬಂತು. ಜನಜಾಗೃತಿ ಹೆಚ್ಚಾದಂತೆ ‘ಹೌದು ನಾವು ಹಿಂದುಗಳಲ್ಲ’ ಎಂದು ಜನಸಾಮಾನ್ಯರು ಮಾತನಾಡಲಾರಂಭಿಸಿದರು.

ಕೇವಲ ಚಿಂತಕರ ಚಾವಡಿಯ ಸುದ್ದಿ ಗಡಿ ದಾಡಿ ಹರಡಿದಾಗ ಪೌರೋಹಿತ್ಯ ಬೆಚ್ಚಿ ಬಿತ್ತು.
ಕೆಲವು ಪ್ರಾಜ್ಞರು ಮೈಕೊಡವಿ ನಿಂತರು. ‘ಹೌದು ಲಿಂಗಾಯತರು ಹಿಂದೂಗಳಲ್ಲ’ ಅಂದರು. ಅಷ್ಟಕ್ಕೇ ಮುಗಿದಿದ್ದರೆ ಉರಿ ಹೆಚ್ಚಾಗುತ್ತಿರಲಿಲ್ಲ.
‘ಹಿಂದು ಒಂದು ಧರ್ಮವೇ ಅಲ್ಲ’ ಎಂಬ ಮಾತು ಅಸಹನೀಯವಾಯಿತು.

ಈ ಕೂಗಿಗೆ ಸೈದ್ಧಾಂತಿಕ ಚರ್ಚೆಯ ಮೂಲಕ ಬಾಯಿಮುಚ್ಚಿಸುವುದು ಅಸಾಧ್ಯವೆನಿಸಿತು.‌
ಮತ್ತದೇ ಹಿಂಸಾಮಾರ್ಗವೇ ಒಳಿತೆನಿಸಿತು ಹೆದರಿಸಿ ಬಾಯಿ ಮುಚ್ಚಿಸಲು.

ವಾದ-ವಿವಾದ, ಚಿಂತನ-ಮಂಥನ ನಡೆಯಲೇ ಇಲ್ಲ. ನಡೆದರೆ ಇವರ ಬಣ್ಣ ಬಯಲಾಗುತ್ತಿತ್ತೇನೋ ?
ಈ ಹೋರಾಟ ಹತ್ತಿಕ್ಕಲು ಹೊಸ ಆಧುನಿಕ ಕುತಂತ್ರ ಹೂಡಲಾಯಿತು. ಅವೇ ಶೂದ್ರ ಯುವಕರ ಪಡೆಯ ಮೆದುಳಿಗೆ ಕೈ ಹಾಕಿ ತೊಳೆದು *ಬ್ರೇನ್ ವಾಶ್* ತಂತ್ರ ಬಳಸಿ ಎತ್ತಿಕಟ್ಟುವ ಮಹಾ ಜಾಣತನದ ಪೌರೋಹಿತ್ಯ. ‌
ಹುಂಬರ ಶೂದ್ರ ಪಡೆಗೆ ಧರ್ಮ ಆಧ್ಯಾತ್ಮ ಏನೂ ಬೇಡ, ದುಡುಕಿ ಜೈಕಾರ ಹಾಕುವ ಧಾವಂತ.

ಮತೀಯ ವಾದಕೆ ದೇಶಭಕ್ತಿ ಬಣ್ಣ ಬಳಿವ ಜಾಣತನ. ಹಿಂದೂ ದ್ರೋಹಿಗಳ ಪಟ್ಟ ಕಟ್ಟಿ ಹಾದಿ ತಪ್ಪಿಸುವ ದುರುಳತನ.‌
ಈಗ ನೋಡಿದರೆ ಇಂತಹ ಅವಘಡಗಳು.‌ ಚರ್ಚೆ ಗಿರ್ಚೆ ಏನೂ ಬೇಡ. ಅಹಿಂಸೆಯಿಂದ ಏನೂ ಪ್ರಯೋಜನ ಇಲ್ಲ. ಹೊಡಿ-ಬಡಿ, ಇನ್ನೂ ಮುಂದೆ ಹೋಗಿ ಕೊಲ್ಲುವ ಉತ್ತರ.

ಅಯ್ಯೋ ಕರ್ಮವೇ ಕೊಲೆಯಿಂದ ಇವರ ಧರ್ಮ ಉಳಿಯುವಂತಿದ್ದರೆ ಹಿಟ್ಲರ್ ಜಗತ್ತನ್ನೇ ಗೆದ್ದು ಬಿಡುತ್ತಿದ್ದ.
ಒತ್ತಾಯ, ಬ್ರೇನ್ವಾಶ್ ತಂತ್ರಗಳು ಈಗ ಔಟ್ ಡೇಟೆಡ್.
ಆದರೂ ಇವರಿಗೆ ಇನ್ನೂ ಅದೇ ಹಿಂಸೆಯಲ್ಲಿ ನಂಬಿಕೆ.

ಪ್ರಚೋದಿಸುವ ಮಾತುಗಳ ಮೂಲಕ ಶೂದ್ರ ಯುವಕರ ತಲೆ ಕೆಡಿಸಿ ಅವರ ಕೈಯಲ್ಲಿ ಗನ್ನು ಕೊಟ್ಟು ಹತ್ಯೆಗೈಯಿಸುವುದು ಯಾವ ಧರ್ಮ?
ಕೊಲೆ ಮಾಡಿದವರು ತಪ್ಪಿಸಿಕೊಳ್ಳುವುದಂತೂ ಅಸಾಧ್ಯ. ಆದರೂ ಸಂರಕ್ಷಿಸುವ ಹುಸಿ ಭರವಸೆಗೆ ಅವಿವೇಕಿ ಶೂದ್ರ ಸಂಹಾರ. ಯಾರದೋ‌ ಬಂದೂಕಿಗೆ, ಯಾರದೋ ಹೆಗಲು.

*ಇಂತಹ ಅಪಾಯ ಗೊತ್ತಿದ್ದರೂ ಡಾ.ಎಂ.ಎಂ.ಕಲಬುರ್ಗಿಯವರು ಜೋರಾಗಿ ಸತ್ಯ ಪ್ರತಿಪಾದಿಸುವ ಧೈರ್ಯ ಮಾಡಿದರು‌. ಸತ್ಯ ಜೋರಾಗಿ ಪಸರಿಸಲು ಹುತಾತ್ಮರಾಗಲೂ ಹಟ ತೊಟ್ಟಂತಾಯ್ತು*.
ಅದರ ಅಗತ್ಯವನ್ನು ಕಾಲ ಬಯಸಿತ್ತೆಂಬಂತೆ ಸತ್ಯದ ಕಠಿಣ ಹಾದಿ ಹಿಡಿದರು.
ಯಾವಾಗ ಸತ್ಯ ನಿರೂಪಣೆ ಪ್ರಖರವಾದ ಕೂಡಲೇ ಎಚ್ಚತ್ತುಕೊಂಡ ಮೂಲಭೂತವಾದಕೆ ಕಲಬುರ್ಗಿಯವರು ಬಲಿಯಾದರು. ಈಗ ನೀರವ ಮೌನ. ಅವರ ಕೊಲೆಯನ್ನು ಸಮರ್ಥಿಸುವ ನೀಚ ಉದ್ಧಟತನ, ಅಮಾನವೀಯತೆ ವೈಭವೀಕರಣ.

ಅದೇ ಹಾದಿಯಲ್ಲಿ ಗೌರಿ ಹತ್ಯೆ. ಈಗ ತನಿಖಾ ತಂಡದ ಶ್ರಮದ ಪ್ರತಿಫಲನ ದಟ್ಟ… ಆದರೆ ಹೋದವರು ಮರಳಿ ಬರಲಾರರು‌. *ಕೊಲೆಗಾರರ ರಕ್ಷಣೆಯಾಗದೇ ನಿಜವಾದ ಕೊಲೆಗಾರರ ಪತ್ತೆ ಆಗಿ ಊಹಾಪೋಹಕೆ ತೆರೆಬೀಳಬೇಕು*.
ಕೊಲೆಗಾರು ಯಾರು? ಅವರ ಉದ್ದೇಶ ಏನೆಂಬುದು ಬಯಲಾಗಲಿ.

ಅವರು ನಿರೂಪಿಸಿದ ಸತ್ಯದ ಕಸುವು ಹೆಚ್ಚಾಗಬೇಕು. ನಿಜವಾದ ಸಾತ್ವಿಕತೆಗೆ ಜೀವ ಬರಬೇಕು.
ದೇಶ ಆಳುವವರ ಅಸಹನೀಯ ಮೌನ ಸರಿಯಲ್ಲ.
‘ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಚರ್ಚೆಯಿಂದ ಬಗೆಹರಿಸಿಕೊಳ್ಳುವುದು ಸರಿಯಾದ ಕ್ರಮ’ ಎಂದು ಒಕ್ಕೂಟ ವ್ಯವಸ್ಥೆಯಲ್ಲಿ ಆಳುತ್ತಿರುವ ಮುಖ್ಯಸ್ಥರು ಹೇಳಲಿ ಎಂಬುದು ನನ್ನಂತವರ ಹಕ್ಕೊತ್ತಾಯ.

ನೀವು ಯಾವುದೇ ಸಿದ್ಧಾಂತದಲ್ಲಿ‌ ವೈಯಕ್ತಿಕ ನಂಬಿಕೆ ಇಟ್ಟುಕೊಂಡಿದ್ದರೂ ದೇಶವಾಸಿಗಳ ಹಿತ ಕಾಪಾಡುವಾಗ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು, ವೈಯಕ್ತಿಕ ನಂಬಿಕೆಗಳ ಆಧಾರದ ಮೇಲೆ ಅಲ್ಲ.
ಕಲಬುರ್ಗಿಯವರ ಹಾಗೂ ಗೌರಿ ಲಂಕೇಶ್ ಅವರನ್ನು ಕೊಂದ‌ ಮಾತ್ರಕ್ಕೆ ಇದೊಂದು ಶಾಶ್ವತ ಅಂತ್ಯವಲ್ಲ.‌ ಎಲ್ಲರೂ ಸಾವಿಗೆ ಎದೆಗೊಟ್ಡು ನಿಂತರ ಎಷ್ಟೊಂದು ಜನರನ್ನು ಕೊಲ್ಲಲಾದೀತು?

ಎಡ-ಬಲಗಳ ನೆಪದಲ್ಲಿ ಮಾನವ ಪ್ರೇಮದ ಸೆಲೆ ಬತ್ತಬಾರದು. ಎರಡೂ ಸಿದ್ಧಾಂತಗಳು ಹೇಳುವುದು ಅದೇ ಮಾನವೀಯತೆಯನ್ನೇ ಆದರೆ ಅವುಗಳ ಆಚರಣೆಯ ಹೆಸರಿನಲ್ಲಿ ಜೀವ ತೆಗೆಯುವುದು ಯಾವ ನ್ಯಾಯ?

ಜನರು ತಮಗೆ ಸರಿಕಂಡದ್ದನ್ನು ಸ್ವೀಕರಿಸುತ್ತಾರೆ, ಯಾವುದನ್ನೂ ಹೇರಲಾಗುವುದಿಲ್ಲ. ಆದ್ದರಿಂದ ಅಭಿವ್ಯಕ್ತಿಯನ್ನು ಹತ್ತಿಕ್ಕುವುದಾಗಲಿ, ಕೊಲ್ಲವುದಾದಲಿ ದೇವ ಮೆಚ್ಚುವ ಕೆಲಸವಲ್ಲ.
ಕೇವಲ ಸಾತ್ವಿಕ ಹಾದಿಯಲ್ಲಿ ವಾದ-ವಿವಾದ ಸಾಗಿರಲಿ, ಹಿಂಸೆ ಬೇಡವೇ ಬೇಡ.

ಸತ್ತವರ ನೋವು ನಮಗೆ ನಲಿವಾಗಬಾರದು. ಮಾನವೀಯ ಮೌಲ್ಯಗಳ, ಧರ್ಮದ ಕತ್ತು ಹಿಚುಕಿ ಯಾರೂ ದೊಡ್ಡವರಾಗಿಲ್ಲ, ಆಗುವುದೂ ಇಲ್ಲ.

ಅಗಲಿ ಹೋದವರು ಮೌಲ್ಯಗಳನ್ನು ಜೀವಂತ ಬಿಟ್ಟು ಹೋಗಿದ್ದಾರೆ.
ಇದ್ದು ಸತ್ತಂತಿರುವ ನಮ್ಮನ್ನು ಕ್ಷಮಿಸಿ ಬಿಡಿ ಕಲಬುರ್ಗಿ ಸರ್…

  ಸಿದ್ದು ಯಾಪಲಪರವಿ

ತೊಳಲಾಟ

ತೊಳಲಾಟ

There is no meaning in sitting in front of swimming pool without swimming.

ಖಾಲಿಯಾದ ಮನಸಿಗೆ
ನೂರೆಂಟು ನೋವುಗಳು
ಸಾವಿರಾರು ನೆನಪುಗಳು

ಅನುಭವಿಸುವ ಅನಿವಾರ್ಯತೆ
ಭರದಲಿ ಎಲ್ಲವೂ ನಶ್ವರ
ಸಿರಿ-ಸಂಪದ , ಸವಿ-ಸುಂದರ
ಮೈಮಾಟ ಸವಿಸುಖ
ದೂರ ಬಹುದೂರ

ಮನಸಿಗೂ ಜೇಬಿಗೂ ಇಲ್ಲದ
ನಂಟಿನ ಗಂಟು
ಎಲ್ಲವೂ ಒಮ್ಮೊಮ್ಮೆ ಕಗ್ಗಂಟು

ಎಲ್ಲಿಹದು , ಎಲ್ಲಿಹರು
ಮನಸ ತುಂಬುವ ಚತುರರ
ದಂಡು ?

ಕಾಯಬೇಕು ಆಗಾಗ
ಒಲೆಯ ಮೇಲಿಟ್ಟ
ಹಾಲು ಉಕ್ಕದ ಹಾಗೆ

ಬಂದರೂ ಬರಬಹುದು
ಸಿಕ್ಕರೂ ಸಿಗಬಹುದು
ತುಂಬುವ ಮನಸುಗಳ
ಸರದಾರರು

ಇಲ್ಲ ಬರುವುದಿಲ್ಲ
ಬರಲಾಗುವುದಿಲ್ಲ

ಖಾಲಿಯಾದ ಮನಸನು
ತುಂಬುವ ಸರದಾರರ
ಕಣಜ ಖಾಲಿಯಾಗಿ
ಪ್ರೀತಿಯ ಹಗೇವು
ಬತ್ತಿ ಹೋಗಿದೆ

ಯಾರಿಗೂ ಕಾಯದೇ
ಧ್ಯಾನಸ್ಥ ಸ್ಥಿತಿಯಲೊಮ್ಮೆ
ಮಿಂದು ಈಜಾಡಿ
ಹೊರಗೆ ಬಾ

ಆಗಲಾದರೂ ತುಂಬಹುದೇನೋ
ಖಾಲಿ , ಖಾಲಿಯಾದ , ಖಾಲಿ

ಸು

----ಸಿದ್ದು ಯಾಪಲಪರವಿ

Wednesday, August 29, 2018

ಅವನೇ ಸಾಕ್ಷಿ ಒಲವ ಮದುವೆಗೆ

ಅವನೇ  ಸಾಕ್ಷಿ ಒಲವ ಮದುವೆಗೆ

ವಾದ್ಯದ ಸದ್ದುಗದ್ದಲವಿಲ್ಲ ಬೀಗರ
ಬಿಂಕವಿಲ್ಲ  ಮಂಟಪಕೆ ಸಿಂಗಾರವಿಲ್ಲ

ಒನಪು ಒಯ್ಯಾರಕೆ ನಾರಿಯರಿಲ್ಲ
ಪಿತಾಂಬರ ಸೀರೆಗಳಿಲ್ಲ

ಸಿಹಿ ಊಟದ ಸಡಗರವಿಲ್ಲ
ಆಡಂಬರದ ಅಹಮಿಕೆಯಿಲ್ಲ

ತಾಳಿ ಕಾಲುಂಗುರ ಬಳೆಗಳ
ಗೊಡೆವೆ ಬೇಕಿಲ್ಲ

ಆದರೂ ಇದು ವೈಭವ ಪೂರ್ಣ ಮಹಾಸಂಭ್ರಮದ
ಮಹಾ ಮಿಲನಮಹೋತ್ಸವ

ಭಾವನೆಗಳ ಮೆರವಣಿಗೆಯಲಿ
ನಿಶಬ್ದ ಶಬ್ದಗಳದೇ ಪೌರೋಹಿತ್ಯ

ಒಲವ ಪಿಸುಮಾತುಗಳೇ ಬೀಗರು
ಪಂಚಮಹಾಭೂತಗಳ ದಿವ್ಯಾಲಂಕಾರ

ಸೂರ್ಯನ ಬೆಳಕು ಚಂದ್ರನ ತಂಪು ಕೋಗಿಲೆಯ ಇಂಪು

ಹೂವಿನ ಕಂಪು ಹಕ್ಕಿಗಳ ಚಿಲಿಪಿಲಿಗಳ
ತಳಿರು ತೋರಣದ ಸಿಂಗಾರದಿ
ಕಾವ್ಯ ದಿಬ್ಬಣ ಸಾಗಿದೆ

ಏಕಾಂತದ ಮದುವೆಗೆ
ಅವನೊಬ್ಬನೇ ಸಾಕ್ಷಿ

ಬಿಸಿ ಉಸಿರ ತಲ್ಲಣಗಳ
ಸಿಹಿ ಊಟಕೆ ಬಿಸಿಯಪ್ಪುಗೆಯ
ಬೆಲ್ಲ-ಸಕ್ಕರೆ

ಖಾಲಿಯಾಗದ ಅಕ್ಷಯ ಪಾತ್ರೆಯ
ಅಪರಿಮಿತ ಮೃಷ್ಟಾನ್ನ

ಹಿತ ಸ್ಪರ್ಷದ ದಿವ್ಯ ಸ್ನಾನದ
ಸುರಿಗೆ ನೀರ ಸುರಿದು
ಮೈಮನಗಳ ಕೊಳೆ ಕಳೆಯುತ

ಮುತ್ತುಗಳಲಿ ಸಿಂಗರಿಸಿ
ತೋಳಬಂಧಿಯ ತೊಡಿಸಿ
ಹೂಗಳ ಮುಡಿಸಿ
ಮನದ ಮದುವೆಯ
ಮೌನ ಮೆರವಣಿಗೆಯಲಿ
ಪ್ರೇಮದಕ್ಷತೆಯ ಹೂಮಳೆ

ಎಚ್ಚರದ ನಡೆಯ ಕಾಲುಂಗುರ
ಮತ್ತೆ ಮತ್ತೆ ಮತ್ತೆ ಗಟ್ಟಿಯಾಗಿ
ಬಿಗಿದ ಬಂಧನದ ತಾಳ್ಮೆಯ ತಾಳಿ
ಸಾಕು ಕೊರಳ ಸಿರಿಗೆ

ವಸ್ತು ಒಡವೆ ಆಭರಣ ಕಳಚೀತು
ಮೈಗೆ ಪೂಸಿದ ಅತ್ತರು ಆರೀತು

ತುಟಿಗೆ ಬಳೆದ ರಂಗು ಮರೆಯಾದೀತು
ಎಂಬ  ಗಲಿಬಿಲಿಯಿಲ್ಲದ

ನಿರಾಡಂಬರ ಚಲುವೆಗೆ ಒಲವ ಸೀರೆ
ಉಡಿಸಿ
ಭರವಸೆಯ ಸಪ್ತಪದಿಯಲಿ

ಅನುಮಾನ ಅವಮಾನ ಅಹಮಿಕೆ
ಅಸತ್ಯ ಸಿರಿಗರ ಬಿಗುಮಾನ
ಬಿಂಕಗಳ ತುಳಿದು

ಮದುವೆ ಶಾಸ್ತ್ರ ಮುಗಿಸಿ
ಒಲವ ಬೆಳಕ ಹೊತ್ತಿಸಿ

ಪುಟ್ಟ ಮನೆಯಲಿ ಪರಮ ಸುಖದ
ತುತ್ತ ತುದಿಗೇರುವ ಸವಿ

ಸಂಭ್ರಮದ ಮನದ ಮದುವೆಗೆ
ಅವನೊಬ್ಬನೇ ಸಾಕು

ಬಾಳ ರಥ ಎಳೆವ
ಜೀವಯಾತ್ರೆಯ ಜಾತ್ರೆಗೆ.

---ಸಿದ್ದು ಯಾಪಲಪರವಿ

Monday, August 27, 2018

ತಕ್ಕ ಶಿಷ್ಯ ನಾನಾಗಲಿಲ್ಲ

*ಗುರುಗಳಿಗೆ ತಕ್ಕ ಶಿಷ್ಯ ನಾನಾಗಲಿಲ್ಲ*

ನಾನು ಒಳ್ಳೆಯ ಶಿಷ್ಯನಾಗಲಿಲ್ಲ ಎಂಬ ಕೊರಗು ಇದ್ದೇ ಇದೆ,
ಅದಕ್ಕ ಪರಿಹಾರವೂ ಇದೆ.
ಹೂಮನೆಯ ಗರಡಿಯಲ್ಲಿ ಏಕಲವ್ಯನ ಹಾಗೆ ವ್ಯಕ್ತಿತ್ವ ರೂಪಿಸಿಕೊಂಡೆ. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಪ್ರೀತಿಯನ್ನು ಸಂಪಾದಿಸಿದೆ, ಎಲ್ಲವನ್ನೂ ನಿಷ್ಠೆಯಿಂದ ಆಲಿಸುತ್ತಿದ್ದೆ. ಅವರಿಗೆ ನಾನು ಒಳ್ಳೆಯ ಬರಹಗಾರನಾಗಬೇಕೆಂಬ ಇಚ್ಛೆಯಿತ್ತು.

ಸಂಕೋಚ, ಕೀಳರಿಮೆ ಕಾಡಿದ್ದರಿಂದ, ಬರೆದರೆ ಅವರ ಹಾಗೆ ಬರೆಯಬೇಕೆಂಬ ತುಡಿತ, ಜೊತೆಗೆ ಬೆಟ್ಟದಷ್ಟು ಮೈಗಳ್ಳತನದಿಂದ ನನ್ನೊಳಗಿದ್ದ ಬರಹಗಾರ ಅಡಗಿ‌ ಕುಳಿತಿದ್ದ.

ಪಟ್ಟಣಶೆಟ್ಟರ ಸರಳತನ ಮೈಗೂಡಿಸಿಕೊಳ್ಳಬೇಕಾಗಿತ್ತು. ಸರಳತೆ ಸೂತ್ರ ಹಿಡಿದಿದ್ದರೆ ನನಗೀ ಸಂಕಷ್ಟ ಬರುತ್ತಿರಲಿಲ್ಲ.
ಓದುವ-ಬರೆಯುವ ತಾಕತ್ತನ್ನು ಭಾಷಣ, ರಾಜಕಾರಣದ ಉಸಾಬರಿಯಲಿ ಬಹಳಷ್ಟು ಕಳಕೊಂಡೆ ಅನ್ನೋ ಸತ್ಯ ಐವತ್ತರ ಗಡಿಯಲ್ಲಿ ಅರಳಿದಾಗ ಜಾಗೃತನಾದೆ.‌ ಹಗಲು ರಾತ್ರಿ ಪಟ್ಟು ಹಿಡಿದು ಈಗ ತೋಡಿಕೊಳ್ಳಲಾರಂಭಿಸಿದೆ.‌

ಅಷ್ಟೊತ್ತಿಗಾಗಲೇ ಒಂದೆರಡು ಕಾಣುವ ಕೈಗಳು ಸರ್ ನನಗೆ ಹತ್ತಿರವಾಗಬಾರದೆಂಬ ಸಂಕಲ್ಪ ಮಾಡಿದಂತಿತ್ತು.
ನಾ ಮೌನಕೆ ಶರಾಣಾಗಿ ಮುಂದೆ ಸಾಗಿದೆ.

ಈ ಬದುಕೇ ಹೀಗೆ ಬೇಕಾದವರಿಗೆ ಹತ್ತಿರವಾಗುವ ಅವಕಾಶ ವಂಚಿತರನ್ನಾಗಿಸುತ್ತೆ. ಅದನ್ನು ಕೂಡಾ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಅನಿವಾರ್ಯತೆ.
ಹತ್ತಾರು ಬಾರಿ ಹೋಗಲೆತ್ನಿಸಿದಂತೆ ದೂರ ತಳ್ಳಿದಾಗ ಅವೇ *ಕಾಣುವ ಕೈಗಳ* ಅಟ್ಟಹಾಸದ ಕುತಂತ್ರಕೆ ಬಲಿಪಶು.

ಈ ರೀತಿಯ ಗೊತ್ತು ಗುರಿಯಿಲ್ಲದೆ ದ್ವೇಶಿಸುವ *ಇಯಾಗೋ* ಗಳಿಗೆ ಕಾಲ ಉತ್ತರಿಸುವಂತೆ ಬರೆಯುತ್ತ ಬೆಳೆಯುವ ಸಂಕಲ್ಪ ಮಾಡಿ ಧ್ಯಾನಸ್ಥನಾಗಿ ಬರೆಯಲಾರಂಭಿಸಿ ಈಗ ದಡ ಸೇರುತ್ತಲಿದ್ದೇನೆ.

ಈಗ ಗುರುಗಳ ವಿಶ್ವಾಸಗಳಿಸುವ ಗೊಡವೆಗೆ ಹೋಗುವುದಿಲ್ಲ. ಸಣ್ಣ ಗೆರೆಯ ಪಕ್ಕದಲಿ ದೊಡ್ಡ ಗೆರೆ ಎಳೆದು ಅವರಿಗೆ ಕೀರ್ತಿ ತರುತ್ತೇನೆ. ಅದೇ ನಿಜವಾದ ಗುರು ಕಾಣಿಕೆ.

ಆದರೂ ಪ್ರತಿಕ್ಷಣ ಲೇಖನಿ ಹಿಡಿದಾಗ, ಭಾಣಣಕೆ ನಿಂತಾಗ ಆತ್ಮದೊಳು ಗುರುಗಳ ಪ್ರವೇಶಿಸುತ್ತಾರೆ.
*ಹರ ಮುನಿದರೂ ಗುರು ಕಾಯುವ* ಎಂಬ ಮಾತಿನ ಅಪ್ಪಟ ಆರಾಧಕ ನಾ.
ಅವರ *ನೀನಾ*ನನ್ನ ಪಾಲಿನ *ನಾನೀ* ಆಯಿತು.

ಭಾಷೆಯ ಮೇಲಿನ ಹಿಡಿತ ಮುಂದುವರೆದಿದೆ ಈಗ ಅದಕ್ಕೊಂದು ಮೂರ್ತ ರೂಪ ಕೊಡುವ ತಾಕತ್ತು ಗಳಿಸುವ ಹಾದಿಯಲ್ಲಿದ್ದೇನೆ. ನನಗೆ ಆ ಅವಕಾಶವೂ ಇದೆ.
ಎಲ್ಲವನ್ನೂ ಆಳವಾಗಿ ಗ್ರಹಿಸುವ ಯೋಗ್ಯತೆ ಇದ್ದರೂ ಆಳಕ್ಕೆ ಇಳಿಯಲಿಲ್ಲ. ಅದೇ ನನ್ನ ಮಿತಿ. ಆದರೀಗ ಆಳಕ್ಕಿಳಿದು ಇಣುಕುವ ಅನಿವಾರ್ಯತೆ.

ಭಾವುಕನಾಗಿ ಎಲ್ಲರನ್ನೂ ನಂಬಿದ್ದು ನನ್ನ ಮಿತಿ. ಮುಖವಾಡಗಳ ಮರ್ಮ ಅರಿಯದಿರಲು ನನ್ನ ಆಸೆಗಳು ಮತ್ತು ಮಹತ್ವಾಕಾಂಕ್ಷೆ ಕಾರಣ.
ಮೇಲೆ ಬರಬೇಕು ಅನಿಸಿತು, ಮೇಲೆ ಏರಬೇಕೆನಿಸುವುದ ಮರೆತು ಮೈ ಸುಟ್ಟುಕೊಂಡೆ.
ಕೆಲವು ಐಷಾರಾಮಿಗಳು ಒಡ್ಡಿದ ಆಮಿಶಗಳಿಗೆ ಬಲಿಯಾದೆ. ಎಲ್ಲರಂತಾಗಲು ಬಯಸಿದೆ ಅದೇ ನನಗೂ ನನ್ನ ಗುರುಗಳಿಗೂ ಇರುವ ವ್ಯತ್ಯಾಸ. 

ಸರ್ ಬೇರೆಯವರು ಅಧಿಕಾರ ಹಿಡಿದಾಗ ನನಗೆ ಸಿಗಲಿಲ್ಲವಲ್ಲ ಎಂದು ಪರಿತಪಿಸಲಿಲ್ಲ. ಗೆಳೆಯರನ್ನು ಖುಷಿಯಿಂದ ಅಭಿನಂದಿಸುತ್ತಿದ್ದರು.
ಪಂಚ ಪಾಂಡವರಲ್ಲಿ ಉಳಿದ ನಾಲ್ಕು ಜನ ಅನೇಕಾನೇಕ ಅವಕಾಶ ಪಡೆದುಕೊಂಡರು, ಸಂಕೋಚ ಸ್ವಭಾವದ ನಿರಪೇಕ್ಷ ಭಾವದಿಂದಾಗಿ ಸರ್ ಅವಕಾಶ ವಂಚಿತರಾದರು.

ಅವರು ಸದಾ ಆಮಿಷಗಳಿಗೆ ಬಲಿಯಾಗಲಾರದ ಸರಳ ಜೀವನಶೈಲಿ ರೂಢಿಸಿಕೊಂಡಿದ್ದರು. ಸಿಗಬೇಕಾದ್ದು ಸಿಗದೇ ಹೋದರೂ ದೂರಲಿಲ್ಲ. ಜೊತೆಗಿದ್ದವರು ಜೋಪಾನ ಮಾಡುವ ನೆಪದ ಬಿಡೆಯಲ್ಲಿ ನೋವು ಕೊಟ್ಟರೂ ನುಂಗಿದರು. ಬೆಕ್ಕು, ನಾಯಿಗಳೊಂದಿಗೆ ನೋವ ಮರೆತರು ಆದರೆ ಮನುಷ್ಯರನ್ನು ಹಳಿಯಲಿಲ್ಲ.

ನಾನು ಇತ್ತೀಚಿಗೆ  ಮನೋವಿಜ್ಞಾನ, ವ್ಯಕ್ತಿತ್ವ ಅಧ್ಯಯನದ ವಿಕಸನದ ತರಬೇತಿ ಶುರು ಮಾಡಿದ ಮೇಲೆ ಮಿತಿಗಳು ಅರ್ಥವಾದರೂ ಹೇಳಲಾಗದ ಅಸಹಾಯಕತೆ.

ವಯೋಮಾನಕನುಗುಣವಾಗಿ ನುಂಗುವುದು ಅನಿವಾರ್ಯ. ಗುರುಗಳ‌ ಅನಿವಾರ್ಯತೆ ಅರಿತರೂ ಹೇಳಲಾಗದ ಸ್ಥಿತಿ ತಲುಪುವಷ್ಟು ದೂರಾಗಿದ್ದೇನೆ. ದೈಹಿಕವಾಗಿ.

ದೈಹಿಕವಾಗಿ ದೂರಾದವರು ಮಾನಸಿಕವಾಗಿ ತುಂಬಾ ಹತ್ತಿರ ಇರುತ್ತಾರೆ.
ನಾನವರ ಹೆಸರಿನಿಂದ ಬೇಳೆ ಬೇಯಿಸಿಕೊಂಡು ಬೆಳೆಯುತ್ತೇನೆ ಎಂಬ ಅಪಪ್ರಚಾರಕೆ ಕೊನೆ ಹಾಡಿದೆ. ನನಗೂ ಈಗ ಸ್ವಂತ ಶಕ್ತಿ ಬಂದಿದೆ ಎಂದು ಇಯಾಗೋಗಳಿಗೂ ಗೊತ್ತಾಗಿದೆ.

ನಾನೀಗ ಯಾರನ್ನು ದೂಶಿಸುವುದಿಲ್ಲ. ಈ ಇಯಾಗೋಗಳಿಂದಾಗಿ ಮೇಲೇರುತ್ತೇನೆ. ವಿಳಂಬವಾದರೂ ಚಿಂತೆಯಿಲ್ಲ.

*ಈಗಲೂ ಗುರುಗಳು ಕಲಿಸಿದ ಮಾನವೀಯ ಮೌಲ್ಯಗಳು, ಜೀವನೋತ್ಸಾಹ, ವೈಯಕ್ತಿಕ ಸಂಬಂಧಗಳ ನಿರ್ವಹಣೆ, ಜನಾಕರ್ಶಕ ಸಂವಹನ, ಒಳ್ಳೆಯತನ, ಹೆಣ್ಣುಗಳಲಿ ಅವ್ವನ ಹುಡುಕಾಟ, ಒಲವ ಭಾವುಕ ವರತೆ, ಸೂಕ್ಷ್ಮ ವಿಡಂಬನೆ, ಕಾವ್ಯಾವಲೋಕನ, ನಿಚ್ಚಳ ಅಭಿವ್ಯಕ್ತಿಯಂತಹ ಪಾಸಿಟಿವ್ ಸಂಗತಿಗಳ ಉಳಿಸಿಕೊಂಡಿದ್ದೇನೆ*.

ನಾನೆಲ್ಲಿ ತಪ್ಪಿದ್ದೇನೆ ಎಂಬ ಸತ್ಯ ಗೊತ್ತಾಗಿ ಅದರ ರಿಪೇರಿಯಲ್ಲಿದ್ದೇನೆ. ಆದದ್ದೆಲ್ಲ ಅನುಭವದ ಲೆಕ್ಕದಲ್ಲಿ ಜಮಾಖರ್ಚು ಮಾಡಿದ್ದೇನೆ.
ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದರೇ…?!
ಈಗ ಪರಾಮರ್ಶನ ಬೇಡ…

ಮುಂದೆ ಸಾಗುವ ಹಾದಿಯಲಿ ಎಚ್ಚರಿದ್ದರೆ ಸಾಕು. ಮುಖವಾಡಗಳ ನಂಬಿ ಅಳುವುದು ಬೇಡ, ಅಯ್ಯೋ ಗೊತ್ತಾಯ್ತು ಬಿಡು ಎಂಬ ನಗುನೂ ಬೇಡ.
ನಕ್ಕು ಸುಮ್ಮನಿರಬೇಕು. *ಒಳಗಣ್ಣು ನಿಚ್ಚಳಾದಾಗ ಹೊರಗಿನ ಸತ್ಯ ದರ್ಶನ ಸಹಜ*.

ಎಂಬತ್ತರ ಆಜುಬಾಜು, ಆದರೂ ಇಂದು ಶುಭೋದಯ ಕರ್ನಾಟಕದಲ್ಲಿ ಪಟ್ಟಣಶೆಟ್ಟಿ ಸರ್ ಮಾತಿನ ವೈಖರಿ ನೋಡಿ ಇಷ್ಟೆಲ್ಲ ನೆನಪಾತು.

*ಕಡೀ ಮಾತು*

‘ಈಗ ನೀವು ಅಂದುಕೊಂಡ ಹಂಗನ ಬರೆಲಿಕ್ಕೆ ಶುರು ಮಾಡೀನಿ ಸರ್.
ನಿರಾಶಾ ಆಗಲಾರದಂಗ ಬರಕೋತನ ಇರ್ತೀನಿ. ಭಾಳ ಚಲೋ ಅನಿಸಿದರ ಮಾತ್ರ ಶಿಷ್ಯ ಅಂತ ಅನ್ರಿ, ಇಲ್ಲಂದ್ರ ಕ್ಷಮಾ ಮಾಡ್ರಿ, ಈ ಕಾಣುವ ಕೈಗಳ ಮಾತಂತು ಸುಳ್ಳ ಮಾಡೇ ಮಾಡ್ತೀನಿ ಸರ್.’

  *ಸಿದ್ದು ಯಾಪಲಪರವಿ*

Sunday, August 26, 2018

ಯಾಪಲಪರವಿ ಅಂದರೆ?

https://youtu.be/MOGYpUsS0t8

ವಿಚಾರ ಪತ್ನಿ

ವಿಚಾರ ಪತ್ನಿ : ಆಚಾರ ಸಾಂಗ್ಯತ್ಯದ ಹುಡುಕಾಟ

ವಿಚಾರ-ಆಚಾರ , ಆಚಾರ-ವಿಚಾರಗಳ ಕದನ ನಿಲ್ಲುವುದೇ ಇಲ್ಲ.
ಅತೃಪ್ತ ಮನಸಿಗೆ ನೂರೆಂಟು ತಳಮಳಗಳು. ಬಿಟ್ಟೆನೆಂದರೂ ಬಿಡದ ಮಾಯಾವಿಗಳು.

ಸರಿ-ತಪ್ಪುಗಳ ಸೆಳೆತದಲಿ ತಪ್ಪು ಪ್ರಿಯವೆನಿಸುವುದು ಸಹಜ. ಆ ತಪ್ಪನ್ನು ಕ್ರಮಬದ್ಧವಾಗಿ ಸಮರ್ಥಿಸುವ ವಾದ-ವಿವಾದ.
ಮಾಗಿದ ಮನಸಿನ ಚಪಲಕೆ ನಿಲ್ಲದ ಹಾರಾಟ. ವಯಸ್ಸಾದಂತೆಲ್ಲ ಏನೋ ಹುಡುಕಾಟ. ಹುಡುಗಾಟ.

ಅನೇಕಾನೇಕ ಸಾಧು ಸಂತರ , ಬಸವಾದಿ ಶರಣರ ಅನುಭಾವಗಳು ನಮಗೆ ಹೊಸ ಲೋಕ ತೋರಿಸಿ ವೈರಾಗ್ಯದ ಕಡೆ ಕೊಂಡೊಯ್ಯುವಾಗ ಕಾಡಿ ನೆನಪಾಗುವ ವೈಚಾರಿಕ ಸಾಂಗ್ಯತ್ಯದ ಸಾಮಿಪ್ಯದ ತುಡಿತ.

ಯಾಕೆ ಹೀಗೆ ? ಏರು ಯೌವನದಲಿ ಇಲ್ಲದ ಮನೋಪಲ್ಲಟ ಈಗೇಕೆ ?

ಪ್ರಬುದ್ಧತೆ , ಸಮಾಧಾನ ಅದರೊಂದಿಗೆ  ಒಂಟಿತನವನ್ನು ಏಕಾಂತವಾಗಿಸುವ ಇರಾದೆ.

ಇನ್ನಿಲ್ಲದ ಜಡಪಡಿಕೆಯ ಪ್ರತಿಫಲವಾಗಿ ಭಾವಲೋಕ ಪ್ರವೇಶಿಸಿ ವಿಚಾರ ಸಂಗಾತಿಯನ್ನು ಹುಡುಕುವುದು ಸಾಮಾನ್ಯ ಎಂಬ ಸತ್ಯ ಬೆಳಕಿಗೆ ಬಂದಿದೆ.

ಹುಡುಕುವ ಪರಿಗೆ ಬೆರಗಾಗಿ ಹುಡುಕಾಟಕೆ ಒಲಿದು ವಿಚಾರಪತ್ನಿ ಸಿಗಬಹುದು ಆದರೆ ಮುಂದೇನು ?
ಇದನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಬಹಿರಂಗ ಪಡಿಸಬಹುದಾ ?
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದರೊಳಗೆ ನಾವು ಕಳೆದುಹೋಗಿರುತ್ತೇವೆ.

ಮತ್ತದೇ ತಲ್ಲಣ , ಸಂಘರ್ಷಗಳ ಸವಿಮಾಲೆ ಧರಿಸಿ ಹೊಸ ಸಂಬಂಧದ ಹಂಗಾಮಾ ಸವಿಯುವ ತರಾತುರಿ .
ಸಮರ್ಥ ಬೌದ್ಧಿಕ ಸಾಮಿಪ್ಯ ಹೊಂದಿದ ವಿಚಾರ ಪತ್ನಿ - ಪತಿ ಸಿಕ್ಕಾಗಲಾದರೂ ಹುಡುಗಾಟಿಕೆಯ ಹುಡುಕಾಟ ನಿಲ್ಲಬೇಕು.

ತುಂಬ ಆತ್ಮವಿಶ್ವಾಸದಿಂದ ಸಾಮಾಜಿಕ ಅಭಿಪ್ರಾಯ ಲೆಕ್ಕಿಸದೇ , ಚಾರಿತ್ರ್ಯದ ಸೋಗಲಾಡಿತನವನ್ನು ದೂರ ಮಾಡಿ ಸಂತಸ , ಸಂಭ್ರಮದಿಂದ ಬದುಕಬೇಕು.

ವಯಸ್ಸಾದಂತೆಲ್ಲ ಪ್ರಾಮಾಣಿಕತೆ ಪಸರಿಸಬೇಕು. ನಂಬಿಕೆ ಬಿಗಿಯಾಗಬೇಕು.
ಒಪ್ಪಿಕೊಂಡ ವ್ಯಕ್ತಿಯ ಚರಿತ್ರೆ ಹಾಗೂ ಚಾರಿತ್ರ್ಯದ ಗೊಡವೆಗೆ ಹೋಗಬಾರದು.

ಖುಷಿ ನಮ್ಮ ಧೋರಣೆಯಾಗಬೇಕು. ವರ್ತಮಾನದ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಇರುವ ಸಂಬಂಧಗಳನ್ನು ದಿಕ್ಕರಿಸದೇ , ಆಚಾರ ಸಂಗಾತಿಯನ್ನು ಅನಾಥ ಮಾಡದೆ ಇಳಿ ಹೊತ್ತನು ಸಂಭ್ರಮಿಸಬೇಕು.

Life skill ತರಬೇತಿಯ ಸಂದರ್ಭದಲ್ಲಿ ಕೆಲವರು ಈ ರೀತಿಯ ಸಂಬಂಧಗಳ ನಿರ್ವಹಣೆ ಕುರಿತು ಪ್ರಶ್ನಿಸಿದಕ್ಕೆ ಇದನ್ನು ಹೇಳಬೇಕಾಯಿತು ಅಷ್ಟೇ .

----ಸಿದ್ದು ಯಾಪಲಪರವಿ

ಪೊಸೆಸ್ಸಿವ್ ಅಪಾಯ

ಲವ್ ಕಾಲ

Possessive ಇದ್ರೆ ಹೀಗೆ ಆಗೋದು

ನೀನು ನನ್ನೊಂದಿಗೆ ಮಾತಾಡ್ತಾ ಕೆಲವು ಕಹಿ ಸತ್ಯಗಳನ್ನು ಹೇಳಿದ ಕೂಡಲೇ ಮೌನವಾಗಿ ಗಂಟಲು ಬಿಗಿದು ಮಾತು ನಿಲ್ಲಿಸಿದ್ದು ನನಗೆ ಅರ್ಥವಾಗುವುದಿಲ್ಲ ಅಂದುಕೊಂಡೆಯಾ ?

ಪ್ರೀತಿ ಆರಂಭದ ದಿನಗಳಲ್ಲಿ ತುಂಬಾ ಗೊಂದಲದಲ್ಲಿರುತ್ತದೆ. ಈ ತರಹದ ತಲ್ಲಣಗಳು ತೂಗುವ ತಕ್ಕಡಿಯಿದ್ದಂತೆ. ನಿಲ್ಲುವವರೆಗೆ ತೂಗಲೇಬೇಕು .

ಎರಡು ದಂಡೆ ಮೇಲೆ ಕಾಲಿಟ್ಟು ನಡೆಯುವುದು ಹೇಗೆ ? ಎಂಬ ಗೊಂದಲದ ಮಧ್ಯೆ ನೀ ನನ್ನನ್ನು ಸ್ವೀಕರಿಸಿರುವುದರಿಂದ ಈ ತಳಮಳ ಸಹಜ.

ಓಡುವ ರೈಲಿನ ಹಳಿಗಳು ಎಂದೂ ಸೇರುವುದೇ ಇಲ್ಲ ಆದರೆ ಜೊತೆಯಾಗಿ ಚಲಿಸಲೇಬೇಕು.

ನಾವು ಹಾಗೇ ವಿಭಿನ್ನ ನೆಲೆಯಲ್ಲಿ ಬದುಕನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು.

ಪಾಪ ಪ್ರಜ್ಞೆ ಸಲ್ಲದು. ಹಾಗಂತ ಸಂಬಂಧವನ್ನು ಟಾಂ ಟಾಂ ಮಾಡಬಾರದು.
ನಮ್ಮಿಬ್ಬರ ಖುಷಿಗಾಗಿ ನಾವು ಒಂದಾಗಿ ಮಿಲನಮಹೋತ್ಸವ ಆಚರಿಸಿದ್ದೇವೆ. ಸುಖಿಸಿದ್ದೇವೆ. ಸಂಭ್ರಮಿಸಿದ್ದೇವೆ.

ಅದು ನಮ್ಮ ಆಯ್ಕೆಯಾಗಿತ್ತು ಕೂಡಾ !
ಈಗ ಅದಕ್ಕೆ ಪಶ್ಚಾತಾಪ ಪಡುವುದು ಬೇಡವೇ ಬೇಡ .

ನೀನು ಹಾಗೆ ಪಶ್ಚಾತಾಪ ಪಟ್ಟಾಗಲೆಲ್ಲ ರಮಿಸಿ convince ಮಾಡಿ ನನಗೂ ಬೇಸರ ಇಲ್ಲ ಬಿಡು. ಯಾವುದೇ ದುರುದ್ಧೇಶ ನನಗೆ ಇಲ್ಲ ಎಂದ ಮೇಲೆ ಯಾವ ಅಳುಕೂ ಇಲ್ಲ.

ನಿಸ್ಸಂಕೋಚವಾಗಿ ನಿನ್ನನ್ನು ರಮಿಸುತ್ತಲೇ ಇರುತ್ತೇನೆ , ನೀನು ಕೋಪಿಸಿಕೊಳ್ಳುತ್ತಲೇ ಇರು. ಕೋಪಗೊಂಡಿರುವವರನ್ನು ರಮಿಸಿ ಮುದ್ದಿಸುವುದರಲ್ಲಿ thrill ಇರುತ್ತದೆ.

ಹಾಗೆ ಮುದ್ದಿಸಲಿ ಎಂಬ ಇರಾದೆ ಇಟ್ಟುಕೊಂಡೇ ನೀ ಕೋಪ ಮಾಡಿಕೊಂಡರೆ ನನಗೆ ಬೇಸರವಿಲ್ಲ but don't take anything personally.

ನಿನ್ನೆ ಆಗಿದ್ದು ಅಷ್ಟೇ , ನಿನ್ನ over possessiveness ನಿನ್ನಲಿ ಇಲ್ಲದ ಆತಂಕ ಉಂಟು ಮಾಡಿದೆ.

ಆದರೆ ಇದು repeat ಆಗುವುದು ಬೇಡ.
ಮನಸಿಗೆ  ತುಂಬಾ ಹಳಹಳಿಯಾಗುತ್ತೆ.

ರಮಿಸಿ , ರಮಿಸಿ ನನಗೂ ಹೈರಾಣಾಗಬಾರದಲ್ಲ ?

ತೂಗುವ ತಕ್ಕಡಿ ಸಮ ಕಾಯ್ದುಕೊಳ್ಳಲಿ. ಮನಸು ಹಗುರಾಗಲಿ.

ಅರ್ಧ ಕಾಣೆಯ ಸೋಲದೆ , ಅರ್ಧ ಕಾಣೆಯ ಗೆಲ್ಲದೇ ಜಾಣರಾಗಿ ಇರೋಣ. 

' ಅವನು ' ಆಡಿಸಿದಂತೆ ಆಡಿ ಕೇವಲ ಖುಷಿ , ಖುಷಿ ಆಗಿರೋಣ ಅಷ್ಟೇ.
ಆಗೀಗ ಇರಲಿ ಕೊಂಚ ಹುಸಿ ಮುನಿಸು.

ಎಲ್ಲಿ ಪ್ರೀತಿ , ಅಲ್ಲಿ ಕೊಂಚ ಅನುಮಾನ , ಇನ್ನೂ ಕೊಂಚ ಕೋಪ ಎಂದು ನನಗೆ ಗೊತ್ತಿದೆ ಬಿಡು.

----ಸಿದ್ದು ಯಾಪಲಪರವಿ