Saturday, June 30, 2018

ಇಳಿಹೊತ್ತಲೊಂದು ಸುದೀರ್ಘ ಪಯಣ

*ಇಳಿಹೊತ್ತಲೊಂದು ಸುದೀರ್ಘ ಪಯಣ*

ಇನ್ನೇನೆಲ್ಲ ಮುಗಿಯಿತು ಅಂದುಕೊಂಡ ಇಳಿಹೊತ್ತಲಿ ಎಲ್ಲ ಅಂಗಾಂಗಗಳು
ನಲುಗುವ ಕಾಲ ಘಟ್ಟದಲಿ ನೀ
ಸಿಕ್ಕ ಕ್ಷಣದಲಿ ಚಿಗುರಿದ ಹರೆಯ
ಬೆದರಿದ ಅಂಗಾಂಗಗಳ ಚಡಪಡಿಕೆ

ಎದುರಾದ ಗಳಿಗೆಯಲಿ ನಿಮಿರದ
ಎದೆಯಾಳಲಡಗಿದ ಎದೆತೊಟ್ಟುಗಳಿಗೆ
ತಲ್ಲಣ

ಸಂಜೆಗತ್ತಲಲಿ‌ ಬಾಗಿಲು ಮುಚ್ಚಿದರ
ಗಳಿಗೆಯಲಿ ಎಲ್ಲ ಬಟಾ ಬಯಲು
ಮಹಾಬಯಲ ಬೆರಗು ಬೆತ್ತಲ ದೇಹ
ಕೊಂದು ಕಳೆ ರೋಮ ರೋಮಗಳಲಿ
ಬೆರಳುಗಳ ದಿವ್ಯ ನರ್ತನ

ಅಂಗಾತ ಮಲಗಿದ ದೇಹಸಿರಿಗೆ
ಕಂಗಳ‌ ದಾಳಿ ಮೈಮನಗಳಲಿ‌ ಗೂಳಿ
ಕಾಳಗ

ಅರಳಿನಿಂತು ಕೈಮಾಡಿ ಕರೆದೆದೆಯ ಮೇಲೆ
ಬಿಗಿದ ಮುಷ್ಟಿ ಶುರುವಾದ ಮೃದು ಮರ್ಧನ
ನಿಮಿರಿದ  ತೊಟ್ಟುಗಳಿಗೆ ಎಲ್ಲಿಲ್ಲದ ಸಡಗರ

ನಿಮಿರುವದ ಮರೆತು ಮುದುಡಿ ಮಲಗಿದ
ಪುರುಷತ್ವಕೀಗ ಹೊಸ ಹುಮ್ಮಸ್ಸು
ಕೊನರಿದ ಕೊರಡು ನರನಾಡಿಗಳ
ಮಿಡಿತ

ಅಡಿಯಿಂದ ಮುಡಿಯವರೆಗೆ ಮೇಲಿಂದ
ಕೆಳಗೆ ಎಲ್ಲಂದರಲಿ ತುಟಿಗಳ‌ ಸಮ್ಮಿಲನ
ಸಂಚಲನದ ಸಂಚಾರ

ಜೋಲುಬಿದ್ದ ಮೊಲೆಗಳಿಗೀಗ ಹೊಸ
ತಾಕತ್ತು ಉಕ್ಕಿ ಹರಿವ ಹುಮ್ಮಸ್ಸು

ವಯೋಮಾನದ ಹಂಗ ಹರಿದು ಚರಿತೆ
ಸಂಗ ಮರೆತು ಕೂಡುವ ಕಾತರ

ತೋಳ ತೋರಣದಿ ನಿನ್ನ ಲಾಲನೆಯಲಿ
ಅರಳಿದ ಹೂಗಳಿಗೆ ದುಂಬಿಗಳ ದಾಳಿ

ಮೃದು ನಾದಕೆ ತಾನೇ ತಾನಾಗಿ ಅರಳಿದ
ತೊಡೆಗಳ‌ ಮಧ್ಯದಲೊಂದು ಕೆಸರಿಲ್ಲದ
ಕಮಲ‌

ಬಸುಗುಡುವ ಸರ್ಪಕೀಗ ಸ್ವಯಂ
ಸಂಸ್ಕಾರ ನುಗ್ಗಿಬಿಡುವ ತೀವ್ರ ತವಕ

ಸೀಳಿ ಒಳ ನುಗ್ಗಿದ ಪರಿಗೆ ಮುಗಿಲು
ಮುಟ್ಟಿದ ಚೀತ್ಕಾರದಲೊಂದು ಹೊಸ
ಚಮತ್ಕಾರ

ಒಳ ಹೊರಗಿನ ನುಸುಳಾಟದಿ‌ ಶುರುವಾದ
ಹೊಸ ಅಧ್ಯಾಯ ಧರೆಗಿಳಿದ ಯೌವನ

ಇದು ಇಳಿ ಪ್ರಾಯದ ದೇಹದಾಟವಲ್ಲ
ಚಿರಯೌವ್ವನದ ಬಿರುಸಿನ ಹೊಡೆತ

ಅಚ್ಚರಿ ಬೆರಗು ವಯಸು ದೇಹಕಲ್ಲ
ಮನಸಿಗೆಂಬ ಹೊಸ ಲೆಕ್ಕಾಚಾರ

ಎಲ್ಲಾ ಮುಗಿದೇ ಹೋಗಿದೆ
ಅಂದುಕೊಂಡಾಗ
ಇದೇನಿದು ಹೊಸ ವರಸೆ ಒಲವ
ಮಿಲನದಿ ಉಕ್ಕಿ ಹರಿಯುವ ವರತೆ

ಅರ್ಧ ಶತಕದ ಜೀವಪಯಣದಲಿ‌
ಸಿಕ್ಕ ಚಲುವೆಯ ದೇಹದಾಳಿಯಲಿ‌
ಅರಳಿದ ಮನ ಕೆರಳಿದ ದೇಹಕೀಗ
ಹೊಸ ಕಳೆ ರಾತ್ರಿಯಿಡೀ ನಿಲ್ಲದ

ಳೆ...

*ಸಿದ್ದು ಯಾಪಲಪರವಿ*

Friday, June 29, 2018

ಇಂದು ಬೆಳಕು ಹರಿಯಲಿಲ್ಲ

*ಇಂದು ಬೆಳಕು ಹರಿಯಲಿಲ್ಲ*

ಆಗಸದಲಿ ಮರೆಯಾದ ರವಿಕಿರಣಗಳು
ಆವರಿಸಿಕೊಂಡ ಮೋಡದ ಮುಸುಕು

ಮರದಲಿ ಚಿಲಿಪಿಲಿಸಿ ಉಲಿಯದ
ಹಕ್ಕಿಗಳ ಕಲರವ ಈ ಬೆಳಗು ಯಾಕೋ
ನೀರವ ನೀರಸ ನೀಲ ನೀಲ

ತೋಳ‌ ಮೇಲೊರಗಿದ ಮಗಳ ಸಣ್ಣನೆ
ಗೊರಕೆ ಶಾಂತವಾಗಿ ಕೇಳುವ ಎದೆಬಡಿತಕೆ
ಏನೋ ಕಳವಳ ಕಳಕೊಂಡ ಹಳವಂಡ

ಹಾಸಿಗೆ ಬಿಟ್ಟರೂ ಬಿಡದ ಜಡದ ಮಾಯೆ
ಮುಸುಕೆಳೆದು ಮಲಗಿದರೂ ತೆರೆವ ಕಂಗಳು

ನಿಧಾನ ಧೇನಿಸುತ ಏರಿದ ವ್ಯಾಯಾಮದ
ಸೈಕಲ್ ತುಳಿತದ ಕಿರ್ ಕಿರ್ ಸದ್ದು
ಕೇಳಿಸಿದ್ದು ಇದೇ ಮೊದಲು
ಮಾತಿನ ಹಂಗಿಲ್ಲದ ನೀರವ ಮೌನ
           
ಬೆಳಕು ಬೆಳಗುತಿರಬೇಕು ಹೀಗೆ
ಮೌನವಾಗದೇ ಸೂರ‌್ಯ ಉದಯಿಸಲಿ
ಬೇಗ ಹಕ್ಕಿಗಳು ಗೂಡ ಬಿಟ್ಟು ಬರಲಿ

ಮೈಚಳಿ ಬಿಟ್ಟು ಉಲಿಯುತಲಿರಲಿ
ಪಿಸುಮಾತುಗಳ ಸವಿಗಾನ ಅಲ್ಲಿ
ಜಗಳದಲಿಯೂ ಒಲವ ವರತೆ

ಸಂಗೀತದ ಆಲಾಪ‌ ರಾಗ ತಾಳ
ದ್ವೇಶಕಿಲ್ಲ ಜಾಗ ಬರೀ ಮಾತು
ಮಾತು ಮಾತು ಮುಗಿಯುವ
ಮುನ್ನ ಹುಸಿಕೋಪಕೆ ಭೈರವಿ

ಮುತ್ತಿನ ಮಳೆಗರಿದು ಮಾತು
ಮುಗಿದಾಗ ಮೈಮನಗಳಲಿ ಇನ್ನಿಲ್ಲದ
ನಿಲ್ಲದ ಕಂಪನ ಇಡೀ ದಿನದ
ಜೀವಸೆಲೆಗೆ ಒಲವಿನಾಸರೆಯ ದಿವ್ಯ
ಚೇತನ

ಆದರೆ ಯಾಕೋ
ಇಂದು ಬೆಳಕು ಹರಿಯಲಿಲ್ಲ.

  *ಸಿದ್ದು ಯಾಪಲಪರವಿ*

ನಡುಗಾಲದ ಏರುಮನ

*ಲವ್‌ ಕಾಲ*

*ನಡುಗಾಲದ ಏರುಮನ*

ಈ ಪಯಾಣದಲಿ ನಡುಗಾಲ ಒಂದರ್ಥದಲ್ಲಿ ಪ್ರಬುದ್ಧ ಗಟ್ಟಿ ಅಂದುಕೊಂಡಿರುತ್ತೇವೆ. ಆದರೆ ಹಾಗೆ ಆಗದೇ ಎಡವಟ್ಟುಗಳು ಯಾವಾಗೆಂದರೆ ಆವಾಗ ಆಗಬಹುದು.

ಅವುಗಳನ್ನು ಎಡವಟ್ಟುಗಳು ಅನಲಾಗದು. ಪ್ರಾಯದಲ್ಲಾದರೆ ಎಲ್ಲವೂ ಕಲರ್ ಕಲರ್ ಕಂಡದ್ದೆಲ್ಲ ದಕ್ಕಲೆಂಬ ಹಂಬಲ, ಚಪಲ, ತೀವ್ರತೆ.

ನಡುಗಾಲದಲಿ ಎಲ್ಲವನ್ನೂ ಅನುಭವಿಸಿ, ಒಳ್ಳೆಯದು, ಕೆಟ್ಟದ್ದು ಯಾವುದೆಂಬ ಸ್ಪಶ್ಟತೆ ಬಂದಿರುತ್ತದೆ. *ಮುಖ* ಯಾವುದು *ಮುಖವಾಡ* ಯಾವುದೆಂದು ಗೊತ್ತಾದರೂ ಒಳ್ಳೆ ಮಾತು ಮತ್ತು ಹೊಗಳಿಕೆಗೆ ಮರುಳಾಗುವ ಅಪಾಯದ ಕಾಲವೂ ಹೌದು.

ಇಂತ ಸಂದಿಗ್ಧ ಕಾಲದಲ್ಲಿ ನೀ ಸಿಕ್ಕು ಬಿಟ್ಟೆ. ಸಿಕ್ಕ ಮೇಲೆ ಮುಖ, ಮುಖವಾಡಗಳದೇ ಜಗಳ, ಚರ್ಚೆ, ಮಾತು-ಕತೆ.

ಈಗ ನಿಲ್ಲಿಸಿಬಿಡೋಣ ಈ ಸುಡುಗಾಡು ಮುಖಗಳ ಕತೆ. ಸಮಯ ಕಮ್ಮಿ ಇದೆ, ಮೊದಲೇ ಸಿಕ್ಕದ್ದು ನಡುಗುವ ನಡುಗಾಲದಲಿ. ಬರೀ ನಲುಗುವುದೇ ಆಗುತ್ತೆ, ಹೀಗೆಯೇ ಒಣ ಕಾಡು ಹರಟೆಯಲಿ.

ಪರಸ್ಪರ ಕಳೆದುಹೋದ ಮೇಲೆ ಅನುಮಾನ ಸಹಜ, ಅದೂ ಚಾರಿತ್ರ್ಯದಂತ ಸೂಕ್ಷ್ಮಾತಿಸೂಕ್ಷ್ಮ ಸಂಗತಿಯ ಕೆದಕಬಾರದು. ವ್ಯಾಮೋಹದಲಿ ನಾ ಕೆಣಕಿಬಿಟ್ಟೆ ಆದರೆ ನೀ ಸರಿಯಾಗಿ ಕನ್ವಿನ್ಸ್ ಮಾಡಲು ತುಂಬಾ ಸಮಯ ತೆಗೆದುಕೊಂಡು ಒದ್ದಾಡಿದೆ. ಹೇಳುವ, ಕೇಳುವಲ್ಲಿ ಸಣ್ಣ *ಕಮ್ಯೂನಿಕೇಶನ್ ಗ್ಯಾಪ್* .

ಈ ತರದ ಬಾಂಡೇಜುಗಳಲಿ ಹೀಗಾಗಬಾರದು. ಎಲ್ಲವೂ ತರೆದಿಟ್ಟ ಪುಸ್ತಕದಂತೆ ಇದ್ದರೆ ಚಂದ. ನಾ ಸರಿಯಿದ್ದೇನೆ ಎಂದು ಹೇಸಿಗೆ ಮೇಲೆ ಕಾಲಿಟ್ಟರೂ ತೊಳೆದುಕೊಳದಿರಲಾದೀತೆ?

ನಕಾರಾತ್ಮಕ, ಅಪಾಯಕಾರಿ ಮುಖವಾಡಗಳೇ ಹಾಗೆ, ಒಳ್ಳೆಯತನದ ಸೋಗಿನಲಿ ಅವತರಿಸಿ ಮೆದುಳಿಗೆ, ನೆರಿಗೆಗೆ ಕೈ ಹಾಕುತ್ತವೆ. ಅರಿಯುವದರೊಳಗಾಗಿ ಕಳೆದು ನಮ್ಮನು ನಾವು ಹುಡುಕಬೇಕಾಗುತ್ತೆ.

ನಾವು ಬರೀ ಸರಿ ಇದ್ದರೆ ಸಾಲದು. ಸರಿ ಇದ್ದವರ ಜೊತೆಗೂ ಇರಬೇಕಾಗುತ್ತೆ.
ಕೆಸರೆಂದು ಗೊತ್ತಾದ ಸರಿದು ಹೋಗಬೇಕು, ಒಮ್ಮೆ ನೋಡಿಯೇ ಬಿಡೋಣ, ನಂತರ ಕಾಲು ತೊಳಕೊಂಡರಾಯಿತೆಂಬ ಹಟಕೆ ಬೀಳಬಾರದು.

ನಡುಗಾಲದಲಿ ಸಿಕ್ಕವರು ಕಳೆದು ಹೋದರೆ ತುಂಬ ಹಿಂಸೆ, ಹರೆಯದಲಾದರೆ ಗಾಯ ತಡಕೊಳ್ಳಬಹುದು. ಮಾಗಿದ ಮೇಲಲ್ಲ.

ನಮಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ, ಸಮಯ ತುಂಬಾ ಕಡಿಮೆ ಇದೆ. ಸೈದ್ದಾಂತಿಕ ವಿಷಯಗಳಲಿ ಕಾಲ ಹಾಕಿ ದೂರುವುದು ಬೇಡ.

ಆಯ್ತೀಗ ಇಬ್ಬರು ಕಳೆದುಕೊಂಡರೂ ಬೇಕಾದ್ದನೆಲ್ಲ ದಕ್ಕಿಸಿಕೊಂಡಿದ್ದೇವೆ.

ನಿಷ್ಟೆ,ಪ್ರಾಮಾಣಿಕತೆ, ಪಾರದರ್ಶಕತೆ ಇಟ್ಟುಕೊಂಡು ಖುಶಿ ಖುಶಿಯಾಗಿ ಕಾಲ ಹಾಕೋಣ‌. ಈ ಖುಶಿಯನು ಮತ್ತೆಲ್ಲಾದರೂ ಹುಡುಕಿದರೆ ಹುಚ್ಚರಾಗುತ್ತೇವೆ.

ಬರೆಯೋಣ ಹದವಾಗಿ ಬೆರೆಯೋಣ. ದೇನಿಸುತ, ಧೇನಿಸುತ್ತ.

ಬೆನ್ನು ಬಾಗಿ ಇಳಿಹೊತ್ತಿಗೆ ಜಾರುವ ಮುನ್ನ ಪರಿತಪಿಸದೇ ಬುಜದ ಮೇಲೊರಗಿ ಕಣ್ಣ ಮುಚ್ಚಿ ನಲುಗದೇ ನವಿರಾಗಿ ಮುಲುಗುತಲಿರೋಣ. ಮುಸ್ಸಂಜೆಯ ಸುಂದರ ಕತೆಯಾಗೋಣ.

  *ಸಿದ್ದು ಯಾಪಲಪರವಿ*

Thursday, June 28, 2018

ಇಂದು ಬೆಳಕು ಹರಿಯಲಿಲ್ಲ

*ಇಂದು ಬೆಳಕು ಹರಿಯಲಿಲ್ಲ*

ಆಗಸದಲಿ ಮರೆಯಾದ ರವಿಕಿರಣಗಳು
ಆವರಿಸಿಕೊಂಡ ಮೋಡದ ಮುಸುಕು

ಮರದಲಿ ಚಿಲಿಪಿಲಿಸಿ ಉಲಿಯದ
ಹಕ್ಕಿಗಳ ಕಲರವ ಈ ಬೆಳಗು ಯಾಕೋ
ನೀರವ ನೀರಸ ನೀಲ ನೀಲ

ತೋಳ‌ ಮೇಲೊರಗಿದ ಮಗಳ ಸಣ್ಣನೆ
ಗೊರಕೆ ಶಾಂತವಾಗಿ ಕೇಳುವ ಎದೆಬಡಿತಕೆ
ಏನೋ ಕಳವಳ ಕಳಕೊಂಡ ಹಳವಂಡ

ಹಾಸಿಗೆ ಬಿಟ್ಟರೂ ಬಿಡದ ಜಡದ ಮಾಯೆ
ಮುಸುಕೆಳೆದು ಮಲಗಿದರೂ ತೆರೆವ ಕಂಗಳು

ನಿಧಾನ ಧೇನಿಸುತ ಏರಿದ ವ್ಯಾಯಾಮದ
ಸೈಕಲ್ ತುಳಿತದ ಕಿರ್ ಕಿರ್ ಸದ್ದು
ಕೇಳಿಸಿದ್ದು ಇದೇ ಮೊದಲು
ಮಾತಿನ ಹಂಗಿಲ್ಲದ ನೀರವ ಮೌನ
           
ಬೆಳಕು ಬೆಳಗುತಿರಬೇಕು ಹೀಗೆ
ಮೌನವಾಗದೇ ಸೂರ‌್ಯ ಉದಯಿಸಲಿ
ಬೇಗ ಹಕ್ಕಿಗಳು ಗೂಡ ಬಿಟ್ಟು ಬರಲಿ

ಮೈಚಳಿ ಬಿಟ್ಟು ಉಲಿಯುತಲಿರಲಿ
ಪಿಸುಮಾತುಗಳ ಸವಿಗಾನ ಅಲ್ಲಿ
ಜಗಳದಲಿಯೂ ಒಲವ ವರತೆ

ಸಂಗೀತದ ಆಲಾಪ‌ ರಾಗ ತಾಳ
ದ್ವೇಶಕಿಲ್ಲ ಜಾಗ ಬರೀ ಮಾತು
ಮಾತು ಮಾತು ಮುಗಿಯುವ
ಮುನ್ನ ಹುಸಿಕೋಪಕೆ ಭೈರವಿ

ಮುತ್ತಿನ ಮಳೆಗರಿದು ಮಾತು
ಮುಗಿದಾಗ ಮೈಮನಗಳಲಿ ಇನ್ನಿಲ್ಲದ
ನಿಲ್ಲದ ಕಂಪನ ಇಡೀ ದಿನದ
ಜೀವಸೆಲೆಗೆ ಒಲವಿನಾಸರೆಯ ದಿವ್ಯ
ಚೇತನ

ಆದರೆ ಯಾಕೋ
ಇಂದು ಬೆಳಕು ಹರಿಯಲಿಲ್ಲ.

  *ಸಿದ್ದು ಯಾಪಲಪರವಿ*

Wednesday, June 27, 2018

ಯುವ ಮನಸುಗಳೇ ಇರಲಿ ಆಯ್ಕೆ ಸೂಕ್ತ

*ಒಲವಿನೋಲೆ*

*ಯುವಮನಸುಗಳೇ ಇರಲಿ  ಆಯ್ಕೆ ಸೂಕ್ತ*.

ಹಲೋ ಚಿನ್ನು,

ಪದವಿ ಮುಗಿದ ಸಂಭ್ರಮ. ಅದೂ ಆಡ್ ಅಡ್ತಾ. ಒಮ್ಮೊಮ್ಮೆ ನಮಗೆ ಅಷ್ಟೇನು ಇಷ್ಟವಾಗದ ಕೋರ‌್ಸುಗಳನ್ನು ಅನಿವಾರ‌್ಯವಾಗಿ ಮುಗಿಸಿಬಿಡುತ್ತೇವೆ ಆದರೆ ಮುಂದೇನು ಎಂಬುದೊಂದು ಪ್ರಶ್ನೆಯಾಗಿಬಿಡುತ್ತದೆ.

ನಾವು ಓದಿದ ವಿಷಯದಲ್ಲಿ ಉದ್ಯೋಗ ಹಿಡಿಯಬೇಕೋ ಅಥವಾ ಬೇರೆ ಆಸಕ್ತ ಕೆಲಸ ಹಿಡಿಯಬೇಕೋ ಎಂಬ ಗೊಂದಲ ಸಹಜ.

ಏನೇ ಮಾಡಿದರು professionalism ಬೇಕೇ ಬೇಕು.

ಹೊಟ್ಟೆಪಾಡಿಗಾಗಿ ಹೇರಳ ಹಣ ಬರುವ ಉದ್ಯೋಗದ ಅನಿವಾರ‌್ಯತೆ ಯುವಕರಿಗೆ ಇರುತ್ತದೆ.
Passion ಇರುವ ಕೆಲಸಗಳು ನಮಗೆ ಹೇರಳ ಅಲ್ಲದಿದ್ದರೂ at least ಅಗತ್ಯವಿರುವಶ್ಟಾದರೂ ಹಣ ತಂದುಕೊಡಬೇಕು.

ನಾನು passion ಇರುವ ಕಾರಣದಿಂದ teaching ಆಯ್ದುಕೊಂಡೆ, ಈ‌ ವ್ಯವಸ್ಥೆಯ ಹೊಡೆತದಿಂದಾಗಿ ಹಣಕಾಸಿನ ಮುಗ್ಗಟ್ಟನ್ನು ಇಂದಿಗೂ ಎದುರಿಸುತ್ತಿದ್ದೇನೆ.

ವಾಸ್ತವದಲಿ ಕನಸುಗಳಿಗೆ ಮಿತಿ ಇದ್ದರೆ ಈ ಉದ್ಯೋಗದಲ್ಲಿಯೂ ಸಂತೃಪ್ತನಾಗಿರಬಹುದಿತ್ತು ಆದರೆ ದೊಡ್ಡ ಕನಸುಗಳು ಹಾಸಿಗೆ ಇದ್ದಷ್ಟು ಕಾಲು ಚಾಚಲು ಬಿಡುವುದಿಲ್ಲ.

ನೀನು ಕಲಿತ ಶಿಕ್ಷಣ ಖಂಡಿತ ನಿನಗೆ ಅಗತ್ಯವಿರುವಷ್ಟು ಹಣ ತಂದು ಕೊಡುವುದರಲ್ಲಿ ಅನುಮಾನ ಬೇಡ.

ಈಗ ಇಡೀ ಜಗತ್ತು ನಿಂತಿರುವುದೇ ಮಾಹಿತಿ ತಂತ್ರಜ್ಞಾನದ ಬಳಕೆಯ ಮೇಲೆ. ಇದೇ ಉದ್ಯೋಗದಲ್ಲಿ ಮುಂದುವರೆದು, ಪರ‌್ಯಾಯ passion ಇಟ್ಟುಕೊಂಡು ತೃಪ್ತಿ ಪಡು.

ನನಗೆ ಗೊತ್ತಿರುವ ಕಾದಂಬರಿಕಾರ ವಿಶ್ವಾಸ ಮುದಗಲ್ ವೃತ್ತಿಯಿಂದ ತಂತ್ರಜ್ಞ, ಪ್ರವೃತ್ತಿಯಿಂದ ಬರಹಗಾರ.

ಹೀಗೆ ಅನೇಕ ಟೆಕ್ಕಿಗಳು ಬರಹಗಾರರಾಗಿ, ಕಲಾವಿದರಾಗಿ  ಹೆಸರು ಮಾಡಿದ್ದಾರೆ.

ವೃತ್ತಿ ಹಣ ತಂದುಕೊಟ್ಟರೆ ಪ್ರವೃತ್ತಿ ಹೆಸರು, ಸೆಲಿಬ್ರಿಟಿ ಸ್ಟೇಟಸ್ ಒದಗಿಸಿದೆ.

ನಾನೋ ಬರಹಗಾರನಾಗಿ ಸೆಲಿಬ್ರಿಟಿ, ಕನಸುಗಾರ, ಕನಸುಗಳ ಮಾತಿನ ಮೋಡಿಯ ಪ್ರೇರಣೆ ಮೂಲಕ ಅನೇಕರನ್ನು  ಉತ್ತೇಜಿಸುತ್ತೇನೆ. ಬೆಳೆಸುತ್ತೇನೆ. ಆದರೆ ವೈಯಕ್ತಿಕವಾಗಿ ನರಳುತ್ತೇನೆ.

ನನ್ನ ನರಳುವಿಕೆ ಇಂದಿನ ಯುವಕರಿಗೆ ಬರಬಾರದು. ಹರೆಯದಲ್ಲಿ ಹೇರಳವಾಗಿ ಗಳಿಸುವ ಕೆಲಸ ಮಾಡುತ್ತ ಒಳಗಿನ ತೀವ್ರತೆಯನ್ನೂ ಕಾಪಾಡಿಕೊಂಡು ಹೆಸರು ಮಾಡಬೇಕು.

ಬರೀ ಹೆಸರು comfort ತಂದುಕೊಡುವುದಿಲ್ಲ ಕೂಸೆ.

*Passion gives us pleasure but money gives us freedom*.

ಮಾರ‌್ಗದರ‌್ಶನ ಮಾಡಲು ಅನೇಕರಿದ್ದಾರೆ, ಅದನ್ನು ಬಳಸಿಕೊಂಡು ಹೊಸ ದಾರಿ ಹಿಡಿ.

ಇನ್ನೂ ಅಗತ್ಯವೆನಿಸಿದರೆ ಹೈಯರ್ ವ್ಯಾಸಂಗ ಮುಂದುವರೆಸು, ಹೊಸ ಫೀಲ್ಡ್ ಸದ್ಯಕ್ಕೆ ಬೇಡ.

Its too risky at this moment.

ಒಂದೆರಡು ದಿನ relax ಆಗಿ ಆಲೋಚಿಸಿ ಮುಂದೆ ಅಡಿ ಇಡು.

Cool temperament ರೂಡಿಸಿಕೋ, ಗೊಂದಲ ಮಾಡಿಕೊಳ್ಳಬೇಡ.
ಬದುಕು ವಿಮಾನ ಇದ್ದ ಹಾಗೆ ಒಮ್ಮೆ take off ಆದರೆ ಸಾಕು ಮುಂದೆ ಸರಾಗ ಹಾರಾಟ.

ಏರುವವರೆಗೆ ಅರಚಾಟ ಇದ್ದೇ ಇರುತ್ತದೆ. ಏರಿದ ಮೇಲೆ ಎಲ್ಲವೂ ನಿವಾಂತ, ನಿತಾಂತ, ಶಾಂತ.

ಆಸಕ್ತ ಮನಸುಗಳೊಂದಿಗೆ ಚರ‌್ಚಿಸಿ ಮುಂದೆ ಅಡಿ ಇಡು. ಕೊಂಚ ದೂರ ನಡೆಸಲು ನಾ ಇದ್ದೇನೆ ಆದರೂ ಆಯ್ಕೆ ನಿನ್ನದು‌.

All the best

Always yours

*ಅಲೆಮಾರಿ*

( ಸಿದ್ದು ಯಾಪಲಪರವಿ )

Monday, June 25, 2018

ಕಲಬುರಗಿ ಸಂಗಮೇಶ್ವರ ಮಹಿಳಾ ವೇದಿಕೆ

*ಕಲಬುರಗಿ, ಸಂಗಮೇಶ್ವರ ಮಹಿಳಾ ಮಂಡಳದ ಲೇಖಕರ ವೇದಿಕೆ ಮತ್ತು ಪಿಸುಮಾತುಗಳು*

*ಹೆಣ್ಣು ಮಾಯೆ‌ ಅಲ್ಲ, ಅವಿವೇಕಿಯೂ ಅಲ್ಲ*

ಕಲಬುರಗಿ, ಕಲ್ಯಾಣ ಕರ್ನಾಟಕ ಯಾರಿಗೆ ತಾನೇ ಗೊತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೆಳೆಯರಿದ್ದಾರೆ. ಅದರಲ್ಲೂ ಈ ಸೋಸಿಯಲ್ ಮೀಡಿಯಾ ಬಂದ ಮೇಲೆ ಈ ಸಂಬಂಧಗಳು ಅಂಗೈಯಲಿ.

ಕೇಡು, ಒಳಿತು ಎರಡೂ ನಮ್ಮ ಕೈಯಲ್ಲೂ ಅನ್ನಿ.
ಈಗ ವಿಶಯಕ್ಕೆ ಬರುವೆ.

ಇದೇ ಜಾಲತಾಣದಲಿ ಪರಿಚಯವಾದ ಲೇಖಕಿ ಕಾವ್ಯಶ್ರೀ ಅವರೊಂದಿಗೆ ಒಂದು ಜುಗಲ್ ಬರೆದದ್ದು ಅಕ್ಷರ ಲೋಕದಲೊಂದು ದಾಖಲೆ.
ಅದಕೆ ಕಾರಣ ಸಹೃದಯತೆ ಮತ್ತು ಸದ್ಬಳಕೆ.

ಹೆಣ್ಣು ಎಂದರೆ ಸೆಳೆತ, ಜೀವಸೆಲೆ, ಭೋಗದ ವಸ್ತು, ಮಕ್ಕಳ ಹೆರುವ ಯಂತ್ರ, ಇನ್ನೂ ಏನೇನೋ ಹೇಳಲಾಗುತ್ತೆ.

ಇದಕ್ಕೆ ನಾನೇನು ಹೊರತಲ್ಲ, ನಾ ಸಂತನೂ ಅಲ್ಲ.
ಆದರೆ ನನಗೆ ಹೆಣ್ಣಿನ ಬಗ್ಗೆ ಅಪಾರವಾದ ಕಾಳಜಿಯೂ ಇದೆ.

ಕೂಡು ಕುಟುಂಬ ವ್ಯವಸ್ಥೆಯಲಿ ತ್ಯಾಗ, ಸಹನೆಯಿಂದ ಬಾಳಿ ಬದುಕಿದ *ಅಜ್ಜಿ, ಸೋದರತ್ತೆ, ಹರೆಯದಲ್ಲಿ ಗಂಡನ ಕಳೆದುಕೊಂಡರೂ ಯಾರನ್ನೂ ಲೆಕ್ಕಿಸದೇ ಗೌರವದಿಂದ ಬಾಳುತ್ತಿರುವ ತಂಗಿ, ಹೆಂಡತಿ, ಇಬ್ಬರು ಮುದ್ದು ಮಕ್ಕಳು*  ನನ್ನ ವಿಚಾರ ಸರಣಿಯನ್ನು ಬದಲಿಸಿದ್ದಾರೆ.

ಹೆಣ್ಣು ನನಗಂತು ಮಾಯೆಯಲ್ಲ. ದೌರ್ಬಲ್ಯವೂ ಅಲ್ಲ. ಜೀವಚೈತನ್ಯ. ಮುದ ನೀಡುವ ಸಂಗಾತಿ. ಹತ್ತು ಹಲವು ರೂಪದಲ್ಲಿ.

ಹರೆಯದಲ್ಲಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡರೂ ಎಲ್ಲೂ, ಯಾರೊಂದಿಗೂ ಪ್ರೀತಿ-ಪ್ರೇಮ-ಪ್ರಣಯಗಳಲಿ ಕಳೆದು ಹೋಗದೇ ಎಚ್ಚರವಹಿಸಿದೆ.

ಮದುವೆ,ಹೆಂಡತಿ,ಮಕ್ಕಳೊಂದಿಗೆ ಹಲವು ಕಾಲ ನನದೇ ಮಾದರಿಯಲ್ಲಿ ಬದುಕಿದೆ.

ವಯಸು ಮಾಗಿದಂತೆಲ್ಲ ಹೆಣ್ಣು-ಹೊನ್ನು-ಮಣ್ಣು ವ್ಯಾಖ್ಯಾನ ಅರಿಯಲು ಚಡಪೆಡಿಸಿದೆ.
ಆ ಹುಡುಕಾಟದಲಿ *ಕೊಂಚ ಕಳೆದು ಹೋದದ್ದು*, ಅದನ್ನು ನನ್ನ ಸಂಗಾತಿ ಅರ್ಥ ಮಾಡಿಕೊಂಡು ಸಹಿಸಿದ್ದು ಈಗ ಇತಿಹಾಸ.

ಶೇಕ್ಸ್‌ಪಿಯರ್ ನಾಟಕ ಒಥೆಲೋ ನನ್ನ ಅಲುಗಾಡಿಸಿತು. ಆಗ ಹೆಣ್ಣು ಡೆಸ್ಟಿಮೋನಾಳಂತೆ ಕಂಡಳು. ಕ್ಲಿಯೋಪಾತ್ರಳಂತೆ ಅಲ್ಲ.

*ಮಹಾದೇವಿ ಅಕ್ಕ* ನನ್ನ ಪಾಲಿನ ದೇವತೆ, ಆತ್ಮದ ಸಂಕೇತ. ಒಳಗೆ ಸುಳಿವಾತ್ಮಕೆ ಮೊಲೆ,ಮೀಸೆಯ ಹಂಗ ಹರಿದು ಕಣ್ಣು ತೆರೆಸಿದ ಧೀಮಂತೆ.

ಬುದ್ಧ-ಅಲ್ಲಮ-ಓಶೋ ಹೊಸ ಲೋಕ ಪರಿಚಯಿಸಿದರು. ಹೆಣ್ಣು‌ ಮಾಯೆ ಅಲ್ಲ. ಮಾಯೆ ಮನದ ಮುಂದಣ ಆಸೆ ಎಂಬುದನ್ನು ನಿಧಾನ ಗ್ರಹಿಸಿದೆ.

ಮನಸು ಮಾಗಿದಂತೆಲ್ಲ ಹೆಣ್ಣು ಭಿನ್ನವಾಗಿ ಕಂಡಳು. ಮೂಲಭೂತ ಪುರುಷ ಪ್ರಧಾನ‌ ಮನಸ್ಥಿತಿಯಿಂದ ಹೆಣ್ಣನ್ನು ನೋಡುವುದು ನಿಲ್ಲಿಸಿದೆ.

ಗಂಡಸಿನ ತೀವ್ರ ಚಪಲತೆಗೆ ಬಲಿಯಾಗಿ ಯಾವುದೇ ಸುಖ ಅನುಭವಿಸದೇ ಸತ್ತು ಹೋಗುವ, ಕಸ-ಮುಸರಿಯ ಒಗೆತನದ ವಿಜ್ರಂಭಣೆಯಲ್ಲಿಯೇ ಅಸಂಗತ ಹುತಾತ್ಮಳಾಗಿ ಹೊಗಳಿಸಿಕೊಳ್ಳುವ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಹುಸಿ ಹೇಳಿಕೆಯ ತಾನೂ ನಂಬುವ ಹೆಣ್ಣು ತನಗರಿವಿಲ್ಲದಂತೆ ಗಂಡಿನ ಆಸರೆಯಲಿ ಸ್ವರ್ಗ ಹುಡುಕುವ ಅವಿವೇಕ.

ಈಗ ಕಾಲ ಬದಲಾಗಿದೆ ಆದರೆ ಶೋಶಣೆ ನಿಂತಿಲ್ಲ. ಸ್ವರೂಪ ಬದಲಾಗಿದೆ.

ಪುರುಶನ ಚಡಪಡಿಕೆಯ‌ ಶೀಗ್ರ ಸ್ಕಲನದ ಮೈತುನಕೆ ಅರಿವಿಲ್ಲದೆ ನಿತ್ಯ ಬಲಿ.

ಕಾಮವೇ ಎಲ್ಲವೂ ಅಲ್ಲ. ಅದನು ಮೀರಿದ ಲೋಕವೊಂದಿದೆ ಎಂದು ಅಕ್ಕ *ನಿರ್ಭಯ-ನಿರಾಕರಣೆ-ನಿರ್ಲಿಪ್ತತೆ* ಸೂತ್ರ ಹಿಡಿದು ಬಟ್ಟೆಯ ಹಂಗ ಹರಿದು, ಗಂಡಿನ ಅಹಂ ಕೆಣಕಿ, ಉತ್ತರವನ್ನೂ ಕೊಟ್ಟಳು.

ಇದನ್ನು ಈಗ ಪ್ರತಿಯೊಬ್ಬ ಹೆಣ್ಣು ಅರಿಯಲೇಬೇಕು.
ಆಗ ಗಂಡು ನಗಣ್ಯನಾಗುತ್ತಾನೆ.
ಅದು ಬಿಟ್ಟು ಗಂಡು ಹೆಣ್ಣನ್ನು ಮಾಯೆ ಎಂದು ಬೈಯ್ಯುವುದು, ಹೆಣ್ಣು ಗಂಡನ್ನು ಟೀಕಿಸುತ್ತಲೇ *ಅವನ ತೋಳಿನಾಸರೆ ಬಯಸುವುದು ಎಂತಹ ವಿಪರ್ಯಾಸ*.

                               ***

ಇಂತಹ ಸಾವಿರ ಆತಂಕಗಳ ಇಟ್ಡುಕೊಂಡೇ ಆತ್ಮವಿಶ್ವಾಸ, ಧೈರ್ಯದಿಂದ ಕಾವ್ಯಶ್ರೀ ಅವರನ್ನು ಜುಗಲ್ ಬಂದಿಗೆ ಕರೆದೆ.

*ಯಾರಿಗೆ ಯಾರೂ ಮಾಯೆಯಾಗುವುದು ಬೇಡವಾಗಿತ್ತು*. ಪ್ರೀತಿಯಲಿ ಕಳೆದು ಹೋಗದ ಎಚ್ಚರವೂ ಇತ್ತು.

ಪ್ರೀತಿ-ಭಕ್ತಿಯಲಿ ಕಳೆದು, ಕರಗಿ ಹೋಗದೇ ಅನುಭವಿಸಲಾಗದು.
*ಉಂಡು ಉಪವಾಸ, ಬಳಸಿ ಬ್ರಹ್ಮಚಾರಿ* ಉಣ್ಣದೇ, ಬಳಸದೇ ಸುಖಿಸಿ ಈಗ ಹೊರಬಂದಿದ್ದೇವೆ.

*ನೈತಿಕತೆ, ವಿಶ್ವಾಸ,ಪ್ರಾಮಾಣಿಕತೆಯಷ್ಟೇ ನಮ್ಮ ಬಂಡವಾಳ*.

                               ***

ಕಲಬುರಗಿಯ ಸಂಗಮೇಶ್ವರ ಮಹಿಳಾ‌‌ ಮಂಡಳದ ಲೇಖಕರ ವೇದಿಕೆ ಅಂತಹ ನೂರಾರು ಅನುಮಾನ ಇದ್ದರೂ,‌ ಮುಖಾಮುಖಿ ಇಟ್ಟುಕೊಂಡಾಗ ಅದೇ ವಿಶ್ವಾಸ ನನಗಂತೂ ಇತ್ತು.

ಡಾ.ವಿಕ್ರಮ್ ವಿಸಾಜಿ ಮಾತಾಡಲಿ‌ ಎಂಬ ಏಕೈಕ ಕರಾರಿಟ್ಟೆ.

ಡಾ.ಲಕ್ಷ್ಮಿ ‌ಜೋಶಿ ನನಗೆ ಚಿರಪರಿಚಿತ. ನನ್ನ ಮೇಲೆ ಕೊಂಚ ಅನುಮಾನ, ಕೊಂಚ ವಿಶ್ವಾಸ, ಭಯ, ಗೊಂದಲ ಇನ್ನೂ ಏನೇನೋ !!

ಸುಜಾತ ಹಾಗೂ ತಮ್ಮ ತಂಡದವರನು ಒಪ್ಪಿಸಿ ಕಾರ್ಯಕ್ರಮ ರೂಪಿಸಿದರು.

ಈಗ ಉಳಿದ್ದು ನೀವೇ ನೋಡಿದ್ದೀರಿ. ಡಾ.ವಿಸಾಜಿ ಎಲ್ಲರ ಮನಸುಗಳಲಿ ರಿಂಗಣಿಸುತ್ತಿದ್ದ ಅನುಮಾನಗಳಿಗೆ ಉತ್ತರ ಕೊಟ್ಟಾಗ. *ಜಗಳಬಂದಿ ಅಳಿದು ಜುಗಲ್ ಬಂದಿಯಾಯಿತು*

ವಿಸಾಜಿ ಮಾತುಗಳೇ *ಹೀರೋ*.

ಜುಗಲ್ ಬರೆಯುವ ರಿಸ್ಕ್ ತೆಗೆದುಕೊಂಡು ಸಿಕಾ ನಾಮದ ಕಾವ್ಯಶ್ರೀ‌ ಎಲ್ಲರ ಮಾತುಗಳ‌ ಮೂಲಕ
ಬೆನ್ನು ತಟ್ಟಿಸಿಕೊಂಡು *ನಾಯಕಿ*  ಆದಾಗ ನಾ ಬೆಪ್ಪಾದೆ.

ಅಧ್ಯಕ್ಷತೆವಹಿಸಿದ್ದ ಹಿರಿಯ ಮಹಿಳೆ, ಈ ಜುಗಲ್ ಹುಡುಗ ಸ್ವಲ್ಪ *ಉಡಾಳ ಇದ್ದಂಗ ಅದಾನ‌* ಅಂದಾಗ ಪುಗಸಟ್ಟೆ ಸಿಕ್ಕ ರಸಿಕತನದ ಬಿರುದಿಗೆ ಈ ವಯದಲ್ಲೂ ಪುಳಕಗೊಂಡೆ.

ಇಡೀ ತಂಡದ ಮಹಿಳೆಯರ ಪ್ರೀತಿ-ವಿಶ್ವಾಸ, ಹೊಸತನವನ್ನು ಮುಕ್ತವಾಗಿ ಚರ್ಚಿಸಿ ಅನುಮಾನಗಳ ದೂರ ಮಾಡಿಕೊಂಡು ಕೇವಲ ಕಾವ್ಯವನ್ನು ಮಾತ್ರ ಆಸ್ವಾದಿಸುವ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದ್ದಕ್ಕೆ ಚಿರರುಣಿ.

*ಕಲಬುರಗಿ ಮಾಧ್ಯಮ ಮಿತ್ರರು ನಿಜವಾಗಿಯೂ ವಂಡರ್ ಫುಲ್. ಭಿನ್ನ, ಭಿನ್ನ ಗ್ರಹಿಕೆಯ ವಿಭಿನ್ನ ವರದಿ ಮಾಡಿ ತಮ್ಮ ಕಾವ್ಯಾಸಕ್ತಿ ಮೆರೆದಿದ್ದಾರೆ*.

ಪಾಲ್ಗೊಂಡ ಎಲ್ಲಾ ಕಾವ್ಯಾಸಕ್ತರ ಸಹೃದಯತೆ ಕಂಡುಕೊಂಡು ಅರಳಿಹೋದೆ.

*ಭಾವ ಕೋಶದ ನೆನಪುಗಳೇ ಹಾಗೆ ಖುಷಿ ಕೊಡುತ್ತವೆ*.
ಆ ಖುಷಿಯನ್ನು ಕಲಬುರಗಿ ಮನಸುಗಳು ಕೊಟ್ಟಿದ್ದೀರಿ. ಜತನವಾಗಿಟ್ಟುಕೊಂಡರೂ ಅನಿಸಿದ್ದು ದಾಖಲಾಗಲಿ ಅನಿಸಿತು.

ಕಾಲ ಎಲ್ಲವನ್ನೂ ಮರೆಸುತ್ತೆ, ಕರಗಿಸಿ ಅರಗಿಸಿಕೊಳ್ಳುತ್ತೆ. ಅದಕೆ ನಾ ಮರೆಯುವ ಮುನ್ನ ನಿಮಗೆಲ್ಲ ಕ್ರುತಗ್ನತೆ ಸಲ್ಲಿಸುವ ನೆಪದಲಿ ಇಷ್ಟೆಲ್ಲ ಬರೆದೆ.

ಯಾಕೋ *Thanks to one and all*
ಎನ್ನಲೂ ಮನಸು ಬರಲಿಲ್ಲ.

ನಿಮ್ಮ ಎಲ್ಲ ಬಗೆಯ ಅಭಿಪ್ರಾಯಗಳನ್ನು ಗೌರವಿಸಿ, ಖುಶಿಯಿಂದ ಸ್ವೀಕರಿಸುತ್ತೇನೆ.

*ಮುಕ್ತತೆ ನನ್ನ ಶಕ್ತಿ. ಸಹನೆ ನನ್ನ ಮಿತಿ*
ಅಕ್ಷರವೆಂಬ ಮಾಯಾಲೋಕದ ಮೂಲಕ ಸದಾ ಸಂಪರ್ಕದಲ್ಲಿರೋಣ.

*ಎಲ್ಲರಿಗೂ ಸಾವಿರದ ಶರಣು*

    *ಸಿದ್ದು ಯಾಪಲಪರವಿ*

ವಿಸಾಜಿ ವಿಕ್ರಮ್ ಮಾತುಗಳ ಕಲರವ

*ಕಲಬುರಗಿಯಲಿ‌ ವಿಸಾಜಿ ಮಾತುಗಳ ಕಲರವ*

ತುಂಬಾ ಹೆಸರು ಮಾಡಿದ ಪ್ರಾಧ್ಯಾಪಕ, ಕವಿ ಡಾ.ವಿಕ್ರಮ್ ವಿಸಾಜಿ ಅವರ ಕೃತಿಗಳ ಮೂಲಕ ಪರಿಚಿತರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಇಡೀ ರಾಜ್ಯ ಸುತ್ತಾಡಿ ಸಾಂಸ್ಕೃತಿಕ ಮನಸುಗಳೊಡನೆ ಮಾತು-ಕತೆಯಲಿರುವ ಸಹೃದಯಿ.

ನನ್ನೊಡನೆ ನಿನ್ನೆ ಸಂಜೆ ಕಲಬುರಗಿಯಲಿ ಮೊದಲ ಬಾರಿ ಅರ್ಥಪೂರ್ಣ ಮುಖಾಮುಖಿ.

*ಪಿಸುಮಾತುಗಳ ಜುಗಲ್* ಕುರಿತು ಅಕ್ಯಾಡೆಮಿಕ್ ಆದ ಮಾತುಗಳ ಕೇಳುವ ವಿಸ್ಮಯ.
ಕೃತಿ ಕುರಿತ ಗ್ರಹಿಕೆ,ಮತ್ತದರ ವಿವರಣೆ ಬೆರಗು ಹುಟ್ಟಿಸಿತು.

ನುಡಿದರೆ ಮುತ್ತಿನ ಹಾರ ಅಂದರೆ ಹಿಂಗೆ ಅನಿಸಿತು. ಒಂದು ತಾಸು ಮಾತನಾಡುವಾಗಿನ ಖಚಿತತೆ ಕೇಳುಗರನ್ನು ಹಿಡಿದಿಟ್ಟಿತು.

ಗಂಡು-ಹೆಣ್ಣಿನ ಮಧ್ಯ ಅರಳುವ ಪ್ರೀತಿಯ ಹೊನಲನ್ನು ಸಾರ್ವತ್ರೀಕರಿಸಿ ನೋಡುವ ರೀತಿ ಓದುಗರನ್ನು ಸರಿದಾರಿಗೆ ಹಚ್ಚುವ ಕ್ರಮ.

ಒಂದರ್ಥದಲಿ ರಿಸ್ಕ್ ತೆಗೆದುಕೊಂಡು ಬರೆದ ಕಾವ್ಯಶ್ರೀ ಮಹಾಗಾಂವಕರ್ ಅವರ ಆತಂಕ ದೂರ ಮಾಡಿದರು.

ಹೆಣ್ಣಿನ ಮನಸ್ಥಿತಿ ಹಾಗೂ ತಲ್ಲಣಗಳ ಕಾರಣದಿಂದ ಅರಳುವ ಪ್ರತಿಮೆಗಳ ಭಾಷಾ ವಿನ್ಯಾವನ್ನು ವಿಸಾಜಿ ಬಿಡಿಸಿ ಹೇಳಿದರು.

ಕವಿಗಳ ಉದ್ದೇಶ ಹಾಗೂ ಆಶಯಗಳನ್ನು ಮೀರಿದ ಒಳನೋಟ ಅದಾಗಿತ್ತು.

ಇಂತಹ ಸಂದರ್ಭದಲ್ಲಿ ಕವಿಗಳು ನಗಣ್ಯ ಕಾವ್ಯ ಮಾತ್ರ ಪ್ರಸ್ತುತವೆಂಬ ಜಾಗತಿಕ ಸತ್ಯಕೆ ನೀಡಿದ ವ್ಯಾಖ್ಯಾನ ಓದುಗರಲ್ಲಿದ್ದ ಗುಮಾನಿಯನ್ನು ದೂರ ಮಾಡಿತು.

ಕೃತಿ ಪರಿಚಯದ ಮೂಲಕ ಓದುಗರನ್ನು ಹಾದಿ ತಪ್ಪಿಸದೇ , ಹೇಗೆ ಓದಿದರೆ ಸಹ್ಯ ಎಂಬ ವಿವರಣೆಯ ನಾವಿನ್ಯತೆ ಖುಷಿ ನೀಡಿತು.

ಬರೆದ ಮೇಲೆ ಮುಗಿಯಿತು, ಕೃತಿ ಓದುಗರ ಸ್ವತ್ತು, ಅವರಿಗೆ ಸರಿಕಂಡಂತೆ ಅರ್ಥೈಸುತ್ತಾರೆ.
ಒಂದರ್ಥದಲ್ಲಿ ಕವಿ ನಿರುಮ್ಮಳ. ಹಗುರಾಗಿ ಆರಾಮ್ ಇರಬೇಕು.
ಕೃತಿ ಕುರಿತ ವಿಶ್ಲೇಶಣೆ ಹೀಗೇ ಇರಲೆಂದು ಬಯಸಬಾರದು.

ಎಲ್ಲರೂ ಕವಿಗಳು, ಬರದದ್ದೆಲ್ಲ ಕಾವ್ಯ ಅಂದುಕೊಳ್ಳವ ಹೊತ್ತಿನಲ್ಲಿ ಪಿಸುಮಾತುಗಳು ವಿಸಾಜಿ ಅಂತವರ ಗಮನ ಸೆಳೆದದ್ದು ಖುಶಿಯಾಗಿದೆ.

ಸಹೃದಯಿ ಓದುಗರ, ವಿಮರ್ಶಕರ ಸಂಖ್ಯೆ ಹೆಚ್ಚಾದಾಗ ಒಳ್ಳೆಯ ಕೃತಿಗಳು ಮೂಡಿ ಬರಲು ಸಾಧ್ಯ. ಆರೋಗ್ಯಪೂರ್ಣ ಮನೋಭಾವ ಇಟ್ಟುಕೊಂಡು ಓದಲು ಪ್ರೇರೇಪಿಸಿದ ವಿಸಾಜಿ ಅವರ ಸಹೃದಯತೆಗೆ ಸಾವಿರದ ಸಲಾಮ್.

  *ಸಿದ್ದು ಯಾಪಲಪರವಿ*

Thursday, June 21, 2018

ಕಲಬುರಗಿಯಲಿ ಜುಗಲ್ ಕಲರವ

*ವಿನೂತನ ಪ್ರಯೋಗಕೊಂದು ಪ್ರಯೋಗ*

ಪಿಸುಮಾತುಗಳ‌ ಜುಗಲ್ ಕುರಿತು *ಕಲಬುರಗಿಯಲ್ಲಿ* ಸಂವಾದ ಆಯೋಜಿಸಿದ್ದಾರೆ.
ಸಂಗೀತ ಪ್ರಾಧ್ಯಾಪಕಿ, ಒಂದು ಕಾಲದ ವಿದ್ಯಾರ್ಥಿ ಡಾ.ಲಕ್ಷ್ಮಿ‌ ಶಂಕರ ಜೋಶಿ ತುಂಬಾ ಮುತುವರ್ಜಿವಹಿಸಿ ಕಾರ‌್ಯಕ್ರಮ ರೂಪಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಚಿಂತಕ ಡಾ.ವಿಕ್ರಮ ವಿಸಾಜಿ ಮಾತನಾಡುವುದು ಸಮಯೋಚಿತ. ರಾಗ,ದ್ವೇಶ,ಅಸೂಯೆಗಳಿಂದ ಯಾವ ಕ್ಷೇತ್ರಗಳು ಹೊರತಾಗಿಲ್ಲ ಅಂದುಕೊಳ್ಳುವಾಗಲೇ ಅರೆ ಅದು ಹಾಗಲ್ಲ ಅನಿಸಿ ಭರವಸೆ ಮೂಡಿಬಿಡುತ್ತೆ.

ನಾನು ಕಲ್ಯಾಣ ನಾಡಿನವನೇ ಹೊಟ್ಟೆಪಾಡಿಗಾಗಿ ಕಿತ್ತೂರ ಕರ್ನಾಟಕದಲ್ಲಿ ನೆಲೆಸಿದ್ದೇನೆ. ತಿರುಗಾಟದ ಕಾರಣದಿಂದ ಲೋಕವೇ ನನ್ನ ಮನೆ.
ಬೆಂಗಳೂರು, ಮಂಗಳೂರು ಹಾಗೂ ವಿದೇಶಿಗರ ಸಾಂಗತ್ಯದಿಂದಾಗಿ ಹೊಸ ಪಾಟ ಕಲಿಯುತ್ತಲೇ ಇದ್ದೇನೆ.
ಎಲ್ಲಿದ್ದರೇನು ಬೇರುಗಳು ಅಲುಗಾಡುವುದಿಲ್ಲ.

ಈಗೀಗ ಅವ್ವ-ಅಪ್ಪ ಹೋದ ಮೇಲೆ ಕಾರಟಗಿಗೂ ಹೋಗುತ್ತಲಿರುತ್ತೇನೆ.

ಐವತ್ತರ ಗಡಿದಾಡಿದ ಮೇಲೆ ಬದುಕನ್ನು ಮರು ಓದಬೇಕು. ಮಾಗಲೇಬೇಕು. ಯಾವದನ್ನೂ ಲೆಕ್ಕಿಸದೇ ಮುಕ್ತವಾಗಿ ಬರೆದು ದಕ್ಕಿಸಿಕೊಳ್ಳುವ ವಿಶ್ವಾಸ ಹೆಚ್ಚಾದ ಮಾಗಿ ಕಾಲವಿದು.

ಓದುಗರು ಕೇಳುವ ಪ್ರಶ್ನೆಗಳಿಗೆ ಮುಕ್ತವಾಗಿ ಹೇಳುವುದು ಜವಾಬ್ದಾರಿಯೂ ಹೌದು.

ಬಿಡುವು ಮಾಡಿಕೊಂಡು ಬರ್ರಿ, ಮಾತಾಡೋಣ.

   ಸಿದ್ದು ಯಾಪಲಪರವಿ

ಏರು ಬಾ ನೆತ್ತರ ನನ್ನೆತ್ತರ

*ಏರು ಬಾ ನೆತ್ತರ ನನ್ನೆತ್ತರ*

ಸಾಗುವ ಹಾದಿಯಲಿ ಸಾವಿರ
ಮುಳ್ಳುಗಳು ಬರೀ ಕಲ್ಲುಗಳು
ಅವನೆತ್ತಿಕೊಂಡು ಒಗೆಯುವ ಹಲಾಲು
ಕೋರರು

ಮುದ್ದು ಮುಖಕೆ ಮಸಿ ಬಳಿದು
ಅಂದಗೆಡಿಸಿ ಚರಿತೆಯ ತಿರುಚಿ

ಮಾನಕೆಡಿಸಿ ಹುಸಿ ಸಿದ್ಧಾಂತಗಳ
ಹೊಸೆದು ಹಾಕಿ ಮಳ್ಳರಂಗ ಮಾತ
ನಾಡಿ‌ ಮೆದುಳ‌‌ ಕೆಡಿಸೊ‌ ದುರುಳರು

ಮುಗ್ಧ ಅಸಹಾಯಕ ಮನಕೆ
ಬೇವ ಹಿಂಡಿ ಬೆಲ್ಲ ತಿನಿಸೋ
ಮಳ್ಳರು

ನೋವ ನುಂಗಿ ನೊಂದ ಮನಕೆ
ಖುಷಿಯ ಕೊಡಲು ದೇವ ಕಳಿಸಿದ
ಪ್ರಸಾದವ ಬೀದಿಗೆಸೆಯುವ ಹುನ್ನಾರ

ಕದಲಬೇಡ ನಲುಗಬೇಡ ಬೆದರಬೇಡ
ಮುಖವಾಡ ಕಳಚಿಬಿದ್ದು ಬೆಳಕಲಿ
ಬೆತ್ತಲಾಗಿ ಕುಣಿದು ನಲಿವ
ವಂಚಕರಿಗದು ಕತ್ತಲಂತೆ

ನಡೆಯದಿನ್ನು ದುರುಳರಾಟ ಬೆನ್ನಿಗಿರುವ
ದೇವದೂತ ನಿನ್ನ ಕೈಹಿಡಿದು ಸದಾ
ಕೇಳ್ವ ಮನದ‌ ಮಾತ

ನೀನೀಗ ಬೆಳದಿಂಗಳು ತುಂಬಿದ ಕೊಡ
ತುಳುಕದು ನೋಡಾ ಇನ್ನು
ಬೇಡ ಸಂದೇಹದ ದುಗುಡ-ದುಮ್ಮಾನ

ಏರು ಇನ್ನೂ ಏರು ಏರುತಲೇ ಇರು
ಯಾರ ಕೈಗೂ ಎಟುಕದೆ ಆಗಸದ
ಹೊಳೆವ ಕಂಗಳಂತೆ

ಕಾಲನ ಸೆಳೆತದಿ‌ ಕಳೆದುಹೋದ
ಪೆಟ್ರಾರ್ಕ ಲಾರಾಳಿಗೆ ಪೋಣಿಸಿದ
ಸಾಲುಗಳಿಗೀಗ ಮರುಜೀವ

ಉಮರ್ ಗಜಲ್ ಗಳಿಗೀಗ
ಮತ್ತೆ  ಹೊಸ ಭಾವ

ಸಾಹಿರ್ ಲೂದಿಯಾನ್ವಿ ಕಳಕೊಂಡ
ಕನಸಿನ ಅಮೃತಳಿಗೀಗ‌ ಮರುಹುಟ್ಟು

ಆಗ ಬರೀ ಗಜಲ್ ಗಳ ಏಕತಾರಿ
ನಿನಾದ ಒಂಟಿ ಪಯಣ ಏಕಮುಖ
ಸವಿಗಾನ

ಆದರೀಗ ನಮಗೆ ಪಿಸುಮಾತುಗಳ
ಮೆಲ್ಲುಸಿರ ಸವಿಗಾನ

ನಾವು ಬರೆದ ಹೊಸ ಹೊಚ್ಚ
ಇತಿಹಾಸದಿ ನೋವು ದುಗುಡಕಿಲ್ಲ
ಇಲ್ಲಿ ಜಾಗ

ಭಗ್ನತೆಯ ಹತಾಶೆಯಿಲ್ಲ ಸಿಗಲಿಲ್ಲವೆಂಬ
ತಲ್ಲಣವೂ ಇಲ್ಲ ಬರೀ
ದಕ್ಕಿಸಿಕೊಂಡ ಸಡಗರ

ಅನುಭವಿಸಿದ ಸಾಮಿಪ್ಯಕೆ ದೇವರೇ‌
ಸಾಕ್ಷಿ ಹರಿದಾಡಿ ಹದವಾಗಿ ಬೆರೆತು
ಮುದದಲಿ ಮುಲುಗಿ ನಕ್ಕು ನಲಿದು

ಏಕಾಂತದಲಿ ಜಗವ ಮರೆತು ಮೆರೆದು
ಬೆರೆತು ಬರೆದು ಉಂಡು ಆಡಿ ನಲಿದು
ಕೂಡಿದ ಕೂಟದಲಿ ಹರಿದ ಬೆವರ
ಬಿಸುಪಿಗೆ ಸುಗಂಧದ ಘಮಲು‌

ನೋವಿಗಿಲ್ಲ ಇಲ್ಲಿ ಜಾಗ ಮರೆತು
ಬಿಡು ಕೊಳೆತ ಮನಸ

ಹೊಸ ಬದುಕಲೀಗ ಬರೀ ಖುಷಿ
ಒಂದಿಷ್ಟೂ ಬೇಡ ಜಾಗ ಅವರು
ಇವರು ತೂರಿಕೊಳಲು

ನಮ್ಮ ಈ ಹೊಸ ಲೋಕದಲಿ
ಬರೀ

ನೀ
ನಾ
ನಾ
ನೀ

ಏರು ಬಾ ಬಾ ನೆತ್ತರ ನನ್ನೆತ್ತರ
ಹಾರಿ ಬಿಡೋಣ

ಯಾರ ಕೈಗೂ ಸಿಗದೆ ಮತ್ಯಾರ
ಕಣ್ಣಿಗೂ ಬೀಳದೇ
ಎಂದೂ ಕೆಳಗಿಳಿಯದೇ...

  *ಸಿದ್ದು ಯಾಪಲಪರವಿ*

ಸುರಿವ ಮಳೆ ಕರಗಿದ ನೋವು

*ಸುರಿವ ಮಳೆ ಕರಗಿದ ನೋವು*

ಈ ಮಳೆ ಎಷ್ಟೊಂದು ಉಪಕಾರ ಮಾಡ್ತಲ್ಲ.
ಆದ ಅವಮಾನ ಮನಸಿನಲಿ ಕುದೀತಾ ಇತ್ತು.
ಅವಮಾನಿಸುವ ಉದ್ದೇಶ ಯಾರಿಗೂ ಇರಲ್ಲ. ಕಾಲನ ಮಹಿಮೆ. ಕಂಡ ಕಂಡವರು ತಮಗೆ ಸರಿ ಕಂಡಂತೆ ಉಗಿದು ಸಿಗಿದು ಹಾಕುತ್ತಾರೆ. ಹಾಕಿಸಿಕೊಳ್ಳಬೇಕು ಅಷ್ಟೇ.

ಅಳು ಉಕ್ಕಿ ಬರುತ್ತಿತ್ತು, ಸ್ಕೂಟರ್ ವೇಗವಾಗಿ ಓಡಿಸಲಾರಂಭಿಸಿದೆ.
ನಿಧಾನ ಓಡಿಸಿದರೆ ಬೇರೆಯವರು ಮಾತನಾಡಿಸಿ, ನೋವ ಗುರುತಿಸಿಯಾರು ಎಂಬ ಚಡಪಡಿಕೆ, ಒಳಗೊಳಗೆ.

ತುಂಬ ಅನಿರೀಕ್ಷಿತವಾಗಿ ಧೋ ಎಂದು ಮಳೆ ಸುರಿಯಲಾರಂಭಿಸಿತು.
ಎಲ್ಲರೂ ಓಡಿ ಹೋಗಿ ಆಶ್ರಯ ಹುಡುಕಲಾರಂಭಿಸಿದರು. ನನಗೋ ಏನೂ ಬೇಡವಾಗಿತ್ತು, ಕೇವಲ ಮನಸಾರೆ ಅಳಬೆಕಾಗಿತ್ತು..

ಈಗ ಮುಕ್ತವಾಗಿ ಅಳಲೊಂದು ಅವಕಾಶ ಬೇಕೆನಿಸಿತ್ತು.

ಬೈಕ್ ನಿಲ್ಲಿಸಿ ಮರದ ಕೆಳಗೆ ನಿಂತದ್ದು ನೆಪ. ನಿಜಾವಾಗಿ ಆಸರೆ ಬೇಕಿದ್ದರೆ ನೀರು ಸಿಡಿಯದ ಜಾಗದಲಿ ನಿಲ್ಲಬೇಕಿತ್ತು.
ಹಾಗೆ ಹೇರಳ ನೀರು ಬೀಳುವ ಜಾಗದಲಿಯೇ ಇದ್ದು ಹಗುರಾಗುವ ಜರೂರಿತ್ತು.

ಎಲ್ಲ ಅವಮಾನ, ನೋವನ್ನು ಒಟ್ಟಾಗಿ ನೆನಪಿಸಿಕೊಂಡು ಒಂಟಿಯಾಗಿ ರೋದಿಸಲಾರಂಬಿಸಿದೆ.

ಅಳಲು ಮಳೆ ಮುಲಾಜಿಲ್ಲದೆ ನೆರವಾದದ್ದು ದೊಡ್ಡ ಉಪಕಾರ.

ಬದುಕೇ ಹೀಗೆಯೇ, ಅಂದುಕೊಂಡಂತೆ ಆಗಲಸಾದ್ಯ. ಹತ್ತು ಹಲವು ಭರವಸೆ ಇಟ್ಟುಕೊಂಡು ಜನರನ್ನು ನಂಬುವ ಅನಿವಾರ‌್ಯತೆ.
ಅಂದುಕೊಂಡಂತೆ ಆಗದಿದ್ದರೆ ಜೊತೆಗೆ ಹಿತೈಶಿಗಳೇ ತಿರುಗಿ ನಿಲ್ಲುತ್ತಾರೆ.

*ವೈಯಕ್ತಿಕ ಸ್ವಾರ‌್ತ, ಮಿತಿ ಮೀರಿದ ನಿರೀಕ‌್ಶೆಗಳು, ಅಂದುಕೊಂಡಂತೆ ನಡೆಯಲೆಂಬ ಅಹಮಿಕೆ, ನಮಗೆ ಗೊತ್ತಾಗದೇ ನಮ್ಮನ್ನಾಳುವ ಇಗೋ, ನಾನು ಹೇಳಿದ್ದೇ ನಡೆಯಬೇಕೆಂಬ ಮನದ ಮೊಂಡಾಟ, ಅನಗತ್ಯ ತಪ್ಪು ತಿಳುವಳಿಕೆ, ಕೇಳಿಸಿಕೊಳ್ಳಲಾಗದ ಅಸಹನೆ...* ಇನ್ನೂ ಏನೇನೋ *ನೋ ಗಳು*, ಸಂಬಂದಗಳ ಸಡಿಲಿಸುತ್ತವೆ.

ನಾವು ನಮ್ಮ ಅಹಮಿಕೆಯಲಿ ಸಡಿಲಾಗಿ ಕಳೆದು ಹೋಗಬಾರದೆಂಬ ಕಾಳಜಿಯಿಂದ ಇಡೀ ಬಾಂಡೇಜಿನ ಮಹತ್ವ ಮತ್ತದರಿಂದ ಸಿಕ್ಕ ಉನ್ಮಾದ, ಆನಂದಗಳ ತೂಗಿ ನೋಡಿದೆ.

ಹಟ ಹಾಗೂ ಮೇಲೆ ಹೇಳಿದ ನೆಗೆಟಿವ್ ಸಂಗತಿಗಳು ಕೊಡಬಹುದಾದ ಹಿಂಸೆಯ ನೆನೆದು ಮತ್ತೆ, ಮತ್ತೆ ಒಂಟಿಯಾಗಿ ಪಶ‌್ಚಾತಾಪದಿಂದ ನರಳಿ, ಬಂದನ ಉಳಿಯಲಿ, ಅದರ ಪ್ರತಿಫಲ ಇಬ್ಬರಿಗೂ ಕೊನೆ ತನಕ ಸಿಗಲೆಂದು ಸಂಕಲ್ಪಿಸಿ ಮಳೆಯಲಿ ಯಾರಿಗೂ ಕಾಣದ ಹಾಗೆ ಕಣ್ಣೀರ ಹರಿಸಿ ಹಗುರಾದೆ.

ನೂರು ಅಹಮಿಕೆಯ ದೂರ ನೂಕಿ, ಬಿಗಿದಪ್ಪಿ ಮುದ್ದಾಡಿ ನಾವು ಕರಗಿ ನೀರಾಗೋಣ.

ಈ ಇಳೆಗೆ ಸುರಿದ ಮಳೆಯ ಹಾಗೆ...

    *ಸಿದ್ದು ಯಾಪಲಪರವಿ*