*ಒಲವಿನೋಲೆ*
*ಯುವಮನಸುಗಳೇ ಇರಲಿ ಆಯ್ಕೆ ಸೂಕ್ತ*.
ಹಲೋ ಚಿನ್ನು,
ಪದವಿ ಮುಗಿದ ಸಂಭ್ರಮ. ಅದೂ ಆಡ್ ಅಡ್ತಾ. ಒಮ್ಮೊಮ್ಮೆ ನಮಗೆ ಅಷ್ಟೇನು ಇಷ್ಟವಾಗದ ಕೋರ‌್ಸುಗಳನ್ನು ಅನಿವಾರ‌್ಯವಾಗಿ ಮುಗಿಸಿಬಿಡುತ್ತೇವೆ ಆದರೆ ಮುಂದೇನು ಎಂಬುದೊಂದು ಪ್ರಶ್ನೆಯಾಗಿಬಿಡುತ್ತದೆ.
ನಾವು ಓದಿದ ವಿಷಯದಲ್ಲಿ ಉದ್ಯೋಗ ಹಿಡಿಯಬೇಕೋ ಅಥವಾ ಬೇರೆ ಆಸಕ್ತ ಕೆಲಸ ಹಿಡಿಯಬೇಕೋ ಎಂಬ ಗೊಂದಲ ಸಹಜ.
ಏನೇ ಮಾಡಿದರು professionalism ಬೇಕೇ ಬೇಕು.
ಹೊಟ್ಟೆಪಾಡಿಗಾಗಿ ಹೇರಳ ಹಣ ಬರುವ ಉದ್ಯೋಗದ ಅನಿವಾರ‌್ಯತೆ ಯುವಕರಿಗೆ ಇರುತ್ತದೆ.
Passion ಇರುವ ಕೆಲಸಗಳು ನಮಗೆ ಹೇರಳ ಅಲ್ಲದಿದ್ದರೂ at least ಅಗತ್ಯವಿರುವಶ್ಟಾದರೂ ಹಣ ತಂದುಕೊಡಬೇಕು.
ನಾನು passion ಇರುವ ಕಾರಣದಿಂದ teaching ಆಯ್ದುಕೊಂಡೆ, ಈ ವ್ಯವಸ್ಥೆಯ ಹೊಡೆತದಿಂದಾಗಿ ಹಣಕಾಸಿನ ಮುಗ್ಗಟ್ಟನ್ನು ಇಂದಿಗೂ ಎದುರಿಸುತ್ತಿದ್ದೇನೆ.
ವಾಸ್ತವದಲಿ ಕನಸುಗಳಿಗೆ ಮಿತಿ ಇದ್ದರೆ ಈ ಉದ್ಯೋಗದಲ್ಲಿಯೂ ಸಂತೃಪ್ತನಾಗಿರಬಹುದಿತ್ತು ಆದರೆ ದೊಡ್ಡ ಕನಸುಗಳು ಹಾಸಿಗೆ ಇದ್ದಷ್ಟು ಕಾಲು ಚಾಚಲು ಬಿಡುವುದಿಲ್ಲ.
ನೀನು ಕಲಿತ ಶಿಕ್ಷಣ ಖಂಡಿತ ನಿನಗೆ ಅಗತ್ಯವಿರುವಷ್ಟು ಹಣ ತಂದು ಕೊಡುವುದರಲ್ಲಿ ಅನುಮಾನ ಬೇಡ.
ಈಗ ಇಡೀ ಜಗತ್ತು ನಿಂತಿರುವುದೇ ಮಾಹಿತಿ ತಂತ್ರಜ್ಞಾನದ ಬಳಕೆಯ ಮೇಲೆ. ಇದೇ ಉದ್ಯೋಗದಲ್ಲಿ ಮುಂದುವರೆದು, ಪರ‌್ಯಾಯ passion ಇಟ್ಟುಕೊಂಡು ತೃಪ್ತಿ ಪಡು.
ನನಗೆ ಗೊತ್ತಿರುವ ಕಾದಂಬರಿಕಾರ ವಿಶ್ವಾಸ ಮುದಗಲ್ ವೃತ್ತಿಯಿಂದ ತಂತ್ರಜ್ಞ, ಪ್ರವೃತ್ತಿಯಿಂದ ಬರಹಗಾರ.
ಹೀಗೆ ಅನೇಕ ಟೆಕ್ಕಿಗಳು ಬರಹಗಾರರಾಗಿ, ಕಲಾವಿದರಾಗಿ ಹೆಸರು ಮಾಡಿದ್ದಾರೆ.
ವೃತ್ತಿ ಹಣ ತಂದುಕೊಟ್ಟರೆ ಪ್ರವೃತ್ತಿ ಹೆಸರು, ಸೆಲಿಬ್ರಿಟಿ ಸ್ಟೇಟಸ್ ಒದಗಿಸಿದೆ.
ನಾನೋ ಬರಹಗಾರನಾಗಿ ಸೆಲಿಬ್ರಿಟಿ, ಕನಸುಗಾರ, ಕನಸುಗಳ ಮಾತಿನ ಮೋಡಿಯ ಪ್ರೇರಣೆ ಮೂಲಕ ಅನೇಕರನ್ನು ಉತ್ತೇಜಿಸುತ್ತೇನೆ. ಬೆಳೆಸುತ್ತೇನೆ. ಆದರೆ ವೈಯಕ್ತಿಕವಾಗಿ ನರಳುತ್ತೇನೆ.
ನನ್ನ ನರಳುವಿಕೆ ಇಂದಿನ ಯುವಕರಿಗೆ ಬರಬಾರದು. ಹರೆಯದಲ್ಲಿ ಹೇರಳವಾಗಿ ಗಳಿಸುವ ಕೆಲಸ ಮಾಡುತ್ತ ಒಳಗಿನ ತೀವ್ರತೆಯನ್ನೂ ಕಾಪಾಡಿಕೊಂಡು ಹೆಸರು ಮಾಡಬೇಕು.
ಬರೀ ಹೆಸರು comfort ತಂದುಕೊಡುವುದಿಲ್ಲ ಕೂಸೆ.
*Passion gives us pleasure but money gives us freedom*.
ಮಾರ‌್ಗದರ‌್ಶನ ಮಾಡಲು ಅನೇಕರಿದ್ದಾರೆ, ಅದನ್ನು ಬಳಸಿಕೊಂಡು ಹೊಸ ದಾರಿ ಹಿಡಿ.
ಇನ್ನೂ ಅಗತ್ಯವೆನಿಸಿದರೆ ಹೈಯರ್ ವ್ಯಾಸಂಗ ಮುಂದುವರೆಸು, ಹೊಸ ಫೀಲ್ಡ್ ಸದ್ಯಕ್ಕೆ ಬೇಡ.
Its too risky at this moment.
ಒಂದೆರಡು ದಿನ relax ಆಗಿ ಆಲೋಚಿಸಿ ಮುಂದೆ ಅಡಿ ಇಡು.
Cool temperament ರೂಡಿಸಿಕೋ, ಗೊಂದಲ ಮಾಡಿಕೊಳ್ಳಬೇಡ.
ಬದುಕು ವಿಮಾನ ಇದ್ದ ಹಾಗೆ ಒಮ್ಮೆ take off ಆದರೆ ಸಾಕು ಮುಂದೆ ಸರಾಗ ಹಾರಾಟ.
ಏರುವವರೆಗೆ ಅರಚಾಟ ಇದ್ದೇ ಇರುತ್ತದೆ. ಏರಿದ ಮೇಲೆ ಎಲ್ಲವೂ ನಿವಾಂತ, ನಿತಾಂತ, ಶಾಂತ.
ಆಸಕ್ತ ಮನಸುಗಳೊಂದಿಗೆ ಚರ‌್ಚಿಸಿ ಮುಂದೆ ಅಡಿ ಇಡು. ಕೊಂಚ ದೂರ ನಡೆಸಲು ನಾ ಇದ್ದೇನೆ ಆದರೂ ಆಯ್ಕೆ ನಿನ್ನದು.
All the best
Always yours
*ಅಲೆಮಾರಿ*
( ಸಿದ್ದು ಯಾಪಲಪರವಿ )
No comments:
Post a Comment