Thursday, April 22, 2010

ನಿನ್ನೊಂದಿಗಿನ ಮಧು-ರ ಕ್ಷಣಗಳು

ಗೆಳತಿಯ ಒಲವಿನ ಓಲೆ
ಈಗ ಹೇಗಿದ್ದೀಯಾ? ಸಕಾರಾತ್ಮಕವಾಗಿ ಬದುಕುವ ನೀನು ಸದಾ ಆರಾಮಾಗಿಯೇ ಇರುತ್ತೀ. ಗಂಡನಿಗೆ divorce apply ಮಾಡಿ ಏನೋ ಕಾರಣಕ್ಕೆ ನಿನ್ನ ಭೇಟಿ ಆದಾಗ ನಿನ್ನ ಕಂಗಳ ಚೈತನ್ಯಕ್ಕೆ ಅವಾಕ್ಕಾದೆ. ಅದೆಂತಹ ಸೆಳೆತ ನಿನ್ನ ಮಾತು-ನಡೆಯಲಿ. ಸಂಗೀತಕ್ಕೆ ನನ್ನನ್ನು ಅರ್ಪಿಸಿಕೊಂಡು ರಾಗತಾಳಗಳ ಮೇಳದಲಿ ಕಾಲ ದೂಡುತ್ತಿರುವಾಗ ನೀನು ಅಷ್ಟೊಂದು ಹತ್ತಿರವಾಗಿತ್ತೀ ಅಂದುಕೊಂಡಿರಲಿಲ್ಲ. ಅವನಿಂದ ಬಿಡುಗಡೆಯಾಗಿ ಕಾಯುತ್ತಿದ್ದ ನಾನು, ನಿನ್ನ ಸಾಮಿಪ್ಯವನ್ನೇನು ಬಯಸಿರಲಿಲ್ಲ. ಎರಡನೇ counselling ನಲ್ಲಿ ನೀನು ನೇರವಾಗಿ ಹೇಳಿದ್ದು ಅಚ್ಚರಿ. Divorce application ವಾಪಾಸು ಪಡೆಯಲು ಸೂಚಿಸಿದ್ದು ಸಣ್ಣ ಸಂಗತಿಯಲ್ಲ. ಅವನೊಂದಿಗೆ ಬೇರ್ಪಡುವ ವಾದವನ್ನು ನಿಧಾನವಾಗಿ ಆಲಿಸಿ ನೀನು ನೀಡಿದ ತೀರ್ಮಾನ ಅನುಪಮ. No you have to go back & live with him. ಅಂದಾಗ shock ಆಯಿತು. ಅವನ ಎಲ್ಲ ಕಿರುಕುಳಗಳನ್ನು ವಿವರಿಸಿದಾಗಲೂ ಅವನೊಂದಿಗೆ ಬಾಳಬಹುದಾದ ನಿನ್ನ ಸಲಹೆಯನ್ನು ನಾನು ಅಂದು ಒಪ್ಪಲಿಲ್ಲ.
ನಿನ್ನ ಆತ್ಮವಿಶ್ವಾಸ,positive approach ನೆನಸಿಕೊಂಡರೆ ಈಗಲೂ ಅಚ್ಚರಿ.
ನಿನ್ನ ಮಾರ್ಗದರ್ಶನದಂತೆ case ವಾಪಾಸು ಪಡೆದೆ. ಆದರೆ ನಾನು ಅವನೊಂದಿಗೆ ಮರುಜೀವ ಪಡೆಯುವ ಭರವಸೆ ಇಲ್ಲದಿದ್ದರೂ ನಿನ್ನ ನಂಬಿಕೆ ಅಸಾಮಾನ್ಯ.
ಮತ್ತೊಮ್ಮೆ ಎಲ್ಲ settle ಆಗಲು ವರ್ಷಗಳೇ ಉರುಳಿದವು.
ಸಂಗೀತ ಸಂಜೆಯಲಿ ನನ್ನ ಕಂಠದಿಂದ ಹೊರಡುತ್ತಿದ್ದ ರಾಗಕೆ ತಾಳಹಾಕುತ್ತಿದ್ದ ನಿನ್ನ ಕಣ್ಣುಗಳಿಗೆ ಸೋತು ಹೋದೆ. ದೆಹಲಿ ಕಾರ್ಯಕ್ರಮಕ್ಕೆ ನಿನ್ನನ್ನು ಆಹ್ವಾನಿಸಿದಾಗ ನನ್ನಲ್ಲಿ ಒಂದು ಭಂಡ ಧೈರ್ಯದ ನಿರ್ಧಾರವಿತ್ತು. ನೀನು ಅಷ್ಟೇ ಮಗುವಿನ ಹಾಗೆ ಹಿಂಬಾಲಿಸಿದೆ.
ದೆಹಲಿ ಕಾರ್ಯಕ್ರಮ ಮುಗಿಸಿ ಕುಲು-ಮನಾಲಿಗೆ ತೆರಳುವ ನಮ್ಮ ನಿರ್ಧಾರವನ್ನು ನೀನು ಪ್ರಶ್ನಿಸಲೇ ಇಲ್ಲವಲ್ಲ. ಅದೆಂತಹ ಸಹನೆ ಮಾರಾಯ ನಿನಗೆ.
ಮನಾಲಿ ಪರ್ವತ ಶ್ರೇಣಿಗಳ ಮಧ್ಯ ನಡುಗುವ ಛಳಿಯಲಿ ನಿನ್ನ ಬಿಗಿದಪ್ಪಿದಾಗಲೂ ಅದೇ ಸಾಹಸಿ, ಅದೇ ಮೌನ ನಾನು ಅವನಿಗೆ divorce ಕೊಡುತ್ತೇನೆ.
ನಿನ್ನೊಂದಿಗೆ ಹೊಸ ಜೀವನ ಪ್ರಾರಂಭಿಸುತ್ತೇನೆ ಎಂದು ಅತ್ತು ಕರೆದು ರಂಪ ಮಾಡಿದರೂ ನೀನು ಜಪ್ಪಯ್ಯ ಅನ್ನಲಿಲ್ಲ. ಅವನೊಂದಿಗೆ case settle ಆಗೋವರೆಗೆ ನನ್ನೊಂದಿಗಿರು, ನನ್ನ ಪ್ರೀತಿಯ ಸರೋವರದಲ್ಲಿ ಈಜಾಡು ಎಂದದ್ದು ಸಣ್ಣ ಸಂಗತಿಯೇ?
ನಿನ್ನದು ಒಂದೇ ಹಟ ನಾನು ಅವನೊಂದಿಗೆ ಮತ್ತೆ ಒಂದಾಗಬೇಕು.
ಮನಾಲಿಯ ತಂಪು ವಾತಾವರಣ, ಸುಂದರ ಪ್ರಕೃತಿ, ನಾವಿಬ್ಬರೂ ಮಂಜಿನಲಿ ಕರಗಿ ಲೀನವಾದದ್ದು, ಅಬ್ಬಾ! ಈಗಲೂ ಅದೇ ರೋಮಾಂಚನ!!
ಹಿಮದ ಬಂಡೆಗಳು ಮೌನದಿಂದ ನಮ್ಮ ಮಿಲನಕ್ಕೆ ಸಾಕ್ಷಿ ನುಡಿದವು. ಈ ಹಿತಾನುಭವದ ಸ್ಪರ್ಶದಿಂದ ಉಲ್ಲಸಿತನಾದ ನೀನು ನಿರ್ಧಾರ ಬದಲಾಯಿಸುತ್ತೀ ಅಂದು ಕೊಂಡು ಮನಾಲಿ ಬಿಡುವಾಗ ಮತ್ತೊಮ್ಮೆ ಕೇಳಿದರೂ ಅದೇ ಉತ್ತರ, ಛೇ! ಅಂದುಕೊಂಡು ಮನಸ್ಸಿಲ್ಲದೆ ವಾಪಾಸಾದೆ.
ಅಂದು ಸಂಜೆ ಮನಾಲಿ ರೋಟಾಂಗ್ ಪಾಸ್ ನ ಹಿಮದಲಿ ಬಾನಲ್ಲೆ ಮಧುಚಂದ್ರಕೆ ಕಾದಂಬರಿಯ ನಾಯಕ, ಹೆಂಡತಿಯನ್ನು ದೂಡಿದ ಜಾಗ ತೋರಿಸಿದಾಗ ಕೇವಲ ನಕ್ಕು, ಯಾಕೆ ನನ್ನುನ್ನು ದೂಡುತ್ತಿಯಾ ಎಂದಾಗ ಏನೋ ಅರ್ಥವಿತ್ತು. ಆಗಲೂ ಕೇಳಿದೆ. ಹಿಮದ ಛಳಿಯಲಿ ಬಿಸಿ ಅಪ್ಪುಗೆಯ ಸೆಳೆತದಲಿ ಒಪ್ಪುತ್ತಿಯಾ ಎಂಬ ಭರವಸೆಯಿಂದ. you said no! ಈ ಜೀವನಕ್ಕೆ ಇಷ್ಟು ಸಾಕಲ್ಲ, ಅತೀ ಆಸೆ ಒಳ್ಳೆಯದಲ್ಲ, ನೀನು ಎಲ್ಲಿರಬೇಕು, ಅಲ್ಲಿರು. ಈ ಭೂಮಿಯ ಮೇಲಿನ ಪ್ರತಿಯೊಂದು ವಸ್ತುವಿನೊಂದಿಗೆ ಕಾಲ ಕಳೆದು ಅನುಭವಿಸುವುದು ಪೂರ್ವ ನಿಯೋಜಿತವಾಗಿರುತ್ತದೆ.
ನಿನ್ನೊಂದಿಗೆ ವರ್ಷಾನುಗಟ್ಟಲೆ ಇದ್ದೇನಲ್ಲ ಸಾಕು. ಜೀವನ ಪರ್ಯಂತ ಇರಬೇಕು ಎಂಬ ಭ್ರಮೆ ಸಲ್ಲದು ಇದ್ದಷ್ಟು ದಿನಗಳನ್ನು ಅತ್ಯಂತ ಖುಷಿಯಿಂದ, ರಸಮಯವಾಗಿ ಕಳೆದಿದ್ದೇವೆ. ಮುಂದೆ ಹೀಗೆಯೇ ಕಳೆಯಲು ಸಾಧ್ಯ ಎಂಬ ನಂಬಿಕೆ ನನಗಿಲ್ಲ. ಅದು ಭ್ರಮೆ ಕೂಡಾ ಪರಸ್ಪರ ಒಲವಿನ ಧಾರೆ ಉಕ್ಕುವಾಗ ಬೇರ್ಪಡುವ ಮನಸ್ಸಾಗುವುದಿಲ್ಲ. ಆದರೆ ಅನಿವಾರ್ಯವಾಗಿ ಒಮ್ಮೆ ಬೇರ್ಪಟ್ಟರೆ ಕಾಲ ಎಲ್ಲವನ್ನು ಮರೆಸುತ್ತದೆ ಅಂದದ್ದು ಈಗ ಪೂರ್ಣ ಸತ್ಯವೆನಿಸುತ್ತದೆ. ನೀನು ನನ್ನಿಂದ ದೂರಾಗಿ ವರ್ಷಗಳೇ ಉರುಳಿದವು. ನಾನು ಅವನೊಂದಿಗೆ ಬಾಳುತ್ತಿದ್ದೇನೆ. ಆದರೂ..........

1 comment:

  1. thanks for guiding her. adroo 'ಅವನೊಂದಿಗೆ case settle ಆಗೋವರೆಗೆ ನನ್ನೊಂದಿಗಿರು, ನನ್ನ ಪ್ರೀತಿಯ ಸರೋವರದಲ್ಲಿ ಈಜಾಡು' endiddu samanjasave?

    ReplyDelete