ಕ್ರಿಕೆಟ್ ಹಣಾಹಣಿಯಲ್ಲಿ ಮೂರ್ಖರು ನಾವು
ಶಶಿ ತರೂರ ಎಂಬ ಕೇಂದ್ರ ಸಚಿವ ನಿರ್ಗಮಿಸಿದ್ದಾರೆ. ಈಗ ಕ್ರಿಕೆಟ್ ಪೀಡೆ IPL ಅಧ್ಯಕ್ಷ ಮೋದಿಗೆ ತಗುಲಿದೆ. ಭಾರತದಂತಹ ಬಡರಾಷ್ಟ್ರದಲ್ಲಿ ಕ್ರಿಕೆಟ್ ಎಂಬ ಕ್ರೀಡಾ ವೈರಸ್ ತನ್ನ ರೋಗವನ್ನು ಎಲ್ಲೆಡೆ ಹಬ್ಬಿಸಿದೆ.
ಜಗತ್ತಿನ ಪ್ರಗತಿಪರ ರಾಷ್ಟ್ರಗಳಾದ ಜಪಾನ್, ಅಮೇರಿಕಾ ಕ್ರಿಕೆಟ್ ವೈರಸ್ ನ್ನು ಒಳ ಸೇರಿಸಿಕೊಂಡಿಲ್ಲ. ಮೋಜು, ಮೇಜವಾನಿಗೆ ಹೆಸರಾದ ಇಂಗ್ಲಿಷರು ತಮ್ಮ ಭಾಷೆಯನ್ನು ಇಲ್ಲಿ ಬಿಟ್ಟು ಹೋಗುವುದರೊಂದಿಗೆ ಬ್ಯಾಟ್, ಬಾಲ್ ನ್ನು ತೂರಿ ಹೋದರು.
Test match, one day match ನಿಂದ ಈಗ 20-20 ಗೆ ರೂಪಾಂತರಗೊಂಡಿರುವ ರೋಗ ಬೇರೆ, ಬೇರೆ ರೂಪದಲ್ಲಿ ಹಬ್ಬುತ್ತಲೇ ಇದೆ. ಲಕ್ಷಾಂತರ ಯುವಕರು ತಮ್ಮ ಅಮೂಲ್ಯ energy ಯನ್ನು ಈ ಆಟ ಆಡುವವರಲ್ಲಿ, ನೋಡುವುದರಲ್ಲಿ ಹಾಳುಮಾಡುತ್ತಾರೆ.
ಶರದ್ ಪವಾರರಂತಹ ಹಿರಿಯ ರಾಜಕೀಯ ನಾಯಕರು ತಮ್ಮ ಮಂತ್ರಿ ಸ್ಥಾನಕ್ಕಿಂತ ಬಿಸಿಸಿಐ ದೊಡ್ಡದೆಂದು ಭಾವಿಸಿರಬೇಕಾದರೆ ಇದರ ಆಳ ಎಷ್ಟಿರಬೇಕು.
ರಾಜಕಾರಣದಲ್ಲಿ ಗಳಿಸಿದ ಕಪ್ಪು ಹಣವನ್ನು, ಬಿಳಿಯಾಗಿಸಲು ಕ್ರಿಕೆಟ್ ಎಂಬ ಪೀಡೆ ದುರ್ಬಳಕೆಯಾಗುತ್ತಲಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟಿನ ನಿರ್ವಹಣೆ ಮಾಡಲು, ರಾತ್ರೋರಾತ್ರಿ ಹೆಸರು, ಖ್ಯಾತಿ ಗಳಿಸಲು ಎಂತೆಂತಹ ರಂಗಿನಾಟ.
ಮಂತ್ರಿಯಾಗುವ ಅವಕಾಶ ಕಳೆದುಕೊಂಡಿರುವ ತರೂರ, ಈಗ ಮೊದಿಯ ಮೇಲೆ ತಿರುಗಿಬಿದ್ದಿದ್ದಾರೆ. ಕೊಟ್ಯಾಂತರ ರೂಪಾಯಿ ಅವ್ಯವಹಾರವನ್ನು ಮೀರಿದ ಸಂಗತಿಯೊಂದಿದೆ ಎಂದು ಮಾಧ್ಯಮಗಳು ಬೊಬ್ಬೆಯಿಡುತ್ತವೆ. ಈ ಮಧ್ಯ ಸುನಂದಾ ಪುಷ್ಕರ ಎಂಬ ಮಹಿಳೆ ಈ ಗದ್ದಲದಲ್ಲಿ ಮಿಂಚುತ್ತಿದ್ದಾಳೆ. Internation standard ನಲ್ಲಿರುವ affair ಗಳು ಕ್ರಿಕೆಟ್ ವ್ಯಾಪಾರಕ್ಕೆ ತಗುಲಿ, ಮಂತ್ರಿಸ್ಥಾನವನ್ನು ಕಿತ್ತುಕೊಳ್ಳುತ್ತವೆ ಎಂದರೆ ಏನರ್ಥ. ಮದುವೆ, divorce ಗಳ ಗೊಂದಲದಲ್ಲಿರುವ ಈ so called ನಾಯಕರುಗಳು ತಮ್ಮ ಎಲ್ಲ ರಾಸಲೀಲೆಗಳಿಗೆ, ಕೊಟ್ಯಾಂತರ ಅವ್ಯವಹಾರಕ್ಕೆ ಕ್ರೀಡೆಯಲ್ಲಿ ಬಳಸಿಕೊಳ್ಳುತ್ತಿರುವುದು ನಾಚಿಕೆ ಪಡುವ ಸಂಗತಿ. ಅದನ್ನು ಅಷ್ಟೇ sportive ಆಗಿ enjoy ಮಾಡಿ match fixing ಆದ ಆಟ ನೋಡುವ ನಮ್ಮಂತಹ ಮೂರ್ಖರಿರುವಾಗ ಯಾರ್ಯಾರೋ ತಮಗೆ ಬೇಕಾದ ಹಾಗೆ ತೆವಲು ತೀರಿಸಿಕೊಳ್ಳುತ್ತಾರೆ ಅಷ್ಟೇ!.
Thursday, April 22, 2010
Subscribe to:
Post Comments (Atom)
No comments:
Post a Comment