* ಗಂಡು ಹೆಣ್ಣಿನ ಸಂಬಂಧಗಳನ್ನು romantic ಅಥವಾ flirt ಎಂದು ಭಿನ್ನವಾಗಿ ಭಾವಿಸುವುದು ಯಾಕೆ?
............. ಗಂಡು ಹೆಣ್ಣಿನ ಸಂಬಂಧ ಜಾಗತಿಕವಾಗಿ ಸ್ವೀಕೃತವಾದದು. ಅದು ಅತೀಯಾದರೆ ಅನೈತಿಕತೆ ಪಟ್ಟ ದೊರಕುತ್ತದೆ. ಹೀಗೆ ಗಂಡು ಹೆಣ್ಣಿನ ಸಂಬಂಧವನ್ನು ವಿರೋಧಿಸುತ್ತಲೇ, ವೈಯಕ್ತಿಕವಾಗಿ ಅಪೇಕ್ಷಿಸುವ ಮನಸ್ಸಿನ ವ್ಯಾಪಾರ ವಿಚಿತ್ರವಾದದು.
ಗಂಡು ಹೆಣ್ಣಿನ ಖಾಸಗಿ ಸಂಬಂಧಗಳು ಬಯಲಾದರೆ ವ್ಯಭಚಾರ, ಗುಟ್ಟಾಗಿದ್ದರೆ ಕ್ಷೇಮ ಎಂದು ಆಲೋಚಿಸುವ ನಮ್ಮ ಕ್ರಮ ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ನನ್ನದಲ್ಲ.
ಲೋಕದ ವ್ಯಾಪಾರವೇ ಹೀಗೆ, ನಮಗೊಂದು, ಬೇರೆಯವರಿಗೊಂದು ಎಂಬ ನ್ಯಾಯ. ಬೇರೆಯವರ ಇಂತಹ ತಪ್ಪುಗಳನ್ನು(?) ಚರ್ಚಿಸುವ ನಾವು ಆತ್ಮವಿಮರ್ಶೆ ಮಾಡಿಕೊಳ್ಳಲು ಹಿಂಜರಿಯುತ್ತೇವೆ. ಪ್ರೇಮ ಪ್ರಕರಣಗಳು, Intercast ಮದುವೆಗಳು, ಹೀಗೆ negative ಅನಿಸಿದ ಘಟನೆಗಳನ್ನು ಸಾಚಾ ಅಲ್ಲ ಎಂದು ನಿರ್ಧರಿಸುತ್ತೇವೆ. ಗಂಡು-ಹೆಣ್ಣಿನ ಸಂಬಂಧ ಖಂಡಿತಾ ಸಾರ್ವತ್ರಿಕ ವಿಷಯವಲ್ಲ. ಅದು ಪರಸ್ಪರ ಅಗತ್ಯ ಅನಿವಾರ್ಯತೆ ಅದನ್ನು ಚರ್ಚಿಸುವ ಹಕ್ಕು ಬೇರೆಯವರಿಗಿಲ್ಲ. ಈ ವಿಷಯವಾಗಿ ನಾವಿನ್ನು ನಿರ್ಲಿಪ್ತರಾಗದೇ, ನಮ್ಮ ಸಮಸ್ಯ ಎಂಬ ರೀತಿಯಲ್ಲಿ ಚರ್ಚಿಸುತ್ತೇವೆ.
ಈ ರೀತಿಯ ಚರ್ಚೆ ಆಗುವಾಗಲೆಲ್ಲ, ಜೆ.ಎಚ್. ಪಟೇಲರು ಹೇಳಿದ ಕಥೆ ನೆನಪಾಗುತ್ತದೆ. "ಇಬ್ಬರು ಸನ್ಯಾಸಿಗಳು, ನದಿ ತೀರದಲ್ಲಿ ನಿಂತಿರುತ್ತಾರೆ. ಒಬ್ಬ ಸುಂದರವಾದ ಹುಡುಗಿ ನದಿ ದಾಟಿಸಲು ಸನ್ಯಾಸಿಗಳನ್ನು ವಿನಂತಿಸಿಕೊಳ್ಳುತ್ತಾಳೆ. ಆಗ ಒಬ್ಬ ಸನ್ಯಾಸಿ ಸುಂದರಿಯನ್ನು ಮುಟ್ಟುವುದರಿಂದ ತನ್ನ ಸನ್ಯಾಸಧರ್ಮ ಒಡೆದು ಅಪಚಾರವಾಗುತ್ತದೆ ಎಂದು ಹೆದರಿ ನಿರಾಕರಿಸುತ್ತಾನೆ. ಆದರೆ ಇನ್ನೊಬ್ಬ ಹುಡುಗಿಗೆ ನೆರವಾಗಬೇಕು ಎಂಬ ಕಾರಣಕ್ಕೆ ಸುಂದರಿಯನ್ನು ಹೆಗಲ ಮೇಲೆ ಕೂಡಿಸಿಕೊಂಡು ನದಿಯನ್ನು ದಾಟಿಸಲು ನೀರಿಗಿಳಿಯುತ್ತಾನೆ. ದಂಡೆಯ ಮೇಲೆ ನಿಂತ ಸನ್ಯಾಸಿ, ನೀರಿಗಿಳಿದ ಸನ್ಯಾಸಿಯ ಪಾವಿತ್ರ್ಯ ಹಾಳಾದ ಬಗ್ಗೆ ಚಿಂತಿಸುತ್ತಾನೆ. ನೀರಿಗಿಳಿದ ಸನ್ಯಾಸಿಯ ತಲೆಗೆ ತಲುಪಬಹುದಾದ ಸುಂದರಿಯ ತೊಡೆಗಳನ್ನು ನೆನಸಿಕೊಂಡು ವಿಚಲಿತನಾಗುತ್ತಾನೆ, ಕೆಲ ಕ್ಷಣ ಉದ್ರೇಕಗೊಳ್ಳುತ್ತಾನೆ. ಅಯ್ಯೋ ದಂಡೆ ಮೇಲೆ ನಿಂತುಕೊಂಡು ಊಹಿಸುವ ತನ್ನ ಗತೀಯೇ ಹೀಗಿರುವಾಗ, ನಿಜವಾಗಲು ಸುಂದರಿಯನ್ನು ಹೊತ್ತುಕೊಂಡು ಸಾಗಿರುವ ಸನ್ಯಾಸಿಯ ಪಾಡೇನು ಎಂದು ಆಲೋಚಿಸುತ್ತಾನೆ. ಹೀಗೆ ಆಲೋಚಿಸುತ್ತಲೇ ಸುಂದರಿಯ ದೇಹಸಿರಿಯನ್ನು ಕಲ್ಪಿಸುತ್ತಾ ಲೈಂಗಿಕಾನುಭವದಿಂದ ಕಂಪನಗೊಳ್ಳುತ್ತಾನೆ.
ಆದರೆ ಅತ್ತ ಆ ಕಡೆ ಸುಂದರಿಯೊಂದಿಗೆ ನದಿಯನ್ನು ದಾಟುತ್ತಿರುವ ಸನ್ಯಾಸಿ ಮನಸ್ಸಿನಲ್ಲಿ ಸುಂದರಿಯ ಬಗ್ಗೆ ಯಾವುದೇ ಕಾಮುಕ ಭಾವ ಇಟ್ಟುಕೊಳ್ಳದೇ ನದಿ ದಾಟುವ ಎಚ್ಚರಿಕೆಯಲ್ಲಿರುತ್ತಾನೆ. ಮೈ ಬೆಚ್ಚಗಾಗಿಸುವ ಯಾವುದೇ ಕಾಮ ಭಾವನೆಗಳು ಸುಂದರಿಯ ಸ್ಪರ್ಶದಿಂದ ಉತ್ಪನ್ನವಾಗುವುದಿಲ್ಲ. ಅತ್ಯಂತ safe ಆಗಿ ಸುಂದರಿಯನ್ನು ನದಿ ದಾಟಿಸಿ ಕೃತಜ್ಞನಾಗುತ್ತಾನೆ. ಅವನದು ನಿಜವಾದ ಸನ್ಯಾಸ. ಆದರೆ ನದಿ ತೀರದಲ್ಲಿ ನಿಂತುಕೊಂಡು ಸುಂದರಿಯನ್ನು ಮುಟ್ಟಿ ಪಾಪಿಯಾಗಲಿಲ್ಲ ಎಂದು ಕೊಚ್ಚಿಕೊಳ್ಳುವ ಸನ್ಯಾಸಿ ನಿಜವಾದ ಕಾಮುಕ. ಈ ಘಟನೆಯಿಂದ ಮನಸ್ಸಿನ ವ್ಯಾಪಾರದ ಸೂಕ್ಷ್ಮತೆ ಅರ್ಥವಾಗುತ್ತದೆ.
ಈ ಕಥೆಯನ್ನು ಮಾನ್ಯ ಜೆ.ಎಚ್. ಪಟೇಲರು ಬೇರೆ reference ನಲ್ಲಿ ಹೇಳಿದ್ದರು. ಅದು ಇಲ್ಲಿಯೂ ಹೊಂದುತ್ತದೆ. ಆದ್ದರಿಂದ ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಂಡೆ.ಕಾಮವೆಂಬುದು ಮನಸಿನ ವ್ಯಾಪಾರ, ಕೇವಲ ಕೊಚ್ಚಿಕೊಳ್ಳಲು ಮಾತ್ರ ಪವಿತ್ರತೆಯ ಸೋಗಲಾಡಿತನ.
ಬೇರೆಯವರ ಸಂಬಂಧಗಳ ವ್ಯಾಪ್ತಿ, ಮಿತಿ ಗೊತ್ತಿರದೇ ಮಾತನಾಡುವವರಿಗೆ ಮೇಲಿನ ಕಥೆ ಎಚ್ಚರಿಕೆ ಕೊಡುತ್ತದೆ. ಹೆಣ್ಣಿನ ಅಥವಾ ಗಂಡಿಗೆ ಪ್ರಿಯವೆನಿಸಿ, ಸಹ್ಯವೆನಿಸಿ ಸಂಬಂಧ ಉಂಟಾದರೆ romantic, ಇಚ್ಛೆಗೆ ವಿರೋಧವಾಗಿ ಕೆಣಕಿ ಸಂಬಂಧ ಹೊಂದಲು ಆಸೆ ಪಟ್ಟರೆ flirt ಆಗುತ್ತದೆ.
ಇದು ಪರಸ್ಪರ ಕಣ್ಣೊಟದಲ್ಲಿ, ಕಣ್ಣಾಟದಲ್ಲಿ, ಕಳ್ಳಾಟದಲ್ಲಿ ಸಾಬೀತಾಗುತ್ತದೆ. ಪರಸ್ಪರ ನೋಡುವ ನೋಟದಲ್ಲಿಯೇ ಸಂಬಂದವನ್ನು ಗ್ರಹಿಸಬಹುದು. ಮನಸಿಗೆ ಅಂತಹ ಶಕ್ತಿ ಇದೆ. ಅದರಲ್ಲೂ ಸೂಕ್ಷ್ಮ ಗ್ರಾಹಿ ಹೆಣ್ಣಿಗೆ, ಗಂಡು ಯಾವ ಅರ್ಥದಲ್ಲಿ ತನ್ನನ್ನು ನೋಡುತ್ತಾನೆ ಎಂದು ಗ್ರಹಿಸುವ ಶಕ್ತಿ ಇರುತ್ತದೆ. ಇದನ್ನು ನಾನು ಅನೇಕ counselling ಸಂದರ್ಭದಲ್ಲಿ ಹುಡುಗಿಯರ ಅಭಿಪ್ರಾಯದ ಮೂಲಕ ಅರಿತಿರುವುದನ್ನು ಮತ್ತೆ ವಿವರಿಸುತ್ತೇನೆ. so ಈಗ ನೀವು ಬೇರೆಯವರ ಸಂಬಂಧಗಳನ್ನು ಆಡಿಕೊಳ್ಳುವಾಗ ಮೇಲಿನ ಸನ್ಯಾಸಿಗಳನ್ನು ನೆನಪಿಸಿಕೊಂಡು ನಿರ್ಲಿಪ್ತತೆಯನ್ನು ರೂಢಿಸಿಕೊಲ್ಳಿರಿ.
Subscribe to:
Post Comments (Atom)
No comments:
Post a Comment