Friday, May 28, 2010

ಕ್ರೇಜಿಸ್ಟಾರ್ ನೊಂದಿಗೆ ಕೆಲಕಾಲ



ಕನ್ನಡದ ಅಪರೂಪದ ತಂತ್ರಜ್ಞ, ಖ್ಯಾತ ನಟ ರವಿಚಂದ್ರನ್ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ನಟ. ಸುಪರ್ ಸ್ಟಾರ್ ಪಟ್ಟದ ಪೈಪೋಟಿಗೆ ನಿಲ್ಲದೆ ಭಿನ್ನ ಸಿನೆಮಾಗಳ ನಿರ್ಮಾಣ ಹಾಗೂ ನಟನೆಯಿಂದಾಗಿ ಕ್ರೇಜಿಸ್ಟಾರ್ ಪಟ್ಟಗಳಿಸಿದ ಖ್ಯಾತಿ.
ರವಿಚಂದ್ರನ್ ಪ್ರೇಮಲೋಕದ ಮೂಲಕ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ನಟ-ನಿರ್ದೇಶಕ.
ಹೊಸತನ, ಸುಂದರ ಸೆಟ್ಟಿಂಗ್, ಸುಂದರ ನಟಿಯರೊಂದಿಗೆ ರೋಮಾಂಚನ ಉಂಟುಮಾಡಿದ ಹೆಗ್ಗಳಿಕೆ.
ನಾವು ವಿದ್ಯಾರ್ಥಿಗಳಾಗಿದ್ದಾಗ ರವಿಚಂದ್ರನ್ ಸಿನೆಮಾಗಳು ಕಚಗುಳಿ ಉಂಟು ಮಾಡಿ ಮೈ-ಮನಗಳು ಬೆಚ್ಚಗಾಗಿಸುತ್ತಿದ್ದವು.
ಸುಂದರ ನಟಿಯರನ್ನು ಸದುಪಯೋಗ ಪಡಿಸಿಕೊಂಡ ಖ್ಯಾತಿಯೂ ರವಿಚಂದ್ರನ್ ಗೆ ಸಲ್ಲುತ್ತದೆ. ನಟಿಯರನ್ನು ಸಮರ್ಥವಾಗಿ, ರೋಮ್ಯಾಂಟಿಕ್ ಆಗಿ expose ಮಾಡಿ ಬಿಗ್ ಸ್ಕ್ರಿನ್ ಮೇಲೆ ಹೂಮಂಚ ಹಾಸಿ ಮೈ ಬೆಚ್ಚಗಾಗಿಸಿದ ಅಚ್ಚು ಮೆಚ್ಚಿನ ನಟ ಕೂಡಾ!
ರವಿಚಂದ್ರನ್ ಹಲವಾರು ಸಿನೆಮಾಗಳ ಮೂಲಕ ಸಿನೆಮಾಕ್ಕೆ ಹೊಸ ಭಾಷೆ ಬರೆದ ತಂತ್ರಜ್ಞ. ಅದ್ಧೂರಿ ವೆಚ್ಚದ ಸಿನೆಮಾ ನಿರ್ಮಿಸಿ ಆರ್ಥಿಕ ರಿಸ್ಕ್ ತಗೆದುಕೊಂಡರೂ ಸಿನೆಮಾದ ಮೂಲಕವೇ ಬದುಕು ರೂಪಿಸಿಕೊಂಡ ಅಪ್ಪಟ ಕಲಾವಿದ.
ತೇಲುಗಣ್ಣಿನ ಕನಸುಗಾರ ಯುವಕರ ಹೃದಯಕ್ಕೆ ಕೊಳ್ಳಿ ಇಟ್ಟು ಪುಳಕಿತಗೊಳಿಸಿದ ರೋಮ್ಯಾಂಟಿಕ್ ಹೀರೋ.
ರಿಮೇಕ್ ನಲ್ಲಿಯೂ ಸ್ವಂತಿಕೆ, ಕ್ರಿಯಾಶೀಲತೆಯನ್ನು ಸೃಷ್ಠಿಸಿ ಹತ್ತಾರು ಬಾರಿ ಗೆಲ್ಲುತ್ತಾ, ಸೋಲುತ್ತಾ ಸಾಗಿದರೂ ಸಿನೆಮಾದೊಂದಿಗೆ ಬದುಕಿ - ಬಾಳುವ ರವಿಚಂದ್ರನ್ ರನ್ನು ಭೇಟಿ ಆಗುವ ಇರಾದೆ ಇತ್ತು.
ಮನುಷ್ಯನ ಗುಣ-ಧರ್ಮಗಳನ್ನು ಅರಿಯುತ್ತಾ, ವ್ಯಕ್ತಿತ್ವ ವಿಕಸನಕ್ಕಾಗಿ ವ್ಯಕ್ತಿತ್ವಗಳನ್ನು ಭೇಟಿ ಆಗುವ ನನ್ನ ಹುಚ್ಚು ಮನಸಿಗೆ ರವಿಚಂದ್ರನ್ ರೊಂದಿಗೆ ಮಾತನಾಡುವ ತವಕವಿತ್ತು. ನನ್ನ ಬಹುದಿನದ ಕನಸನ್ನು ಈಡೇರಿಸಿದವರು ಕಲಾವಿದ ಎಂ. ಎನ್. ಸುರೇಶ್.
ಮಧ್ಯಾನ್ಹ ಒಂದು ಗಂಟೆಗೆ ರವಿಚಂದ್ರನ್ ಮನೆ ಪ್ರವೇಶಿಸಿದೆ.
ಮನುಷ್ಯನ ಗುಣ ಸ್ವಭಾವ, ಜೀವನೋತ್ಸಾಹ, ಹೆಣ್ಣಿನ ಬಗೆಗಿರುವ ಆಕರ್ಷಣೆ, ಸೆಳೆತ ಹೀಗೆ ಚರ್ಚೆ ಸಾಗಿಯೇ ಇತ್ತು ಕೆಲ ನಿಮಿಷಗಳ ಭೇಟಿ ತಾಸುಗಳಿಗೆ ಮುಂದುವರೆಯಿತು.
ರವಿಚಂದ್ರನ್ ಗೂ ನನ್ನೊಂದಿಗೆ ಚರ್ಚಿಸಬೇಕೆನಿಸಿತಂತೆ, ತುಂಬಾ ಆಪ್ತವಾಗಿ ಮಾತನಾಡಿದರು. Off the record ಎನ್ನುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದರು. ಎಲ್ಲವನ್ನು expose ಮಾಡುವ ಅಗತ್ಯವಾದರೂ ಏನಿದೆ?
ಬದುಕಿನ ಉತ್ಕೃಷ್ಟ ಆಕರ್ಷಣೆ ಎನಿಸಿರುವ ಹೆಣ್ಣು ತಮ್ಮನ್ನು ಕಾಡಿದ ಬಗೆಯನ್ನು ಹಂಚಿಕೊಂಡು, ಸಿನೆಮಾಗಳಲಿ ಬಳಸಿಕೊಂಡ ಕಾರಣಗಳನ್ನು ರಸವತ್ತಾಗಿ ವಿವರಿಸಿದರು.
ಹೆಣ್ಣಿನ ಬಗೆಗಿರುವ ನನ್ನ ಅಭಿಪ್ರಾಯಕ್ಕೆ ಸಮ್ಮತಿಸಿದ ಹೀರೋ ರಸಿಕತೆ ಹಾಗೂ ಫ್ಲರ್ಟಗಿರುವ ಅಂತರವನ್ನು convince ಮಾಡಿದರು.
ಸದಾ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕನಸು ಕಾಣುತ್ತಾ, ಕಂಡ ಕನಸನ್ನು ಜನರಿಗೆ ತೋರಿಸುವ ಸಿನೆಮಾ ಅವರ ಪಾಲಿನ ಅದ್ಭುತ ಮಾಧ್ಯಮ. ಮನುಷ್ಯನನ್ನು ಮೂರು ತಾಸು ಒಂದು ಕಡೆ ಕೂಡಿಸಿ ಹೃದಯವನ್ನು ತಟ್ಟುವ, ಕಟ್ಟುವ ಪರಿಣಾಮಕಾರಿ ಮಹಾದೃಶ್ಯಕಾವ್ಯ.
ಒಂದು ಶ್ರೇಷ್ಠ ಕೃತಿ ನೀಡುವ ಪರಿಣಾಮವನ್ನು ಸಿನೆಮಾ ಕೊಡುತ್ತದೆ. ಓದು, ಬರಹದಂತೆ ಸಿನೆಮಾ ಕೂಡಾ ನನಗೆ ಪ್ರಿಯವೆನಿಸುತ್ತದೆ.
ಉತ್ತಮ ಚಿತ್ರಗಳು ಮನೋರಂಜನೆ ನೀಡುವುದರೊಂದಿಗೆ, ಮನೋಪರಿವರ್ತನೆಗೆ ಕೂಡಾ ಕಾರಣವಾದದ್ದನ್ನು ನೋಡಿದ್ದೇವೆ.
ಉತ್ತಮ ಸಿನೆಮಾಗಳನ್ನು ನಿರ್ಮಿಸಿದರೆ ಜನ ನೋಡುತ್ತಾರೆ ಎಂಬುದನ್ನು Industry ನಿರೂಪಿಸಿದೆ. ಎಲ್ಲ ವರ್ಗದ ಜನ ಸಿನೆಮಾ ನೋಡಬಯಸುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ, ಸಿನೆಮಾ ತಯಾರಾಗುತ್ತವೆ, ಕೆಲ ತಂತ್ರಜ್ಞರ ಸಿನೆಮಾಗಳು ಹೀಗಿರಬೇಕು ಎಂದು ಕೂಡಾ ಜನ ಬಯಸುತ್ತಾರೆ. ಈ ಸಾಲಿನಲ್ಲಿ ರವಿಚಂದ್ರನ್ ಪ್ರಮುಖರು. ರವಿಚಂದ್ರನ್ ಸಿನೆಮಾ ಹೀಗಿರಬೇಕು ಎಂದು ಬಯಸುತ್ತಲೇ ಜನ ಥೇಟರ್ ಗೆ ಹೋಗುತ್ತಾರೆ. ಒಮ್ಮೆ ನಿರಾಶೆ, ಒಮ್ಮೆ ಭರವಸೆ ಹುಟ್ಟಿಸುವ ಸಿನೆಮಾ ನೀಡುವ ರವಿಚಂದ್ರನ್ ಅಭಿನಂದನಾರ್ಹರು.
ಅವರ ಹುಟ್ಟು ಹಬ್ಬದಂದು ರವಿಚಂದ್ರನ್ ಭೇಟಿಯನ್ನು ನೆನಪಿಸಿಕೊಳ್ಳಲು ಖುಷಿ ಎನಿಸುತ್ತದೆ. ಅವರ ಚರ್ಚೆಯ ವಿವರಗಳನ್ನು ಮತ್ತೊಮ್ಮೆ ವಿವರಿಸುತ್ತೇನೆ.
ಯುವಕರನ್ನು ಬೆಚ್ಚಿಸುವ, ಮನಸುಗಳನು ಬೆಚ್ಚಗಾಗಿಸುವ ಸಿನೆಮಾಗಳನ್ನು ಸದಾ ನಿರ್ಮಿಸಲಿ ಎಂದು ಹಾರೈಸುವೆ.

Thursday, May 27, 2010

ಒಂದು ಸುಂದರ ಕ್ಯಾಪ್ಟರ್ ಹಾರಾಟ


ರಜೆಯ ಅಲೆದಾಟದಲಿ ಬರೆಯುವ ಪುರುಸೊತ್ತಾಗಿಲ್ಲ ಎಂಬ ಬೇಸರ.
ಈ ಮಧ್ಯೆ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ, ಅಚಾನಕಾಗಿ ಹೆಲಿಕ್ಯಾಪ್ಟರ್ ಹಾರಾಟದ ಅವಕಾಶ ದೊರೆಯಿತು. ವಿಮಾನಯಾನದ ಅನುಭವ ಹೊಂದಿದ್ದರೂ, ಹೆಲಿಕ್ಯಾಪ್ಟರ್ ನಲ್ಲಿ ಹಾರಾಡುವುದು ಭಿನ್ನವಾಗಿರುತ್ತದೆ.
ಪುಟ್ಟ ಹಕ್ಕಿಯ ಹೆಗಲೇರಿ ಕುಳಿತ ಅನುಭವ. ಸಚಿವರಾದ ಶ್ರೀರಾಮುಲು, ಆಪ್ತ ಸಹಾಯಕ ಸೋಮನಾಥರೊಂದಿಗೆ ಬಳ್ಳಾರಿಯಿಂದ ನರಗುಂದಕ್ಕೆ, ನರಗುಂದದಿಂದ ಕನಕಗಿರಿ, ಅಲ್ಲಿಂದ ಬಳ್ಳಾರಿ ಹೀಗೆ 4 ತಾಸಿನ ಹಾರಾಟ ಖುಷಿ ಎನಿಸಿತು.
ಮೋಡಗಳ ಮೇಲೆ ತೇಲುವ ವಿಮಾನದಿಂದ ಏನೂ ಕಾಣಿಸುವುದಿಲ್ಲ. ಆದರೆ ಕ್ಯಾಪ್ಟರ್ ನಿಂದ ಲ್ಯಾಂಡ್ ಸ್ಕೇಪ್ ಸುಂದರವಾಗಿ ಗೋಚರವಾಗುತ್ತದೆ. ನಾವು ನೆಲದಲ್ಲಿ ಓಡಾಡಿದ ಊರುಗಳು ಚಿತ್ರದಲಿ ಬಿಡಿಸಿದ ಲೇಜಾಟ್ ನಂತೆ ಕಾಣಿಸುತ್ತವೆ.
ಇಂದು ಬಾನ ಹಾರಾಟವನ್ನು ರಿಸ್ಕ್ ಎಂದು ಕರೆದರೂ ಅದು ಅನಿವಾರ್ಯವಾಗಿದೆ. ಮೊನ್ನಿನ ವಿಮಾನ ಅಪಘಾತ ಬಾನ ಹಾರಾಟವನ್ನು ಬೆಚ್ಚಿ ಬೀಳಿಸಿದೆ.
ಆದರೂ ನಿಲ್ಲಲು ಸಾಧ್ಯವೆ? ದಿನಾಲು ರಸ್ತೆ ಅಪಘಾತಗಳು, ರೈಲು ಅಪಘಾತಗಳು ಆದಂತೆ ವಿಮಾನ ಅಪಘಾತಗಳು ಸಂಭವಿಸುತ್ತವೆ. ಇಂತಹ ಭೀಕರ ದುರಂತದಲ್ಲೂ ಏಳು ಜನ ಬದುಕಿ ಪುನರ್ಜನ್ಮ ಪಡೆದಿದ್ದಾರಲ್ಲ?
ಹೀಗೆ ಸಾವಿನ ಸೂತಕ ಭಾವ ಮೆಲಕು ಹಾಕುತ್ತ, ಸಾವಿನ ಸುದ್ದಿಯ ಪುಟಗಳನ್ನು ತಿರುವಿ ಹಾಕುತ್ತಾ ಆಕಾಶದಲ್ಲಿ ಹಾರಾಡಿದ್ದು ವಿಸ್ಮಯ. ಪ್ರತಿ ಹಾರಾಟದಲ್ಲೂ 'ಬಾರದು ಬಪ್ಪದು' ಅಂದುಕೊಳ್ಳುತ್ತೇನೆ, ಏರುತ್ತೇನೆ, ಇಳಿಯುತ್ತೇನೆ. ಕಭಿ ಖುಷಿ, ಕಭಿಗಮ್ ಎನ್ನುವ ವಿಮಾನಯಾನ ಒಂದು ರೀತಿಯ trill ಕೊಡುತ್ತದೆ. ಈ ವೇಗದ ಬದುಕಿನಲ್ಲಿ ಎಲ್ಲವೂ ಅನಿವಾರ್ಯ. ಸಚಿವ ಮಿತ್ರರಾದ ಶ್ರೀರಾಮಲು ತೋರಿದ ಪ್ರೀತಿಯ ಸಲುಗೆ ಎಲ್ಲ ಆತಂಕಗಳನ್ನು ನಿವಾರಿಸಿತು. ಎಲ್ಲ ಹಂತಗಳಲ್ಲಿ ಸಿಗುವ ಬ್ರಹ್ಮಾನುಭವವನ್ನು ಅನುಭವಿಸಬೇಕು.
ನೆಲ, ಜಲ, ಬಾನ ಹಾರಾಟಗಳು ಹೊಸ ಅನುಭವ ನೀಡುತ್ತವೆ. ಹೀಗೊಂದು ಕ್ಷಣದ ಖುಷಿ ಹಂಚಿಕೊಂಡೆ.

Friday, May 21, 2010

ಮನದ ವಿಚಿತ್ರ ವ್ಯಾಪಾರಗಳು


"ತನ್ನಿಚ್ಛೆಯ ನುಡಿದಡೆ ಮೆಚ್ಚುವದೀ ಮನವು,
ಇದಿರಿಚ್ಛೆಯ ನುಡಿದಡೆ ಮೆಚ್ಚದೀ ಮನವು,
ಕೂಡಲ ಸಂಗನ ಶರಣರ ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು".
ಬಸವಣ್ಣನವರ ಈ ವಚನವನ್ನು ಗಮನಿಸಿದಾಗ, ಬಸವಣ್ಣನಿಗೆ ಇದ್ದ ವ್ಯಕ್ತಿತ್ವ ವಿಕಸನದ ಆಸಕ್ತಿ ವ್ಯಕ್ತವಾಗುತ್ತದೆ.
ಮನಸಾಕ್ಷಿಯ ಕುರಿತು ವ್ಯಾಖ್ಯಾನಿಸುವಾಗ ಮೇಲಿನ ಸಾಲುಗಳ ಗಂಭೀರತೆಯನ್ನು ಗಮನಿಸಬೇಕು.
ನಮ್ಮ ಮನಸ್ಸು ಸದಾ ತನ್ನಿಚ್ಛೆಯಂತೆ ನಡೆಯಲು ಬಯಸುತ್ತದೆ. ಮನಸಿನ ಇಚ್ಛೆಗಳು ಯಾವುದು ಎಂಬುದನ್ನು ವಿವೇಚಿಸುವವರು ಯಾರು ಎಂಬುದು ಅಷ್ಟೇ ಕುತೂಹಲದ ಪ್ರಶ್ನೆ.
ಅಂದರೆ ಜಾಗೃತಾವಸ್ಥೆಯ ಮನಸು ಸದಾ negative ಆಲೋಚನೆಗಳ ಕಡೆಗೆ ಹರಿಯುತ್ತದೆ. ಈ ರೀತಿಯ ಹರಿದಾಟವನ್ನು ಮನವೆಂಬ ಮರ್ಕಟ ಎಂದು ನುಡಿಯುತ್ತಾರೆ. ಈ ಹರಿದಾಟವನ್ನು ನಿಲ್ಲಿಸುವುದೇ balance of mind ಎನ್ನುತ್ತಾರೆ.
ಮನ ಮೆಚ್ಚುವಂತೆ ನಡೆಯದೇ, ಜನ ಮೆಚ್ಚುವಂತೆ ನಡೆ ಎಂಬ ಹೇಳಿಕೆಯೂ ಇದೆ. ವ್ಯಕ್ತಿತ್ವ ವಿಕಸನದ ಸಂದರ್ಭದಲ್ಲಿ ಈ ರೀತಿಯ ಉಕ್ತಿಗಳನ್ನು confuse ಮಾಡಿಕೊಳ್ಳುವ ಅಗತ್ಯವಿಲ್ಲ.
ಇಲ್ಲಿ ಅಣ್ಣ ಹೇಳುವುದು ನಿಯಂತ್ರಣವಿಲ್ಲದ ನಿತ್ರಾಣ, ದುರ್ಬಲ conscious mind ಕುರಿತಾಗಿ. ಹೀಗಾಗಿ ಸದೃಢ ಮನಸಿನ ಪರಿಕಲ್ಪನೆ ನಮಗೆ ಸ್ಪಷ್ಟವಿರಬೇಕು.
ಜನ ಮೆಚ್ಚುವ, ಹುಚ್ಚು ಮನಮೆಚ್ಚುವ ಕೆಲಸ ಮಾಡುವುದಕ್ಕಿಂತ ವಿವೇಚನಾ ಪೂರ್ಣ ಮನಸು ಹೇಳುವ ಆತ್ಮಸಾಕ್ಷಿಗೆ ಬೇಸರ ಎನಿಸದ ಕೆಲಸಗಳನ್ನು ಮಾಡಬೇಕು.
ಜನರ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕು ಎಂಬುದು ಕೂಡಾಸರಿಯಲ್ಲ. ಇಂಗ್ಲಿಷ್ ಸಾಹಿತಿ George orwel ತನ್ನ shooting An elephant ಎಂಬ ಲೇಖನದಲ್ಲಿ ಜನರ ನಿರೀಕ್ಷೆಗಳ ಕುರಿತು ರಸವತ್ತಾಗಿ ವಿವರಿಸುತ್ತಾನೆ.
ಇಂಗ್ಲಿಷ್ ಅಧಿಕಾರಿಯ ಕೈಯಲ್ಲಿ ರೈಫಲ್ ಇದ್ದುದನ್ನು ಕಂಡ ನೆರೆದ ಸಾವಿರಾರು ಜನರು, ಅಧಿಕಾರಿ ಆನೆಯನ್ನು ಕೊಲ್ಲಲಿ ಎಂದು ಬಯಸುತ್ತಾರೆ. ಆದರೆ ಮಾನವೀಯತೆಯ ದೃಷ್ಠಿ ಇಟ್ಟುಕೊಂಡ orwel ಆನೆಯನ್ನು ಕೊಲ್ಲುವ ಮನಸು ಮಾಡುವುದಿಲ್ಲ.
ತನ್ನಲ್ಲಿ ಉಂಟಾದ ತಲ್ಲಣಗಳನ್ನು ಲೇಖಕ ಹೃದ್ಯಂಗಮವಾಗಿ ವಿವರಿಸುತ್ತಾನೆ. ಅಂತಿಮವಾಗಿ ಜನರನ್ನು ಓಲೈಸಲೆಂದೇ ಆನೆಯನ್ನು ಕೊಲ್ಲುತ್ತಾನೆ.
ತನ್ನ ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ವ್ಯಥೆ ಪಡುತ್ತಾನೆ. ಒಂದು ಸುಂದರ ಲೇಖನಕ್ಕೆ ಒಂದು ಹೃದ್ಯಂಗಮ ಘಟನೆ ಕಾರಣವಾಯಿತು. ಇಂತಹ ಸಂಬರ್ಭಗಳನ್ನು ನಾವು ಅನೇಕ ಬಾರಿ ಎದುರಿಸಿದಾಗ ಮನಸಾಕ್ಷಿಯ ಪರವಾಗಿ ನಡೆದುಕೊಳ್ಳಬೇಕು ಎಂಬುದೇ ಲೇಖಕನ ಆಶಯ!
ಸಮಯ, ಸಂದರ್ಭ, ಜನರನ್ನು ಮೆಚ್ಚಿಸಲು, ಸಾರ್ವತ್ರಿಕವಾಗಿ ಒಮ್ಮೊಮ್ಮೆ hero ಆಗಲು ಇಂತಹ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.
ಪ್ರತಿ ಕ್ಷಣದ ಆಲೋಚನೆಯಲ್ಲಿ ಎರಡು ರೀತಿಯ ವಿಚಾರಗಳು ನಮ್ಮ ಕಣ್ಮುಂದೆ ಬರುತ್ತವೆ. ಒಳ್ಳೆಯದು - ಕೆಟ್ಟದು, ಜನಪರ - ಜನವಿರೋಧಿ, ಜನಮೆಚ್ಚುವ-ಮನಮೆಚ್ಚುವ....... ಹೀಗೆ ಗೊಂದಲಗಳಲಿ ನಮ್ಮ ಆಲೋಚನಾ ಲಹರಿ ಮುಂದುವರೆಯುತ್ತದೆ. ನಮ್ಮ ನಿರ್ಧಾರಗಳು ಯಾವಾಗಲೂ sub conscious mind ನೀಡುವ ಪ್ರಿಯ ಸಲಹೆಗಳನ್ನು ಸ್ವೀಕರಿಸಿ ಬಿಡುವ weakness ಗೆ ಶರಣಾಗುತ್ತೇವೆ.
ಇದಕ್ಕೊಂದು ಉದಾಹರಣೆಯನ್ನು ಗಮನಿಸೋಣ. ತುಂಬಾ ಶ್ರೀಮಂತರೂ, ಉದಾರಿಗಳ ಹತ್ತಿರ ನೆರವು ಕೇಳಲು ಹೋಗುತ್ತೇವೆ. ನಮ್ಮ ನಿರೀಕ್ಷೆ ಒಂದು ಸಾವಿರ ರೂಪಾಯಿ ಇರುತ್ತದೆ ಎಂದು ಇಟ್ಟುಕೊಳ್ಳೋಣ. ಆದರೆ ಅವರು ಹತ್ತು ಸಾವಿರ ರೂಪಾಯಿ ನೀಡಿದರೆ, ನಾವು ಉಳಿದ ಒಂಬತ್ತು ಸಾವಿರ ರೂಪಾಯಿ ಮರಳಿ ನೀಡುತ್ತೇವೆಯೋ, ಹೇಗೋ, ಒಂದು ವೇಳೆ ನಾವು ಒಂಬತ್ತು ಸಾವಿರ ರೂಪಾಯಿ ಮರಳಿ ನೀಡಿದರೆ ಮಾತ್ರ ಮನಸಾಕ್ಷಿಗೆ ತಕ್ಕಂತೆ ನಡೆದುಕೊಂಡಂತೆ. ಆದರೆ ಹೀಗಾಗಲು ಸಾಧ್ಯವೆ?
ಇಂತಹ ನಿಲುವಿಗೆ ತುಂಬಾ ಆತ್ಮವಿಶ್ವಾಸ, integrety ಬೇಕು.
ಈ ಮನಸ್ಥಿತಿಯನ್ನು ಬಸವಣ್ಣ ಅರ್ಥಪೂರ್ಣವಾಗಿ ವಿವರಿಸುತ್ತಾನೆ. ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಗೆ, ನಾಳಿಂಗೆ ಬೇಕೆಂದನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಖಡಾ ಖಂಡಿತವಾಗಿ ದೃಢ ಸಂಕಲ್ಪದಿಂದ ಹೇಳುತ್ತಾನೆ.
ಬಸವಣ್ಣನಿಗಿರುವ ದೃಢ ಸಂಕಲ್ಪ ನಮಗಿದೆಯೇ? ಎಂದು ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳೋಣ.
ಹೊನ್ನು, ಹೆಣ್ಣು, ಮಣ್ನು ಮಾಯೆ ಎನ್ನುತ್ತಲೇ, ಅದನ್ನು ಸುಂದರವಾಗಿ ನಿರಾಕರಿಸುತ್ತಲೇ, ಸದಾ ಬಯಸುವ, ಬಯಸಿದ್ದನ್ನು ಮುಚ್ಚಿಡುತ್ತಾ ಪಡೆಯಲು ಆಪೇಕ್ಷಿಸುವ ಗೊಂದಲ ಅದೆಂತಹ ಕಿರಿಕಿರಿ.
ಇಂತಹ ಅನೇಕ ಗೊಂದಲಗಳನ್ನು ಎದುರಿಸುತ್ತಲೇ ಬದುಕನ್ನು ನರಕ ಮಾಡಿಕೊಳ್ಳುತ್ತೇವೆ. ಮನಸು ಒಡ್ಡುವ ಐಹಿಕ ಆಸೆಗಳನ್ನು ಪೂರೈಸಲು, ಆಸೆಯೇ ದು:ಖಕ್ಕೆ ಮೂಲ ಎಂದು ದು:ಖಿಸುತ್ತಲೇ ಕಾಲಹರಣ ಮಾಡುವ ವಿಪರ್ಯಾಸಕ್ಕಿಂತ ಹಂತಹಂತವಾಗಿ ಸಾಧ್ಯವಾದಷ್ಟು ನಿರ್ಲಿಪ್ತತೆಯನ್ನು ರೂಪಿಸಿಕೊಳ್ಳೋಣ.

Wednesday, May 19, 2010

ಮನಸೆಂಬ ಮಾಯೆಗೆ ಲಗಾಮು ಹಾಕೋಣ

ಮನಸು, mind ಇತ್ಯಾದಿ ಶಬ್ದಗಳಿಂದ ಕರೆಯುವ ಚೇತನ ಶಕ್ತಿ ಇಡೀ ನಮ್ಮ ಬದುಕನ್ನೇ ನಿಯಂತ್ರಿಸುತ್ತದೆ. ಅದೇ ಕಾರಣಕ್ಕೇ ಹೇಳುತ್ತಾರೆ ಮನಸ್ಸು ಮಾಡಬೇಕು ಎಂದು ಹಾಗಾದರೆ ಯಾವುದಕ್ಕೆ, ಹೇಗೆ ಮನಸ್ಸು ಮಾಡಬೇಕು ಎಂಬುದು ನಮ್ಮ ಕೈಯಲ್ಲಿರಬೇಕು.
ಇಂದು mind power ಬಗ್ಗೆ ತುಂಬಾ ಚರ್ಚೆ ನಡೆದಿದೆ. ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೆ mind, mentality, attitude ಆಡುವ ಆಟವನ್ನು ಜಗತ್ತು ಅರಿತಿದೆ.
ನಮ್ಮ ಮನೋಧರ್ಮ, ದೃಷ್ಠಿಕೋನ ಬದಲಿ ಆಗಲು 'ಮನಸು' ಮಾಡುವುದೇ ಮುಖ್ಯ ಎಂಬ ಕಾರಣಕ್ಕೆ ಮನಸು ಮಹತ್ವದ ಸ್ಥಾನ ಪಡೆದಿದೆ.
ಇದು ಕೇವಲ ಇಂದಿನ ಚರ್ಚೆಯಲ್ಲ, ಹಿಂದಿನಿಂದಲೂ ಸಾಗಿದೆ ಎನ್ನುವುದಕ್ಕೆ ನಮ್ಮ ಬಸವಾದಿ ಶರಣರ ವಚನಗಳೇ ಸಾಕ್ಷಿ. ನಮ್ಮ ಎಲ್ಲ ದು:ಖಗಳಿಗೆ ಮನದ ಮುಂದಿನ ಮಾಯೆಯೇ ಕಾರಣ ಎನ್ನುತ್ತಾರೆ. ಹೀಗಿರುವಾಗ ಆಧುನಿಕ ವೈಜ್ಞಾನಿಕ ಯುಗದಲ್ಲಿ ಮನದ ಮಾತಾಡುವುದು ಯಾವ ಲೆಕ್ಕ.
ಮನಸಿನ ಮೂರು ಹಂತಗಳನ್ನು ಚರ್ಚಿಸಲಾದಂತೆ subconscious mind ಗೆ ಪ್ರಾಧಾನ್ಯತೆ ಇರುವುದು ಸ್ಪಷ್ಟವಾಗುತ್ತದೆ.
ನಮ್ಮ ಬದುಕಿನಲ್ಲಿ ನಡೆದ ಹಲವಾರು ಘಟನೆಗಳಿಂದಾಗಿ ನಮ್ಮದೇ ಆದ ಒಂದು ಮನಸ್ಥಿತಿ ರೂಪಿತವಾಗಿರುತ್ತದೆ. ಆ ಮನಸ್ಥಿತಿಯಲ್ಲಿ ಅನೇಕ ಲೋಪದೋಷಗಳಿರುತ್ತವೆ. ಅವುಗಳನ್ನು ಶಾಸ್ತ್ರೋಕ್ತವಾಗಿ ಅರಿಷಡ್ ವರ್ಗಗಳು ಎಂದು ವಾಖ್ಯಾನಿಸುತ್ತಾರೆ. psychology ಯಲ್ಲಿ negative thoughts ಎನ್ನುತ್ತಾರೆ.
'ಇಲ್ಲ' ಎನ್ನುವ ಧೋರಣೆ 'ಹೌದು' ಎಂದಾಗಬೇಕಾದರೆ ಮನದ ಹಟಮಾರಿತನ ಕಡಿಮೆ ಆಗಬೇಕು. ಸಂಪೂರ್ಣ ನಿಲ್ಲಿಸಬೇಕು ಎಂದರೆ ಒಣ ಉಪದೇಶವಾಗುತ್ತದೆ. ಆದ್ದರಿಂದ ಎಲ್ಲ negative ಗುಣಗಳನ್ನು ಹಂತಹಂತವಾಗಿ ನಿಲ್ಲಿಸಲು ಸಾಧ್ಯ.
ಅದನ್ನೇ development ಎನ್ನುತ್ತೇವೆ. developing ಹಂತ ಮುಗಿದು ಪರಿಪೂರ್ಣವೆನಿಸಿದಾಗ transformation ಸಾಧ್ಯವಾಗುತ್ತದೆ.
ಇದನ್ನೇ ಸೂತ್ರವಾಗಿಟ್ಟುಕೊಂಡು ಬದುಕನ್ನು ರೂಪಿಸಿಕೊಳ್ಳಲು ಸ್ವಾಮಿ ವಿವೇಕಾನಂದ ಕರೆನೀಡಿದ್ದಾರೆ.
ನಮ್ಮ ಅತೀಯಾದ ವಿಮರ್ಶೆ, ಕ್ರಮಬದ್ಧ ಆಲೋಚನೆಗಳು ಯಶಸ್ಸನ್ನು ತಂದುಕೊಡುತ್ತವೆ ಎಂಬುದು ಕೂಡಾ ಅಷ್ಟೊಂದು ಸಮಂಜಸವಲ್ಲ. ಆದರೆ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದು positive ಗುಣ ಇದ್ದರೆ ಸಾಕು ಎನ್ನುತ್ತಾರೆ.
Set your target and achieve it,
what ever it takes just do it.
Don't analyse too much.
Just do it. Problems only make you strong.
You are born to win ಎನ್ನುತ್ತಾರೆ. ಉದಾತ್ತ ಗುರಿ ಹಾಕಿಕೊಳ್ಳುವ ಮನಸು ಮಾಡಬೇಕು. ಕ್ರಮಿಸುವ ಹಾದಿಯಲಿ ಬರುವ ಎಲ್ಲ ತೊಂದರೆಗಳನ್ನು ಎದುರಿಸುವ ಮನೋಸ್ಥಿತಿ ನಿರ್ಮಾಣವಾದಾಗ ಯಶಸ್ಸಿನ ಅಹಂಕಾರವಾಗಲೀ, ಸೋಲಿನ ನೋವಾಗಲಿ ಕಾಡುವುದಿಲ್ಲ. ಎಲ್ಲವನ್ನು ಸಮಾನವಾಗಿ, ನಿರ್ಲಿಪ್ತವಾಗಿ ಸ್ವೀಕರಿಸುವ ಶಾಂತ ಸ್ವಭಾವ ನಮ್ಮದಾದಾಗ ನಮ್ಮ ನಡೆ ಸರಳವಾಗಿರುತ್ತದೆ.
ನಾವು ಶಾಂತಚಿತ್ತರಾಗಿ ಆಲೋಚಿಸಿ ನಮ್ಮ ಗುಣಧರ್ಮಗಳನ್ನು ವಿರಾಮರ್ಶೆಗೆ ಒಡ್ಡಬೇಕು. ಬೇರೆಯವರನ್ನು ಮೆಚ್ಚಿಸುವಂತೆ, ಒಪ್ಪಿಸುವಂತೆ ನಡೆದುಕೊಳ್ಳುವುದು ಬಹಳ ಸುಲಭ.
ಆದರೆ ಈ ಹಿಪೋಕ್ರಸಿ ಬೇಗ ಅಲ್ಲದಿದ್ದರೂ ಒಮ್ಮೆಯಾದರೂ expose ಆಗುತ್ತದೆ. ಒಮ್ಮೆ ಈ ಹಿಪೋಕ್ರಸಿ expose ಆದರೆ ನಮ್ಮ ವ್ಯಕ್ತಿತ್ವ ಶಿಥಿಲವಾಗುತ್ತದೆ.
ಈ ಕಾರಣದಿಂದಾಗಿಯೋ ನಾವು ಬೇರೆಯವರನ್ನು ಅತಿಯಾಗಿ ಹೊಗಳುವ, ತೆಗಳುವ ಕೆಲಸಕ್ಕೆ ಮುಂದಾಗುತ್ತೇವೆ. ನಮ್ಮ ಈ ಭಾವನೆಗಳು ಅವರಿಗಾಗಿ ಅಲ್ಲ ಕೇವಲ ನಮ್ಮ ಮನೋಧರ್ಮ ಸಾಬೀತಾಗಲು ಎಂಬುದನ್ನು ಅರಿಯಬೇಕಾಗುತ್ತದೆ. ಆದ್ದರಿಂದಲೇ ತುಂಬಾ ಜಾಣರು, ಪರಿಪೂರ್ಣ ವ್ಯಕ್ತಿತ್ವ ಹೊಂದಿದವರು ಹೊಗಳಿಕೆಗಾಗಲೀ, ತೆಗಳಿಕೆಗಾಗಲೀ ಬಗ್ಗುವುದಿಲ್ಲ. ಸುಮ್ಮನೆ ಮುಗುಳ್ನಗುತ್ತಾರೆ ಅಷ್ಟೇ!
ನಿಮ್ಮ ಹೊಗಳಿಕೆ, ತೆಗಳಿಕೆಯ ಹಿಂದಿನ ಉದ್ದೇಶ, agenda ಅವರಿಗೆ ಅರ್ಥವಾಗಿಬಿಡುತ್ತದೆ.
ಆದ್ದರಿಂದ ನಮ್ಮೊಳಗೆ ಅಡಗಿರುವ, ನಮ್ಮನ್ನು ಸದಾ ಕಾಯುತ್ತಿರುವ ಮನಸಾಕ್ಷಿಯನ್ನು ಮೆಚ್ಚಿಸುವ ಕೆಲಸ ಮಾಡೋಣ. ಆ ಮನಸಾಕ್ಷಿಯನ್ನು ಜಾಗೃತಿಗೊಳಿಸುವ ಕೆಲಸ ಮಾಡಲು ಮುಂದಾಗುವುದೇ ಮನಸು ಮಾಡುವುದು.
So let us mind to change ourselves.

ಮುನ್ನುಡಿ

ಕಾವ್ಯ ಬಾಯಿಪ್ರಸಾದವಲ್ಲ, ಋಣಾನುಸಂಬಂಧ
ನಾನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಈ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಲವರು ಸರ್ಕಾರದಿಂದ ನಿಯುಕ್ತರಾದರು. ಅವರ ಪಟ್ಟಿ ಬಂದಾಗ ಪ್ರೊ. ಸಿದ್ದು ಯಾಪಲಪರವಿ ಎಂಬ ಹೆಸರಿತ್ತು. ನೇಮಕಗೊಂಡ ನಂತರ ಮೊದಲ ಸಭೆಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಬಂದರು. ನಾನು ಕಛೇರಿಯಲ್ಲಿ ಕೂತಿದ್ದೆ. ನನ್ನ ಆಫಿಸಿನೊಳಕ್ಕೆ ಒಬ್ಬ ನಗುಮೊಗದ ದುಂಡನೆಯ ವ್ಯಕ್ತಿ ಬಂದು 'ನಮಸ್ಕಾರ ಸಾರ್, ನಾನು ಸಿದ್ದು ಯಾಪಲಪರವಿ' ಎಂದು ಪರಿಚಯ ಹೇಳಿಕೊಂಡರು. ಅವರ ಮಾತು -ಧ್ವನಿ-ಶೈಲಿ ನನಗೆ ತುಂಬಾ ಆಪ್ತ ಎನಿಸಿತು. ಈತ ಸ್ನೇಹಪರ ಎಂದೆನಿಸಿತು. ಮುಂದೆ ಮೂರು ವರ್ಷಗಳ ಅವಧಿಯವರೆಗೆ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅವರು ನನ್ನೊಡನೆ ಹಲವಾರು ದಿನ ಕುಳಿತು ಕವಿತೆ, ಕತೆ, ಸಮಕಾಲೀನ ಕನ್ನಡ ಮನಸ್ಸು, ವೈಚಾರಿಕತೆ - ಇನ್ನು ಮುಂತಾದ ಹಲವಾರು ವಿಷಯಗಳನ್ನು ನನ್ನ ಜೊತೆ ಮಾತನಾಡುತ್ತಿದ್ದರು. ಅವರದು ಸಮಪಾತಳಿಯ ದೃಷ್ಠಿ. ಎಲ್ಲೂ ರೇಜಿಗೆ ಇಲ್ಲ. ತನಗೆ ತಿಳಿದ್ದನ್ನು ಮಾತ್ರ ಹೇಳುತ್ತಿದ್ದರು. ಇಲ್ಲದಿದ್ದರೆ ತಿಳಿದುಕೊಂಡು ಬಂದು ಮಾತನಾಡುತ್ತಿದ್ದರು. ಅವರು ನಾನು ಅನೇಕ ವಿಚಾರಗಳನ್ನು ಮಾತನಾಡಿದ್ದೇನೆ; ಜೊತೆಗೆ ಸಂವಾದ ನಡೆಸಿದ್ದೇವೆ.
ನನಗೂ ಸಿದ್ದು ಯಾಪಲಪರವಿಗೂ ಹೀಗೆ ಸ್ನೇಹ ಬೆಳೆದು ಬಂತು. ನನ್ನ ಬದುಕಿನ ಕಳೆದ ಏಳೆಂಟು ವರ್ಷ ಅವರೊಡನೆ ಹಿತವಾಗಿ ಕಳೆದಿದ್ದೇನೆ. ಅವರ ಸ್ನೇಹದ ಅಮೃತವರ್ಷದಲ್ಲಿ ನಿತಾಂತನಾಗಿ ಕಳೆದಿದ್ದೇನೆ. ಅವರು ಕಳೆದ ಎರಡು ತಿಂಗಳ ಹಿಂದೆ 'ನೆಲದ ಮರೆಯ ನಿಧಾನ' ಸಂಕಲನವನ್ನು ನನ್ನ ಕೈಗಿಟ್ಟು " ಇದಕ್ಕೊಂದು ಮುನ್ನುಡಿ ಬರೆದುಕೊಡಿ" ಎಂದರು. ನನಗೆ ಕವಿತೆಯು ಪ್ರೀತಿಯ ವಿಷಯ; ಅದನ್ನು ಬರೆದ ಕವಿ ನನ್ನ ಪ್ರೀತಿಯ ಸ್ನೇಹಿತ. ಇವೆರಡೂ ನನ್ನ ಮನಸ್ಸನ್ನೂ ಕಟ್ಟಿ ಬೆಳೆಯಿಸಿತು. ಈ ಸಂಕಲನ ಕಳೆದ ಒಂದು ತಿಂಗಳಿನಿಂದ ನನ್ನ ಜತೆ ಎಲ್ಲೆಲ್ಲೂ ಪ್ರಯಾಣ ಮಾಡಿದೆ. ನಾನು ಹೋದ ಕಡೆ ಈ ಕವಿತೆಯ ಕೆಲವು ಸಾಲುಗಳನ್ನು ಕಣ್ಣಾಡಿಸಿದ್ದೇನೆ. ಆಗಾಗ್ಗೆ ಶಿಷ್ಯಮಿತ್ರರಿಗೆ ಇಲ್ಲಿಯ ಕವಿತೆಗಳನ್ನು ಓದಿ ಹೇಳಿದ್ದುಂಟು. ನನಗೆ ಮೆಚ್ಚುಗೆಯಾದ ಕೆಲವು ಕವಿತೆಗಳನ್ನು ಗೆಳೆಯರ ಜೊತೆ ಓದಿ ಸವಿದಿದ್ದೇನೆ. ಕವಿತೆಯನ್ನು ಕೇಳಿದವರೂ ಸವಿದಿದ್ದಾರೆ. ಏನಿದ್ದರೂ ಕವಿತೆ ಕಿವಿಗೆ ಸೇರಿದ್ದು ತಾನೆ? ನವ್ಯ ಕವಿತೆ ಕಣ್ಣಿಗೆ ಸೇರಿದರೆ, ದೇಸಿ ಕವಿತೆ ಕಿವಿಗೆ ಸೇರಿದ್ದು.
ಕವಿತೆಗೂ ಕಿವಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಕೇಶಿರಾಜ 'ಶ್ರೋತ್ರದೊಳ್ ಉದ್ಭಾವಿಪ' ಎಂದು ಹೇಳಿದ್ದಾನೆ. 'ಕಿವಿವೊಕ್ಕಡಂ' ಎಂದು ಪಂಪ ಹೇಳಿದ್ದಾನೆ. 'ಕೇಳಲಕ್ಕುಂ,ಕೇಳ್ದೊಡಂ' ಎಂಬಂಥ ಪೂರ್ವವಾಕ್ಯಗಳು ಅಸಂಖ್ಯವಾಗಿವೆ. 'ಕೇಳುವ ಜಂಗಮ ಜನಾರ್ಧನರು' ಎಂದು ಕುಮಾರವ್ಯಾಸ ಹೇಳುತ್ತಾನೆ. 'ತಿಳಿಯ ಹೇಳುವೆ ಕೃಷ್ಣಕಥೆಯನು' ಎಂದು ಅವನೇ ಹೇಳುತ್ತಾನೆ. ನಮ್ಮ ದಿನನಿತ್ಯದ ವ್ಯವಹಾರ ಜಗತ್ತಿನಲ್ಲಿ ಕಿವಿಯೂ ಭಾಗವಹಿಸುತ್ತದೆ. ಸಾಹಿತ್ಯಕ್ಕೆ ಕಣ್ಣೆಂಬುದು ಗೌಣ; ಆರ್ದ್ರವಾಗುತ್ತದೆ. ಗಣೇಶನ 'ಮೊಗದಗಲದ ಕಿವಿ' ಸಾಂಕೇತಿಕವಾಗಿಯೂ ಇದೆ. ಹೀಗೆ ಕಾವ್ಯ, ಕವನ, ಕವಿತೆ,ಪದ್ಯ ಇವುಗಳಿಗೆಲ್ಲ ಕಿವಿಯೇ ಪ್ರಧಾನ, ಪ್ರಾಧಾನ್ಯ ಹೌದು!
ಪ್ರೊ. ಸಿದದು ಬಿ. ಯಾಪಲಪರವಿ ಅವರ ಕವಿತೆಗಳು ಕಣ್ಣಿಗೆ ಅಥವಾ ಕಣ್ಣಿನ ಓದಿಗೆ ಸಂಬಂಧಿಸಿಲ್ಲ; ಅದು ಕಿವಿಗೆ ಸಂಬಂಧಿಸಿದ್ದು. ಆದ್ದರಿಂದ ಇಲ್ಲಿಯ ಕವಿತೆಗಳನ್ನು ಗಟ್ಟಿಯಾಗಿ ಓದಿಸಿ ಕೇಳಬೇಕು. ನಾವು ಇಲ್ಲಿಯ ಕವಿತೆಗಳ ಮೇಲೆ ಕೇವಲ ಕಣ್ಣಾಡಿಸಿದರೆ ಏನೇನೂ ಸಿಗದೆ ಹೋಗಬಹುದು. ಹಾಗಾಗಿ, ಇದು ಶುದ್ಧ ದೇಸಿ ಕವಿತೆ. ದೇಸಿ ಕವಿತೆಗೆ ನಾದವೂ ಉಂಟು, ಲಯದ ಬಳುಕುಗಳೂ ಉಂಟು. ಪಂಪ 'ದೇಸಿಯೊಳ್ ಪುಗುವುದು' ಎಂದು ಹೇಳುತ್ತಾನಷ್ಟೆ! ಇದು ಬಹು ಮಹತ್ವದ ಮಾತು. ಈ ಮಾತಿನ ಜಾಡನ್ನು ಹಿಡಿದು ನಾವು ನಡೆಯಬೇಕು ಅಷ್ಟೆ. ಈ ಸಂಕಲನದ 'ಆರ್ತನಾದ' ಎಂಬ ಕವಿತೆ ಯಾಪಲಪರವಿಯವರ ಸಂಕಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಕವಿತೆಯಾಗಿಸುವ ಸಂಕಟವೂ ಹೌದು; ಇದರ ಜೊತೆಗೆ ಕವಿತೆಯ ಆಶಯದ ಹಿಂದಿರುವ ಆತಂಕವೂ ಹೌದು. ಇವೆರಡನ್ನೂ ಒಂದುಗೂಡಿಸುವ - ಆ ಮೂಲಕ ಪರಿಭಾವಿಸುವ - ವಿಫುಲ ಯತ್ನಗಳೂ ನಮ್ಮ ಮುಂದೆ ಈ ಕವಿ ತಂದು ತೋರಿಸುತ್ತಾರೆ. ಕವಿತೆ ಆರಂಭವಾಗುವುದು 'ಮನದ ಬಾಗಿಲು' ಗಳ ರೂಪಕದಿಂದ.
ಎಂದೋ ಮುಚ್ಚಿಹೋಗಿದೆ
ಮನದ ಬಾಗಿಲು
ಚಿಂತೆಯ ಬಿರುಗಾಳಿಗೆ
ಅರಳುವ ಕಲ್ಪನೆಗಳೆಲ್ಲ
ಕರಗಿ ಹೋಗುತಲಿವೆ
ಭಾವಕ ನೆಲೆ ಇಲ್ಲದೆ
ತಳಮಳದ ಜೀವ ಚಡಪಡಿಸುತಿದೆ
ಬಂಧನವ ಬಿಡಿಸಲು
ಚಿಂತೆ, ಭಯ, ಕಾತರಗಳು
ಕೊಚ್ಚಿಹೋಗಬಾರದೇ ಆತ್ಮಾಭಿಮಾನದ
ಸೋಂಕು ತಟ್ಟಲು
ನಿನ್ನಪ್ಪುಗೆ ಕರಗಿಸಲಿ
ಚಿಂತೆಯ ಚಿತೆಯ
ತಟ್ಟಿ,ತಟ್ಟಿ ತೆರೆಸಲಿ ಮುಚ್ಚಿದ ಕದವ
ಬೆಳಗಲಿ ಪ್ರೀತಿ ನಗೆ
ಓಡಿಸಲಿ ಆವರಿಸಿದ ಕತ್ತಲೆ
ಕೊಚ್ಚಿಹೋಗಲಿ ದು:ಖ-ದುಮ್ಮಾನ
ಎಲ್ಲಿರುವೆ ನಲ್ಲೆ?
ಬದುಕಿಸಬಾರದೇ ನನ್ನೀ ನರಳಾಟದಿ (ಆರ್ತನಾದ)
ಈಗ ಲೋಕವು ಆನಂದದ ಸಮುದ್ರದಲ್ಲಿ ತೇಲುತ್ತಿಲ್ಲ. ಅಲ್ಲಿ ಗೋಳಿನ ರೂಪಕಗಳುಂಟು. ಅಲ್ಲಿ ಚಿಂತೆಯ ಬಿರುಗಾಳಿಗಳುಂಟು. ಅಲ್ಲಿ ಅರಳುವ ಕಲ್ಪನೆಗಳಿಲ್ಲ. ಅವೆಲ್ಲವೂ ಕರಗಿಹೋಗಿವೆ. ಇದು ವಾಸ್ತವದ ರೂಪಕ. ಇಂಥ ವಾಸ್ತವವು ಯಾಕೆ ನೆಲೆಯೂರಿತು. ಇಲ್ಲಿ ವ್ಯಕ್ತಿತ್ವಗಳು ನಾಶವಾಗುತ್ತಲಿವೆ. ವ್ಯಕ್ತಿಗಳು ವಿಜೃಂಭಿಸುತ್ತಿದ್ದಾರೆ. ಇಲ್ಲಿ ಆತ್ಮಾಭಿಮಾನಕ್ಕೆ ದಾರಿಗಳಿಲ್ಲ. ಅವು ಸೋಂಕುಗಳಿಂದ ಕೂಡಿವೆ. ಇಂಥ ಸನ್ನಿವೇಶದಲ್ಲಿ ಪ್ರೀತಿಯ ಅಪ್ಪುಗೆ ಬೇಕು. ಚಿಂತೆಯ ಕದ ಅಲ್ಲಿ ತೆರೆಯಬೇಕು. ಆಗ ಅಲ್ಲಿ ಪ್ರೀತಿಯ ನಗೆಯುಕ್ಕಿ ಆವರಿಸಿರುವ ಕತ್ತಲೆ ಓಡುತ್ತದೆ. ಇಡೀ ಕವಿತೆಯ ಆರ್ತನಾದ ವ್ಯಕ್ತಿ ನೆಲೆಯಿಂದ ಸಾಮೂಹಿಕ ನೆಲೆಗೂ, ಅಲ್ಲಿಂದ ವ್ಯಕ್ತಿ ನೆಲೆಗೂ ಸಂಚರಿಸುತ್ತದೆ. ಜೀವನಕ್ಕೆ ಏರುಮುಖದ ಚಲನೆ ಇರುವಂತೆ ಇಳಿಮುಖದ ಚಲನೆಯೂ ಉಂಟು. ಇವೆರಡೂ ಭಿನ್ನವೆಂದು ಕವಿ ಭಾವಿಸುವುದಿಲ್ಲ. ಅವೆರಡೂ ಪರಸ್ಪರ ಒಗ್ಗೂಡುವ ಪ್ರಯತ್ನ ಬೇಕು. ಕತ್ತಲೆಯೊಳಗಿಂದ ಬೆಳಕು ಬರುತ್ತದೆಯಷ್ಟೆ! ಬೆಳಕು ಕತ್ತಲೆಯನ್ನು ನುಂಗುತ್ತದೆ. ಆರ್ತತೆಯಲ್ಲಿಯೂ ನಾದವುಂಟು ಎಂಬ ರೂಪಕೋಕ್ತಿ ವಿಧಾನವು ಕವಿತೆಯ ಪ್ರಧಾನ ಆಶಯವಾಗಿರುವುದು ಗಮನೀಯ.
ಈ ಸಂಕಲನವು ಮುಖ್ಯವಾಗಿ ವ್ಯಕ್ತಿನೆಲೆಯ ಪ್ರೀತಿಮುಖಗಳನ್ನು ಹುಡುಕುತ್ತದೆ. ವ್ಯಕ್ತಿನೆಲೆ ತಿಳಿಯದೆ ಸಾಮೂಹಿಕ ನೆಲೆ ತಿಳಿಯುವುದು ಹೇಗೆ? ಈ ಸಂಕಲನದ ಚಿತ್ತ ಚಿತ್ತಾರ, ನಗ್ನಸತ್ಯ, ನಿನ್ನ ಕಣ್ಣ ಸೆಳೆತದಲಿ, ಸಂಗಾತಿ ಮುಂತಾದ ಕವಿತೆಗಳು ಗಂಡು-ಹೆಣ್ಣಿನ, ಸಖ-ಸಖಿಯರ, ಗೆಳೆಯ-ಗೆಳತಿಯರ ಸಂಬಂಧಗಳ ನಂಟನ್ನು ಹುಡುಕುತ್ತದೆ. ವ್ಯಕ್ತಿನೆಲೆಯ ಪ್ರೀತಿ ಮುಖಗಳಿಗೆ ಸಾರ್ವಜನಿಕ ಮುಖವೂ ಉಂಟು. ಆದರೆ, ಇದು ವ್ಯಕ್ತಿ ನೆಲೆಯ ವಿವಿಧ ಮುಖಗಳನ್ನು ನೋಡಲು ಇಚ್ಛಿಸುತ್ತದೆ. ಎಲ್ಲಿ ಗಂಡು-ಹೆಣ್ಣುಗಳ ಪ್ರೀತಿ ಮುಖಗಳೂ, ವಿರಸದ ಮುಖಗಳೂ ಪರಸ್ಪರ ತೆರೆದು ನಿಲ್ಲುತ್ತವೋ, ಅಲ್ಲಿ ವೈಚಾರಿಕ ಆಕೃತಿಯ ನೆಲೆಗಳು ಬರುತ್ತವೆ. ಈ ಸಂಕಲನದ 'ಸಂಗಾತಿ' ಎಂಬ ಕವಿತೆ ಈ ದೃಷ್ಟಿಯಿಂದ ತೀರಾ ಕುತೂಹಲಕಾರಿ. ಈ ಕವಿತೆಯು ಮೊದಲಿಗೆ ಶಿಶುನಾಳ ಶರೀಫನ ಕವಿತೆಯ ಎರಡು ಸಾಲನ್ನು ಹಾಕಿದೆ. ಅದಾದ ಮೇಲೆ ಕವಿತೆ ಆರಂಭವಾಗುತ್ತದೆ. ಈ ಕವಿತೆಯು ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯ ಘಟಕ ಭೂತಕಾಲದ ಮುಖ. ಇಲ್ಲಿ ಭೂತಕಾಲವೂ ವರ್ತಮಾನಕ್ಕೆ ತಂದು ನಿಲ್ಲಿಸಿ ದಂತಿದೆ. ಮೊದಲನೆಯ ಘಟಕದ ಕವಿತೆಯ ಸಾಲುಗಳು ಹೀಗಿವೆ:
ತಲೆಯನೆತ್ತಿ ನಡೆಯದಂತೆ ತಿನ್ನುವ ಚಿಂತೆಗಳು
ಹುದುಗಿಕೊಂಡಿವೆ ನನ್ನ ಸಮಸ್ಯಗಳು
ಅರ್ಥರಹಿತ ವ್ಯವಹಾರಿಕ ಬದುಕು ಏನೆಲ್ಲಾ ಮರೆಸಿದೆ
ಚೈತನ್ಯ, ನೆಮ್ಮದಿ ಎಲ್ಲೂ ಸಿಗದೆ ತಬ್ಬಲಿಯಾದಾಗ
ಈ ಕವಿತೆಯ ಸಾಲುಗಳು ವೈಯಕ್ತಿಕ ಮುಖವನ್ನೂ ಹೇಳುತ್ತಿವೆ ಎನಿಸಿದರೂ ಅದು ಸಾರ್ವಜನಿಕವಾಗುವುದು ಅನಿವಾರ್ಯ. ವೈಯಕ್ತಿಕ ಮುಖದಲ್ಲಿ ಚಿಂತೆ-ಸಮಸ್ಯಗಳು ಮುಕ್ಕಿಬಿಡುತ್ತವೆ ನಿಜ. ಆದರೆ, ಚೈತನ್ಯ ನೆಮ್ಮದಿ ಬೇಕು. ಆದರೆ ಚೈತನ್ಯವಿಲ್ಲದೆ ನೆಮ್ಮದಿಗೆ ಅವಕಾಶವಿಲ್ಲ. ಆಗ 'ತಬ್ಬಲಿತನ' ಬಂದು ಮುಸುಕುತ್ತವೆ. ಇಲ್ಲಿರುವ 'ತಬ್ಬಲಿ' ಎಂಬ ರೂಪಕ ಪ್ರೀತಿಯ ಮುಖವೂ ಹೌದು. ತಬ್ಬಲಿತನದ ಚಿತ್ರವೂ ಹೌದು. ಮೊದಲು ತಬ್ಬಲಿತನ ಕಂಡರೂ ಅದರೊಳಗೆ 'ತಬ್ಬಲಿ' ಎಂಬ ಪ್ರೀತಿಪೂರ್ವಕವೂ ಇದೆ. ಇದು ಎರಡನೆಯ ಘಟಕಕ್ಕೆ ಚಂಗನೆ ನೆಗೆಯುತ್ತದೆ.
ನಿನ್ನ ಬಳೆಗಳ ನಾದ
ನಗುವ ತುಟಿ
ಬಳಸಿದ ತೋಳು
ಬಿಸಿ ಅಪ್ಪುಗೆ
ಮುದವಾದ ತಟ್ಟುವಿಕೆ
ಕಿಲಕಿಲ ನಗು
ಸಿಹಿ ಮುತ್ತುಗಳು
ವ್ಯಸನದಲೂ ಅರಳಿಸಿವೆ........
ಕವಿತೆ ಹೀಗೆ ಬೆಲೆಯುತ್ತದೆ. ಎರಡನೆಯ ಘಟಕದ ಪ್ರೀತಿಯ ಸಂಕೇತ ಹಾಗೂ ರೂಪಕಗಳು ವೈಯಕ್ತಿಕ ನೆಲೆಗೆ ತಂದು ಕೊಡುತ್ತವೆ. ಕವಿತೆಯ ಪೂರ್ವಸ್ಮೃತಿ 'ಕೊಡು; ಕವಿತೆಗೆ ಸದ್ದಿಲ್ಲದೆ ಅವಶ್ಯಕತೆಯನ್ನು ತಂದು ಉಕ್ಕಿಸಿದೆ. ಜೀವನವು ಕುಶಲದಿ ಕೂಡಿ ಹಗುರಾಗಿಸಿದೆ.' ಎಂಬ ಮಾತಿನೊಡನೆ ಈ ಕವಿತೆಯು ಮುಕ್ತಾಯಗೊಳ್ಳುತ್ತದೆ.
ಪ್ರೊ. ಸಿದ್ದು ಬಿ. ಯಾಪಲಪರವಿಯವರ ಕವಿತೆಗಳು ಬೇಗನೆ ಮೈದೆರೆಯುವುದಿಲ್ಲ. ಇಲ್ಲಿಯ ಕವಿತಾ ಶೈಲಿ ನಾರೀಕೇಳಪಾಕ. ಇದು ದ್ರಾಕ್ಷಾಪಾಕವೂ ಹೌದು. ಈ ಕವಿಯು ಎರಡು ಬಗೆಯ ಕಾವ್ಯ ಪಾಕವನ್ನು ಹುದುಗಿಸಬಲ್ಲರು. ಮೇಲೆ ಉದಾಹರಿಸಿದ 'ಸಂಗಾತಿ' ಕವಿತೆಯಲ್ಲೇ ಈ ಎರಡೂ ಶೈಲಿ ಇರುವುದನ್ನು ಗಮನಿಸಬಹುದು. ಮೊದಲನೆಯ ಘಟಕವು ನಾರೀಕೇಳಪಾಕ, ಎರಡನೆಯ ಘಟಕ ದ್ರಾಕ್ಷಾಪಾಕ. ಕವಿತೆಯ ವ್ಯಾಖ್ಯಾನಕ್ಕೆ ನಾನು ಬೇಕಾಗಿ ಎರಡು ಬಗೆಯ ಪಾಕಗಳ ಮಿಶ್ರಣ ಹೇಗಾಗಿದೆಯೆಂಬುದಕ್ಕೆ ಕಾವ್ಯಮೀಮಾಂಸೆಯ ಪರಿಕಲ್ಪನೆಯನ್ನು ಇಲ್ಲಿ ಬಳಸಿದ್ದೇನೆ. ಇಡೀ ಸಂಕಲನದ ಕವಿತೆಗಳು ನಾರೀಕೇಳಪಾಕ ವಾಗಿರುವುದೂ ಉಂಟು; ದ್ರಾಕ್ಷಾಪಾಕವಾಗಿರುವುದು ಉಂಟು. ಹಲವು ಕಡೆ ಒಂದರ ಮುಖ ಮತ್ತೊಂದು ಮುಖಕ್ಕೆ ಕೂಡಿಹಾಕಿಕೊಂಡಿರುವುದು ಉಂಟು. ಇದು ಕಾವ್ಯ ಶೈಲಿಯ ಪ್ರಮೇಯ. ಪ್ರಮಾಣಗಳನ್ನು ಒದಗಿಸಲು ಕವಿ ಎಲ್ಲೂ ತಿರುಗುವುದಿಲ್ಲ. ಅದಲು ತನ್ನ ಕವಿತೆಯ ಲೋಕದಿಂದಲೇ ಪ್ರತ್ಯಕ್ಷ ಸಾಕ್ಷ್ಯವನ್ನು ಒದಗಿಸಲು ಯತ್ನಿಸುತ್ತಾನೆ. ಇದು ಈ ಸಂಕಲನದ ಮಟ್ಟಿಗೆ ಒಂದು ಚೋದ್ಯವೇ ಸರಿ. ಕವಿಗೂ ಕವಿತೆಗೂ ಕವಿಯ ಲೋಕಕ್ಕೂ ಸಂಬಂಧಿಸಿದ ಮಾತೆಂದು ನಾನಂತೂ ಲಘುವಾಗಿ ಹೇಳಲಾರೆ. ಲಘುತ್ವದಿಂದ ಬಹುತ್ವದ ಕಡೆಗೆ ಸೆಳೆಯುವ ಸಂಚಲನ ಇಲ್ಲಿದೆ.
ಸಿದ್ದು ಯಾಪಲಪರವಿ ವೈಯಕ್ತಿಕ ನೆಲೆ ಮತ್ತು ಸಾರ್ವಜನಿಕ ನೆಲೆ ಎಂಬೆರಡು ಪಥಗಳಲ್ಲಿ ಸಂಚರಿಸುತ್ತಿದ್ದಾರೆ. ಅನೇಕಬಾರಿ ಇವೆರಡು ಒಮ್ಮುಖಗಳಾಗಿರುವುದೇ ಹೆಚ್ಚು. ಬದುಕು ಅರ್ಥವಾಗುವುದು ಇಮ್ಮುಖವಾದಾಗ ಅಲ್ಲ. ಅಲ್ಲಿ ಬದುಕಿನ ರಹಸ್ಯ ಕೋಣೆಗಳು ತೆರೆಯುವುದಿಲ್ಲ. ಇಮ್ಮುಖತೆಯ ಕವಿತೆಗೆ ಅರ್ಧಸತ್ಯದ ಎಳೆಗಳನ್ನು ಪ್ರದಾನ ಮಾಡುತ್ತದೆ. ಅದೇ ಜಾಗದಲ್ಲಿ ಒಮ್ಮುಖತೆಯು ಕವಿತೆಗೆ ಪೂರ್ಣ ಸತ್ಯದ ನೆಲೆಗಳನ್ನು ಕಾಣಿಸುವುವಂತೆ ಮಾಡುತ್ತದೆ. ಈ ಕವನಸಂಕಲನದ ಹಲವು ಕವಿತೆಗಳು ಇವೆರಡನ್ನೂ ಕೂಡಿಸಿಕೊಳ್ಳುವ ಬಗೆ ಹೇಗೆಂಬುದ್ನು ಚಿಂತಿಸುತ್ತದೆ. ಲೇಖಕ, ಕವಿ, ಸಾಹಿತಿ ಆದವನು ಇಂಥ ಅಗ್ನಿದಿವ್ಯದ ಕುಂಡದಿಂದ ಮೇಲೆರಬೇಕು. ಇದು ಮೊದಲಿಗೆ ತನ್ನನ್ನು ಸುಟ್ಟುಕೊಂಡು ಬೆಳಕು ನೀಡುವವನ ಪರಿ. ಈ ಗತಿಯು ಕವಿತೆಗೆ ಹೊಸ ಅರ್ಥದ ಪಳುಕುಗಳನ್ನು ತೊಡಿಸುತ್ತದೆ. ಸಿದ್ದು ಕವಿತೆಗೆ ಸೌಂದರ್ಯಾತ್ಮಕ ಆಭರಣಗಳನ್ನು ತೊಡಿಸುವುದಿಲ್ಲ. ಅಲ್ಲಿ ಚಿಂತನೆಯೇ ಮೇಲ್ಮೈಯಾಗುತ್ತದೆ. ಆಗ 'ಕಾವ್ಯ'ದ ಒಳಬನಿಯ ದನಿಯು ಕ್ಷೀಣಿಸುತ್ತದೆ. ಈ ಕವಿತೆಗಳ ಸಹಸ್ಪಂದನಕ್ಕೆ ಇರುವ ತೊಡಕು ಇದೊಂದೇ. ಕವಿತೆಯ ಲಯಗಳು ಸೂಕ್ಷ್ಮಗೊಳ್ಳಬೇಕು. ಗದ್ಯದ ಲಯಗಳನ್ನು ಪದ್ಯದ ಲಯಗಳಾಗಿ ನೋಡುವ ಉಪಕ್ರಮವೊಂದುಂಟುಷ್ಟೆ. ಇಂಥ 'ಲಯ'ಗಳನ್ನು ಹಿಡಿಯುವ ಕಡೆ ಸಿದ್ದು ಯತ್ನಿಸುತ್ತಾರೆ. ಆಗ ಚಂದದ ಸಾಲುಗಳನ್ನು ಕಾಣಬಹುದು. ಆದರೆ, ಕಾವ್ಯಕೌಶಲ್ಯವೇ ಸೌಂದರ್ಯ ಮತ್ತು ಚಿಂತನಾತ್ಮಕ ಅಂಶಗಳೆರಡನ್ನೂ ಒಟ್ಟಿಗೆ ಹಿಡಿಯುವ ಇರಾದೆಯನ್ನು ವ್ಯಕ್ತಪಡಿಸುವುದಿಲ್ಲ. ಅದು ಇನ್ನು ಮುಂದೆ ನಮ್ಮ ಕವಿ ಮಿತ್ರ ಸಿದ್ದು ಹಿಡಿಯಬೇಕಾದ ದಾರಿ. ಕಲೆ ಮತ್ತು ಚಿಂತನೆ ಸಮಪ್ರಮಾಣವಾಗಿ ಬೆರೆಯಬೇಕು. ಕೇವಲ ಸ್ಪೋಟಕವೊ, ಕೇವಲ ಚಿಂತನೆಯೊ, ಕೇವಲ ಸೌಂದರ್ಯವೊ ಕವಿತೆಗೆ ಜೀವಧಾತು ಒದಗಿಸಲಾರದು. ಇವೆಲ್ಲವೂ ಜೊತೆಜೊತೆಯಾಗಿ ಸಮಪ್ರಮಾಣದಲ್ಲಿ ಬೆರೆಯಬೇಕು. ಅಂಥ ಕಡೆ ಚಲಿಸಬಲ್ಲ ಶಕ್ತಿ ಈ ಕವಿಗಿದೆ ಎಂಬುದನ್ನು ಅನೇಕ ಕವಿತೆಗಳಲ್ಲಿ ತೋರಿಸಿಕೊಡುತ್ತಾರೆ. ಇದೊಂದು ಕಾವ್ಯಕಸುಬು, ಈ ಕಸಬುದಾರಿಕೆಗೆ ಮನಸ್ಸಿನ ಸ್ವಾಸ್ಥ್ಯ, ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯಗಳು ನೆರವಿಗೆ ಬರಬೇಕು. ಅದು ಬರಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ನಾನು ಕವಿತೆಗಳನ್ನು ಓದುತ್ತಿದ್ದಂತೆಲ್ಲಾ ಆಗಾಗ ಮೂಡಿದ ಅಭಿಪ್ರಾಯಗಳನ್ನು ಇಲ್ಲಿ ಹೇಳಿದ್ದೇನೆ. ಸದ್ಯದ ಕವಿತೆಯ ಲೋಕ ಹಿಡಿದಿರುವ ಹಾದಿಗೂ ಈ ಕವಿ ಹಿಡಿದಿರುವ ಹಾದಿಗೂ ಎಷ್ಟೋ ಭಿನ್ನತೆಗಳಿವೆ: ಮಾರ್ಗಾಂತರಗಳಿವೆ. ನಾನು ಅವುಗಳನ್ನು ಇಲ್ಲಿ ಚರ್ಚಿಸಿಲ್ಲ; ಚರ್ಚಿಸಲು ಹೋಗಿಲ್ಲ. ಅದು ಬೇರೊಂದು ಕಡೆ ನಮ್ಮನ್ನು ಕರೆದೊಯ್ಯುತ್ತದೆ. ಪ್ರಾಚೀನ ಅಥರ್ವಣ ವೇದದ ಕವಿಯೊಬ್ಬ ಹೇಳಿದ ಮಾತಿನೊಂದಿಗೆ ಮುನ್ನುಡಿಯನ್ನು ಮುಗಿಸುತ್ತೇನೆ-
'ಕಾವ್ಯಂ ನ ಮಮಾರ, ನ ಜೀರ್ಯತಿ'
(ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ)
ಮೇ 20, 2007 -ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಹಂಪಿ

Sunday, May 16, 2010

ಕೃತಿ ವಿಮರ್ಶೆ

ಎತ್ತಣ ಮಾಮರ ಎತ್ತಣ ಕೋಗಿಲೆ
ಇಂಗ್ಲೆಂಡ್ ಪ್ರವಾಸ ಕಥನ
ಪ್ರವಾಸ ಸಾಹಿತ್ಯಕ್ಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಸೇರ್ಪಡೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿರಳವಾಗಿರುವ ಪ್ರವಾಸ ಕಥನಕ್ಕೆ ಸಿದ್ದು ಯಾಪಲಪರವಿಯವರ ಇಂಗ್ಲೆಂಡ್ ಪ್ರವಾಸ ಕಥನ "ಎತ್ತಣ ಮಾಮರ ಎತ್ತಣ ಕೋಗಿಲೆ" ಅಪರೂಪದ ಕೊಡುಗೆಯಾಗಿದೆ.
ಗದಗದ ಸಾಂಗತ್ಯ ಪ್ರಕಾಶನ ದಡಿಯಲ್ಲಿ ಪ್ರಕಟಗೊಂಡಿರುವ ಈ ಕೃತಿ ಒಬ್ಬ ಪ್ರಬುದ್ಧ ಲೇಖಕನ ಕೈಚಳಕದಿಂದ ಹೊರಬಂದ ವಿಶಿಷ್ಟ ಕೃತಿಯಾಗಿ ಹೊರ ಹೊಮ್ಮಿದೆ.
ರೈಲನ್ನೇ ನೋಡದ ಊರಿನಿಂದ ಬಂದ ಸಿದ್ದು ಯಾಪಲಪರವಿಯವರಿಗೆ ವಿಮಾನ ಯಾನ ನೀಡಿದ ಖುಷಿಯಂತೆ ಈ ಕೃತಿಯ 37 ಅಂಕಣಗಳನ್ನು ಓದುವ ಓದುಗನಿಗೆ ಎಲ್ಲಿಯೂ ಬೇಸರವಾಗದಂತೆ ಪುಸ್ತಕ ಪ್ರವಾಸ ಕಥನದ ರಸಾನುಭೂತಿಯನ್ನು ನೀಡುವಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಇಂಗ್ಲೆಂಡಿನ ಕಣ್ಣಾಗಿರುವ ಲಂಡನ್ 'ಐ' ನಂತೆ ಈ ಕೃತಿಯು 141 ಪುಟಗಳಲ್ಲಿಯೇ ಇಂಗ್ಲೆಂಡಿನ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುತ್ತದೆ. ಅಲ್ಲಿಯ ಜನರ ಶಿಸ್ತು ಬದ್ದ ಜೀವನ, ಸಮಯ ಪ್ರಜ್ಞೆ, ಮದುವೆಯಿಲ್ಲದ ದಾಂಪತ್ಯ, ಅಲ್ಲಿನ ಆಕ್ಸಫರ್ಡ ವಿಶ್ವವಿದ್ಯಾಲಯದ ಸಮಗ್ರ ಚಿತ್ರಣದ ಜೊತೆಗೆ ಅಲ್ಲಿನ ಜನರ ಅಧ್ಯಯನ ಶೀಲತೆಯ ತುಡಿತ ಮಿಡಿತಗಳನ್ನು ಕುರಿತಾಗಿ ವಿಶದವಾಗಿ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.
ಪ್ರಜಾ ಸತ್ತೆಯೊಂದಿಗೆ ರಾಜಸತ್ತೆಯ ಪಳಿಯುಳಿಕೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿರುವ ಬಕಿಂಗ್ ಹ್ಯಾಮ್ ಅರಮನೆ, ಅಲ್ಲಿಯ ಜನ ಪ್ರತಿನಿಧಿಗಳ " ಹೌಸ್ ಆಫ್ ಕಾಮಾನ್ಸ್" ನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಐರ್ಲೆಂಡಿನ ಕಣಿವೆಗಳಲ್ಲಿ ಓದುಗನನ್ನು ಅಲೆಸಿ, ಮಹಾಕವಿ ಶೇಕ್ಸಪಿಯರನ ಮಹಾಮನೆಯನ್ನು ದರ್ಶಿಸಿದ ದಿವ್ಯಾನುಭವವನ್ನು ಲೇಖಕರು ತಮ್ಮ ಕೃತಿಯ ಮೂಲಕ ನೀಡುತ್ತಾರೆ. ಪಾಶ್ಚಾತ್ಯರ ವೈಭವೋಪೇತ ಸ್ವೇಚ್ಚಾ ಜೀವನವನ್ನು ಆದರ್ಶವೆಂದು, ಮಾದರಿಯೆಂದು ಭಾವಿಸುವ ಭಾರತೀಯನಿಗೆ ಪಾಶ್ಚಾತ್ಯರ ಸಮಯ ಪ್ರಜ್ಞೆ ಕರ್ತವ್ಯ ನಿಷ್ಠೆ, ಅಧ್ಯಯನಶೀಲತೆ ಹಪಾಹಪಿ ಇಲ್ಲದಿರುವ ಬಗ್ಗ್ಎ ಸಿದ್ದು ಅವರು ಗಂಭೀರವಾಗಿ ಆರೋಪಿಸುತ್ತಾರೆ.
ಲಿಂಗ ಭೇದವಿಲ್ಲದೆ ಅಂಗ ಸಮಭೋಗದ ಪರಿ ಮತ್ತು ಸಲಿಂಗಕಾಮಗಳ ತಲ್ಲಣವನ್ನು ಆತಂಕದಿಂದ ಎದುರುಗೊಳ್ಳುವ ಲೇಖಕರು, ಇಂಗ್ಲೆಂಡಿನ ಯುವ ಸಮುದಾಯ ಹೆಚ್ಚು ಜವಾಬ್ದಾರಿಯಿಲ್ಲದೆ ಪಡ್ಡೆ ಹುಡುಗರಂತೆ ಅಲೆಯುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.
ಎತ್ತಣ ಮಾಮರ ಎತ್ತಣ ಕೋಗಿಲೆಯ ಮೂಲಕ ಇಂಗ್ಲೆಂಡಿನ ದರ್ಶನ ಮಾಡಿಸುವ ಲೇಖಕರು ಅಲ್ಲಿನ ಜನರು ಯಾವುದಾದರು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ ಒಂದು ಕ್ಷಣವನ್ನು ವ್ಯರ್ಥ ಕಳೆಯದೆ ಅಧ್ಯಯನ, ಇಮೇಲ್ ಮೂಲಕ ಜಗತ್ತಿನ ವಿವಿಧ ವಿಷಯಗಳನ್ನು ಅರಿಯಬಲ್ಲವರಾಗಿದ್ದಾರೆ. ಇಲ್ಲಿ ಹರಟೆಯಲ್ಲಿ ತೊಡಗುವ ಜನ ಬಹಳ ಕಡಿಮೆ ಎನ್ನುವ ಮೂಲಕ ಆ ಜನರು ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸುತ್ತಾರೆ.
ಒಟ್ಟಾರೆ ಈ ಕೃತಿ ಇಂಗ್ಲೆಂಡ್ ಪ್ರವಾಸ ಮಾಡಬಯಸುವವರ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ 16 ವರ್ಣ ಚಿತ್ರಗಳನ್ನು ಒಳಗೊಂಡ ಈ ಪುಸ್ತಕವು ಲಂಡನ್ ಬ್ರಿಡ್ಜನ ಆಕರ್ಷಕ ಮುಖಪುಟ ಹೊಂದಿದೆ.
- ನಿಷ್ಠಿ ರುದ್ರಪ್ಪ
ಅಧ್ಯಕ್ಷರು ಜಿಲ್ಲಾ ಕಸಾಪ, ಬಳ್ಲಾರಿ.

ಆತ್ಮಹತ್ಯೆ ಕೇವಲ ಮಹಾಪಾಪವಷ್ಟೇ ಅಲ್ಲ

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಎಂಬ ಭೂತ ನಮ್ಮ ತಲೆಮಾರನ್ನು ಕಾಡುತ್ತಿದೆ. ಬದುಕಿನ ಏರಿಳಿತಗಳನ್ನು ಎದುರಿಸದೇ ಯಾವುದೇ ಒಂದು ರೀತಿಯ ಭಯದಿಂದ ಸಾವಿಗೆ ಶರಣಾಗುತ್ತಾರೆ. ಆತ್ಮಹತ್ಯೆ ಮಹಾಪಾಪ ಎಂದು ಧರ್ಮವೇನೋ ಹೇಳುತ್ತದೆ. ಇಂದು ದೇವರು ಮತ್ತು ಧರ್ಮದ ಮೂಲಕ ಜನರನ್ನು ಸರಿದಾರಿಗೆ ತರುವುದು ಅಸಾಧ್ಯವಾಗಿದೆ. ಯಾಕೆಂದರೆ ದೇವರು ಧರ್ಮದ ಹೆಸರಿನಲ್ಲಿ ಪ್ರವಚನ ಮಾಡುವವರು ತಮ್ಮ ವಿವಿಧ ಲೀಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಇಂದಿನ ಯುವಕರಿಗೆ ನಮ್ಮ ಪ್ರೀತಿಯ ಮಾತುಗಳ ಮೂಲಕ ಆತ್ಮವಿಶ್ವಾಸ ತುಂಬ ಬೇಕಾಗಿದೆ. ಪರಿಸರ, ಪಾಲಕರು, ಶೈಕ್ಷಣಿಕ ಕೆಂದ್ರಗಳು ಮಕ್ಕಳಮೇಲೆ ತೀವ್ರ ಪರಿಣಾಮ ಬೀರುವ ಅಂಶಗಳು ಬಾಲ್ಯದಲ್ಲಿ ಬೆಳೆದು ಬಂದ ಪರಿಸರ, ಪಾಲಕರ ಧೋರಣೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಕನಿಷ್ಟ ಒಮ್ಮೆಯಾದರೂ, ಹತಾಶರಾದಾಗ ಆತ್ಮಹತ್ಯಾಭಾವ ಸುಳಿಯುತ್ತದೆಯೆಂತೆ. ಒಮ್ಮೊಮ್ಮೆ ತೀರಾ ಸಣ್ಣ ಕಾರಣಕ್ಕಾಗಿ ಕೂಡಾ. ಬಹಳ ಪ್ರೀತಿಸುವ ಪಾಲಕರು ಬೈದರೆ ಸಾಯಬೇಕು ಅನಿಸುತ್ತದೆ. ಅತೀಯಾಗಿ ಪ್ರೀತಿಸುವಾಗಲೂ ಒಮ್ಮೊಮ್ಮೆ ಬೈಯ್ಯುವ ಪ್ರಸಂಗ ಬರುತ್ತದೆ ಎಂಬ ತಿಳುವಳಿಕೆ ನೀಡಬೇಕು. ಉಡದಂತೆ, ಕರಡಿಯಂತೆ ತಬ್ಬಿ, ಮುದ್ದಾಡಿ ಪ್ರೀತಿಸುವ ನಾವು ಸಹನೆ ಕಳೆದುಕೊಂಡಾಗ ಹುಲಿಯಂತೆ ಅರಚುತ್ತೇವೆ. ಪ್ರೀತಿಯ ವಿಷಯದಲ್ಲಿ ಈ ರೀತಿಯ ವೈರುಧ್ಯ ಒಳ್ಳೆಯದಲ್ಲ. ಎಲ್ಲದರಲ್ಲೂ balance ಬೇಕು.
ಕಾಲೇಜಿನ ಯುವಕರನ್ನು ಸಂದರ್ಶಿಸಿ counselling ಮಾಡುವಾಗ ಅವರಲ್ಲಿನ ಒತ್ತಡ ಗೊತ್ತಾಗುತ್ತದೆ. ತುಂಬಾ fees ಕೊಟ್ಟು ದೊಡ್ಡ college ಗೆ ಪ್ರವೇಶ ಕೊಡಿಸುತ್ತಾರೆ. ಓಡಾಡಲು bike, ಮಜ ಮಾಡಲು mobile ಕೊಟ್ಟು ಚೆನ್ನಾಗಿ ಅಂಕಗಳಿಸಲು ಒತ್ತಡ ಹೇರುತ್ತಾರೆ. ಈರೀತಿಯ ಒತ್ತಡ ಹೇರುವ ಪಾಲಕರು ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ತಿಳಿದಿರುವುದಿಲ್ಲ. ಕೇವಲ ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಅವರು doctor ಆಗಲಿ engineer ಆಗಲಿ ಎಂದು ಬಯಸುತ್ತಾರೆಯೇ ಹೊರತು ಮಕ್ಕಳ ಆಸಕ್ತಿಯನ್ನು ಲೆಕ್ಕಿಸುವುದೇ ಇಲ್ಲ. ಕಾಲೇಜಿನಲ್ಲಿ classes regular ಆಗಿ ನಡೆಯುತ್ತಿದ್ದರೂ, ಹೆಚ್ಚು perfect ಆಗಲಿ ಎನ್ನುವ ಕಾರಣಕ್ಕೆ tution ಗೆ ಅಲೆದಾಡಿಸುತ್ತಾರೆ. ಹೀಗೆ ಹತ್ತು ಹಲವು ಕಾರಣಗಳನ್ನು ಯುವಕರು ತೋಡಿಕೊಳ್ಳುತ್ತಾರೆ.
ಇನ್ನು ದಡ್ಡ ವಿದ್ಯಾರ್ಥಿಗಳ ಕಥೆಯೇ ಬೇರೆ science, maths ಅರ್ಥವಾಗುತ್ತಿರುವುದಿಲ್ಲ. science ಹಚ್ಚಲು ಒತ್ತಾಯಿಸಿ, ನಂತರ ವಿಫಲರಾದಾಗ ಪಾಲಕರು ಕೇಳದಿದ್ದರೂ ಆತಂಕಕ್ಕೆ ಒಳಗಾಗುತ್ತಾರೆ. ಗ್ರಹಿಕೆಯ ವಿಫಲತೆ ಜಿಗುಪ್ಸೆಯನ್ನು ತರುತ್ತದೆ. ಈ pass,fail ಅನ್ನುವುದು ಬಾಲ್ಯದಲ್ಲಿ ಮಹತ್ವದ ಸಂಗತಿ ಎನಿಸುವುದಿಲ್ಲ. ಕಾಲೇಜು ಪ್ರವೇಶ ಪಡೆದಾಗ ಗಂಭೀರ ಎನಿಸುತ್ತದೆ. ನಾನು trainer. counseller ಆಗಿ ಬೆಳೆಯಲು ನನ್ನಿ ವೈಯಕ್ತಿಕ ಜೀವನದ ಕಹಿ ಅನುಭವಗಳೇ ಕಾರಣ. ಹಾಗೆಯೇ ವರ್ತಮಾನದ ಯಶಸ್ಸು ಕೂಡಾ ನನ್ನ ಹುಮ್ಮಸ್ಸನ್ನು ಹೆಚ್ಚಿಸಿದೆ. ನನ್ನ ಬದುಕಿನಲ್ಲಿ ಮುರುಬಾರಿ PUC ಫೇಲ್ ಆದಾಗ, ಒಂದು ಮಿಥ್ಯ ಆರೋಪ ಬಂದಾಗ, ಮೂರನೆಯದು ನೌಕರಿ ಸಿಕ್ಕಮೇಲೆ ಬೇಗ grant ಆಗದಿದ್ದಾಗ. ಮೂರುಬಾರಿ ನನ್ನ ಮನಸ್ಸಿನಲ್ಲಿ ಸುಳಿದ ದುರ್ಬಲ ಆಲೋಚನೆಗಳನ್ನು ನೆನೆದರೆ ಅಯ್ಯೋ ಎನಿಸುತ್ತದೆ. ಆಗ ನಮಗೆ ಧೈರ್ಯ ಹೇಳುವ ಜನರು ನಮ್ಮೊಂದಿಗಿರದಿದ್ದರೂ ಬದುಕಿನ ಆಶಾವಾದ ನನ್ನನ್ನು ಬದುಕಿಸಿತು. ಪರೀಕ್ಷೆ ಎಂದರೆ ಹೆದರುತ್ತಿದ್ದ ನಾನು ಎಷ್ಟೇ ಓದಿ perfect ಆದರೂ exam hallನಲ್ಲಿ ನೆನಪು ಹೆದರಿಕೆಯಿಂದಾಗಿ ಕೈಕೊಡುತ್ತಿತ್ತು. PUC ಫೇಲ ಆದಾಗ ಹಾಗೇಯೇ ಆಯಿತು. ಕಷ್ಟ ಪಟ್ಟು ಓದಿದ್ದೇ ನನಗೆ ಇಷ್ಟವಾದ psychology ವಿಷಯದಲ್ಲಿ exam fear ಕಾರಣದಿಂದ ಫೇಲ್ ಆದೆ. ಆಘಾತ ತಡೆದುಕೊಳ್ಳಲಾಗಲಿಲ್ಲ. ಸತ್ತೇ ಹೋಗಬೇಕು ಎನಿಸಿತು. ಗೆಳೆಯರು ಸಮಾಧಾನ ನೀಡಿದರೂ ತಡೆದುಕೊಳ್ಳಲಾಗಲಿಲ್ಲ. ಬಂಧುಗಳು ಹಾಸ್ಯ ಮಾಡಲು ಶುರು ಮಾಡಿದರು. ಮುಂದೆ ಅದನ್ನೇ ಸವಾಲಾಗಿ ಸ್ವೀಕರಿಸಿ ನನಗೆ ಅಸಾಧ್ಯವಾದ eglish, psychology ಓದಿ success ಆದೆ. ಒಮ್ಮೆ ಸಾಯುವ ಭ್ರಮೆಯಿಂದ ನೀವು ಹೊರಬಂದರೆ ಅನೇಕ ಸಂತಸದ ಸುಖದ ಕ್ಷಣಗಳು ನಿಮಗೆ ಸಿಗುತ್ತವೆ. ಯಾವುದಾದರೂ ಒಂದು ಕ್ಷೇತ್ರದ, ವೈಫಲ್ಯ ಇಡೀ ಬದುಕಿನ ವೈಫಲ್ಯವಲ್ಲ. ಸತ್ತವರ ಬಾಯಲ್ಲಿ ಮಣ್ಣು ಎಂದು ಹಳ್ಳಿಯಲ್ಲಿ ಬೈಯುತ್ತಾರೆ. ಅದು ಅರ್ಥಪೂರ್ಣವಾಗಿದೆ. ಸತ್ತವರು ಮಣ್ಣು ಸೇರಿದರೆ, ಇದ್ದವರು ಮಜಾ ಮಾಡುತ್ತಾರೆ. ಸತ್ತು ಬದುಕಿಗೆ fullstop ಇಡುವುದಕ್ಕಿಂತ, ಇದ್ದು ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಬೇಕು. ಇರುವ ಆಯುಷ್ಯವೇ ಅನುಭವಿಸಲು, ನೋಡಲು, ಆಲಿಸಲು, ಸಂಚರಿಸಲು ಸಾಲದು ಎನಿಸುವಾಗ ಸಾವು ಬರುವ ಮುಂಚೆಯೇ ಸತ್ತರೆ ಏನು ಲಾಭ? ಎಂಬ ಪ್ರಶ್ನೆಯನ್ನು ಸಾಯಬೇಕು ಅನಿಸಿದಾಗ ನಾವೇ ಕೇಳಿಕೊಳ್ಳಬೇಕು.
10th ಹಾಗೂ PUC ಯಲ್ಲಿ fail ಆದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಪದವಿ ವಿದ್ಯಾರ್ಥಿಗಳು filure ನ್ನು sportive ಆಗಿ ತೆಗೆದುಕೊಳ್ಳುತ್ತಾರೆ. ಈ ಹಂತದಲ್ಲಿ ಪಾಲಕರು ತುಂಬಾ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಮಕ್ಕಳನ್ನು handle ಮಾಡಬೇಕು.
ಪರೀಕ್ಷೆಗೆ ಮುನ್ನವೇ ಮಕ್ಕಳ performance ಅರಿತು fail ಆಗುವ ಲಕ್ಷಣ ಕಂಡು ಬಂದರೆ ಧೈರ್ಯ ಹೇಳಬೇಕು. Fail ಆಗಬೇಡ ಎಂಬ ಒತ್ತಡ ಹೇರಬಾರದು. ಮಕ್ಕಳ ಮುಂದೆ negative ಸಂಗತಿಗಳನ್ನು ವೈಭವಿಕರಿಸಿ, ಬೇರೆಯವರೊಂದಿಗೆ compare ಮಾಡಿ ಮಾತನಾಡಬಾರದು. Result ಬಂದಾಗ ಜೊತೆಯಲ್ಲಿರಬೇಕು. ಒಂಟಿಯಾಗಿ ಬಿಡಬಾರದು. ನೋವಿನ ಗಳಿಗೆಗಳಲ್ಲಿ ಒಂಟಿತನ ಹೆಚ್ಚು ಅಪಾಯಕಾರಿ. ಒಂಟಿಯಾಗಿ ನರಳುವುದಕ್ಕಿಂತ ಮುಕ್ತವಾಗಿ ಹೊರಬೀಳಬೇಕು. ಸೋಲಿಗೆ ಕಾರಣಗಳನ್ನು ಗೆಳೆಯರೊಂದಿಗೆ, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು. ಸಿನೆಮಾ ನೋಡಿ, ಸಂಗೀತ ಕೇಳಿ, ಪ್ರವಾಸ ಹೋಗಿ, ಪ್ರೀತಿತೋರುವ ಬಂಧುಗಳ ಮನೆಗೆ ಹೋಗಿ ನೋವನ್ನು ಮರೆಯಬೇಕು.
conselling ಕೇಂದ್ರಗಳಿಗೆ ಭೇಟಿ ಕೊಟ್ಟು ಮನದ ನೋವನ್ನು ಹೇಳಿಕೊಳ್ಳಬೇಕು ಗಾಧೀಜಿ, ವಿವೇಕಾನಂದರ ಜೀವನ ಚರಿತ್ರೆಗಳನ್ನು ಓದಲೇಬೇಕು.
ಅದಕ್ಕಿಂತ ಮುಖ್ಯವಾಗಿ ನಮ್ಮ ಬದುಕು ನಮಗಾಗಿ ಎನ್ನುವ ಭಾವನೆ ಜಾಗೃತವಾಗಿ ನಾವು ನಮಗಾಗಿ ಬದುಕಲೇಬೇಕು. ಸಾವು ಕಣ್ಮುಂದೆ ಬಂದರೆ ದಯವಿಟ್ಟು ನನ್ನೊಂದಿಗೆ ಮಾತನಾಡಿ ಪರಿಹಾರ ಹೇಳುತ್ತೇನೆ.

Saturday, May 15, 2010

ಕರ್ನಾಟಕದ ಶರಣರ ಮೇಲೆ ಆಂದ್ರದ ಆರಾಧ್ಯರ ಸವಾರಿ

ಇತ್ತೀಚೆಗೆ ಶಿವಯೋಗ ಮಂದಿರದಲ್ಲಿ ಈ ಶತಮಾನದ ಬಹುದೊಡ್ಡ ಯಶಸ್ಚಿ ಸಮಾರಂಭವೊಂದು ಜರುಗಿತು. ಇದರ ಫಲವಾಗಿ 'ಪ್ರಜಾವಾಣಿ' ಪತ್ರಿಕೆಯಲ್ಲಿ ಉದ್ಭವಿಸಿದ ಸಂವಾದದಲ್ಲಿ ಪಂಚಾಚಾರ್ಯರನ್ನು ವಿರೋಧಿಸಿ ಎಲ್ಲ ಸಮಾಜದ-ಸ್ತರದವರು ಬರೆದರೆ, ಅವರ ಪರವಾಗಿ ಬರೆದವರು ಕೇವಲ ವೀರಶೈವ ವಿದ್ವಾಂಸ ಜಂಗಮರೆಂಬುದು ಗಮನಿಸಬೇಕಾದ ಅಂಶವಾಗಿದೆ.
12 ನೆಯ ಶತಮಾನದ ಶರಣ ಚಳುವಳಿಯೆಂಬ ಕುದಿಯುವ ಪಾತ್ರೆಯಲ್ಲಿ ಅನೇಕ ಮತ ಪಂಥಗಳು ಕರಗಿ ಹೋದವು. ಬಳಿಕ ಅದರ ಒಡಲಿನಿಂದ ಶರಣ ಸಿದ್ಧಾಂತದ ಪ್ರಸಾರಕ- ಪ್ರತಿನಿಧಿಗಳೆಂಬಂತೆ ಕರ್ನಾಟಕದ ಹಳ್ಳಿ - ಪಟ್ಟಣಗಳಲ್ಲಿ ಶರಣ ಜಂಗಮರು ತಲೆಯೆತ್ತಿ ನಿಂತರು. ಇಂದಿಗೂ ಅವರ ಮಠಗಳಲ್ಲಿರುವ ಕನ್ನಡ ಸಂಸ್ಕೃತ ತಾಳೆ ಗರಿಗ್ರಂಥ, ಕಾಗದ ಪತ್ರಗಳು 'ಶ್ರೀ ಗುರು ಬಸವಲಿಂಗಾಯ ನಮ:' ಎಂಬ ಒಕ್ಕಣಿಕೆಯಿಂದಲೇ ಆರಂಭವಾಗಿರುವುದು, ಷಡಕ್ಷರದೇವ, ಬಾಳೆಹಳ್ಳಿ ಪೀಠದ ಕುಮಾರ ಚೆನ್ನಬಸವ ಮೊದಲು ಮಾಡಿ ಎಲ್ಲ ಗುರು ವರ್ಗದ ಮಠಾಧೀಶರು ಹೆಚ್ಚಾಗಿ ಶರಣರನ್ನೇ ಕುರಿತು ಸಾಹಿತ್ಯ ಬರೆದುದು ಇದಕ್ಕೆ ನಿದರ್ಶನ.
ಈ ಬಸವ ನಿಷ್ಠ ಧೋರಣೆ ಮುಂದುವರೆಯುತ್ತಿದ್ದಂತೆಯೇ ವಿಜಯನಗರ ಸಾಮ್ರಾಜ್ಯ ಸಂದರ್ಭದಲ್ಲಿ ಹಂಪಿ ನೆರೆಯ ಆಂದ್ರದ ಆರಾಧ್ಯ ಜಂಗಮರು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ ಪ್ರವೇಶಿಸಿ, ಬಳಿಕ ವಿಜಯ ನಗರ ಮುಂದುವರಿಕೆಯಾದ ಕೆಳದಿ, ಮೈಸೂರು ರಾಜ್ಯಗಳಲ್ಲಿ ಶಾಶ್ವತ ನೆಲೆನಿಂತರು. ಇದರಿಂದಾಗಿ ನಮ್ಮ ನಾಡಿನಲ್ಲಿ ಶರಣ ಜಂಗಮರು, ಆರಾಧ್ಯ ಜಂಗಮರೆಂಬ ಎರಡು ಸಮಾಜಗಳು ಅಸ್ತಿತ್ವಕ್ಕೆ ಬಂದವು. ಇಬ್ಬರ ಎದೆಯ ಮೇಲೆ ಲಿಂಗವಿರುವುದು, ಇವೆರಡೂ ಪಕ್ಷಗಳು ಒಂದೇ ಎಂಬ ಭ್ರಮೆ ಹುಟ್ಟಿಸಿತು. ನಿಜಸ್ಥಿತಿಯೆಂದರೆ, ಶರಣ ಜಂಗಮರ ಎದೆಯ ಮೇಲಿನದು ತನ್ನೊಳಗಿನ ಆತ್ಮಲಿಂಗದ ಪ್ರತೀಕವಾದರೆ, ಆರಾಧ್ಯ ಜಂಗಮರ ಎದೆಯ ಮೇಲಿನದು ದೇವಾಲಯದೊಳಗಿನ ಸ್ಥಾವರಂಲಿಂಗದ ಸಣ್ಣ ಪ್ರತೀಕ. ಪ್ರವಾಸ ಪ್ರಸಂಗದಲ್ಲಿ ಮಾರ್ಗ ಮಧ್ಯದ ಪೂಜೆಗಾಗಿ ಅದನ್ನು ಕೊರಳಿಗೋ, ತೋಳಿಗೋ ಕಟ್ಟಿಕೊಂಡು ಹೋಗುತ್ತಿದ್ದ ಅವರು, ಪ್ರವಾಸ ಮುಗಿದೊಡನೆ ಬಿಚ್ಚಿ ಮತ್ತೆ ಮನೆಯ ಜಗುಲಿಯ ಮೇಲಿಡುತ್ತಿದ್ದರು. ಅಂದರೆ ಇವರಿಗೆ ಜನಿವಾರ ಕಡ್ಡಾಯ, ಲಿಂಗ ಐಚ್ಛಿಕವಾಗಿದ್ದಿತು.
ಕರ್ನಾಟಕಕ್ಕೆ ಕಾಲಿಟ್ಟ ಇಂಥವರಲ್ಲಿ ಕೆಲವರು ಇಲ್ಲಿಯ ಶರಣ ಜಂಗಮರೊಂದಿಗೆ ಹೊಂದಿಕೊಂಡು ಬಾಳುವ ಸಲುವಾಗಿ ತಮ್ಮ ಕಡ್ಡಾಯ ಜನಿವಾರದ ಜೊತೆ ಐಚ್ಛಿಕ ಲಿಂಗವನ್ನೂ ಕಡ್ಡಾಯವಾಗಿ ಕಟ್ಟಿಕೊಂಡರೆ, ಮುಂದಿನ ದಿನಗಳಲ್ಲಿ ಇನ್ನೂ ಹೊಂದಿಕೊಂಡು ಬಾಳುವ ಸಲುವಾಗಿ ಜನಿವಾರ ತ್ಯೆಜಿಸಿ, ಎದೆಯ ಮೇಲೆ ಲಿಂಗವೊಂದನ್ನೇ ಉಳಿಸಿಕೊಂಡರು. ಇಂಥ ಎರಡೂ ಬಗೆಯ ಆರಾಧ್ಯ ಜಂಗಮರು (ಇವರ ಮನೆಯಲ್ಲಿ ತೆಲಗು ಜೀವಂತವಿದೆ) ಮೈಸೂರು ಪ್ರದೇಶದಲ್ಲಿ ಈಗಲೂ ಇದ್ದಾರೆ. ಇವರಲ್ಲಿ ಲಿಂಗವನ್ನು ಮಾತ್ರ ಉಳಿಸಿಕೊಂಡ ಆರಾಧ್ಯ ಜಂಗಮರು ತಮ್ಮ ಸಂಪ್ರದಾಯಿಕ ವೇದಘೋಷ, ಹೋಮ ಹವನ, ಸಂಸ್ಕೃತ ಧರ್ಮ ಗ್ರಂಥ, ಪರಂಪರೆಯ ಸುಳ್ಳು ಪ್ರಾಚೀನತೆ ಇತ್ಯಾದಿಗಳನ್ನು ಮುಂದೊಡ್ಡಿ, ಶರಣ ಜಂಗಮರಲ್ಲಿ ಹುಸಿಪ್ರತಿಷ್ಠೆಯ ಭ್ರಮೆ ಹುಟ್ಟಿಸಿದರು. 12ನೆಯ ಶತಮಾನದಲ್ಲಿ ಕಳೆದುಕೊಂಡಿದ್ದ ನಕುಲೀಶ, ಪಾಶುಪತ, ಮಹಾವ್ರತಿ, ಶುದ್ಧಶೈವಗಳೆಂಬ ನಾಲ್ಕುಶೈವಗಳ ಮರುಹುಟ್ಟು ಎಂಬಂತೆ ಹೊಸದಾಗಿ ನಾಲ್ಕು ಆಚಾರ್ಯ ಪೀಠಗಳನ್ನು ಕಲ್ಪಿಸಿ, ಶರಣ ಜಂಗಮರ ಮಠಗಳನ್ನು ಹಂಚಿಕೊಂಡು ಹೊಸಬಗೆಯ ಮಠೀಯ ವ್ಯವಸ್ಥೆಯನ್ನು ರೂಢಿಸಿದರು.
ಇವರು ಕಲ್ಪಿಸಿದ ರೇಣುಕಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ 'ಲಿಂಗಯಜ್ಞೋಪವೀತಿನೇ ನಮ:' ಎಂಬ, ಮರುಳಾರಾಧ್ಯನ ನೂರೆಂಟು ನಾಮಾವಳಿಯಲ್ಲಿರುವ 'ಶಿಖಾಯಜ್ಞೋಪವೀತಿನೇ ನಮ:' ಎಂಬ ವಾಕ್ಯಗಳನ್ನು ನೋಡಿದರೆ ಯಜ್ಞೋಪವೀತ, ಲಿಂಗ, ಜುಟ್ಟು ಮನ್ನಿಸುವ ಇವರಿಗೂ ಕೇವಲ ಇಷ್ಟಲಿಂಗಧಾರಿಗಳಾದ ಶರಣ ಜಂಗಮರಿಗೂ ಸಂಬಂಧವಿಲ್ಲವೆಂದು ಸ್ಪಷ್ಟವಾಗುತ್ತದೆ.
1606ರ ಗುಮ್ಮಳಾಪುರ ಶಾಸನವು 'ಭಾರದ್ವಾಜ ಗೋತ್ರದ ಪಡಿವಿಡಿ ವರ್ಗದ ಕೊಲ್ಲಿಪಾಕೆ ರೇವಣ ಸಿದ್ಧೇಶ್ವರ ಸಂಪ್ರದಾಯದವರಾದ ಗುಮ್ಮಳಾಪುರ ಸಿಂಹಾಸನ ಕರ್ತರಾದ' ಎಂದು ನಂಜಯ್ಯ ದೇವರನ್ನು ವರ್ಣಿಸಿದೆ. ಹೀಗೆಯೇ ಈ ಆರಾಧ್ಯ ಜಂಗಮರಿಗೆ ಭಾರದ್ವಾಜ, ಅತ್ರಿ ಮೊದಲಾದ ಗೊತ್ರಗಳು ಶಾಸನಗಳಲ್ಲಿ 18ನೆಯ ಶತಮಾನದವರೆಗೂ ಕಂಡುಬರುತ್ತಿದ್ದು, ಇತ್ತೀಚಿಗೆ ಇವುಗಳಿಗೆ ಬದಲು ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಗೋತ್ರಗಳನ್ನು ಕಲ್ಪಿಸಿಕೊಂಡಿದ್ದಾರೆ. ಇಂಥ ವೈದಿಕ ಗೊತ್ರ ವಾದಿಗಳನ್ನು 'ಗೋತ್ರ ಮಾದಾರ ಚೆನ್ನಯ್ಯನೆಂದು ಹೇಳಿರಯ್ಯ' ಎಂಬ ನಿಲುವಿನ ಲಿಂಗಾಯತರೆನ್ನಬಹುದೇ? ಈ ಬ್ರಾಹ್ಮಣ್ಯಕಾರಣವಾಗಿಯೇ ಇವರು ಸೊಲ್ಲಾಪುರ ವಾರದ ಮಲ್ಲಪ್ಪನವರ ಹಣ ಬಳಸಿಕೊಂಡು, ತಮ್ಮ ಪ್ರಕಟಣೆಗಳಿಗೆ 'ಲಿಂಗಿ ಬ್ರಾಹ್ಮಣ ಗ್ರಂಥಮಾಲೆ' ಎಂಬ ಹೆಸರಿಟ್ಟಿದ್ದರು. ಇವರು ಶರಣ ಜಂಗಮರೊಂದಿಗಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿಕೊಳ್ಳಲು, ತಮ್ಮ ಪ್ರಾಚೀನತೆ ಸಾಧಿಸಿಕೊಳ್ಳಲು ಚತುರಾಚಾರ್ಯರ ಹೆಸರು ಸೇರಿಸಿ 3-4 ಜನ ಅಪ್ರಸಿದ್ಧ ಶರಣರ ಹೆರಿನಲ್ಲಿ 4-5 ಕೃತಕ-ನೀರಸ ವಚನ ಬರೆದರು. ಚತುರಾಚಾರ್ಯರು ಪ್ರಸಿದ್ದರೇ ಆಗಿದ್ದರೆ 12ನೆಯ ಶತಮಾನದ ಮಿಕ್ಕ ಪ್ರಸಿದ್ದ ಬಸವ ಅಲ್ಲಮ ಚೆನ್ನ ಬಸವರೇಕ ಇವರನ್ನು ಹೆಸರಿಸಲಿಲ್ಲ? 13ನೆಯ ಶತಮಾನದ ಹರಿಹರ, ರಾಘವಾಂಕ, 14ನೆಯ ಶತಮಾನದ ಭೀಮಕವಿ, 15ನೆಯ ಶತಮಾನದ ಮಗ್ಗೆಯ ಮಾಯಿದೇವ, ಲಕ್ಕಣದಂಡೇಶ, ಮಹಾಲಿಂಗದೇವ, ಜಕ್ಕಣಾರ್ಯ, ಕಲ್ಲುಮಠದ ಪ್ರಭುದೇವ, ಚಾಮರಸರು ಇವರನ್ನು ಕುರಿತು ಸ್ವತಂತ್ರ ಕೃತಿ ರಚಿಸುವುದು ಹೋಗಲಿ, ಪ್ರಾಸಂಗಿಕವಾಗಿಯೂ ಏಕೆ ಪ್ರಸ್ತಾಪ ಮಾಡುವುದಿಲ್ಲ? ಕೃತಿ ಪ್ರಾರಂಭದಲ್ಲಿ ಸ್ತುತಿಯನ್ನು ಏಕೆ ಮಾಡಿಲ್ಲ. ಹರಿಹರ ಬರೆದಿರುವ ರಗಳೆ ಚತುರಾಚಾರ್ಯ ಒಕ್ಕುಟದ ರೇವಣಾರಾಧ್ಯನನ್ನು ಕುರಿತುದಲ್ಲ. ಶೈವ ನಾಥಪಂಥೀಯ ರೇವಣ ಸಿದ್ಧನನ್ನು ಕುರಿತುದಾಗಿದೆ. ಹರಿಹರನ ಸಮಕಾಲಿನನಾದ ಪ್ರಸಿದ್ಧ ನಾಗನಾಥಾಚಾರ್ಯ ತನ್ನ ಸುಪ್ರಸಿದ್ಧ 'ವೀರಮಾಹೇಶ್ವರಾಚಾರ ಸಂಗ್ರಹ'ದ ಪೀಠಿಕೆಯಲ್ಲಿ ದೇವರ ಸ್ತುತಿ ಮುಗಿಸುತ್ತಲೇ ನಮೋ ಬಸವರಾಚಾಯ ಎಂದು ಮೊದಲಾಗಿ ನಾಲ್ಕೈದು ಜನ ಶರಣರನ್ನು ನೆನೆಯುವನೇ ಹೊರತು ಚತುರಾಚಾರ್ಯರನ್ನಲ್ಲ. ಇದು ಈ ಹೊತ್ತಿಗೆ ಚತುರಾಚಾರ್ಯರ ಪರಿಕಲ್ಪನೆ ಇನ್ನೂ ಹುಟ್ಟಿರಲಿಲ್ಲವೆಂದೇ ಸೂಚಿಸುತ್ತದೆ. ಇಷ್ಟೇ ಏಕೆ ಸಂಪಾದನೆಯ ಪರ್ವತೇಶ ತಾನು ಚತುರಾಚಾರ್ಯ ಪುರಾಣ ಬರೆಯುತ್ತಿದ್ದರೂ ಆರಂಭದ ದೇವತಾ ಸ್ತುತಿ ಮುಗಿಯುತ್ತಲೇ ಬಸವಾದಿ ಶರಣರನ್ನು ಸ್ಮರಿಸಿರುವುದು ಈ ಪುರಾಣ ರಚಿಸುವ ಕಾಲದಲ್ಲಿಯೂ (1698) ಎಲ್ಲ ಧಾರ್ಮಿಕ ಪುರುಷರಿಗಿಂತ ಶರಣರಿಗೆ ಪೂಜ್ಯಸ್ಥಾನ ಸಲ್ಲಿಸುತ್ತಿದ್ದುದನ್ನು ಸೂಚಿಸುತ್ತದೆ.
ಈ ಚತುರಾಚಾರ್ಯರನ್ನು ಕುರಿತು ಸಣ್ಣ ಪ್ರಸ್ತಾಪ ಮೊದಲ ಬಾರಿ ಬರುವುದು 1530 ಗುಬ್ಬಿ ಮಲ್ಲಣ್ಣನ ವೀರಶೈವಾಮೃತ ಮಹಾಪುರಾಣದಲ್ಲಿ. ಆಮೇಲೆ ನಾಲ್ವರನ್ನು ಕುರಿತು ಮೊದಲ ಸ್ವತಂತ್ರ ಕೃತಿಯೆಂದರೆ 1668 ರಲ್ಲಿ ಸಂಪಾದನೆಯ ಪರ್ವತೇಶ ಬರೆದ ಚತುರಾಚಾರ್ಯ ಪುರಾಣ. ಆಶ್ಚರ್ಯದ ಸಂಗತಿಯೆಂದರೆ ಇಂದು ಚತುರಾಚಾರ್ಯರಲ್ಲಿ ಪರಿಣಿತನಾಗಿರುವ ಶ್ರೀಶೈಲಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯನನ್ನು ಬಿಟ್ಟು ಇವನು ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯನನ್ನು ಸೇರಿದ್ದಾನೆ. ಈ ಗೊಂದಲವನ್ನು ನೋಡಿದರೆ ಇವನ ಕಾಲದ ವರೆಗೂ ಚತುರಾಚಾರ್ಯ ಒಕ್ಕೂಟದಲ್ಲಿ ಯಾರ ಹೆಸರು ಸೇರಿಸಬೇಕೆಂಬ ಬಗ್ಗೆ ಇವರಲ್ಲಿಯೇ ಒಂದು ನಿಶ್ಚಿತ ನಿಲವು ಇರಲಿಲ್ಲವೆನಿಸುತ್ತದೆ. ಮಿಕ್ಕ ಕೃತಿಗಳಲ್ಲಿ ಈ ಗೊಂದಲ ಇನ್ನೂ ವರ್ಧಿಸಿದೆ. ಮುಂದಿನ ದಿನಗಳಲ್ಲಿ ಕಾಶಿ ಪೀಠವನ್ನು ಸೇರಿಸಿ, ಪಂಚಾಚಾರ್ಯ ವರ್ತುಲವನ್ನು ಪೂರ್ಣಗೊಳಿಸಿ, ಅಧಿಕೃತತೆಯ ಸಲುವಾಗಿ ಈ ಕಲ್ಪಿತ ಸಂಗತಿಗಳನ್ನು ಆಗಮಗಳಲ್ಲಿ ಸೇರಿದರು. ಕರ್ನಾಟಕದ ಹೊರಗೆ ಸಿಗುವ ಆಗಮ ಹಸ್ತ ಪ್ರತಿಗಳಲ್ಲಿ ಈ ಸಂಗತಿಗಳಿಲ್ಲವೆಂದು ತಿಳಿದು ಬಂದಿದೆ. ಸಾಲದುದಕ್ಕೆ ಸಿದ್ಧಾಂತ ಶಿಖಾಮಣಿಯೆಂಬ ಕೃತಕ ಗ್ರಂಥ ರಚಿಸಿ, ಒಂದು ಧರ್ಮಕ್ಕೆ ಬೇಕಾಗುವ ಧರ್ಮಾಧಿಕಾರಿ, ಧರ್ಮಗ್ರಂಥ, ಧಾರ್ಮಿಕಕೇಂದ್ರಗಳೆಂಬ ಮಠ, ಶರಣ ಜಂಗನರ ಅನುಯಾಯಿತ್ವ ಇತ್ಯಾದಿಗಳನ್ನೆಲ್ಲ ಜೊಡಿಸಿಕೊಂಡರು. ಹೀಗೆ ಒಳಗಿನ ಶರಣ ಜಂಗಮರು ಪ್ರಜಾಧರ್ಮವಾಗಿರುವ ತಮ್ಮ ಶರಣ ಪರಂಪರೆಯನ್ನು ಬಲಿಕೊಟ್ಟು, ಹೊರಗಿನ ಈ ಪುರೋಹಿತ ಶಾಹಿಯನ್ನು ಸ್ವಾಗತಿಸಿದರು.
ಈ ಎಲ್ಲ ಚಟುವಟಿಕೆಗಳ ಪರಿಣಾಮವಾಗಿ ಉಜ್ಜಿನಿಯ ಸಾದರಲಿಂಗಾಯತ ಒಡೆತನದ ಮಲ್ಲಿಕಾರ್ಜುನ ಕ್ಷೇತ್ರವು ಮರುಳಾರಾಧ್ಯ ಪೀಠವಾದುದೂ. ಮುಕ್ತಿ ಮುನಿನಾಥ ಪರಂಪರೆಯ ಬಾಳೆ ಹಳ್ಳಿಯ ನಾಥಕ್ಷೇತ್ರವು ರೇವಣಾರಾಧ್ಯ ಪೀಠವಾದುದು ಇತಿಹಾಸವನ್ನು ಮುಚ್ಚಿಹಾಕಿದ ಸಂಗತಿಗಳಾಗಿವೆ. ಕಾಶಿಯ ಗೋಸಾವಿಮಠ ಕಿತ್ತುಕೊಂಡು, ನರೇಶ ಜಯನಂದನ ಮಹಾರಾಜನ ದತ್ತಿ ಇತ್ಯಾದಿ ದಾಖಲೆಗಳನ್ನು ಸೃಷ್ಠಿಸಿದುದು, ಮಲ್ಲಿಕಾರ್ಜುನ ಜಂಗಮ ಗೋಸಾವಿ ಇತ್ಯಾದಿ ಗುರುಗಳ ಹೆಸರನ್ನು ಮಲ್ಲಿಕಾರ್ಜುನ ಶಿವಾಚಾರ್ಯರೆಂದು ಬದಲಾಯಿಸಿರುವುದು, ಈ ಪೀಠ ವೀರಶೈವರ ಕೈಗೆ ಬಂದು ಕೇವಲ 9 ತಲೆಮಾರು ಗತಿಸಿದ್ದರೂ 86 ತಲೆಮಾರುಗಳ ಪಟ್ಟಿ ಪ್ರಕಟಿಸಿದುದು ಸುಳ್ಳಿನ ಕಂತೆಗಳೇ ಸರಿ.
ಶರಣರು ಗುರುಮಾರ್ಗಿಗಳು, ಪಂಚಾಚಾರ್ಯರು ಆಚಾರ್ಯ ಮಾರ್ಗಿಗಳು. ಹೀಗಾಗಿ ಅವರು ಜಗದ್ಗುರುಗಳು, ಇವರು ಜಗದಾಚಾರ್ಯರು. ಹೀಗಿದ್ದೂ 19ನೆಯ ಶತಮಾನದಿಂದ ತಮ್ಮನ್ನು ಜಗದ್ಗುರುಗಳೆಂದು ಕರೆದುಕೊಂಡುದು ತಾತ್ವಿಕ ವಿರೋಧವಾಗಿದೆ. ಇವರು 'ಜಗದ್ಗುರು' ವಿಶೇಷಣ ಬಳಸಬಾರದೆಂದು ಕಳೆದ ಶತಮಾನದಲ್ಲಿ ಸುಪ್ರಸಿದ್ಧ ವಕೀಲರಾಗಿದ್ದ ಸಿದ್ದರಾಮಪ್ಪ ಪಾವಟೆಯವರು ಕೋರ್ಟಿನಲ್ಲಿ ವಾದಿಸಿದುದನ್ನು ಇಲ್ಲಿ ನೆನೆಯಬಹುದು. ಇಂಥ ಇನ್ನೊಂದು ತಾತ್ವಿಕ ವಿರೋಧವೆಂದರೆ ಶರಣ ಜಂಗಮರದು 'ಅದ್ವೈತ'ವಾದರೆ, ಕೈಲಾಸ, ಶಿವ-ಪಾರ್ವತಿ, ಸಾಲೋಕ್ಯ ಇತ್ಯಾದಿಗಳನ್ನು ನಂಬುವ ಆರಾಧ್ಯ ಜಂಗಮರದು 'ದ್ವೈತ' ವಾಗಿದೆ. ಇಂಥ ವೈರುಧ್ಯಗಳ ನಡುವೆಯೂ ಕೆಲವು ಸಾಮ್ಯಗಳನ್ನು ಸೃಷ್ಠಿಸಿ, ಈ ಆಂದ್ರಮೂಲದ ಆರಾಧ್ಯ ಜಂಗಮರು ಕರ್ನಾಟಕ ಮೂಲದ ಶರಣ ಜಂಗಮರನ್ನು ನಂಬಿಸಿ, ಅವರ ಮೇಲೆ ಸವಾರಿ ಮಾಡಿದರು. ಮುಗ್ಧಭಕ್ತರೂ ಇದಕ್ಕೆ ಕೈಜೋಡಿಸಿದರು
-ಡಾ. ಎಂ.ಎಂ. ಕಲಬುರ್ಗಿ
ವಿಶ್ರಾಂತ ಕುಲಪತಿಗಳು

Friday, May 14, 2010

'ಸುನೀತ'ಗಳ ಕಟ್ಟಿ ಹಾಡಿದ ಸಂಭ್ರಮ

ಹರೆಯದ ದಿನಗಳಲಿ ಕವಿತೆ ಕಟ್ಟುವ ಸಂಭ್ರಮ. ಗೀಚಿದ ಸಾಲುಗಳನು ಯಾರಿಗೂ ತೋರಿಸುವ ಧೈರ್ಯವಿರದಾಗ ನೀನೊಬ್ಬಳೇ ಆತ್ಮೀಯ ಓದುಗಳು.
ಸಾವಿರಾರು ರಸಿಕರು ಒಂದೆಡೆ ಸೇರಿ ಕವಿತೆಗಳ ಕೇಳಿ ವ್ಹಾ, ವ್ಹಾ ಎಂದಷ್ಟೇ ಖುಷಿ ನೀ ಮೆಚ್ಚಿಕೊಂಡಾಗ. ನಿನ್ನ ದಟ್ಟ ಕೂದಲು, ಶೇಕ್ಸಪಿಯರ್ ಮೆಚ್ಚಿಕೊಂಡ ಕಂದು ಬಣ್ಣದ ಕೃಷ್ಣ ಸೌಂದರ್ಯ, ಆಕರ್ಷಕ ಕಣ್ಣುಗಳು ನನ್ನ ಸುನೀತಗಳಾದದ್ದು ನಿನಗೆ ಹೊಳೆಯಲಿಲ್ಲವೆ?
ಅಂದು ಕ್ಯಾಪಸ್ಸಿನಲ್ಲಿ ನೂರಾರು ಕವಿಗಳಿದ್ದರು, ಹತ್ತಾರು ವಿಮರ್ಷಕರಿದ್ದರೂ ಕವಿತೆಗಳು ಹೊರಗೆ ಬರಲೇ ಇಲ್ಲ. ಹೂದೋಟದ ಮಡಿಲಲಿ ಅರಳುತ್ತಿದ್ದ ಕವಿತೆಯ ಸಾಲುಗಳನು ಹೀರುವ ದುಂಬಿ ನೀ.
ಸುನೀತಗಳ ವಸ್ತು ನೀನಾಗಿದ್ದರೂ ಅರಿಯದೇ, ಯಾರಪ್ಪ ಆ ಸುಂದರಿ ಎಂದು ಚುಡಾಯಿಸಿದೆಯೇ ಹೊರತು ನೀನೇ ಆ ಚೆಲುವಿ ಎಂದು ಗ್ರಹಿಸಲಿಲ್ಲವೊ? ಗ್ರಹಿಸಿದರೂ ಹೇಳಲು ಸಂಕೋಚವಾಯಿತೋ?
ಹೀಗೆ ಎದ್ದು ಕಾಡಿದ ಪ್ರಶ್ನೆಗಳಿಗೆ ಉತ್ತರ ನಾನೇ ಕೊಡಬೇಕಾಯಿತು.
ಅದನ್ನು ಕೇಳಿದ ನೀನು ಹೇಗೆ ಪ್ರತಿಕ್ರೀಯಿಸುತ್ತಿಯಾ ಎಂಬ ಆತಂಕ ದೂರಾದಾಗ ..... ಅಬ್ಬಾ! ಆ ದಿನಗಳಲಿ ಎಂತಹ ಸೊಗಸಿತ್ತು. ಗೋಕರ್ಣದ ಓಂ ಬೀಚಿನ ಇಳಿಬಿಸಿಲಿನಲಿ ಯಾರ ಹಂಗಿಲ್ಲದೆ ಒಪ್ಪಿಕೊಂಡದ್ದು ನಾ ನಿನಗೆ ಒಪ್ಪಿಸಿಕೊಂಡದ್ದನ್ನು ನೆನದರೆ....... ಸಮುದ್ರದ ತಾಪವೂ ನನ್ನನ್ನು ತಣ್ಣಗಾಗಿಸಿತ್ತು. Sall I compare the to summers day ಎಂದು shakespeare ಹಾಡಿದ್ದು ಯಾಕೆ? ಹಿಮದ ಚಳಿಯಲಿ ನಡುಗುವ ಇಂಗ್ಲಿಷರಿಗೆ ಬೇಸಿಗೆಯ ಸೂರ್ಯನ ಕಿರಣಗಳು ಕಂಡರೆ ಎಲ್ಲಿಲ್ಲದ ಸಂರ್ಭಮ....ಪ್ರೇಯಸಿಯನು ಕೂಡಿದಂತೆ.
ಆದರೆ ಭಾರತಿಯರಿಗೆ ಬಿಸಿಲು, ಬೇಸಿಗೆಯೆಂದರೆ ಎಂತಹ ಕಿರಿಕಿರಿ. ಅದಕ್ಕಲ್ಲವೆ east and west ಎನ್ನುವುದು.
ಕವಿ ಯಾಕೆ ಗೆಳೆಯನನ್ನು ಬೇಸಿಗೆಗೆ ಹೋಲಿಸಿದ ಎಂಬುದನ್ನು ಇಂಗ್ಲೆಂಡಿಗೆ ಹೋಗಿ ಬಂದ ಮೇಲೆ ಗೊತ್ತಾಯಿತು. ಅದಕ್ಕೆ ಇಂಗ್ಲಿಷರು warm welcome ಎನ್ನುತ್ತಾರೆ, ನಾವು ನೆನೆಯಬೇಕು ಎನ್ನುತ್ತೇವೆ. ಅವರಿಗೆ warm ಹಿತ ನಮಗೆ cool ಹಿತ.
ಬಯಲ ಸೀಮೆಯ ಉರಿಬಿಸಿಲಿನಲಿ ಬೆಳೆದ ನನಗೆ ತಂಪೆಂದರೆ ತುಂಬಾ ಇಷ್ಟ. ಆದರೆ ನೀನು ಮಲೆನಾಡ ಹುಡುಗಿ ಸದಾ ಬೆಚ್ಚಗಿರಲು ಬಯಸಿದೆ. ನನ್ನ ಮಡಿಲಿನ ಬಿಸಿ ನಿನಗೆ ಪ್ರಿಯವಾದದ್ದನ್ನು ನೆನೆದರೆ ಈಗಲೂ ಅದೇ ಖುಷಿ!
ಆದರೆ ಈಗ ನೀನಿಲ್ಲದ ಹಳವಂಡ ಸಮುದ್ರದ ಅಲೆಗಳು ನನಗೆ ಆಗ ಅರ್ಥವಾಗಲಿಲ್ಲ. ಉಪ್ಪು ನೀರಿನಲಿ ಮೈಚಾಚಿ ಹೊರ ಬಂದ ಕೂಡಲೇ ಆವರಿಸುವ ಬಿಸಿ ಗಾಳಿಗೆ ನಿನೆಷ್ಟು ಖುಷಿ ಪಟ್ಟೆ.
ನೀ ಕಪ್ಪಾಗಿರುವ ಅಳುಕು ನಿನ್ನನ್ನು ಅಷ್ಟೊಂದು ಕಾಡಿದೆ ಎಂದು ನಾನಂದುಕೊಂಡಿರಲಿಲ್ಲ. ನಾನು prapose ಮಾಡಿದಾಗ ಮರು ಮಾತನಾಡದೇ ಅರಳಿದ ಕಂಗಳಲಿ ತೋರಿದ ಸಮ್ಮತಿ ನೂರೆಂಟು ಸುನೀತಗಳಲಿ ದಾಖಲಾಯಿತು.
ನೀನು ಬಯಲು ಸೀಮೆಯ ಹುಡುಗ ಆದರೂ ಕಪ್ಪಗಿದ್ದೇನೆ. ನನಗೂ ನಿನಗೂ ಎಲ್ಲಿಯ match ಮಾರಾಯ ಎಂದಾಗಲೆಲ್ಲ ನಿನಗಿಂತಲೂ ಖುಷಿ ಪಡುತ್ತಿದ್ದೆ.
ನಿನ್ನ ಸೌಂದರ್ಯಕ್ಕೆ ಬಣ್ಣ ಅಡ್ಡಬಾರದಿರುವುದು ನನಗೆ ಚನ್ನಾಗಿ ಗೊತ್ತಿತ್ತು. ಹಾಯ್ ಕೃಷ್ಣ ಸುಂದರಿ ಎಂದಾಗಲೆಲ್ಲ ಅರಳುವ ನಿನ್ನ ಮುಖದಲಿ ಸಾವಿರ ಗುಲಾಬಿಗಳ ದರ್ಶನ.
ಕಲಾತ್ಮಕ ಚಿತ್ರಗಳ ನಟಿ ದೀಪ್ತಿ ನ್ಯಾವೆಲ್ ಳ ಕಣ್ಣುಗಳನು ನನ್ನ ಕಣ್ಣುಗಳ ಕುರಿತ ನಿನ್ನ ಕಾಮೆಂಟ್, ಕೆನ್ನೆಯಲಿ ಅರಳುತ್ತಿದ್ದ ಡಿಂಪಲ್ಗಳನ್ನು ಗುರುತಿಸಿ ಮುದ್ದಾಡಿದ ಹೆಗ್ಗಳಿಕೆ ನಿನ್ನದು.
ಈಗಲೂ ಅಷ್ಟೇ ಕನ್ನಡಿಯ ಮುಂದೆ ನಿಂತಾಗ ನನ್ನ ಕಣ್ಣುಗಳನು ನಾನೇ ದಿಟ್ಟಿಸುತ್ತೇನೆ. ಕೃತಕವಾಗಿ ನಕ್ಕು ಕೆನ್ನೆಯ ಮೇಲೆ ಅರಳುವ ಡಿಂಪಲ್ಲುಗಳಲಿ ನಿನ್ನನು ಕಾಣುತ್ತೇನೆ. ಕೆನ್ನೆಯ ಗುಳಿಗಳ ಸಂರ್ಭಮ ಗೊತ್ತಾಗಿದ್ದೆ ನಿನ್ನಿಂದ ಎಂಬ ಸಂಗತಿ ನೆನೆದಾಗಲೆಲ್ಲ ನೀ ಎದುರಿಗೆ ಬಂದು ನಿಲ್ಲುತ್ತೀ.
ಹೀಗೆ ನೀ ನೆನಪಾಗಿ ಕಾಡಿದ್ದು ಕೋವಲಮ್ ಬೀಚ್ ನ ನಡುರಾತ್ರಿಯಲಿ. ಬೆಳದಿಂಗಳ ರಾತ್ರಿಯಲಿ ಅಪ್ಪಳಿಸುವ ತೆರೆಗಳು ಈಗ ಅರ್ಥವಾಗಿವೆ. ಸಮುದ್ರ ತೀರದಲಿ ಮೈಚಾಚಿ ಮಲಗಿದಾಗ ಅಪ್ಪಳಿಸುವ ತೆರೆಗಳು ಮತ್ತೆ ಸಮುದ್ರ ಸೇರುತ್ತವೆ.
ಮೈ ಮನಗಳಲಿ ಸುಳಿದಾಡಿದ ನೀನು ಕೂಡಾ ಇಂದು ಕೇವಲ ಬಂದು ನೆನಪಾಗಿ ಕಾಡುತ್ತಿರುವುದು ಅರ್ಥವಾಯಿತು. ಮೈಮೇಲೆ ಅಪ್ಪಳಿಸಿ ಹಿಂದೆ ಸರಿದ ಅಲೆಯಂತೆ ನೀ ಸಮುದ್ರ ಸೇರಿದೆ.
ಎದೆಯ ಮೇಲಿನ ದಟ್ಟ ಕೂದಲುಗಳಲಿ ಆಡಿದ ನಿನ್ನ ಬೆರಳುಗಳು, ಕಣ್ಣರೆಪ್ಪೆಯ ಮೇಲೆ. ಗೆನ್ನೆಯ ಗುಳಿಗಳೊಂದಿಗೆ ಆಟವಾಡಿದ ನಿನ್ನ ತುಟಿಗಳ ರಂಗು ನೆನಪಾದರೆ ನಾನು ನಾನಾಗಿರುವುದಿಲ್ಲ. ಎಲ್ಲಿಲ್ಲದ ಚೇತನ ಉಕ್ಕಿ ಹರೆಯಕ್ಕೆ ಮರಳುತ್ತೇನೆ
.

ಪರಿಣಾಮಕಾರಿ ಕಾರ್ಯ ವಿಧಾನ

* ಬೇರೆಯವರಿಂದ ಕೆಲಸ ಮಾಡಿಸುವುದು ಕಠಿಣ ಎಂಬ ಮಾತಿದೆ. ಇದಕ್ಕೆ HRD ಯಲ್ಲಿ ಪರಿಹಾರಗಳೇನು?
______ "You get the best of others, only when you give the best of yourself." ಎಂಬ ಮಾತೊಂದಿದೆ. ಕೇವಲ ಬೇರೆಯವರಿಂದ ಕೆಲಸ ನಿರೀಕ್ಷಿಸುವುದು ಸೂಕ್ತವಲ್ಲ. ಬೇರೆಯವರು ಪರಿಣಾಮಕಾರಿಯಾಗಿ ನಾವು ವರ್ತಿಸಬೇಕಾಗುತ್ತದೆ.
ನಮ್ಮಿಂದ ಕೆಲಸ ಹೇಳಿಸಿಕೊಳ್ಳುವವರುನಾವು ಹೇಗೆ ಕಾರ್ಯ ನಿರತರಾಗಿದ್ದೇವೆ ಎಂಬುದನ್ನು ಆಳವಾಗಿ ಗಮನಿಸುತ್ತಾರೆ. ಅದೊಂದು ಅರಿವಿಗೆ ಬಾರದಂತೆ ನಡೆಯುವ communication.
ನಾವು ಸಮರ್ಪಕವಾಗಿ, ಅರ್ಪಣಾ ಮನೋಭಾವ ಇಟ್ಟುಕೊಂಡು ಕೆಲಸ ಮಾಡದೇ ಕೇವಲ ಬೇರೆಯವರು ಮಾತ್ರ ಮಾಡಲಿ ಎಂದು ಬಯಸಿದರೆ ವಿಫಲರಾಗುತ್ತೇವೆ.
ಅದನ್ನೇ ಬಸವಣ್ಣನವರು "ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದಲಿ ತಾನಿದ್ದು ಇರದಂತಿರಬೇಕು" ಎಂದು ಹೇಳಿದ್ದಾರೆ.
ನಾವು ಮಾಡುವ ಕೆಲಸ ಬೇರೆಯವರ ಗಮನ ಸೆಳೆಯಲಿ ಎಂಬ ಆತಂಕವಿರಬಹುದು. ಬೇರೆಯವರು ಗುರುತಿಸದಿದ್ದರೆ ಹೇಗೆ ಎಂಬ ಗುಮಾನಿಯೂ ಇರದೇ ನಮ್ಮ ಪಾಡಿಗೆ ನಾವು ಮಾಡುತ್ತಲೇ ಇರಬೇಕು. ಅದರ ಪ್ರತಿಫಲ ಸಿಗುವ ಸಮಯಕ್ಕೆ ಸಿಕ್ಕೇ ಸಿಗುತ್ತದೆ. ಆದರೆ ಎಷ್ಟೋ ಬಾರಿ ನಮ್ಮ ಹಪಾಹಪಿತನ ಪರಿಣಾಮವನ್ನು ಎಡವಟ್ಟು ಮಾಡುತ್ತದೆ.
ನಾವು ಮಾಡುವ ಕೆಲಸ ಎಲ್ಲ ರೀತಿಯಿಂದ ದಾಖಲಾಗಲೀ ಎಂಬ ಹಟಮಾರಿತನವು ಸಲ್ಲದು. ಆರೀತಿಯ ನಿರ್ಮೋಹವನ್ನು ರೂಪಿಸಿಕೊಳ್ಳಲು ಸಮಯ ಬೆಕಾಗುತ್ತದೆ. ಮನಸು ಮಾಡಿದರೆ ಸಾಧ್ಯ ಎಂಬುದು ನನ್ನ ವೈಯಕ್ತಿಕ ಅನುಭವ ಕೂಡಾ!
ನನ್ನ ಕಾರ್ಯಚಟುವಟಿಕೆಗಳ ಬಗ್ಗೆ ಈ ಹಿಂದೆ ಅನಗತ್ಯ ಪ್ರಚಾರ ಕೊಡುತ್ತಿದ್ದೆ, ಆ ಪ್ರಚಾರದಿಂದ ಅಂತಹ ಪರಿಣಾಮವಾಗಲಿಲ್ಲ. ನಂತರ ಬೇಸರದಿಂದ ಬಿಟ್ಟು ನಿರ್ಲಿಪ್ತನಾದೆ. ಆದರೆ ಆ ನಿರ್ಲಿಪ್ತತೆ ಇಂದು ಫಲ ನೀಡಿದೆ. ಯಾವ ಕ್ಷೇತ್ರದಲ್ಲಿ ನಾನು ನಿರ್ಲಿಪ್ತನಾಗಿ ಕಾರ್ಯ ಮಾಡಿದ್ದೇನೆ ಅದರ ಪ್ರತಿಪಲ ಈಗ ದೊರಕುತ್ತಲಿದೆ. ಯಶಸ್ಸಿಗಿಂತ, ಪರಿಪೂರ್ಣತೆ ಮುಖ್ಯ ಅದನ್ನೇ perfection ಎನ್ನುವದು. ನಾವು ಸದಾ ಪರಿಪೂರ್ಣತೆಗೆ ಹವಣಿಸಬೇಕು. ಹಾಗಂತ ಪ್ರತಿಫಲ ಅಪೇಕ್ಷಿಸದೇ ಕೆಲಸ ಮಾಡಿ ಎಂದು ನಾನು ಹೇಳುವುದಿಲ್ಲ. ಕೇವಲ ಆಪೇಕ್ಷೆ ಮಾತ್ರ ಸಾಲದು ಅದನ್ನು ಮೀರಿದ ಶ್ರಮದ ಅಗತ್ಯವಿದೆ.
ತುಂಬಾ ಶ್ರದ್ಧೆಯಿಂದ ಕಡಿಮೆ ಹಣಕ್ಕೆ ಕೆಲಸ ಮಾಡುವ ನಿಷ್ಠೆ ತೋರಿದ ಮಹನೀಯರು ಯಾವುದೇ ಒಂದು fine morning ಪ್ರತಿಫಲ ಪಡೆದ ಘಟನೆಗಳನ್ನು ನೋಡಿದ್ದೇನೆ. ಒಬ್ಬ ಉದ್ದಿಮೆದಾರರೊಂದಿಗೆ ಕೇವಲ ಒಂದು ಸಾವಿರ ರೂಪಾಯಿಗೆ ಆಪ್ತ ಸಹಾಯಕರಾಗಿ ದುಡಿದ ವ್ಯಕ್ತಿ ಇಂದು ಅವರ ಒಂದು ಕಂಪನಿಗೆ CEO ಆಗಿ ಬಡ್ತಿ ಪಡೆದು ಲಕ್ಷಾಂತರ ರೂಪಾಯಿ ಸಂಬಳದೊಂದಿಗೆ, ಕೋಟ್ಯಾಂತರ ವ್ಯವಹಾರಕ್ಕೆ ಒಡೆಯರಾಗಿದ್ದಾರೆ. ಅನನ್ಯ ನಿಷ್ಠೆ, ಸಹನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ. ಆದರೆ ನಮಗೆ ಅಷ್ಟೊಂದು ಸಹನೆಯ ಅಗತ್ಯವಿದೆ.
ಕೇವಲ ನಿಷ್ಠೆ ಪ್ರಾಮಾಣಿಕತೆಯಿಂದ ದುಡಿಸಿ ಮಾನ್ಯಶ್ರೀ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾದದ್ದು, ಮಾನ್ಯಶ್ರೀ ಮನಮೋಹನ್ ಸಿಂಗ್ ಅವರು ಪ್ರಧಾನಿ ಆದದ್ದು ಈ ತರಹದ ನಿಷ್ಠೆ ಹಾಗೂ ನಿರ್ಲಿಪ್ತತೆಯಿಂದ.
ಏನೂ ಪರಿಶ್ರಮವಿಲ್ಲದೇ ದಿಢೀರ್ ಮೇಲೇರಿದ್ದನ್ನು ನೋಡಿದ್ದೇವೆ ಅವರ sudden rise, ಅಷ್ಟೇ sudden fall ಆಗುತ್ತದೆ ಎನ್ನುವುದಕ್ಕೆ ನಮ್ಮ ಸುತ್ತಲೂ ಅನೇಕ ಉದಾಹರಣೆಗಳಿವೆ. Sudden ಆಗಿ ಏರಿದ್ದು ಅಷ್ಟೇsudden ಆಗಿ ಇಳಿದು ಮತ್ತೆ ಏರಲು ಕಾಲ ತಗೆದುಕೊಳ್ಳುತ್ತದೆ.
ಇದು ರಾಮಕೃಷ್ಣ ಪರಮಹಂಸರು ಹೇಳಿದ ಬೆಲ್ಲದ ಕಲೆ ಇದ್ದಹಾಗೆ. ನಾವು ಪರಿಪೂರ್ಣರಾಗದೇ ಕೇವಲ ಬೇರೆಯವರ ಮೇಲೆ ಹೇರಿ, ಹೇಳಿದರೆ ಪರಿಣಾಮ ದೊರಕುವುದಿಲ್ಲ. ನಮಗಿರುವ ಅಧಿಕಾರದ ಬಳಕೆ ಪರಿಣಾಮ ನೀಡಬೇಕಾದರೆ ನಮ್ಮ dedication ಎಷ್ಟಿದೆ ಎಂಬುದನ್ನು self evaluate ಮಾಡಿಕೊಳ್ಳಬೇಕು. ಅದಕ್ಕೆ ಬೇರೆಯವರ remarks ಬೇಕಾಗಿಲ್ಲ.
ಬೇರೆಯವರು ಕೊಡುವ remarks ಜನ ಮೆಚ್ಚಿಸಬಹುದು ಆದರೆ ಮನಮೆಚ್ಚಿಸುವುದಿಲ್ಲ. ನಮ್ಮ ಮನ ಮೆಚ್ಚಿದರೆ ಸಾಕು! ಇತರರೂ ಮೆಚ್ಚಲಿ ಎಂಬ ನಿರೀಕ್ಷೆ ಬೇಡ. ಈ ರೀತಿಯ ಮನೋಧರ್ಮ ಇಟ್ಟುಕೊಂಡು ಇಂದಿನಿಂದಲೇ ಕಾರ್ಯ ಪ್ರಾತಂಭಿಸಿ ನಾಳೆಯಿಂದ ನಿಮ್ಮ ಸುತ್ತಲೂ ಕೆಲಸ ಮಾಡುವವರನ್ನು ಗಮನಿಸಿದರೆ ಪರಿಣಾಮ ಗೊತ್ತಾಗುತ್ತದೆ.

Thursday, May 13, 2010

'ರಾಜಿ' ಆಗದ ಹಟಮಾರಿ ಹುಡುಗಿ

ನಿನ್ನ ಹಟಮಾರಿತನ ಅದೆಷ್ಟು ಹಿತ. ಕಿರಿಕಿರಿ ಅಂದುಕೊಳ್ಳಬಹುದಾದ ನಿನ್ನ ಬಿಗಿ ಪಟ್ಟು ದಿನೇ - ದಿನೇ ಆಪ್ತವೆನಿಸಿತು. ನಿನ್ನ ಕಣ್ಣ ಕನಸುಗಳಲಿ ಅಲೆದಾಡುತ್ತಿದ್ದ ನನ್ನನ್ನು ಹಿಡಿದು ಕೊಟ್ಟಾಗ ನೀ ಬೆಚ್ಚಿಬೀಳಬಾರದಿತ್ತು. ಅಲ್ಲೇ ನೀ ಸೋತು ಹೋದೆ. ಹೌದು ತುಂಬಾ ಪ್ರೀತಿಸುತ್ತೇನೆ. ಆದರೆ ನಿನ್ನೊಂದಿಗೆ ಏಗುವ ತಾಕತ್ತಿಲ್ಲ ಎಂದಾಗ ಹೇಗಾಗಿರಬೇಡ?
ನನ್ನ ಹಟಮಾರಿತನಕೆ ಮಣಿಯದ ನೀ ಹತ್ತಾರು ಭೇಟಿಗಳಲ್ಲಿ ನೂರಾರು ಗಂಟೆಗಳ ಮೊಬೈಲ್ ಚರ್ಚೆಯಲಿ ಅದೇ ಮಾತು.
I love you but cannot accept you ಎಂದು ಹೇಳುತ್ತಲೇ ಜಾರಿಗೊಂಡಿದ್ದು. Love you but can't accept ಎಂಬ contradiction ನಲ್ಲಿಯೂ ಹೊಸತನ ತೋರಿದೆ.
ನಿನಗೆ ಪ್ರಿಯವಾದ ಸಿದ್ಧಾರೂಢ ಮಠಕ್ಕೆ ಕರೆದಾಗ ತಕ್ಷಣ ಒಪ್ಪಿಕೊಂಡು ಬಂದೆ ಜೊತೆಗೆ ಗೆಳತಿಯ ಸಾಂಗತ್ಯ ಬೇರೆ, ಅದೂ ಆತ್ಮವಿಶ್ವಾಸದ ಸಂಕೇತವೆ.
ಮುಂಜಾನೆ ಹೂಬಿಸಿಲಿನಲಿ ಕಂದು ಬಣ್ಣದ ಉಡುಗೆಯೊಂದಿಗೆ ಕಾರು ಹತ್ತಿದಾಗ ನನ್ನ ಕನಸು ನನಸಾಯಿತು ಅಂದುಕೊಂಡಿದ್ದೆ. ಫೆಬ್ರುವರಿ 14 ರ ನಿನ್ನ ಸಂದೇಶ ತಲುಪಿ ಸುಮಾರು ದಿನಗಳಾಗಿದ್ದವು. ಇಂದಿಗೂ ಮಾರ್ಚ 6ರ ಸಂರ್ಭಮ ಈಗಲೂ ನೆನಪಾಗುತ್ತದೆ. ಕೇವಲ ಮಂದಹಾಸದಿಂದ ಕಂಗೊಳಿಸಿದ ಮುಖ, ಮೌನದಲ್ಲಿಯೇ ನೂರೆಂಟು ಅರ್ಥ ಹುಟ್ಟಿಸುವ ತಾಕತ್ತು.
ಅಬ್ಬಾ! How beautiful it was!!
ಮುಂಜಾನೆ 10 ಗಂಟೆಗೆ ನನಗೆ ನಂಬಿಕೆ ಇಲ್ಲದ ದೇವರ ಗುಡಿಯಲಿ ನಿಲ್ಲಿಸಿದಾಗ ನನ್ನ ವೈಚಾರಿಕತೆಗೆ ಬೆಲೆ ಇರಲಿಲ್ಲ. ಪ್ರೀತಿ ವೈಚಾರಿಕತೆಯ ಗುಡಿಯನು ದಾಟಿ ಭಾವ ಪ್ರಪಂಚದಲಿ ತೇಲಾಡುತ್ತದೆ. ಎಂಬ ಅರಿವಾಯಿತು. ನಿನ್ನ ಪೂಜೆ, ಪ್ರದಕ್ಷಿಣೆ ಅರ್ಥವಾಗದಿದ್ದರೂ ನಿನ್ನನೇ ನೋಡುತ್ತ ಹುಚ್ಚನಾದೆ.
ನಿನ್ನ ಸಿದ್ಧಾರೂಢನ ಸನ್ನಿಧಿಯಲ್ಲಿ ಒಪ್ಪಿಕೋ. ಇಲ್ಲದಿದ್ದರೆ ನಾಹೊರಗೆ ಬರುವುದಿಲ್ಲ ಎಂಬ ನನ್ನ ಸಾತ್ವಿಕ ಹಟವನ್ನು ನಸುನಗುತ್ತ ಸಹಿಸಿದೆ. I will not leave you ಎಂದಾಗಲೂ ಅದೇ ಸಹನೆ ಬಾ ಹೋಗೋಣ ಎಂದೆ ಅಷ್ಟೇ. ನಿರ್ಲಿಪ್ತವಾಗಿ ನಿನ್ನ ವರಸೆ ಅರ್ಥವಾಗಲೇ ಇಲ್ಲ ಅಲ್ಲಿಂದ ಕಾರು ಧಾರವಾಡಕ್ಕೆ ಓಡಿತು. ವಿಶ್ವವಿದ್ಯಾಲಯದ garden ನಲ್ಲಿ ಅದೇ ಮುಂದುವರೆರದ ಮೌನ.
ತಪೊವನಕ್ಕೆ ತಲುಪಿದಾಗ ಮಧ್ಯಾನ್ಹದ ಏರು ಹೊತ್ತು. ನಾಸ್ತಿಕ ಮನಸ್ಸಿಗೆ ಹಿತವೆನಿಸುವ spiritualism ನಿನಗೆ ಅರ್ಥವಾಯಿತು. ಆಯ್ತು ನಿನಗೆ ಆತ್ಮವಿಶ್ವಾಸವಿದ್ದರೆ ನನ್ನನ್ನು ಪಡೆದುಕೊ. ಎಂದೊಡ್ಡಿದ ಸವಾಲಿನಲಿ ನಾ ಸೋತು ಹೋದೆ. ಕಣ್ಣು ಮುಚ್ಚಿ ಧ್ಯಾನಸ್ಥ ಸ್ಥಿತಿಗೆ ಹೋದೆ. ಹಟಮಾರಿತನ ಬಿಡುವಂತೆ Sub conscious mind ಗೆ ಮೇಲಿಂದ ಮೇಲೆ ಸಂದೇಶ ನೀಡಿದೆ.
ತೊಡೆಯ ಮೇಲಿನ ನನ್ನ ತಲೆಯನು ನವಿರಾಗಿ ತಟ್ಟುತ್ತಾ convince ಮಾಡಿದ್ದು ಯಾಕೋ ಬೇಸರವಾಯಿತು. ತುಂಬಾ ನಿಶ್ಚಲವಾಗಿ ಹೇಲಿದೆ. ಇನ್ನು ಮುಂದೆ ಬೇಟಿ ಆಗುವುದು ಬೇಡ. ಯಾವುದೇ ಕಾರಣಕ್ಕೂ ನಿನ್ನ call receive ಮಾಡಲ್ಲ. ನೀನೆಷ್ಟೇ ಹಟ ಮಾಡಿದರೂ ನಾನು ನಿನಗೆ ಧಕ್ಕುವುದಿಲ್ಲ. Try understand me ಎಂದು ಒತ್ತಾಯಿಸಿದಾಗ ಮನದಲಿ ಉಂಟಾದ ತಲ್ಲಣಗಳನು ಸಹಿಸಿಕೊಂಡೆ. ಮುಂಗೈಗೆ, ಹಣೆಗೆ ಮುತ್ತಿಟ್ಟಾಗ ಪ್ರತಿಭಟಿಸಲಿಲ್ಲ. ಈ ಜನ್ಮಕ್ಕೆ ಇಷ್ಟೇ ಸಾಕು. ನನಗೆ ಬೇಕೆನಿಸಿದಾಗ ಕಾಲ ಕೂಡಿ ಬಂದಾಗ ನಾ ಕಂಡಿತಾ ನಿನ್ನನ್ನು ಸೇರುತ್ತೇನೆ ಎಂದು ನೀ ನೀಡಿದ ಸಮಜಾಯಿಸಿಯನ್ನು ಅನಿವಾರ್ಯವಾಗಿ ಸ್ವೀಕರಿಸಿದೆ. ಅಳುವದಾಗಿ, ಸಿಟ್ಟಿಗೇಳುವುದಾಗಲಿ ನನಗೆ ಸಾಧ್ಯವಾಗಲಿಲ್ಲ. ನಿನ್ನ ಮಾತುಗಳನು ತುಂಬಾ ವಾಸ್ತವದ ಹಿನ್ನಲೆಯಲಿ ಆಲಿಸಿದೆ. Don't call me from tomorrow ಎಂದಾಗ Yes ಎಂದೆ. ನಿನಗೆ ಪ್ರಿಯವಾದ ಸನ್ನಿಧಿಯಲಿ ಮಾತು ಕೊಟ್ಟಿದ್ದಿಯಾ ನನ್ನನ್ನು ದಯವಿಟ್ಟು ಹಿಂಸಿಸಬೇಡ ಎಂದದ್ದು ಕರಳು ಕತ್ತರಿಸಿದಂತಾಯಿತು. ಆಗಸದಲಿ ಸೂರ್ಯ ನಸುನಗುತ್ತ goodbye ಹೇಳಿದ. ಕತ್ತಲಾಗುವ ಮುಂಚೆ ಊರು ಸೇರಬೇಕಿತ್ತು.
ನಿನ್ನ ಹಟಮಾರಿತನಕ್ಕೆ ಸೋತು ಹೋದೆ. ಆದರೆ ನಾಳೆಯಿಂದ ಈ ನೋವನ್ನು ಹೇಗೆ ಸಹಿಸಿಕೊಳ್ಳುವೆ ಎಂದು ಅರ್ಥವಾಗಲಿಲ್ಲ. ಮಾಡೋವಿ ಕಾದಂಬರಿಯ ನಾಯಕ ನೆನಪಾದ. ಪ್ರೀತಿ ಖಂಡೀತಾ ಕಾಯುತ್ತದೆ. ಕಾಲ ಕೂಡಿಬರುವವರೆಗೆ ದೂರವಿರುವ ಒಪ್ಪಂದವಾಯಿತು. ಗಳಗಳನೆ ಅತ್ತು ಬಿಡುವಂತಾದರೂ ಸಹಿಸಿಕೊಂಡೆ. ಅಳುವುದು ಹೇಡಿತನವೂ ಅಲ್ಲ, ಅಭಿವೃದ್ಧಿಯೂ ಅಲ್ಲ ಅನಿಸಿತು. ಮತ್ತಷ್ಟು ಆತ್ಮವಿಶ್ವಾಸದಿಂದ ಹೇಳಿದೆ, ಈ ಭೂಮಿ ದುಂಡಗಿದೆ. ಮತ್ತೆ ಎಲ್ಲಿಯಾದರೂ ಸೇರೆ ಸೇರುತ್ತೇವೆ.
Please understand me I will be always with you ಅಂದಾಗ ಸುಮ್ಮನಾದೆ. ನಿಜವಾದ ಪಾಂಜಲ ಪವಿತ್ರ ಪ್ರೀತಿಗೆ ಎಲ್ಲವನ್ನು ಸಹಿಸುವ ಶಕ್ತಿ ಇದೆ. ನೀನು ಪಾಠಕಲಿಸಿದೆ. ಇಂದಿಗೂ ಅಷ್ಟೇ, ಅದೇ ಪ್ರೀತಿ, ಅದೇ ವಿಶ್ವಾಸ. Still I am waiting for you.

ಅಹಂಕಾರಕ್ಕೂ, ಆತ್ಮವಿಶ್ವಾಸಕ್ಕೂ ಇರುವ ಅಂತರ


ಅಹಂಕಾರಕ್ಕೂ, ಆತ್ಮವಿಶ್ವಾಸಕ್ಕೂ ಇರುವ ಅಂತರ
* Ego ಸ್ವಭಾವವನ್ನು ಆತ್ಮವಿಶ್ವಾಸವೆಂದು ವ್ಯಾಖ್ಯಾನಿಸುವುದು ಸರಿಯೇ?
_____ "Ego is just like dust in the eye, with out clearing the dust, you cant see any thing clearly". ಎಂಬ ಸುಂದರ ಸಂದೇಶವನ್ನು ಬಿಜಾಪುರದ ಡಾ. ರುದ್ರಗೌಡರು ರವಾನಿಸಿದ್ದಾರೆ.
ಇಂತಹ ಅಹಂಕಾರವೆಂಬ ಧೂಳಿನಿಂದ ನಾವು ಸದಾ ನರಳುತ್ತಿರುತ್ತೇವೆ. ಕಳೆದ ಬಾರಿ ವಿವರಿಸಿದಂತೆ self evaluation ಇದಕ್ಕೆ ಸೂಕ್ತ ಪರಿಹಾರ ನೀಡಬಲ್ಲದು.
ಶಿಕ್ಷಣ, ಅಧಿಕಾರ, ಹಣ, ಅಂತಸ್ತು, ಸೌಂದರ್ಯ, ಖ್ಯಾತಿ ಮುಂತಾದ ಯಶಸ್ಸಿನ ಸಂಗತಿಗಳು ನಮ್ಮನ್ನು ನಮಗರಿವಿಲ್ಲದಂತೆ ಬದಲಾಯಿಸಿಬಿಡುತ್ತವೆ. ಹೇಗಿದ್ದವನು ಹೇಗಾದ ಎಂಬ comment ಗಳು ಪ್ರಾರಂಭವಾಗುತ್ತವೆ. ಸಿದ್ದು- ಸೆಡವು ಹಾಗೂ ಅಲಕ್ಷದ ಸ್ವರೂಪಗಳಲ್ಲಿ ಇವು ಪ್ರದರ್ಶಿತಗೊಳ್ಳುತ್ತವೆ.
Ego ಗೋಚರವಾಗುವುದು ನಮ್ಮ ಮಾತು ಹಾಗೂ ವರ್ತನೆಯಲ್ಲಿ. ನಾವು ಏನೋ ಸಾಧಿಸಿದ್ದೇವೆ. ನಿಮಗಿಂತಲೂ ಭಿನ್ನ ಎನ್ನುವ ಅನಗತ್ಯ gap ತೋರಿಸುತ್ತೇವೆ.
ಹಾಗಾಗಿ ಆತ್ಮ ವಿಶ್ವಾಸ confidence ಹಾಗೂ Ego ಮಧ್ಯ ಅಪಾರವಾದ ವ್ಯತ್ಯಾಸವಿದೆ. ಆತ್ಮವಿಶ್ವಾಸ ನಮ್ಮಲ್ಲಿನ ಸರಳತೆಯನ್ನು ಹೆಚ್ಚಿಸಿದರೆ, ಅಹಂಕಾರ ಅಂಧಕಾರವನ್ನು ತರುತ್ತದೆ.
ಅತೀಯಾದ qualification ಅಹಂಕಾರವಾಗುವುದು ವ್ಯಂಗ್ಯವೇ ಸರಿ! ವಿದ್ಯಾ-ವಿನಯ ಎಂಬ ಮಾತಿಗೆ ಭಿನ್ನವಾದ ನಮ್ಮ ವರ್ತನೆ ಸಾಬೀತಾಗುತ್ತದೆ. ನಮಗಿರುವ ಅತೀಯಾದ ವಿದ್ಯೆಯ ಕಲ್ಪನೆ ಕೂಡಾ ನಮ್ಮನ್ನು ಅವಿದ್ಯಾವಂತರನ್ನಾಗಿ ಮಾಡುತ್ತದೆ.
ಕೆಲವರು ಮಾತಿಗೊಮ್ಮೆ ತಮ್ಮ ಪದವಿ ಹೇಳುತ್ತಾರೆ. ನಾನು ಮಾತನಾಡುವುದು, communicate ಮಾಡುವುದು ಇನ್ನೊಬ್ಬ ವ್ಯಕ್ತಿಯೊಂದಿಗೆ, ಅದು ಕೇವಲ ನಮ್ಮ ಭಾವನೆಗಳಿಂದಲೇ ಹೊರತು ಪಡೆದಿರುವ ಶಿಕ್ಷಣದಿಂದ ಅಲ್ಲ ಎಂಬ ಕನಿಷ್ಠ ಪರಿಜ್ಞಾನವಿರುವುದಿಲ್ಲ. ನನ್ನಂತಹ ph.D. ಪಡೆದವನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು ಅನ್ನುತ್ತಾರೆ. ನಾನೆಂದರೆ ಏನು! class I ಅಧಿಕಾರಿ ನನಗೆ ಬೆಲೆ ಇಲ್ಲದಿದ್ದರೂ ನನ್ನ ಸ್ಥಾನಕ್ಕಾದರೂ ಬೆಲೆ ಬೇಡವೇ ಅನ್ನುತ್ತಾರೆ. ಇಂತಹ ಮಾತುಗಳನ್ನು ಕೇಳಿದಾಗ ಬಾಲಿಶ ಅನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕವಾಗಿ ಪ್ರಭುತ್ವಕ್ಕೆ ಅತೀಯಾದ ಮನ್ನಣೆ ಕೊಡುವ ಖಯಾಲಿ ಆರಂಭವಾಗಿದೆ. ಜನರಿಂದ, ಜನರಿಗಾಗಿ ಅಧಿಕಾರ ಪಡೆದ ಜನಪ್ರತಿನಿಧಿಗಳು ಅಧಿಕಾರ ಸಿಕ್ಕ ಕೂಡಲೇ ತಾವು ಧರಿಸುವ dress ಗಳಂತೆ, ವ್ಯಕ್ತಿತ್ವದ ಹಾಗೂ ವರ್ತನೆಯನ್ನೇ ಬದಲಿಸಿಕೊಂಡು ಬಿಡುತ್ತಾರೆ. ಕೈಮುಗಿದು - ಕಾಡಿ ಬೇಡಿ ಆರಿಸಿ ಬಂದು, ಆರಿಸಿ ತಂದವರಿಗೇ ಗುರಾಯಿಸಲು ಶುರುಮಾಡುತ್ತಾರೆ.
ಇದು ಬಹುಪಾಲು ರಾಜಕೀಯ ನಾಯಕರ ಮೇಲಿರುವ ಆರೋಪ. ಅವರನ್ನು ಓಲೈಸಲು, ಹೊಗಳುವ ಭಟ್ಟಂಗಿಗಳು ಈ ರೀತಿಯ ಅಹಂಕಾರದ ಅನಿವಾರ್ಯತೆಯನ್ನು ಭೋದಿಸಿ ವ್ಯಕ್ತಿತ್ವವನ್ನೇ ಮಣ್ಣು ಪಾಲು ಮಾಡುತ್ತಾರೆ. ಈ ತರಹದ ಮಿಥ್ಯ ಆತ್ಮವಿಶ್ವಾಸದಿಂದಾಗಿ ಅನೇಕ ಅನಾಹುತಗಳು ಸಂಭವಿಸುತ್ತವೆ. ಅದೇ ಜನ ಅಧಿಕಾರ ಕಳೆದುಕೊಂಡ ಮೇಲೆ ಬಾಲ ಸುಟ್ಟ ಬೆಕ್ಕಿನಂತಾಗುತ್ತಾರತೆ.
ನಿಜವಾದ ಆತ್ಮವಿಶ್ವಾಸಿಯಾದವನು ಎಲ್ಲ ಸ್ಥರಗಳನ್ನು ಒಂದೇ ರೀತಿಯಲ್ಲಿ ಸ್ವೀಕರಿಸಿ ವರ್ತಿಸುತ್ತಾನೆ. ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಪರಿಪೂರ್ಣ ಸತ್ವವನ್ನು ಅರಿತವರು ಸಾರತೆಯನ್ನು ಅರಿತುಕೊಂಡು 'ಜನಪರ', ಜನಪ್ರಿಯ, ಜನಾನುರಾಗಿ ಅನಿಸಿಕೊಳ್ಳುತ್ತಾರೆ. ಅಂದರೆ ಜನಪರ ಅನಿಸಿಕೊಳ್ಳುವ ಕಾರಣಕ್ಕೆ ಕೆಲವರು ಸರಳತೆಯ ಮುಖವಾಡವನ್ನು ಧರಿಸಿ ತುಂಬಾ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದರೆ ಇದು ಅಹಂಕಾರಕ್ಕಿಂತಲೂ ಅಪಾಯಕಾರಿ.
ಈ ರೀತಿಯ ವರ್ತನೆಯ ಸೂಕ್ಷ್ಮಾತಿ-ಸೂಕ್ಷ್ಮಗಳನ್ನು ಎಚ್ಚರಿಕೆಯಿಂದ ಗಮನಿಸಿ ನಾವೇ ದೂರ ಸರಿಯಬೇಕು.
ಹಣ, ಅಂತಸ್ತು, ಅಧಿಕಾರ ಶಿಕ್ಷಣದಿಂದಲೂ ದೊರಕಬಹುದು ಅಥವಾ ಪರಿಶ್ರಮದಿಂದಲೂ ದೊರಕಬಹುದು. ದೊರಕಿಸಿಕೊಂಡವರು ನಾವಾಗಿರುವುದರಿಂದ ಅಹಂಕಾರದ ಅಭಿವ್ಯಕ್ತಿಯ ಅಗತ್ಯವಿಲ್ಲ.
ನಮ್ಮ ಸಾಧನೆ ನಮ್ಮೊಂದಿಗಿರುತ್ತದೆ. ಅದನ್ನು ಬೇರೆಯವರ ಎದುರು ಪ್ರದರ್ಶಿಸುವ ಅಗತ್ಯವಿಲ್ಲ ಎಂಬುದನ್ನು ಗ್ರಹಿಸಬೇಕು. ಅದು ಇನ್ನೊಬ್ಬರನ್ನು ನೋಯಿಸುವುದರೊಂದಿಗೆ ಬೇರೆಯವರ ಸ್ವಾಭಿಮಾನಕ್ಕೆ ಆತ್ಮಗೌರವಕ್ಕೆ ಪೆಟ್ಟು ಕೊಡುತ್ತದೆ.
ಬದುಕಿನ ಏರಿಳಿತದಲ್ಲಿ ಅನೇಕ ಸ್ಥಿತ್ಯಂತರಗಳನ್ನು ಅನುಭವಿಸುತ್ತೇವೆ. ಆ ಸ್ಥಿತ್ಯಂತರಗಳು ನಮ್ಮನ್ನು perfect ಮಾಡಬೇಕು. ಆ perfection ನಿಂದಾಗಿ ನಾವು attractive personality ಅನಿಸಿಕೊಳ್ಳುತ್ತೇವೆ. ಸ್ವಲ್ಪ ಎಚ್ಚರ ತಪ್ಪಿದರೆ ಸಾಕು ಅಹಂಕಾರಿಗಳಾಗುತ್ತೇವೆ.
ಏನೂ ಇಲ್ಲದಿದ್ದರೂ ಸೌಂದರ್ಯವೂ ನಮ್ಮನ್ನು ಕಾಡುತ್ತದೆ. ಮನುಷ್ಯನ appearance ನಿಸರ್ಗದತ್ತ ಅದನ್ನು ಕಾಪಾಡಿಕೊಳ್ಳಬೇಕೇ ಹೊರತು, ಕಿರಿಕಿರಿ ಎನಿಸುವ ಪ್ರದರ್ಶನ ಅಗತ್ಯವಿಲ್ಲ.
ಅಹಂ ಎಂಬ ಧೂಳನ್ನು ಕಿತ್ತೆಸೆದು ಹೊಸ ಭಾವ ಸೃಷ್ಠಿಸಿಕೊಳ್ಳೋಣ.

Wednesday, May 12, 2010

ನ್ಥಾಯಾಲಯ ತೀರ್ಪುಗಳು, ಶಿಕ್ಷೆ ಇತ್ಯಾದಿ....ಇತ್ಯಾದಿ


ಮುಂಬ್ಯೆ ಮಾರಣ ಹೋಮದ ಭಯೋದ್ಪಾಕ ಕಸಬ್ ನ ಶಿಕ್ಷೆಯ ತೀರ್ಪೀನ ಕುರಿತು ಇಡೀ ಜಗತ್ತು ಕೂತುಹಲದಿಂದ ಕಾದಿತ್ತು. ಈ ದೇಶದ ಪ್ರಾಮಾಣಿಕ ಅಧಿಕಾರಿಗಳನ್ನು ,ನೂರಾರು ಅಮಾಯಕರನ್ನು ಹಿಂಸಿಸಿ ತನ್ನ ಕ್ರೌರ್ಯವನ್ನು ಮೆರೆವ ಕಸಬ್ ಗೆ ಶಿಕ್ಷೆ ಆಗಲೆಬೇಕೆಂದು ಜಗತ್ತು ಅಪೆಕ್ಷಿಸಿತ್ತು ತೀರ್ಪು ಈಗಷ್ಟೆ ಹೊರಬಿದ್ದಿದೆ. ಶಿಕ್ಷೆ ಆಗುತ್ತಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸ್ವತಂತ್ರ ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ಅನುಮಾನ ಸ್ಪಷ್ಟವಾಗುತ್ತಲೇ ಹೋಗುತ್ತದೆ. ಕಳೆದ ಒಂದೆರಡು ತಿಂಗಳಿನಿಂದ ದೇಶದ ಎಲ್ಲ ಮಾಧ್ಯಮಗಳು ಹಿಂದಿನ ಸಂಗತಿಗಳನ್ನು ಮೆಲುಕು ಹಾಕಿ ಹಲವಾರು ಕಾರಣಗಳಿಂದ ಉಗ್ರರಿಗೆ, ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗದಿರುವುದನ್ನು ಪ್ರತಿಬಿಂಬಿಸಿದ್ದಾರೆ. ರಾಜಕೀಯ, ಅಧಿಕಾರ ಶಾಹಿಗಳ ಭ್ರಷ್ಟಾಚಾರದಿಂದಾಗಿ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಇಂದು ಒಬ್ಬ ರಾಜಕಾರಣಿ ಅಥವಾ ಅಧಿಕಾರಿ ಕೋಟಿಗಟ್ಟಲೆ ಭ್ರಷ್ಟಾಚಾರದಲ್ಲಿ ತೊಡಗಿ ಸಿಕ್ಕಿಬಿದ್ದರೆ ಇದೊಂದು ಸಂಗತಿಯೇ ಅಲ್ಲ ಎಂಬ ನಿರ್ಣಯಕ್ಕೆ ಜನ ಬಂದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೂ ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನವನ್ನು ಜನ ಗೌರವಿಸುತ್ತಲೇ ಇದ್ದಾರೆ. ಇಂತಹ ಅನೇಕ ವೈರುಧ್ಯಗಳನ್ನು ಈ ದೇಶ ವಾಸಿಗಳು ಅನುಭವಿಸುತ್ತಲೇ ಇದ್ದಾರೆ.
ಈ ಎಲ್ಲ ಆತಂಕಗಳ ಮಧ್ಯೆಯೂ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ನ್ಯಾಯಾಂಗದಲ್ಲಿನ ಅನೇಕ ಗೊಂದಲಗಳ ಬಗ್ಗೆ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಜನಸಾಮಾನ್ಯರಾಗಲಿ, ಮಾಧ್ಯಮ ಗಳಾಗಲಿ, ಮುಕ್ತವಾಗಿ ಚರ್ಚಿಸಲಿಕ್ಕೆ ಹಿಂದೇಟು ಹಾಕಲು ಕಾರಣ 'ನ್ಯಾಯಾಂಗ ನಿಂದನೆ' ಎಂಬ ತೂಗು ಕತ್ತಿ.
ಜೊತೆಗೆ ಮಹಾ ನಾಯಕರುಗಳಿಂದ ಬರುವ ಜೀವಭಯ, ಸಮರ್ಪಕವಾದ ದಾಖಲೆಗಳು, ಪೂರಕವಾಗಿ ಬೇಕಾಗುವ ಸಾಕ್ಷಿಗಳ ಆಧಾರದ ಮೇಲೆಯೇ ನ್ಯಾಯ ನಿರ್ಣಯವಾಗಬೇಕಾದಾಗ ಮಿಕ್ಕ ನೈತಿಕ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಕೇವಲ ನೈತಿಕ ಕಾರಣಗಳಿಂದಾಗಿ ನ್ಯಾಯಾಧೀಶರು ತಮ್ಮ ತೀರ್ಪನ್ನು ನೀಡಲು ಬರುವುದಿಲ್ಲ. ಆದ್ದರಿಂದ ಉಗ್ರರು, ಅಪರಾಧಿಗಳು ನ್ಯಾಯಾಲಯಗಳ ಹೋರಾಟದಲ್ಲಿ ಶಿಕ್ಷೆಗೆ ಪೂರಕವಾಗುವ ದಾಖಲೆಗಳನ್ನು ನಾಶಪಡಿಸಿ, ಹೊಸ ಖೊಟ್ಟಿ ಸಾಕ್ಷಿಗಳನ್ನು ಸೃಷ್ಟಿ ಮಾಡಿ , ಮಾಡಿಸಿ ಕಾನೂನು ಸಮರದಲ್ಲಿ ಗೆಲ್ಲುತ್ತಾರೆ. ಇಂತಹ ಸಂದರ್ಭಗಳಲ್ಲಿ ಜನರ ನೀರಿಕ್ಷೆ ಸುಳ್ಳಾಗುತ್ತವೆ.
ಈಗ ನಮ್ಮೆದುರಿಗಿರುವ ಪ್ರಶ್ನೆಯೂ ಅದೇ..... ಕಸಬ್ ಗೆ ತೀರ್ಪು ನೀಡಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡರೂ, ನೈತಿಕವಾಗಿಯೂ ಈ ದೇಶವಾಸಿಗಳು ಗೆದ್ದಿದ್ದಾರೆ.
ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಣೆಗೆ ಅನೇಕ ವಿಫಲ ಪ್ರಯತ್ನಗಳು ಸಾಗಿರುವಾಗ ಉಗ್ರರು ತಮ್ಮ ಅಟ್ಟಹಾಸ ಮೆರೆಯುತ್ತಾರೆ. ಬೆಕಾಬಿಟ್ಟಿಯಾಗಿ ವರ್ತಿಸಿ ದೇಶದ ಭದ್ರತೆಗೆ ಧಕ್ಕೆತರುತ್ತಾರೆ. ಔದಾರ್ಯತೆಯ ಹೆಸರಿನಲ್ಲಿ ನಮ್ಮ ದೌರ್ಬಲ್ಯವನ್ನು ದುರುಪಯೊಗ ಪಡಿಸಿಕೊಂಡಿದ್ದಾರೆ. ಈಗ ಕಸಬ್ ಪ್ರಕರಣದಲ್ಲಿ ಮತ್ತೆ ವಿಳಂಬವಾದರೆ ಜನರ ವಿಶ್ವಾಸಕ್ಕೆ ಧಕ್ಕೆ ಬರುತ್ತದೆ. ನ್ಯಾಯಾಧೀಶರು ತುಂಬ ಕಷ್ಟಪಟ್ಟು ನ್ಯಾಯ ಒದಗಿಸಿದ್ದಾರೆ. ಈ ದೇಶದ ಜನರ ಭಾವಗಳಿಗೆ ನ್ಯಾಯ ಸಿಗಬೇಕಾದರೆ ವರ್ಷಾಂತ್ಯದಲ್ಲಿ ನೀಡಿದ ಶಿಕ್ಷೆ ಜಾರಿಯಾಗಬೇಕು. ಕಾನೂನಿನ ಒಳದಾರಿ ಹಿಡಿದು ಅಪರಾಧಿ ತಪ್ಪಸಿಕೊಳ್ಳಬಾರದೆಂದು ಜನರ ಸದಾಶಯ.
public memory is short ಎಂಬ ಹಾಗೆ ಒಂದೆರಡು ತಿಂಗಳು ಬಿಟ್ಟರೆ ಜನ ವಿಷಯ ಮರೆಯುತ್ತಾರೆ. ಮತ್ತೊಂದು ಹೊಸ ಘಟನಾವಳಿ ಜರುಗಿದರೆ ಆ ಚರ್ಚೆ ಪ್ರಾರಂಭವಾಗುತ್ತದೆ.
ಹೀಗಿರುವಾಗ ಪಾಕಿಸ್ತಾನವು ಅತ್ತು ಕರೆದು ತನ್ನ ಕುತಂತ್ರ ಉಪಯೋಗಿಸಿ ದಯೆ, ಅನುಕಂಪಗಳ, ಮಾನವಿಯತೆಯ ಭಾವನಾತ್ಮಕ ಜಾಲ ಬಿಸಿ ಕ್ಷಮೆ ಗಿಟ್ಟಿಸಿಕೊಂಡರೆ ಹೇಗೆ ಎಂಬ ಆತಂಕವೂ ಇದೆ. ಒಮ್ಮೆಯಾದರು ಇಂತಹ ಆತಂಕವಾದಿಗಳಿಗೆ ರಾಜಕೀಯ ಕೆಸರು ತಟ್ಟದೆ, ಓಟ್ ಬ್ಯಾಂಕ್ ಎಂಬ ಮಾಯೆ ಅಂಟಿಕೊಳ್ಳದೆ ನ್ಯಾಯ ಸಿಗಲಿ. ಕಸಬ್ ಗೆ ಸಿಗುವ ಶಿಕ್ಷೆ ಜನರ ಪಾಲಿನ ವಿಶ್ವಾಸ ವಾಗುತ್ತದೆ. ಆದರೆ ಕಾಲ ಎಲ್ಲವನ್ನು ಮರೆಸುತ್ತದೆ. ಹಾಗೆಯೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬುದು ಅಷ್ಟೇ ಸತ್ಯ!

Sunday, May 9, 2010

ಧಾರವಾಡ
26-10-2009
ಪ್ರಿಯ ಸಿದ್ದು ಯಾಪಲಪರವಿ ಅವರಿಗೆ
ವಂದನೆಗಳು
ನಿಮ್ಮ "ಎತ್ತಣ ಮಾಮರ, ಎತ್ತಣ ಕೋಗಿಲೆ" ಓದಿದೆ. ಇತ್ತೀಚಿಗೆ ಅನೇಕ ವಿದೇಶ ಪ್ರವಾಸ ಕಥನಗಳು ಬರುತ್ತಿವೆ. ಎಲ್ಲದರಲ್ಲೂ ಟಿಕೆಟ್ ಕೊಂಡದ್ದು, ವಿಮಾನ ಏರಿದ್ದು, ತಿಂಡಿ ತಿಂದದ್ದು, ಅಲ್ಲಿಯ ರಸ್ತೆಗಳ ಸ್ವಚ್ಛತೆ - ಇವೇ ಮುಂತಾದ trivial ವಿಷಯಗಳ ವರ್ಣನೆಗಳು bore ಮಾಡುತ್ತವೆ. ಎಷ್ಟೆಂದರೆ ನಾನು ಎರಡು ಬಾರಿ ಅಮೇರಿಕಾಗೆ ಹೋಗಿ ಆರು ತಿಂಗಳ ಕಾಲ ಇದ್ದು ಬಂದರೂ ಏನೂ ಬರೆಯುವುದು ಬೇಡ ಅಂತ ಅನಿಸಿತ್ತು. ಆದರೆ ನಿಮ್ಮ ಬರವಣಿಗೆ ಸಾಕಷ್ಟು ಭಿನ್ನವಾಗಿದೆ ನಿಮ್ಮ ಒಳನೋಟಗಳು ಸೂಕ್ಷ್ಮವಾಗಿವೆ. ವಿಶ್ಲೇಷಣೆಯು objective ಆಗಿದೆ. ಸ್ವವೈಭವೀಕರಣದಿಂದಾಗಿ ಕೃತಿಮ ಕಲಾತ್ಮಕತೆಯೇ ಹದಗೆಟ್ಟು ಹೋಗುತ್ತವಲ್ಲ, ಅಂಥ ಅಪಾಯದಿಂದ ಈ ಕೃತಿ ಪಾರಾಗಿದೆ. ಒಟ್ಟಿನಲ್ಲಿ ಇದರ ಓದು ಸ್ವಾರಸ್ಯಕರವಾಗಿದೆ.
ನಿಮ್ಮ ಕಾರ್ಯಚಟುವಟಿಕೆಗಳನ್ನು ನಾನು ಗಮನಿಸುತ್ತ ಬಂದಿದ್ದೇನೆ. ನಿಮ್ಮ ಬಗ್ಗೆ ನನಗೆ ಅಭಿಮಾನವಿದೆ. ನಿಮಗೆ ನನ್ನ ಶುಭಾಶೀರ್ವಾದಗಳು.
ಇಂತಿ ನಿಮ್ಮ ವಿಶ್ವಾಸಿ
ವೀಣಾ ಶಾಂತೇಶ್ವರ

Saturday, May 8, 2010

ಕೇರಳ ಲಿಂಗಾಯತ ಸಂಗಾತಿಗಳು


ಲಿಂಗಾಯತ ಎನ್ನುವುದು ಈಗ ಒಂದು ಜಾತಿಯಲ್ಲ. ಒಂದು ಧರ್ಮ - ಸಮೂಹ - ಪ್ರಜ್ಞೆ ಎನ್ನುವುದು ಸಾಬೀತಾಗಿದೆ. ಆದರೂ ಜಾತಿ ಲಿಂಗಾಯತರು, ಜಾತಿ ಮಠಾಧೀಶರು ಒಮ್ಮೊಮ್ಮೆ ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ.
ಎಡಪಂಥೀಯ ಸರಕಾರವಿರುವ ಕೇರಳದಲ್ಲಿ ಬಸವ ಪ್ರಜ್ಞೆಗೆ, ತತ್ವಕ್ಕೆ ಹೆಚ್ಚು ಮನ್ನಣೆಯಿದೆ. ಕಾಯಕ ಸಿದ್ದಾಂತದ ಮೇಲೆ ಆಡಳಿತ ನಡೆಸುತ್ತಿರುವ ಕೇರಳಿಗರು ನಿಜಾರ್ಥದ ಬಸವ ಧರ್ಮ ಪರಿಪಾಲಕರು. ಪೂರ್ಣಪ್ರಮಾಣದ ಸಾಕ್ಷರತೆ, ಕೇರಳವನ್ನು ಪ್ರವಾಸಿ ಕೇದ್ರವನ್ನಾಗಿ ಅಭಿವೃದ್ಧಿ. ರಾಷ್ಟ್ರೀಯ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸು. ಮನೆಗೊಬ್ಬ ಅನಿವಾಸಿ ಭಾರತೀಯ ಉದ್ಯೋಗಿ ಹೀಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸೈದ್ಧಾಂತಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ.
ಇಪ್ಪತ್ತು ಲಕ್ಷದಷ್ಟು ಜನ ಲಿಂಗಾಯತರಿದ್ದಾರೆ. ಆದರೆ ಅವರಿಗೆ ಸೈದ್ದಾಂತಿಕ ಗೊಂದಲಗಳಿವೆ. ಕೇವಲ ಲಿಂಗಾಯತರಲ್ಲಿ ಸಂಬಂಧ ಬೆಳೆಸುತ್ತಾರೆ. ಅಲ್ಲಿನ ಪರಿಸರದ ಪ್ರಧಾನ ಆಹಾರ ಮಾಂಸಹಾರವನ್ನು ಸ್ವೀಕರಿಸುತ್ತಾರೆ. ಕೇರಳದ ಎಲ್ಲ ದೇವರುಗಳ ಆರಾಧನೆಯಜೊತೆಗೆ ಇಷ್ಟಲಿಂಗಧಾರಿಗಳಾಗಿದ್ದಾರೆ. ಕಳೆದ ದಶಕದಿಂದ ಬಸವ ಸಮಿತಿಯ ಅರವಿಂದ ಜತ್ತಿ ಹಾಗೂ ವೀರಶೈವ ಮಹಾಸಭಾದ ಪದಾಧಿಕಾರಿಗಳು ಲಿಂಗಾಯತರನ್ನು ಒಗ್ಗೂಡಿಸಿದ್ದಾರೆ. ಹಿರಿಯರಾದ ಡಾ. ಕೆ. ಸದಾಶಿವನ್, ತ್ರಿಸ್ಪೂರದ ಗೋಪಾಲಕೃಷ್ಣ ಪಿಳೈ ,ಕುಂಜುಮನ್, ಪ್ರೊ.ಎ.ಆರ್ ಜ್ಯೋತಿ, ಕೆ.ಎನ್. ಪಿಳೈ, ಶಶಿಕುಮಾರ, ಮಹಿಳಾ ಘಟಕದ ಶೋಭಾಕುಮಾರಿ ಹೀಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗಿವೆ. ಅವರೆಲ್ಲರಿಗೆ ಬಸವಧರ್ಮದ ಬೋಧನೆಯನ್ನು ಮಲೆಯಾಳಿನ ಬಸವ ಪಥಂ ಮೂಲಕ ಅದರ ಸಂಪಾದಕ ಪ್ರಸನ್ನಕುಮಾರ ನೀಡುತ್ತಿದ್ದಾರೆ. ಅಧ್ಯಯನದ ಶೀಲ ಪ್ರವೃತ್ತಿಯ ಪ್ರಸನ್ನಕುಮಾರ 2000 ಇಸವಿಯಲ್ಲಿ ಜರುಗಿದ ಕಾರು ಅಪಘಾತದಲ್ಲಿ ಬದುಕುಳಿದ ನಂತರ ಹೆಚ್ಚು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಬಸವ ಸಮಿತಿಗಳನ್ನು ಪ್ರಾರಂಭಿಸಿ 'ಬಸವ ಪಥಂ' ಓದುಗರನ್ನು ಹೆಚ್ಚಿಸಿದ್ದಾರೆ. ಕೇರಳದ ವೀರಶೈವರನ್ನು, ಲಿಂಗಾಯತರನ್ನಾಗಿ ಪರಿವರ್ತಿಸುವ ಸಕಾಲ ಇದಾಗಿದೆ ಎಂದು ನಂಬಿದ್ದಾರೆ. ಮಲೆಯಾಳದಲ್ಲಿ ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುವ ಪ್ರಸನ್ನಕುಮಾರ, ವ್ಯಕ್ತಿತ್ವ ವಿಕಸನ ಕೋರ್ಸಗಳನ್ನು ನಡೆಸುತ್ತಾರೆ. ಅವರೊಂದಿಗಿನ ಚರ್ಚೆ ಸಂವಾದ ನನಗೆ ಹೆಚ್ಚು ಖುಷಿ ನೀಡಿತು. ದೂರದೂರಿನ ಬಂಧುಗಳನ್ನು ಭೇಟಿ ಆಗಿಬಂದ ಅನುಭವ ಈಗ ನನ್ನ ಪಾಲಿಗೆ.

ತ್ರಿಸ್ಸೂರ ಬಸವ ಸಮಿತಿ ಕಾರ್ಯಕ್ರಮ

ಕೇರಳ ಬಸವ ಸಮಿತಿಯ ಚೇತನದಂತಿರುವ ಪ್ರಸನ್ನ ಕುಮಾರ ವೃತ್ತಿಯಿಂದ ಉದ್ಯಮಿ 'Glow hot' ಎಂಬ ಗೃಹ ಬಳಕೆ ವಸ್ತುಗಳ ಉದ್ಯಮ ಇಟ್ಟುಕೊಂಡು ನೂರಾರು ಜನಯುವಕರಿಗೆ ಉದ್ಯೋಗ ನೀಡಿ, ತಾವು ತೃಪ್ತಿಯಿಂದ ಇದ್ದಾರೆ. ಕಾಯಕ-ದಾಸೋಹದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪ್ರಸನ್ನ ಕುಮಾರ ತ್ರಿರುವಳ್ಳಿ ಹತ್ತಿರದ ತೆಂಗಿಲ್ ನವರು. ಬಿ.ಎ. ಪದವೀಧರ, 46 ವರ್ಷದ ಪ್ರಸನ್ನಕುಮಾರ ಬಸವ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ವ್ಯಾಪಕವಾಗಿ ಕೇರಳದಲ್ಲಿ ಪರಿಚಯಿಸಿದ್ದಾರೆ. ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ಲಿಂಗಾಯತ ಧರ್ಮದ ಬಗ್ಗೆ confusion ಗಳಿವೆ. ಇತ್ತೀಚಿಗೆ ಹಂತ ಹಂತವಾಗಿ ಕೇರಳದ ಲಿಂಗಾಯತರು ಬಸವಣ್ಣನ ಮೌಲ್ಯಗಳನ್ನು ಗ್ರಹಿಸುತ್ತಲಿದ್ದಾರೆ.
ಲಿಂಗಾಯತ ಧರ್ಮವನ್ನು ಅರಿಯುವ, ಆಚರಿಸುವ ವಿವಿಧ ಹಂತಗಳನ್ನು ವಿವರಿಸುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದರು. ಕಾಯಕ-ದಾಸೋಹ-ಏಕದೇವೋಪಾಸನೆ ನಮ್ಮ ಎದುರಿಗಿರುವ ಸವಾಲುಗಳು. ಹೇಗೋ ಕಷ್ಟ ಪಟ್ಟು ಕಾಯಕ-ದಾಸೋಹಗಳನ್ನು ರೂಢಿಸಿಕೊಳ್ಳಬಹುದು. ಆದರೆ ಏಕದೇವೋಪಾಸನೆ ಸುಲಭದ ಮಾತಲ್ಲ. ಭಯ-ಭಕ್ತಿ ಎಂತಲೇ ಹಲವು ದೇವರುಗಳ ಬೆನ್ನು ಹತ್ತಿರುವ ನಮ್ಮನ್ನು ಏಕದೇವೋಪಾಸನೆ ಇಷ್ಟಲಿಂಗ ಆರಾಧನೆಗೆಸುಲಭದ ಮಾತಲ್ಲ. ಅಂದು ಬಸವಾದಿ ಶರಣರು, ಅನುಭವ ಮಂಟಪದ ಮೂಲಕ ನಿರಂತರ ಜ್ಞಾನ ನೀಡಿ, ವಚನಗಳ ರಚನೆಯ ಮೂಲಕ ಜನರನ್ನು ಸಂಘಟಿಸಿದ್ದು ಸಾಮಾನ್ಯ ಸಂಗತಿಯಲ್ಲ.
ಇಂತಹ ವೈಜ್ಞಾನಿಕ ಯುಗದಲ್ಲಿಯೂ ಜನ ದೇವರು-ಧರ್ಮದ ಹೆಸರಿನಲ್ಲಿ ಹುಚ್ಚರಂತೆ ವರ್ತಿಸುವುದನ್ನು ಕಂಡರೆ ಅಚ್ಚರಿ ಎನಿಸುವುದು.
ನೂರಾರು ದೇವರ ಆರಾಧನೆಯಿಂದ - ಶಿವನ ಆರಾಧನೆಯೇ ಶ್ರೇಷ್ಠ, ಶಿವನೇ ಶ್ರೇಷ್ಠ ಎಂದು ಬಿಂಬಿಸುವ ಶಿವಪುರಾಣ ಲಿಂಗಾಯತರನ್ನು ಪ್ರಾಥಮಿಕ ಹಂತಕ್ಕೆ ತರುವ ಕೆಲಸ.
ಕಪೋಲ ಕಲ್ಪಿತ ಶಿವನಿಗಿಂತ ಶರಣರು ನೀಡಿದ ಇಷ್ಟಲಿಂಗ ಆರಾಧನೆಯನ್ನು ರೂಢಿಸಿಕೊಂಡು, ಗುಡಿ-ಗುಂಡಾರಗಳ ಹಂಗನ್ನು ತೊರೆದು ಆತ್ಮವಿಶ್ವಸವನ್ನು ಬೆಳೆಸಿಕೊಳ್ಳುವುದು ಲಿಂಗಾಯತ ಧರ್ಮದ ಪದವಿ ಪಡೆದ ಹಾಗೆ. ಈ ಪದವಿಯ ಹಂತದಲ್ಲಿರುವವರು, ಗುಡಿಗಳಿಗೂ ಹೋಗುತ್ತಾರೆ. ಲಿಂಗವನ್ನು ಧರಿಸಿ confusion ನಲ್ಲಿರುತ್ತಾರೆ. ಪೂರ್ಣ ಪ್ರಮಾಣದ ಲಿಂಗ ಆರಾಧನೆಯ ಮೂಲಕ ಏಕಾಗ್ರತೆ, ಮನೋನಿಗ್ರಹ, ಧ್ಯಾನದ ಮೂಲಗಳನ್ನು ಹಿಡಿಯುವುದು ವಿಕಸನದ ಸಂಕೇತವಾಗುತ್ತದೆ. ಇಷ್ಟಲಿಂಗದ ಆರಾಧನೆ ಪ್ರಭುತ್ವದ ಸಂಕೇತವಾಗಿ ಶುದ್ಧ ಲಿಂಗಾಯತರಾಗಲು ಸಾಧ್ಯ.
ಕೆಲವರು ಗುಡಿ - ಗುಂಡಾರಗಳನ್ನು ನಿರಾಕರಿಸಿ ಏಕದೇವೋಪಾಸಕರಾಗಿ ಲಿಂಗ ನಿಷ್ಠೆಯನ್ನು ರೂಪಿಸಿಕೊಂಡರೂ ಮನದ ಕೊಳೆಯನ್ನು ಪೂರ್ಣವಾಗಿ ತೊಳೆದುಕೊಳ್ಳದೇ ಅಹಂಕಾರಿಗಳಾಗಿರುತ್ತೇವೆ. ಮನದ ಮುಂದಣ ಆಸೆ, ಒಳಗಿನ ಮನದ ಕೊಳೆಯನ್ನು ನಿವಾರಿಸಿ ಪೂರ್ಣ ಪ್ರಮಾಣದ personality ಆಗಲು ಬಸವ ಪ್ರಜ್ಞೆ, ಬಸವಾದಿ ಶರಣರ ವಚನಗಳು ನೆರವಾಗುತ್ತವೆ ಎಂಬ ಸತ್ಯವನ್ನು ಲಿಂಗಾಯತರು ಅಥವಾ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು ಆಳವಾಗಿ ಅರಿತು ಸ್ವೀಕರಿಸಬೇಕಿದೆ. ಈ ವಿಷಯದಲ್ಲಿ ಮಠಾಧೀಶರಿಗೆ ಅನೇಕ ಗೊಂದಲಗಳಿವೆ.
ಬಸವ ಪ್ರಜ್ಞೆಯಿಲ್ಲದೇ ಕೇವಲ ಯಾವುದೋ ಒಂದು ಸೂತ್ರ ಹಿಡಿದು ಬಡಿದಾಡುತ್ತಾರೆ. 'Total Basava consciousness will develop our personality' ಎಂಬ ವಾದ ಈಗ ಜಗದ ತುಂಬೆಲ್ಲ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ ಗೆಳೆಯರಾದ ರಂಜನ್ ದರ್ಗಾ ಅವರ 'ಬಸವ ಪ್ರಜ್ಞೆ' ಹೆಚ್ಚು ಪ್ರಸ್ತುತ.
ಈ ಎಲ್ಲ ಹಂತಗಳನ್ನು ಅರ್ಥಪೂರ್ಣವಾಗಿ ಗ್ರಹಿಕೆ ಬಸವ ಪ್ರಜ್ಞೆಯನ್ನು ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಂದಾಗ ನಾವು ನಿಜವಾದ ಬಸವ ತತ್ವ ಅನುಯಾಯಿಗಳು. ಇಂದು ಈ ಕೆಲಸ ಅಂತರಾಷ್ಟ್ರೀಯ ಮಟ್ಟದಲ್ಲಿ, ಹೊರರಾಜ್ಯಗಳಲ್ಲಿ ನಡೆದಿದೆ ಎನ್ನುವುದಕ್ಕೆ ಅದ್ಧೂರಿ ಬಸವ ಜಯಂತಿಯ ಆಚರಣೆಗಳೇ ಸಾಕ್ಷಿ! Now the globe realiged Basava consciousness.
ಕೇರಳದ ಗೆಳೆಯ ಪ್ರಸನ್ನ ಕುಮಾರ ಅಂತಹ ಸಾಹಸಕ್ಕೆ ಕೈ ಹಾಕಿ ನನ್ನಿಂದ ಬಸವ ಪ್ರಜ್ಞೆಯ ಕುರಿತು ಒಂದುತಾಸು ವಚನಗಳ ಉದಾಹರಣೆಗಳೊಂದಿಗೆ ಮಾತನಾಡಿಸಿ ತಾವೇ ಮಲೆಯಾಳಿಗೆ ತರ್ಜುಮೆ ಮಾಡಿದರು. ಸಭೆಯಲ್ಲಿ ಪಾಲ್ಗೊಂಡ ನೂರಾರು ಬಸವಾಭಿಮಾನಿಗಳು, ಬಸವ ತತ್ವ ಆಚರಣೆಯಲ್ಲಿ ತಾವು ಯಾವ ಹಂತದಲ್ಲಿದ್ದೇವೆ ಎಂದು ಒರೆಗಲ್ಲಿಗೆ ಹಚ್ಚಲು ಈ ಸಂವಾದ ನೆರವಾಯಿತು. ಬಸವ ಪ್ರಜ್ಞೆಯ ಪದವಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಹಂತಗಳನ್ನು ನಾವು ತಲುಪುವ ಬಗೆಯನ್ನು ಅರ್ಥಪೂರ್ಣವಾಗಿ ಚರ್ಚಿಸಿದರು. ಈ ಹಂತವನ್ನು ತಲುಪುತ್ತೇವೆಯೋ, ಇಲ್ಲವೋ ಆ ಮಾತು ಬೇರೆ ಆದರೆ Self evaluation ಮೂಲಕ ನಾವು ಪಡೆದಿರುವ ಅಂಕಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನನ್ನ ಕೇರಳ ಭೇಟಿ ಸಾರ್ಥಕವಾಯಿತು. ಕಾರಣರಾದ ಅರವಿಂದ ಜತ್ತಿ ಹಾಗೂ ಪ್ರಸನ್ನಕುಮಾರ ಅವರಿಗೆ ಋಣಿಯಾಗಿದ್ದೇನೆ.

Friday, May 7, 2010

ಸ್ವಚ್ಛ, ಸುಂದರ kovalam Beach


ಕೇರಳದ ಪ್ರಕೃತಿ ಸೌಂದರ್ಯದ ಬಗೆ. ಪ್ರತಿ ಸಲವೂ ಹೊಸತನ ಕಾಣುತ್ತದೆ. ರಾಜಧಾನಿ ತಿರುವನಂತಪುರದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಕೋವಲಮ್ ಬೀಚ್ ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಪೂರ್ವ ಹಾಗೂ ಉತ್ತರಾಭಿಮುಖವಾಗಿ ಸದಾ ಅಬ್ಬರಿಸುವ ಕೋವಲಮ್ ಕೇರಳದ ದೊಡ್ಡ ಪ್ರವಾಸೋದ್ಯಮವಾಗಿ ಬೆಳೆದಿದೆ. ಏಪ್ರಿಲ್ 30 ರಂದು ಕೇರಳ ತಲುಪಿದಾಗ ಬಸವ ಸಮಿತಿ ಪದಾಧಿಕಾರಿ, ಉದ್ಯಮಿ ಶಶಿಕುಮಾರ್ ವಸತಿ ವ್ಯವಸ್ಥೆಯನ್ನು ಇಲ್ಲಿನ ಸ್ವಾಮಿ ಗೆಸ್ಟಹೌಸ್ ನಲ್ಲಿ ಕಲ್ಪಿಸಿದರು. ಗದುಗಿನಿಂದ ಬೆಂಗಳೂರಿನ ಎಂಟು ತಾಸು ಹಾಗೂ ಬೆಂಗಳೂರಿನಿಂದ - ತಿರುವನಂತಪುರದ ಹದಿನಾರು ತಾಸುಗಳ ಬಸ್ ಪ್ರಯಾಣದ ದಣಿವನ್ನು ತಣಿಸಲು ಕೋವಲಂ ನೆರವಾಯಿತು. ಇಡೀ ಒಂದು ದಿನದ 24 ತಾಸುಗಳ ನನ್ನ ಧ್ಯಾನಸ್ಥ ಸ್ಥಿತಿಯ ಕುಳಿತಿರುವಿಕೆ ಶಿಕ್ಷೆಯಾಗದಿರುವುದೇ ಅಚ್ಚರಿ.
ಮಧ್ಯಾನ್ಹದ ಬೆವರಿಳಿಸುವ ಬೆಚ್ಚಗಿನ ವಾತಾವರಣದಲ್ಲಿ ವಿದೇಶಿ ಪ್ರವಾಸಿಗರು ಮುಕ್ತವಾಗಿ ಬೀಚ್ ನುದ್ದಕ್ಕೂ ತಿರುಗಾಡುತ್ತಿದ್ದರು.
ಈ ಬೀಚ್ ನುದ್ದಕ್ಕೂ ಸರಿಸುಮಾರು ನೂರಕ್ಕೂ ಹೆಚ್ಚು ಹೋಟೆಲ್ ಗಳಿವೆ. ವಿದೇಶಿ ವೆಚ್ಚಕ್ಕೆ ಸರಿಸಮಾನವೆನಿಸುವ 'ದುಬಾರಿ' ತನ ಎಲ್ಲೆಲ್ಲೂ ಕಾಣುತ್ತದೆ. ಇದನ್ನು ನಾವು richness ಅನ್ನಬಹುದು.
Like minded ಗೆಳೆಯರೊಂದಿಗೆ ಅಥವಾ family ಯೊಂದಿಗೆ ಇಲ್ಲಿಗೆ ಬರುವುದು ಸೂಕ್ತ, ಒಂಟಿಯಾಗಿದ್ದರೆ ತುಂಬಾ ಬೇಸರ. ಅಂತಹ ಒಂಟಿತನದ ಬೇಸರದ ಮಧ್ಯ ಬೀಚ್ ತುಂಬಾ ತಿರುಗಾಡಿದೆ.
ನಿಧಾನವಾಗಿ ಸುತ್ತಿಕೊಳ್ಳುತ್ತಾ, ಅಷ್ಟೇ ವೇಗವಾಗಿ ಅಪ್ಪಳಿಸುವ ಸಮುದ್ರದ ತೆರೆಗಳು ಬದುಕಿನ ಹೊರಾಟವನ್ನು ನೆನಪಿಸುತ್ತವೆ.
Sea level ಎಂದೇ ಗುರುತಿಸಲ್ಪಡುವ ಸಮುದ್ರ ಮಟ್ಟ ನಾವಿರುವ ನಿಜ ನೆಲದ ಸ್ಥಿತಿಯನ್ನು ಹೇಳುತ್ತದೆ. ನಾವು ಎಷ್ಟು ಎತ್ತರದಲ್ಲಿರುತ್ತೇವೆ ಎಂಬುದನ್ನು Sea level ಮಾಪನದ ಮೂಲಕವೇ ಗುರುತಿಸುವುದರಿಂದ ಅಲ್ಲಿ ನಿಂತಾಗ ಅನಿಸಿತು. I ವಾಸ್ at the bottom.
ನಮ್ಮ ಬದುಕಿನ ಸ್ಥಿತಿಯೂ ಹಾಗೆಯೇ ಒಮ್ಮೆ ಎತ್ತರಕೆ ಜಿಗಿದರೆ, ಮತ್ತೊಮ್ಮೆ ಕೆಳಗೆ ಅಂದರೆ ತೀರಾ ಕೆಳಗೆ ಇಳಿಯುತ್ತದೆ. ಈ ಏರಿಳಿತದಲ್ಲಿ ಒಂದು ರೀತಿಯ ಮಜವಾದ ಅನುಭವ.
ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ. ಯಾರಾದರೂ ತಡೆದರೆ ನಿಲ್ಲುವುದೂ ಇಲ್ಲ. ಅದಕ್ಕೇ ಹೇಳುವುದು Time and Tide wait for none! ಎಂದು.
ಸ್ವಚ್ಛತೆ, ಶುದ್ಧತತೆ ಹಾಗೂ ಶುಭ್ರತೆಯನ್ನು ಕಾಪಾಡಿಕೊಂಡಿರುವ ಕೋವಲಮ್ ಬೀಚ್ ನ ವ್ಯಾಪಾರಿಗಳು ಕೋಟಿಗಟ್ಟಲೆ ಗಳಿಸುತ್ತಾರೆ ಆದರೆ ವಿದೇಶಿಗರನ್ನು ಅನಗತ್ಯವಾಗಿ ವಂಚಿಸುವುದಿಲ್ಲವಂತೆ ಅದೇ ಕಾರಣಕ್ಕೆ ಬೀಚ್ ನ ಸೌಂದರ್ಯ ಅನುಭವಿಸಲು ವಿದೇಶಿಗರು ತಿಂಗಳುಗಟ್ಟಲೇ ಇಲ್ಲಿಯೇ ಠಳಾಮಿಸುತ್ತಾರೆ.
ಸದಾ ತಂಪಾದ cold countries ಗಳಲ್ಲಿರುವ ವಿದೇಶಿಗರಿಗೆ ಸಮುದ್ರ ತೀರ ಇಷ್ಟವಾಗಲು ವೈಜ್ಞಾನಿಕ ಕಾರಣಗಳಿವೆ. ದೇಹದಲ್ಲಿರುವ ಕೊಳೆಯನ್ನು ಕಿತ್ತೊಗೆಯಲು Sweat - ಬೆವರು ನೆರವಾಗುತ್ತದೆ.
ಈ ರೀತಿ ಬೆವರಿಳಿಸಿಕೊಳ್ಳಲು ನಾವು ಗಂಟೆಗಟ್ಟಲೆ walk ಮಾಡುತ್ತೇವೆ. ದೇಹ ದಂಡಿಸುತ್ತೇವೆ. ಆದರೆ ಇಲ್ಲಿ ಯಾವುದೇ ರೀತಿಯ physical exercise ಇಲ್ಲದೇ ಬೆವರಿಳಿಸಿಕೊಳ್ಳುವುದೇ ಉತ್ತಮ ಎಂದು, ಉರಿಯುವ ಸೂರ್ಯನ ಕಿರಣಗಳು ತಮ್ಮ ಮೈಮೇಲೆ ಮುಕ್ತವಾಗಿ ಹರಿದಾಡಲಿ ಎಂದು ವಿದೇಶಿಗರು ಸಮುದ್ರ ಸ್ನಾನ ಬಯಸುತ್ತಾರೆ. ಸದಾ ಉರಿಬಿಸಿಲಿನಲ್ಲಿ ಒದ್ದಾಡುವ ನಮಗೆ ಸಮುದ್ರ ಸ್ನಾನ ಸಖ್ಯವೆನಿಸದಿದ್ದರೂ ವಿದೇಶಿಗರ ಮೋಜು ನೋಡಲು ಖುಷಿ ಎನಿಸುತ್ತದೆ. ಮಧ್ಯಾನ್ಹ ಒಂಚೂರು ತಿಂದಿದ್ದಕ್ಕೆ ಕೇವಲ ಕೇವಲ ರೂ. 600/- ಎಂದಾಗ ಒಂಚೂರು ಕಸಿವಿಸಿಯಾಯಿತು. ಇದೇ ಊರ ಹೊರಗಡೆ ಕೇವಲ ನೂರು ರೂಪಾಯಿಗೆ ಸಿಗುತ್ತದೆ ಅನಿಸಿತ್ತು. ನನ್ನ ಹಳವಂಡವನ್ನು ಕಂಡ waiter ಒಳಗೊಳಗೆ ನಕ್ಕಿರಬೇಕು. ಯಾಕೆಂದರೆ ಇದು ಕೋವಲಮ್ ಅಲ್ಲವೇ? ವೀರಶೈವ ಮಹಾಸಭಾದ ಪದಾಧಿಕಾರಿ ಕೆ.ಎನ್. ಪಿಳೈ ಒಡೆತನದಲ್ಲಿ ಎರಡು Home stay ಗಳಿವೆ. ಅವರ swamy Guest Home ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಿರ್ಜನ ರಾರ್ತಿಯ ಚಂದ್ರನ ಬೆಳಕಲ್ಲಿ ಅಬ್ಬರಿಸುವ ಅಲೆಗಳು ಬದುಕನ್ನು ಸಮರ್ಥವಾಗಿ ಎದುರಿಸುವ ಪಾಠ ಕಲಿಸುತ್ತವೆ. ಮರುದಿನ ನಸುಕಿನಲ್ಲಿ ಬೆಸ್ತರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುವ ಸಾಹಸ ಮಾಡುತ್ತಿದ್ದರೆ, ಸುಂದರ ಯುವತಿಯರು ತಮ್ಮ ದೇಹ ಬೆಚ್ಚಗಿನ thrill ಅನುಭವಿಸಲು ನೀರಿಗಿಳಿಯುತ್ತಿದ್ದರು. ನೀರಿಗಿಳಿಯಲು ಇಬ್ಬರೂ ಅರೆಬೆತ್ತಲಾಗಿದ್ದಾರೆ ಆದರೆ ಉದ್ದೇಶ ಬೇರೆ, ಬೇರೆ. ಅರೆಬೆತ್ತಲೆಯ ಬೆಸ್ತರನ್ನು, ಯುವತಿಯರನ್ನು ಹೋಲಿಸುತ್ತ ನೀರಿಗಿಳಿದೆ.

ಕೇರಳದ ಮನೋರಮ ವರದಿ...


Thursday, May 6, 2010

ನೆಲದ ಮರೆಯ ನಿಧಾನ
ಪ್ರೊ. ಸಿದ್ದು ಯಾಪಲಪರವಿ ಸೊಗಸಾದ ಮಾತುಗಾರ. ಸಂಪರ್ಕಕ್ಕೆ ಬಂದ ಯಾವ ವ್ಯಕ್ತಿಯೂ ಸುಲಭವಾಗಿ ಮರೆಯಲಾರದ ವ್ಯಕ್ತಿತ್ವ. ನಾಡಿನ ಅನೇಕ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ಸಂಪರ್ಕ ಮತ್ತು ಒಡನಾಟ ಇವರಿಗೆ ಬಲು ಸರಳ. ಮಾತನಾಡುತ್ತ, ವಯಸ್ಸಿಗೆ ತಕ್ಕ, ಅನುಭವಕ್ಕೆ ಮೀರಿದ ಮಾತನಾಡುತ್ತಿರುವರೇನೋ ಅನಿಸುವಾಗಲೆ ತಮ್ಮ ಛಾಪನ್ನು ಎದುರಿಗಿರುವವರ ಮೇಲೆ ಒತ್ತಿಬಿಟ್ಟು ನೆನಪಿನಲ್ಲಿ ಉಳಿಯುತ್ತಾರೆ ಎಂಬುದು ಬಹಳ ಜನರ ಅನಿಸಿಕೆ. ನೇರ ಮತ್ತು ವಿಡಂಬನೆಯ ಮಾತುಗಳಿಂದ ಸ್ನೇಹಿತರನ್ನು ಪಡೆದಂತೆ ವಿರೋಧಿಸುವವರನ್ನು ಪಡೆದದ್ದು ಹೆಚ್ಚು.
ಆಳಕ್ಕಿಳಿಯದೆ ಸರಳವಾಗಿ ಅರ್ಥವಾಗದ ನೆಲದ ಮರೆಯ ನಿಧಾನದಂತಹ ವ್ಯಕ್ತಿತ್ವ - ಲೇಖಕ, ವಾಗ್ಮಿ, ಉತ್ತಮ ನಿರೂಪಕ, ಸಾಕ್ಷ್ಯಚಿತ್ರ ನಿರ್ಧೇಶಕ, ಸಂದರ್ಶಕ, ಆಕಾಶವಾಣಿ ಕಲಾವಿದ, ಕವಿ, ವಿಮರ್ಶಕ, ಅದ್ಭುತ ಸಾಂಸ್ಕೃತಿಕ ಸಂಘಟಕ, ರಂಗನಟ, ಹೀಗೆ ಹಲವಾರು ಪ್ರತಿಭೆಗಳನ್ನು ಮೇಳೈಸಿಕೊಂಡಿದ್ದು, ಎಲ್ಲದರಲ್ಲಿಯೂ ಹಿಡಿತ ಸಾಧಿಸಿದ್ದರೂ ಯಾವುದಾದರೂ ಕ್ಷೇತ್ರಕ್ಕೆ ಆದ್ಯತೆ ನೀಡಿ ಗಟ್ಟಿಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇ ವಿರಳ. ಅನೇಕ ಕವಿಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ ಇವರ ಕವಿತೆಗಳು ಅಭಿವ್ಯಕ್ತವಾಗಿದ್ದರೂ ಕವನಸಂಕಲನ ಇಷ್ಟು ಕವನಗಳನ್ನು ಹೊಂದಿರುವ ಈ ಕವನ ಸಂಕಲನದಂತೆ ಇನ್ನೂ ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಪ್ರೊ. ಸಿದ್ದು ಯಾಪಲಪರವಿ ನೀಡಲಿ.

- ಡಾ.ಜಿ.ಬಿ.ಪಾಟೀಲ
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಸರಳ- ಸುಂದರ - ಅರ್ಥಪೂರ್ಣ - ವಿಶ್ವ ಕಾಯಕ ದಿನ
ಕೇರಳದ ತಿರುವನಂತಪುರದ 'ವಿಶ್ವ ಕಾಯಕ ದಿನ' ಮೇ ಒಂದರಂದು ಆಯೋಜಿಸಿದ್ದು ಅರ್ಥಪೂರ್ಣ. ಕೇರಳದ ಬಸವ ತತ್ವ ಅನುಯಾಯಿಗಳು ತುಂಬ ನಿಷ್ಠರಾಗಿದ್ದಾರೆ ಎಂಬುದು ಈ ಸರಳ-ಸುಂದರ ಕಾರ್ಯಕ್ರಮದಿಂದ ಸಾಬೀತಾಯಿತು.
ಕೇರಳ ಸರಕಾರದ LDF ನಾಯಕ ಕೃಷಿ ಮಂತ್ರಿ ಶ್ರೀ ಮುಲ್ಲಕರ ರತ್ನಾಕರನ್ ಕಾರ್ಯಕ್ರಮ ಉದ್ಘಾಟಿಸಿದರು. ಬಸವ - ಗಾಂಧೀಜಿ- ವಿವೇಕಾನಂದ ಹಾಗೂ ನಾರಾಯಣ ಗುರು ಅವರ ಸಿದ್ಧಾಂತಗಳು ನಮಗೆಲ್ಲ ದಾರಿದೀಪವಾಗಬೇಕು. ಕೇರಳದ ವೀರಶೈವರು ಬಸವಣ್ಣನನ್ನು ನಮಗೆ ಪರಿಚಯಿಸಿದ್ದು ಹೆಮ್ಮೆ ಎನಿಸಿದೆ.
ಬಸವಣ್ಣ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೇ ಇಡೀ ಜಗತ್ತಿಗೆ ಗುರುವಾಗಿದ್ದಾರೆ. ಅವರ ಕಾಯಕ ಸಿದ್ಧಾಂತ ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಧ್ಯಾನ, ಪೂಜೆಗಿಂತ ಮಿಗಿಲಾದದ್ದು ನಿಜವಾದ ಧರ್ಮವೆಂದರೆ ಕಾಯಕ.
ಕಾಯಕದ ಮೂಲಕವೇ ಒಂದು ಧರ್ಮವನ್ನು ಕಟ್ಟಿ ಬೆಳೆಸಿದ ಬಸವಣ್ಣನವರು ನಮಗೆಲ್ಲ ಆದರ್ಶ ನಾಯಕ ಎಂದರು.
ಬಸವಣ್ಣನವರ ತತ್ವಾದರ್ಶಗಳನ್ನು ಕೇರಳದ ಪಠ್ಯಕ್ರಮದಲ್ಲಿ ಅಳವಡಿಸುವುದು ಹೆಚ್ಚು ಸೂಕ್ತ ಎಂದರು.
ಉತ್ತಮ ಕಾರ್ಯಕ್ರಮ ಆಯೋಜಿಸಿದ ಬಸವ ಸಮಿತಿಯನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ದ ಸಾಹಿತಿ - ಚಿಂತಕ ಪ್ರೊ. ಸಿದ್ದು ಯಾಪಲಪರವಿ ಕಾಯಕ - ದಾಸೋಹ ಹಾಗೂ ಅನುಭವ ಮಂಟಪದ ಪರಿಕಲ್ಪನೆಯನ್ನು ವಚನಗಳ ಆಧಾರದ ಮೂಲಕ ವಿವರಿಸಿದರು. ಅಕ್ಷರ-ಅರಿವು, ಕಾಯಕ - ದಾಸೋಹ ಪರಿಕಲ್ಪನೆಯಿಂದಾಗಿ ಧರ್ಮ ಅರ್ಥಪೂರ್ಣವಾಗಿ ಬೆಳೆಯಲು ಸಾಧ್ಯವಾಯಿತು. ವಚನಗಳಲ್ಲಿನ ವಿಚಾರಧಾರೆಗಳು, ಕಾವ್ಯಸೂಕ್ಷ್ಮತೆ, ಸಂಕೇತ, ಪ್ರತಿಮೆಗಳು ಹಾಗೂ ಸುಂದರ ಭಾಷೆ ವಚನ ಸಾಹಿತ್ಯವನ್ನು ಶ್ರೇಷ್ಠ ಕಾವ್ಯದ ಮಟ್ಟಕ್ಕೆ ತಲುಪಿಸಿವೆ ಎಂದರು. ಇವರು ವಿವರಿಸಿದ ಎಲ್ಲ ವಚನಗಳ ಸಾಲುಗಳನ್ನು ಮಲೆಯಾಳಿಗೆ ಪ್ರಸನ್ನ ಕುಮಾರ ಅನುವಾದಿಸಿದರು. ನಂತರ ಸಂವಾದ ಕಾರ್ಯಕ್ರಮದಲ್ಲಿ ಅನೇಕರಿಗೆ ಪ್ರೊ. ಯಾಪಲಪರವಿ ಉತ್ತರಿಸಿದರು. ಬಸವ ಪಥ ಚರ್ಚೆಗೆ ಭಾಷೆ ಅಡ್ಡಗೋಡೆಯಾಗದಿದ್ದದು ವಿಶೇಷ. ಕೇರಳ ಸರಕಾರದ ಗ್ರಾಮೀಣ ಇಲಾಖೆಯ ಸಲಹೆಗಾರ ಪ್ರೊ. ಎ.ಆರ್. ಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಕೇರಳ ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂತ್ರಿಗಳನ್ನು, ಚಿಂತಕ ಯಾಪಲಪರವಿ ಅವರನ್ನು ಅಭಿನಂದಿಸಿದರು. ರಾಜ್ಯ ವೀರಶೈವ ಮಹಾಸಭಾದ ಅಧ್ಯಕ್ಷ ಕುಂಜುಮನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳದಲ್ಲಿ ಬಸವ ತತ್ವಮನೆಮನೆಯಲ್ಲಿ ಬೆಳಗುತ್ತದೆ.
ಸರಕಾರ ಕೂಡಾ ಕಾಯಕ ದಿನದಲ್ಲಿ ಪಾಲ್ಗೊಂಡಿರುವುದು ಲಿಂಗಾಯತ ಧರ್ಮಕ್ಕಿರುವ ಸಾಮರ್ಥ್ಯವನ್ನು ತೋರುತ್ತದೆ ಎಂದರು. ಬಸವ ಸಮಿತಿಯ ಅರವಿಂದ ಜತ್ತಿ ಅನೇಕ ಉಪಯುಕ್ತ ಗ್ರಂಥಗಳನ್ನು ನಮ್ಮ ಭಾಷೆಗೆ ಪರಿಚಯಿಸಿ, ಶ್ರೇಷ್ಠ ತಜ್ಞರನ್ನು ನಾಡಿಗೆ ಕಳಿಸುತ್ತಿರುವುದು ಅಭಿನಂದನೀಯ ಎಂದರು. ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಶೋಭನಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಿರುವಂನಂತಪುರದ ಅಧ್ಯಕ್ಷ ಕೆ.ಎನ್.ಪಿಳೈ, ಕೇರಳಾಧ್ಯಕ್ಷ ಟಿ.ವಿ. ಶಶಿಕುಮಾರ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಲಿಂಗಾಯತ ಧರ್ಮದ ವಿವಿಧ ಆಯಾಮಗಳ ಕುರಿತು ನಂತರ ಚರ್ಚಿಸಲಾಯಿತು.
ವರದಿ-ಪ್ರಸನ್ನಕುಮಾರ

ಅಂತರದ ನಂತರ.............




ಏನೋ ಕಳೆದುಕೊಂಡ ಹಳವಂಡ. ವಾರದಿಂದ ಸಂಪೂರ್ಣ ಅಲೆದಾಟ. ಕೇರಳದ ಬಸವ ಸಮಿತಿ ಹಾಗೂ ವೀರಶೈವ ಮಹಾಸಭಾದ ಆಹ್ವಾನದ ಮೇರೆಗೆ ಕೇರಳದಲ್ಲಿ ರಾಜಧಾನಿ ತಿರುವನಂತಪುರದಲ್ಲಿ ಆಯೋಜಿಸಿದ್ದ may day ಕಾರ್ಮಿಕರ ದಿನಾಚರಣೆಯನ್ನು ಬಸವತತ್ವ ಅನುಯಾಯಿಗಳು 'ವಿಶ್ವ ಕಾಯಕ ದಿನ' ಎಂದು ಆಚರಿಸಿದ್ದು ಅರ್ಥಪೂರ್ಣ, ಅನುಕರಣೀಯ!
ಕೇರಳಿಗರು ಪ್ರತಿಭಾವಂತರು ಸಾಹಿತ್ಯ, ರಾಜಕೀಯ, ಉದ್ಯಮವನ್ನು ಚನ್ನಾಗಿ ಬಲ್ಲವರು ಕಳೆದ ಒಂದು ದಶಕದಿಂದ ಬಸವಣ್ಣನ ತತ್ವಗಳನ್ನು ಅರ್ಥಮಾಡಿಕೊಳ್ಳುತ್ತಲಿದ್ದಾರೆ. ಬಸವಾದಿ ಶರಣರ ವಚನಗಳನ್ನು ಬಸವ ಸಮಿತಿ ಮಲೆಯಾಳಿ ಭಾಷೆಗೆ ಅನುವಾದಿಸಿ ಕೊಟ್ಟಿದೆ. ನಾಲ್ಕಾರು ಶತಮಾನಗಳಿಂದ ವೀರಶ್ವೆವರು ಎಂದು ಗುರುತಿಸಿಕೊಂಡಿದ್ದ ಅಲ್ಲಿನ ಲಿಂಗಾಯತರಿಗೆ ಮಾನ್ಯ ಡಾ. ಜತ್ತಿಯವರು ಬಸವಣ್ಣನನ್ನು ಪರಿಚಯಿಸಿದರು. ವೀರಶೈವ ಮಹಾಸಭಾದ ಹೆಸರಿನ ಮೇಲೆ ಒಂದುಗೂಡಿದ್ದ ಲಿಂಗಾಯತ ಸಮಾಜ ತಾತ್ವಿಕವಾಗಿ ಬಸವಣ್ಣನನ್ನು ಅಷ್ಟಾಗಿ ತಿಳಿದುಕೊಂಡಿರಲಿಲ್ಲ. ಈಗ ಅರವಿಂದ ಜತ್ತಿಯವರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕ, ಬಸವ ತತ್ವ ರಾಯಭಾರಿಯಂತೆ ಕೇರಳದ ತುಂಬಾ ಓಡಾಡುತ್ತಲಿರುವ ಶ್ರೀ ಪ್ರಸನ್ನ ಕುಮಾರ ಪಿಳೈ ಅವರ ಸಂಘಟನೆಯಲ್ಲಿ ಹೊಸ ಸಂಚಲನ ಉಂಟಾಗಿದೆ.
ಇದು ನನ್ನ ಎರಡನೇ ಭೇಟಿ. ಈ ಹಿಂದೆ ಹೋದಾಗ ಪ್ರಸನ್ನ ಕುಮಾರ, ಹಾಗೂ ಪ್ರೊ.ಎ.ಆರ್. ಜ್ಯೋತಿ ಸಣ್ಣ ಕಾರ್ಯಕ್ರಮ ಆಯೋಜಿಸಿದ್ದರು. ಈ ಬಾರಿ ಕೇರಳದ ಸಚಿವರ ಸಮ್ಮುಖದಲ್ಲಿ ಬಸವಣ್ಣನ ಕಾಯಕ ಸಿದ್ಧಾಂತವನ್ನು ಸರಕಾರಿ ಕಾರ್ಯಕ್ರಮದಂತೆ ಆಯೋಜಿಸಿದ್ದು ಬಸವಣ್ಣ ನೆಲದ ಮಕ್ಕಳಾದ ನಾವು ಹೆಮ್ಮೆ ಪಡಬೇಕು. ಅರವಿಂದ ಜತ್ತಿ ಹಾಗೂ ಪ್ರಸನ್ನ ಕುಮಾರ ಅವರ ಅಪೇಕ್ಷೆಯಂತೆ ಮುಖ್ಯ ಮಾತುಗಾರನಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ತುಂಬಾ ತಯಾರಿ ಮಾಡಿಕೊಂಡಿದ್ದೆ ಕಾಯಕ, ದಾಸೋಹ ಹಾಗೂ ತ್ರಿಸ್ಪೂರ ಸಭೆಗಳಲ್ಲಿ ಮಾತನಾಡಿದೆ. ಇಂಗ್ಲಿಷ್ ಭಾಷಣವನ್ನು ಪ್ರಸನ್ನ ಕುಮಾರ ವೇದಿಕೆ ಮೇಲೆ ಅನುವಾದಿಸಿದರು ಹೀಗೆ ಹಲವು ಸಂಗತಿಗಳು ಈಗ ನಿಮ್ಮೊಂದಿಗೆ.............