Wednesday, February 28, 2018

ಲವ್ ಕಾಲ

*ಲವ್ ಕಾಲ*

*ಪ್ರೀತಿ ಎಂಬ ಸಂಶಯ*

ಹಲೋ ರಾಣಿ,

'ನಾನು ವಿಪರೀತ ಪ್ರೀತಿಸುತ್ತೇನೆ' ಎಂದರೆ ಖುಷಿಪಡು, ಆದರೇ ತುಂಬ ಸಂಶಯಿಸುತ್ತೇನೆ ಎಂಬುದನ್ನು ಮರೆಯಬೇಡ.

ಅಸಂಖ್ಯ ಮುತ್ತುಗಳ ಸರಮಾಲೆಯಲಿ ಮುಳುಗಿಸಿ, ಉನ್ಮಾದದಲೆಯಲಿ ತೇಲಿಸುವ ತಾಕತ್ತು ಮೈಮನಗಳಿಗಿದೆ.

ಬಿಸಿಯಪ್ಪುಗೆ, ಸವಿಮುತ್ತುಗಳು, ಕರಡಿಯಂತಹ ಬಿಗಿ ಹಿಡಿತದ ಮಿಲನಮಹೋತ್ಸವ, ಕಣ್ಣುಗಳ ಬೆಸೆಯುವ ಉನ್ಮಾದದ ಗುಟುಕುಗಳು, ವೀಣೆಯ ಮೀಟಿದ ಕಂಪನ, ಹಾವ ಸರ ಸರ ಹರಿದಾಟ, ಹಲ್ಲುಗಳ ಸಿಂಚನ, ಅಂಗೈಮಂಥನ... ಹೀಗೆ ಕೊಡುವ ಸವಿಸುಖ ಮರೆಯಲಾಗದು.

'ಆದರೆ ಆದರೆ ನಾ ದೂರಾದರೆ ಸಾಕು ನಿನ್ನ ಕಿರಿ ಕಿರಿ ತಡೆಯಲಾರೆ' ಅಂದರೆ ಹೇಗೆ?
ಆಳವಾಗಿ, ಗಾಢವಾಗಿ ಪ್ರೀತಿಸುವ ಹುಚ್ಚು ಮನಸು ಅಷ್ಟೇ ಆಳವಾಗಿ ಆಳ ಬಯಸುತ್ತದೆ, ಅಳುತ್ತದೆ ಕೂಡಾ.

ಪ್ರೀತಿ ಉತ್ಕಟತೆಯನು ಸಂಭ್ರಮಿಸುವ ಮನಸು ಅತ್ಯಂತ ಅನಿವಾರ್ಯವಾಗಿ ಈ ಕಿರಿ ಕಿರಿ ವ್ಯಾಮೋಹವನು ಸಹಿಸಲೇಬೇಕು.

ಈ ಅಪರಿಮಿತ ವ್ಯಾಮೋಹವನು *ಅನುಮಾನ-ಸಂಶಯ* ಎಂದು ಹಂಗಿಸಬೇಡ.

ರಾಣಿ, ಮಹಾರಾಣಿಯ ಹಾಗಿರಲಿ ಎಂಬ ತೀವ್ರ ತುಡಿತ, ಕೊಡಬಯಸುವ ಪರಮ ಖುಷಿಯ ಉತ್ಕಟತೆ ಹೀಗೆ ಹಿಂಸಿಸುತ್ತದೆ. ದಯವಿಟ್ಟು ಸಹಿಸಿಕೋ *ರಾಣಿ ನೀ ಮಹಾರಾಣಿಯಾಗುವ ತನಕ*.

ನಿನ್ನ ಅನ್ಯಮನಸ್ಕ, ನಿರಾಶೆಯ ಮುಖ ನೋಡಿ ಹೊಟ್ಟೆಯಲಿ ತಳಮಳ.  ಈಗ ನನ್ನ ಉದ್ದೇಶ ಹೇಳುವ ಅನಿವಾರ್ಯತೆ.

ಅತಿಯಾದ ಪ್ರೀತಿ  possessiveness ಅನಿಸಿ ಸಂಶಯಿಸಬಹುದು, *ಆಳವಾದ ಪ್ರೀತಿಗೆ ಅಷ್ಟೇ ಆಳವಾದ ಸಂಶಯವೂ ಇರುತ್ತದೆ ಎಂದು ಎಲ್ಲೋ ಓದಿದ ನೆನಪು*.

ಆ ಆಳದ ಪ್ರೀತಿಯ ಎಳೆ ಹಿಡಿದು ನನ್ನ ಸಹಿಸಿಕೋ, ಜೊತೆಗೆ ಇದ್ದಾಗ ಎದುರಿಗೆ ಸಿಕ್ಕಾಗ *ಪ್ರೇಮದಮಲಿನಲಿ ಮುಳುಗಿಸಿ, ಸುಖದಲೆಯಲಿ ತೇಲಿಸಿಬಿಡುವೆ*.

*ಅಲ್ಲಿಯವರೆಗೆ ಇಬ್ಬರೂ ಕಾದಾಡುತಲೇ ಕಾಯೋಣ*.

ಸದಾ ನಿನ್ನಯ

*ಅರಿವು*

ಬಿಳಿ ಕಾಗದ

*ಬಿಳಿ ಕಾಗದ*

ಬಿಳಿ ಹಾಳೆ ಕೈಗಿಟ್ಟು ಏನಾದರೂ ಬರೆ
ಎಂದು ವಿಶ್ವಾಸದಿಂದ ಹೇಳಿದೆ
ಸುಂದರ ಚಿತ್ತಾರ , ಒಲವಿನ ಮಾತುಗಳು
ಹಾಳೆಯ ತುಂಬಾ ಹರಡಬಹುದೆಂಬ
ಭವ್ಯ ಕನಸಿತ್ತು

ಏನೂ ಇಲ್ಲದೆ ಏನಾದರೂ ಗೀಚಿದ್ದರೆ ಸಾಕಿತ್ತು
ಆದರೆ ಸುಂದರ ಬಿಳಿ ಹಾಳೆಯ ಸ್ವಚ್ಛವನು
ನೀ ಸ್ವಚ್ಛಂದ ಅಂದುಕೊಳ್ಳುತ್ತೀ ಎಂದೆಣಿಸಿರಲಿಲ್ಲ

ಎದೆಯ ಬಗೆದು ಹೃದಯ ಅಂಗೈಯಲಿ
ಇಟ್ಟಾಗ ಕರುಳು ಚುರ್ ಅನ್ನಬೇಕಿತ್ತು

ತಲೆಯಲಡಗಿದ ತುಮುಲಗಳ ಯಾವ
ಮುಲಾಜಿಲ್ಲದೆ ಶಬ್ದ ಮಾಲೆ ಕಟ್ಟಿ ಹಾಡ
ಹೇಳಿದಾಗ ನೀ ತಲೆದೂಗಬೇಕಿತ್ತು

ಮಗುವಿಗೆ ಹಾಗೆ ಬೆತ್ತಲಾಗಿ ಅತ್ತಿತ್ತ ಓಡಾಡಿ
ಮುಗ್ಧ ನಗೆಯಲಿ ಕೇಕೆ ಹಾಕಿದಾಗ
ಸಂಭ್ರಮದಿ ಎತ್ತಿ ಮುದ್ದಾಡಬಹುದಿತ್ತು

ದುಃಖದಿ  ತೊಡೆಯ ಮೇಲೆ ಮಲಗಿ
ಬಿಕ್ಕಳಿಸಿದಾಗ ತಲೆ ಸವರಿ
ರಮಿಸಬಹುದಿತ್ತು

ನನ್ನ ಎದೆಯಾಳದ ಭಾವನೆಗಳು
ಭೋರ್ಗರೆದಾಗ
ಆಲಿಸುವದು ಬೇಡ ಕೊಂಚ
ಕೇಳಬಹುದಿತ್ತು

ಕನಸುಗಳು ನನವಿರಬಹುದು ಆದರೆ
ಭ್ರಮೆ ಅಂತು ಅಲ್ಲವಲ್ಲ

ಮನದ ಮಾತುಗಳು ಇವು ಸಂತೆಯ
ಸದ್ದು ಪುಂಡರ ಗೋಷ್ಟಿಗಳಲ್ಲವಲ್ಲ

ಈಗಲೂ ಏನಾದರೂ ಬರೆ
ಆದರೆ ಎಳೆಯಬೇಡ ಬರೆ

ಅದು ಬಿಳಿ ಹಾಳೆ ಅಲ್ಲಿ ಇಲ್ಲಿ ಬಿದ್ದು
ಗಾಳಿಯಲಿ ಹಾರಾಡಿ ಕೊಚ್ಚೆಯಲಿ
ಕೊಳೆತು ನೆಲದಲಿ
ಸಮಾಧಿಯಾಗುವುದು ಬೇಡ

ಚಿಂದಿ ಆಯುವ , ರದ್ದಿ ಮಾರುವವರ
ಕೈಗಾದರೂ ಸಿಕ್ಕರೆ ಕೊಂಚ
ಬರಬಹುದು ಬೆಲೆ

ಅವರ ಕೈಗೆ ಒಂದಿಷ್ಟು ಪುಡಿಗಾಸು ಸಿಕ್ಕು
ಖುಷಿಯಿಂದ  ಅರಳುವ ನಗೆಯಲಿ
ನಾ ಮರೆಯಾಗಿ ಮೆರೆಯುವೆ.

---ಸಿದ್ದು ಯಾಪಲಪರವಿ

ನಾ ನಲ್ಲ

*ನಾ ನಲ್ಲ*

ನಿನ್ನೊಳಗೆ ಕಳೆದ ನಾ
ನನ್ನೊಳಗೆ ಅಸ್ಮಿತೆ
ಹುಡುಕಿ ಸಿಗಲಾರದೆ
ತೊಳಲಾಡುತಿರುವೆ...

ನಾ
ಈಗ ಖಾಲಿ ಖಾಲಿ
ನಾ ಇಲ್ಲ
ನೀ ಇಲ್ಲ

ಇದಕೆ ಹೊಣೆ ನಾ
ನಲ್ಲ‌

ಬರೀ ಹುಚ್ಚು
ಎಲ್ಲ.

-----ಸಿದ್ದು ಯಾಪಲಪರವಿ.

Sridevi our dream girl.

Sridevi: Dream girl in a true sense

Sridevi is always alive. She never dies. Yet we/ I remember her old movies, tried to fulfill our secret lust. As a young boy it was very difficult to control the hot feelings. Somewhat clumsy and confused.

In reality it's impossible to get such a beautiful partner in the life. But in dream we  remember our favorite heroine to  compromise and satisfy in the life.

Illusion is the only outlet to satisfy our secret lustful thoughts.
Sex is such a phenomena which can't be explained but only experienced.

In the dreamy world we always fly to kill our untold stories.

Sridevi has helped us to pass the bachelor life safely. It was quite sinful to speak about our sexual thoughts but inevitable to control ourselves.

Now we have grown and realized the respect of women, after watching her English Vinglish I felt guilt about my past feelings on her. I enjoyed the tempo Of the movie with due respect.

After her sudden and unexpected demise I recollected my college days with her.

Sorry madam you would have not gone so early. You had maintained good health but fate decided in its own different way. 
How badly it decided to take you away.
It killed the beautiful dreams of our dreamy lady. Death is not cruel but beautiful also which sometimes helps us to recollect our beautiful days.

We watch you on the screen and keep you in our hearts.

-----Siddu Yapalaparvi.

Tuesday, February 27, 2018

ದಂತಕಥೆ ಶ್ರೀದೇವಿ

*ಶ್ರೀದೇವಿ ಹೇಗಿದ್ದರೂ ದಂತಕಥೆ: ಬದುಕಲು ಬಿಡಿ*

ಚಿರನಿದ್ರೆಯಲಿರುವ ತ್ರಿಲೋಕಸುಂದರಿ ಈಗ ಇತಿಹಾಸ. ಆದರೆ ಮಾಧ್ಯಮಗಳಿಗೆ ತೀರದ ದಾಯ. ಪ್ರತಿಯೊಬ್ಬ ಸೆಲಿಬ್ರಟಿಗಳ ಖಾಸಗಿ ಬದುಕು ನಿಗೂಢ. ಊಹಾತೀತ.

ವಿಶೇಷವಾಗಿ ಕನಸುಗಳನ್ನು ಮಾರುವ ನಟರೂ ನಮ್ಮ ಹಾಗೆ ಮನುಷ್ಯರೇ. ಆದರೆ ಸಾಧನೆಯಿಂದ ಅವರು ದೊಡ್ಡವರಾಗಿರುತ್ತಾರೆ. ಹಾಗಂದ ಮಾತ್ರಕ್ಕೆ ಅವರಿಗೆ ಸುಖ-ದುಃಖಗಳ ಮೀರಲಾಗುವುದಿಲ್ಲ.

ನಟಿಯರ ಬದುಕು ಇನ್ನೂ ದುರಂತ. ಕೋಟ್ಯಂತರ ಅಭಿಮಾನಿಗಳು ಆರಾಧಿಸಿ ಕನಸು ಕಂಡಿರುತ್ತಾರೆ. ಆ ಕನಸು ಒಮ್ಮೊಮ್ಮೆ ವಿಕಾರವಾಗಿಯೂ ಇರಬಹುದು. ಅವಳು ಸಿಕ್ಕರೆ ನನಗೇ ಸಿಗಲಿ ಎಂಬ ಭ್ರಾಂತು ಬೇರೆ.

ಆದರೆ ಪಾಪ! ಅವರಿಗೆ ಅವರದೇ ಆದ ಆಸೆ ಆಮಿಷಗಳಿರುತ್ತವೆ. ಕನಸುಗಳಿರುತ್ತವೆ. ಅನಿವಾರ್ಯವಾಗಿ ಪರಸ್ಥಿತಿಯ ಒತ್ತಡಕ್ಕೆ ಮಣಿದು ಮನಸಿರದವರ ಜೊತೆಗೆ ಮೈಮನ ಹಂಚಿಕೊಂಡು ಒದ್ದಾಡಿರುತ್ತಾರೆ.

ಇದಕ್ಕೆ ಶ್ರೀದೇವಿ ಹೊರತಾಗಲಿಲ್ಲ. ಎಲ್ಲರ ಕಚಗುಳಿ ಕನಸುಗಳಿಗೆ ತೆರೆ ಎಳೆದು ಪರಸ್ಥಿತಿಗೆ ಅನುಗುಣವಾಗಿ ಮದುವೆಯಾಗಿ ಪಡ್ಡೆ ಮನಸುಗಳ ಕನಸುಗಳಿಂದ ಕೊಂಚ ದೂರ ಸರಿದರು.

ಅವರ ಖಾಸಗಿ ತಲ್ಲಣ, ನೋವುಗಳ ವಿಶ್ಲೇಷಣೆಯನ್ನು ನಿರ್ದೇಶಕ *ರಾಮಗೋಪಾಲ ವರ್ಮ* ತಮ್ಮ ಮುಖಪುಸ್ತಕದಲ್ಲಿ ಮಾಡಿದ್ದಾರೆ.

ಎಲ್ಲರಿಗೂ ಇರಬಹುದಾದ ಸಮಸ್ಯೆಗಳು ಇವರಿಗೂ ಇದ್ದಿರಬಹುದು. ಆದರೆ ಸಾವು ಅಸಹಜವಾಗಿರಬಾರದಿತ್ತು ಅನಿಸುವುದು ಸಹಜ.
ಅದನ್ನು ಈಗ ವಿಕೃತವಾಗಿ ಅವರ ಸಾವಿನ ಕಾರಣಗಳನ್ನು ಪೋಸ್ಟ್ ಮಾರ್ಟಮ್ ಮಾಡಬಾರದು.‌

ಅಂತಹ ಖಾಸಗಿ ಹಿಂಸೆಯನ್ನು ಅನೇಕ ನಟರು ಎದುರಿಸಿ ಬದುಕಿ ಮತ್ತೆ ಬದುಕನ್ನು ಸರಿದಾರಿಗೆ
ತಂದುಕೊಂಡಿದ್ದಾರೆ. ಈಗ ಆ ಹೆಸರುಗಳ ಪ್ರಸ್ತಾಪ ಇಲ್ಲಿ ಬೇಡ.

ಹಣ-ಅಂತಸ್ತು-ಕೀರ್ತಿ ಯಾವುದೂ ಯಾರನ್ನೂ ಕಾಪಾಡುವುದಿಲ್ಲ ಎಂಬುದು ಬದುಕಿನ ಬೆರಗು.

ಹುಟ್ಟು-ಸಾವುಗಳ ಶಕ್ತಿಯೇ ಹಾಗೆ. ಸತ್ತಾಗ ಎಲ್ಲವೂ ಮಹತ್ವ ಪಡೆದುಕೊಳ್ಳುತ್ತೆ ಅಷ್ಟೇ.

TRP ಕಾರಣಕ್ಕೆ, ಬರಹದ ತೆವಲಿಗೆ, ಹೋದವರ ಬದುಕನ್ನು ಹಿಗ್ಗಾ ಮುಗ್ಗ ಮಾಡಬಾರದು.

ನಮ್ಮ ಕನಸುಗಳನ್ನು ಆಳಿ, ಕಾಮನೆಗಳನ್ನು ಕೆರಳಿಸಿದ ಶ್ರೀದೇವಿಯ ಕ್ಷಮೆ ಕೇಳುವ ಪ್ರಸಂಗ ಬರಬಾರದು. ನಮ್ಮ ತಪ್ಪುಗಳಿಗೆ ನಾವೇ ಪಶ್ಚಾತ್ತಾಪ ಪಡೋಣ.

ವಿಕೃತ ಮನಸಿಗೆ ನಾವು ಹೊಣೆಗಾರರಲ್ಲ. ಆದರೆ ತಿಳುವಳಿಕೆ ಸಿದ್ಧಿಸಿದ ಮೇಲಾದರೂ ಅಸಹಜವಾಗಿ ಆಲೋಚಿಸುವುದು ಬೇಡವೇ ಬೇಡ, ಸತ್ತಾಗಲಾದರೂ ಬದುಕಲು ಬಿಡಿ ಎಂದು ಮಾಧ್ಯಮದ ಮಿತ್ರರಲ್ಲಿ  ನಿವೇದಿಸುವೆ.

-----ಸಿದ್ದು ಯಾಪಲಪರವಿ.

Wednesday, February 21, 2018

ಖಾಲಿತನದ ಸಂಕಟ

*ಖಾಲಿತನದ ಸಂಕಟ*

ಎಷ್ಟೇ ಕೆಲಸ‌ ಮಾಡಿದರೂ
ಕಾಡುವ ಖಾಲಿತನ ಹಾಗೂ ಶೂನ್ಯತೆಗೆ
ಯಾರು ಹೊಣೆ?

ಸಹಿಸುತ್ತ ಸಾಗಲೇಬೇಕು.
ಇವೆಲ್ಲ ನಾವೇ ಬಿಟ್ಟುಕೊಳ್ಳುವ
ಇರುವೆಗಳು

ಸರಿಮಾಡಿದಂತೆಲ್ಲ ತೊಡಕಾಗುವ
ಮಸಸುಗಳು

ಧ್ಯಾನ
ಮಾತುಕತೆ
ಚರ್ಚೆ
ಆಲೋಚನೆ
ಎಲ್ಲವೂ ಅಷ್ಟೇ
ಏನೂ ಪ್ರಯೋಜನವಿಲ್ಲ
ನಿಷ್ಪ್ರಯೋಜಕ

ಹೇಳಿದ್ದೇ ಹೇಳುತ್ತ ಕೇಳಿದ್ದೇ
ಕೇಳುತ್ತ ಮತ್ತೆಲ್ಲೋ ಏನೋ
ಹೊಸತನ ಹುಡುಕುತ್ತ

ಅಯ್ಯೋ ಇದೆಲ್ಲ‌‌ ವೇಸ್ಟ್
ಯಾರಿಗೂ ಬೇಕಿರುವುದಿಲ್ಲ‌

ಎಲ್ಲರಿಗೂ ತಮ್ಮದೇ ವಿಚಾರಗಳು
ತಮ್ಮದೇ ಲೋಕ ಆ ಲೋಕದಲಿ
ಒಂದಷ್ಟು ವ್ಯಕ್ತಿಗಳು

ಈಗ ನನ್ನ‌ದೇನು ಕೆಲಸ
ನನ್ನ ನಾ
ರಮಿಸಿಕೊಂಡು ತಣ್ಣಗಿರಬೇಕು
ಅಷ್ಟೇ.

----ಸಿದ್ದು ಯಾಪಲಪರವಿ.

Tuesday, February 20, 2018

ಮನದಾಟ

*ಮನದಾಟ*

ಈ ಜಗದಲಿ ಮಿಲನವೆಂಬುದು
ಬರೀ ದೇಹದಾಟವಲ್ಲ
ಮನಸು ಮನಸು ಕೂಡಿದರೆ
ಸಾಕು ಕೂಡುವಾಟ ಮುಗಿಯುವುದಿಲ್ಲಿ 

ಚರಿತ್ರೆಯ ಬೆಂಬತ್ತಿ ಹೋದ
ಚಾರಿತ್ರ್ಯ ಬೀಳುವುದು
ಅಲ್ಲಿ ಇಲ್ಲಿ ಎಲ್ಲಿ ಮತ್ತೆಲ್ಲಿ

ಬೆನ್ನು ಬಾಗಿ ಗೂನು ಬಿದ್ದು
ಸುಕ್ಕು ಗಟ್ಟಿ ಮುದಿಯಾಗಿ
ಕೊಳೆತು ಹೆಣವಾಗಿ ನಾರುವ
ದೇಹಕಿಲ್ಲ ಮೂರು
ಕಾಸಿನ ಕಿಮ್ಮತ್ತು

ಬದುಕಿ ಬಾಳುವ
ಸವಿ ಅಡಗಿರುವುದು
ಮನದ ಮೂಲೆಯಲ್ಲಿ

ಮನಸ ಹಾರಲು ಬಿಟ್ಟು
ಕನಸಲಿ ಕೆಟ್ಟರೂ ಸಾಕು
ಮೈಗೆ ಚಾರಿತ್ರ್ಯ ಇನ್ನೆಲ್ಲಿ

ಚಾರಿತ್ರ್ಯ ಚರಿತ್ರೆಯ ಒಳಗುಟ್ಟು
ಬಲ್ಲ ಕೇವಲ ಮನದ ಕಳ್ಳ
ಮನಸ ಸಾಕ್ಷಿ ಸಾಕು
ಬದುಕ ಬವಣೆ ಎಲ್ಲ

ಕಳ್ಳರು ನಾವು ಬಲುಗಳ್ಳರು
ಹುಡುಕುತೇವೆ ಅವರಿವರ
ದೇಹದಾಟದ ಮಾಟ

ಕಳೆದುಕೊಂಡ ಕಳ್ಳ
ಮಳ್ಳರಾಗಿ ಮರೆಯಾಗುತೇವ
ಒಂದು ದಿವಸ.

---ಸಿದ್ದು ಯಾಪಲಪರವಿ

Monday, February 19, 2018

ವೀರಶೈವ-ಲಿಂಗಾಯತ ಚಳುವಳಿಯ ಬಗೆ

ಸಂವಾದ

*ವೀರಶೈವ-ಲಿಂಗಾಯತ ಚಳುವಳಿಯ ಬಗೆ*

ನಿವೃತ್ತ ಅಧಿಕಾರಿ ಎಸ್.ಎಂ. ಜಾಮದಾರ ಹಾಗೂ ಬಸವರಾಜ ಇಟ್ನಾಳ ಅವರ ಅಭಿಪ್ರಾಯಗಳು ಸಮಯೋಚಿತ.

ಆದರೆ ಇಲ್ಲಿ ಆವೇಶದ ಭರದಲ್ಲಿ ಖಾಸಗಿ ಆರೋಪ ಮತ್ತು ರಾಜಕಾರಣದ ವಾಸನೆ ವಿಜ್ರಂಭಿಸುವುದು ತರವಲ್ಲ.

ಲಿಂಗಾಯತ ಚಳುವಳಿ ಇಂದಿನ ಅಗತ್ಯವಾಗಿದೆ. ಕೇವಲ ಸ್ವತಂತ್ರ ಧರ್ಮದ ನಂಬಿಕೆಯನ್ನು ಮೀರಿದ ಸಮಷ್ಟಿ ಪ್ರಜ್ಞೆ ಲಿಂಗಾಯತ ಧರ್ಮದ ತಳಹದಿಯಾಗಿದೆ.

ಲಿಂಗಾಯತ ಧರ್ಮ ಸರಳ, ವೈಜ್ಞಾನಿಕ ಮತ್ತು ಮೌಲಿಕ.
ಆದರೆ ಹೋರಾಟದ ಮುಂಚೂಣಿಯಲ್ಲಿರುವ ಬಹುಪಾಲು ಜನರು ಲಿಂಗಾಯತ ತತ್ವಗಳನ್ನು ಸಂಪೂರ್ಣ ಪಾಲಿಸುತ್ತಾರಾ? ಎಂಬ ಪ್ರಶ್ನೆ ಅಪ್ರಸ್ತುತ. ಪೂರ್ಣ ಪ್ರಮಾಣದ ಆಚರಣೆ ಕಠಿಣವಾದರೂ ಬಸವಪ್ರಜ್ಞೆ ಇದೆ ಎಂಬುದಷ್ಟೇ ಸಮಾಧಾನಕರ.

ಇಂದಿನ ಸ್ವಾರ್ಥಮಯ ವಾತಾವರಣದಲ್ಲಿ ಬಸವಪ್ರಜ್ಞೆ ಸಾಕು. ಆಚರಣೆ ಮುಂದಿನ ಬೆಳವಣಿಗೆ.

ಸ್ವತಂತ್ರ ಧರ್ಮದ ಚಳುವಳಿಗೆ ಈಗ ರಾಜಕೀಯ ಸ್ವರೂಪ ಪಡೆಯಲು ಇನ್ನೊಂದು ರಾಷ್ಟ್ರೀಯ ಪಕ್ಷದ ಮೌನವೇ ಕಾರಣ. ಕಾಂಗ್ರೆಸ್ ಪಕ್ಷ‌ ಇದನ್ನು ಬಳಸಿಕೊಂಡದ್ದು ಕೇವಲ ಜಾಣ ನಡೆಯೇ ಹೊರತು ಅಪ್ರತಿಮ ಲಿಂಗಾಯತ ಪ್ರೇಮವಲ್ಲ.

ಸದುದ್ದೇಶ ಇಟ್ಟುಕೊಂಡ ಮಠಾಧೀಶರು,ಲಿಂಗಾಯತ ಧರ್ಮದ ವಿಚಾರಧಾರೆಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಎಂ.ಬಿ.ಪಾಟೀಲ ಹಾಗೂ ವಿನಯ್ ಕುಲಕರ್ಣಿ ಭರವಸೆಯಾಗಿ ಕಂಡದ್ದು ಸಹಜ.

ಅದೇ ನಿಲುವನ್ನು ಬಿಜೆಪಿ ನಾಯಕರು ಹೊಂದಿದ್ದರೂ ಸ್ವಾಗತಿಸುತ್ತಿದ್ದರು. ಆದರೆ ಯಾಕೋ ಹಾಗಾಗಲೇ ಇಲ್ಲ.

ಕೆಲವರು ವೀರಶೈವರ ಬೆನ್ನು ಬಿದ್ದರೆ ಬಹುಪಾಲು ನಾಯಕರು ಮೌನಕ್ಕೆ ಶರಣಾದರು.
ಕೆಲವು ನಾಯಕರಾದರು ಲಿಂಗಾಯತ ಧರ್ಮವನ್ನು ಬೆಂಬಲಿಸಿ ಲಾಭ ಪಡೆಯಲು ಬೇಡ ಅಂದವರು ಯಾರು?

ಆಕಸ್ಮಾತ್ ಬೆಂಬಲಿಸಿದರೆ ಭಾಜಪ ಹೈಕಮಾಂಡ್  ತಮ್ಮನ್ನು ಗಲ್ಲಿಗೇರಿಸುತ್ತದೆಯೇನೋ ಎಂಬಂತೆ ಮೌನ ತಾಳಿದರು.
ಅವರ ಮೌನದ ಲಾಭ ಕಾಂಗ್ರೆಸ್ ಪಡೆಯಿತು ಅಷ್ಟೇ!

ಇಡೀ ಚಳುವಳಿ ಕಾಂಗ್ರೆಸ್‌ಮಯವಾಗಲು ಬಿಜೆಪಿ ನಾಯಕರೆಲ್ಲರೂ ಕಾರಣಾಗಿಬಿಟ್ಟರು.

ವೈಯಕ್ತಿಕವಾಗಿ ಲಿಂಗಾಯತ ಧರ್ಮದ ಹೋರಾಟದಲ್ಲಿ ನಂಬಿಕೆ ಇದ್ದವರಾದರೂ ಈಗಲೂ ಬಾಯಿ ಬಿಡುತ್ತಾ ಇಲ್ಲ.

‌ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಅಲ್ಪಸಂಖ್ಯಾತ ಜೈನ ಧರ್ಮದವರು.  ರಾಜ್ಯ ಬಿಜೆಪಿ ನಾಯಕರು ಲಿಂಗಾಯತ ಹೋರಾಟದ ಮಹತ್ವವನ್ನು ತಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ವಿವರಿಸಬಹುದಿತ್ತು. ಆದರೆ ಅಂತಹ ಧೈರ್ಯ ಮಾಡದೇ ಮೌನವಾಗಿದ್ದು, ವಿನಾಕಾರಣ ಚಳುವಳಿಯ ವೈರಿಗಳಾದರು.

ಧರ್ಮ ವ್ಯಕ್ತಿಯ ಖಾಸಗಿ ಸಂಗತಿ. ಅದನ್ನು ರಾಜಕೀಯ ನಿಲುವಿಗೆ ತಳುಕು ಹಾಕುವ ಅಗತ್ಯವೇ ಇರಲಿಲ್ಲ.

ಈ ಹೋರಾಟದ ಮುಂಚೂಣೆಯಲ್ಲಿರುವ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ಹೊರಟ್ಟಿ ನಿಧಾನವಾಗಿ ತಮಗರಿವಿಲ್ಲದಂತೆ ತಮ್ಮನ್ನು ತಾವು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಲು ಹೋರಾಟದ ತೀವ್ರತೆ ಹಾಗೂ ಅದರ ಪ್ರಭಾವವೇ ಕಾರಣ.

ಇದರ ರಾಜಕೀಯ ಲಾಭ ಕಾಂಗ್ರೆಸ್ ಪಕ್ಷಕ್ಕೆ ತಟ್ಟುತ್ತದೆ ಎಂಬುದು ಶುದ್ಧ ಸುಳ್ಳು.
ಅದನ್ನು  ಅರಿಯದಷ್ಟು ಅಮಾಯಕರಲ್ಲ ನಮ್ಮ ರಾಜಕಾರಣಿಗಳು.

ಲಿಂಗಾಯತ ಧರ್ಮದ ಹೋರಾಟ ಮುಂಚೂಣೆಯಲ್ಲಿರುವ ಜನಸಾಮಾನ್ಯರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬುದೂ ಶುದ್ಧ ಸುಳ್ಳು.

ಧರ್ಮ-ರಾಜಕಾರಣ ಪೂರಕವಾಗಿ ಆಲೋಚನೆ ಮಾಡಿದ್ದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುತ್ತಿರಲಿಲ್ಲ.

ವಾಸ್ತವ ಹೀಗಿರುವಾಗ ಹೋರಾಟದ ಮುಂಚೂಣಿಯಲ್ಲಿರುವ ನಾಯಕರಿಗೆ ಯಾವುದೇ ರಾಜಕೀಯ ಲಾಭವಾಗುವುದಿಲ್ಲ.

ಜನಸಾಮಾನ್ಯರಿಗೆ ಲಿಂಗಾಯತ ಧರ್ಮದ ಪ್ರಜ್ಞೆ ಹೆಚ್ಚಿಸುವಲ್ಲಿ ಈ ಚಳುವಳಿ ಕಾರಣವಾಗಿದೆ.

ವೀರಶೈವ ಮತ್ತು ಲಿಂಗಾಯತ ಮಧ್ಯೆ ಇದ್ದ ಅಂತರ ನಿಚ್ಚಳವಾಗಲು ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಹಾಗೂ ಎಸ್.ಎಂ.ಜಾಮದಾರ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಈ ಹೋರಾಟದಲ್ಲಿ ಬಸವರಾಜ ಹೊರಟ್ಟಿಯವರು ಅಷ್ಟೇ ನಿಷ್ಪ್ರಹವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬುದ್ಧಿ ಜೀವಿಗಳಿಗೆ, ಮಠಾಧೀಶರುಗಳಿಗೆ ಹಾಗೂ ಬಸವತತ್ವದಲ್ಲಿ ನಂಬಿಕೆ ಹೊಂದಿದವರಿಗೆ ಈ ಹೋರಾಟವನ್ನು ಮುನ್ನಡೆಸಲು,ಸಂಘಟನೆ ಮಾಡಲು ಆಧುನಿಕ ರಾಜಾಶ್ರಯದ ಅನಿವಾರ್ಯತೆಯಿತ್ತು.

ಹೋರಾಟದ ಉದ್ದೇಶ ಸರಿಯಾಗಿದ್ದರೆ ಸಾಕು. ಅಲ್ಲಿರುವವರು ಪರಿಪೂರ್ಣ-ಪರಿಶುದ್ಧರಾಗಿರಲಿ ಎಂಬ ನಿರೀಕ್ಷೆ ಅಸಾಧು.

ಆ ಅನಿವಾರ್ಯತೆಯ ಲಾಭ ಕೆಲವರಿಗೆ ದಕ್ಕಿದೆ.

ನಿಜಾರ್ಥದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಇಡುವ ಅಗತ್ಯವೇ ಇಲ್ಲ. ಲಾಭ ಮಾಡಿಕೊಂಡವರು ಜಾಣರು.

ಸ್ವತಂತ್ರ ಧರ್ಮ ಎಂದು ಸಾಂವಿಧಾನಿಕ ಮಾನ್ಯತೆ ಸಿಗಲಿ, ಬಿಡಲಿ. ಇದೊಂದು ಒಳ್ಳೆಯ ಆರಂಭ. ಈ ಹೋರಾಟದಿಂದ ಬಸವಪ್ರಜ್ಞೆ ಪಸರಿಸಿದೆ ಎಂಬುದೊಂದು ಹೆಮ್ಮೆ ಹಾಗೂ ಅಭಿನಂದನೀಯ.

-----ಪ್ರೊ.ಸಿದ್ದು ಯಾಪಲಪರವಿ.

ಹಾಡಗೆರೆ ಶಾಲೆ

*ಹಾಡಗೆರೆ ಶಾಲೆ,ಜನಪ್ರತಿನಿಧಿಗಳು ಹಾಗೂ ಗುರೂಜಿ*

ಉತ್ತರ ಕನ್ನಡ ಜಿಲ್ಲೆಯ ತುದಿಯ ಕಾಡಿನ ಹಳ್ಳಿ ಹಾಡಗೆರೆ. ಇಲ್ಲೊಂದು ಸರಕಾರಿ ಶಾಲೆ. ಐವತ್ತು ವಿದ್ಯಾರ್ಥಿಗಳು. ಊರಿಗೆ ರಸ್ತೆ ಇಲ್ಲ. ವಾಹನ ಸೌಕರ್ಯ ಕೂಡಾ ಇಲ್ಲ. ಈ ರಾಜ್ಯದಲ್ಲಿ ಇನ್ನೂ ಇಂತಹ ವಾತಾವರಣ ಇದೆ. ಸಾವಿರಾರು ಕೋಟಿ ಅನುದಾನ, ಅದರ ಸದ್ಭಳಕೆಗೆ ಪರದಾಡುವ ಜನಪ್ರತಿನಿಧಿಗಳು.

ಆದರೂ ಇದು ವಾಸ್ತವ. ಇಲ್ಲಿರುವ ಶಾಲೆಯನ್ನು ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದ್ದಾರೆ.
ಶಾಲೆಯ ಎರಡನೇ ವಾರ್ಷಿಕೋತ್ಸವ. ಶಾಲೆ ಆರಂಭವಾಗಿ ೩೯ ವರ್ಷ.

ಈ ಬಾರಿಯ ವಾರ್ಷಿಕೋತ್ಸವಕ್ಕೆ ಜನಪ್ರತಿನಿಧಿಗಳ ದಂಡೇ ಇತ್ತು. ಶಾಸಕರಾದ ಶ್ರೀ ಮಾಂಕಾಳ ವೈದ್ಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪಾ ನಾಯ್ಕ್ ಹಾಗೂ ಎಲ್ಲ ಅಧಿಕಾರಿಗಳು.

ಊರಿನ ನೈಜ ಸ್ಥಿತಿಯ ಮನವರಿಕೆ. ಶಾಸಕರ ಸರಳತೆ ಹಾಗೂ ಜನಪರ ಮಾತುಗಳಲಿ ನಂಬಿಕೆ ಉಂಟಾಯಿತು.

ಸಾವಿರಾರು ಕೋಟಿ ಬಳಕೆಯ ಲೆಕ್ಕ ಕೊಟ್ಟ ರೀತಿಯಲ್ಲಿ ಧನ್ಯತೆ ಇತ್ತು.

ಮೂಲಭೂತ ಸೌಕರ್ಯಗಳ ವಂಚಿತ ಜನರ ಯೋಗಕ್ಷೇಮದ ಅರಿವು ಇಂದಿನ ಅಗತ್ಯ.
ಜನಪ್ರತಿನಿಧಿಗಳು, ಮಠಾಧೀಶರು ಮನಸು ಮಾಡಿದರೆ ಏನೆಲ್ಲಾ ಸಾಧ್ಯ ಎಂಬುದನ್ನು ಈ ಕಾರ್ಯಕ್ರಮ ಕಟ್ಟಿಕೊಟ್ಟಿತು.

ಪೂಜ್ಯ ಮಾರುತಿ ಗುರೂಜಿ ಅವರು ತಮ್ಮ ಆಧ್ಯಾತ್ಮಿಕ ಸಾಧನೆಯ ಜೊತೆಗೆ ಸಮಾಜಮುಖಿ ವಿಚಾರಗಳ ಮೂಲಕ ಜನಪ್ರತಿನಿಧಿಗಳ ಜಾಗೃತಗೊಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ.

ದಟ್ಟ ಕಾಡು,ಸ್ವಚ್ಛಪರಿಸರ, ಪಕ್ಷಿಗಳ ಕಲರವ, ಹಳ್ಳಿಗರ ಸಂಭ್ರಮ, ಮಹಿಳೆಯರ‌‌ ಕುಂಭ ಸ್ವಾಗತ, ಮಕ್ಕಳ ಮುಗ್ಧತೆ, ಜನಪ್ರತಿನಿಧಿಗಳ ಭರವಸೆಯ ಮಾತುಗಳ ಸರಳತೆ ಹಾಗೂ ಕೊನೆಗೆ ಗುರೂಜಿ ಅವರ ತನ್ಮಯತೆಯ ಆಶಿರ್ವಚನ ಸುಂದರ ಸಂಜೆಯ ಸಾರ್ಥಕ್ಯ.

ಮುಗ್ಧ ಜನರ ಆಶೋತ್ತರಗಳನ್ನು ಶಾಸಕರು ಹಾಗೂ ಅವರ ಸಹಚರರು ಈಡೇರಿಸುತ್ತಾರೆ ಎಂಬ ಭರವಸೆ ಮೂಡಿತು.

ಮುಂದಿನ ವರ್ಷದ ವಾರ್ಷಿಕೋತ್ಸವಕ್ಕೆ ಹೋಗುವಾಗ ಇರಬಹುದಾದ ಸುಂದರ ರಸ್ತೆಯ ಕಲ್ಪಿಸಿಕೊಂಡು ಊರು ಸೇರಿದೆ.

ಕಳೆದು ಹೋದವರು

*ಕಳೆದು ಹೋದವರು*

ಗೋಡೆಯ ಮೇಲೆ ಲೊಚಗುಡುವ
ಹಲ್ಲಿ
ಮುಂಜಾನೆ ಕೂಗುವ ಕೋಳಿ
ಮೈಕಿನಲ್ಲಿ ಪ್ರಾರ್ಥಿಸುವ ಮುಲ್ಲಾ
ವಾಕಿಂಗ್ ಹೋಗುವವರ ಬಿರುಹೆಜ್ಜೆ

ದೇಹ ಕರಗಿಸಲು ತುಳಿಯುವ ನಿಂತ
ಸೈಕಲ್ಲಿನ ಝೇಂಕಾರ

ತೆರೆದ ಬಾಗಿಲು ಇಣುಕುವ ಸೂರ್ಯ
ರತ್ನಪಕ್ಷಿಯ ಶಕುನ
ಆದರೂ
ಮನಸು ಖಾಲಿ ಖಾಲಿ ಖಾಲಿ

ನನ್ನವರು ಕಳೆದು ಹೋಗಿದ್ದಾರೆ
ತಮ್ಮ
ತಮ್ಮ ಗದ್ದಲದ ಸಡಗರದಲಿ

ನನ್ನವರಾಗಿದ್ದರೆ ಕಳೆಯುತ್ತಿರಲಿಲ್ಲ
ನಾ
ನನ್ನವರು ಅಂದುಕೊಂಡರೆ ಅವರದೇನು
ತಪ್ಪಿಲ್ಲ ಬಿಡಿ

ಅವರ ಪಾಡಿಗೆ ಅವರದೇ ಸರಿ ಈಗ
ಅವರು ಇನ್ನೂ ಬಿಜಿ ಕಳೆದುಕೊಂಡಿದ್ದಾರೆ
ಮುದ್ದಾಂ ಬೇಕು ಅಂತ

ಹಬ್ಬದೂಟ ನೆಚ್ಚಿ ದಿನದೂಟ ಕಳಕೊಂಡ
ಹಳವಂಡ

ಹಸಿವು ಸಂಕಟ ತಳಮಳ ನಾ ಮಾಡಿ
ಕೊಂಡ ಎಡವಟ್ಟು ನಾ
ಅನುಭವಿಸಿಅಳುವಂತೆ ಇಲ್ಲ
ಜೋರು

ಇವಳು ಬೆಚ್ಚಿ ಬೆದರಿ ಬೈದಾಳು
ಮಕ್ಕಳ ಫೀಜು, ಮನೆ ಸಾಲದ ಕಂತು

ಅರ್ಧ ಬರೆದ ಕವಿತೆ ಪೂರ್ಣ
ಬರೆಯಲಾಗದ ಕಥೆ ಮತ್ತದರ
ವ್ಯಥೆ

ಬದುಕು ಹೀಗೆಯೇ ಇರುವವರು ಇದ್ದೇ
ಇರುತ್ತಾರೆ ಹೋಗುವವರು ಹೋಗುತ್ತ
ಇರುತ್ತಾರೆ ಇರಬೇಕು ನನ್ನ ಪಾಡಿಗೆ
ನಾ

ಓಂಕಾರವ ಮಾತಾಗಿಸಿ ಉಸಿರ ಲಯವ
ಉಂಡು ಸಂಭ್ರಮಿಸಿ ಧ್ಯಾನಿಸುತ ಅವನ
ಅವನು ನೀಡುವ ವರವ ಪಡೆದು

ಇರುವುದ ಹಿಡಿದು ಇರದಿರದ
ಹುಡುಕದೇ ಚಡಪಡಿಸದೇ ಸುಮ್ಮನೆ
ಹಾಗೆ ಸುಮ್ಮನೇ ಇರಬೇಕು
ಇರುತಲಿರಲೇಬೇಕು

ನಾ ಹಿಡಿದ ಗಮ್ಯದ ಕಡೆಗೆ
ಓಡಬೇಕು ಓಡಿ ಹೋಗಿ ಸಿಗುವುದ
ಪಡೆಯಬೇಕು.

---ಸಿದ್ದು ಯಾಪಲಪರವಿ.

Tuesday, February 13, 2018

ಒಲವಮಾಲೆ

*ಸಂಧಾಕಾಲಕೊಂದು ಒಲವಮಾಲೆ*

ಹಲೋ ರಾಣಿ,

*ನೆಲೆ ನಿಂತ ಹುಡುಕಾಟ-ಹುಡುಗಾಟ* ನಮ್ಮ ಬದುಕಿನ ಇಳಿಗಾಲದ ಸಂಧ್ಯಾ ಸಮಯದಲಿ ಇಡೀ ಬದುಕಿನ ಘಟನೆಗಳ ಮೆಲುಕು ಅನಿವಾರ್ಯ.

ದೇಹ ಕುಗ್ಗಿ ತನ್ನ ಕಸುವು ಕಳೆದುಕೊಂಡ ಅಸಹಾಯಕ ಹೊತ್ತು. ನೆನಪುಗಳ ಸವಿಗಾಳಿ.

ಬಂದು ಹೋಗುವ ಸಾವಿರಾರು ನೆನಪುಗಳು. ಸರಿ-ತಪ್ಪುಗಳ ವ್ಯರ್ಥ ಅನುಸಂಧಾನ.

ಗೊತ್ತಿದ್ದೋ,ಗೊತ್ತಾಗದೋ ಮಾಡಿದ ತಪ್ಪುಗಳಿಗೆ ಲೆಕ್ಕ ಕೊಡಲಾಗದು.

ಸಣ್ಣ ನಡುಕ‌ ಕೊಂಚ ಪಾಪ ಪ್ರಜ್ಞೆ. ಗೊತ್ತಿದ್ದೂ ಮಾಡಿದ ತಪ್ಪುಗಳಿಗೆ ಸಣ್ಣ ಮುಗುಳುನಗೆ.

ಈಗೇನು? ಕೇವಲ ಸ್ಮರಣೆ ಎಲ್ಲ ಮಸುಕಾಗುವ ಮುನ್ನ.

ಅಂತಹ ನೂರೆಂಟು ನೆನಪುಗಳಲಿ You are most important. ಗೊತ್ತಿದ್ದರೂ ಮಾಡಿದ ಹಿತಕಾರಿ most wanted mistake but quite lovely. No regret.

ಈ ಭಾವುಕ ತಂಟೆಕೋರ,ಜಗಳಗಂಟ ತುಡುಗು ಮನಸಿಗೆ ಏನೆಲ್ಲಾ ಬೇಕು.

ಹೆಣ್ಣು-ಹೊನ್ನು-ಮಣ್ಣು ಎಂಬ ಮನದ ಮುಂದಣ ಆಸೆಯಲೂ ಒಂಥರಾ ಬಿಸುಪು.

ನಾನು‌‌ ಅಷ್ಟೇ. ಇದಕ್ಕೆ ಹೊರತಾಗಿಲ್ಲ ಮನೋಚಪಲದ ಬಲಿಪಶು.
ಆದರೂ ನನ್ನ ಮಿತಿ ಗೊತ್ತಿದ್ದರೂ ತಡೆಯಲಾಗದ ಹಟ, ಅತೀ‌ ಅನಿಸುವಷ್ಟು possessiveness.

ಕೇವಲ ಒಲಿಸಿಕೊಂಡು ಅನುಭವಿಸಿದರೂ ಸಾಲದ ಸಾಮಿಪ್ಯ ತೀವ್ರತೆ.

ಹಕ್ಕು ಚಲಾಯಿಸುವ ಮೊಂಡಾಟ. ಬೇಕು-ಬೇಡಗಳ ಗಡಿ ದಾಟಿ ವ್ಯಾಪಿಸಿಕೊಂಡ ಗಮ್ಮತ್ತಿನ ಪೊಗರು.

ಧ್ಯಾನಸ್ಥ ಸ್ಥಿತಿಯಲಿ ಆಳಕ್ಕಿಳಿದ ಅನುಭವಿಸಿದ ಉತ್ಕಟ ಮಿಲನಮಹೋತ್ಸವದ ಪರಾಕಾಷ್ಟೆ.

ನೀನೂ ಅಷ್ಟೇ ಅದಮ್ಯ ಉತ್ಸಾಹದ ಸಹಸ್ಪಂದನೆ. ಬಿಗಿಯಾದ ಬಂಧ ಬಾಂಧವ್ಯ.

ಈಗ ಯಾರೂ ಸಡಿಲಿಸಲಾಗದ ಅನುಬಂಧ. ಆದರಿದು ಸರಳವಾಗಿ ಒಲಿಯದು ಎಂದಾಗ ಆಕ್ರೋಶಗೊಂಡ ಮನದ ಬಿರುನುಡಿಗೆ ಕೊಂಚ ಬೆದರಿದ್ದೂ ನಿಜ.

ಈಗ, ಈಗ, ಈಗ ಎಲ್ಲವೂ ಶಾಂತ ನಿವಾಂತ ನಿತಾಂತ. ಮಾಗಿದ ದೇಹ-ಮನಸ ಕಂಡ ಮನಸೀಗ ಶಾಂತ ಪ್ರಶಾಂತ.

ಗೆದ್ದ ಹಮ್ಮು,ಪೊಗರು,ಅಹಂಕಾರ ದೇಹದಾಚೆಗಿನ ಸಂಕ್ರಮಣದ ಸಡಗರದ ಸವಿಗಾನ.

ನೀ‌ ಅನುಪಮ. ಚರಿತ್ರೆ-ಚಾರಿತ್ಯ ಎಲ್ಲದರಲಿ. ಪರಿಪೂರ್ಣ.

ಸಮರ್ಪಣೆಯ ಧನ್ಯತೆ. ಮುಂದೇನು? ಹೇಗೆ? ಅದೆಲ್ಲ ನಗಣ್ಯ. ಸಂಧ್ಯಾಕಾಲದ ಸವಿನೆನಪು ಇಬ್ಬರಿಗೂ.

ಪಶ್ಚಾತ್ತಾಪದ ಮಾತೇ ಬೇಡ. ಇದು ಮಾಗಿದ ದೇಹಗಳ ಮಿಲನ. ಅಂಧಕಾರದ‌ ಅನುರಾಗವಲ್ಲ.

ಎಂದೆಂದಿಗೂ ಮುರಿಯದ ಪ್ರಬುದ್ಧ ಸಂಗಮ. ಎಪ್ಪತ್ತರ ಗಡಿ ದಾಟಿ ಕಣ್ಣು ಮಂಜಾದರೂ ಒಳಗಣ್ಣ ಮಧುರ ನೋಟ. ನನಗೂ. ನಿನಗೂ.

ಈ ಜನುಮಕಿಷ್ಟೇ ಸಾಕು. ನಿಲ್ಲಲಿ‌ ಹುಡುಕಾಟದ ಬೇಗುದಿ ಗೆಳತಿ.‌ ನನ್ನನ್ನು ನಂಬಿದಷ್ಟೇ ನಿನ್ನನ್ನೂ ನಂಬಿದ್ದೇನೆ.

*ನಂಬಿದುದು ಸಂದೇಹಿಸದು ನೋಡಾ* ಎಂಬ ವಚನದ ನಿರ್ವಚನ.

ಬರೆಯೋಣ,ಬೆರೆಯೋಣ ಹದವರಿತು ನೂರು ಕಾಲ ವಿಶ್ವಾಸದ ಅಲೆಗಳಲಿ ತೇಲಿ ಹೋಗುತ ಇತಿಹಾಸದಲಿ ನಾವಳಿದರೂ ಉಳಿದುಬಿಡೋಣ.

ಸಾಮಿಪ್ಯ-ಸಾಂಗತ್ಯ-ಸಾಹಿತ್ಯ ಉಳಿದಿರಲಿ ಉಸಿರಿರುವ ತನಕ.

ಕಲ್ಮಶ ಕರ್ಕಶದ ಸುಳಿವಿರದೆ.
ನಮಗೆ ನಿತ್ಯ,ಪ್ರತಿನಿತ್ಯ ಪ್ರೇಮಿಸುವ ದಿನದ ಆತ್ಮಾನುಸಂಧಾನದ ಅನುಬಂಧ.

ಮುಗಿಯದಿರಲಿ ಈ ಒಲವಪಯಣ...

ನಿನ್ನನಾವರಿಸಿದ

*ಅರಿವು*

೧೪-೨-೨೦೧೮.