ಹಿರಿಯ ಕವಿ,ವಿಮರ್ಶಕ, ಕತೆಗಾರರಾದ Ramesh Bhat Belagodu ಅವರು ಮಾತನಾಡಿದಾಗ ಖುಷಿಯಾಯಿತು.
ಜುಗಲ್ ಪ್ರಯತ್ನದ ಕುರಿತು ಅವರ ಮೆಚ್ಚುಗೆ ನನ್ನ ಕಾವ್ಯಪ್ರೇಮವನ್ನು ನೂರ್ಮಡಿಸಿತು.
ಶ್ರೀಯುತರು ಬ್ಯಾಂಕ್ ಉದ್ಯೊಗದೊಂದಿಗೆ ನೋಟುಗಳ ಆಟ-ಪಾಟದ ಮಧ್ಯೆ ಸಾಹಿತ್ಯ ಕೃಷಿಯ ನೈಪುಣ್ಯತೆ ಅನುಕರಣೀಯ.
'ಈಗ ಕವಿತೆಗಳನ್ನು ಯಾರು ಓದುತ್ತಾರೆ ಬಿಡಿ' ಎಂಬ ಉದಾಸೀನ ಉಂಟಾಗಲು ಕವಿತೆ ಹಿಡಿದಿರುವ ಹಾದಿಯೇ ಕಾರಣ.
ಹಾಗಂತ ಭರವಸೆ ಕಳೆದುಕೊಳ್ಳದೇ 'ಚನ್ನಾಗಿದ್ದರೆ ಓದುತ್ತಾರೆ'ಎಂಬ ತನ್ಮಯತೆ ಇಟ್ಟುಕೊಂಡು ಬರೆಯುವ ನನ್ನಂತವರಿಗೆ ಇನ್ನೇನು ಬೇಕು?
ಸಹೃದಯರ ಮೆಚ್ಚುಗೆ ಸಾಕು.
ಕಾವ್ಯ ಬರೆಯುವ ವರಸೆಯನ್ನು ತುಂಬ ಸರಳಿಕರಿಸಿದ್ದರಿಂದ ರೇಜಿಗೆ ಹುಟ್ಟಿದೆ.
ಆದರೆ ಕಾವ್ಯ ಕೊಡುವ ಸಚ್ಛಿದಾನಂದ ಅನುಭವಿಸುವವರೇ ಬಲ್ಲರು.
Poetry is an Immortal form.
Supreme and ultimate but needs passion and patience.
ಒಂದೇ ಓದಿಗೆ ಪ್ರತಿಕ್ರಿಯಿಸಿ ಫೆಸ್ಬುಕ್ ಮೂಲಕ ಅನಿಸಿಕೆ ಬರೆದು *ಪಿಸುಮಾತುಗಳ ಜುಗಲ್* ನ ಬೆನ್ನು ತಟ್ಟಿ ಓದುಗರ ಗಮನ ಸೆಳೆದ ಹಿರಿಯರಿಗೆ ಶರಣು.
----ಸಿದ್ದು ಯಾಪಲಪರವಿ.
No comments:
Post a Comment