Saturday, February 10, 2018

ಸರಳವಾಗಿ ಏನೂ ದಕ್ಕಬಾರದು

*ಲವ್ ಕಾಲ*

*ಸರಳವಾಗಿ ಏನೂ ದಕ್ಕಬಾರದು*

ಪ್ರೀತಿ-ಪ್ರೇಮ-ಪ್ರಣಯ
ಮಿಲನ-ಭೇಟಿ-ಮಾತು
ಎಲ್ಲವೂ ಬಹುಬೇಗ
ದಕ್ಕಿದ ಸರಳ ಲಭ್ಯತೆಯೇ
ನಮ್ಮ ಹಮ್ಮು, ಧಿಮಾಕಿಗೆ
ಕಾರಣ.

ಎಲ್ಲ ಬಗೆಯ ರಿಸ್ಕಗಳಿಗೆ ಸಿಕ್ಕ ದೈವೀ ರಕ್ಷಣೆ,
ಪಾರಾದ ಬಗೆ
ನಮಗೆ ನಮ್ಮ‌ ಬಾಂಡೇಜ್ ನ ಮೌಲ್ಯ ಗೊತ್ತಾಗುತ್ತಿಲ್ಲ.

ಇಂತಹ ಕಠಿಣ,ಅಸಾಧ್ಯ
ವಾತಾವರಣದಲ್ಲಿ

ನೀ
ನಾ

ತೆಗೆದುಕೊಂಡ ಧೈರ್ಯದ
ಬೆಲೆಯನ್ನು ಇಬ್ಬರೂ ಅರಿಯಬೇಕು.

ಹತ್ತಾರು ವರ್ಷ ಪ್ರಯತ್ನಿಸಿದರೂ
ಬರೆಯಲಾಗದ *ರೂಪಕ*
ಕೆಲವೇ ತಿಂಗಳಲ್ಲಿ ಕೈಗೆ ಬಂದ ಅಸಾಮಾನ್ಯ ಸಾಧನೆಯ
ಎಚ್ಚರ ಪ್ರಜ್ಞೆ ನಮ್ಮ ಆಧ್ಯತೆ
ಆಗಲಿಲ್ಲ

ಎಲ್ಲವನ್ನೂ ಬೇಕಾದ ಬಗೆಯಲ್ಲಿ ಬೇಗ ದಕ್ಕಿಸಿಕೊಂಡರೆ ಆಗಬಹುದಾದ ಅನಾಹುತಕ್ಕೆ
ಸಾಕ್ಷಿ  ನಾವೇ !

ಈಗ ನಾವು ಕೊಂಚ ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗೋಣ  ಸಾಗಲೇಬೇಕು.

ಇಲ್ಲದಿದ್ದರೆ ಆ ದೇವರು
ಕೂಡಾ ನಮ್ಮನ್ನು ಕ್ಷಮಿಸುವುದಿಲ್ಲ

ಒಮ್ಮೆ *ಅವನು* ಕೈಬಿಟ್ಟರೆ

ಆರೋಗ್ಯ ಕೈಕೊಟ್ಟರೆ

ಕಾಲ ಕೈಮಾಡಿ ಕರೆದರೆ

ಸಾವೆಂಬ ಸಾಸಿವೆ ನೆನಪಾದರೆ

ನಾವು ಉಳಿಯುವುದಿಲ್ಲ.

ಅದರೂ ನಾವು *ಅವನ*
ಕೃಪೆಯ ಶಕ್ತಿಯನ್ನು ಕಾಪಿಟ್ಟುಕೊಳ್ಳಲು
ಒಲವಲೋಕದ
ಆಳ-ಅಗಲ ಅಸಾಧಾರಣ
ಅಸಾಧ್ಯತೆಗಳ‌ ಮನಸು ಮಾಡಿ ಸಾಧ್ಯ ಮಾಡಿದ
ನಾವು

ನಾವು ಬರೆದ ಹೊಸ ಇತಿಹಾಸವ ಒಲವ ನಂಬಿದ ಅಂತರಾತ್ಮಗಳಿಗೆ ಹುರಿದುಂಬಿಸುವ ಮನದ ಪೊಗರಿಗೆ ದಿವ್ಯ ಸಾಕ್ಷಿಯಾಗೋಣ.

ದೈಹಿಕವಾಗಿ ನಾವು ಮಾಯವಾದರೂ
ಅಂಗೈಯಲ್ಲಿ ಬರೆದ ಅಕ್ಷರಗಳ
ಮೂಲಕ ಅಮರ ಅಜರಾಮರ ಅಜರಾಮರವಾಗಿ ಸದಾ ಬಾನಲಿ ಮಿನುಗುತ ಚುಕ್ಕಿ ಚಂದ್ರಮರಾಗೋಣ.

*ಸಿದ್ದು ಯಾಪಲಪರವಿ*

No comments:

Post a Comment