*ಲವ್ ಕಾಲ*
*ಪ್ರೀತಿ ಎಂಬ ಸಂಶಯ*
ಹಲೋ ರಾಣಿ,
'ನಾನು ವಿಪರೀತ ಪ್ರೀತಿಸುತ್ತೇನೆ' ಎಂದರೆ ಖುಷಿಪಡು, ಆದರೇ ತುಂಬ ಸಂಶಯಿಸುತ್ತೇನೆ ಎಂಬುದನ್ನು ಮರೆಯಬೇಡ.
ಅಸಂಖ್ಯ ಮುತ್ತುಗಳ ಸರಮಾಲೆಯಲಿ ಮುಳುಗಿಸಿ, ಉನ್ಮಾದದಲೆಯಲಿ ತೇಲಿಸುವ ತಾಕತ್ತು ಮೈಮನಗಳಿಗಿದೆ.
ಬಿಸಿಯಪ್ಪುಗೆ, ಸವಿಮುತ್ತುಗಳು, ಕರಡಿಯಂತಹ ಬಿಗಿ ಹಿಡಿತದ ಮಿಲನಮಹೋತ್ಸವ, ಕಣ್ಣುಗಳ ಬೆಸೆಯುವ ಉನ್ಮಾದದ ಗುಟುಕುಗಳು, ವೀಣೆಯ ಮೀಟಿದ ಕಂಪನ, ಹಾವ ಸರ ಸರ ಹರಿದಾಟ, ಹಲ್ಲುಗಳ ಸಿಂಚನ, ಅಂಗೈಮಂಥನ... ಹೀಗೆ ಕೊಡುವ ಸವಿಸುಖ ಮರೆಯಲಾಗದು.
'ಆದರೆ ಆದರೆ ನಾ ದೂರಾದರೆ ಸಾಕು ನಿನ್ನ ಕಿರಿ ಕಿರಿ ತಡೆಯಲಾರೆ' ಅಂದರೆ ಹೇಗೆ?
ಆಳವಾಗಿ, ಗಾಢವಾಗಿ ಪ್ರೀತಿಸುವ ಹುಚ್ಚು ಮನಸು ಅಷ್ಟೇ ಆಳವಾಗಿ ಆಳ ಬಯಸುತ್ತದೆ, ಅಳುತ್ತದೆ ಕೂಡಾ.
ಪ್ರೀತಿ ಉತ್ಕಟತೆಯನು ಸಂಭ್ರಮಿಸುವ ಮನಸು ಅತ್ಯಂತ ಅನಿವಾರ್ಯವಾಗಿ ಈ ಕಿರಿ ಕಿರಿ ವ್ಯಾಮೋಹವನು ಸಹಿಸಲೇಬೇಕು.
ಈ ಅಪರಿಮಿತ ವ್ಯಾಮೋಹವನು *ಅನುಮಾನ-ಸಂಶಯ* ಎಂದು ಹಂಗಿಸಬೇಡ.
ರಾಣಿ, ಮಹಾರಾಣಿಯ ಹಾಗಿರಲಿ ಎಂಬ ತೀವ್ರ ತುಡಿತ, ಕೊಡಬಯಸುವ ಪರಮ ಖುಷಿಯ ಉತ್ಕಟತೆ ಹೀಗೆ ಹಿಂಸಿಸುತ್ತದೆ. ದಯವಿಟ್ಟು ಸಹಿಸಿಕೋ *ರಾಣಿ ನೀ ಮಹಾರಾಣಿಯಾಗುವ ತನಕ*.
ನಿನ್ನ ಅನ್ಯಮನಸ್ಕ, ನಿರಾಶೆಯ ಮುಖ ನೋಡಿ ಹೊಟ್ಟೆಯಲಿ ತಳಮಳ. ಈಗ ನನ್ನ ಉದ್ದೇಶ ಹೇಳುವ ಅನಿವಾರ್ಯತೆ.
ಅತಿಯಾದ ಪ್ರೀತಿ possessiveness ಅನಿಸಿ ಸಂಶಯಿಸಬಹುದು, *ಆಳವಾದ ಪ್ರೀತಿಗೆ ಅಷ್ಟೇ ಆಳವಾದ ಸಂಶಯವೂ ಇರುತ್ತದೆ ಎಂದು ಎಲ್ಲೋ ಓದಿದ ನೆನಪು*.
ಆ ಆಳದ ಪ್ರೀತಿಯ ಎಳೆ ಹಿಡಿದು ನನ್ನ ಸಹಿಸಿಕೋ, ಜೊತೆಗೆ ಇದ್ದಾಗ ಎದುರಿಗೆ ಸಿಕ್ಕಾಗ *ಪ್ರೇಮದಮಲಿನಲಿ ಮುಳುಗಿಸಿ, ಸುಖದಲೆಯಲಿ ತೇಲಿಸಿಬಿಡುವೆ*.
*ಅಲ್ಲಿಯವರೆಗೆ ಇಬ್ಬರೂ ಕಾದಾಡುತಲೇ ಕಾಯೋಣ*.
ಸದಾ ನಿನ್ನಯ
*ಅರಿವು*
No comments:
Post a Comment