*ಶಿವರಾತ್ರಿ-ಪ್ರೇಮಿಗಳ ದಿನ*
ಇಂದು ಶಿವರಾತ್ರಿ, ನಾಳೆ ಪ್ರೇಮಿಗಳ ದಿನ,ನಾಡಿದ್ದು ಇನ್ನೇನೋ...
ಕಾಯಕ ನಿರತ ಮನಸುಗಳ ನಿಷ್ಠೆಯಲಿ ಪ್ರೀತಿ ಹಾಗೂ ಧ್ಯಾನ ಇರದೇ ಏನೂ ಸಾಧಿಸಲಾಗದು.
ನಮ್ಮ ನಿರಾತಂಕ ಉಸಿರಾಟವೇ ಶಿವಧ್ಯಾನ-ಶಿವರಾತ್ರಿ. ಸಚ್ಛಿದಾನಂದ.
ಆದರೆ ಹಾಗೆ ಆಗೋದಿಲ್ಲ.ಅಪರಿಮಿತ ಬಯಕೆಗಳು,ಸ್ವಾರ್ಥ, ದ್ವೆಶಾಸೂಯೆ,ಹಪಾಹಪಿ,ಅಹಂಕಾರ,ಭ್ರಮೆ, ಹುಚ್ಚು ಕಲ್ಪನೆಗಳು,ವಿಕೃತ ಕಾಮನೆಗಳು,ಇರದಿರುವ ಹಾಗೂ ದಕ್ಕದಿರುವದ ಪಡೆಯುವ ಚಡಪಡಿಕೆ...
ಅಯ್ಯೋ ಬಿಡಿ ಅಸಂಖ್ಯ ದೌರ್ಬಲ್ಯಗಳು.
ಇದೆಲ್ಲಾ ನಮಗೆ ಗೊತ್ತಿದ್ದರೂ ಸಾವಿರಾರು ಆಲೋಚನೆಗಳು. ಒಮ್ಮೆ ಎಚ್ಚರಾದರೆ ಸಾಕು ನಿದ್ದೆ ಆವರಿಸುವವರಿಗೆ ಮನಸು ಓಡುತ್ತಲೇ ಇರುತ್ತೆ.
ಒಂದು ಲೆಕ್ಕಾಚಾರದ ಪ್ರಕಾರ ಚಂಚಲ ಮನಸಿಗೆ ಪ್ರತಿನಿತ್ಯ ಹನ್ನೆರಡು ಸಾವಿರ ಆಲೋಚನೆಗಳು ದಾಳಿ ಮಾಡುತ್ತವೆಯಂತೆ. ಈಗ ಇನ್ನೂ ಹೆಚ್ಚು.
ಅವುಗಳ ಸಂಖ್ಯೆ ಕಡಿಮೆ ಮಾಡುತ್ತ ಶೂನ್ಯತೆಗಿಳಿಸುವುದೇ ಧ್ಯಾನ.
ಪ್ರತಿದಿನ ಅಂತಹ ಹೋರಾಟ ಮಾಡಲೇಬೇಕು.
ದಾಳಿ ಮಾಡುವ ನೇತಾತ್ಮ ಭಾವನೆಗಳನ್ನು ಹಿಡಿದಿಡುವ ಒದ್ದಾಟವೇ ಧ್ಯಾನಸ್ಥ ಸ್ಥಿತಿ.
ಶಿವರಾತ್ರಿಯೂ ಅಷ್ಟೇ.ಪ್ರೇಮಿಗಳ ದಿನವೂ ಅಷ್ಟೇ.
----ಸಿದ್ದು ಯಾಪಲಪರವಿ.
No comments:
Post a Comment