Monday, April 12, 2010


ಹುಟ್ಟುಹಬ್ಬದ ಲೆಕ್ಕಾಚಾರ
. ಆತ್ಮವಿಶ್ವಾಸ, ಪ್ರಾಮಾಣಿಕಪ್ರತಿ ಹುಟ್ಟು ಹಬ್ಬಗಳು ನಮ್ಮನ್ನು ಗಂಭೀರಗೊಳಿಸಬೇಕುತೆ ಹೆಚ್ಚಾಗಬೇಕು. ಮನಸು ಮಾಗಬೇಕು.
ನಡೆದು ಬಂದ ಹಾದಿಯನ್ನೊಮ್ಮೆ ಅವಲೋಕಿಸಿ, ಆಗಿರುವ ಲೋಪಗಳನ್ನು ಆತ್ಮಾವಲೋಕನ ಮಾಡಿಕೊಂಡು ನಮ್ಮಷ್ಟಕ್ಕೆ ನಾವೇ ಸರಿಪಡಿಸಿಕೊಳ್ಳಬೇಕು.
Negative ಆಲೋಚನೆಗಳನ್ನು ದೂರಮಾಡಲು ನಾವೇ ಹೆಣಗಬೇಕು. positive ಆಗಿ ಆಲೋಚನೆ ಮಾಡುವುದು ಹೇಳಿದಷ್ಟು ಸುಲಭವಲ್ಲ. ಆದರೂ ನಿರಂತರ ಅಂತರ್ ಸಂಘರ್ಷವಿರಲೇಬೇಕು. ಹೀಗೆ ನಮ್ಮ ಹುಟ್ಟುಹಬ್ಬಗಳು ಆಲೋಚನೆಗೆ ಹಚ್ಚಿಸುತ್ತವೆ.
ಮನದ ಮುಂದಣ ಆಸೆ-ಆಮಿಷಗಳು, ಅಪಾರವಾದ ಮಹತ್ವಾಕಾಂಕ್ಷೆಗಳು, ಹೆಸರು-ಖ್ಯಾತಿ ಗಳಿಸುವ ಹಪಾಹಪಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
ಮನಸ್ಸಾಕ್ಷಿಗಿಂತ ದೊಡ್ಡದು ಯಾವುದಿಲ್ಲವೆಂದು ಗೊತ್ತಿದ್ದರೂ ನಮ್ಮ ಸಾಚಾತನಕ್ಕೆ ಉಳಿದ ಸಾಕ್ಷಿಗಳು ಕೊಡಲು ಓಡಾಡುತ್ತೇವೆ.
ಸಾಕ್ಷಿ ಪಡೆಯುವವರಿಗೂ, ಹೇಳುವವರಿಗೂ ಗೊತ್ತು ಇದೊಂದು ಶುದ್ಧ ಸುಳ್ಳು ಎಂದು.
"ನಲವತ್ತೈದು" ಶುದ್ಧ ಆಲೋಚನೆ ಮಾಡುವ ಕಾಲ, ಸೆಕ್ಸನ ಹಪಾಹಪಿ ಕಡಿಮೆ ಆಗಿ ಉಳಿದ ಭಯಾನಕ ಆಸೆಗಳು ಚಿಗುರೊಡೆಯುವ ವಯಸ್ಸು. ಹಿಂದೆ ಹೇಳಿದಂತೆ ಹೆಣ್ಣು, ಹೊನ್ನು ಹಾಗೂ ಮಣ್ಣುಗಳ ಸುತ್ತ ಗಿರಕಿ ಹೊಡೆಯುವ ಮನುಷ್ಯ ಒಂದೊಂದು ಕಾಲಘಟ್ಟದಲ್ಲಿ ಒಂದನ್ನು ಹಿಡಿದುಕೊಳ್ಳುತ್ತಾನೆ. ಒಮ್ಮೆ ಹೆಣ್ಣು, ಹೊನ್ನು, ಮಣ್ಣು ಹೀಗೆ ಆಸೆಗಳನ್ನು shift ಮಾಡುತ್ತ weakness ಗಳಲ್ಲಿ ನರಳುತ್ತ ಸುಖ ಅನುಭವಿಸುತ್ತಾನೆ. ಇವುಗಳ ಸೆಳೆತವನ್ನು ಬಿಟ್ಟರೆ, ನಿರಾಕರಿಸಿದರೆ ಯೋಗಿಗಳಾಗುತ್ತೇವೆ. ಆದರೆ ನಮಗಾರಿಗೂ ಯೋಗಿಯಾಗುವ ಯೋಗವಿಲ್ಲವಲ್ಲ. ನಾವು ಕೇವಲ ದೌರ್ಬಲ್ಯಗಳ ಮಾಂಸದ ಮುದ್ದೆಗಳು. 1970 ರಿಂದ 1990 ರವರೆಗೆ ವಿದ್ಯಾರ್ಥಿ, ಬಾಲ್ಯದ ಬದುಕಿನ ಘಟನೆಗಳು ಸ್ಮೃತಿಪಟಲದಲ್ಲಿವೆ. 1990-2010 ರವರೆಗೆ ಎರಡನೇ ಕಾಲಘಟ್ಟದ ವೃತ್ತಿ ಬದುಕಿನ ವೈವಿದ್ಯಮಯ ಸಂಗತಿಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವ ತುಡಿತವಿದೆ. ಪ್ರಾಮಾಣಿಕವಾಗಿ ಹಂಚಿಕೊಳ್ಳುವ, ಯಾರನ್ನು ನೋಯಿಸದೇ, ಟೀಕಿಸದೇ ಬರೆಯುವ ಆಟೋಗ್ರಾಫ್ ಗೆ ನಿಮ್ಮ ಸಲಹೆ ಸದಾ ಇರಲಿ.

3 comments:

  1. Thank you.today started new blog sidduloka.pl visit &suggest me

    ReplyDelete
  2. ಜನ್ಮದಿನದ ಹಾರ್ಧಿಕ ಶುಭಾಷಯಗಳು
    ಈ ವರ್ಷ ನಿಮ್ಮಿಂದ ಇನ್ನಷ್ಟು ಕೃತಿಗಳು ಬರಲಿ-
    ನಿಮ್ಮ ಸ್ನೇಹಲೋಕ ಇನ್ನೂ ಹಬ್ಬಲಿ
    -ಸಿರಾಜ್ ಬಿಸರಳ್ಳಿ
    ಕನ್ನಡನೆಟ್.ಕಾಂ

    ReplyDelete