*ಇಳಿಹೊತ್ತಲೊಂದು ಸುದೀರ್ಘ ಪಯಣ*
ಇನ್ನೇನೆಲ್ಲ ಮುಗಿಯಿತು ಅಂದುಕೊಂಡ ಇಳಿಹೊತ್ತಲಿ ಎಲ್ಲ ಅಂಗಾಂಗಗಳು
ನಲುಗುವ ಕಾಲ ಘಟ್ಟದಲಿ ನೀ
ಸಿಕ್ಕ ಕ್ಷಣದಲಿ ಚಿಗುರಿದ ಹರೆಯ
ಬೆದರಿದ ಅಂಗಾಂಗಗಳ ಚಡಪಡಿಕೆ
ಎದುರಾದ ಗಳಿಗೆಯಲಿ ನಿಮಿರದ
ಎದೆಯಾಳಲಡಗಿದ ಎದೆತೊಟ್ಟುಗಳಿಗೆ
ತಲ್ಲಣ
ಸಂಜೆಗತ್ತಲಲಿ ಬಾಗಿಲು ಮುಚ್ಚಿದರ
ಗಳಿಗೆಯಲಿ ಎಲ್ಲ ಬಟಾ ಬಯಲು
ಮಹಾಬಯಲ ಬೆರಗು ಬೆತ್ತಲ ದೇಹ
ಕೊಂದು ಕಳೆ ರೋಮ ರೋಮಗಳಲಿ
ಬೆರಳುಗಳ ದಿವ್ಯ ನರ್ತನ
ಅಂಗಾತ ಮಲಗಿದ ದೇಹಸಿರಿಗೆ
ಕಂಗಳ ದಾಳಿ ಮೈಮನಗಳಲಿ ಗೂಳಿ
ಕಾಳಗ
ಅರಳಿನಿಂತು ಕೈಮಾಡಿ ಕರೆದೆದೆಯ ಮೇಲೆ
ಬಿಗಿದ ಮುಷ್ಟಿ ಶುರುವಾದ ಮೃದು ಮರ್ಧನ
ನಿಮಿರಿದ ತೊಟ್ಟುಗಳಿಗೆ ಎಲ್ಲಿಲ್ಲದ ಸಡಗರ
ನಿಮಿರುವದ ಮರೆತು ಮುದುಡಿ ಮಲಗಿದ
ಪುರುಷತ್ವಕೀಗ ಹೊಸ ಹುಮ್ಮಸ್ಸು
ಕೊನರಿದ ಕೊರಡು ನರನಾಡಿಗಳ
ಮಿಡಿತ
ಅಡಿಯಿಂದ ಮುಡಿಯವರೆಗೆ ಮೇಲಿಂದ
ಕೆಳಗೆ ಎಲ್ಲಂದರಲಿ ತುಟಿಗಳ ಸಮ್ಮಿಲನ
ಸಂಚಲನದ ಸಂಚಾರ
ಜೋಲುಬಿದ್ದ ಮೊಲೆಗಳಿಗೀಗ ಹೊಸ
ತಾಕತ್ತು ಉಕ್ಕಿ ಹರಿವ ಹುಮ್ಮಸ್ಸು
ವಯೋಮಾನದ ಹಂಗ ಹರಿದು ಚರಿತೆ
ಸಂಗ ಮರೆತು ಕೂಡುವ ಕಾತರ
ತೋಳ ತೋರಣದಿ ನಿನ್ನ ಲಾಲನೆಯಲಿ
ಅರಳಿದ ಹೂಗಳಿಗೆ ದುಂಬಿಗಳ ದಾಳಿ
ಮೃದು ನಾದಕೆ ತಾನೇ ತಾನಾಗಿ ಅರಳಿದ
ತೊಡೆಗಳ ಮಧ್ಯದಲೊಂದು ಕೆಸರಿಲ್ಲದ
ಕಮಲ
ಬಸುಗುಡುವ ಸರ್ಪಕೀಗ ಸ್ವಯಂ
ಸಂಸ್ಕಾರ ನುಗ್ಗಿಬಿಡುವ ತೀವ್ರ ತವಕ
ಸೀಳಿ ಒಳ ನುಗ್ಗಿದ ಪರಿಗೆ ಮುಗಿಲು
ಮುಟ್ಟಿದ ಚೀತ್ಕಾರದಲೊಂದು ಹೊಸ
ಚಮತ್ಕಾರ
ಒಳ ಹೊರಗಿನ ನುಸುಳಾಟದಿ ಶುರುವಾದ
ಹೊಸ ಅಧ್ಯಾಯ ಧರೆಗಿಳಿದ ಯೌವನ
ಇದು ಇಳಿ ಪ್ರಾಯದ ದೇಹದಾಟವಲ್ಲ
ಚಿರಯೌವ್ವನದ ಬಿರುಸಿನ ಹೊಡೆತ
ಅಚ್ಚರಿ ಬೆರಗು ವಯಸು ದೇಹಕಲ್ಲ
ಮನಸಿಗೆಂಬ ಹೊಸ ಲೆಕ್ಕಾಚಾರ
ಎಲ್ಲಾ ಮುಗಿದೇ ಹೋಗಿದೆ
ಅಂದುಕೊಂಡಾಗ
ಇದೇನಿದು ಹೊಸ ವರಸೆ ಒಲವ
ಮಿಲನದಿ ಉಕ್ಕಿ ಹರಿಯುವ ವರತೆ
ಅರ್ಧ ಶತಕದ ಜೀವಪಯಣದಲಿ
ಸಿಕ್ಕ ಚಲುವೆಯ ದೇಹದಾಳಿಯಲಿ
ಅರಳಿದ ಮನ ಕೆರಳಿದ ದೇಹಕೀಗ
ಹೊಸ ಕಳೆ ರಾತ್ರಿಯಿಡೀ ನಿಲ್ಲದ
ಮ
ಳೆ...
*ಸಿದ್ದು ಯಾಪಲಪರವಿ*
No comments:
Post a Comment