*ಕಲಬುರಗಿಯಲಿ ವಿಸಾಜಿ ಮಾತುಗಳ ಕಲರವ*
ತುಂಬಾ ಹೆಸರು ಮಾಡಿದ ಪ್ರಾಧ್ಯಾಪಕ, ಕವಿ ಡಾ.ವಿಕ್ರಮ್ ವಿಸಾಜಿ ಅವರ ಕೃತಿಗಳ ಮೂಲಕ ಪರಿಚಿತರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಇಡೀ ರಾಜ್ಯ ಸುತ್ತಾಡಿ ಸಾಂಸ್ಕೃತಿಕ ಮನಸುಗಳೊಡನೆ ಮಾತು-ಕತೆಯಲಿರುವ ಸಹೃದಯಿ.
ನನ್ನೊಡನೆ ನಿನ್ನೆ ಸಂಜೆ ಕಲಬುರಗಿಯಲಿ ಮೊದಲ ಬಾರಿ ಅರ್ಥಪೂರ್ಣ ಮುಖಾಮುಖಿ.
*ಪಿಸುಮಾತುಗಳ ಜುಗಲ್* ಕುರಿತು ಅಕ್ಯಾಡೆಮಿಕ್ ಆದ ಮಾತುಗಳ ಕೇಳುವ ವಿಸ್ಮಯ.
ಕೃತಿ ಕುರಿತ ಗ್ರಹಿಕೆ,ಮತ್ತದರ ವಿವರಣೆ ಬೆರಗು ಹುಟ್ಟಿಸಿತು.
ನುಡಿದರೆ ಮುತ್ತಿನ ಹಾರ ಅಂದರೆ ಹಿಂಗೆ ಅನಿಸಿತು. ಒಂದು ತಾಸು ಮಾತನಾಡುವಾಗಿನ ಖಚಿತತೆ ಕೇಳುಗರನ್ನು ಹಿಡಿದಿಟ್ಟಿತು.
ಗಂಡು-ಹೆಣ್ಣಿನ ಮಧ್ಯ ಅರಳುವ ಪ್ರೀತಿಯ ಹೊನಲನ್ನು ಸಾರ್ವತ್ರೀಕರಿಸಿ ನೋಡುವ ರೀತಿ ಓದುಗರನ್ನು ಸರಿದಾರಿಗೆ ಹಚ್ಚುವ ಕ್ರಮ.
ಒಂದರ್ಥದಲಿ ರಿಸ್ಕ್ ತೆಗೆದುಕೊಂಡು ಬರೆದ ಕಾವ್ಯಶ್ರೀ ಮಹಾಗಾಂವಕರ್ ಅವರ ಆತಂಕ ದೂರ ಮಾಡಿದರು.
ಹೆಣ್ಣಿನ ಮನಸ್ಥಿತಿ ಹಾಗೂ ತಲ್ಲಣಗಳ ಕಾರಣದಿಂದ ಅರಳುವ ಪ್ರತಿಮೆಗಳ ಭಾಷಾ ವಿನ್ಯಾವನ್ನು ವಿಸಾಜಿ ಬಿಡಿಸಿ ಹೇಳಿದರು.
ಕವಿಗಳ ಉದ್ದೇಶ ಹಾಗೂ ಆಶಯಗಳನ್ನು ಮೀರಿದ ಒಳನೋಟ ಅದಾಗಿತ್ತು.
ಇಂತಹ ಸಂದರ್ಭದಲ್ಲಿ ಕವಿಗಳು ನಗಣ್ಯ ಕಾವ್ಯ ಮಾತ್ರ ಪ್ರಸ್ತುತವೆಂಬ ಜಾಗತಿಕ ಸತ್ಯಕೆ ನೀಡಿದ ವ್ಯಾಖ್ಯಾನ ಓದುಗರಲ್ಲಿದ್ದ ಗುಮಾನಿಯನ್ನು ದೂರ ಮಾಡಿತು.
ಕೃತಿ ಪರಿಚಯದ ಮೂಲಕ ಓದುಗರನ್ನು ಹಾದಿ ತಪ್ಪಿಸದೇ , ಹೇಗೆ ಓದಿದರೆ ಸಹ್ಯ ಎಂಬ ವಿವರಣೆಯ ನಾವಿನ್ಯತೆ ಖುಷಿ ನೀಡಿತು.
ಬರೆದ ಮೇಲೆ ಮುಗಿಯಿತು, ಕೃತಿ ಓದುಗರ ಸ್ವತ್ತು, ಅವರಿಗೆ ಸರಿಕಂಡಂತೆ ಅರ್ಥೈಸುತ್ತಾರೆ.
ಒಂದರ್ಥದಲ್ಲಿ ಕವಿ ನಿರುಮ್ಮಳ. ಹಗುರಾಗಿ ಆರಾಮ್ ಇರಬೇಕು.
ಕೃತಿ ಕುರಿತ ವಿಶ್ಲೇಶಣೆ ಹೀಗೇ ಇರಲೆಂದು ಬಯಸಬಾರದು.
ಎಲ್ಲರೂ ಕವಿಗಳು, ಬರದದ್ದೆಲ್ಲ ಕಾವ್ಯ ಅಂದುಕೊಳ್ಳವ ಹೊತ್ತಿನಲ್ಲಿ ಪಿಸುಮಾತುಗಳು ವಿಸಾಜಿ ಅಂತವರ ಗಮನ ಸೆಳೆದದ್ದು ಖುಶಿಯಾಗಿದೆ.
ಸಹೃದಯಿ ಓದುಗರ, ವಿಮರ್ಶಕರ ಸಂಖ್ಯೆ ಹೆಚ್ಚಾದಾಗ ಒಳ್ಳೆಯ ಕೃತಿಗಳು ಮೂಡಿ ಬರಲು ಸಾಧ್ಯ. ಆರೋಗ್ಯಪೂರ್ಣ ಮನೋಭಾವ ಇಟ್ಟುಕೊಂಡು ಓದಲು ಪ್ರೇರೇಪಿಸಿದ ವಿಸಾಜಿ ಅವರ ಸಹೃದಯತೆಗೆ ಸಾವಿರದ ಸಲಾಮ್.
*ಸಿದ್ದು ಯಾಪಲಪರವಿ*
No comments:
Post a Comment