*ಸಾಮಿಪ್ಯಕೆ ಸಾವಿರದ ಮುಖಗಳು*
ಸಾಮಿಪ್ಯಕೆ ಇರುವ ಸಂಭ್ರಮವೇ
ಹೀಗೆ
ಉಪಮಿಸಲಾಗದು ಉಪಮಿಸಲೂ
ಬಾರದು
ಅಪ್ಪುಗೆಯ ಬಿಸುಪಲಿ ಸವಿಜೇನ
ಗುಟುಕಿನಲಿ ದೇಹದಾಟದ ಏರಿಳಿತದ
ಹರಿದಾಟದಲಿ ನೀ
ನಿದ್ದರೆ ಸಾಕು ಬೇಕಿಲ್ಲ ನಿದಿರೆ
ಹಗಲು ರಾತ್ರಿಯಾಗಿ ರಾತ್ರಿ
ಹಗಲಾಗಲು ಅಲಗಿನ ಮೇಲಿನ
ನಡೆ
ಬೀಳಬಾರದು ಬೀಳಲಾಗದು ಉಸಿರ
ಬಿಗಿ ಹಿಡಿದು ಲಯವಾಗಿ ಹೂ ಅರಳಿಸಿ
ಕಾಮನೆಗಳ ಕೆರಳಿಸಿ
ತೊಟ್ಟ ಜೇನ ಹೀರಿ ಮೃದು
ಸ್ಪರ್ಷದಿ ವೀಣೆಯ ನುಡಿತ
ತಬಲ ತಾಳದ ಲಯ
ಕೈಕಾಲುಗಳಿಗೆ ಈಜುವ ಬಡಿತ
ಸರಸರ ಸರಸರ
ಹರಿಯಲು ಹಾವಿನ ನೆಗೆತ
ಧೇನಿಸುತ ಧೆನಿಸುತ ಓಂಕಾರವ
ಹೂಂಕರಿಸುತ ಉಕ್ಕಿ ಹರಿಯುವ
ಚೇತನ ತಡೆದು ತಡೆದು
ಹಿಡಿದು ಬಿಡಲಾಗದೇ ಚಡಪಡಿಸುವ
ಸಡಗರದ ಚರಮ ಸುಖ
ಏರಲಾಗದೆ ಇಳಿಯಲಾಗದೆ ಬರೀ
ಏಗುತ್ತ ಏಗುತ್ತ ಸಾಕೆನಿಸದಿರೆ
ಇನ್ನೂ ಬೇಕೆನಿಸುವ ಹಂಬಲ
ಮನಸಿಗೆಲ್ಲಿಯ ಇತಿಮಿತಿ ದೇಹಕೂ
ಅದರಾಚೆಗಿನ ಒಲವ ಸತಿ ಲಿಂಗಾಂಗ
ಪರಿಮಿತಿ
ನಿಸ್ವಾರ್ಥಾಟದ ಕೂಟದಲಿ ಸೋಲಿನ
ಹಂಗಿಲ್ಲ ಗೆಲುವಿನ ಬಿಂಕವಿಲ್ಲ
ಇದು ಸರಸ ಸಮರಸದ ಮಿಲನ
ಮಹೋತ್ಸವ ಸಮಭೋಗದ ಸಾಮಿಪ್ಯ
*ಸಾವಿರದ* ಸಾವೇ ಕಾಣದ
ಮುಖಗಳಿಗೆ ಸಾವಿಲ್ಲ ನೋವೂ
ಇಲ್ಲ ಇರುವದೆಲ್ಲ ಬರೀ
ಬೇವು-ಬೆಲ್ಲ.
*ಸಿದ್ದು ಯಾಪಲಪರವಿ*
No comments:
Post a Comment