*ಊರ ಮುಂದಿನ ಹೊಲ ಮತ್ತು ಪರಿಸರ ದಿನ*
ಮುಂಜಾನೆ ಪರಿಸರ ದಿನದ ನೆನಪಾಗುವ ಮೊದಲೇ ಅಪರೂಪಕ್ಕೆಂಬಂತೆ ಕಾರಟಗಿಯಲ್ಲಿ ಹೊಲಕ್ಕೆ ಹೋಗಿದ್ದೆ.
ಹೊಲ ಮಾಡುವ ಮಾರುತಿ ಹೊಲದೊಂದಿಗಿನ ಅವಿನಾಭಾವ ಸಂಬಂಧ ಹೇಳುವಾಗ ನಿಜವಾದ *ವಿಶ್ವ ಪರಿಸರ ದಿನ* ಅನಿಸಿತು.
ರೈತರ ಭೂಮಿ ಪ್ರೀತಿ, ಪರಿಶ್ರಮ ಗೊತ್ತಿರದ ನನ್ನಂಥವರು ಪರಿಸರ ರಕ್ಷಣೆ ಬಗ್ಗೆ ಮಾತನಾಡಿದರೆ, ಹೊಲ ಊಳುವ ಮಾರುತಿಯಂತಹ ಯುವಕರು ಅದರ ಮಹತ್ವವನ್ನು ಪ್ರತಿ ಕ್ಷಣ ಅನುಭವಿಸುತ್ತಾರೆ.
ಒಡೆಯರೆನಿಸಿಕೊಂಡವರು ಪರಿಶ್ರಮ ಪಡದೇ ಒಡೆತನದ ಕಾರಣಕ್ಕೆ ರೈತರಂತೆ ಮಾತನಾಡುತ್ತಾರೆ.
ಈ ಮಣ್ಣಲ್ಲಿ ಲೀನರಾದ ಹಿರಿಯರು, ತಾತ, ಅಮ್ಮ, ಅವ್ವ ಹಾಗೂ ಅಪ್ಪ ಈಗ ಬರೀ ನೆನಪಾಗಿದ್ದಾರೆ.
ಹೊಲ ಬರೀ ನಮ್ಮ ಪಾಲಿನ ಆಸ್ತಿಯಲ್ಲ, ಅದರಾಚೆಗಿನ ಧೀಮಂತ ಶಕ್ತಿ.
ಇಷ್ಟು ದಿನಗಳ ನಂತರ ಹೊಲದ ಆಗು ಹೋಗುಗಳ ಕುರಿತು ಗಂಭೀರವಾಗಿ ಈ ಕುರಿತು ಮಾತನಾಡಿದೆ.
ಇನ್ನು ಸ್ವಲ್ಪ ದಿನ ಹೋದರೆ ಭೂಮಿಯೇ ಸಿಗುವುದಿಲ್ಲ ಎಂಬ ವಾತಾವರಣವಿದೆ.
ಹಣ ಕೊಟ್ಟರೆ ಎಲ್ಲಾ ಸಿಗುತ್ತೆ ಎಂಬ ಭ್ರಮೆಯಿದೆ.
ಗಾಳಿ, ಬೆಳಕು, ಮಣ್ಣು, ನೀರು, ಆಹಾರ ಸಿಗುವುದಿಲ್ಲ ಎಂಬ ಸತ್ಯ ಹೊಸ ತಲೆಮಾರಿನ ಯುವಕರಿಗೆ ಗೊತ್ತಿಲ್ಲ.
ಪರಿಸರ ಪ್ರೀತಿ ಬಗ್ಗೆ ಬರೀ ಮಾತನಾಡದೇ ಪಂಚಮಹಾಭೂತಗಳ ಮಹತ್ವದ ಅರಿವು ಮೂಡಿಸಬೇಕು.
ಪರಿಸರ ನಮ್ಮನ್ನು ರಕ್ಷಿಸುತ್ತೆ , ನಾವೂ ರಕ್ಷಿಸೋಣ.
*ಸಿದ್ದು ಯಾಪಲಪರವಿ*
No comments:
Post a Comment