Saturday, June 2, 2018

ಮೊದಲ ನಿವೇದನೆ

*ಲವ್ ಕಾಲ*

*ಮೊದಲ ನಿವೇದನೆಗೆ ಮೂರು ದಶಕ*

                       ದೃಶ್ಯ-೧

ಪ್ರಾಯದ ನೆನಪುಗಳಿಗೀಗ ಬರೀ ಕಚಗುಳಿ.
ಆಗ ಎಲ್ಲರೂ, ಎಲ್ಲವೂ ಸುಂದರ. ಇವಳೇ ಇರಲಿ ಅಂದುಕೊಂಡವಳು ಛಂದಾಗಿ ಕಂಡಳು.
ಆದರೆ ಹೇಳಲು ವಿಪರೀತ ಭಯ. ಪುಟ್ಟ ಹುಡುಗಿ ಬೇರೆ.

ಪ್ರೀತಿ-ಪ್ರೇಮ-ಯುದ್ಧ ಹೋರಾಡಿದರೆ ಮಾತ್ರ ಗೆಲುವು. ಮೈತುಂಬ ಬೆಚ್ಚನೆಯ ನೆನಪುಗಳ ದಾಳಿ.ಉತ್ಕಟ ಬಯಕೆಗಳು.

ಪದೇ ಪದೇ ಹಗಲುಗನಸಲಿ ಕಾಡುವ ಚಲುವೆಯರು. ಆದರೆ ಅವರು ಯಾರೂ ದಕ್ಕುವುದಿಲ್ಲವಲ್ಲ !

ಮಾಧುರಿ, ಅನಿಲ ಕಪೂರ್ ಸಿನೆಮಾದ ದೃಶ್ಯವೊಂದು ಜೀವಚೈತನ್ಯ ಕೆಣಕಿ ಧಾರಾಕಾರ ಹರಿದು ಎದ್ದು ಕುಳಿತೆ.

ಅಧ್ಯಯನ ಮಾಡುವ ಹೊಣೆಗಾರಿಕೆ ಇರುವಾಗ ಇಂತಹ ಪುಳಕಗಳಿಗೆಲ್ಲಿ ಜಾಗ. ಆದರೂ ಬೇಕೆ ಬೇಕೆಂಬ ಚಡಪಡಿಕೆ.

ನನ್ನ ವಾರಿಗೆಯವರು ನಟರಾಗಿ, ನಟಿಯರನ್ನು ಅದ್ಹೆಂಗೆ ಬಿಗಿದಪ್ಪುತ್ತಾರೆ ಎಂಬ ಕುತೂಹಲ.
ಕ್ಷಣ ಕ್ಷಣದ ಉದ್ವೇಗ, ಉನ್ಮಾದ.

ಮನಸ ನಿಯಂತ್ರಿಸುವ ಹುಡುಗಿ ಸ್ವಯಂ ಸಂಯಮ ಹೇರಿಕೊಳ್ಳಲು ಬೇಕೆನಿಸಿತು.

ಆಗ ಕಂಡವಳು ಅವಳೇ. ಗೆಳೆಯನಿಗೆ ಹೇಳಿ ಡೈರಿಯಲಿ ಚಿತ್ರ ಬರೆಸಿ 'ಇದು ನೀನೇ'ಎಂದಾಗ ನಕ್ಕಾಗ ಉಕ್ಕಿದ ಭರವಸೆ.

*I love you* ಎಂಬ ಧೈರ್ಯ ತೋರಲಿಲ್ಲ. ಅಂದಿದ್ದರೆ ಮಜ ಉಳಿಯುತ್ತಿರಲಿಲ್ಲವೇನೋ ?

ಒಂದು ಮಳೆಗಾಲ ಸಣ್ಣಗೆ ನಡುಕ. ಯಾರೂ ಇಲ್ಲದ್ದು ಖಾತ್ರಿ ಮಾಡಿಕೊಂಡು ಮುಖದ ಹತ್ತಿರ ಹೋದಾಗ ಅಯ್ಯೋ ಕರಗಿ ನೀರಾಗಿ ಬಿಡುವುದಾ ಬಾಲೆ !!

Never imagined, thrilled with emotions.
ಕಣ್ಣು ಮುಚ್ಚಿದಾಗ ಕೈಮಾಡಿ ಕರೆದಂತಾಯಿತು. ಧೈರ್ಯ ಸಾಲದಾಗಿ ಸುಮ್ಮನಾದೆ.

ಮರುದಿನ ರಾತ್ರಿ ಅದೇ ಸನ್ನಿವೇಶ. ಊರಿಗೆ ಬೇರೆ ಹೊರಟಿದ್ದೆ.

ಇನ್ನಿಲ್ಲದ ಧೈರ್ಯ ತಂದುಕೊಂಡೆ. ಮುಖದ ಬಳಿ ಮುಖ ಒಯ್ದು ಸುಮ್ಮನಾಗಲಿಲ್ಲ. ನವಿರಾದ ಮುತ್ತ ನೀಡಿ ಮೊದಲ ಮುತ್ತಿನಾನುಭವದಿ ಬಾನಲಿ ತೇಲಾಡಿದೆ.

'ಅಯ್ಯೋ ದಕ್ಕಿಯೇ ಬಿಟ್ಟಳು' ಎಂದು ಜೋರಾಗಿ ಕೂಗಬೇಕೆನಿಸಿತು. ಹಾಗೆ ಮಾಡಲಾಗಲಿಲ್ಲ. ಮೂರು ಮುತ್ತುಗಳು. ಎಡಬಲ ಕೆನ್ನೆಗಳಿಗೆ. ಅದರಕೂ.

*ಮೊದಲ ಮಳೆ ಇಳೆಗೆ ಬಿದ್ದಾಗ ಸೂಸುವ ಘಮಘಮಿಸುವ ಮಣ್ಣು*.

ಈಗಲೂ ಮಾಸದ ನೆನಪು. ನಿನ್ನೆಯ ಮಳೆಯ ಮಣ್ಣಿನ ಕಂಪು ಮತ್ತೆ ಕೆಣಕಿ ನಕ್ಕಿತು.

                            ದೃಶ್ಯ-೨

ಐವತ್ತರ ಪ್ರಾಯ. ನಿನಗೂ ಅಷ್ಟೇ.
ಈಗಲೂ ಹರೆಯದ ಚಡಪಡಿಕೆ. ಮೊದಲ ನಿವೇದನೆಯ ಪುಳಕ. ವಯಸ್ಸು ದೇಹಕ್ಕೆ. ಮನಸಿಗಲ್ಲ ಬಿಡು.

ಹೇಳುವ ಧೈರ್ಯ ಮಾಡಿ ಮೊದಲ ಪ್ರೇಮ ನಿವೇದಿಸುವಾಗ ಸಣ್ಣಗೆ ನಡುಕ. ಆದರೂ ದಕ್ಕಿಸಿಕೊಳ್ಳಬೇಕೆಂಬ ಭಂಡ ಧೈರ್ಯ.

ಈಗ ಹಿಂದಿನ ಹಾಗೆ ಮುಖಾಮುಖಿಯಾಗುವ ಅಗತ್ಯವಿಲ್ಲ. ಫೋನ್ ಸಾಕು. ಅಪಾಯ ಕೊಂಚ ಕಡಿಮೆ.

ಕವಿತೆಗಳ ಮೂಲಕ ದಾಳಿ ಮಾಡಿ ಮೈಮನಗಳ ಭಾವ ತೀವ್ರತೆ ಹರಿಬಿಟ್ಟಾಗ ನೀ ಕರಗಿದ್ದೆ.

Warm Hug-Sweet Kiss ಸಾಕೆಂಬ ಬೇಡಿಕೆ.
ಸ್ನೇಹ ಸಾಕೆಂಬ ಪ್ರತಿಕ್ರಿಯೆ. ಆರಂಭದಲ್ಲಿ ಎಲ್ಲವೂ ಹೀಗೆ.

ಒಪ್ಪಿಕೊಳ್ಳದ ನಖರಾ. ಸಂಕೋಚ. ಕಾಪಾಡಿಕೊಂಡ ಚಾರಿತ್ರ್ಯ, ಚರಿತ್ರೆ ಇನ್ನೂ ಏನೇನೋ ರಿಸ್ಕುಗಳು.

ಮೊದಲ ನಿವೇದನೆಗೆ ಸದ್ದಿಲ್ಲದೆ ಒಪ್ಪಿಕೊಂಡಾಗ ಎದುರಿಗೆ ನೀ ಇರಲಿಲ್ಲ. ಕೂಗಿ ಹಾರಾಡಲು.ಮುದ್ದಾಡಲು ಕೂಡ.

ಮೊದಲ ಭೇಟಿ ನಿರ್ಧಾರವಾದಾಗ ಅದೇ ಮೂರು ದಶಕಗಳ ಹಿಂದಿನ ನಡುಕ. ವಿಚಿತ್ರ. ಇಬ್ಬರೂ ಎಲ್ಲ ಅನುಭವಿಸಿ ಮುದುಕರಾದಾಗಲೂ ಅದೇ ಮೊದಲ ಪುಳಕ.

ನಂಬಲಸಾಧ್ಯ. ನಡುರಾತ್ರಿ ಗೂಡು ಸೇರಿ ಬಾಗಿಲು ಹಾಕಿದಾಗಲೂ ಸಾಲದ ಧೈರ್ಯ. ಹೊರಗಡೆ ಗುಡುಗು, ಮಿಂಚು. ಇಲ್ಲಿ ಒಳಗಡೆ ಎದೆ ನಡುಕ.

ಕಣ್ಣು ಮುಚ್ಚಿ ನಕ್ಕಾಗ ಮುಖದ ಬಳಿ ತೆರಳಿದಾಗ ಮೂರು ಇತ್ತಾಗ ಅದೇ ಹರೆಯದ ಮಿಲನದ ಪರಮಸುಖ.

ಎಲ್ಲ ಮೊದಲ ನಿವೇದನೆಯಲಿ ಇದೇ ಹೊಸತನ. ಬತ್ತದ ಜೀವಧಾತು. ಅರಳುವ ಮೈಮನ. ಕೆರಳುವ ಜೀವಕಿಲ್ಲ ಬೇಸರ.
ಒಲವೇ ಜೀವನ ಸಾಕ್ಷಾತ್ಕಾರ. ಮತ್ತೆ ಮತ್ತೆ ಏರುವ ಸಮಾಧಿ ಸ್ಥಿತಿ. ಸವಿಜೇನ ಗುಟುಕಧಾರೆ.

ಈಗ ನೀನಿರಲು ಪ್ರತಿ ಮಿಲನದಲೂ ಮೊದಲ ಪುಳಕ...

       *ಸಿದ್ದು ಯಾಪಲಪರವಿ*

No comments:

Post a Comment