Thursday, August 30, 2018

ತೊಳಲಾಟ

ತೊಳಲಾಟ

There is no meaning in sitting in front of swimming pool without swimming.

ಖಾಲಿಯಾದ ಮನಸಿಗೆ
ನೂರೆಂಟು ನೋವುಗಳು
ಸಾವಿರಾರು ನೆನಪುಗಳು

ಅನುಭವಿಸುವ ಅನಿವಾರ್ಯತೆ
ಭರದಲಿ ಎಲ್ಲವೂ ನಶ್ವರ
ಸಿರಿ-ಸಂಪದ , ಸವಿ-ಸುಂದರ
ಮೈಮಾಟ ಸವಿಸುಖ
ದೂರ ಬಹುದೂರ

ಮನಸಿಗೂ ಜೇಬಿಗೂ ಇಲ್ಲದ
ನಂಟಿನ ಗಂಟು
ಎಲ್ಲವೂ ಒಮ್ಮೊಮ್ಮೆ ಕಗ್ಗಂಟು

ಎಲ್ಲಿಹದು , ಎಲ್ಲಿಹರು
ಮನಸ ತುಂಬುವ ಚತುರರ
ದಂಡು ?

ಕಾಯಬೇಕು ಆಗಾಗ
ಒಲೆಯ ಮೇಲಿಟ್ಟ
ಹಾಲು ಉಕ್ಕದ ಹಾಗೆ

ಬಂದರೂ ಬರಬಹುದು
ಸಿಕ್ಕರೂ ಸಿಗಬಹುದು
ತುಂಬುವ ಮನಸುಗಳ
ಸರದಾರರು

ಇಲ್ಲ ಬರುವುದಿಲ್ಲ
ಬರಲಾಗುವುದಿಲ್ಲ

ಖಾಲಿಯಾದ ಮನಸನು
ತುಂಬುವ ಸರದಾರರ
ಕಣಜ ಖಾಲಿಯಾಗಿ
ಪ್ರೀತಿಯ ಹಗೇವು
ಬತ್ತಿ ಹೋಗಿದೆ

ಯಾರಿಗೂ ಕಾಯದೇ
ಧ್ಯಾನಸ್ಥ ಸ್ಥಿತಿಯಲೊಮ್ಮೆ
ಮಿಂದು ಈಜಾಡಿ
ಹೊರಗೆ ಬಾ

ಆಗಲಾದರೂ ತುಂಬಹುದೇನೋ
ಖಾಲಿ , ಖಾಲಿಯಾದ , ಖಾಲಿ


ಸು

----ಸಿದ್ದು ಯಾಪಲಪರವಿ

No comments:

Post a Comment