ಇಪ್ಪತ್ತೆಂಟು ವರ್ಷಗಳ ಹಿಂದಿನ ಮನಸು ಯಾಕೋ ನಿರ್ಧರಿಸಿತು *ಆದರೆ ಇವಳನ್ನೇ ಮದುವೆ ಆಗಬೇಕು*.
ಕಾರಣ ಅಸ್ಪಷ್ಟ.
ಅನಿಸಿದ್ದಕ್ಕೆ ತುಂಬ ಗಾಢವಾಗಿ ಅಂಟಿಕೊಂಡೆ. ಮನಸಿನ ಹಟವೇ ಹಾಗೆ.
ಬೇಕು ಎಂದರೆ ಬೇಕು. ಹತ್ತಿರದ ಬಂಧುಗಳ ಮಗಳು.ಅವ್ವನ ಕಡೆಯಿಂದ.
ಆದರೆ ಯಾಕೋ ಬೇಗ ಎಲ್ಲರಿಂದ ಅನುಮತಿ ಸಿಗಲಿಲ್ಲ. Love cum arranged ಕೂಡ ಸುಲಭವಲ್ಲ ನಮ್ಮ ವ್ಯವಸ್ಥೆಯಲ್ಲಿ.
ನಾನೋ ಆಗಲೇ ಕಾಲೇಜೊಂದರಲ್ಲಿ ಇಂಗ್ಲಿಷ್ ಪಾಠ ಮಾಡಿ ಹೊಟ್ಟೆ ಹೊರುತ್ತು ಸ್ವಾಭಿಮಾನ ಬೆಳೆಸಿಕೊಂಡಿದ್ದೆ.
ಆದರೆ ತುಂಬ ಭಾವುಕ, ವ್ಯವಹಾರ ಜ್ಞಾನ ಮಾರು ದೂರ; ಈಗಲೂ ಇಲ್ಲ ಬಿಡಿ. ಬದುಕಿನ ವ್ಯವಹಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಹಣದ ಬಗ್ಗೆ ವಿಪರೀತ ಅಲಕ್ಷ.
ಈಗಲೂ ಅದೇ ಮನೋಧರ್ಮ. ಸಾವಿರ ಪೆಟ್ಟು ತಿಂದರೂ ಬದಲಾಗದ ಗುಣ. ಹಣ ದಿನಸಾವು ಅಷ್ಟೇ. ಗಳಿಸಿ ಸಂಗ್ರಹಿಸಬೇಕು ಎಂಬ ಜಾಣತನ ಬರಲೇ ಇಲ್ಲ.
*That's my big tragic flaw* ನಾನದನ್ನು ಒಪ್ಪಿಕೊಂಡೇ ಬದುಕುತ್ತಾ ಇದ್ದೇನೆ. ಬದುಕು ನಿಲ್ಲುವುದೇ ಇಲ್ಲ.
ಸಾಗಿಯೇ ಇರುತ್ತೇ ಆದರೆ ಈ ದೌರ್ಬಲ್ಯಕ್ಕೆ ಮೊದಲ ಬಲಿ ಕುಟುಂಬ ಹಾಗೂ ನಂಬಿದ ಗೆಳೆಯರು. ಕೆಲವು ಸ್ನೇಹಿತರು, ಪಾಲಕರು ಹಾಗೂ ಹೆಂಡತಿ ಈ ನನ್ನ ಅಶಿಸ್ತಿಗೆ ಹೊಂದಿಕೊಂಡು ಸಹಿಸಿ ಸ್ವೀಕರಿಸಿದ್ದಾರೆ.
ಅಂತಹ ನೂರಾರು ಮಿತಿಗಳನ್ನು ಕೇವಲ ಹೆಂಡತಿ ಮಾತ್ರ ಸಹಿಸುತ್ತಾಳೆ. I too am lucky.
She tolerated me. ನನ್ನ ದೌರ್ಬಲ್ಯಗಳನ್ನು ಪ್ರೀತಿಸುವವರು ಮಾತ್ರ ನನ್ನೊಂದಿಗೆ ಇರಬಲ್ಲರು ಎಂಬ ಸತ್ಯ ಎಂದೋ ಕಂಡುಕೊಂಡಿದ್ದೇನೆ. SWOT analysis ಪರಿಣಿತನಾದ ಮೇಲೆ ನನ್ನ ಯೋಗ್ಯತೆಯ ಅಳೆದು ತೂಗಿ ಸುಮ್ಮನಾಗಿದ್ದೇನೆ.
ಈಗ ಬೇರೆಯವರಿಂದ ಪ್ರೀತಿಯ ನಿರೀಕ್ಷೆ ನಿಲ್ಲಿಸಿದ್ದೇನೆ, ಅದೂ ತುಂಬಾ ಒತ್ತಾಯಪೂರ್ವಕವಾಗಿ. ಆದರೂ ಒಳಗೊಳಗೆ ಮರುಗಿ ಕೊರಗುತ್ತೇನೆ.
ಮದುವೆಯ ವ್ಯವಸ್ಥೆ ಕುರಿತು, ಮಾನವನ ಪ್ರಾಮಾಣಿಕತೆ ಕುರಿತು ಮಾತನಾಡುತ್ತಲೇ ಹಿಪೊಕ್ರೆಟಿಕ್ ಆಗಿ ಅಪ್ರಮಾಣಿಕತೆಯಿಂದ ಬದುಕುವುದಕ್ಕೆ ಒಗ್ಗಿ ಹೋಗಿದ್ದೇವೆ.
ಸಾರ್ವಜನಿಕವಾಗಿ ನಾವು ನಮ್ಮ ದೌರ್ಬಲ್ಯಗಳನ್ನು ಹರಾಜು ಹಾಕದಿದ್ದರೂ ಮೈಮನಗಳ ಹಂಚಿಕೊಂಡ ಹೆಂಡತಿಗಾದರೂ ಗೊತ್ತಿರಲಿ ಎಂಬ ನಂಬಿಕೆ ನನ್ನದು. ಅದಕ್ಕನುಗುಣವಾಗಿ ನನ್ನ ಎಲ್ಲ, ಅಂದರೆ ಎಲ್ಲಾ ಮಿತಿಗಳನ್ನು ತುಂಬ ಜಾಗರೂಕತೆಯಿಂದ ಹೇಳುತ್ತಲೇ ಬಂದಿದ್ದೇನೆ.
ಗೆದ್ದಾಗ ಅಹಂ ಪಡದೇ ಸೋತಾಗ ಶರಣಾಗದೇ ಸಮಪಾತಳಿಯಲ್ಲಿ ಬದುಕಿದ್ದೇನೆ. ಒಮ್ಮೊಮ್ಮೆ ತೀರಾ ಖಾಸಗಿಯಾಗಿ ನನ್ನ ಕಲಕುವ ಅಪಾಯಕಾರಿ ಭಾವನೆಗಳನ್ನು ಒಬ್ಬನೇ ಒದ್ದಾಡುತ್ತ ಅನುಭವಿಸಿ ಹೇಳುವ ಸಂದರ್ಭ ಬರುವವರೆಗೆ ನಾಜೂಕಾಗಿ ಕಾಯುತ್ತೇನೆ.
ಉಡುಗೆ,ತೊಡುಗೆ,ಸಾರ್ವಜನಿಕ ಸಭ್ಯತೆ ವಿಷಯಗಳಿಗೆ I'm too possessive. ಈಗ ಇಬ್ಬರೂ ಹುಡುಗಿಯರು ದೊಡ್ಡವರಾದ ಮೇಲೆ ಸ್ವಲ್ಪ ಕಡಿಮೆಯೂ ಆಗಿದೆ. ಓದು,ಬರಹ,ತಿರುಗಾಟ,ಪ್ರೇಮ ಹಾಗೂ ಧ್ಯಾನ ಯಾವುದಕ್ಕೂ ಅಡ್ಡಿ ಮಾಡುವುದಿಲ್ಲ.
ನನ್ನ ಪಾಡಿಗೆ ನಾನಿರುವ ದೊಡ್ಡ ಸ್ವಾತಂತ್ರ್ಯ. ಆಕೆಯ ಮಿತಿಗಳನ್ನು ಗ್ರಹಿಸಿ ಒಪ್ಪಿಕೊಂಡಿದ್ದೇನೆ. ಅವು ಅಸಹನೀಯವೇನು ಅಲ್ಲ ನನ್ನ ಮಿತಿಗಳ ಹಾಗೆ!
ಮಕ್ಕಳ ಶಿಕ್ಷಣ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿಸಬೇಕು ಎಂಬ ಕಟು ನಿರ್ಧಾರಕೆ, ಕಾನ್ವೆಂಟ್ ಶಾಲೆಯಲ್ಲಿ ಓದಿದ ಈಕೆ ತಕರಾರು ತೆಗಿಯಲಿಲ್ಲ.
ಈಗಿನ ಬಹುಪಾಲು ದಾಂಪತ್ಯದ ಬಿರುಕು ಮಕ್ಕಳ ಶಿಕ್ಷಣದಿಂದ ಪ್ರಾರಂಭವಾಗುತ್ತದೆ. ಉಳಿದಂತೆ ಅತ್ತೆ-ಸೊಸೆ ಕಲರವ ನನ್ನನ್ನು ಕೊಂಚ ಕದಡಿತಾದರೂ issue ಆಗಲಿಲ್ಲ.
ಸ್ವಂತ ಮನೆ ಮಕ್ಕಳ ಶಿಕ್ಷಣ ಹೇಗೋ ಸಾಗಿದೆ. ಐವತ್ತರ ಗಡಿ ದಾಟಿದ ಆಯಸ್ಸು ಆರೋಗ್ಯ ಬಯಸುತ್ತದೆ. ಕಾಲು ಶತಮಾನ ಪೂರೈಸಿದ ದಾಂಪತ್ಯ ( 2-5-1993-2-5-2018 ) ಪ್ರೀತಿ-ವಿಶ್ವಾಸ ಬಯಸುತ್ತದೆ. ' ಅಯ್ಯೋ ನಮಗೂ ವಯಸ್ಸಾಯಿತು.
ನೂರೆಂಟು ಸಮಸ್ಯೆಗಳು' ಎಂಬ ಗೊಣಗಾಟ ಇಬ್ಬರಲ್ಲೂ ಇಲ್ಲ. ನಾನಂತೂ ಕೂಗಾಡುವುದೇ ಇಲ್ಲ.
ತಪ್ಪುಗಳು ನನ್ನ ಕಡೆ ಹೆಚ್ಚು. ಹಾಗಾಗಿ ಆಕೆ ಕೂಗಾಡಿದರೂ ಜಾಣ ಸಹನೆ.
ನನ್ನ ಮಗುವಿನ ಮುದ್ದಿಸುವ ಸ್ವಭಾವಕೆ ವಯಸ್ಸಾಗಿಲ್ಲ. ನೀರಸ ದಾಂಪತ್ಯ ನನಗೆ ಇಷ್ಟವಾಗಲ್ಲ. *ಕಾಮದ ಕಸುವು ಆರಿದ ಮೇಲೆ ಮುದ್ದಿಗೆ ಬರ ಬರಬಾರದು* ಅದೂ ಕೀಳರಿಮೆ ಆಗಲೂಬಾರದು. ಕಾಮಿಸದಿದ್ದರೆ ಸೋತಂತೆ, ಸತ್ತಂತೆ ಎಂದು ಅಂದುಕೊಳ್ಳಬಾರದು.
ಹೆಚ್ಚು smart ಆಗಿ ಇರಬೇಕು. ವಯಸ್ಸಾದಂತೆ ದೈಹಿಕ ಶಿಸ್ತು ಹೆಚ್ಚಾಗಬೇಕು. We should look more young and energetic.
ಬೇರೆಯವರು ಅಸೂಯೆಪಟ್ಟರೂ ಆತಂಕ ಬೇಡ. ಈ ಜೀವನ ವಯಸ್ಸಾದಂತೆ ನಮಗಾಗಿ.
I'm more particular about dressing. ಇಡೀ ದೇಶವನ್ನ ಒಬ್ಬನೇ ಸುತ್ತಿದ್ದೇನೆ. ಇಂಗ್ಲೆಂಡಿನ ಪಯಣದಲ್ಲಿ ಒಂದು ತಿಂಗಳು ಜೊತೆಗಿದ್ದಳು.
*ಸದಾ ಒಂಟಿ ಅಲೆದಾಟ, ಓದು,ಬರಹ. ಖಾಸಗಿ ಸಂಗಾತಿಗಳ* ತಂಟೆಗೆ ಬರದ ಔದಾರ್ಯ ಆಕೆಯದು. ಕಾಯಿಪಲ್ಯ, ರೇಶನ್ ಬೆಲೆ ಗೊತ್ತೇ ಆಗದ ಅಜ್ಞಾನ ನನ್ನದು. ಮಾರ್ಕೆಟ್ಟಿಗೆ ಬಿಡುವುದೇ ಇಲ್ಲ.
ಹೆಚ್ಚು ಬದುಕನ್ನು ಪ್ರೀತಿಸಬೇಕು. ಹೆಚ್ಚು ಬರೆಯಬೇಕು ಅನಿಸಲು ಸಂಗಾತಿಗಳೇ ಕಾರಣ. I have my own limited circle in personal life but in public it's unlimited. ಬರೆದದ್ದು ಕಡಿಮೆ. ಬರೆದದ್ದನ್ನು ಪ್ರೀತಿಯಿಂದ ಓದಲಿ ಎಂಬ ತುಡಿತವಿದೆ. *ನಿರ್ಭಯ-ನಿರಾಕರಣೆ-ನಿರ್ಲಿಪ್ತತೆ* ಸೂತ್ರ ಇಟ್ಟುಕೊಂಡು Joyful Living ಜೀವನ ಶೈಲಿ ತರಬೇತಿ ನೀಡುತ್ತಲಿದ್ದೇನೆ. ಕಾವ್ಯ ನನ್ನ ಆಧ್ಯತೆ. ಆಧ್ಯಾತ್ಮ ನನ್ನ ಉಸಿರು.
ಬುದ್ಧ-ಅಲ್ಲಮ-ಓಷೋ-ಶೇಕ್ಷಪಿಯರ್ ನನ್ನ ಮಾರ್ಗದರ್ಶಕರು. ಇಂಗ್ಲಿಷ್ ಓದು ಕನ್ನಡ ಬರಹದಲಿ ಒಲವು. ಬದುಕಲಿ ಬಂದವರು ಬರುತ್ತಾರೆ, ಹೋಗುವವರು ಹೋಗುತ್ತಾರೆ, ಇರುವವರು ಇದ್ದೇ ಇರುತ್ತಾರೆ.
ನಿಶ್ಚಿಂತೆಯಿಂದ ಇರಬೇಕು. *ಕೆಲವರು ಇರಲೇಬೇಕು ಎನಿಸುತ್ತದೆ*. *ಈ ಎಲ್ಲದಕೂ ಒಳಗೆ ಒಲೆ ಸರಿಯಿರಬೇಕು ಹೊರಗೆ ತಲೆ ಸರಿಯಿರಬೇಕು*
ದಾಂಪತ್ಯ ಸರಿ ಇದ್ದರೆ ಹೊರಗೂ ಸರಿ ಇರಬಹುದು ಎಂಬ ನಂಬಿಕೆ ಹಿಡಿದು ಹೊರಟಿದ್ದೇನೆ.
ರಜತ ಮಹೋತ್ಸವದ *ಸಾರ್ವಜನಿಕ ಆಡಂಬರದ ಆಚರಣೆ ಬೇಡ ಎಂಬ ಒಮ್ಮತದ ನಿರ್ಧಾರವನ್ನು ಮಕ್ಕಳು ಬದಲಾಯಿಸಿದ್ದಾರೆ.
* ಇಷ್ಟವಾದ ಊರುಗಳಲಿ ಸುತ್ತಾಡಿ ಇಷ್ಟವಾದ ಪುಸ್ತಕ ಬರೆದು ಪ್ರಕಟಿಸುವ ಇರಾದೆ ಇದೆ.
ಎಂದಿನಂತೆ ನಿಮ್ಮ ಹಾರೈಕೆ ಇರಲಿ. *ಬದುಕು ಜೀವನೋತ್ಸಾಹದಿಂದ ಸಾಗುತಲೇ ಇರಲಿ*.
*ಸಿದ್ದು ಯಾಪಲಪರವಿ*
No comments:
Post a Comment