*ಸಮರ್ಥ ನಿರೂಪಕರು: ಕಲಾದೇಗುಲ ಶ್ರೀನಿವಾಸ ಹಾಗೂ ಮಂಗಳಾ ನಾಗರಾಜ*
ನೇರ ಸಂದರ್ಶನಗಳ ಮಾಡರೇಟ್ ಮಾಡುವುದು ಸರಳವಲ್ಲ. ಅನೇಕ ಸವಾಲುಗಳು ಎದುರಾಗುತ್ತವೆ. ಎದುರಿಗೆ ಕುಳಿತ ಸಾಧಕರು ನೇರ ಪ್ರಸಾರಗಳಲ್ಲಿ ಮಾತಿನ ಮಧ್ಯೆ ಕಳೆದುಹೋಗುತ್ತಾರೆ.
ಅದೂ ಎರಡು ತಾಸು ಅವರನ್ನು ಹಿಡಿದು ಹಾಕಿ ಮಾತಿಗಿಳಿಯುವಂತೆ ಮಾಡುವುದು ಬಹು ದೊಡ್ಡ ಸವಾಲು.
Yapal's Show time ನಿರೂಪಕನಾಗಿ ಸ್ಥಾನಿಕ ಚಾನಲ್ ಗಾಗಿ ಕೆಲಸ ಮಾಡುವಾಗಿನ ನನ್ನ ಅನುಭವದ ಆಧಾರದ ಮೇಲೆ ಈ ಇಬ್ಬರೂ ನಿರೂಪಕರನ್ನು ಗಮನಿಸುತ್ತಲೇ ಎರಡು ತಾಸು ಮಾತನಾಡಿದೆ.
ಇಡೀ ಬದುಕಿನ ಘಟನೆಗಳನ್ನು ಹೆಕ್ಕಿ ತೆಗೆಯಲು ಒಂದು ಸಣ್ಣ ರಿಹರ್ಸಲ್ ಬೇಕಾಗಿತ್ತು. ಆದರೆ ನನಗದು ಸಾಧ್ಯವಾಗಿರಲಿಲ್ಲ.
ಬೆಳಿಗ್ಗೆ ಆರಕ್ಕೆ ಪ್ರತ್ಯಕ್ಷರಾದ ಗೆಳೆಯರಿಗೆ ಸಣ್ಣ ಅನುಮಾನವಿದ್ದರೂ ನನ್ನ ಅನುಭವದ ಆಧಾರದ ಮೇಲೆ all the best ಹೇಳಿ ಆತಂಕ ನಿವಾರಿಸಿದೆ. ಹಿಂದಿನ ರಾತ್ರಿ ನಿದ್ರೆ ಇಲ್ಲದೆ ಚಡಪಡಿಸಿ mind mapping ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದೆ.
ಆದರೆ ನನ್ನ ಆಶಯಗಳಿಗೆ ಸ್ಪಂದಿಸದ ನಿರೂಪಕರಿದ್ದರೆ...
ಅಂದುಕೊಂಡದ್ದು ಕಾರ್ಯಕ್ರಮ ಪ್ರಾರಂಭವಾದ ಕೂಡಲೇ ದೂರಾಯಿತು.
ನಗುತ, ನಸುನಗುತ ಸುಲಲಿತ ಮಾತುಗಳ ಮೂಲಕ ನನ್ನನ್ನು ಆವರಿಸಿ ನಯವಾಗಿ ಅಲುಗಾಡಿಸಿದ ಶ್ರೀನಿವಾಸ ಹಾಗೂ ಮಂಗಳಾ ಅದ್ಭುತ ಎನಿಸಿದರು.
ಗಾಯಕ,ನಟ, ಸಂಗೀತ ನಿರ್ದೇಶಕ, ಬರಹಗಾರ ಕಲಾದೇಗುಲ ಶ್ರೀನಿವಾಸ ಸಮರ್ಥ ನಿರೂಪಕ.
ಕಾರ್ಯಕ್ರಮದ ಮಧ್ಯೆ ಬೇಸರವಾಗದಂತೆ ಲಿಂಕ್ ಕೊಡುತ್ತ ಕಾವ್ಯಾತ್ಮಕವಾಗಿ ಹರಳು ಹುರಿದಂತೆ ಮಾತನಾಡಿ ನನ್ನ ಕವಿತೆಯನ್ನು ಅಷ್ಟೇ ಸೊಗಸಾಗಿ ಓದಿದರು.
ನನ್ನನ್ನು ಮಾತನಾಡಲೂ ಬಿಟ್ಟರು.
ಇತ್ತೀಚಿನ ಕೆಲವು ಖಾಸಗಿ ವಾಹಿನಿಗಳಲ್ಲಿ ನಿರೂಪಕರು ಅತಿಥಿಗಳ ತಿಥಿ ಮಾಡಿ ತಮ್ಮ ಪ್ರಭುತ್ವದ ಪ್ರಭಾವ ಮೆರೆಯುತ್ತಾರೆ. ಅವರಿಗಿರಬಹುದಾದ ಜ್ಞಾನ ಪ್ರದರ್ಶನದ ಮೂಲಕ ಅತಿಥಿಗಳನ್ನು ದಿಕ್ಕು ತಪ್ಪಿಸಿ ಅವಮಾನ ಮಾಡುತ್ತಾರೆ.
*ಆದರೆ ಈ ಇಬ್ಬರೂ ತಮ್ಮ ಮಿತಿಯನ್ನು ಗ್ರಹಿಸಿ they made me quite comfortable*.
ಶ್ರೀನಿವಾಸ ಒಬ್ಬ ನಟ ಗಾಯಕ ಆದ್ದರಿಂದ ಎದುರಿಗಿರುವವರ ಮನಸ್ಥಿತಿ ಗ್ರಹಿಸುತ್ತಾರೆ.
ಮಂಗಳಾ ವಾರ್ತಾವಾಚಕಿ, ಮಾದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ. ಅವರ ಬದುಕಿನ ವೈಯಕ್ತಿಕ ತಲ್ಲಣ ನನಗೆ ಗೊತ್ತಿದ್ದರೂ ನಾನು ಅಲ್ಲಿ ಕಳೆದುಹೋಗದಂತೆ ಮಂಗಳಾ ಎಚ್ಚರವಹಿಸಿದರು.
ಕೇಳುವ ಪ್ರಶ್ನೆಗಳಿಗೆ ಯಾವ ರೀತಿಯ ಉತ್ತರ ಬರಬಹುದೆಂಬ ಆತ್ಮವಿಶ್ವಾಸ ಅವರದು. *ಹಸನ್ಮುಖಿ ಸದಾ ಸುಖಿ* ಎಂಬಂತೆ ಸಾವಿರ ನೋವುಗಳ ಆಚೆ ನೂಕಿ ಕ್ಯಾಮರಾ ಮುಂದೆ ಸಹಜವಾಗಿ, ಲೀಲಾಜಾಲವಾಗಿ ಅಭಿನಯಿಸಬೇಕು.
ಸಾರ್ವಜನಿಕವಾಗಿ ನಮ್ಮನ್ನು ಕೋಟ್ಯಾಂತರ ಮನಸುಗಳು ವೀಕ್ಷಿಸುತ್ತಾರೆ ಎಂಬ ಜಾಗೃತಿ ಬೇರೆ!
ಆ ಎಲ್ಲ ಎಚ್ಚರಗಳನ್ನು ಮಂಗಳಾ ನಾಜೂಕಾಗಿ ನಿರ್ವಸಿದರು.
ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಹಾಗೂ ಜೀವನಶೈಲಿ ನಿರ್ವಹಣೆಯಂತಹ ಸಂಗತಿಗಳು ನನ್ನೊಳಗೆ ಉಳಿಯದಂತೆ positive expose ಮಾಡಿದರು.
ಎರಡು ದಿನ ಮುಗಿದರೂ ಇವರೀರ್ವರ ನಗು ಮೊಗ ಮರೆಯಲಾಗುತ್ತಿಲ್ಲ.
ಅಭಿನಂದನೆಗಳನ್ನು ನಾನೊಬ್ಬನೇ ಸ್ವೀಕರಿಸಿ ಸಣ್ಣವನಾಗಲಾರೆ. ಅದಕ್ಕೆ ನೀವೂ ಪಾಲುದಾರರು, ಕಾರಣಕರ್ತರು.
*ನಿಮ್ಮಿಬ್ಬರನ್ನು ಮತ್ತೆ ಮತ್ತೆ ಸೇರಬೇಕೆಂಬ ಸೆಳೆತ*
Thanks a lot ಚಿರಸ್ಥಾಯಿಯ ಮಂಗಲಾ ಚಿನ್ಮಯ, ಕಲಾದೇಗುಲ ಶ್ರೀನಿವಾಸ.
Stay blessed and always be happy.
----ಸಿದ್ದು ಯಾಪಲಪರವಿ.
No comments:
Post a Comment