Sunday, July 9, 2017

ಕಾಲಿಗೆ ಚಕ್ರ

ಕಾಲಿಗೆ ಚಕ್ರ

ಕಳೆದ ಶನಿವಾರ ಕಲಬುರ್ಗಿಯ ಬಸವ ಸಮಿತಿ ಕಾರ್ಯಕ್ರಮಕ್ಕೆ ಓಡಲು ಆರಂಭವಾದ ನನ್ನ ಕಾಲುಗಳು ನಿಂತೇ ಇಲ್ಲ . ಅಲ್ಲಿಂದ ನಿಟ್ಟೆ , ಮಂಗಳೂರು , ನಿಡ್ಡೋಡಿ , ಪುತ್ತೂರು , ಮೂಡುಬಿದ್ರೆ ನಂತರ ಹಿಮ್ಮುಖದಲಿ ಮತ್ತೆ ಪಯಣ ಬಂಗಾರಮಕ್ಕಿಗೆ.
ವಚನಕಾರರ ಮಾನವೀಯ ಮೌಲ್ಯಗಳ ಕುರಿತು ಉಪನ್ಯಾಸ ಹಾಗೂ ಮಹತ್ವದ ಸ್ನೇಹಿತರ ದರ್ಶನ , ಮಗಳ admission , ನಿಡ್ಡೋಡಿ ಶಾಲೆಯ ಭಾಸ್ಕರ ಅವರ ಆತಿಥ್ಯ .

ಪುತ್ತೂರಿನ ಸೌಹಾರ್ದದ ಗೆಳೆಯ ವಸಂತ ಅವರ ಮದುವೆ , ಸರಸ್ವತಿ ಸೌಹಾರ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸತೀಶಚಂದ್ರ ಹಾಗೂ ಅಧಿಕಾರಗಳ ಭೇಟಿ ಹರಟೆ.

ಮೂಡಬಿದ್ರೆಯನ್ನು ಅಂತರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವನ್ನಾಗಿ ಬೆಳೆಸಿದ ಮಹಾನ್ ಕನಸುಗಾರ ಡಾ.ಮೋಹನ್ ಆಳ್ವ ಅವರೊಡನೆ ಮಾತಿನ ರಸಗವಳ.

ಲೋಕಸೇವಾ ಆಯೋಗದ ಸದಸ್ಯರಾಗಿದ್ದ ಶಿಕ್ಷಣ ಪ್ರೇಮಿಗಳೂ ಆಗಿರುವ ಶ್ರೀ ರಂಗಮೂರ್ತಿ ಅವರೊಂದಿಗೆ ಕೊಂಚ ಗಂಭೀರ ಚರ್ಚೆ.
ಸರಸ್ವತಿಯ ಸಂಗಾತಿಗಳೊಂದಿಗೆ  ತರಬೇತಿಯ ಮೆಲುಕು.

ಎರಡು ದಿನಗಳ ಬಂಗಾರಮಕ್ಕಿಯಲ್ಲಿನ ವಾಸ್ತವ್ಯದ ದಿವ್ಯಾನುಭವ , ಗುರುಪೂರ್ಣಿಮ ನಿಮಿತ್ಯ ಪೂಜ್ಯರ ದರ್ಶನ ಹತ್ತು-ಹಲವು ಯೋಜನೆಗಳ ಮೇಲೆ ಪರ್ಯಟನ.
ಮತ್ತೆ ಬೆಂಗಳೂರಿಗೆ ಪಯಣ ಮತ್ತೊಂದು ಮಹತ್ವದ ಕೆಲಸದ ನಿಮಿತ್ಯ.
ಸರಿಸುಮಾರು ಮೂರು ಸಾವಿರ ಕಿಲೋಮೀಟರ್ ಅಲೆದಾಟದಲಿ ವಿಭಿನ್ನ ಆಲೋಚನೆಗಳ ಮಧ್ಯೆ ದಣಿವಿಗೆ ಜಾಗ ಸಿಕ್ಕಿಲ್ಲ.
ಹತ್ತು-ಹಲವು ವಿಚಾರಗಳು ನಮ್ಮನ್ನು ಜೀವಂತವಾಗಿಡುತ್ತವೆ , ಮೂಲೆ ಸೇರಿ ಮಲಗಿದಾಗ ವಿಶ್ರಾಂತಿ ಇದ್ದೇ ಇದೆ .
ಮನಸು-ದೇಹ ಸಹಕರಿಸುವವರೆಗೆ ಏನಾದರೂ ಒಳ್ಳೆಯದನ್ನು ಮಾಡುತ್ತಾ ಇರಬೇಕು. ಮಾಡುವ ಅವಕಾಶಗಳು ಸಿಗುವುದು ಕೂಡಾ ಅಷ್ಟೇ ಮಹತ್ವದ ಸಂಗತಿ , ಆಸಕ್ತಿ ಇದ್ದು ಅವಕಾಶಗಳೇ ಸಿಗದಿದ್ದರೆ ಏನು ಪ್ರಯೋಜನ ?

ಅರ್ಥಪೂರ್ಣ ಓಡಾಟಕ್ಕೆ ಸಹಕರಿಸುವವರು ಅಸಂಖ್ಯ-ಅನನ್ಯ . ಅವರೆಲ್ಲರೂ ನಾನು ಚಿರಋಣಿ.
' Sleep is a temporary death , death is a permanent sleep ' ಎನ್ನುವಂತೆ ಶಾಶ್ವತವಾಗಿ ಮಲಗುವ ತನಕ ಏನಾದರೂ ಮಾಡುತ್ತಾ ಇರಲು ಇರಲಿ ನಿಮ್ಮ
ಹಾ
ರೈ
ಕೆ

---ಸಿದ್ದು ಯಾಪಲಪರವಿ

No comments:

Post a Comment