Monday, July 3, 2017

ಕೊಂಚ ದಾರಿ ಬಿಡು ಸಖಿ

ಕೊಂಚ ದಾರಿ ಬಿಡು ಸಖಿ

ಬಾನಲಿ ನಗುವ ಚಂದಿರ
ನಿನ್ನ ನಗೆಯ ಹೊಳಪಿಗೆ
ಮಂಕಾಗಿ ಮೋಡದಲಿ
ಮರೆಯಾಗಿ
ಅವಿತುಕೊಂಡಿರುವ

ಹೊಳೆವ ನಕ್ಷತ್ರಗಳು ಬೆರಗಾಗಿ
ಕಣ್ಣು ಬಿಟ್ಟು ನೀ ಮರೆಯಾಗುವುದ
ಕಾಯುತಲಿವೆ

ಲೋಕದ ಮನುಜರು ನಿನ್ನ ನೋಡುವ
ಸಡಗರದಲಿ ಚುಕ್ಕಿ-ಚಂದ್ರಮರ
ಮರೆತಿರುವರಂತೆ ಸಖಿ

ಒಂಚೂರು ಮರೆಯಾಗಿ ಸೆರಗಲಿ
ಮುಖ ಮುಚ್ಚಿಕೋ ಚುಕ್ಕಿ-ಚಂದ್ರಮರ
ಸಂಭ್ರಮ ಮಂಕಾಗದಿರಲಿ.

---ಸಿದ್ದು ಯಾಪಲಪರವಿ

No comments:

Post a Comment