Saturday, July 15, 2017

ಬರಹ-ಓದು-ಹಾಡು-ಭಾವುಕತೆ

ಬರಹ-ಓದು-ಹಾಡು-ಭಾವುಕತೆ

ಭಾವನೆಗಳಿಲ್ಲದೆ ಬದುಕಲಾಗದು ಎಂಬುದು ಎಲ್ಲರ ಭಾವ. ಎಂತಹ ವಾಸ್ತವವಾದಿಗಳೇ ಆಗಿರಲಿ ಕೆಲವು ಬಾರಿ ಭಾವುಕರಾಗುತ್ತಾರೆ .
ವೈಯಕ್ತಿಕ ನೋವು , ಹತ್ತಿರದವರ ಅನಿರೀಕ್ಷಿತ ಅಗಲಿಕೆ ಮನುಷ್ಯನನ್ನು ತಲ್ಲಣಿಸುವುದು ಸಹಜ.

ಆದರೆ ಕೆಲವರು ವಿಪರೀತ ಭಾವುಕತೆಯಿಂದ ತಕ್ಷಣ ಪ್ರತಿಕ್ರಿಯಿಸುತ್ತಾರೆ.
ಭಾವನಾತ್ಮಕ ಪರಕಾಯ ಪ್ರವೇಶವನ್ನು ನನ್ನ ಗುರುಗಳು ಹಾಗೂ ಕವಿಗಳಾದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಅವರಲ್ಲಿ ಕಂಡಿದ್ದೆ , ಅವರಿಂದ ಪ್ರಭಾವಿತನಾದೆ. ಅವರೇ ನನ್ನ ಪಾಲಿನ ದ್ರೋಣಾಚಾರ್ಯರು. ಯಾಕೆಂದರೆ ನಾನವರ indirect student. ಹಿಂದಿ ಆಯ್ದುಕೊಂಡಿರಲಿಲ್ಲ . ಅವರ ದಿಟ್ಟ ವಿಮರ್ಶೆ ಹಾಗೂ ಸಲಹೆಗಳನ್ನು ನೋಡಿ ನನ್ನ ಕವಿತೆಗಳನ್ನು ಅವರಿಗೆ ತೋರಿಸಿರಲಿಲ್ಲ.

ನನ್ನ ಮೊದಲ ಕವನ ಸಂಕಲನ ' ನೆಲದ ಮರೆಯ ನಿಧಾನ ' ಅವರಿಗೆ ಅರ್ಪಿಸಿ ಒಪ್ಪಿಸಿ ಪ್ರತಿಕ್ರಿಯೆ ಬಯಸುವ ಧೈರ್ಯ ಮಾಡದೇ ಬಂದಿದ್ದೆ . ನಂತರ ಅವರ ಮೆಚ್ಚುಗೆ ಕಂಡು ಸಂಭ್ರಮ ಪಟ್ಟೆ .

ಈಗ ಬಿಡಿ ಕಾವ್ಯ ನನ್ನ ಮೊದಲ ವಿಶ್ವಾಸಪೂರ್ಣ , ಆತ್ಮವಿಶ್ವಾಸದ ಆಯ್ಕೆ I go on writing without bothering for criticism.
ನನ್ನ ಸಂತೃಪ್ತಿಗಾಗಿ ಬರೆಯುತ್ತಲೇ ಇರುವೆ .

'ರವಿ ಕಾಣದ್ದನ್ನ ಕವಿ ಕಾಣ್ತಾನೆ ' ಎಂಬ ಮಾತಿಗೆ ಕವಿಗಿರುವ ಪರಕಾಯ ಪ್ರವೇಶ ಮನಸ್ಥಿತಿಯೇ ಕಾರಣ .

ಈ ಅಂಶವನ್ನು ವಿದ್ಯಾರ್ಥಿ ಬದುಬದುಕಿನಲ್ಲಿ ನಾನು ಓದಿದ ಕಾದಂಬರಿಗಳ ಪ್ರಭಾವ ದೊಡ್ಡದು.
ಬೈರಪ್ಪನವರ ' ದೂರ ಸರಿದರು  ' ಕಾದಂಬರಿ ಓದುವಾಗ ಮಗುವಿನ ಹಾಗೆ ಒಂಟಿಯಾಗಿ ಎಲ್ಲರ ಕಣ್ಣು ತಪ್ಪಿಸಿ ಅತ್ತುಬಿಟ್ಟಿದ್ದೆ.

ಅದಾದ ಮೇಲೆ  ಸಾರ್ವಜನಿಕವಾಗಿ ಅಳುವುದನ್ನು ನಿಲ್ಲಿಸಿ , ಅಳುವಿಗೆ ಸದಾ ಒಂಟಿಯಾಗುತ್ತೇನೆ.
ಈಗಲೂ ಸಿನಿಮಾ ನೋಡುವಾಗ ಯಾರಿಗೂ ಕಾಣದಂತೆ ಕಣ್ಣೊರಿಸಿಕೊಳ್ಳತ್ತೇನೆ . ಪರಕಾಯ ಪ್ರವೇಶದ ಕವಿ ನನ್ನನ್ನು ಅಳಿಸುತ್ತಾನೆ.

ಇತ್ತೀಚಿಗೆ Zee ಕನ್ನಡದ ಸರಿಗಮಪ ಕಾರ್ಯಕ್ರಮ ನೋಡುವಾಗ ಭಾವುಕನಾಗಿ ಒಳಗೊಳಗೆ ಅಳು ಬರುತ್ತದೆ.
Though it is a scripted programme it appeals my soul and makes me to involve.

  ಅಲ್ಲಿನ judges , ನಿರೂಪಕಿ , ಎಲ್ಲರೂ ,ಎಲ್ಲವೂ wonderful .
ಕಲಾವಿದರು nominate ಆದವರನ್ನು ಕಳಿಸುವಾಗ ದುಃಖಿಸದ್ದು ನೋಡಿ ಇಷ್ಟೆಲ್ಲ ಹೇಳಬೇಕೆನಿಸಿತು.

---ಸಿದ್ದು ಯಾಪಲಪರವಿ

No comments:

Post a Comment