ಕರುಳಬಂಧ
ಕೂಗಳತೆಗೆ ಸಿಗದ ನಿನ್ನ
ಕಣ್ಣಳತೆಯಲಿ
ತೂಗುವುದಾದರೂ ಹೇಗೆ ?
ಮೊದಲ ನೋಟದ ಕೋಲ್ಮಿಂಚ
ಹೊಡೆತಕೆ ಮೂಡಿದ ಬೆರಗ
ಬೆಳಕಲಿ ಕರಗಿದೆ
ಅಪ್ರತಿಮ ಸೌಂದರ್ಯ
ಇರುವುದು ಬರೀ ದೇಹಸಿರಿಯಲಲ್ಲ
ಮಂಥನದ ಮಾತುಗಳಲಿ
ದೇವನೊಲುಮೆಯ ಅಕ್ಕರೆಯ
ಅಕ್ಷರಗಳ ಆಟದಲಿ
ಎಲ್ಲವೂ ಸರಸ್ವತಿಯ ಒಲುಮೆಯಾಟ
ಸಮಕಲ್ಪನೆ , ಸಮವಿಚಾರ , ಸಮರುಚಿ
ಸಮಗನಸು ನಮ್ಮೀ ಒಲುಮೆಗೆ ನಾಂದಿ
ಬಿಡಿಸಲಾಗದ , ಅಳಿಸಲಾಗದ
ಅನುಬಂಧವ ಅನುಗಾಲ ಒಡಲಲಿ
ಅಡಗಿಸಿ ಬಾಳಪಯಣದಿ ಸಾಗೋಣ
ಯಾರೂ ಅರಿಯದ , ಯಾರೂ ಕಾಣದ ,
ಯಾರೂ ಕಸಿಯದ ಈ ಕಸುವಿನ
ಕರುಳಬಳ್ಳಿಯ ಬಾನೆತ್ತರದಲಿ
ಹಬ್ಬಿಸಿ ಘಮಘಮಿಸೋಣ
ಕಳೆದು ಹೋದ ಹರೆ
ಮರಳಿ ಪಡೆಯೋಣ
---ಸಿದ್ದು ಯಾಪಲಪರವಿ
No comments:
Post a Comment