Friday, July 28, 2017

ಕಾಯುವಿಕೆ-waiting=ಇಂತಜಾರ

ಕಾಯುವಿಕೆ-Waiting=ಇಂತಜಾರ

''Waiting for you , ತುಂಬಾ ಕಾಯ್ದೆ , ಇಂತಜಾರ ಮೇರೆ ಯಾರಕಿ '
ಈ ತರಹದ ಮಾತುಗಳು ಎಂತಹ ಅರಸಿಕರ ಬದುಕಿನಲ್ಲಿಯೂ ಬಂದು ಹೋಗುತ್ತವೆ. ನಾವು ನಮ್ಮ ಬದುಕಿನಲ್ಲಿ ಹಲವಾರು ಸಂದರ್ಭಗಳಲ್ಲಿ , ಹಲವರಿಗಾಗಿ , ಹಲವು ಕಾರಣಕ್ಕಾಗಿ ತುಂಬಾ ತೀವ್ರವಾಗಿ ಕಾದಿದ್ದೇವೆ , ಕಾಯುತ್ತೇವೆ ಹಾಗೆ ಮುಂದೆಯೂ ಕಾಯುತ್ತಲಿರುತ್ತೇವೆ.

ಪ್ರೀತಿಯ ಜಾಗಕ್ಕೆ ಹೋಗುವಾಗ ದಾರಿ ಸಾಗುವುದೇ ಇಲ್ಲ , ಬರಬೇಕಾದ ಊರಿಗೆ ಕಾಯುತ್ತೇವೆ. ತುಂಬಾ ಪ್ರೀತಿಸುವ ವ್ಯಕ್ತಿಗಳು ಬರುತ್ತಾರೆ ಎಂದಾಗ ಮತ್ತೆ ಮತ್ತೆ ಸಮಯ ನೋಡಿಕೊಂಡು ಅಸಹನೆಯಿಂದ ಕಾಯುತ್ತೇವೆ.

ಕಾಯುವು ದು ಸಣ್ಣ ಸಂಗತಿಯಲ್ಲ ಅದೊಂದು ಯಮಯಾತನೆ.

ನಿರ್ಭಾವುಕ , ವ್ಯವಹಾರಿಕ ವ್ಯಕ್ತಿಗಳು ಸಾಲ ಕೊಡುವ ಸಮಯ ಬಂದಾಗ ಇನ್ನಿಲ್ಲದಂತೆ ಕಾಯ್ದು ಜೀವ ಹಿಂಡಿ ಶಪಿಸುತ್ತಾರೆ.

ಇನ್ನೂ ಭಾವುಕರು ಈ ಸಾಲಗಾರರಿಗಿಂತಲೂ ಹೆಚ್ಚು ಅಪಾಯಕಾರಿ.

ತುಂಬ ಕಾಯಿಸಿದರೆ ತಮ್ಮೊಳಗೆ ಹೇಳಲಾಗದ possessiveness ನಿಂದ ಕಾಯ್ದು ಕಾಯ್ದು ಸುಸ್ತಾಗುತ್ತಾರೆ.
ರಾಮನಿಗಾಗಿ ಕಾಯ್ದ ಶಬರಿಯ ಹಾಗೆ . ಆಕೆ  ನಮಗೆಲ್ಲ ಮಾದರಿ.

ಹಿಂದಿನ ಪ್ರೇಮಿಗಳ ಕಾಯುವಿಕೆ ಹೇಳಲಸಾಧ್ಯ .
ಆದರೆ ಆಧುನಿಕ ಪ್ರೇಮಿಗಳಿಗೆ ಇದೆಲ್ಲ ತಮಾಷೆ ಎನಿಸಬಹುದು , ಈ ultra modern ಯುಗದಲ್ಲಿ ಭಾವುಕ ಪ್ರೀತಿಯೂ ಮಂಗಮಾಯ.ಈಗ ಅಂಗೈಯಲಿರುವ ಸೆಲ್ ನಮ್ಮನ್ನು ಬಂಧಿಯಾಗಲು ಬಿಡುವುದಿಲ್ಲ.

ಆ ಕಾಲದಲ್ಲಿ ಕೈಯಲಿದ್ದ ಪುಸ್ತಕದ ಹಾಗೆ !

ಈ ಕಾಯುವಿಕೆ ನಿರಂತರ . ಯೌವನದಲ್ಲಿ ಪ್ರೇಮಿಗೆ , ನಂತರ ಮಕ್ಕಳು-ಮೊಮ್ಮಕ್ಕಳು ಹೀಗೆ ಕಾಲಕ್ಕೆ ತಕ್ಕಂತೆ ಕಾಯುವ ಕರ್ಮ ಮನುಷ್ಯನನ್ನು ಸಾಯುವವರೆಗೆ ಬೆಂಬಿಡದ ಮಹಾ ಮಾಯೆ.

ನನಗೂ ಈ ಕಾಯುವಿಕೆ-waiting=ಇಂತಜಾರ ಇಂದಿಗೂ ಕಾಡುವ ಪರಮಾನಂದ. ಭಾವುಕ ಲೋಕದಲಿ  ಮನಸೋ ಇಚ್ಛಾ ಕಾಯುತ್ತಲೇ ಇರುತ್ತೇನೆ. ಒಮ್ಮೊಮ್ಮೆ ನನಗೇ ಅರ್ಥವಾಗದ ಹಾಗೆ ಕಾಯ್ದು , ದುಃಖಿಸಿ ಸಮಾಧಾನ ಮಾಡಿಕೊಳ್ಳುತ್ತೇನೆ ಆದರೆ ಯಾರಿಗೂ ನಿಮಗಾಗಿ ಕಾಯ್ದೆ ಎಂದು ಹೇಳುವುದನ್ನು ಬಿಟ್ಟಿದ್ದೇನೆ.

ಹಾಗೆ ನನ್ನನ್ನು ಕಾಯಿಸುವವರು ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅದಕ್ಕೂ ನಾನೇ ಹೊಣೆಗಾರ.
ಅದಕ್ಕೆ ಕಾರಣವಿಲ್ಲದೆ ಕಾಯುತ್ತೇನೆ ಅರೆಹುಚ್ಚನ ಹಾಗೆ , ಯಾರಿಗೂ ಹೇಳದ ಹಾಗೆ !

ನಾನು ಊರಿಗೆ ಬರುತ್ತೇನೆ ಎಂದು ಗೊತ್ತಾದ ಕೂಡಲೇ ಅವ್ವ ಮನೆಯ ಮುಂದೆ ಕಾಯುತ್ತ ಕೂಡುತ್ತಿದ್ದ ದೃಶ್ಯ ಮೊನ್ನೆ ಊರಿಗೆ ಹೋದಾಗ ನೆನಪಾಯಿತು. ಮನೆಯ ಮುಂದೆ ನನಗಾಗಿ ಯಾರೂ ಕಾಯುವವರೇ ಇಲ್ಲವಲ್ಲ ಎಂಬ ನಿಟ್ಟುಸಿರು !

'I'm waiting for you ❤️' ಎಂಬ ಎಲ್ಲರ ಪ್ರೀತಿಯಕರೆಗೆ ಕಾಯಿಸದೇ ಮೊದಲೇ ಓಡಿ ಹೋಗುತ್ತೇನೆ.
ನನಗಾಗಿ ಬೇರೆಯವರು ಚಡಪಡಿಸುವದನ್ನು ಅನುಭೂತಿಯಿಂದ ಅನುಭವಿಸುತ್ತೇನೆ.
I don't disappoint others, even they disappoint me.
ನೀವು ಅಷ್ಟೇ ಕಾಯುವ ಹಿತಕಾರಿ ನೋವನ್ನು ಅನುಭವಿಸುತ್ತಾ ಇರುತ್ತೀರಿ ಅನಿಸಿ ಇಷ್ಟಲ್ಲಾ ಬರೆದೆ.
Thanks for your patient reading.

---ಸಿದ್ದು ಯಾಪಲಪರವಿ

No comments:

Post a Comment