Saturday, July 30, 2011

ಹೀಗೊಂದು ಸಂಕಷ್ಟ

ನಾವೇ ಕೇಳಿದ್ದು, ಕಂಡದ್ದು ಕೂಡಾ ಎಲ್ಲವೂ ಸತ್ಯವಲ್ಲ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು ಆದರೆ ಈಗದು ಪರಿಪೂರ್ಣ ನಿಜವೆನಿಸುತ್ತದೆ. ಗಣಿಗಾರಿಕೆ ವಿಷಯದಲ್ಲಿ ಮಾನ್ಯ ಲೋಕಾಯುಕ್ತರು ತಮ್ಮ ವರದಿ ನೀಡಿದ್ದಾರೆ. ಖಂಡಿತಾ ಎಲ್ಲವೂ ನಿಚ್ಚಳವಾಗಿ ಪ್ರಾಮಾಣಿಕವಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ಹೆಸರು ದಾಖಲಾತಿಗಳು ಸ್ಪಷ್ಟವಾಗಿವೆ. ಈ ಪ್ರಕರಣದಲ್ಲಿ ಕೆಲವರು ಅಮಾಯಕರೆನಿಸುತ್ತಾರೆ. ಈ ಮಾತು ವಿಚಿತ್ರವಾದರೂ ಸತ್ಯ.ಗಣಿಗಾರಿಕೆಯ ಗಾಳಿ-ಗಂಧವನರಿಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಈ ವರದಿಯಿಂದಾಗಿ ಅಧಿಕಾರ ಕಳೆದುಕೊಳ್ಳುವುದು ಪರಿಸ್ಥಿತಿಯ ವ್ಯಂಗವೇ ಸರಿ !ಸ್ವತಃ ಲೋಕಾಯುಕ್ತರಿಗೆ ಈ ವಿಷಯ ಗೊತ್ತಿದ್ದರೂ, ಗಣಿ ಕಂಪನಿಯ ಪಾಲುದಾರರಾದ ಪಾಪಕ್ಕೆ ಶ್ರೀರಾಮುಲು ಬಲಿಯಾಗಿದ್ದಾರೆ ಎಂಬ ಅರ್ಧ ಸತ್ಯ ಎಲ್ಲರಿಗೂ ಗೊತ್ತಾಗತೊಡಗಿದೆ.ಇಂದು ಮಾಧ್ಯಮ ಸ್ನೇಹಿತರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು ತುಂಬಾ ಆಪ್ತರಾಗಿ, ಪ್ರಾಮಾಣಿಕವಾಗಿ ಭಾವನೆಗಳನ್ನು ಹಂಚಿಕೊಂಡರು.ಬಾಲ್ಯದಿಂದಲೂ ಬಡತನದಲ್ಲಿ ಬೆಳೆದ ನಾನು ಅನ್ಯಾಯದ ವಿರುದ್ಧ ಹೋರಾಡುತ್ತಲೇ ಬೆಳೆದು ಸ್ವತಃ ಅನ್ಯಾಯಕ್ಕೆ ಒಳಗಾಗಿದ್ದೇನೆ. ಅಂದ ಮಾತುಗಳು ಅರ್ಥಪೂರ್ಣವಾಗಿವೆ.ಅಲ್ಲಿ ಪ್ರಾಮಾಣಿಕತೆಯೂ ಎದ್ದು ಕಾಣುತ್ತಿತ್ತು. ಆದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಈಗ ನಾನು ನನ್ನ ಪ್ರಾಮಾಣಿಕತೆಯನ್ನು ಒರೆಗಲ್ಲಿಗೆ ಹಚ್ಚಿಕೊಳ್ಳುವ ಸಂದರ್ಭ ಬಂದಿದೆ. ನನಗೆ ಗೊತ್ತಿರದೆ ಮಾಡಿದ ತಪ್ಪಿಗೆ ಈ ಶಿಕ್ಷೆ ಆಗಿರಬಹುದೇ ? ಎಂಬ ಆತ್ಮಾವಲೋಕನ ಅರ್ಥಪೂರ್ಣ ಆದರೆ ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ನಿರ್ಧರಿಸಲಿ ಕೂಡಾ !

1 comment:

  1. ಶ್ರೀರಾಮುಲು ನನಗೆ ನೇರವಾಗಿ ಪರಿಚಯವಿರದಿದ್ದರೂ ಅವರ ಜನಪರ ಕಾಳಜಿ,ಬಡವರ,ಅಸಹಾಯಕರ ಬಗೆಗೆ ತುಡಿಯುವ,ಮಿಡಿಯುವ ಮನಸ್ಸು ಇವೆಲ್ಲವುಗಳ ಬಗೆಗೆ ಕೇಳಿ ತಿಳಿದಿದ್ದೇನೆ.ಗದಗನಲ್ಲಿ ಅವರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದಾಗಲೂ ಈವರೆಗೆ ನನಗೆ ಪರಿಚಯದ ಯಾವ ಶಾಸಕರಾಗಲಿ,ರಾಮುಲು ಅವರ ಸ್ನೇಹಿತರಾಗಲಿ ನನ್ನನ್ನು ಅವರಿಗೆ ಭೇಟಿ ಮಾಡಿಸಿಲ್ಲ.ಶ್ರೀರಾಮಲು ಇಷ್ಟವಾಗೋದು ಅವರ ಆರೋಗ್ಯ ಇಲಾಖೆಯ ಅತ್ಯುತ್ತಮ ಯೋಜನೆಗಳಿಂದ.108,ವಾಜಪೇಯಿ ಆರೋಗ್ಯಶ್ರೀ,ಮಡಿಲು ಮುಂತಾದ ಹತ್ತುಹಲವು ಯೋಜನೆಗಳು ಜನರ ಬದುಕಿನ ದಿಕ್ಕನ್ನು ಬದಲಾಯಿಸಿವೆ.ರಾಮಲು ತಮ್ಮ ಹೆಲಿಕ್ಯಾಪ್ಟರ್,ಸಿನಿಮೀಯ ಮಾದರಿಯ ಕಾರುಗಳು,ಹಾಗೂ ಬದುಕಿನ ರೀತಿಯಿಂದ ಯುವ ಸಮೂಹದ ಕೇಂದ್ರ ಬಿಂದುವಾಗಿದ್ದರೂ,ತಮ್ಮ ಹಳೆಯ ಬದುಕಿನ ಕಷ್ಟದ ದಿನಗಳನ್ನು ನೆನೆದು ಅಂತಹ ಸ್ಥಿತಿ ಇತರ ಕನ್ನಡಿಗರಿಗೆ ಒದಗದಿರಲೆಂದು ಶ್ರಮಿಸುವ ರೀತಿ ಅದ್ಭುತವಾದ್ದು.ಮಂತ್ರಿಯಾಗಿರುವ ಅವಧಿಯಲ್ಲಿ ಅವರನ್ನು ಭೇಟಿಯಾಗಿ ಅಭಿನಂದಿಸುವ ಅವಕಾಶ ಸಿಗಲಾರದ್ದಕ್ಕೆ ಬೇಸರವಾಗಿದೆ. ಅವರೊಡನೆ ಆಪ್ತ ಒಡನಾಟವಿರುವ ತಾವು ತಿಳಿಸಿದಂತೆ ಶ್ರೀರಾಮಲು ಅಮಾಯಕರಾಗಿದ್ದಲ್ಲಿ,ಎಲ್ಲ ಆರೋಪಗಳಿಂದ ಮುಕ್ತರಾಗಿ ಮತ್ತೆ ಮುಖ್ಯವಾಹಿನಿಗೆ ಬರಲಿ ಎಂದು ಆಶಿಸುತ್ತೇನೆ.

    ReplyDelete