ಬೇಡವೇ ಬೇಡ
ಅದ್ಧೂರಿ ಮದುವೆಗಳು
ಐಷಾರಾಮಿ ಬಂಗಲೆಗಳು
ಹರಾಮಿ ಆಚರಣೆಗಳು
ಅಸಹ್ಯ ವಾದಗಳು
ಅನಾರೋಗ್ಯ ಚರ್ಚೆಗಳು
ವೈಯಕ್ತಿಕ ನಿಂದನೆಗಳು
ಸೊಟ್ಟ ಸೆಲ್ಫಿಗಳು
ಕೆಟ್ಟ ಜಯಂತಿಗಳು
ನಮ್ಮನ್ನು ಇಷ್ಟೊಂದು
ಹೀನಾಯವಾಗಿ
ಆಳುವಷ್ಟು ನಾವು
ಬೌದ್ಧಿಕ ದಿವಾಳಿಯಾಗಿ
ಬಟ್ಟ ಬಯಲಲಿ ಬೆತ್ತಲಾಗಿ
ಓಡಾಡುವ ಸ್ಥಿತಿ ತಲುಪಲು ಕಾರಣ
ಏನಿರಬಹುದು ?
----ಸಿದ್ದು ಯಾಪಲಪರವಿ
No comments:
Post a Comment