ಮೌನದ ಮಾತು
ಆಳವಾದ ದಿವ್ಯ ಮೌನ
ಅನೇಕ ಹೊಳಹುಗಳನ್ನು
ಹುಟ್ಟು ಹಾಕುತ್ತದೆ.
ಒಳಗಣ್ಣು ತಾನೇ
ತಾನಾಗಿ ತೆರೆದುಕೊಳ್ಳುತ್ತದೆ.
ಕಾಡು ಹರಟೆ , ನಕಾರಾತ್ಮಕ
ವ್ಯಕ್ತಿಗಳು ನಮಗರಿವಿಲ್ಲದಂತೆ
ನಮ್ಮ ನೆಮ್ಮದಿಯನ್ನು
ಕಿತ್ತುಕೊಂಡು ಬಿಡುತ್ತಾರೆ.
ಕೆಲವೊಮ್ಮೆ ಮೌನದ
ಮಾತುಗಳನ್ನು
ಆಲಿಸಬೇಕು
ಆಗ ಮೌನ ಜೋರಾಗಿ
ಮನಬಿಚ್ಚಿ ಮಾತನಾಡಿ
ಮಾರ್ಗದರ್ಶನ
ಮಾಡುತ್ತದೆ.
ಎಲ್ಲವನ್ನು ಖಾಲಿ ಮಾಡಿಕೊಂಡು
ನಿಶ್ಯಬ್ದವಾಗಿ ಮೌನದ
ಮಾತುಗಳನ್ನು ಆಲಿಸೋಣ...
----ಸಿದ್ದು ಯಾಪಲಪರವಿ
No comments:
Post a Comment