ಮತ್ತೊಂದು ಮೊಬೈಲ್ ಎಡವಟ್ಟು
ಸಾರ್ವಜನಿಕ ಬದುಕು ಯಾಕೋ ಹಳಿ ತಪ್ಪುತ್ತಲಿದೆ. ಅಧಿಕಾರದಲ್ಲಿರುವವರು ಸಾರ್ವಜನಿಕ ಬದುಕಿನಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು.
ಜನರು ಕೂಡಾ ತುಂಬಾ ನಿರೀಕ್ಷೆ ಇಟ್ಟುಕೊಂಡು ಮಂತ್ರಿ -ಮಹೋದಯರ ಖಾಸಗಿತನ ಕಿತ್ತುಕೊಳ್ಳುತ್ತಾರೆ ಹಾಗಂತ ಸಂಯಮ ಕಳೆದುಕೊಳ್ಳಬಾರದು. ಜನರ ಮಧ್ಯೆ ಹಾಗೂ ಸಭೆ ಸಮಾರಂಭಗಳಲ್ಲಿರುವಾಗ ಮೈ ಮರೆಯಬಾರದು. ಸುತ್ತಲೂ ಅಸಂಖ್ಯ ಕಣ್ಣುಗಳು, ಕ್ಯಾಮೆರಾಗಳು ಕುತೂಹಲದ ನಿಗಾ ಇರುತ್ತದೆ ಎಂಬ ಅರಿವಿರಬೇಕು.
ಪ್ರೀತಿಪ್ರೀತಿ-ಪ್ರೇಮ-ಪ್ರಣಯ ಎಲ್ಲರ ಆಸಕ್ತಿ , ನೋಡೋದು ಇತ್ಯಾದಿ ಸರಿಯಲ್ಲ ಅಂತ ಹೇಳೋ ಅಧಿಕಾರ ಯಾರಿಗೂ ಇಲ್ಲ ಆದರೆ ಸಾರ್ವಜನಿಕ ಜವಾಬ್ದಾರಿ ಇರುವುವವರು ಅನೇಕ ಖಾಸಗಿ ತೆವಲುಗಳನ್ನು ಸಹಿಸಿಕೊಳ್ಳಬೇಕು .
ಅಧಿಕಾರದ ಮದದಲ್ಲಿ ಇತಿಹಾಸವನ್ನು ಮರೆತು ಮಾಡಿದ ತಪ್ಪನ್ನೇ ಮಾಡುತ್ತಾರೆ.
ಈಗ history has repeated , ಪಕ್ಷ ಬೇರೆ ಅಷ್ಟೆ ಆದರೆ ಪ್ರಮಾದ ಒಂದೇ, ಇತಿಹಾಸದಿಂದ ಪಾಠ ಕಲಿಯದೇ ಅನಾಹುತ ಮಾಡಿಕೊಂಡಿದ್ದಾರೆ.
----ಸಿದ್ದು ಯಾಪಲಪರವಿ
No comments:
Post a Comment