Sunday, November 6, 2016

ದೀಪಾವಳಿ

ದೀಪಾವಳಿ ಬೆಳಕ ತರಲಿ ಹೊರಗು ಹಾಗೂ ಒಳಗೂ

ಸಕಾರಾತ್ಮಕ ಬೆಳಕು
ಎಲ್ಲೆಡೆಯೂ ಇರಲಿ
ವೈದ್ಯರು ದೇಹ ತೂಕ
ಬ್ಯಾಂಕರುಗಳು ಸಾಲ
ಇಳಿಸಲು ನೀಡುವ
ಸಲಹೆಗಳ ಪಾಲಿಸುವ
ಪಾಲಸಿ ಇರಲಿ

ಜ್ಞಾನದ ಹರವು ಒಳಗೂ
ಹೊರಗೂ ವಿಸ್ತಾರವಾಗಲಿ
ಸಕಾರಾತ್ಮಕ ಬಳಗ ಎಲ್ಲೆಡೆ
ವ್ಯಾಪಿಸಲಿ
ನಕಾರಾತ್ಮಕ ಸಂದೇಹಗಳು
ದೂರಾಗಿ ಆತ್ಮವಿಶ್ವಾಸದ
ಕಹಳೆ ಮೊಳಗಲಿ

ಮತ್ತೆ ಮತ್ತೆ ಬರುವ
ದೀಪಾವಳಿ ಬೆಳಕು
ಮನದ ಕತ್ತಲೆಯ
ಮುಕ್ತಗೊಳಿಸಲಿ

ಹಾರೈಕೆ ಸಂಕಲ್ಪವಾಗಿ
ಪರಿವರ್ತನೆಗೊಳಲಿ

ಬಯಕೆಗಳು ಹಿತ
ಮಿತಗೊಂಡಾಗ
ಬೆಳಕು
ನೆಲೆಗೊಳ್ಳಲಿ

ದೀಪಾವಳಿ ನಿತ್ಯ
ಝಗಮಗಿಸಲಿ
ನಿತ್ಯವೂ ಹಬ್ಬ
ನಮ್ಮ ಪಾಲಿಗಿರಲಿ

ದೀಪಾವಳಿ ಹಬ್ಬದ
ಸಂಕಲ್ಪಗಳು ನಿತ್ಯ ಬೆಳಗಲಿ

No comments:

Post a Comment