Sunday, November 6, 2016

ದೀಪಾವಳಿ -1

ದೀಪಾವಳಿ

ಭರವಸೆಯ ಮೂಟೆ ಹೊತ್ತು
ಸಾಗುತಿದೆ ಜೀವ ಪಯಣ
ದೀಪದಿ ದೀಪ ಹಚ್ಚುತ
ಕತ್ತಲೆ ಕಳೆದಂತೆ .
ಒಮ್ಮೆ ಸಂಕ್ರಮಣ
ಮಗದೊಮ್ಮೆ ಹೋಳಿ
ಮತ್ತೆ ಯುಗಾದಿ ಸಡಗರ
ಈಗ ದೀಪ ಹಣತೆಯ
ಸಾಲುಗಳ ದಿಬ್ಬಣ.
ಬದುಕ ಕತೆಯೂ ಹಬ್ಬಗಳಂತೆ
ಅದಲು ಬದಲು
ಸಿಹಿ ಕಹಿ ಗಳ ಮಧುರ ಮಿಲನ.
ಕತ್ತಲೆಯಲಿ ಬೆಳಕ ಹಚ್ಚೋಣ
ಇರುಳಲಿ ಹಗಲ ಹುಡುಕೋಣ
ಬೆಳಕ ಸಂಭ್ರಮದಿ ಕತ್ತಲ ಮರೆಯದಿರೋಣ
ನಿದ್ರೆ ಯಲಚ್ಚರದಿ
ಮೌನದಲಿ ಶಬ್ದಗಳ ಹುಡುಕುತ
ಬಂದುದನೆದುರಿಸಿ ಸಂತಸದಿ
ಕಾಲದ ಬಂಡಿ ಸಾಗಿಸೋಣ
    ---ಸಿದ್ದು ಯಾಪಲಪರವಿ

No comments:

Post a Comment