Sunday, November 6, 2016

ಜಗದ ಕಣ್ಣು

ಜಗದಣ್ಣ ಮುಗಿಲ ಕಣ್ಣ

ಸೂರ್ಯ ದೇವ ನಿನಗ
ಸಂಜೀ ಮುಂದಿನ
ಶರಣುಗಳು.
ನೀನಿಲ್ಲದೆ ನೀ
ನಿಲ್ಲದೆ
ಈ ಜಗಕಿಲ್ಲೋ
ಅಣ್ಣ ಬೆಳಕು
ಗೋಧುಳಿಯ
ಮುಸ್ಸಂಜಿಯ ಸಂಭ್ರಮಕ
ನಾ ನಗದಿರಲಾದೀತೇನಣ್ಣ
ನೀ ನಕ್ಕಂತೆ ನಾ
ನಗದಿದ್ದರ ಹೆಂಗೋ ಅಣ್ಣ
ಅತ್ತರೂ ಸತ್ತರೂ
ಕೇಳುವರ್ಯಾರೋ
ನಿನ್ನ ನೋವ
ಬರಬೇಕು ನೀ ಜಗವ
ಬೆಳಗೋ ಕಣ್ಣಾಗಾಕ
ನಿನ್ನ ನೋಡಿ ಕಲಿಯಾಕ
ಬೇಕು ನಸು ನಗುವುದ
ಅಳುನುಂಗಿ
ನುಂಗಿ ನುಂಗುತ
ನಗಬೇಕಲ್ಲೋ
ಜಗದಣ್ಣ...
----ಸಿದ್ದು ಯಾಪಲಪರವಿ

No comments:

Post a Comment