*Ghost writing, ಬೇರೆಯವರ ಕೆಲಸಗಳು ಇತ್ಯಾದಿ*
ನಮ್ಮಲ್ಲಿ ಏನೋ ಒಂದು ಪ್ರತಿಭೆ ಇರುತ್ತದೆ , ಅದಕ್ಕನುಗುಣವಾಗಿ ಬೇರೆಯವರು ನಮ್ಮಿಂದ ಆ ಕೆಲಸ ತಮಗಾಗಿ ನಿರೀಕ್ಷಿಸುತ್ತಾರೆ.
ಬೇರೆಯವರಿಗಾಗಿ ನಾವು ಪೂರೈಸುವ ಕೆಲಸ ghost ಅನಿಸುತ್ತೆ.
ಬೇರೆಯವರ ಹೆಸರಿನಲ್ಲಿ ನಾವು ಬರೆಯುವುದು , ನಮ್ಮ ಹೆಸರಿನಲ್ಲಿ ಬೇರೇಯವರು ಬರೆಯುವದಕ್ಕೆ ghost writing ಅಂತಾರೆ , once we write , we lose our right.
ಮುಂದೆ ಈ ಪರಿಕಲ್ಪನೆ ಎಷ್ಟು ದೊಡ್ಡದಾಯಿತೆಂದರೆ , ಬೇರೆಯವರಿಗಾಗಿ ಹಡೆದು ಕೊಟ್ಟು surrogate mother ಆಗುವ ಕಾಲ ಬಂತು ನೋಡಿ !!
ಬರೆಯಲಾಗದವರು ಬೇರೆಯವರಿಂದ ಬರೆಸಿಕೊಂಡರೆ okey , ಬೇರೆಯವರು ನಮಗಾಗಿ ಹಡೆಯುವದೆಂದರೆ ?
ಅಬ್ಬಾ , ಅಬ್ಬಬ್ಬಾ ಅನಬೇಡಿ.
ಎಲ್ಲವೂ ಕಾಲನ ಮಹಿಮೆ , ಉಳ್ಳವರ ಗಮ್ಮತ್ತು ಬಿಡಿ.
ಹಾಗಾದರೆ ನಾವು ಈ ಕೆಲಸ ಯಾಕೆ ಮಾಡಬೇಕು , ನಮ್ಮ ಹಕ್ಕು ಹಾಗೂ ಅಸ್ತಿತ್ವ ಕಳೆದುಕೊಂಡು ಬಿಡುತ್ತೇವೆ ಎಂಬ ಆತಂಕದ ಮಧ್ಯೆ ಈ risk ತೆಗೆದುಕೊಳ್ಳುತ್ತೇವೆ.
ಕೆಲವು ಗೆಳೆಯರು request ಮಾಡಿಕೊಂಡಾಗ , ಕವಿ ಗೋಷ್ಟಿಗೆ ಹೊರಟು ನಿಂತಾಗ instant ಕವಿತೆ ಬರೆದುಕೊಟ್ಟಿದ್ದೇನೆ .
ಅದು ತುಂಬಾ ಹೊಗಳಿಸಿಕೊಂಡ ಗೆಳೆಯ ತಬ್ಬಿಬ್ಬು , ನಾನು ಅನಾಥ !
ಪ್ರೀತಿ , ವಿಶ್ವಾಸಕ್ಕೆ ಕಟ್ಟು ಬಿದ್ದು ಬರೆದ ನೂರಾರು ಭಾಷಣಗಳಿಗೆ ಲೆಕ್ಕವೇ ಇಲ್ಲ ಬಿಡಿ !!
ನಾನೇ ಬರೆದು ಪ್ರಕಟಿಸಿದ್ದರೆ ಹತ್ತಾರು ಪುಸ್ತಕಗಳು ಬರುವುದರೊಂದಿಗೆ ಹೆಸರೂ ಬರುತ್ತಿತ್ತು ಎಂಬುದು ಹಿತೈಷಿಗಳ ಅಂಬೋಣ , But I have no regret , I have become perfect in my writing.
ಬೇರೆಯವರಿಗಾಗಿ ಕೆಲಸ ಮಾಡಿದೆ ಅವರು ಯಾರಿಗೂ ಹೇಳಲಿಲ್ಲ ಎಂಬ ತಳಮಳ ಈಗ ನಿಂತಿದೆ ಯಾಕೆಂದರೆ ಇದು ಮನಸಾಕ್ಷಿಯ ಮಾತು , ಪಡೆದವರಿಗೆ , ಕೊಟ್ಟವರಿಗೆ ಮಾತ್ರ ಗೊತ್ತು *ಗುಟ್ಟಾಗಿ ನಡೆಯುವ ಸರಸ ಸಲ್ಲಾಪದ* ಹಾಗೆ .
ನಾವು ಬೇರೆಯವರಿಗಾಗಿ ಮಾಡುವ ಕೆಲಸಗಳನ್ನು ಬಿಡಬಾರದು , ನಮಗೆ ಸಿಗಬಹುದಾದ ಮನ್ನಣೆ ಸಿಗುವಾಗ ಸಿಕ್ಕೇ ಸಿಗುತ್ತದೆ.
*ನೀನು ತುಂಬಾ ಹಿಂದೆ ಬರೆದು ಪಡೆಯಬಹುದಾದ ಮನ್ನಣೆ ಪಡೆಯಬೇಕಿತ್ತು* '
' You are too late ' ಎಂಬ ಸ್ನೇಹಿತರ ತಕರಾರನ್ನು ನಸುನಗುತ ಸ್ವೀಕರಿಸಿದ್ದೇನೆ.
ಈಗ ನನ್ನ ಖುಷಿಗಾಗಿ *ಕಾವ್ಯ* ದ ಹಾದಿ ಹಿಡಿದಿದ್ದೇನೆ.
ಕಹಿ-ಸಿಹಿ ಅನುಭವಗಳ ಮೇಲೆ *ಮನದ ಮಾತು* ನಾನೂರರ ಗಡಿ ದಾಟಿವೆ.
ವ್ಯಕ್ತಿತ್ವ ವಿಕಸನ ಮಾಲಿಕೆಯ *Joyful* ಪುಟ್ಟ ಲೇಖನಗಳು ಸಾಗಿವೆ.
*ಕಥೆಗಳು* ಕೈ ಹಿಡಿದು ಮುಂದೆ ಹೊರಟಿವೆ.
*ಸಾಮಾಜಿಕ ಜಾಲತಾಣ* ನನಗಂತೂ ವರ , ಶಾಪವಲ್ಲ.
ಸಾವಿರಾರು ಮನಸುಗಳ ಸುಮಧುರ ಸಾಂಗತ್ಯ *ಭ್ರಮೆಯಲ್ಲ* .
ಬ್ಲಾಗ್ , ಮುಖ ಪುಸ್ತಕಗಳ ಮೂಲಕ ಬರೆದ ಸಾವಿರಾರು ಶಬ್ದಗಳು ಈಗ ನಿಶಬ್ದವಾಗಿ ಪುಸ್ತಕ ರೂಪದಲಿ ಬಂಧಿಯಾಗಲು ಶೃಂಗಾರಗೊಂಡಿವೆ.
ಹಿಂದೆ ಬರೆಯಬೇಕಿತ್ತು ಎಂಬ ಸಣ್ಣ ಅಳುಕೂ ಇಲ್ಲ , ಹಿಂದಿಗಿಂತ ಈಗ *ನನ್ನ ಬಳಗ ಬೆಳೆದಿದೆ* .
ನಾನು ghost ಆಗಿ ಹಡೆದ ಬರಹವೆಂಬ ಮಕ್ಕಳನ್ನು ಬೇರೆಯವರು ಮುದ್ದಾಗಿ ಬೆಳೆಸುತ್ತಾರೆ ಬಿಡಿ.
ಈಗ ನಾ Surrogate ಅವ್ವನಲ್ಲ, ನಿಶ್ಚಿಂತವಾಗಿ ಈಗ ನಾನು ನನಗಾಗಿ ಹಡೆದು ಮುದ್ದಾಡುತ್ತೇನೆ : ನೀವು ಕೈಗೆತ್ತಿಕೊಂಡು ಆಡಿಸಿ ಖುಷಿಪಡುತ್ತೀರಿ ಎಂಬ ಧನ್ಯತೆ.
*ಸಿದ್ದು ಯಾಪಲಪರವಿ*
No comments:
Post a Comment