Thursday, August 17, 2017

ಸರಕಾರಿ ಭಾಗ್ಯ

ಸರಕಾರಿ ಭಾಗ್ಯ - ಬೆಂಗಳೂರಿಗೆ ಗುಳೆ.

ಹಸಿವು , ಹೊಟ್ಟೆಪಾಡು ಏನೆಲ್ಲ ಮಾಡಿಸುತ್ತದೆ ಎಂಬುದಕ್ಕೆ ಈ ಘಟನೆ ಮತ್ತೆ ಮತ್ತೆ ಕಾಡುತ್ತದೆ.

ಕಳೆದೆರಡು ವರ್ಷಗಳ ಹಿಂದೆ ರಾಯಚೂರಿನಿಂದ ಆದವಾನಿಗೆ ಬೆಂಗಳೂರು ರೈಲಿನಲ್ಲಿ ಹೊರಟಿದ್ದೆ ..

ವಿಪರೀತ ಗದ್ದಲು ಚಿತಾಪೂರ ಹತ್ತಿರದ ಹಳ್ಳಿಯ ಮೂವರು ಎರಡು ತಿಂಗಳ ದುಡಿಮೆಗಾಗಿ ಗುಳೆ ಹೊರಟಿದ್ದರು.

ಇಷ್ಟೆಲ್ಲ ಸರಕಾರಿ ಭಾಗ್ಯಗಳಿದ್ದರೂ ಅವರಿಗೆ ಅದರ ಬಗ್ಗೆ ಗೊತ್ತೇ ಇಲ್ಲ ದಿನಕ್ಕೆ 500 ರೂಪಾಯಿ ಗಳಿಸಲು ಆರು ತಿಂಗಳು ಬೆಂಗಳೂರಿಗೆ ಹೋಗುತ್ತಾರೆ.

ಅದಕ್ಕಿಂತಲೂ ಮುಖ್ಯ ನನ್ನನ್ನು ಕಾಡಿದ್ದೆಂದರೆ ನಿಲ್ಲಲು ಜಾಗವಿಲ್ಲದ ಅವರು ಹಸಿವನ್ನು ನೀಗಿಸಲು ಟಾಯ್ಲೆಟ್ ಮುಂದೆ ಕುಳಿತು ಊಟ ಮಾಡುತ್ತಿದ್ದರು.
'
' ನೀವು ಊಟ ಮಾಡ್ರಿ ಸಾಬರೇ ' ಎಂದು ಹೇಳುವ ಮೂಲಕ ಮಾನವೀಯತೆ ಮೆರೆದರು. ಊಟ ಮಾಡುತ್ತ ತಮ್ಮ ಕಷ್ಟ ಹಂಚಿಕೊಂಡರು.

ಈ ಮಧ್ಯೆ ಹೋಗಿ ಬರುವವರೆಲ್ಲ ಅವರ ಬುತ್ತಿಯನ್ನು ಮುಲಾಜಿಲ್ಲದೆ  ದಾಟುತ್ತಿದ್ದರು. ಅವರ ಹಸಿವಿನ ಅನಿವಾರ್ಯತೆ ಮುಂದೆ ಇದ್ಯಾವ ಲೆಕ್ಕ !

ನೂರಾರು ಕೋಟಿಯ ಸರಕಾರಿ ಭಾಗ್ಯಗಳು, ಗರಿ ಗರಿ ಬಿಳಿ ಬಟ್ಟೆ ತೊಟ್ಟ ನಾಯಕರು ನೆನಪಾದರು. ನಮ್ಮ ಯೋಜನೆಗಳು ಎಲ್ಲಿ ಹೋಗುತ್ತವೆ? ಎಂಬ ಪ್ರಶ್ನೆ ಕಾಡಿತು.

ನನಗೂ ಹಸಿವಾಗಿತ್ತು ಬೇಗ ಎಲ್ಲಿಯಾದರೂ ತಿನಬೇಕು ಎನಿಸಿತು.

ವಿಚಿತ್ರ ದೃಶ್ಯ ಕಣ್ಣಿಗೆ ರಾಚಿತು.

ರೈಲು ಇಳಿದಾಗ ಎಸಿ ಬೋಗಿಯಲ್ಲಿದ್ದ ಧನಿಕರು ಊಟ  ಮಾಡಲೆಂದು ಹ್ಯಾಂಡ್ ವಾಷ್ ಮಾಡಿಕೊಳ್ಳುತ್ತಿದ್ದರು! ಪಾಪ ಅವರಿಗೂ ಹಸಿವು !!

ಕಂಡೆಯಾ ಇದು !!ಅದಕ್ಕಾಗಿಯೇ ಇದು ಗ್ರೇಟ್ ಇಂಡಿಯಾ !!?

---ಸಿದ್ದು ಯಾಪಲಪರವಿ.

No comments:

Post a Comment