ಸಣ್ಣ ಕಥೆ
ಅಸ್ಮಿತೆ
ಭಾಗ-1
ನನ್ನ ನಿರಂತರ ಸಂಪರ್ಕವನ್ನು ನೀನು ಲೆಕ್ಕಿಸದಂತೆ ನಟಿಸುತ್ತಲೇ ಬಂದೆ ನನ್ನ ನೂರೆಂಟು ಕವಿತೆಗಳಿಗೆ ಮನಸೋತ ಸಂಗತಿಯನ್ನು ಮರೆಮಾಚುತ್ತ ತುಂಬಾ casual ಆಗಿ ಮಾತನಾಡುವ ನಿನ್ನ ಧ್ವನಿಯಲ್ಲಿ ಅಡಗಿದ ಪ್ರೇಮವನ್ನು ಹಿಡಿದುಬಿಟ್ಟಿದ್ದೆ.
ನಾನೇ ಮೊದಲು ಪ್ರಸ್ತಾಪಿಸಲಿ ಎಂಬ ಮೊಂಡಾಟವೂ ಅರ್ಥವಾಯಿತು.
ಆಗಸದಲಿ ಮೂಡಿರುವ ಚುಕ್ಕೆಗಳನು ಎಷ್ಟು ಅಂತ ಎಣಿಸಲಿ.
One fine day I frankly shared my love...
ಎಲ್ಲ ತಿರುವು ಮುರುವು Sudden U turn , ತಪ್ಪಾಗಿ ಭಾವಿಸಿದ್ದೇನೆ ಎಂಬ ಸಮಜಾಯಿಷಿ ಬೇರೆ !
ಊ ಹೂಂ ನಾ ನಿನ್ನ ವಾದವನ್ನು ಸುತಾರಾಂ ಒಪ್ಪಲಿಲ್ಲ.
ಮುಂದಿನದೆಲ್ಲ one side ಪ್ರಲಾಪ , ಯಾವುದೇ ಆತಂಕ ಹಾಗೂ ಮುಲಾಜಿಲ್ಲದೆ ನನ್ನ ಮನೋಭಿಲಾಸೆಯ ನಿವೇದಿಸುವದನ್ನು ಮಾತ್ರ ನಿಲ್ಲಿಸದ ಸಾತ್ವಿಕ ಹಟ , ಗೆದ್ದೇ ತೀರುತ್ತೇನೆ ಎಂಬ ಅಚಲ ವಿಶ್ವಾಸ.
ಮಾತಿನ ಧಾಟಿ ಬದಲಾಯಿತು , ಮಾತು ಮುಗಿಸುವಾಗ wish you warm hug , sweet kisses bye bye ಎಂದು ನಿನ್ನ ಪ್ರತಿಕ್ರಿಯೆಯನ್ನು ಲೆಕ್ಕಿಸದೇ ಮಾತುಕತೆ ಮುಂದುವರೆಸುವ ಭಂಡತನ.
ನಿನಗೆ ನಿನ್ನ ಆದ ಗುಮಾನಿ , ಅಸಹಾಯಕ
ಲೆಕ್ಕಾಚಾರಗಳನ್ನು ನಾನು ಲೆಕ್ಕಿಸಲೇ ಇಲ್ಲ ಬಿಡು.
ಹೀಗೆ ಸ್ನೇಹ ವರ್ಷಗಟ್ಟಲೇ ಮುಂದುವರೆಯಿತು.
ನೀನು ಒಪ್ಪಿಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ ಹಾಗಂತ ನಾನು ಸೋಲಲೂ ಇಲ್ಲ.
ಕೊನೆಗೊಂದು ದಿನ ಒಟ್ಟು ನಾನು ಕಳಿಸಿದ ಸಂದೇಶಗಳ , ಕವಿತೆಗಳ ಹಾಗೂ ಚಿತ್ರಗಳ ಲೆಕ್ಕಕ್ಕೆ ಇಬ್ಬರೂ ಮಟಾಶ್ !
ಅಂದು ಆ ದಿನ ಬಂದೇ ಬಿಡಬಹುದು ಅಂದುಕೊಂಡಿರಲಿಲ್ಲ.
ನಾನು ತಂಗಿದ್ದ ಲಂಡನ್ನಿನಿಂದ ಮ್ಯಾಂಚೆಸ್ಟರ್ ಗೆ ಬಂದು ಅಲ್ಲಿಂದ ಇಬ್ಬರೂ ರೈಲಿನಲ್ಲಿ ಲೇಕ್ ಗೆ ಹೋಗುವ ಪ್ರಯಾಣದ ವಿವರಗಳ online ticket ರವಾನೆಯಾದಾಗ ಕುಣಿದು ಕುಪ್ಪಳಿಸುವದೊಂದೆ ಬಾಕಿ.
ಆದರೆ ಕುಣಿಯದೇ ಮನಸಿನ ಕಂಪನಗಳನ್ನು ಅದುಮಿಕೊಂಡು ಸಹಿಸಿಕೊಂಡೆ.
ನಮ್ಮ ಮುಖಾಮುಖಿಯಾದಾಗ ಏನು ಹೇಳಬಹುದು ಎಂದು ಊಹಿಸುವದಾದರೂ ಹೇಗೆ ?
ಈ chatting ಹೊರತು ಪಡಿಸಿ ಒಮ್ಮೆಯೂ ನೇರವಾಗಿ ನೋಡಿರಲಿಲ್ಲ.
ಬರೀ ಭಾವನೆಗಳ ಸವಾರಿಯ ಅಪರಿಮಿತ ಸಲಿಗೆ. ಹೇಳಲು ಏನೂ ಉಳಿದೇ ಇಲ್ಲ ಅನ್ನುವಷ್ಟು ಹೇಳುವುದನ್ನು ಹೇಳಿ ಮುಗಿಸಿದ್ದೆ.
' Ball is in your court . 'ಎಂದು ಹೇಳುತ್ತಿದ್ದ ವಾದಕೆ ಅಂಟಿಕೊಂಡಿದ್ದೆ.
' You wanted to be more comfort in the journey and wanted share things ' ಎಂಬ ರಹಸ್ಯವನ್ನು ಯಾಕೋ ನೀನು ಬಿಚ್ಚಿಡಲಿಲ್ಲ , in fact you wanted to test me .
ಎಲ್ಲದಕೂ ತಯಾರಾಗಿಯೇ ಹೊರಟೆ. ಇನ್ನಿಲ್ಲದ ಆತಂಕ , ಭಯ , ನೋವು , ಸಂಭ್ರಮ... ಏನೆಲ್ಲಾ ತವಕ ತಲ್ಲಣಗಳ ಮಹಾಪುರ.
ಮ್ಯಾಂಚೆಸ್ಟರ್ ತಲುಪಿದೆ . ನೀನು ನೋಡಲು ಹೇಗಿರಬಹುದು ಎಂದು ಕಲ್ಪಿಸಿಕೊಂಡೆ .
ಫೋಟೋಗಳೇ ಬೇರೆ , ಜೀವಂತ ಬೇರೆ.
ಗುರುತು ಹಿಡಿಯುವ ಸಾಮರ್ಥ್ಯವಿದ್ದರೂ ಅವ್ಯಕ್ತ ಆತಂಕ.
ರೈಲು ಹೊರಡಲು ಕೇವಲ ಐದೇ ನಿಮಿಷ . ಇನ್ನಿಲ್ಲದ ಚಡಪಡಿಕೆ. ನೀ ಬರದೇ ಇದ್ದು , ತಮಾಷೆ ನೋಡುವ ಹುನ್ನಾರು ಇದ್ದರೆ ? ಮುಂದೆ ನಾನು ಹೋಗುವದಾದರೂ ಎಲ್ಲಿಗೆ ?
ಹೀಗೆ ಹತ್ತು ಹಲವು ಭಯಂಕರ ಆಲೋಚನೆಗಳು. ಮನಸು ಗೊಂದಲದ ಗೂಡಾಗಿ ಜೋರಾಗಿ ಚೀರಬೇಕೆನಿತು. ಹುಚ್ಚು ಹಿಡಿಯುವದೊಂದೇ ಬಾಕಿ. ರೈಲಿನಲ್ಲಿ ಹತ್ತಿ ಹುಡುಕಾಡಿದೆ. ಕಾಣದೇ ಹೋದಾಗ ಹೇಗಾಗಿರಬೇಡ ?
ಮುಖ ಒಣಗಿಸಿಕೊಂಡು ಬಾಗಿಲ ಬಳಿ ಬಂದೆ.
ಛಕ್ಕನೆ ಮಿಂಚು ಹೊಡೆದ ಅನುಭವ ! ಎದುರಿಗೆ ಸುಂದರ ವದನೆಯ ದಿವ್ಯ ಪ್ರತ್ಯಕ್ಷ . ಕೊಂಚ ಕ್ಷಣದ ಅಮಿತಾನಂದವ ಅದುಮಿ ಉಸಿರು ಬಿಗಿ ಹಿಡಿದು ಅವಲೋಕಿಸಿದೆ. Red top , blue jeans , ಅದೇ ನಗು ಮೊಗ.
ಧ್ಯಾನಸ್ಥನಾಗಿ ನೋಡಿ ಧನ್ಯನಾದೆ. ಹೋದ ಜೀವ ತಿರುಗಿತು.
ಒಳಗೆ ಕರೆದುಕೋ ಎಂಬಂತೆ ಕೈ ಚಾಚಿದೆ
ಅದೇ ಸಂಭ್ರಮದಲಿ ಕೈ ಚಾಚಿ ಒಳಗೆ ಎಳೆದುಕೊಂಡೆ....
ಭಾಗ-2
ಅಬ್ಬಾ ! ಅಂತೂ ಬಂದೆಯಲ್ಲ ' ಎಂಬ ನಿಟ್ಟುಸಿರ ಚೀತ್ಕಾರ ಮುಗಿಲು ಮುಟ್ಟಿತೇನೋ ?
ಕುಳಿತ ಮೇಲೆ ಪರಸ್ಪರ ಕಣ್ಣಾಲೆಯ ಮಿಲನಕೆ ನೀ ಪೆಚ್ಚಾದ ಪರಿ ಮರೆಯಲಾಗದು.
ಕೊಂಚ ನೀರವ ಮೌನ. ಸಪ್ಪಳಾಗದೆ ಉಸಿರು ಬಿಗಿ ಹಿಡಿದು ಓಡುವ ಇಂಗ್ಲೆಂಡಿನ ರೈಲಿನ ಹಾಗೆ.
***
' ಹಲೋ ಡಿಯರ್ ಮುಂದೇನು ಯೋಜನೆ ' ನಾನೇ ಮಾತಿಗಳೆದೆ.
' ಹೇಳು , ಡಿಯರ್ ಎನ್ನುವ ಸ್ವಾತಂತ್ರ್ಯ ನಾನಂತು ಕೊಟ್ಟಿಲ್ಲ , ಅಲ್ಲದೆ ನನಗಿರುವ ಸಾಧ್ಯತೆಗಳನ್ನು ನೀನ್ಯಾಕೆ ಅರ್ಥ ಮಾಡಿಕೊಳಲ್ಲ ? ನಾನು ಯಾರು ? ನನಗೀರೋ limitations ಏನು ? ಎಂದು ತಿಳಿಯದೇ ಹೀಗೆ ಬೇತಾಳನ ಹಾಗೆ ಬೆನ್ನು ಬೀಳೋದು ಸರೀನಾ ?'
' ಸರಿ ಹೌದೋ ಅಲ್ಲೋ ನನಗೆ ಮುಖ್ಯ ಅಲ್ಲ . ಅದನ್ನ ತಿಳಿಯೋಕೆ ಅಲ್ವಾ ಈ ಪಯಣ . '
' ಒಂದು ವೇಳೆ ನಾನು ಒಪ್ಪದೇ ಹೋದರೆ '.
' ಬಿಡುವ ಮಾತೇ ಇಲ್ಲ .'
' This is too much , I have no feelings on you , ನಿನ್ನಷ್ಟಕ್ಕೆ ನೀನೇ ಏನೋ ಅಂದ್ಕೊಂಡ್ರೆ ನಾ
ಹೊಣೆಗಾರಳಲ್ಲ '.
' ನಾನು ಅಷ್ಟೇ ಸಿರಿಯಸ್ ಆಗಿ ಹೇಳ್ತೀನಿ , ನೀ ಹೇಳೋದನೆಲ್ಲ ಮನಸಾರೆ ಕೇಳಿ ನಂದು ತಪ್ಪೆನಿಸಿದರೆ ಯಾವತ್ತೂ ನಿನ್ನ ಕಡೆ ತಿರುಗಿಯೂ ನೋಡಲ್ಲ , it's my promise '.
ಹಾಗೆ ಹೇಳುವಾಗ ಅವನ ಕಣ್ಣಲ್ಲಿದ್ದ ಮುಗ್ಧ ಪ್ರಾಮಾಣಿಕತೆಯನ್ನು ಗಮನಿಸಿ ಕೊಂಚ ಮೆತ್ತಗಾದಳು.
' ನಾನು ರಾಣಿ ಅಂತ ನಮ್ಮಪ್ಪನ ಮುದ್ದಿನ ಮಗಳು. ಆಕ್ಸಫರ್ಡ್ ನಲ್ಲಿ ಲಿಟರೇಚರ್ ಓದಿ, ಎರಡು ಭಾಷೆಯಲ್ಲಿ ಬರೆಯೋದು , ನಿನಗೆ ಗೊತ್ತೇ ಇದೆಯಲ್ಲ . ಅದೇ ಪೊಯಟ್ರಿ ಅಲ್ಲವೆ ನಮ್ಮನ್ನು ಇಲ್ಲಿಯವರೆಗೆ ಎಳೆದು ತಂದದ್ದು.
'ಸರಿ ಬೇಗ ವಿಷಯಕ್ಕೆ ಬರೋದಾದರೆ , ನಾನು ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸತೀಶನನ್ನು ಭೇಟಿ ಮಾಡ್ದೆ , he was rich businessman , ಮಾತುಕತೆ ಆಯ್ತು ಅನ್ನು . ಅಪ್ಪ ಬೇಗ ಎಸ್ ಅಂದರು . ಮಗಳು ಇಂಡಿಯಾದ ಹುಡುಗನನ್ನು ಮೆಚ್ಚಿದಳು ಎಂಬ ಖುಷಿ ಬೇರೆ.'
ಮದುವೆ ಆಯ್ತು. ತುಂಬಾ ಮಜ ಇತ್ತು , ಆದರೆ ಸತೀಶ ಪಕ್ಕಾ ವ್ಯಾಪಾರಿ , ಅವನಿಗೆ ಹಣಾನೇ ಸರ್ವಸ್ವ. No any strong human feelings. ದಾಂಪತ್ಯನೂ Very mechanical , I felt impossible. '
ನಾನು ಭಾವನಾ ಜೀವಿ ಭಾರತೀಯ ಹುಡುಗ ನನ್ನ ಹಾಗೆ ಇರಬಹುದು ಅಂತ ದುಡುಕಿದೆ ಎನಿಸಿತು . ಅವನು London school of economics ನಲ್ಲಿ ಮನುಷ್ಯತ್ವ ಬಿಟ್ಟು ಎಲ್ಲಾ ಕಲಿತಿದ್ದ . ನಿಧಾನ ತನ್ನ ವ್ಯಾಪಾರೋದ್ಯಮಕೆ ನನ್ನನ್ನು ಕರೆದ ಈ poetry ಎಲ್ಲ bullshit ಅಂದಾಗ ಕೆರಳಿ ಹೋಯಿತು.'
' Poetry ಹೊಟ್ಟೆ ತುಂಬಿಸೋಲ್ಲ , accept the reality and try to live with money , I need an educated secretary like you to run business ' ಅಂದಾಗ ನಾನು ಸತ್ತೇ ಹೋದೆ.
'ನಾನು ಕೆಲಸ ಬಿಡು ಅಂದರೆ ಬಿಡ್ತೀನಿ ಆದರೆ poetry ಬಿಡಲ್ಲ ಅಂದೆ. ಒಂದೆರಡು ತಿಂಗಳಲ್ಲಿ ಬದುಕು ನರಕ ಆಯ್ತು . ಭಾವನೆಗಳೇ ಇಲ್ಲದವನ ಜೊತೆ ಎಲ್ಲಾ ಹೇಸಿಗೆ ಎನಿಸಿತು.'
ಈ ವಿಷಯ ತಂದೆಗೆ ಗೊತ್ತಾದರೆ ನೋವು ಮಾಡ್ಕೊಳ್ತಾರೆ ಅಂತ ಎಲ್ಲ ಮುಚ್ಚಿಟ್ಟೆ , even today. ಅವನು ಬರು ಬರುತ್ತ ಕ್ರೂರಿಯಾದ ಯಾವುದೇ ರೀತಿಯ ಸಾಹಿತ್ಯದ ಸುದ್ದಿ ತೆಗೆಯೋ ಹಾಗಿಲ್ಲ ಎಂದು ಹೇಳಿ ನನ್ನ ಬದುಕನ್ನು ಅತಂತ್ರಗೊಳಿಸಿದ. ಇಂಡಿಯಾದಲ್ಲಿ ಅಮ್ಮನಿಲ್ಲದ ಅಪ್ಪ ನನಗೋಸ್ಕರ ಇನ್ನೊಂದು ಮದುವೆ ಆಗಿರ್ಲಿಲ್ಲ. ನಾನು ಖುಷಿಯಾಗಿದೀನಿ ಅನ್ನೋ ಭ್ರಮೆಯಲ್ಲಿ ಅವರು ಆರಾಮಾಗಿ ಇದ್ದರು . '
ನಾನು ಸತೀಶನಿಗೆ divorce ಗಾಗಿ ಕೇಳ್ದೆ. 'ಇದೊಂದು social issue , ಅನಿವಾಸಿ ಭಾರತೀಯರ ಮುಂದೆ ಅವಮಾನ ಆಗುತ್ತೆ.' ಅಂದಾಗ ಬೆರಗಾಗಾದೆ.
ಸಾಯದೇ ಬದುಕುವ ಸ್ಥಿತಿ . 'ಅವನದು ಪಕ್ಕಾ ಇಂಡಿಯನ್ ಗಂಡಸು ಬುದ್ಧಿ. ಜೋರಾಗಿ ಹೊಡೆದು ಸಾಯಿಸಬೇಕು , ನಾನೂ ಸಾಯಬೇಕು ಅನಿಸಿತು '
' ಆದರೆ ನಾನು ಸಾಹಿತ್ಯ -ಕಾವ್ಯ -ಮಾನವೀಯತೆ ಅಂತ ಎಲ್ಲ ನುಂಗಿದೆ .
'ಅಪ್ಪನಿಗೆ ಈ ಸತ್ಯ ಗೊತ್ತಾಗುವ ಮೊದಲು ಹೋಗಿ ಬಿಟ್ರು . '
ಕೊಂಚ ಮೌನಕೆ ಶರಣಾಗಿ ಹೊರಗೆ ನೋಡಲಾರಂಭಿಸಿದಳು.
ದುಃಖ ಉಮ್ಮಳಿಸಿದರೂ ಸಹಿಸಿಕೊಂಡಳು.
' I'm sorry Rani , ನನಗೆ ಇದನ್ನೆಲ್ಲ ಊಹಿಸೋಕೆ ಆಗಿಲ್ಲ , ನಿನ್ನ ಮಾದಕ ನಗು , ಅದ್ಭುತ ಕಾವ್ಯಲೋಕ ಸತ್ಯವನ್ನೇ ನುಂಗಿ ಹಾಕಿದೆ. '
' ಹೋಗಲಿ ಈಗ ಏನು ?'
'ಒಂದೇ ಮನೇಲಿ, ಆದರೆ ಮೈಮನಗಳ ಸಂಪರ್ಕ ಇಲ್ಲ ಅದೇ ನನ್ನ ಪುಣ್ಯ '
' ಮುಂದೇನು ?'
'I don't know and I don't want any risk in my life , ಅದರಲ್ಲೂ ಈ ಗಂಡಸರ ಸಹವಾಸವೇ ಬೇಡ ಅನಿಸಿದೆ. ನಾನು ನನಗಾಗಿ , ನನ್ನನ್ನು ಪ್ರೀತಿಸುತ್ತ ಬದುಕುವೆ. ಈ ಮುಖವಾಡದ ಮನುಷ್ಯರು ಇಂಗ್ಲೆಂಡ್ ನಲ್ಲಿಯೂ ತಮ್ಮ ಕಂತ್ರಿ ಬುದ್ಧಿ ಬಿಡಲಿಲ್ಲ ಅನ್ನೋದೇ ಬೇಸರ '.
' ದುರ್ದೈವ ನೀನೂ ಇಂಡಿಯಾದ ಗಂಡಸು , ನಿನ್ನನ್ನು ನಂಬಲ್ಲ , ಕಾವ್ಯದ ಸೌಂದರ್ಯ ನೋಡಿ ಬಂದು , ಈಗ ಕತೆ ಕೇಳಿ ಓಡ್ತೀಯಾ ಅಂತ ಗೊತ್ತು . ಅದಕ್ಕೆ ಈ ಸಣ್ಣ tour plan , just to close the topic ' ಎಂದಳು .
ಮಾತು ಮುಗಿಯುವದರೊಳಗೆ ರೈಲು ಲೇಕ್ ತಲುಪಿತು.
ಬ್ಯಾಗ್ ಎತ್ತಿಕೊಂಡು ಇಳಿದಾಗ ಮೌನವಾಗಿ ಹಿಂಬಾಲಿಸಿದೆ.
ಭಾಗ -3
ಅವಳು ತನಗೆ ತುಂಬಾ ಇಷ್ಟವಾದ ಕವಿಮನೆ ಡವ್ ಕಾಟೇಜ್ ಕಡೆಗೆ ಹೋಗುವುದಾಗಿ ಹೇಳಿದಳು.
ಮೊದಲೇ ಬುಕ್ ಆದ ಕ್ಯಾಬ್ ಹಿಡಿದರು.
ಈಗ ಮಾತನಾಡುವುದು ಅವನ ಸರದಿಯೆಂಬಂತೆ ಹೇಳಿದ.
' ನೀನು ಹೇಳುವದೆಲ್ಲ ಅದಕ್ಕಾಗಿ ತುಂಬಾ ವಿಷಾದವಿದೆ , ನೀನು ಬೇರೆಯವರ ವಸ್ತು ಎಂಬ ಅನುಮಾನ ಇದ್ದರೂ ಕವಿತೆಗಳ ಭಾವನೆಗಳನ್ನು ಗ್ರಹಿಸಿ ನಾನು ನಿನ್ನನ್ನು ಆಳವಾಗಿ ಪ್ರೀತಿಸಿದೆ.
ನಿನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಕುತೂಹಲ ಇರಲಿಲ್ಲ . ನಿನ್ನದು ಸುಖಮಯ ಬದುಕು ಅಂದುಕೊಂಡಿ ದ್ದೆ. ಕಾವ್ಯದ ಅಭಿವ್ಯಕ್ತಿಗೆ ಮಾರು ಹೋಗಿ ಒಲಿಸಿಕೊಳ್ಳಲು ಸ್ವಾಭಿಮಾನ ಮರೆತು ಬೆನ್ನು ಹತ್ತಿ ಒಲಿಸಿಕೊಳ್ಳುವ ತೀವ್ರತೆ ಹೆಚ್ಚಿಸಿಕೊಂಡೆ. ಈಗ ನಿನ್ನ ನೋವಿನ ಕಥೆ ಕೇಳಿದ ಮೇಲೆ ನಾನು ಮಾಡಿದ್ದು ಸರಿ ಅನಿಸ್ತಾ ಇದೆ. '
ನಾನು ಈಗಲೂ ನಿನ್ನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ನಿಸ್ವಾರ್ಥಿ , ನನಗೆ ನೀನು ಬೇಕೇ ಬೇಕು . ಇಂತಹ ಸ್ಥಿತಿಯಲ್ಲಿರುವ ನಿನ್ನನ್ನು ಕೈ ಬಿಡುವಷ್ಟು ಸ್ವಾರ್ಥಿ ನಾನಲ್ಲ.'
ನಾನು ನಿನ್ನ ನಿರ್ಣಯವನ್ನು ಗೌರವಿಸುತ್ತೇನೆ ಹಾಗಂತ ನೀನು ಮುಖವಾಡ ಹಾಕಿಕೊಂಡು ನೋವಿನಿಂದ ಬದುಕುವದರಲ್ಲಿ ಅರ್ಥವಿಲ್ಲ .
ಸಮಾಜದ ಕಟ್ಟು ಪಾಡಿಗೆ ಹೆದರಿ ಕೊರಗುತ್ತ ಬದುಕಲು ಇದು ಇಂಡಿಯಾ ಅಲ್ಲ. ಹಾಗಂತ ಸ್ವೇಚ್ಛೆಯಿಂದ ಬದುಕು ಎಂದು ಹೇಳುತ್ತಿಲ್ಲ. ಪ್ರೀತಿ -ವಿಶ್ವಾಸ-ಸಂಬಂಧಗಳ ಬೆಲೆ ಇಲ್ಲದವನೊಂದಿಗೆ ಎಷ್ಟು ದಿನ ಇರ್ತಿ.
ಮನೆಯಿಂದ ಹೊರಗೆ ಬಾ ಅಂತಾನು ಹೇಳುವ ಮನಸಾಗ್ತಾ ಇಲ್ಲ. ನಾನು ಎಲ್ಲಾ ರೀತಿಯ ಖುಷಿ ಕೊಡುವ ಗೆಳೆಯನಾಗಿ ಕೊನೆಯವರೆಗೂ ಇರುತ್ತೇನೆ . Please believe me ' ಎಂದು ಅಳಲಾರಂಭಿಸಿದ.
ಅವನ ಮುಗ್ಧ ಹಾಗೂ ಪ್ರಾಮಾಣಿಕ ನಿಲುವನ್ನು ಕಂಡು ಮೂಕಳಾದಳು.
ಕಠೋರವಾಗಿ ಮಾತನಾಡಬೇಕೆಂದು ಬಂದವಳು ತಣ್ಣಗಾದಳು.
ಅವನೇ ಮುಂದುವರೆಸಿದ , ' ನೋಡು ನಾನು ನಿನ್ನ ಯೌವನ , ಸೌಂದರ್ಯಕ್ಕೆ ಬೆನ್ನು ಹತ್ತಿ ಬಂದಿಲ್ಲ , ಯಾವುದೇ ಅವ್ಯಕ್ತ ಋಣಾನುಬಂಧ ನಿನ್ನಲ್ಲಿಗೆ ಎಳೆದು ತಂದಿದೆ . ನಾನೊಬ್ಬ ಜವಾಬ್ದಾರಿ ಇರುವ psychologist , philosophy ಓದಿದ್ದೇನೆ .
ಬದುಕು ಮತ್ತು ಬರಹಗಳನ್ನು ಗಂಭೀರ ಆಯಾಮಗಳಿಂದ ನೋಡುತ್ತೇನೆ. Sublime ಗುಣ ಸ್ವಭಾವ ನನ್ನನ್ನು ಕಟ್ಟಿ ಹಾಕಿ ಇಲ್ಲಿಗೆ ಎಳೆದು ತಂದಿದೆ.
ಉಡಾಫೆ ಮನಸ್ಥಿತಿ ನನ್ನದಾಗಿದ್ದರೆ ನಿನ್ನ ನೋವಿನ ಕಥೆಗೆ ಮರುಗದೇ ಓಡುತ್ತಿದ್ದೆ . ನೀನು ನಿನ್ನ ಕಥೆ ಹೇಳಿದ್ದು ಒಳ್ಳೆಯದೇ ಆಯಿತು.
ಖಂಡಿತ ನನಗೆ ನಿನ್ನನ್ನು ಸ್ವೀಕರಿಸುವ ಹಂಬಲ ಹೆಚ್ಚಾಗಿದೆ.
ಇದು ವಿಚಿತ್ರ , ಆದರೂ ಪರಮ ಸತ್ಯ .
ಭಾವನೆಗಳೊಂದಿಗೆ ಬದುಕುವ ಸಂಭ್ರಮವೇ ಅನನ್ಯ. ವಾಸ್ತವಕಿಂತಲೂ ರಮ್ಯವಾಗಿರುತ್ತದೆ. '
ವಾಸ್ತವವಾದಿಗಳು ಎಷ್ಟೊಂದು ಅಪಾಯಕಾರಿ ಎಂದು ನಿನಗೆ ಹೇಳುವ ಅಗತ್ಯವಿಲ್ಲ. School of economics ನಲ್ಲಿ ಓದಿದವನನ್ನೂ ನೋಡಿದ್ದೀಯಲ್ಲ ' ಎಂದು ವಿಷಾದದ ನಗೆ ಬೀರಿದ. ಅಲ್ಲಿ ಆಳವಾದ ಕಳಕಳಿ ಇತ್ತು.
ಈಗಲೂ ಕಾಲ ಮಿಂಚಿಲ್ಲ ಡಿಯರ್ ಬದುಕನ್ನು ಹಾಳು ಮಾಡಿಕೊಳ್ಳಬೇಡ. ಬದುಕು ಎಂದರೆ ಬರೀ ಭ್ರಮೆಯಲ್ಲಿ ಬದುಕುವದೂ ಅಲ್ಲ ಹಾಗಂತ ತುಂಬಾ ವಾಸ್ತವವಾದಿಗಳಾದರೆ ಥ್ರಿಲ್ ಕಳೆದುಕೊಳ್ಳುತ್ತೇವೆ. '
ಎರಡನ್ನು ಸಮನಾಗಿ ಸ್ವೀಕರಿಸಬೇಕು. ಅಂದಾಗ ಬದುಕಿನ ಮೌಲ್ಯ ಹೆಚ್ಚಾಗುತ್ತದೆ. ನಾವು ಅನಿವಾಸಿ ಭಾರತೀಯರು ದ್ವಂದ್ವದಲ್ಲಿ ಬದುಕುತ್ತೇವೆ. ಐರೋಪ್ಯರ ಹಾಗೆ ಪೂರ್ಣ ಪ್ರಮಾಣದ ನಿರ್ಭಾವುಕ ಮನಸ್ಥಿತಿ ನಮ್ಮದಲ್ಲ.
ವಾಸ್ತವ ಮತ್ತು ಭಾವುಕತೆಯ ಎಡಬಿಡಂಗಿಗಳು ನಾವು. ಸಾಯದೇ ಬದುಕದೇ ವಿಲಿ ವಿಲಿ ಒದ್ದಾಡುತ್ತೇವೆ. '
ನೀನು ಅಷ್ಟೇ ಆ ಒದ್ದಾಟದಿಂದ ಹೊರಗೆ ಬಾ , ನಿನ್ನದೇ ಆದ ಬದುಕು ಕಟ್ಟಿಕೋ. Keep some space for your feelings . ಪ್ರತಿಷ್ಠೆಗೆ ಬಲಿಯಾಗಿ ಸಂತೋಷ ಕಳೆದುಕೊಳ್ಳಬೇಡ. ''
ಮನಸು ಮುಗಿಲಿನಷ್ಟು ವಿಶಾಲ ಆದರೆ ದೇಹಕೆ ಮಿತಿ ಇದೆ. ಅದಕ್ಕೆ ಮುಪ್ಪು ಹಾಗೂ ಅಂತ್ಯವಿದೆ. ಅದನ್ನು ಕೊಳೆಯಲು ಬಿಡದೇ ಸರಿಯಾದವರೊಂದಿಗೆ , ಸರಿಕಂಡಂತೆ ಖುಷಿಯಾಗಿ ಬದುಕಬೇಕು. ಯಾರದೋ ತಪ್ಪಿಗಾಗಿ ನಾವು ಶಿಕ್ಷೆ ಅನುಭವಿಸಬಾರದು.'
ನನ್ನ ಕಾಳಜಿ ನಿನಗೆ ಅರ್ಥವಾಗಬಹುದು , ನೀನೊಬ್ಬ ಕವಿ ಎಂಬ ಕಾರಣಕ್ಕೆ ಈ ವಿವರಣೆ . I think it's enough to know me '. ಎಂದು ಹೇಳಿ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದ .
ಅಷ್ಟೇ ಆಪ್ತಭಾವ ಹೊರಹೊಮ್ಮಿ ಮಿಂಚು ಹೊಡೆದಂತಾಯಿತು. ಇವನು really amazing ಅನಿಸಿತು. ಇಂತಹ ಗಂಭೀರ ತೂಕ ಬದ್ಧ ವಿವರಣೆಗೆ ಬೆರಗಾದಳು.
ಹಾಗೆ ಕೆಲ ಕಾಲ ನೋಡಿದಾಗ ಅವನನ್ನು ನೋಡುತ್ತಲೇ ಇರಬೇಕೆಂಬ ಹಂಬಲ ಇಮ್ಮಡಿಸಿತು . ತಾನು ಬರುವಾಗ ಅಂದುಕೊಂಡದ್ದು ಮಾಯವಾಗಿ , ಹೊಸ ಸೆಳೆತ ಆಕ್ರಮಿಸಿಕೊಂಡಿತು. ತಂದೆಯ ನೆನಪಾಗಿ ದುಃಖವಾಯಿತು. ಇವನನ್ನು ನಂಬಿ ಸುಖವಾಗಿ ಬದುಕಬಹುದಾ ? ಎಂಬ ಪ್ರಶ್ನೆ ಸುಳಿದು ಮಾಯವಾಯಿತು.
ಮತ್ತೊಮ್ಮೆ ಅವನನ್ನು ದಿಟ್ಟಿಸಿದಳು. ನಿಸ್ವಾರ್ಥ ನೋಟ , ಕಂಗಳ ಸೆಳೆತಕೆ ನಲುಗಿದಳಾದರೂ ತೋರಿಸಿಕೊಳ್ಳಲಿಲ್ಲ.
ಇಬ್ಬರೂ ಮೌನಕೆ ಶರಣಾದರು. ಅವನು ಎಲ್ಲವನ್ನೂ ಹೇಳಿದ್ದ. ಈಗ ಅವನದು ಕಾಯುವ ಸರದಿ . ಚಡಪಡಿಕೆ ಇಲ್ಲದ ನಿರ್ಲಿಪ್ತ ಭಾವ . ಶಾಂತವಾಗಿ ಹರಿವ ನದಿಯ ತೆರದಿ ಉಸಿರಾಟ ಬಿಟ್ಟರೆ ಏನೂ ಇರಲಿಲ್ಲ.
ಅವಳು ಏನಾದರೂ ಹೇಳಬೇಕು , ಅದೂ ಇಂದೇ ಹೇಳಬೇಕು. ಯಾಕೆ ಈ ಹೊಸ ಗೋಳು ಒಂಟಿಯಾಗಿ ಕಾಲ ಕಳೆದರಾಯಿತು ಎಂಬ ಭಾವನೆ ಸುಳಿಯಿತು. ಏನೂ ಹೇಳದ ಅಸಹಾಯಕ ಭಾವ . ಪಡೆದುಕೊಳ್ಳುವ ಸಣ್ಣ ಬೆಳಕಿನ ಹೊಳಪು , ಹೊತ್ತಿ ಉರಿದು ಹೋದರೆ ಎಂಬ ತಲ್ಲಣ.
ಇಬ್ಬರೂ ಬಾಯಿ ಬಿಡದೇ ಮೇಲೆದ್ದರು.
ಗ್ರ್ಯಾಸ್ಮಿಯರ್ ಲೇಕ್ ತೀರದ ರಮ್ಯ ಪರಿಸರದ ಸವಿ ಅನುಭವಿಸಲಾಗದ ಗೊಂದಲ. ಜನ ತಮ್ಮ ಪಾಡಿಗೆ ತಾವು ಬಿಗಿದಪ್ಪಿ ಮುತ್ತಿನ ಮತ್ತಿನಲಿ ತೇಲಾಡುತ್ತಿದ್ದರು .
ವರ್ಡ್ಸವರ್ತ್ ಚಿತ್ರಸಿದ ಡೆಫೊಡಿಲ್ಸ್ ನರ್ತನ ಕಣ್ಣುಗಳಿಗೆ ಆಹ್ಲಾದವನ್ನು ಉಂಟು ಮಾಡಿತು.
ಇಬ್ಬರೂ ಈಗ ನಿಧಾನವಾಗಿ ಅರಳತೊಡಗಿದರು.
ಭಾವನೆಗಳು ಡೆಫೊಡಿಲ್ಸ್ ತರಹ ಕುಣಿದಾಡಿದವು.
ಸಂಜೆಗತ್ತಲು ಕೈಮಾಡಿ ಕರೆದು ಏಕಾಂತವ ನೆನಪಿಸಿತು.
ರಾತ್ರಿ ಒಂದು ಕಡೆ ತಂಗುವ ಅನಿವಾರ್ಯತೆ. ಅವನ ಮೇಲಿನ ವಿಶ್ವಾಸ ಆ comfort ನ್ನು ಹೆಚ್ಚಿಸಿತ್ತು.
ಅವನು ಆಗಾಗ ಸಲ್ಲಿಸುತ್ತಿದ್ದ ಬೇಡಿಕೆಗಳಲ್ಲಿ , ಒಂದು ದಿನ ಇಬ್ಬರೂ ಕಾಡಿನಲ್ಲಿ ಇದ್ದು ಕವಿತೆ ಬರೆಯಬೇಕು ಎಂಬುದಾಗಿತ್ತು . ಇಂದು ರಾತ್ರಿ ಅಂತಹದೊಂದು ಕಾಟೇಜ್ ನಲ್ಲಿ ಕಾಲ ಕಳೆಯುವದಕ್ಕೆ ಅವಳ ಮನಸು ಸಮ್ಮತಿಸಿತು.
ಬಿಗುಮಾನದಿಂದ ಸುಮ್ಮನಾದಳು.
ಆದರೆ ಅವನು ಮಹಾ ಚತುರ ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡರೂ ದುಡುಕಲಿಲ್ಲ.
' ನನ್ನ ಕೆಲವು ಕರಾರುಗಳಿಗೆ ನೀನು ಒಪ್ಪಬೇಕು ' ಅವಳು ಹೇಳಲಾರಂಭಿಸಿದಳು.
' ನಾನು ಅವನಿಗೆ divorce ನೀಡಲ್ಲ , ನಿನ್ನೊಂದಿಗೆ ಮದುವೆಯ ಗೊಂದಲದ ಬಂಧನವು ಬೇಡ . ಇಬ್ಬರೂ ಗೆಳೆಯರಾಗಿರೋಣ. ನನಗೆ ನೀನು ಖುಷಿ ಕೊಡುತ್ತೀ ಎಂಬ ನಂಬಿಕೆ ಇದೆ. ಹಾಗಂತ ಎಲ್ಲವನ್ನೂ ಈಗಲೇ ಹೇಳಲಾರೆ . ನಂಬಿಕೆ ಭಯದ ಕೈಯಲ್ಲಿ ನರಳುತ್ತಿದೆ. ಆ ಅವಿಶ್ವಾಸದ ಸಂಕೋಲೆಯಿಂದ ಹೊರಗೆ ಬರಲು ಸ್ವಲ್ಪ ಸಮಯ ಬೇಕು.
ಕಾಯುವ ಸಹನೆ ಇದ್ದರೆ ಒಟ್ಟಿಗೆ ಗೆಳೆಯರಾಗಿ ಇರೋಣ . ಸಮಯ , ಸಂದರ್ಭ ಒಪ್ಪಿದರೆ ಅವನ ಹಂಗು ಹರಿದು ಮುಖವಾಡ ಕಳಚಿಟ್ಟು ಬರುತ್ತೇನೆ but I need some times to take a call ' ಎಂದಳು.
ಸುಮ್ಮನೇ ನಸು ನಕ್ಕ.
ಕಾಟೇಜ್ ಸೇರಿ fresh ಆಗಿ ಊಟ ಮಾಡುವಾಗ ಮೌನವೇ ಮಾತುಕತೆಗಳು.
' ಆಯ್ತು ಖಂಡಿತ ಕಾಯುತ್ತೇನೆ ಆದರೆ ಈ ಸುಂದರ ರಾತ್ರಿ ವ್ಯರ್ಥವಾಗದಿರಲಿ , ಮತ್ತೆ ಮತ್ತೆ ಮಾತಾಡೋಣ . ಸಮಯ ನಮಗಾಗಿ ಕಾಯುವುದಿಲ್ಲ , ಕಾಲನ ಕರೆಯ ಕೂಸುಗಳು ನಾವು '.
ರಾತ್ರಿಯ ಕೊರೆಯುವ ಛಳಿಯಲಿ ಕಳಕೊಂಡುದ ಹುಡುಕೋಣ. ಬದುಕಿನಲ್ಲಿ ಕಾಮ-ಪ್ರೇಮ ಮೀರಿದ ಅನುಸಂಧಾನವಿದೆ.
ಇತಿಹಾಸವನ್ನು ಮರೆಸುವ ಹೊಸ ಇತಿಹಾಸ ಸೃಷ್ಟಿಸೋಣ. ಗೆಳೆತನಕ್ಕೆ ಅಂತ ಶಕ್ತಿ ಇದೆ.
ನಾವೂ ಅಂತಹ ಗೆಳೆಯರಾಗಿರೋಣ. ಸಮಯ , ಸಂದರ್ಭ ಹಾಗೂ ಮನಸ್ಸು ಬಯಸಿದರೆ ಮಿಲನವನ್ನು ಸದ್ದಿಲ್ಲದೆ ಸಂಭ್ರಮಿಸೋಣ.
ಮನಸಿಗೆ ಅನಗತ್ಯ ಕಟ್ಟು ಪಾಡು ಹಾಕುವುದು ಬೇಡ . ನೀನು ಪ್ರಕೃತಿಯಲ್ಲಿ ಅರಳುವ ಹೂವಿನ ಹಾಗೆ ಅರಳಿದರೆ ಮಾತ್ರ ನಾನು ದುಂಬಿಯಾಗಿ ಮಧು ಹೀರುತ್ತೇನೆ. ಒತ್ತಡ , ಒತ್ತಾಯದಿಂದ ಏನೂ ಎಲ್ಲವೂ ಕಾವ್ಯದ ಸಿರಿಯಂತೆ ಅರಳಿದರೆ ಬರೆದು ಬಿಡುವೆ.'
ಎಂದಾಗ ಕೊಂಚ ಅರಳಿದ ಅನುಭವಕೆ ಆ ಛಳಿಯಲಿ ಒದ್ದೆಯಾದಳು.
ಹೊರಗೆ ಕೊರೆಯುವ ಛಳಿಯಲ್ಲಿ ನಡೆದಾಡಿ ನಲಿಯೋಣ ಎನಿಸಿತು.
ಇಬ್ಬರಿಗೂ.
ಕತ್ತಲಲಿ ಅರ್ಥಪೂರ್ಣವಾಗಿ ನಗುವ ಚಂದಿರ , ಹೊಳೆಯುವ ಚುಕ್ಕೆಗಳ ಸಾಕ್ಷಿಯಲಿ ಓಡಿ ಬಂದು ಬಿಗಿದಪ್ಪಿ ಸುಧೀರ್ಗವಾಗಿ ಚುಂಬಿಸಿ ನಸು ನಕ್ಕು ಕರ್ಟನ್ ಎಳೆದಳು.
---ಸಿದ್ದು ಯಾಪಲಪರವಿ
No comments:
Post a Comment