ಪರಿತಪಿಸುವೆ ನಿನಗಾಗಿ
ಅದೆಷ್ಟು ಸಂಭಮಿಸಬಹುದು ನೀ
ಗಾಯದ ಮೇಲೆ ಬರೆ ಎಳೆದು
ಬರೆ ಎಳೆಯಲು ಬೆಂಕಿ ಹೊತ್ತಿಸಿ ಕಬ್ಬಿಣದ ಸಲಾಕೆ
ಹುಡುಕಿ ಅದು ಕೆಂಪಾಗುವ ತನಕ ಕಾಯ್ದ
ನಿನ್ನ ಸಹನೆಗಾಗಿ ಪರಿತಪಿಸುತ್ತೇನೆ.
ಹಾಗೆ ಕಾಯುವಾಗ ಆ ಝಳಕ್ಕೆ ನೀ ಅನುಭವಿಸಿದ ಸಂಕಟಕ್ಕಾಗಿ ಮರುಗುತ್ತೇನೆ
ಕಾದ ಸಲಾಕೆ ಬಿಸಿಗೆ ನೊಂದ ಅಂಗೈಗೆ ಮುಲಾಮು ಹಚ್ಚುವರಾರು ಎಂಬ ಆತಂಕ
ನನಗೆ ಮೊದಲೇ ಆಗಿ ಹೋಗಿದೆ ಗಾಯ ಮೇಲೆ
ಬರೆ ಯಾವ ಲೆಕ್ಕ ತುಂಡಾಗಿರುವ
ದೇಹಕೆ ಸಾವಿನ ಹಂಗಿಲ್ಲ
ಆದರೆ ನನಗಾಗುವ ನೋವಿಗೆ ನೀ
ಸಂಭ್ರಮಿಸುವದಾದರೆ ಎಳೆ ನೂರೆಂಟು ಬರೆ
ಆದರೆ
ತಾಗದಿರಲಿ ಬಿಸಿ ನಿನಗೆ ಬಾಡದಿರಲಿ
ನಿನ್ನ ಮುಖ
ನೋವ ಭಾರಕೆ
ನೋವ ಭಾರಕೆ
ನೋವ ಭಾರಕೆ.
---ಸಿದ್ದು ಯಾಪಲಪರವಿ
No comments:
Post a Comment