ಪೊರೆ ಕಳಚದಿರೆ ಹೂ ಅರಳಲಾರದು
ಪೊರೆ ಕಳಚಿ ಹೂ ಅರಳುವ ಹೊತ್ತು
ಹೊರಡಿದ ಅನುರಾಗವಿದು
ನೂರೆಂಟು ಹೂಗಳಿರುವ ತೋಟದಲಿ
ದುಂಬಿಗಳಿಗೆ ಇನ್ನಿಲ್ಲದ ಸಡಗರ
ನಾ ಮಧುವ ಹೀರುವ ನೆಪದಲಿ
ಹೂವಿಂದ ಹೂವಿಗೆ ಹಾರಲಾರೆ
ನೀ ಕೊಟ್ಟ ಮಧು ಸಾಕು ಈ
ಜನುಮಕೆ ಹೂ-ದುಂಬಿಯ
ದಾಂಗುಡಿಯಲಿ ಅರಳಿದ
ಕೇಡಿಲ್ಲದ ಸಾವಿರದ ಪ್ರೇಮವಿದು
ಸಾಯಿಸಲಾಗದು ಹೂ-ದುಂಬಿಯ
ಸವಿಸಂಭ್ರಮವ , ನೂರೆಂಟು ಹೂ
ರಾಶಿಗಳಲಿ ಘಮ ಘಮಿಸುವ ಪರಿಮಳ
ನೀ
ಪೊರೆ ಕಳಚಿದ ಹೊತ್ತು ಸೋತು
ಶರಣಾಗುವ ಗತ್ತಿಗಿಲ್ಲ ಕುತ್ತು
ನಂಬಿಗೆಯ ಬಾಳಲಿ ಅನುಮಾನದ
ಹಂಗ ಹರಿದು ಭಯದ ಸಂಗ ತೊರೆದು
ಸುಖಿಸಿ ಏರು ಸಮರಸದ ಪರ್ವತ.
---ಸಿದ್ದು ಯಾಪಲಪರವಿ
No comments:
Post a Comment