ಒಲುಮೆಯಾಟ - ಒಲುಮೆಗಾಗಿ- ಒಲುಮೆಯಿಂದ
ಯಾರೀಗೂ ಹೇಳದ ಹೇಳಲಾಗದ ಸಂಗತಿಗಳ ಆಲಿಸುವ
ಮನಸೆಂಬ ಸಾಕ್ಷಿಗೇ ನೀನೇ ಸಾಕ್ಷಿ ದೇವ
ಹೇಳದಿರುವ ಮನದ ಕಳ್ಳತನಕೆ ನಸುನಗುತ ಬೇಡಿಕೊಂಡರೆ ನೀಡಿದ ವರಪ್ರಸಾದವ ಕೆಡಿಸದೇ ಕಾಯುವೆ
ಒಡಲಾಳದ ಸಿರಿ ಸವಿಯಲಿ
ಅರಳಿ ನಸು ನಗುವ ನಿಗೂಢ ಭಾವಗಳ ಗುಲಾಬಿಯ ಇಂಪಿನ ಕಂಪಿಗೆ ಸಾವಿರದ ನೂರೆಂಟು ಅರ್ಥಗಳು
ದೇವನೆದುರಿನ ಅನುಸಂಧಾನಕೆ ಸಿಕ್ಕ ಮರೆಯಲಾಗದ ಮರೆಯಾಗದ ಕುಸುಮಕೆ ನಾ ನೀ ಧನ್ಯ
ಇರಲಿ ಬಾಡದೇ ನೂರು ಕಾಲ ಮುಳ್ಳ ಹಾದಿಯ ದೂರ ಸರಿಸುತ
ಕಾಮದಾಚೆಗಿನ ಅಪ್ಯಾಯತೆಗೆ ಇನ್ನಿಲ್ಲ ಮುಪ್ಪು ನೋವು ಸಾವು
ನಾವಳಿದರೂ ಅರಳಿದ ಹೂವಲಿ ನಸುನಗುವ ಕೆಂಗುಲಾಬಿಯ ಮಧುರಂಗಲಿ ಮರೆಯಾಗದೆ ಮೆರೆಯುವ ಚಿರನೂತನ ಚಿಲುಮೆಯ ಒಲುಮೆಯ
ಅವನ ಕಂಗಳು ನಾವು .
---ಸಿದ್ದು ಯಾಪಲಪರವಿ
No comments:
Post a Comment