Wednesday, April 28, 2010

God's own place ಗೆ ಹೋಗೋಣ ಬನ್ನಿ
ಹೀಗೆಂದು ಮಲೆಯಾಳಿಗರು ತಮ್ಮ ರಾಜ್ಯ ಕೇರಳಕ್ಕೆ ಹೆಸರಿಸಿದ್ದಾರೆ. ಇಡೀ ದೇಶದಲ್ಲಿ ಅಕ್ಷರಸ್ಥರು, ಜಾಣರು, ಆರ್ಥಿಕವಾಗಿ, ಪ್ರಾಕೃತಿಕವಾಗಿ ಶ್ರೀಮಂತರಾಗಿರುವ ಮಲೆಯಾಳಿಗರು ಇಂಡಿಯಾದ ಚಿತ್ರಣವನ್ನು ಬದಲಾಯಿಸಿದ್ದಾರೆ. ನಮ್ಮ ರಾಜ್ಯದ ಮಂಗಳೂರಿಗೆ ಹೋದಾಗಲೆಲ್ಲ ಪದೇ, ಪದೇ ಅಂದುಕೊಳ್ಳುತ್ತೇನೆ. ಅರೆ! ಇವರೆಷ್ಟು different ಆಗಿದ್ದಾರಲ್ಲ ಎಂದು.
ಮಾತು, ನಡೆ, ಆಲೋಚನೆ ಕ್ರಮ, standerd of living ಎಲ್ಲದರಲ್ಲೂ ಐರೋಪ್ಯರನ್ನು ಹೋಲುವ ಮಂಗಳೂರಿನ ಕಡಲ ತೀರದ ಭಾರ್ಗವರಿಗೆ ಪ್ರೇರಣೆಯಾದರೂ ಯಾರು? ಎಂದು ಆಲೋಚಿಸಿದರೆ ಅದಕ್ಕೆ ಉತ್ತರ ಕೇರಳದಲ್ಲಿ ಸಿಗುತ್ತದೆ. ಕೇರಳಿಗರ ಪ್ರಭಾವ ಮಂಗಳೂರಿನವರಿಗಿದೆ. ಹೀಗಾಗಿ ಮಂಗಳೂರು ರಾಜ್ಯದಲ್ಲಿ ಭಿನ್ನವಾಗಿದ್ದರೆ, ಇಡೀ ದೇಶದಲ್ಲಿ ಕೇರಳಿಗರು ಭಿನ್ನವಾಗಿದ್ದಾರೆ.
ನಮ್ಮನ್ನು ಬಡಿದೆಬ್ಬಿಸುವ ಎಲ್ಲ ಭಾವನೆಗಳನ್ನು ಬದಿಗೊತ್ತಿ ವಾಸ್ತವದಲ್ಲಿ ಬದುಕಿದರೆ practicle ಎಂದು ಕರೆಯುತ್ತೇವೆ. practicle approach ಎಲ್ಲದರಲ್ಲೂ ಯಸಸ್ಸನ್ನು ಕೊಡುತ್ತದೆ. ಭಾವನಾತ್ಮವಾಗಿ ಕೊಂಚ ಕಿರಿಕಿರಿ ಎನಿಸಿದರೂ ಭೌತಿಕವಾಗಿ ಯಶಸ್ಸಂತೂ ಸಿಗುತ್ತದೆ.
2004 ರಲ್ಲಿ ಕೇರಳಕ್ಕೆ ಹೋಗಿ ನಾಲ್ಕಾರು ಕಡೆ ಉಪನ್ಯಾಸ ನೀಡಿ ಬಂದಿದ್ದೆ. ಈಗ ನನ್ನ ಆಲೋಚನಾ ಕ್ರಮ ಒಂಚೂರು ಬದಲಾಗಿದೆ.
ಇಂಗ್ಲೆಂಡ್ ಪ್ರವಾಸದ ನಂತರ ತುಂಬಾ practicle ಆಗಲು ಸಾಧ್ಯವಾಗದಿದ್ದರೂ, practicle ಆಗಿರುವುದನ್ನು ಅರಿತುಕೊಂಡು ಅವಲೋಕಿಸಿ ದಕ್ಕಿಸಿಕೊಳ್ಳಲು ಸಾಧ್ಯವಾಗಿದೆ,
ದೇಶ ನೋಡಿ, ಕೋಶ ಓದಿ ನಮ್ಮ ಆಲೋಚನಾ ಕ್ರಮವನ್ನು ಖಂಡಿತಾ ಬದಲಿಸಿಕೊಳ್ಳಲು ಸಾಧ್ಯ. ಆದರೆ ದೇಶ ನೋಡುವ ಕ್ರಮ ಬದಲಾಯಿಸಬೇಕು. ಕೇವಲ tour ಆಗಿರಬಾರದು ಅಷ್ಟೆ! ಅದು ಅಧ್ಯಯನವಾಗಬೇಕು. psychology, Anthropology ನನ್ನ ಆಸಕ್ತಿ ವಿಷಯಗಳು ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೂ HRD ಅಧ್ಯಯನದ ಸಂದರ್ಭದಲ್ಲಿ ಜನಾಂಗೀಯ ಅಧ್ಯಯನ, ವ್ಯಕ್ತಿಗಳನ್ನು ಅರಿಯುವುದು ಆಪ್ತವೆನಿಸಿತು.
ಇಂಗ್ಲೆಂಡಿನ ಸುಂದರ ಪ್ರಕೃತಿಯನ್ನು ಆಸ್ವಾದಿಸುವ ಜೊತೆಗೆ ಅಲ್ಲಿನ ಜನರನ್ನು ಅರಿಯಲು ತಿಣುಕಾಡಿದೆ. ಭಾರತದ ಬೃಹತ್ ರಾಷ್ಟ್ರದಲ್ಲಿ ಸಾಕಷ್ಟು ವಿಭಿನ್ನತೆಯಿದೆ.
Unity in divorsity ಎಂಬ ಮಾತು ಅಕ್ಷರಶ: ಸತ್ಯ.
ಇಡೀ ಇಂಡಿಯಾ ಸುತ್ತಿದರೆ ಸಾಕು, ಹತ್ತಾರು ದೇಶಗಳನ್ನು ಸುತ್ತಿದ ಅನುಭವ ದಕ್ಕುತ್ತದೆ.
ಆಹಾರ-ವಿಹಾರ, ಉಡುಗೆ-ತೊಡುಗೆ, ಸಂಸ್ಕಾರ-ಸಂಸ್ಕೃತಿ, ಬೌಗೋಳಿಕ ಸೌಂದರ್ಯಗಳಲ್ಲಿ ಭಿನ್ನತೆಯನ್ನು ಹೊಂದಿದ ಜಗತ್ತಿನ ಏಕೈಕ ರಾಷ್ಟ್ರವೆಂದರೆ 'ಭಾರತ'.
ಒಂದು ದೇಶವೆಂದರೆ ನಿಖರ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ ಇರುತ್ತದೆ ಎಂದು generlise ಮಾಡುವವರು India ಕ್ಕೆ ಬಂದಾಗ ಅಚ್ಚರಿ ಪಡುತ್ತಾರೆ.
North ನಲ್ಲಿ ಹಿಂದಿ, south ನಲ್ಲಿ ದ್ರಾವಿಡ ಹೀಗೆ ಭಾಷೆಗೆ - ಸಂಸ್ಕೃತಿಗೆ ಭಿನ್ನತೆಯ ಗೊಂದಲಕ್ಕೆ ವಿದೇಶಿಯರು ಸಿಕ್ಕ ಪ್ರತಿಫಲವೇ 'Unity In Divorsity'ಎಂಬ ಭಾವ ಸಾಬೀತಾಗಿದ್ದು!
ಈಗ ಇಷ್ಟೆಲ್ಲ ಟೂರಾಯಣ ಪ್ರಸ್ತಾಪವಾಗಲು ಕಾರಣ may 1 ರಂದು ಕೇರಳದ ತಿರುವನಂತಪುರದಲ್ಲಿ ಆಯೋಜಿಸಿರುವ ಕಾಯಕ ದಿನಾಚರಣೆಗೆ ಅತಿಥಿಯಾಗಿ ಆಹ್ವಾನಿತನಾಗಿದ್ದೇನೆ. ಕೇರಳ ನಿರಾಕಾರ ಹಾಗೂ ಅಲ್ಲಿನ ಬಸವ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿ, ವಿಶೇಷ ಉಪನ್ಯಾಸಕ್ಕೆ ಆಹ್ವಾನಿಸಿರುವುದು ಜವಾಬ್ದಾರಿ ಹೆಚ್ಚಿಸಿದೆ.
ಬಸವಣ್ಣನ ಕಾಯಕ - ದಾಸೋಹ ಸಿದ್ದಾಂತವನ್ನು ಇಂಗ್ಲಿಷ್ ನಲ್ಲಿ ಮಾತನಾಡಬೇಕಿದೆ. ಹಿರಿಯ ಬಸವ ಜೀವಿ ಅರವಿಂದ ಜತ್ತಿ ಅವರು ಕೇರಳ ಬಸವ ಸಮಿತಿ ಕಾರ್ಯಕ್ರಮಕ್ಕೆ ತೆರಳಲು ಸೂಚಿಸಿ ಒಪ್ಪಿಸಿದ್ದಾರೆ.
ಪ್ರಸನ್ನರವರು, ವೆಲಾಯುಧನ್ ಪಿಳ್ಳೆ, ಅಲ್ಲದೆ ಅಲ್ಲಿನ ಸಚಿವರು, ಶಾಸಕರು, ಸಚಿವಾಲಯದ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಬಸವ ತತ್ವಕ್ಕೆ ನಿಜವಾದ ವಿಶ್ವಮಾನ್ಯತೆ ಈಗ ಆರಂಭವಾಗಿದೆ. ಪ್ರಗತಿಪರ ಸರಕಾರಗಳು, ವಿಶ್ವವಿದ್ಯಾಲಯಗಳು ವಚನ ಸಾಹಿತ್ಯದ ವಿಸ್ತಾರವನ್ನು ಸ್ವೀಕರಿಸಿದ್ದಾರೆ.
ಬಸವಣ್ಣನ ನಾಡಿನ ನೆಲದ ಮಕ್ಕಳಾದ ನಾವು ವಚನ ಸಾಹಿತ್ಯ, ಬಸವ ತತ್ವದಿಂದ ವಿಮುಖರಾಗುತ್ತಲಿದ್ದೇವೆ. ಎಂಬ ಬೇಸರದ ಮಧ್ಯ ಇಂತಹ ಕಾರ್ಯಕ್ರಮಗಳು ನಮ್ಮ ಬಸವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ.
ನೀವು ಬನ್ನಿ ಹೋಗಿ ಬರೋಣ God's own place ಎಂಬ ನಾಡಿಗೆ, ಬಂದ ಮೇಲೆ ಅನುಭವಗಳನ್ನು ಹಂಚಿಕೊಳ್ಳುವೆ------

No comments:

Post a Comment