Monday, April 26, 2010

ನಳನಳಿಸುವ ಹೂದೋಟದ ಕಂಪನ

ನೀನು ಅಷ್ಟೊಂದು over ಆಗಿ ನಡೆದುಕೊಳ್ಳಬಹುದು ಅಂದುಕೊಂಡಿರಲಿಲ್ಲ. ನಿನ್ನ ಆಕ್ರೋಶ, ಸಿಟ್ಟನ್ನು ಕಂಡಾಗಲೆಲ್ಲ ಅಚ್ಚರಿ, ಹತ್ತಾರು ಬಾರಿ ಎಚ್ಚರಿಸಿದರೂ ನೀನು ಬದಲಾಗಲೇ ಇಲ್ಲ.
ಸಾಕು, ಇನ್ನು ಮುಂದೆ ನಿನ್ನನು ಬದಲಾಯಿಸುವ ಪ್ರಯತ್ನ ಮಾಡಬಾರದು ಅನಿಸಿತು.
ಈ ರೀತಿ ಆಕ್ರೋಶ ಇಟ್ಟುಕೊಂಡಿರುವ ನಿನ್ನ ಸಹವಾಸವೇ ಬೇಡ ಅನಿಸಿ ಸುಮ್ಮನಾಗಿಬಿಟ್ಟೆ. ನಿನಗೆ ಕಾಲ್ ಮಾಡುವುದಾಗಲಿ, sms ಕಳಿಸುವುದಾಗಲಿ ಬಿಟ್ಟು ಬಿಟ್ಟೆ.
ಆದರೆ ನೀ ಬಿಡಬೇಕಲ್ಲ. ಬಿಟ್ಟನೆಂದರೂ ಬಿಡದೀ ಮಾಯೆ ಎಂಬಂತೆ ಮಾತ್ತೆ ನೀನೆ call ಮಾಡಿದಾಗ ಅಚ್ಚರಿ. ಯಾಕೋ! ಎಷ್ಟು ಸೊಕ್ಕು ನಿನಗೆ, ಏನೋ ಸಿಟ್ಟಿನಲ್ಲಿ ನಾಲ್ಕು ಮಾತಾಡಿದರೆ ನನ್ನನ್ನು ದೂರ ಮಾಡುವಷ್ಟು ಧೈರ್ಯ ಏನೋ ಎಂದು ರೇಗಾಡಿದೆ.
ನಿನ್ನ ಕೋಪ, ಹಾರಾಟವನ್ನು ನೋಡಿದಾಗಲೆಲ್ಲ ನಿನ್ನ ಸಹವಾಸವೇ ಸಾಕೆನಿಸುತ್ತಿತ್ತು.
cool ಆದ ಮೇಲೆ ಅತೀಯಾಗಿ emotional ಆದಾಗಿನ ನಿನ್ನ attitude ವಿಚಿತ್ರವೆನಿಸಿತು. ಕೂಡಲೇ ಹೊರಟು ಬಾ ಎಂದಾಗ ಆತಂಕದಿಂದ ಕಾರು ಹತ್ತಿದೆ.
ನಿನ್ನ ಮನೆಗೆ ತಲಪಿದಾಗ ಸರಿರಾತ್ರಿ 12.30. ಕಣ್ಣಲ್ಲಿ, ಕಣ್ಣಿಟ್ಟು ಮನೆಯಂಗಳದಲಿ ಕಾಯುತ್ತಾ ಕುಳಿತಿರುವುದನ್ನು ಕಂಡಾಗ ಹೇಗಾಗಿರಬೇಡ.
ಅದೇ ಪುಟಿಯುವ ಉತ್ಸಾಹ, ಪ್ರೇಮ ಭಾವ. ನೀರವ ರಾತ್ರಿಯ ಮೌನವನ್ನು ಮುರಿಯುವ ಹಾಗೆ ಬಿಗಿದಪ್ಪಿ ಮುತ್ತಿಟ್ಟಾಗ ಅಯ್ಯೋ ಬದುಕೇ ಎನಿಸಿತು. ದರ ದರ ಎಳೆದುಕೊಂಡು ಹೋಗಿ ಬಾಗಿಲು ಹಾಕಿ ಅಳಲು ಪ್ರಾರಂಭಿಸಿದಾಗ ಏನೂ ತೋಚಲಿಲ್ಲ. ಯಾವುದನ್ನು ಸ್ವೀಕರಿಸಬೇಕು. ನಿನ್ನ ಪ್ರೀತಿಯನ್ನೋ, ಕೋಪವನ್ನೋ.
ಎದೆ ಮೇಲೆ ಮುಖವಿಟ್ಟು, ಕೂದಲಲಿ ಕೈಯಾಡಿಸುತ್ತಾ ಇಡೀ ರಾತ್ರಿ ಮನದ ಮಾತು ಹರವಿದಾಗ ದಂಗಾದೆ.
ಅರೇ ಈ ಸುಡುಗಾಡು ಪ್ರೀತಿಯೇ ಹೀಗೆ. ಇದನ್ನು ವ್ಯಾಖ್ಯಾನಿಸುವುದು ಕಷ್ಟ ಅಂದುಕೊಂಡು ಸುಮ್ಮನಾದೆ.
ಸ್ನಾನ ಮಾಡಿ fresh ಆಗಿ ರೂಮ್ ಗೆ ಬಂದಾಗ ನಿನ್ನ ಮೊಬೈಲ್ ತೆಗೆದು ಕ್ಲಿಕ್ಕಿಸಿದ ಹತ್ತಾರು photo ಗಳು ಈಗೆಲ್ಲಿವೆ? ಪ್ರೀತಿಗಿರುವ ಮುಖಗಳನ್ನು ಅರಿಯುವುದು ಕಷ್ಟ ಅಂತ ನೀನು ಹೀಗೆ ವರ್ತಿಸಿದಾಗಲೆಲ್ಲ ಅಂದುಕೊಳ್ಳುತ್ತೇನೆ.
ನೀನು ಇಷ್ಟೊಂದು cool ಆಗಿರಬಹುದು ಅಂದುಕೊಂಡಿರಲಿಲ್ಲ. ಪ್ರಿಜ್ ನಿಂದ ಹೊರ ಬಂದ ಬೀರ್ ಬಾಟಲಿಗಳು, ಅಂದವಾಗಿ ನಲಿದಾಡುತ್ತಿದ್ದ ಟ್ಯಾಮ್ಲರ್ ಗಳು, ಆಕರ್ಷಣೀಯವಾಗಿ ನಲಿದಾಡುತ್ತಿದ್ದ snacks ಗಳು.
ಒಂದೆರಡು ಗ್ಲಾಸ್ ಬೀರ್ ಹೊಟ್ಟೆಗಿಳಿದಾಗ ನಿನೆಲ್ಲಿ ಮತ್ತೆ ಆಕ್ರೋಶಗೊಳ್ಳುತ್ತಿ ಅಂದುಕೊಂಡಿದ್ದೆ. ಹಾಗಾಗಲಿಲ್ಲ. ಮತ್ತದೇ ದಿವ್ಯ ಮೌನ.
ನೀನು ಹೀಗೆ ಕುಡಿಯುವುದು ಸರೀನಾ ಅಂದೆ? ಕೊಂಚ ಅಳುಕುತ್ತಾ ಹಾಗಿದ್ದರೆ ನಿನ್ಯಾಕೆ ಕುಡಿಯುತ್ತಿಯಾ habit ಅನ್ನುವುದು ಎಲ್ಲರಗೂ ಅಷ್ಟೇ.Gender discrimination ಇರಬಾರದು ಎಂದು ಭಾಷಣ ಬಿಗಿಯುವ ನಿನ್ನಂತವವರು, ಹೆಂಗಸರು ಕುಡಿದ ಕೂಡಲೇ ಯಾಕೆ ಕಂಗಾಲಾಗುತ್ತೀರಿ.
ಹೀಗೆ ಸಾಗಿದ ನಿನ್ನ ಚರ್ಚೆಯನ್ನು ಒಪ್ಪಬೇಕಲ್ಲ. ಮಧ್ಯರಾತ್ರಿಯವರೆಗೆ ಮೌನವನ್ನು ಬೆಚ್ಚಿಸುವಂತಹ ಕುಡಿತ ಅರ್ಥವಾಗಲಿಲ್ಲ.
ಮಾತು - ಮೌನ, ಕೋಪ, ಸಹನೆಗಳ ಗೊಂದಲದಲ್ಲಿ ನನ್ನನ್ನು ದೂಡುತ್ತಾ ಗೆಲ್ಲುವ ನಿನ್ನ ಪ್ರೀತಿಯನ್ನು ವಿಶ್ಲೇಷಿಸಲಾಗದು. ಅತಿಯಾದ ಪ್ರೀತಿ ಅನುಮಾನ ಕೋಪಕ್ಕೆ ಕಾರಣವಾಗಬಹುದು ಎಂಬ ಮಾತುಗಳು ನೆನಪಾಗಿ ಮೌನಕ್ಕೆ ಶರಣಾದೆ. ನಿನ್ನ ಪ್ರೀತಿಯ ಹಾಗೆ-------

No comments:

Post a Comment