Monday, April 12, 2010

ಮತ್ತೆ ಬರುತ್ತಾರೆ ಮುತ್ತು ಕೊಟ್ಟವರು ದಾರಿ ಬಿಡಿ


ರೇಣುಕಾ ಜಯ ಮಹಾತ್ಮೆ



ಕರ್ನಾಟಕ ರಾಜಕೀಯ ಇತಿಹಾಸದಲ್ಲಿಯೇ ಪವಾಡ ಮೂಡಿದ ಪುಣ್ಯಪುರುಷರೆಂದರೆ ಮಾನ್ಯ ಶ್ರೀ ರೇಣುಕಾಚಾರ್ಯ ಅವರು. ಹಾಲಿ ಅಲ್ಕೊಹಾಲ್ ಸಚಿವರೂ ಆಗಿರುವ ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿ ಪ್ರಕರಣದಿಂದ ಜಗತ್ಪ್ರಸಿದ್ದರಾದವರು. ಭಿನ್ನಮತಕ್ಕಾಗಿ ಹೈದ್ರಾಬಾದ್ ಗೆ ತೆರಳಿದ್ದರೂ, ಅಧ್ಯಯನ ಪ್ರವಾಸವೆಂದು ಜನರ ಕಿವಿಯ ಮೇಲೆ ಹೂವಿಟ್ಟ ಮಹನೀಯರು.
ಭಿನ್ನ ಮತದ ಲಾಭ ಪಡೆದು ಸಚಿವರಾದದ್ದು ಇವರ ಮೊದಲ 'ಜಯ'ವಾದರೆ, ಈಗ ಇವರ ಮಾಜಿ ಸ್ನೇಹಿತೆ ನರ್ಸ್ ಜಯಲಕ್ಷ್ಮಿ ಅವರ ಮೇಲೆಯೂ ವಿಜಯಗಳಿಸಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅನೇಕ ರಸಿಕ ರಾಜಕೀಯ ನಾಯಕರಿದ್ದರು, ಸ್ವತ: ಜೆ.ಎಚ್.ಪಟೇಲರು ತಮ್ಮ ರಸಿಕತನದ ಹಿರಿಮೆಯನ್ನು ಘೋಷಿಸಿದ್ದರು ಆದರೆ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ಹೆಗ್ಗಳಿಕೆ ಮಾತ್ರ ರೇಣುಕಾಚಾರ್ಯರಿಗೆ ಸಲ್ಲುತ್ತದೆ.
ಇವರ ರಂಗುರಂಗಿನ ರಸಿಕತನ ನಾಡಿನ ಎಲ್ಲ ಮಾಧ್ಯಮಗಳಲ್ಲಿ ರಾರಾಜಿಸಿದ್ದಲ್ಲದೆ, ಅದನ್ನು ರಾಜಕೀಯ ನಾಯಕರು, ಮಾಧ್ಯಮದವರು ತಮ್ಮ ಹಿತಾಸಕ್ತಿಗೆ ಬಳಸಿದ್ದು ಕೂಡ ಅಷ್ಟೇ interesting!
ಇವರ ಬಿಸಿ ಅಪ್ಪುಗೆ, ಸಿಹಿ ಚುಂಬನದ photo ಹಾಕಿ ಲಾಭ ಮಾಡಿಕೊಂಡವರಿಗೆ, ಜಯಲಕ್ಷ್ಮಿಗೆ ಪುಟ ಗಟ್ಟಲೆ ಜಾಗ ಕೊಟ್ಟು ಬೆಂಬಲ ನೀಡಿದ ಮಾಧ್ಯಮದವರಿಗೆ shock ಆಗುವ ಸುದ್ದಿ ಹೊರಬಿದ್ದಿದೆ. ಈಗ ಜಯಲಕ್ಷ್ಮಿ-ರೇಣುಕಾಚಾರ್ಯರ ವೈರ ಮುಗಿದು, ದೋಸ್ತಿ ಚಾಲು ಆಗಿದೆಯಂತೆ, ಆಗ ರೇಣುಕಾಚಾರ್ಯ ಮಾನ ಹರಾಜು ಹಾಕಿದ್ದ ಜಯಮ್ಮ ಈಗ ರೇಣುಕರ ವಿರುದ್ಧ ಬಳಸಿಕೊಂಡವರ ಜನ್ಮಜಾಲಾಡಬಹುದೆಂಬ ಆತಂಕ ಶುರು ಆಗಿದೆ.
ದಿಢೀರೆಂದು ಮಾಧ್ಯಮಗಳಲ್ಲಿ ಪ್ರತ್ಯಕ್ಷಳಾದ ಜಯಲಕ್ಷ್ಮಿ ರೇಣುಕರನ್ನು ಹಾಡಿಹೊಗಳಿದ್ದಾರೆ. ಯಾರೋ ಒಬ್ಬ ಸ್ವಾಮಿಗಳು ಇವರನ್ನು ಮತ್ತೆ ಒಂದುಗೂಡಿಸಿ ರಾಜಿಮಾಡಿದ್ದಾರಂತೆ. ಅಬ್ಬಾ! ಇಂತಹ ಜಗದೋದ್ಧಾರ ಕಾರ್ಯ ಮಾಡಿದ ಸ್ವಾಮಿಗಳು ಅದೆಂತಹ ಪವಾಡ ಪುರುಷರಿರಬಹುದು. ನಿತ್ಯಾನಂದರ ಲೈಂಗಿಕ ಸಾಧನೆಗಳನ್ನು ನೋಡಿ ಆ ಗುಂಗಿನಿಂದ ಎದ್ದು ಬರಬೇಕೆನ್ನುವುದರಲ್ಲಿಯೇ, ಜಯಲಕ್ಷ್ಮಿ ರಂಗಾಗಿ ಪ್ರತ್ಯಕ್ಷರಾಗಿದ್ದಾರೆ. ಈಗ ಮತ್ತೇನು ಹೊಸ ಪವಾಡಗಳನ್ನು ಮಾಡಬಹುದೆಂಬ ಕುತೂಹಲವಿದೆ. ಜಯಲಕ್ಷ್ಮಿಯನ್ನು ಬೆಂಬಲಿಸಿದ, ರೇಣುಕಾಚಾರ್ಯರನ್ನು ನಿಂದಿಸಿದವರ ಬಗ್ಗೆ ಅಯ್ಯೋ ಎನಿಸುತ್ತದೆ.

ಸಾರ್ವಜನಿಕ ಬದುಕಿನಲ್ಲಿ ಒಮ್ಮೆ ನಾಚಿಕೆ ಬಿಟ್ಟರೆ ಏನೆಲ್ಲ ಆಗಬಹುದು ಎಂಬುದಕ್ಕೆ ಇವರ ಅವತಾರಗಳೇ ಸಾಕ್ಷಿ!
ದುಡ್ಡು, ಅಧಿಕಾರದಿಂದ ಏನೆಲ್ಲ ಸಾಧ್ಯ ಎಂಬುದನ್ನು ರೇಣುಕಾ ವಿ'ಜಯ' ಮಹಿಮೆ ಸಾಬೀತು ಪಡಿಸಿದೆ.

No comments:

Post a Comment