Sunday, April 25, 2010

ಹೂವಿನಹಡಗಲಿಯಲ್ಲಿ ಶೇಕ್ಸಪೀಯರ್ ಕಂಪು

ಹೂವಿನ ಹಡಗಲಿ ಎಂದ ಕೂಡಲೇ ಎಂ. ಪಿ. ಪ್ರಕಾಶ್ ನೆನಪಾಗುತ್ತಾರೆ. ಅವರ ರಂಗ ಚಟುವಟಿಕೆಗಳು, ರಾಜಕೀಯ ಅಭಿವೃದ್ಧಿ ಕಣ್ಣೆದುರು ನಿಲ್ಲುತ್ತವೆ. ಪ್ರಕಾಶಕರಿಂದಾಗಿ ಹಡಗಲಿ ರಾಜ್ಯಕ್ಕೆಲ್ಲ ಪರಿಚಯವಾಯಿತು. ವರ್ತಮಾನದಲ್ಲಿ ರಾಜಕೀಯ ಮೀಸಲಾತಿ ಕಾರಣಗಳಿಂದಾಗಿ ಪ್ರಕಾಶ್ ಅವರ politics ಈಗ ಹರಪನಹಳ್ಳಿಗೆ shift ಆಗಿದೆ.
ಹೈಸ್ಕೂಲ್ ಗೆಳೆಯ ಶಾಂತಮೂರ್ತಿ ಇಲ್ಲಿನ GBR collage ನಲ್ಲಿ ಇಂಗ್ಲಿಷ್ ವಿಭಾಗದ HOD. ಭಾಷಣ, ಬರಹಗಳ ಮೂಲಕ ಪ್ರಚಾರದಲ್ಲಿದ್ದಾನೆ.
ಕಳೆದ ನಾಲ್ಕು ವರ್ಷಗಳಿಂದ GBR collage ನಲ್ಲಿ optional English ಪ್ರಾರಂಭಿಸಿದ್ದಾನೆ. ಮೊದಲ ವರ್ಷದ ಕಾರ್ಯಕ್ರಮಕ್ಕೆ ಹೋಗಿ shakespeare ಕುರಿತು ಮಾತಾಡಿ ಬಂದಿದ್ದೆ.
ಈಗ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸದ ನಂತರ ಬಂದು ಹೋಗು ಎಂದ.
ನಿನ್ನೆ 24 ರಂದು shakespear's day ಆಚರಿಸಿದರು. ಎಪ್ರಿಲ್ 23 ಶೇಕ್ಸಪಿಯರ್ ಹುಟ್ಟುಹಬ್ಬವೂ ಹೌದು, ಪುಣ್ಯಸ್ಮರಣೆಯೂ ಹೌದು. ದಟ್ಸ ಕನ್ನಡದಲ್ಲಿ ಪ್ರಕಟಗೊಂಡ ಲೇಖನ ಅನೇಕರ ಮೆಚ್ಚುಗೆಯನ್ನು ಪಡೆದಿದೆ. ಅದನ್ನು ಆಧಾರವಾಗಿಟ್ಟುಕೊಂಡೇ ಹಡಗಲಿಯಲ್ಲಿ ಮಾತನಾಡಿದೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಿದ್ದು ಅಭಿನಂದನೀಯ.ಪ್ರಾಚಾರ್ಯ ಕಾಲವಾಡ ಮತ್ತು ಶಾಂತಮೂರ್ತಿ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು. J.S.S., B.Ed collage ನ ಪ್ರಾಧ್ಯಾಪಕ ವೀರಯ್ಯ ನವರನ್ನು ಹಾಗೂ ನನ್ನನ್ನು ಸನ್ಮಾನಿಸಿದರು.
ತೋಂಟದಾರ್ಯ ಮಠದ ಶಿವಾನುಭವ ಸಮಿತಿ ಚೇರ್ ಮನ್ ಆಗಿ ಒಂದು ವರ್ಷ ನುರಾರು ಜನರ ಸನ್ಮಾನದಲ್ಲಿ ಪಾಲ್ಗೊಂಡ ಪ್ರತಿಫಲವಾಗಿ ಸನ್ಮಾನವೆಂದರೆ ಪುಳಕಿತವಾಗುವುದಿಲ್ಲ.ಆದರೆ ಇಲ್ಲಿ ಸ್ನೇಹಿತ ಶಾಂತಮುರ್ತಿ ಹಾಗೂ ಅವರ ವಿದ್ಯಾರ್ಥಿಗಳ ಪ್ರೀತಿಗಾಗಿ ಪುಳಕಿತನಾದೆ.
ಉಳಿದ ವಿಭಾಗಗಳ ಪ್ರಾಧ್ಯಾಪಕರು, ಹಡಗಲಿಯ ಕಲಾವಿದ - ಶಿಕ್ಷಕ ಸುರೇಶ ಅಂಗಡಿ, ಮಾಧ್ಯಮ ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶೇಕ್ಸಪಿಯರ್ ಹೆಸರಿನಲ್ಲಿ, ರಾಜಕಮಾರ ಜನ್ಮದಿನದಂದು ಸನ್ಮಾನ ಗೊಂಡಿದ್ದು ಖುಷಿ ಆಯಿತು.
ಹೊಸ ತಲೆಮಾರಿನ ಯುವಕರು ಭಾಷಾಭಿರುಚಿನ್ನು ಬೆಳೆಸಿಕೊಳ್ಳಬೇಕಾಗಿದೆ. ಓದುವ-ಬರೆಯುವ ಪ್ರವೃತ್ತಿ ಕಡಿಮೆಯಾಗಿದೆ. ನಾವು ವಿದ್ಯಾರ್ಥಿಗಳಾಗಿದ್ದಾಗ at least ಸ್ನೇಹಿತರಿಗೆ ಪತ್ರ ಬರೆಯುವುದರ ಮೂಲಕ ಕಾವ್ಯ ಭಾಷೆಯನ್ನು ಜೀವಂತವಾಗಿಟ್ಟುಕೊಂಡು ಭಾಷಾಭಿರುಚಿ ಬೆಳೆಸಿಕೊಂಡೆವು.
ಈಗಿನ sms , mobile ಯುಗದಲ್ಲಿ ಭಾಷೆ handicap ಆಗಿದೆ. ಸತ್ವ ಕಳೆದುಕೊಂಡಿದೆ. ಭಾಷೆಯಲ್ಲಿ ಲಯವಿಲ್ಲ, ಭಾವನೆಗಳಲ್ಲಿ ರಸಿಕತೆಯಿಲ್ಲ.
ನಮ್ಮ ಪ್ರಾಧ್ಯಾಪಕರಿಗಿದ್ದ ಜೀವನೋತ್ಸಾಹ, ನಮ್ಮಲ್ಲಿರಲಿಲ್ಲ. ಈಗ ನಮ್ಮಲ್ಲಿದ್ದ ಜಿವನೋತ್ಸಾಹ ನಮ್ಮ ವಿದ್ಯಾರ್ಥಿಗಳಲ್ಲಿ ಉಳಿದಿಲ್ಲ. ಇದನ್ನೆ generation gap ಎಂದು ಆರೋಪಿಸುತ್ತೇವೆ.
ಶೇಕ್ಸಪಿಯರ್ ನ್ನು, ಇಂಗ್ಲೆಂಡಿನ ನೆನಪನ್ನು ಮತ್ತೊಮ್ಮೆ ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟ ಸ್ನೇಹಿತರಿಗೆ thanks ಹೇಳಿ ಊರಿಗೆ ಮರಳಿದೆ.

No comments:

Post a Comment