Friday, April 2, 2010

ಹೆಂಡತಿ ಮನೆಯೊಳಗಿದ್ದರೆ

ಹೆಂಡತಿ ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎಂಬ ಕೆ.ಎಸ್.ನ ಅವರ ಹಾಡು ಎಲ್ಲರಿಗೂ apply ಆಗಿದ್ದರೆ ಎಷ್ಟು ಚನ್ನಾಗಿತ್ತು.
"ನಿನಗೆ ಒಳ್ಳೆಯ ಹೆಂಡತಿ ಸಿಕ್ಕರೆ ಪರಮ ಸುಖಿಯಾಗಿರುತ್ತೀ, ಇಲ್ಲದಿದ್ದರೆ ನನ್ನ ಹಾಗೆ ತತ್ವಜ್ಞಾನಿಯಾಗುತ್ತೀ" ಎಂಬ ತತ್ವಜ್ಞಾನಿಯ ಮಾತು ಎಷ್ಟು ಜನರಿಗೆ ಅನ್ವಯಿಸುತ್ತದೆ. ನಾವೆಲ್ಲರೂ ಸುಖಿಗಳು ಅಲ್ಲ, ತತ್ವಜ್ಞಾನಿಗಳು ಅಲ್ಲವೆಂಬುದು ಅಷ್ಟೇ ಸತ್ಯ.
ಈ ಸತ್ಯ, ಮಿಥ್ಯದ ಮಧ್ಯ ಇಂಡಿಯಾ ದೇಶದಲ್ಲಿ ಮದುವೆ, ದಾಂಪತ್ಯ ಎಂಬುದೊಂದು ಪರಮ ಸೋಗಲಾಡಿತನವೆಂದು ಗೊತ್ತಿದ್ದರೂ, ನಾವೆಲ್ಲ ಸುಖಿಗಳಂತೆ ನಟಿಸುವ ಶ್ರೇಷ್ಠ ಕಲಾವಿದರು.
ಸಾಮಾಜಿಕ ಅನಿವಾರ್ಯತೆಯನ್ನುತ್ತಾ ಹೊಡೆದಾಡಿ, ಬಡಿದಾಡಿ, ಮನಸ್ತಾಪ ಮಾಡಿಕೊಂಡು, Happy wedding Anniversary ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತೇವೆ.
ಆದರೆ ಪರಸ್ಪರರಲ್ಲಿ ಎಷ್ಟು understanding ಇದೆ, ಪಾರದರ್ಶಕತೆ ಇದೆ ಎಂದು, ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಎಲ್ಲ ವಿಚಿತ್ರ ಅರ್ಧಸತ್ಯಗಳ ಸಂಕಟಗಳ ಮಧ್ಯ ನಾನು ಮದುವೆಯ ಸಂಕೋಲೆಯನ್ನು ಕಳೆದ ಹದಿನೇಳು ವರ್ಷಗಳಿಂದ ಬಂಧಿಯಾಗಿದ್ದೇನೆ. ಹೆಂಡತಿಗೆ ಹೆದರುವ ಧೈರ್ಯವನ್ನಂತು ಮಾಡಿಲ್ಲ. ಆಕೆ ನನಗೆ ಹೆದರಲಿ ಎಂದು ಬಯಸುವುದಿಲ್ಲ. ಆದರೆ ಪರಸ್ಪರರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರಲಿ ಎಂದು ಆಶಿಸುತ್ತೇನೆ.
'ಊರಿಗೆ ಸರದಾರ ಹೆಂಡತಿಗೆ ಗುಲಾಮ' ಎಂಬ ಮಾತಿನಿಂದಲೇ ಎಲ್ಲ ಬಂಧುಗಳು ನಮ್ಮನ್ನು ನೋಡಲು ಬಯಸುತ್ತಾರೆ. ನನ್ನ ಕಡೆಯ ಬಂಧುಗಳಿಗೆ ನಾನು ಹೆಂಡತಿಯ ಗುಲಾಮ, ಹೆಂಡತಿ ಕಡೆಯ ಬಂಧುಗಳಿಗೆ ನಾನೊಬ್ಬ strict ಗಂಡ. ಅರೆ ಇದೆಂತ ವಿಪರ್ಯಾಸ. ಆದರೆ ನಾನೇನಿದ್ದೇನೆ ಎಂಬ ಪರಮಸತ್ಯ ನನಗೆ ಮಾತ್ರ ಗೊತ್ತಿದೆ.
ಎಲ್ಲ ವಿಷಯಗಳನ್ನು ಹೆಂಡತಿಗೆ ತಪ್ಪದೇ ಹೇಳುತ್ತೇನೆ. ಹೇಳಿದ್ದೇನೆ. ನನ್ನ ಹಾಳು-ಮೂಳು ದೌರ್ಬಲ್ಯಗಳು, ತೇಲಿ ಹೋದ affair ಗಳು ಆಕೆಗೆ ಗೊತ್ತಿವೆ. ಅದರಿಂದಲೇ ನಮ್ಮ ಸಂಬಂಧ ಕೊಂಚ ಗಟ್ಟಿಯಾಗಿದೆ. ಕೆಲವರ ದೃಷ್ಟಿಯಲ್ಲಿ ನಾನೊಬ್ಬ ಫ್ಯೂಡಲ್ ಗಂಡ ಅನಿಸಿಕೊಂಡಿದ್ದೇನೆ.
ಆದರೆ ನಾವು ಹೇಗೆ ಕಂಡರು, ಏನೇ ಅನಕೊಂಡರು ವಾಸ್ತವ ನಮಗೆ ಮಾತ್ರ ಗೊತ್ತಿರುತ್ತದೆ.
ಕೆಲವರು ಹೆಂಡತಿಯರಿಗೆ ಎಷ್ಟೊಂದು ಪ್ರಾಮಾಣಿಕವಾಗಿ ಹೆದರುತ್ತಾರೆಂದರೆ, ಅವರ ಫೋನ್ ಬಂದ ಕೂಡಲೆ PSIಯನ್ನು ಕಂಡ PC ಹಾಗೆ ಆಡುತ್ತಾರೆ. ಗೌರವ-ಆದರ ಭಕ್ತಿಯಿಂದ phone call ಸ್ವೀಕರಿಸಿ ಯಾವುದೇ ಒಂದು ಅದ್ಭುತ ಸುಳ್ಳುಹೇಳಿ best husband ಅನಿಸಿಕೊಳ್ಳುತ್ತಾರೆ.
ಗುಂಡು ಪಾರ್ಟಿಗಳಲಿ ಗುಂಡು ಹಾಕುತ್ತಿರುವ ಗಂಡಂದಿರು ಮನೆಯವರ phone ಬಂದ ಕೂಡಲೇ ಬಾಯಿಗೆ ಕರವಸ್ತ್ರ ಹಿಡಿದು ಮಾತನಾಡುತ್ತಾರೆ. ಯಾಕ್ರೀ ಅಂತ ಕೇಳಿದರೆ, ಇಲ್ಲಾರಿ ನಮ್ಮ ಮನೆಯವರಿಗೆ ಎಣ್ಣಿ ವಾಸನೆ ಗೊತ್ತಾಗುತ್ತೆ ಎಂದೆನ್ನುತ್ತಾ ಭಯ-ಭಕ್ತಿ ಪ್ರದರ್ಶಿಸುತ್ತಾರೆ.
phone ನಲ್ಲಿಯೇ ಈ ಪರಿ ಆದರೆ, ಇನ್ನೂ ಎದುರಿಗೆ ಹೇಗಾಡಬೇಡ ನೀವೆ ವಿಚಾರ ಮಾಡಿ.
pub,tub ಯಾವುದೇ ಸಂಗತಿಗಳಿದ್ದರೂ ಹೇಳುವ ಸಾಚಾತನ ರೂಢಿಸಿಕೊಂಡಿದ್ದೇನೆ. ಬಹಳಷ್ಟು ಜನ ಹೆಂಡತಿಯರಿಗೆ ಗಂಡ ಬೇರೆ ಹೆಣ್ಣಿನ ವಿಷಯ ತೆಗೆದರೆ ಸಿಟ್ಟು ಬರುತ್ತದೆ ಅಂತ ಕೊಚ್ಚಿಕೊಳ್ಳುತ್ತಾರೆ. ನನಗಂತೂ ಆ ಕಹಿ ಅನುಭವ ಆಗಿಲ್ಲ. ರಸ್ತೆಯಲ್ಲಿ ಹೋಗುವವರೆಲ್ಲ ನನ್ನನ್ನೇ ನೋಡ್ತಾರೆ ಹೆಂಗ್ ಮಾಡ್ಲಿ ಅಂತ ಕೇಳೋಕೆ ನಾನೇನು super ಸ್ಟಾರಾ!
ನನ್ನ ಅವ್ವನಿಗೆ ನಾನು ಹೆಂಡತಿ ಮೇಲೆ ಬಹಳ depend ಆಗಿರುವುದಕ್ಕೆ ಬೇಸರವಿದೆ. ಒಮ್ಮೆ ಅವ್ವ ಬಂದಾಗ, 'ರೇಖಾ cutting ಗೆ ಹೋಗ್ತೇನೆ 50 ರೂಪಾಯಿ ಕೊಡು' ಅಂದರು ಅವ್ವನಿಗೆ ಅಪಮಾನವಾದಂತೆನಿಸಿದೆ. ಸಾವಿರಾರು ರೂಪಾಯಿ ದುಡಿಯೋ ಮಗ ಕೇವಲ 50 ರೂಪಾಯಿಗಾಗಿ ಹೆಂಡತಿಯನ್ನು ಕೇಳುವದೆಂದರೆ ಹೇಗೆ ಎಂದು ಅವರಿವರ ಮುಂದೆ ಬೇಸರಮಾಡಿಕೊಂಡದ್ದು ಕೇಳಿ ಅಬ್ಬಾ! ತಾಯಿ ಕರುಳೆ ಎನಿಸಿತು. ಇಂತಹ ಅವಘಡಗಳು ಆಗದಂತೆ ಅವ್ವ ಬಂದಾಗ ಎಚ್ಚರಚಹಿಸುತ್ತೇನೆ.
ಉಳಿದ ಸಮಯದಲ್ಲಿ ತೀರಾ dependent. ಡ್ರೆಸ್, ಬುಕ್ಸ್, writing tabe ಹೀಗೆ ಎಲ್ಲದಕ್ಕೂ ಆಕೆಯೇ ಬೇಕು. ಒಮ್ಮೊಮ್ಮೆ ಮೀಸೆ trim ಮಾಡಲು ಕೂಡಾ.
ಇಷ್ಟೆಲ್ಲ ಹೆಂಡತಿ ಪುರಾಣ ಹೇಳಲು ಕಾರಣ ಇಂದು ಏಪ್ರಿಲ್ ಒಂದು (ಏಪ್ರಿಲ್ ಫೂಲ್ ಅಲ್ಲ) ಹೆಂಡತಿ ರೇಖಾಳ 37 ನೇ ಹುಟ್ಟುಹಬ್ಬ. Gift ತರಲು, ಹೊರಗಡೆ ಕರೆದುಕೊಂಡು ಹೋಗಲು ಬಿಡುವಾಗದಿದ್ದರೂ ಬ್ಲಾಗ್ ನಲ್ಲಿ ಆಕೆಯ+ ನನ್ನ ಸಂಬಂಧದ ನಂಟುಗಳನ್ನು ಬರೆಯಲು ಸಾಧ್ಯವಾಯ್ತಲ್ಲ ಅಷ್ಟೇ ಸಾಕು! I wish her along with you. Happy Birthaday to Rekha.

5 comments:

 1. maduve emba bandhanadalli silukida ella samsarastarige sanna mahiti yannu tilisikottaddakke dhanyavadagalu.

  attigeyavarige namma belated huttu habbada subhashayagalu..shambu yapalparvi and family.

  ReplyDelete
 2. This comment has been removed by the author.

  ReplyDelete
 3. ಬಹುಶ ನೀವು ಬರೆದ ಎಲ್ಲಾ ಬ್ಲಾಗ್ ಗಳ ಮದ್ಯ ಬಹುಮಾನವಿದ್ದರೆ ಇದಕ್ಕೇ 100% ಬರುತ್ತೆ ನೋಡಿ ಸರ್. ನನಗೂ ನಮ್ಮ ವಿವಾಹಿತ ಜೀವನದ ಗುಟ್ಟು ನಿಮ್ಮಿಂದಲೇ ತಿಳಿಯಿತು. ಮದುವೆಯಾಗಿ ದಿನದ ಆಗುಹೋಗುಗಳ ಮದ್ಯೆ ಏನೋ ಒಂಥರ confusion ಇತ್ತು. ಇದನ್ನು ಓದಿದಮೇಲೇ ಎಲ್ಲಾ clear ಆಯಿತು. ನಿಮ್ಮಂಥ ಅನುಭವಸ್ಥ ಯಶಸ್ವೀ ಬರಹಗಾರ/ಗುರು ವಿನ ವಿವಾಹಿತ ಜೀವನವೇ ಇಷ್ಟು confusing ಆಗಿರುವಾಗ ನಮ್ಮ confusion ಹೊಸದೇನಲ್ಲ.

  ReplyDelete
 4. ಎಲ್ಲಿಂದಲೋ ಪ್ರಾರಂಭ ವಗುವ ತಲೆ ಬರಹ ಮತ್ತೆ ಎಲ್ಲಿಗೊ ಬೆಳೆಯುವ ಬರವಣಿಗೆ.
  ಅಧುನಿಕ ಜಗತ್ತಿನಲ್ಲಿ ಸಂಬಂಧ ಗಳ ಸೂಕ್ಷ್ಮ ಅರ್ಥ ಆಗದ ಈ ಸಂಧರ್ಬ ದಲ್ಲಿ.
  ಈ ತರಹ ದ ಲೇಖನಗಳು ಅನಿವಾರ್ಯವಾಗಿವೆ.
  ಖಂಡಿತಾ ವಗಿಯೂ ಒಂದು ಸಣ್ಣ ಕಥೆ ಓದಿದ ಅನುಭವ ವಾಗುತ್ತೆ.

  ReplyDelete
 5. ಲೇಖನದ ಪ್ರಾಮಾಣಿಕತೆಯ ಕೊಂಚ ಅನುಮಾನವಿದೆ.ನಿಮ್ಮ ಹೆಂಡತಿ ರೇಖಾ ಅವರ ಹುಟ್ಟು ಹಬ್ಬದ ಕೊಡುಗೆ ಅವರನ್ನು ಒಲಿಸಿಕೊಳ್ಳಲು ಬರೆದಿದ್ದೀರಿ ಎಂಬ ಅನುಮಾನ.ಬೇರೆಯವರು ಹೆಂಡತಿಗೆ ಹೆದರುವದನ್ನು ಗುಲಾಮತನವೆಂದರೆ,ನೀವು depend ಆಗಿರುವುದು ಗುಲಾಮಗಿರಿಯಲ್ಲವೆ? ಆದರೂ ಪರಸ್ಪರ ಻ರಿತುಕೊಂಡು ನಡೆಯುವದು ಜೀವನವಲ್ಲವೆ?

  ReplyDelete