Wednesday, April 28, 2010

ಒತ್ತಡದ negative ಸಲಹೆಗಳನ್ನು ಆಲಿಸಬೇಡಿ
*
ಕೆಲವರು ಬೇಡವೆಂದರೂ ಉಚಿತ negative ಸಲಹೆ ನೀಡುವುದರಿಂದ ತಪ್ಪಿಸಿಕೊಳ್ಲುವುದು ಹೇಗೆ?
_______ ಬಾರದು ಬಪ್ಪದು, ಬಪ್ಪದು ತಪ್ಪದು ಎಂದು ಬಸವಣ್ಣ ಹೇಳಿದ್ದಾನೆ. ನಮ್ಮ ಸುತ್ತಲೂ ನಡೆಯುವ ಹಾಗೂ ನಮ್ಮ ಮೇಲೆ ಅಪ್ಪಳಿಸಬಹುದಾದ ಯಾವುದೇ ಸಂಗತಿಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಅವುಗಳನ್ನು ಸ್ವೀಕರಿಸಿಯೂ ಸಂತಸದಿಂದ ಬದುಕುವುದೇ ಜಾಣತನ.
Negative ಸಲಹೆಗಳ ಮಹಾಪೂರ ಸಹಜ! ನಾನೂ ಇದರಲ್ಲಿ ಸಾಕಷ್ಟು ಈಸಿದ್ದೇನೆ. ಎದುರಿಸುವಾಗ ಅನೇಕ ಕಿರಿಕಿರಿಗಳನ್ನು ಎದುರಿಸಿ ಈಗ ನಿಶ್ಚಲನಾಗಿದ್ದೇನೆ. ಯಾರು ಏನೇ ಹೇಳಿದರೂ ಕೇವಲ ಕೇಳಿಸಿಕೊಳ್ಳಬೇಕು.
ಇಂಗ್ಲಿಷ್ ನಲ್ಲಿ hearing and listening ಎಂಬ ಪದಗಳಿವೆ. ನೋಡಲು ಒಂದೇ ಅರ್ಥವನ್ನು ನೀಡಿದರೂ ಗ್ರಹಿಕೆ ಭಿನ್ನವಾಗಿವೆ. So you should always hear negative suggetion but not listen them.
ಜವಾರಿ ಭಾಷೆಯಲ್ಲಿ ಈ ಕಿವಿಯಿಂದ ಕೇಳಿ ಈ ಕಿವಿಯಿಂದ ಬಿಡುವುದು ಎಂದು ಸನ್ನೆ ಮಾಡುವಂತೆ.
ಕೆಲವರಿಗೆ ಕೇವಲ negative ಸಲಹೆಗಳನ್ನು ಕೊಡುವ ರೋಗವಿರುತ್ತದೆ. ಕೇಳಲಿ ಬಿಡಲಿ ತಾವೇ ನೀಡುತ್ತಾರೆ. ನಿನ್ನ ಮುಂದಿನ ಯೋಜನೆ ಏನು? ತಾವೇ ಪ್ರಶ್ನಿಸಿ ಆಕಸ್ಮಾತ್ ಹೇಳಿದರೆ ಧಾರಾಕಾರವಾಗಿ ಸಲಹೆಗಳ ಮಹಾಪೂರ ಹರಿಸಿ ಕಂಗೆಡಿಸುತ್ತಾರೆ.
ಸದಾ ಕಾಲ ಈ ರೀತಿಯ ಮನೋಧರ್ಮ ಹೊಂದಿದವರೊಂದಿಗೆ ನಿಮ್ಮ ಯೋಜನೆ, ಯೋಚನೆಗಳನ್ನು ಹಾಗೂ ಕನಸುಗಳನ್ನು ಹಂಚಿಕೊಳ್ಳಬೇಡಿ. ಅವರು ನಿಮ್ಮ ಆತ್ಮಬಲವನ್ನೇ ಕೊಂದುಹಾಕುತ್ತಾರೆ.
ನಿಮ್ಮ ಮೇಲೆ ಭರವಸೆ ಇಟ್ಟಿರುವ, ನಿಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ಅರಿತಿರುವ ಆತ್ಮೀಯರೊಂದಿಗೆ ಮಾತ್ರ ನೀವು ತೆರೆದುಕೊಳ್ಳಿರಿ.
ನಿಮಗೆ ಲಕ್ಷ, ಲಕ್ಷ ಜನ ಪರಿಚಿತರಿರುತ್ತಾರೆ. ಆದರೆ ಅವರೆಲ್ಲರೂ ಆತ್ಮೀಯರಲ್ಲ, ಹಿತೈಶಿಗಳಲ್ಲ. ಈ ಹಿತೈಶಿಗಳಲ್ಲೂ ಕೆಲವರು ಹಿತಶತ್ರುಗಳಿರುತ್ತಾರೆ.
ಈ ರೀತಿ ಸ್ನೇಹಿತರನ್ನು ವಿಂಗಡಿಸಲು ನಿಮ್ಮ ಅರ್ಧ ಆಯುಷ್ಯವನ್ನು waste ಮಾಡಬೇಡಿಬೇಡಿರಿ ನನ್ನ ಹಾಗೆ.
ಎದುರಿಗೆ ಸಲುಗೆಯಿಂದ ಮಾತನಾಡಿದವರನ್ನೆಲ್ಲ ನಂಬಿ ಕೆಟ್ಟವನು ನಾನು. ಈಗ ಎಲ್ಲ ಸೋಸಿ ಅರ್ಧ ಆಯುಷ್ಯ ಮುಗಿದ ಮೇಲೆ ಹಿತೈಷಿಗಳ top list ಇಟ್ಟುಕೊಂಡಿದ್ದೇನೆ. ಉಳಿದ ಮಹನೀಯರು ಏನನ್ನಾದರೂ ಕೇಳಿದರೆ ನಕ್ಕು ಸುಮ್ಮನಾಗುತ್ತೇನೆ.
"ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನು ತುಪ್ಪವ ಹೊಯ್ದಡೆ ಸಿಹಿಯಾಗಬಲ್ಲದೆ, ಕಹಿಯಾಗಬಲ್ಲದೆ? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲಸಂಗಮ ದೇವ" ಎಂದಿದ್ದಾನೆ ಬಸವಣ್ಣ.
Negative ಭಾವ ಹೊಂದಿದವರನ್ನು ಕಟ್ಟಿಕೊಡುವ ರೀತಿ ಎಷ್ಟೊಂದು ಪರಿಣಾಮಕಾರಿಯಾಗಿದೆ ನೋಡಿ. Negative ಎಂಬ ಭಾವ ಬೇವಿನ ಬೀಜವಿದ್ದಂತೆ ಅದನ್ನು ಎಷ್ಟೇ ವಿಧದಲ್ಲಿ ಅಂದರೆ ಬೆಲ್ಲವ ಕಟ್ಟಿ, ಆಕಳ ಹಾಲು, ಜೇನು ತುಪ್ಪ ಸುರಿಸಿ positive ಅಥವಾ sweet ಆಗಿಸಲು ಯತ್ನಿಸುವುದು ಅಸಾಧ್ಯ ಎಂಬುದಲ್ಲದೆ, ಶಿವಭಕ್ತರೊಂದಿಗೆ ಮಾತ್ರ ನುಡಿಯಬಹುದು ಎನ್ನುತ್ತಾನೆ. ಇಲ್ಲಿ ಶಿವಭಕ್ತರೆಂದರೆ positive welwisher ಎಂದೇ ಅರ್ಥ.
ಈ ರೀತಿಯ ಗುಣ ವಿಶೇಷಗಳನ್ನು ತಿಳಿಸುವ ಅನೇಕ ಸಂಗತಿಗಳನ್ನು ನಮ್ಮ epiz ಗಳಲ್ಲಿ, ವಚನಗಳಲ್ಲಿ ಧಾರಳಾವಾಗಿ ಸಿಗುತ್ತವೆಯಾದರೂ ನಾವವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
Negative ಗುಣಧರ್ಮದವರನ್ನು ಬದಲಿಸಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆ ಕೂಡಾ ಏಳುವುದು ಸಹಜ. ಅವರು ಬದಲಾಗಿ, ತಮ್ಮ ಮಾನಸಿಕ ಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಬಯಸಿದರೆ ಮಾತ್ರ ಇದು ಸಾಧ್ಯ.! ಅವರಿಗೆ ಆತ್ಮೀಯರೆನ್ನುವವರು ಯಾರಾದರೂ ಇದ್ದರೆ ಇದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ಮನವ ಸಂತೈಸಿಕೊಳ್ಳಿ ಎಂಬಂತೆ ಕೇವಲ ಉಪೇಕ್ಷಿಸಿ, ನಾವು ನೆಮ್ಮದಿಯಿಂದ ಇರಬೇಕು.
ಎಲ್ಲವನ್ನು, ಎಲ್ಲದನ್ನು ಸರಿಮಾಡಲು ನಾವೇನು ಲೋಕೋದ್ಧಾರಕ ರಾಜಮಹರಾಜರಲ್ಲ. ನಮಗೆ ಸಾವಿರಾರು ವರುಷಗಳ ಆಯುಷ್ಯವೂ ಇಲ್ಲ. ಜ್ಞಾನ ಮಟ್ಟಕ್ಕೆ ನಿಲುಕಿದ ದಿನಗಳಿಂದ ಸಾಯುವ ತನಕ ನೆಮ್ಮದಿಯಿಂದ ವಾಸ್ತವವನ್ನು ಎದುರಿಸಿ, ಸ್ವೀಕರಿಸಿ positive ಆದರೆ ಎಷ್ಟೋ ಆತಂಕಗಳು ದೂರಾಗುತ್ತವೆ.
ಈ ಹಿನ್ನಲೆಯಲ್ಲಿ ಒಬ್ಬ trainer ಆಗಿ, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಅನುಭವಿಸಿದ ತೊಂದರೆಗಳನ್ನು, ಅವುಗಳನ್ನು positive ಅಗಿ ಪರಿವರ್ತಿಸಿದ ಕ್ರಮವನ್ನು ಮುಂದಿನ ಲೇಖನಗಳಲ್ಲಿ ವಿವರಿಸುತ್ತೇನೆ.
So stop talking with negative people. at the same don't aviod them also.
ದೇಹದೊಳಗಿನ ಮಲ-ಮೂತ್ರದಿಂದ ಆಗಾಗ ಹೊರಹಾಕುತ್ತ, ಕೊಂಚ ಸಹಿಸಿಕೊಳ್ಳುತ್ತಾ ನಾವು ಬದುಕಬೇಕಲ್ಲ ಕನಿಷ್ಠ ನಮಗಾಗಿಯಾದರೂ!
God's own place ಗೆ ಹೋಗೋಣ ಬನ್ನಿ
ಹೀಗೆಂದು ಮಲೆಯಾಳಿಗರು ತಮ್ಮ ರಾಜ್ಯ ಕೇರಳಕ್ಕೆ ಹೆಸರಿಸಿದ್ದಾರೆ. ಇಡೀ ದೇಶದಲ್ಲಿ ಅಕ್ಷರಸ್ಥರು, ಜಾಣರು, ಆರ್ಥಿಕವಾಗಿ, ಪ್ರಾಕೃತಿಕವಾಗಿ ಶ್ರೀಮಂತರಾಗಿರುವ ಮಲೆಯಾಳಿಗರು ಇಂಡಿಯಾದ ಚಿತ್ರಣವನ್ನು ಬದಲಾಯಿಸಿದ್ದಾರೆ. ನಮ್ಮ ರಾಜ್ಯದ ಮಂಗಳೂರಿಗೆ ಹೋದಾಗಲೆಲ್ಲ ಪದೇ, ಪದೇ ಅಂದುಕೊಳ್ಳುತ್ತೇನೆ. ಅರೆ! ಇವರೆಷ್ಟು different ಆಗಿದ್ದಾರಲ್ಲ ಎಂದು.
ಮಾತು, ನಡೆ, ಆಲೋಚನೆ ಕ್ರಮ, standerd of living ಎಲ್ಲದರಲ್ಲೂ ಐರೋಪ್ಯರನ್ನು ಹೋಲುವ ಮಂಗಳೂರಿನ ಕಡಲ ತೀರದ ಭಾರ್ಗವರಿಗೆ ಪ್ರೇರಣೆಯಾದರೂ ಯಾರು? ಎಂದು ಆಲೋಚಿಸಿದರೆ ಅದಕ್ಕೆ ಉತ್ತರ ಕೇರಳದಲ್ಲಿ ಸಿಗುತ್ತದೆ. ಕೇರಳಿಗರ ಪ್ರಭಾವ ಮಂಗಳೂರಿನವರಿಗಿದೆ. ಹೀಗಾಗಿ ಮಂಗಳೂರು ರಾಜ್ಯದಲ್ಲಿ ಭಿನ್ನವಾಗಿದ್ದರೆ, ಇಡೀ ದೇಶದಲ್ಲಿ ಕೇರಳಿಗರು ಭಿನ್ನವಾಗಿದ್ದಾರೆ.
ನಮ್ಮನ್ನು ಬಡಿದೆಬ್ಬಿಸುವ ಎಲ್ಲ ಭಾವನೆಗಳನ್ನು ಬದಿಗೊತ್ತಿ ವಾಸ್ತವದಲ್ಲಿ ಬದುಕಿದರೆ practicle ಎಂದು ಕರೆಯುತ್ತೇವೆ. practicle approach ಎಲ್ಲದರಲ್ಲೂ ಯಸಸ್ಸನ್ನು ಕೊಡುತ್ತದೆ. ಭಾವನಾತ್ಮವಾಗಿ ಕೊಂಚ ಕಿರಿಕಿರಿ ಎನಿಸಿದರೂ ಭೌತಿಕವಾಗಿ ಯಶಸ್ಸಂತೂ ಸಿಗುತ್ತದೆ.
2004 ರಲ್ಲಿ ಕೇರಳಕ್ಕೆ ಹೋಗಿ ನಾಲ್ಕಾರು ಕಡೆ ಉಪನ್ಯಾಸ ನೀಡಿ ಬಂದಿದ್ದೆ. ಈಗ ನನ್ನ ಆಲೋಚನಾ ಕ್ರಮ ಒಂಚೂರು ಬದಲಾಗಿದೆ.
ಇಂಗ್ಲೆಂಡ್ ಪ್ರವಾಸದ ನಂತರ ತುಂಬಾ practicle ಆಗಲು ಸಾಧ್ಯವಾಗದಿದ್ದರೂ, practicle ಆಗಿರುವುದನ್ನು ಅರಿತುಕೊಂಡು ಅವಲೋಕಿಸಿ ದಕ್ಕಿಸಿಕೊಳ್ಳಲು ಸಾಧ್ಯವಾಗಿದೆ,
ದೇಶ ನೋಡಿ, ಕೋಶ ಓದಿ ನಮ್ಮ ಆಲೋಚನಾ ಕ್ರಮವನ್ನು ಖಂಡಿತಾ ಬದಲಿಸಿಕೊಳ್ಳಲು ಸಾಧ್ಯ. ಆದರೆ ದೇಶ ನೋಡುವ ಕ್ರಮ ಬದಲಾಯಿಸಬೇಕು. ಕೇವಲ tour ಆಗಿರಬಾರದು ಅಷ್ಟೆ! ಅದು ಅಧ್ಯಯನವಾಗಬೇಕು. psychology, Anthropology ನನ್ನ ಆಸಕ್ತಿ ವಿಷಯಗಳು ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೂ HRD ಅಧ್ಯಯನದ ಸಂದರ್ಭದಲ್ಲಿ ಜನಾಂಗೀಯ ಅಧ್ಯಯನ, ವ್ಯಕ್ತಿಗಳನ್ನು ಅರಿಯುವುದು ಆಪ್ತವೆನಿಸಿತು.
ಇಂಗ್ಲೆಂಡಿನ ಸುಂದರ ಪ್ರಕೃತಿಯನ್ನು ಆಸ್ವಾದಿಸುವ ಜೊತೆಗೆ ಅಲ್ಲಿನ ಜನರನ್ನು ಅರಿಯಲು ತಿಣುಕಾಡಿದೆ. ಭಾರತದ ಬೃಹತ್ ರಾಷ್ಟ್ರದಲ್ಲಿ ಸಾಕಷ್ಟು ವಿಭಿನ್ನತೆಯಿದೆ.
Unity in divorsity ಎಂಬ ಮಾತು ಅಕ್ಷರಶ: ಸತ್ಯ.
ಇಡೀ ಇಂಡಿಯಾ ಸುತ್ತಿದರೆ ಸಾಕು, ಹತ್ತಾರು ದೇಶಗಳನ್ನು ಸುತ್ತಿದ ಅನುಭವ ದಕ್ಕುತ್ತದೆ.
ಆಹಾರ-ವಿಹಾರ, ಉಡುಗೆ-ತೊಡುಗೆ, ಸಂಸ್ಕಾರ-ಸಂಸ್ಕೃತಿ, ಬೌಗೋಳಿಕ ಸೌಂದರ್ಯಗಳಲ್ಲಿ ಭಿನ್ನತೆಯನ್ನು ಹೊಂದಿದ ಜಗತ್ತಿನ ಏಕೈಕ ರಾಷ್ಟ್ರವೆಂದರೆ 'ಭಾರತ'.
ಒಂದು ದೇಶವೆಂದರೆ ನಿಖರ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ ಇರುತ್ತದೆ ಎಂದು generlise ಮಾಡುವವರು India ಕ್ಕೆ ಬಂದಾಗ ಅಚ್ಚರಿ ಪಡುತ್ತಾರೆ.
North ನಲ್ಲಿ ಹಿಂದಿ, south ನಲ್ಲಿ ದ್ರಾವಿಡ ಹೀಗೆ ಭಾಷೆಗೆ - ಸಂಸ್ಕೃತಿಗೆ ಭಿನ್ನತೆಯ ಗೊಂದಲಕ್ಕೆ ವಿದೇಶಿಯರು ಸಿಕ್ಕ ಪ್ರತಿಫಲವೇ 'Unity In Divorsity'ಎಂಬ ಭಾವ ಸಾಬೀತಾಗಿದ್ದು!
ಈಗ ಇಷ್ಟೆಲ್ಲ ಟೂರಾಯಣ ಪ್ರಸ್ತಾಪವಾಗಲು ಕಾರಣ may 1 ರಂದು ಕೇರಳದ ತಿರುವನಂತಪುರದಲ್ಲಿ ಆಯೋಜಿಸಿರುವ ಕಾಯಕ ದಿನಾಚರಣೆಗೆ ಅತಿಥಿಯಾಗಿ ಆಹ್ವಾನಿತನಾಗಿದ್ದೇನೆ. ಕೇರಳ ನಿರಾಕಾರ ಹಾಗೂ ಅಲ್ಲಿನ ಬಸವ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿ, ವಿಶೇಷ ಉಪನ್ಯಾಸಕ್ಕೆ ಆಹ್ವಾನಿಸಿರುವುದು ಜವಾಬ್ದಾರಿ ಹೆಚ್ಚಿಸಿದೆ.
ಬಸವಣ್ಣನ ಕಾಯಕ - ದಾಸೋಹ ಸಿದ್ದಾಂತವನ್ನು ಇಂಗ್ಲಿಷ್ ನಲ್ಲಿ ಮಾತನಾಡಬೇಕಿದೆ. ಹಿರಿಯ ಬಸವ ಜೀವಿ ಅರವಿಂದ ಜತ್ತಿ ಅವರು ಕೇರಳ ಬಸವ ಸಮಿತಿ ಕಾರ್ಯಕ್ರಮಕ್ಕೆ ತೆರಳಲು ಸೂಚಿಸಿ ಒಪ್ಪಿಸಿದ್ದಾರೆ.
ಪ್ರಸನ್ನರವರು, ವೆಲಾಯುಧನ್ ಪಿಳ್ಳೆ, ಅಲ್ಲದೆ ಅಲ್ಲಿನ ಸಚಿವರು, ಶಾಸಕರು, ಸಚಿವಾಲಯದ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಬಸವ ತತ್ವಕ್ಕೆ ನಿಜವಾದ ವಿಶ್ವಮಾನ್ಯತೆ ಈಗ ಆರಂಭವಾಗಿದೆ. ಪ್ರಗತಿಪರ ಸರಕಾರಗಳು, ವಿಶ್ವವಿದ್ಯಾಲಯಗಳು ವಚನ ಸಾಹಿತ್ಯದ ವಿಸ್ತಾರವನ್ನು ಸ್ವೀಕರಿಸಿದ್ದಾರೆ.
ಬಸವಣ್ಣನ ನಾಡಿನ ನೆಲದ ಮಕ್ಕಳಾದ ನಾವು ವಚನ ಸಾಹಿತ್ಯ, ಬಸವ ತತ್ವದಿಂದ ವಿಮುಖರಾಗುತ್ತಲಿದ್ದೇವೆ. ಎಂಬ ಬೇಸರದ ಮಧ್ಯ ಇಂತಹ ಕಾರ್ಯಕ್ರಮಗಳು ನಮ್ಮ ಬಸವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ.
ನೀವು ಬನ್ನಿ ಹೋಗಿ ಬರೋಣ God's own place ಎಂಬ ನಾಡಿಗೆ, ಬಂದ ಮೇಲೆ ಅನುಭವಗಳನ್ನು ಹಂಚಿಕೊಳ್ಳುವೆ------

Monday, April 26, 2010

ನಳನಳಿಸುವ ಹೂದೋಟದ ಕಂಪನ

ನೀನು ಅಷ್ಟೊಂದು over ಆಗಿ ನಡೆದುಕೊಳ್ಳಬಹುದು ಅಂದುಕೊಂಡಿರಲಿಲ್ಲ. ನಿನ್ನ ಆಕ್ರೋಶ, ಸಿಟ್ಟನ್ನು ಕಂಡಾಗಲೆಲ್ಲ ಅಚ್ಚರಿ, ಹತ್ತಾರು ಬಾರಿ ಎಚ್ಚರಿಸಿದರೂ ನೀನು ಬದಲಾಗಲೇ ಇಲ್ಲ.
ಸಾಕು, ಇನ್ನು ಮುಂದೆ ನಿನ್ನನು ಬದಲಾಯಿಸುವ ಪ್ರಯತ್ನ ಮಾಡಬಾರದು ಅನಿಸಿತು.
ಈ ರೀತಿ ಆಕ್ರೋಶ ಇಟ್ಟುಕೊಂಡಿರುವ ನಿನ್ನ ಸಹವಾಸವೇ ಬೇಡ ಅನಿಸಿ ಸುಮ್ಮನಾಗಿಬಿಟ್ಟೆ. ನಿನಗೆ ಕಾಲ್ ಮಾಡುವುದಾಗಲಿ, sms ಕಳಿಸುವುದಾಗಲಿ ಬಿಟ್ಟು ಬಿಟ್ಟೆ.
ಆದರೆ ನೀ ಬಿಡಬೇಕಲ್ಲ. ಬಿಟ್ಟನೆಂದರೂ ಬಿಡದೀ ಮಾಯೆ ಎಂಬಂತೆ ಮಾತ್ತೆ ನೀನೆ call ಮಾಡಿದಾಗ ಅಚ್ಚರಿ. ಯಾಕೋ! ಎಷ್ಟು ಸೊಕ್ಕು ನಿನಗೆ, ಏನೋ ಸಿಟ್ಟಿನಲ್ಲಿ ನಾಲ್ಕು ಮಾತಾಡಿದರೆ ನನ್ನನ್ನು ದೂರ ಮಾಡುವಷ್ಟು ಧೈರ್ಯ ಏನೋ ಎಂದು ರೇಗಾಡಿದೆ.
ನಿನ್ನ ಕೋಪ, ಹಾರಾಟವನ್ನು ನೋಡಿದಾಗಲೆಲ್ಲ ನಿನ್ನ ಸಹವಾಸವೇ ಸಾಕೆನಿಸುತ್ತಿತ್ತು.
cool ಆದ ಮೇಲೆ ಅತೀಯಾಗಿ emotional ಆದಾಗಿನ ನಿನ್ನ attitude ವಿಚಿತ್ರವೆನಿಸಿತು. ಕೂಡಲೇ ಹೊರಟು ಬಾ ಎಂದಾಗ ಆತಂಕದಿಂದ ಕಾರು ಹತ್ತಿದೆ.
ನಿನ್ನ ಮನೆಗೆ ತಲಪಿದಾಗ ಸರಿರಾತ್ರಿ 12.30. ಕಣ್ಣಲ್ಲಿ, ಕಣ್ಣಿಟ್ಟು ಮನೆಯಂಗಳದಲಿ ಕಾಯುತ್ತಾ ಕುಳಿತಿರುವುದನ್ನು ಕಂಡಾಗ ಹೇಗಾಗಿರಬೇಡ.
ಅದೇ ಪುಟಿಯುವ ಉತ್ಸಾಹ, ಪ್ರೇಮ ಭಾವ. ನೀರವ ರಾತ್ರಿಯ ಮೌನವನ್ನು ಮುರಿಯುವ ಹಾಗೆ ಬಿಗಿದಪ್ಪಿ ಮುತ್ತಿಟ್ಟಾಗ ಅಯ್ಯೋ ಬದುಕೇ ಎನಿಸಿತು. ದರ ದರ ಎಳೆದುಕೊಂಡು ಹೋಗಿ ಬಾಗಿಲು ಹಾಕಿ ಅಳಲು ಪ್ರಾರಂಭಿಸಿದಾಗ ಏನೂ ತೋಚಲಿಲ್ಲ. ಯಾವುದನ್ನು ಸ್ವೀಕರಿಸಬೇಕು. ನಿನ್ನ ಪ್ರೀತಿಯನ್ನೋ, ಕೋಪವನ್ನೋ.
ಎದೆ ಮೇಲೆ ಮುಖವಿಟ್ಟು, ಕೂದಲಲಿ ಕೈಯಾಡಿಸುತ್ತಾ ಇಡೀ ರಾತ್ರಿ ಮನದ ಮಾತು ಹರವಿದಾಗ ದಂಗಾದೆ.
ಅರೇ ಈ ಸುಡುಗಾಡು ಪ್ರೀತಿಯೇ ಹೀಗೆ. ಇದನ್ನು ವ್ಯಾಖ್ಯಾನಿಸುವುದು ಕಷ್ಟ ಅಂದುಕೊಂಡು ಸುಮ್ಮನಾದೆ.
ಸ್ನಾನ ಮಾಡಿ fresh ಆಗಿ ರೂಮ್ ಗೆ ಬಂದಾಗ ನಿನ್ನ ಮೊಬೈಲ್ ತೆಗೆದು ಕ್ಲಿಕ್ಕಿಸಿದ ಹತ್ತಾರು photo ಗಳು ಈಗೆಲ್ಲಿವೆ? ಪ್ರೀತಿಗಿರುವ ಮುಖಗಳನ್ನು ಅರಿಯುವುದು ಕಷ್ಟ ಅಂತ ನೀನು ಹೀಗೆ ವರ್ತಿಸಿದಾಗಲೆಲ್ಲ ಅಂದುಕೊಳ್ಳುತ್ತೇನೆ.
ನೀನು ಇಷ್ಟೊಂದು cool ಆಗಿರಬಹುದು ಅಂದುಕೊಂಡಿರಲಿಲ್ಲ. ಪ್ರಿಜ್ ನಿಂದ ಹೊರ ಬಂದ ಬೀರ್ ಬಾಟಲಿಗಳು, ಅಂದವಾಗಿ ನಲಿದಾಡುತ್ತಿದ್ದ ಟ್ಯಾಮ್ಲರ್ ಗಳು, ಆಕರ್ಷಣೀಯವಾಗಿ ನಲಿದಾಡುತ್ತಿದ್ದ snacks ಗಳು.
ಒಂದೆರಡು ಗ್ಲಾಸ್ ಬೀರ್ ಹೊಟ್ಟೆಗಿಳಿದಾಗ ನಿನೆಲ್ಲಿ ಮತ್ತೆ ಆಕ್ರೋಶಗೊಳ್ಳುತ್ತಿ ಅಂದುಕೊಂಡಿದ್ದೆ. ಹಾಗಾಗಲಿಲ್ಲ. ಮತ್ತದೇ ದಿವ್ಯ ಮೌನ.
ನೀನು ಹೀಗೆ ಕುಡಿಯುವುದು ಸರೀನಾ ಅಂದೆ? ಕೊಂಚ ಅಳುಕುತ್ತಾ ಹಾಗಿದ್ದರೆ ನಿನ್ಯಾಕೆ ಕುಡಿಯುತ್ತಿಯಾ habit ಅನ್ನುವುದು ಎಲ್ಲರಗೂ ಅಷ್ಟೇ.Gender discrimination ಇರಬಾರದು ಎಂದು ಭಾಷಣ ಬಿಗಿಯುವ ನಿನ್ನಂತವವರು, ಹೆಂಗಸರು ಕುಡಿದ ಕೂಡಲೇ ಯಾಕೆ ಕಂಗಾಲಾಗುತ್ತೀರಿ.
ಹೀಗೆ ಸಾಗಿದ ನಿನ್ನ ಚರ್ಚೆಯನ್ನು ಒಪ್ಪಬೇಕಲ್ಲ. ಮಧ್ಯರಾತ್ರಿಯವರೆಗೆ ಮೌನವನ್ನು ಬೆಚ್ಚಿಸುವಂತಹ ಕುಡಿತ ಅರ್ಥವಾಗಲಿಲ್ಲ.
ಮಾತು - ಮೌನ, ಕೋಪ, ಸಹನೆಗಳ ಗೊಂದಲದಲ್ಲಿ ನನ್ನನ್ನು ದೂಡುತ್ತಾ ಗೆಲ್ಲುವ ನಿನ್ನ ಪ್ರೀತಿಯನ್ನು ವಿಶ್ಲೇಷಿಸಲಾಗದು. ಅತಿಯಾದ ಪ್ರೀತಿ ಅನುಮಾನ ಕೋಪಕ್ಕೆ ಕಾರಣವಾಗಬಹುದು ಎಂಬ ಮಾತುಗಳು ನೆನಪಾಗಿ ಮೌನಕ್ಕೆ ಶರಣಾದೆ. ನಿನ್ನ ಪ್ರೀತಿಯ ಹಾಗೆ-------

ಬೆಳೆದ ಬಳಗ, ಹೆಚ್ಚಾದ ಜವಾಬ್ದಾರಿ


ಏನೋ ಇರಲಿ ಖಾಸಗಿ ಬರಹಕ್ಕೆ ಅಂದುಕೊಂಡು ಬ್ಲಾಗ್ ಪ್ರಾರಂಭಿಸಿದೆ. ರಜೆಯಿದ್ದ ಕಾರಣ ಬರೆಯಲು ಸಮಯ ಸಿಕ್ಕಿತು. ಖಾಸಗಿ ಬರಹಕ್ಕೆ ಸಿಕ್ಕ ಪ್ರೇರಣೆ ಉತ್ಸಾಹ ಹೆಚ್ಚಿಸಿದೆ. ಮಾನಸೋಲ್ಲಾಸ ಹಾಗೂ ಲವ್ ಕಾಲವನ್ನು ನೂರಾರು ಸ್ನೇಹಿತರು ಮೆಚ್ಚಿಕೊಂಡಿದ್ದಾರೆ.
ನನ್ನೊಳಗಿನ ಬರಹಗಾರ ಜಾಗೃತನಾಗಿದ್ದಾನೆ. ನಿರಂತರ ಬರಹಕ್ಕೆ ಆದರ್ಶಪ್ರಾಯರಾಗಿದ್ದ 'ಲಂಕೇಶ' ಬರೆಯುವಾಗಲೆಲ್ಲ ತೀವ್ರವಾಗಿ ಕಾಡುತ್ತಾರೆ. ಆಪ್ತವಾಗಿ ಅನ್ನುವದಕ್ಕಿಂತ, ಪ್ರಾಮಾಣಿಕವಾಗಿ ಬರೆಯಬೇಕೆನ್ನಿಸಿದೆ.
ಮಾಧ್ಯಮ ಸ್ನೇಹಿತರನೇಕರು ಆತ್ಮೀಯರಾಗಿದ್ದಾರೆ. ದಟ್ಸ ಕನ್ನಡ, ಅವಧಿಯಂತಹ ಹಿರಿಯ ಪತ್ರಿಕೋದ್ಯಮಿಗಳು ನನ್ನ ಬ್ಲಾಗ್ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವುದು ಆರೋಗ್ಯಕರ.
ಹೊರನಾಡ ಕನ್ನಡಿಗರ ಸಂಪರ್ಕ ಹೆಚ್ಚಾಗಿದೆ. ಟೀಕೆ, ಟಿಪ್ಪಣಿಗಳನ್ನು , ಆಪ್ತ ಸಲಹೆಗಳನ್ನು ನಿಮ್ಮಿಂದ ನಿರಿಕ್ಷಿಸುತ್ತೇನೆ.

Sunday, April 25, 2010

ಹೂವಿನಹಡಗಲಿಯಲ್ಲಿ ಶೇಕ್ಸಪೀಯರ್ ಕಂಪು

ಹೂವಿನ ಹಡಗಲಿ ಎಂದ ಕೂಡಲೇ ಎಂ. ಪಿ. ಪ್ರಕಾಶ್ ನೆನಪಾಗುತ್ತಾರೆ. ಅವರ ರಂಗ ಚಟುವಟಿಕೆಗಳು, ರಾಜಕೀಯ ಅಭಿವೃದ್ಧಿ ಕಣ್ಣೆದುರು ನಿಲ್ಲುತ್ತವೆ. ಪ್ರಕಾಶಕರಿಂದಾಗಿ ಹಡಗಲಿ ರಾಜ್ಯಕ್ಕೆಲ್ಲ ಪರಿಚಯವಾಯಿತು. ವರ್ತಮಾನದಲ್ಲಿ ರಾಜಕೀಯ ಮೀಸಲಾತಿ ಕಾರಣಗಳಿಂದಾಗಿ ಪ್ರಕಾಶ್ ಅವರ politics ಈಗ ಹರಪನಹಳ್ಳಿಗೆ shift ಆಗಿದೆ.
ಹೈಸ್ಕೂಲ್ ಗೆಳೆಯ ಶಾಂತಮೂರ್ತಿ ಇಲ್ಲಿನ GBR collage ನಲ್ಲಿ ಇಂಗ್ಲಿಷ್ ವಿಭಾಗದ HOD. ಭಾಷಣ, ಬರಹಗಳ ಮೂಲಕ ಪ್ರಚಾರದಲ್ಲಿದ್ದಾನೆ.
ಕಳೆದ ನಾಲ್ಕು ವರ್ಷಗಳಿಂದ GBR collage ನಲ್ಲಿ optional English ಪ್ರಾರಂಭಿಸಿದ್ದಾನೆ. ಮೊದಲ ವರ್ಷದ ಕಾರ್ಯಕ್ರಮಕ್ಕೆ ಹೋಗಿ shakespeare ಕುರಿತು ಮಾತಾಡಿ ಬಂದಿದ್ದೆ.
ಈಗ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸದ ನಂತರ ಬಂದು ಹೋಗು ಎಂದ.
ನಿನ್ನೆ 24 ರಂದು shakespear's day ಆಚರಿಸಿದರು. ಎಪ್ರಿಲ್ 23 ಶೇಕ್ಸಪಿಯರ್ ಹುಟ್ಟುಹಬ್ಬವೂ ಹೌದು, ಪುಣ್ಯಸ್ಮರಣೆಯೂ ಹೌದು. ದಟ್ಸ ಕನ್ನಡದಲ್ಲಿ ಪ್ರಕಟಗೊಂಡ ಲೇಖನ ಅನೇಕರ ಮೆಚ್ಚುಗೆಯನ್ನು ಪಡೆದಿದೆ. ಅದನ್ನು ಆಧಾರವಾಗಿಟ್ಟುಕೊಂಡೇ ಹಡಗಲಿಯಲ್ಲಿ ಮಾತನಾಡಿದೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಿದ್ದು ಅಭಿನಂದನೀಯ.ಪ್ರಾಚಾರ್ಯ ಕಾಲವಾಡ ಮತ್ತು ಶಾಂತಮೂರ್ತಿ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು. J.S.S., B.Ed collage ನ ಪ್ರಾಧ್ಯಾಪಕ ವೀರಯ್ಯ ನವರನ್ನು ಹಾಗೂ ನನ್ನನ್ನು ಸನ್ಮಾನಿಸಿದರು.
ತೋಂಟದಾರ್ಯ ಮಠದ ಶಿವಾನುಭವ ಸಮಿತಿ ಚೇರ್ ಮನ್ ಆಗಿ ಒಂದು ವರ್ಷ ನುರಾರು ಜನರ ಸನ್ಮಾನದಲ್ಲಿ ಪಾಲ್ಗೊಂಡ ಪ್ರತಿಫಲವಾಗಿ ಸನ್ಮಾನವೆಂದರೆ ಪುಳಕಿತವಾಗುವುದಿಲ್ಲ.ಆದರೆ ಇಲ್ಲಿ ಸ್ನೇಹಿತ ಶಾಂತಮುರ್ತಿ ಹಾಗೂ ಅವರ ವಿದ್ಯಾರ್ಥಿಗಳ ಪ್ರೀತಿಗಾಗಿ ಪುಳಕಿತನಾದೆ.
ಉಳಿದ ವಿಭಾಗಗಳ ಪ್ರಾಧ್ಯಾಪಕರು, ಹಡಗಲಿಯ ಕಲಾವಿದ - ಶಿಕ್ಷಕ ಸುರೇಶ ಅಂಗಡಿ, ಮಾಧ್ಯಮ ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶೇಕ್ಸಪಿಯರ್ ಹೆಸರಿನಲ್ಲಿ, ರಾಜಕಮಾರ ಜನ್ಮದಿನದಂದು ಸನ್ಮಾನ ಗೊಂಡಿದ್ದು ಖುಷಿ ಆಯಿತು.
ಹೊಸ ತಲೆಮಾರಿನ ಯುವಕರು ಭಾಷಾಭಿರುಚಿನ್ನು ಬೆಳೆಸಿಕೊಳ್ಳಬೇಕಾಗಿದೆ. ಓದುವ-ಬರೆಯುವ ಪ್ರವೃತ್ತಿ ಕಡಿಮೆಯಾಗಿದೆ. ನಾವು ವಿದ್ಯಾರ್ಥಿಗಳಾಗಿದ್ದಾಗ at least ಸ್ನೇಹಿತರಿಗೆ ಪತ್ರ ಬರೆಯುವುದರ ಮೂಲಕ ಕಾವ್ಯ ಭಾಷೆಯನ್ನು ಜೀವಂತವಾಗಿಟ್ಟುಕೊಂಡು ಭಾಷಾಭಿರುಚಿ ಬೆಳೆಸಿಕೊಂಡೆವು.
ಈಗಿನ sms , mobile ಯುಗದಲ್ಲಿ ಭಾಷೆ handicap ಆಗಿದೆ. ಸತ್ವ ಕಳೆದುಕೊಂಡಿದೆ. ಭಾಷೆಯಲ್ಲಿ ಲಯವಿಲ್ಲ, ಭಾವನೆಗಳಲ್ಲಿ ರಸಿಕತೆಯಿಲ್ಲ.
ನಮ್ಮ ಪ್ರಾಧ್ಯಾಪಕರಿಗಿದ್ದ ಜೀವನೋತ್ಸಾಹ, ನಮ್ಮಲ್ಲಿರಲಿಲ್ಲ. ಈಗ ನಮ್ಮಲ್ಲಿದ್ದ ಜಿವನೋತ್ಸಾಹ ನಮ್ಮ ವಿದ್ಯಾರ್ಥಿಗಳಲ್ಲಿ ಉಳಿದಿಲ್ಲ. ಇದನ್ನೆ generation gap ಎಂದು ಆರೋಪಿಸುತ್ತೇವೆ.
ಶೇಕ್ಸಪಿಯರ್ ನ್ನು, ಇಂಗ್ಲೆಂಡಿನ ನೆನಪನ್ನು ಮತ್ತೊಮ್ಮೆ ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟ ಸ್ನೇಹಿತರಿಗೆ thanks ಹೇಳಿ ಊರಿಗೆ ಮರಳಿದೆ.

Friday, April 23, 2010


Subconscious mind ನ ಸಹಜ ವರ್ತನೆ
* ಸುಪ್ತ ಮನಸ್ಸಿಗೆ ಒಂದು ವೇಳೆ suggestion ನೀಡದಿದ್ದರೆ ಹೇಗೆ ವರ್ತಿಸುತ್ತದೆ?
______ ನಮಗೆ suggestion ನೀಡುವ ಇರಾದೆ ಇರದಿದ್ದರೂ ನಾವು ಬಾಲ್ಯದಿಂದಲೂ ನೀಡುತ್ತಲೇ ಇರುತ್ತೇವೆ. ಬಹುಪಾಲು ಸಂದೇಶಗಳು negative ಆಗಿರುತ್ತವೆ.
ನಾನು ಯಶಸ್ವಿಯಾಗುವುದಿಲ್ಲ, ಭಯ ಆಗ್ತಿದೆ, ಅಸಹಾಯಕನಿದ್ದೇನೆ, ಜೀವನದಲ್ಲಿ ಉನ್ನತ ಸ್ಥಾನಕ್ಕೇರುವುದಿಲ್ಲ. ಹೀಗೆ ಹತ್ತು ಹಲವು ಸಂದೇಶಗಳು ರವಾನೆಯಾಗುತ್ತಲೇ ಇರುತ್ತವೆ. ನಮಗರಿವಿಲ್ಲದಂತೆ Self suggestion ನಡದೆ ಇರುತ್ತದೆ. ಅದು ನಮಗೆ ವಿವಿಧ ಪ್ರಸಂಗಗಳಲ್ಲಿ ಗೊತ್ತಾಗುತ್ತದೆ.
ನಾವು ರಸ್ತೆಯಲ್ಲಿ ಹೊರಟಿರುವಾಗ accident ಆಗಿರುವುದನ್ನು ನೋಡಿ ನಿಲ್ಲುತ್ತೇವೆ. ಒಂದೇ ಘಟನೆಯನ್ನು ಹತ್ತಾರು ಜನ, ಹತ್ತಾರು ರೀತಿಯಲ್ಲಿ ಸ್ವೀಕರಿಸಲು ಕಾರಣ ಅವರ sub conscious mentality.
ಭಿನ್ನ ಪ್ರತಿಕ್ರಿಯೆಗಳನ್ನು ಈಗ ಗಮನಿಸೋಣ. ಕೆಲವರು ನಿಂತುಕೊಂಡು ಅಂಬುಲೆನ್ಸ್ ಗೆ phone ಮಾಡಿ, ಪೋಲಿಸರಿಗೆ ವಿಷಯ ತಿಳಿಸಿ, ಸೂಕ್ತ ಚಿಕಿತ್ಸೆಗಾಗಿ ಪರದಾಡುತ್ತಾರೆ. ಮತ್ತೆ ಕೆಲವರು ದೂರದಲ್ಲಿ ನಿಂತು ಮೋಜು ನೋಡುತ್ತಾರೆ. ಅಯ್ಯೋ ನಮಗ್ಯಾಕೆ ಬಿಡಿ ಊರ ಉಸಾಬರಿ, accident ವ್ಯವಹಾರಗಳಿಗೆ ಮೂಗು ತೂರಿಸಿದರೆ ಪೋಲಿಸರ ಹತ್ತಿರ ಅಲೆದಾಡಬೇಕಾಗುತ್ತದೆ ಎಂದು ಗೊಣಗುತ್ತಾ ಸಾಗುತ್ತಾರೆ.
ನೀವು ಯಾವ ವರ್ಗಕ್ಕೆ ಸೇರುತ್ತೀರಿ ಎಂದು ನೀವೇ ವಿಚಾರಿಸಿ ನೋಡಿ.ನೀವು ಯಾವ ರೀತಿ react ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ಆಲೋಚಿಸಿರುವುದಿಲ್ಲವಾದರೂ ಯಾಕೆ ಹೀಗೆ sudden react ಮಾಡುತ್ತೀರಿ? ಅದಕ್ಕೆ ಕಾರಣ ನಿಮ್ಮ ಪೂರ್ವ ನಿಯೋಜಿತ subconscious mentality.
ಇದೊಂದು ಉದಾಹರಣೆ. ಹೀಗೆ ಬೇರೆ, ಬೇರೆ ಘಟನೆಗಳಿಗೆ ನೀವು ಕೊಡುವ reaction ಗೆ ನಿಮ್ಮ ಮನೋಸ್ಥಿತಿ ಕಾರಣ.
ಈ ರೀತಿಯ negative ಆಲೊಚನೆಗಳನ್ನು ಬದಲಾಯಿಸಿಕೊಳ್ಳುವುದೇ development ಅಥವಾ transformation ಎಂದು ಕರೆಯುತ್ತಾರೆ.
ಬದುಕಿನಲ್ಲಿ ಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವ ಇಚ್ಛೆ ಹೊಂದಿ, ಬದಲಾಗಬೇಕು, ಯಶಸ್ಸು ಗಳಿಸಬೇಕು ಎಂದು ಬಯಸುವವರು ಈಗ ತಮ್ಮ mentality, attitude change ಮಾಡಿಕೊಳ್ಳಬೇಕು, ಆಗ ನಿತ್ಯದ ಧ್ಯಾನದಂತೆ ಮಂತ್ರ, ಜಪ-ತಪದಂತೆ subconscious mind ಗೆ positive ಸಂದೇಶಗಳನ್ನು ನೀಡುತ್ತಾ ಹೋಗಬೇಕು.
ಮೇಲಿನ accident ಘಟನೆ ಮತ್ತೆ ಮರುಕಳಿಸಿದರೆ, ನಾನು ನಿಂತು ಸಹಾಯ ಮಾಡಬೇಕು. ಮಾನವೀಯತೆ ಮರೆಯಬೇಕು ಎಂಬ ಸಂದೇಶ ನಿಡಿದ್ದೇ ಆದರೆ ನೀವು ನಿಮಗರಿವಿಲ್ಲದಂತೆ ಅಲ್ಲಿ ನಿಂತು ನೆರವು ನಿಡುತ್ತೀರಿ ಎಂಬುದರಲ್ಲಿ ಸಂಶಯವೇ ಬೇಡ, ಅದೇ auto suggestion ಮಹಿಮೆ.
ಇದೊಂದು ಸಾಮಾನ್ಯ example, ಇದೇ ರೀತಿ ಉನ್ನತ ಸಾಧನೆ ಮಾಡುವಲ್ಲಿ, ಭಯ, ಆತಂಕ, ಕೀಳರಿಮೆ ನಿವಾರಿಸಿಕೊಳ್ಳಲು, ಸಂತಸದ ಕ್ಷಣಗಳನ್ನು ದಕ್ಕಿಸಿಕೊಳ್ಳಲು subconscious mentality ಯ ಬದಲಾವಣೆಗಾಗಿ auto suggestion ನಿಡುತ್ತಲೇ ಇರಬೇಕು. ಧ್ಯಾನ, ಪ್ರಾರ್ಥನೆ, ಪೂಜೆ, ಜಪ, ತಪದಂತೆ ಈ ಹಿಂದೆ ನಾ ಹೇಳಿದಂತೆ.
ಯಾಕೆಂದರೆ ಇದು over night ಸಾಧಿಸುವ ಕಾರ್ಯವಲ್ಲ. ಇದಕ್ಕೆ ನಿರಂತರ ಸಾಧನೆ ಬೇಕಾಗುತ್ತದೆ.
ಬೆಳಿಗ್ಗೆ ಎದ್ದ ಕೋಡಲೇ ಮನದಲ್ಲಿ ಸುಳಿಯುವ 'ಇಲ್ಲ' ಎನ್ನುವ ಸಂದೇಶಗಳನ್ನು 'ಹೌದು' ಎಂದು ಬದಲಾಯಿಸಿಕೊಂಡೇ ಕೆಲಸ ಪ್ರಾರಂಭಿಸಬೇಕು.
ಇಲ್ಲದಿದ್ದರೆ ಎಲ್ಲದಕ್ಕೂ 'ಇಲ್ಲಪ್ಪ ರೋಗ' ಬಡಿದುಕೊಳ್ಲುತ್ತದೆ. ನಾವು ಬೆಳೆದ ಪರಿಸರ, ಬಾಲ್ಯ, ಪಾಲಕರ ಮನೋಧರ್ಮ ಪಡೆದಿರುವ ಶೈಕ್ಷಣಿಕ ಗುಣಮಟ್ಟ, ಬಾಲ್ಯದ ಆಘಾತಕರ ಘಟನೆಗಳು ಇದಕ್ಕೆ ಕಾರಣವಾಗಿರುತ್ತವೆ.
ಅವುಗಳನ್ನೆಲ್ಲಾ over come ಮಾಡಿ ಭಿನ್ನವಾಗಿ ಬೆಳೆಯಬಹುದು ಎಂಬುದನ್ನು ಮನೋವಿಜ್ಞಾನ ಸಾಬೀತು ಮಾಡಿದೆ. ಈ ಕಾರಣಕ್ಕಾಗಿಯೇ ಸಾವಿರಾರು training course ಗಳು ಪ್ರಾರಂಭವಾಗಿವೆ.
ಹತ್ತಾರು ವರ್ಷಗಳ ಸಂಶೋಧನೆಯ ಫಲದಿಂದ, ವೈಯಕ್ತಿಕ ನನ್ನ ಅನುಭವದಿಂದ ಕಂಡ ಸತ್ಯವೆಂದರೆ sub conscious suggestion is important in your development.

ಜಗತ್ತನ್ನು ಗೆದ್ದ ಶೂದ್ರ ನಾಟಕಕಾರ ಶೇಕ್ಸಪಿಯರ್
ಇಂಗ್ಲೆಂಡಿನ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ನ ಹೆಸರು ಕೇಳದವರಾರು? ಮಹಾನ್ ಲೇಖಕ ಇಂಗ್ಲೆಂಡ್ ದೇಶದ ಪುಟ್ಟ ಹಳ್ಳಿ ಸ್ಟ್ರ್ಯಾಟ್ ಫೋರ್ಡ ಆನ್ ಎವಾನ್ ನಲ್ಲಿ 1564 ರಂದು ಜನಿಸಿದ. ತೀರಿಕೊಂಡ ದಿನ 23 ಏಪ್ರಿಲ್ 1616. ಹುಟ್ಟಿದ ದಿನಾಂಕದಂದೇ ಆತ ಮರಣ ಹೊಂದಿದನೆಂಬ ನಂಬಿಕೆ ಜನಜನಿತ. ಇಂದಿಗೆ ಆತ ಮರೆಯಾಗಿ 384 ವರ್ಷ ತುಂಬಿತು.
ವಿಲಿಯಂ ಶೇಕ್ಸ್ ಪಿಯರ್ ಕುರಿ ಉಣ್ಣೆ ವ್ಯಾಪಾರ ಮಾಡುವ ಓರ್ವ ಸಮೃದ್ಧ ವ್ಯಾಪಾರಿಯಾಗಿದ್ದ. ಇಂಗ್ಲೆಂಡಿನ ವರ್ಗ ಸಂಘರ್ಷದ ಆ ದಿನಗಳಲ್ಲಿ ಶೂದ್ರ ಮನೆತನದಲ್ಲಿ ಜನಿಸಿದ ವಿಲಿಯಂ ಜಗತ್ಪ್ರಸಿದ್ಧ ನಾಟಕಕಾರನಾಗುತ್ತಾನೆ ಎಂದು ಯಾರು ಅಂದುಕೊಂಡಿರಲಿಲ್ಲ.ಹಳ್ಳಿಯಿಂದ ಇಂಗ್ಲೆಂಡಿಗೆ ಓಡಿ ಬಂದ ವಿಲಿಯಂ ತನ್ನ ಆಸಕ್ತ ಕ್ಷೇತ್ರ ರಂಗಭೂಮಿ ಸೇರಿದ. ಅದು ಕೇವಲ ಸೇವಕನಾಗಿ. ನಾಟಕ ಕಂಪನಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ನಟನಾಗಿ, ನಿರ್ದೇಶಕನಾಗಿ ನಂತರ ಶ್ರೇಷ್ಠ ನಾಟಕಾರನಾಗಿ ಆತ ಬೆಳೆದುಬಂದ ಬಗೆಗೆ ಅನೇಕ ರಂಜನೀಯ ಕಥೆಗಳಿವೆ.
ಅವನ ವೈಯಕ್ತಿಕ ಇತಿಹಾಸ ಸಮರ್ಪಕವಾಗಿ ನಮಗೆ ಲಭ್ಯವಿಲ್ಲವಾದರೂ, ಅವನು ಬರೆದ ಸರಿಸುಮಾರು 37 ನಾಟಕಗಳು ಇಂದಿಗೂ ನಮ್ಮೊಂದಿಗಿದ್ದು ವಿಶ್ವರಂಗಚರಿತ್ರೆಯಲ್ಲಿ ಅತನನ್ನು ಅಮರನನ್ನಾಗಿಸಿವೆ. ಶೇಕ್ಸ್ ಪಿಯರ್ 37 ನಾಟಕಗಳನ್ನು ಬರೆದ ಆದರೆ ಅವನ ಕೃತಿಗಳ ಬಗೆಗೆ ವ್ಯಾಖ್ಯಾನಗಳು, ವಿಮರ್ಶೆಗಳು, ವಿಶ್ಲೇಷಣೆಗಳು ಸಾವಿರಾರು ಪ್ರಕಟವಾಗಿವೆ. ಇಂಥ ಗೌರವ ಜಾಗತಿಕ ಸಾಹಿತ್ಯ ನಕಾಶೆಯಲ್ಲಿ ಯಾರಿಗೂ ದಕ್ಕಿಲ್ಲ.

1989 ರಲ್ಲಿ ನಾನು ಎಂ.ಎಂ. ಓದುವಾಗ ಒಂದು ಪೇಪರ್ ಗಾಗಿ ವಿಲಿಯಂನ ಸಮಗ್ರ ಅಧ್ಯಯನ ಸಾಧ್ಯವಾಯಿತು. ಎಳೆಯ ಪ್ರಾಯದಲ್ಲಿ ಪೂರ್ಣವಾಗಿ ದಕ್ಕದಿದ್ದರೂ, ಇಂಗ್ಲಿಷ್ ಕಲಿಸುವ ಸಮಯದಲ್ಲಿ ಹಂತ ಹಂತವಾಗಿ ವಿಲಿಯಂ ಮನಸ್ಸಿಗೆ ಹತ್ತಿರವಾಗತೊಡಗಿದ. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳ ಪಾಲಿನ craze ಎಂದರೆ shakespeare. ಶೇಕ್ಸ್ ಪಿಯರ್ ಬರೀ ಹೆಸರಲ್ಲ. ಅದೊಂದು ಮಹಿಮೆ!ಸಾಹಿತ್ಯ ಕ್ಷೇತ್ರದಲ್ಲಿ ನಿಧಾನವಾಗಿ ಕಾಲೂರುವಾಗ ಹಲವಾರು ಕಾರಣಗಳಿಂದ ನನಗೆ ಶೇಕ್ಸಪಿಯರ್ ಆದರ್ಶಪ್ರಾಯನಾದ. ವೈಯಕ್ತಿಕವಾಗಿ ಅವನ ನಾಲ್ಕು ದುರಂತ ನಾಟಕಗಳಾದ, ಒಥೆಲೊ, ಹ್ಯಾಮ್ಲೆಟ್, ಕಿಂಗ್ ಲಿಯರ್ ಹಾಗೂ ಮ್ಯಾಕ್ ಬೆತ್ ನನ್ನನ್ನು ಆವರಿಸಿಕೊಂಡು, ಹೊಸ ವಿಚಾರಗಳಿಂದ ಮತ್ತೆ, ಮತ್ತೆ ಓದಿಸಿಕೊಳ್ಳುತ್ತವೆ.ಕಳೆದ ವರ್ಷ ನಮ್ಮ ಸಂಸ್ಥೆಯ P.G ವಿದ್ಯಾರ್ಥಿಗಳಿಗಾಗಿ king lear ಕಲಿಸುವ ಸಮಯದಲ್ಲಿ ಅವನ ಎಲ್ಲ tragedies ಓದಿ ದಂಗಾದೆ. ಈಗ ವಿಲಿಯಂ ಇನ್ನೂ ವಿಸ್ತೃತವಾಗಿ ಅರ್ಥವಾಗುತ್ತಾನೆ ಅನಿಸಿತು. ವಿಲಿಯಂನಷ್ಟು ಅದ್ಭುತವಾಗಿ ಮನುಷ್ಯ ಸ್ವಭಾವಗಳನ್ನು ಚಿತ್ರಿಸಿದ ಇನ್ನೊಬ್ಬ ನಾಟಕಕಾರನಿಲ್ಲ. ಅವನ ದುರಂತ ನಾಟಕಗಳ ನಾಯಕರ ದುರಂತಕ್ಕೆ ಅವರೇ ಕಾರಣ, ಅವರ tragic flaw ನಿಂದಾಗಿ ಅವರು ಎದುರಿಸುವ ದುರಂತವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ. ಕಥೆಯ ನಿರ್ವಹಣೆಯೊಂದಿಗೆ, ಅವನ ವೈಚಾರಿಕ ಕಾವ್ಯಮಯ ಸಂಭಾಷಣೆ ಮನಸ್ಸಿಗೆ ನಾಟುತ್ತವೆ. ಅವನ ಹಾಗೆ ಬರೆಯಲು ಪ್ರಯತ್ನಿಸಿ ವಿಫಲರಾದ university wits ಅಪಮಾನವನ್ನು ಎದುರಿಸಿದರು. oxford, cambridge ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಅವನ ಖ್ಯಾತಿಯನ್ನು ಸವಾಲಾಗಿ ಸ್ವೀಕರಿಸಿ ಅವನನ್ನು ಮೀರಿ ಬೆಳೆಯಲು ಯತ್ನಿಸಿ ವಿಫಲರಾದ ಕಥೆಗಳು ಬೇಕಾದಷ್ಟಿವೆ.ವಿಶ್ವವಿದ್ಯಾಲಯದ ಕಟ್ಟೆ ಏರದ ಹಳ್ಳಿಹೈದನನ್ನು ಎದುರಿಸಲಾಗದೆ, ಶೂದ್ರನೊಬ್ಬನ ಸಾಮರ್ಥ್ಯವನ್ನು ಸಹಿಸಲಾಗದೆ ಅವನೊಬ್ಬcheap writer ಎಂದು 'ಪಂಡಿತವರೇಣ್ಯರು' ಬಿಂಬಿಸಿದರು . ಶೂದ್ರ ಶಕ್ತಿಯನ್ನು ತುಳಿಯುವ ಹುನ್ನಾರವನ್ನು ವಿಫಲಗೊಳಿಸಿ ತನ್ನ ಪ್ರಖರ ಪ್ರತಿಭೆಯಿಂದ ಮೇಲೇರಿದ ವಿಲಿಯಂ, globe theatre ನ ಒಡೆಯನಾಗಿ ಇಂಗ್ಲೆಂಡ್ ರಾಣಿಗೆ ಆಪ್ತನಾದದ್ದು ಸಣ್ಣ ವಿಜಯವೇನೆಲ್ಲ.
ಕಾಳಿದಾಸ, ಕನಕದಾಸರ ಹಾಗೆ ಶೇಕ್ಸಪಿಯರ್ ಕೂಡಾ ಕುರುಬ ಜನಾಂಗಕ್ಕೆ ಸೇರಿದವನೆಂಬ ಸತ್ಯ ಬಹುಪಾಲು ಜನರಿಗೆ ಗೊತ್ತಿಲ್ಲ. ಅವನು ರಚಿಸಿದ ಸಾನೆಟ್ ಗಳು ಬದುಕಿಗಿರುವ ಜೀವನೋತ್ಸಾಹವನ್ನು ವಿಜೃಂಭಿಸುತ್ತವೆ. ನೂರಾರು ವರ್ಷಗಳಿಂದ ರಕ್ಷಿಸಿರುವ ಅವನ ಮನೆ ಸುಂದರ ಹೂದೋಟ ನೋಡಿದಾಗಿನ ಸಂಭ್ರಮ ನೆನಪಿಸಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ.ನಿಜವಾದ ರಂಗಾಸಕ್ತರು, ಸಾಹಿತ್ಯಾಸಕ್ತರು ಇಂದಿಗೂ, ಎಂದೆಂದಿಗೂ ಅವನನ್ನು ಆರಾಧಿಸುತ್ತಾರೆ. ಇಂಗ್ಲೆಂಡಿನ ಎಲ್ಲ ರಂಗಮಂದಿರಗಳಲ್ಲಿ ಹೊಸರೂಪ ಪಡೆದ ಅವನ ನಾಟಕಗಳು ಪ್ರದರ್ಶನಗೊಳ್ಳುತ್ತವೆ.

ಇಂಗ್ಲೆಂಡಿನ ಅವನ ಮನೆಗೆ ಹೋದಾಗ, ಮನೆಯಂಗಳದಲಲ್ಲಿ mid summer.. ನಾಟಕ ನೋಡಿದೆ. ಪ್ರತಿಭಾನ್ವಿತ ಕಲಾವಿದರೊಂದಿಗೆ ನಲಿದಾಡಿದೆ. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಅವನ ಹುಟ್ಟೂರು ನೋಡುವ ಕನಸು ನನಸಾಗಿದ್ದಕ್ಕೆ ಸಂಭ್ರಮಿಸಿದೆ.
ಆ ಸಂಭ್ರಮದ ಕ್ಷಣಗಳನ್ನು ಅವನ ಜನ್ಮ ದಿನದಂದು ನಿಮ್ಮೊಂದಿಗೆ ಹಂಚಿಕೊಂಡು, ಶೇಕ್ಸಪಿಯರ್ ಹುಟ್ಟು ಹಬ್ಬದ ಕಾಣಿಕೆಯಾಗಿ ಈ ಪುಟ್ಟ ಬರಹ ನೀಡುತ್ತಲಿದ್ದೇನೆ. Happy Birthday to you Mr. William. ಎಂದು ಹೇಳುವುದು ಸೌಜನ್ಯ ಮತ್ತು ವಾಡಿಕೆ. ಆದರೆ ಅಮೂಲ್ಯವಾದ ಸಾಹಿತ್ಯವನ್ನು ಆತನಿಂದ ಪಡೆದು ಧನ್ಯರಾದ ನಾವು ನಮಗೆ ನಾವೇ ಶುಭಾಶಯ ಹೇಳಿಕೊಳ್ಳುವುದು ಉತ್ತಮ!

Thursday, April 22, 2010

ನಿಮ್ಮ uncomfort ನಿಮಗೆ ಕಿರಿ ಕಿರಿ

* ದೈಹಿಕ ಶಿಸ್ತಿನ ಅಗತ್ಯಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು?
_____ ದೈಹಿಕ ಶಿಸ್ತನ್ನು MNC ಗಳು ಕಟ್ಟು ನಿಟ್ಟಾಗಿ ಪಾಲಿಸುತ್ತವೆ. ಡ್ರೆಸ್ ಕೋಡ್ ನಷ್ಟೇ ಮಹತ್ವ ಇತರ internal ಸಂಗತಿಗಳಿಗೂ ಇದೆ.
ಅಚ್ಚುಕಟ್ಟಾದ ದಿನಚರಿಯನ್ನು ರೂಪಿಸಿಕೊಳ್ಳಬೇಕು. ಸಾರ್ವಜನಿಕರನ್ನು ಭೇಟಿ ಆಗುವ ಹುದ್ದೆ ಇದ್ದರೆ ನಿತ್ಯ neat ಆಗಿ ಇರುವುದು ಅನಿವಾರ್ಯ.
ತರಬೇತಿ ಸಮಯದಲ್ಲಿ ಸಣ್ಣ ಸಂಗತಿಗಳನ್ನು ಪ್ರಸ್ತಾಪಿಸಿದಾಗ ಕೆಲವರಿಗೆ ಕಿರಿಕಿರಿ ಎನಿಸಿತು. ಅರೆ! ಇಷ್ಟೊಂದು ಸಣ್ಣ ಸಂಗತಿಯ ಪ್ರಸ್ತಾಪವೇ ಎಂದು ಗೊಣಗಿದರೂ ವಿವರಣೆಯ ನಂತರ ಸ್ವೀಕರಿಸಿದರು.
* Neat shaving - ಪ್ರತಿ ನಿತ್ಯ shave ಮಾಡುವ ಅಗತ್ಯವಿದೆ. ಬಿಡುವುದಿದ್ದರೆ ಬುಲ್ಲಾನಿಯನ್ ಅಥವಾ ಇನ್ನಾವುದೋ ಶೈಲಿಯಲ್ಲಿ ದಾಡಿ ಬಿಡಬೇಕು. ಇಲ್ಲದಿದ್ದರೆ neat ಆಗಿ shave ಮಾಡಿಕೊಳ್ಳಬೇಕು. ವ್ಯಕ್ತಿ ಸೌಂದರ್ಯ ನಿಸರ್ಗದತ್ತವಾದುದು, ಉಳಿದ ಶಿಸ್ತನ್ನು ನಾವಾಗಿ ರೂಪಿಸಿಕೊಳ್ಳಬೇಕು. ಅಯ್ಯೋ ಬಿಡಿ ಸರ್ ನಮ್ಮನ್ಯಾರು ನೋಡುತ್ತಾರೆ, ಎಲ್ಲಾ ಮುಗಿದು ಹೋಗಿದೆ, ನಾನೇನು ಕನ್ಯಾ ನೋಡಲು ಹೋಗುವದಿದೆಯೇ ಎಂಬ ಉದ್ಘಾರ ತೆಗೆಯುವುದು ಸಲ್ಲ. ಶಿಸ್ತಿಗಾಗಿ ಶಿಸ್ತು ಎಂಬ ನಿಯಮ ಪಾಲಿಸಬೇಕು. ಮುಖದ ಮೇಲಿನ ಹಸನ್ಮುಖತೆಗೆ ಕಳೆ ಕಟ್ಟಲು shaving ಆಗಬೇಕು.
* Aviod mouth and Body smell- ಕೆಲವರು ಆಲಸ್ಯತನದಿಂದಲೋ, ಜಿಪುಣತನದಿಂದಲೋ ಸರಿಯಾಗಿ paste ಉಪಯೋಗಿಸುವುದಿಲ್ಲ. Brush ಮಾಡುವದೊಂದು ಕಾಟಾಚಾರಕ್ಕೆ ಅಂದುಕೊಂಡಿರುತ್ತಾರೆ. ಇಂದು Dental science ವಿಪರೀತ ಅಭಿವೃದ್ಧಿ ಹೊಂದಿದೆ. ಉಬ್ಬು ಹಲ್ಲು, ಅಸಹ್ಯ ಒಸಡುಗಳ ನಿವಾರಣೆಗೆ ತಂತ್ರಜ್ಞಾನ ರೂಪಿತವಾಗಿದೆ. ಅಂತಹದರಲ್ಲಿ neat ಆಗಿರುವ ಹಲ್ಲುಗಳನ್ನು ಸ್ವಚ್ಛವಾಗಿಡಲು ಅಲಕ್ಷಿಸಿದರೆ ಹೇಗೆ? ಈ ವಿಷಯಕ್ಕೆ ಒತ್ತಾಯಿಸಿದರೆ, ಅಯ್ಯೋ ಬಿಡ್ರಿ ನಾನ್ಯಾರಿಗೆ kiss ಕೊಡುವುದಿದೆ ಎಂದು ಉದಾಸೀನ ತೋರುತ್ತಾರೆ. ಸೂಕ್ಷ್ಮ ಗ್ರಾಹಿಗಳು ಎಲ್ಲವನ್ನು ಗಂಭೀರವಾಗಿ ಪರಿಗಣಿಸುತ್ತಾರೆ.
ಸ್ವಚ್ಛವಾಗಿರದಿದ್ದರೆ ಬೇರೆಯವರಿಗೆ ಗೊತ್ತಗದಿದ್ದರೂ, ನಮಗೂ ವೈಯಕ್ತಿಕವಾಗಿ ಕಿರಿ ಕಿರಿ ಎನಿಸುತ್ತದೆ. ಈ ರೀತಿಯ ವೈಯಕ್ತಿಕ uncomfort ಬೇರೆಯವರೊಂದಿಗೆ ಬೆರೆಯಲು ಮುಜುಗರ ತರುತ್ತದೆ. ಬಾಯಿ ವಾಸನೆ ಬರುವುದು ನಮಗೆ ಗೊತ್ತಾಗುತ್ತದೆ. ಅದನ್ನು neglect ಮಾಡಬಾರದು. ಬಾಯಿಯಿಂದ ಬರುವ ವಾಸನೆ divorce ಗೆ ಕಾರಣವಾಗುವದಿದೆ. ಮುಖ ಕೊಟ್ಟು ಮಾತಾಡುವ ಅವಕಾಶ ಕಳೆದುಕೊಂಡು ಆತ್ಮೀಯರನ್ನು ದೂರಮಾಡಿಕೊಳ್ಳುವ ಮನಸಿರದಿದ್ದರೆ please take care of your smell of mouth.
* ದೇಹ ವಾಸನೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು. Over sweating ಆಗುವರು ದಿನಕ್ಕೆ ಎರಡು ಸಾರಿ ಸ್ನಾನ ಮಾಡಬೇಕು, ಬೇಸಿಗೆಯಲ್ಲಾದರೆ ಮೂರು ಬಾರಿ ಸ್ನಾನ ಮಾಡಬೇಕು. ಸಾರ್ವಜನಿಕ hugging ಮಾಡಬಾರದು. Bodyspray, ಗಂಧ, ಭಸ್ಮ,ದೇಸಿಯ ಪರಿಕರಗಳನ್ನು ಹೆಚ್ಚು ಬಳಸಿ comfort ಆಗಿರಬೇಕು. ಈಗ medical science ಬೆಳೆದಿರುವುದರಿಂದ ವೈದ್ಯರ ಸಲಹೆಯನ್ನು ಪಡೆಯಬೇಕು.
* ಕಿತ್ತು ಹೋದ ಬಟನ್, ಬಟನ್ ಹಾಕುವ ಮರೆವು. ಬಟನ್ ಕಿತ್ತು ಹೋಗಿರುತ್ತದೆ. ಒಂದೆರಡು ರೂಪಾಯಿ ಖರ್ಚು ಮಾಡಿ ಇದನ್ನು ಸರಿಪಡಿಸಿಕೊಳ್ಳಬೇಕು. ನಂತರ ಹಚ್ಚಿದರಾಯಿತು ಅನ್ನಬಾರದು. ಡ್ರೆಸ್ ಮಾಡುವ ಕಾಲದಲ್ಲಿ ಒಮ್ಮೆ ಕನ್ನಡಿಯಲ್ಲಿ top to bottom ಪರೀಕ್ಷಿಸಿಕೊಳ್ಳಬೇಕು. ಇನ್ನೊಬ್ಬರು ಈ ಕುರಿತು ಎಚ್ಚರಿಸುವ ಸಂಕೋಚವನ್ನು ತಪ್ಪಿಸಿಕೊಳ್ಳಬೇಕು.
* ಕೊಳೆಯಾದ ಚಪ್ಪಲಿ, ಪಾಲಿಶ್ ಇಲ್ಲದ ಶೂ. ತುಂಬಾ ಬೆಲೆ ಬಾಳುವ ಚಪ್ಪಲಿ, ಶೂ ಇದ್ದರೆ ಜನ ಮೆಚ್ಚುತ್ತಾರೆ ಅಂತಲ್ಲ ಅವುಗಳ ಬೆಲೆಗಿಂತ ಪಾಲೀಸ್ ಮಾಡಿ ಸದಾ ಸ್ವಚ್ಛವಾಗಿಡಬೇಕು. ನಮ್ಮೊಂದಿಗೆ ಮುಖಕೊಟ್ಟು ಮಾತನಾಡಲು ಸಂಕೋಚ ಪಟ್ಟುಕೊಳ್ಳುವವರು ನಿಮ್ಮ ಪಾದ ನೋಡಿ ಮಾತನಾಡುತ್ತಾರೆ.
* ಬೆಲೆ ಬಾಳುವ ಬಟ್ಟೆ ಬೇಡ ಸ್ವಚ್ಛವಿದ್ದರೆ ಸಾಕು, ತುಂಬಾ costly dress ಇರಬೇಕೆಂದಿಲ್ಲ. ಸದಾ wash ಮಾಡಿ, ಇಸ್ತ್ರಿ ಮಾಡಿದ್ದರೆ ಸಾಕು. ನಾವು ಧರಿಸುವ ಬಟ್ಟೆ, shoe ಗಳ ಬೆಲೆ ಹೇಳಿ ಜಂಬ ಕೊಚ್ಚಿಕೊಳ್ಳಬಾರದು. ನೀವು ಹಾಕಿರುವ ಬಟ್ಟೆ ಬೆಲೆಗಿಂತ ನಿಮ್ಮ ವ್ಯಕ್ತಿತ್ವ ಅದರ ಬೆಲೆಯನ್ನು ಹೆಚ್ಚಿಸುತ್ತದೆ.
* ಕಿವಿ, ಮೂಗು,ಕಂಕುಳ ಸ್ಪರ್ಶ ಬೇಡ.
ಕೆಲವರು ಪದೇ, ಪದೆ ಕಿವಿ, ಮೂಗು, ಕಂಕುಳಲ್ಲಿ ಬೆರಳು ಹಾಕಿ ವಾಕರಿಕೆ ಬರಿಸುತ್ತಾರೆ. ನಿಮ್ಮ ಬೆರಳುಗಳು ಆದಷ್ಟು ಸಾರ್ವತ್ರಿಕವಾಗಿ ನವರಂದ್ರಗಳಿಂದ ದೂರವಿರುವಂತೆ ದಯವಿಟ್ಟು ಎಚ್ಚರವಹಿಸಿರಿ.

ನಿನ್ನೊಂದಿಗಿನ ಮಧು-ರ ಕ್ಷಣಗಳು

ಗೆಳತಿಯ ಒಲವಿನ ಓಲೆ
ಈಗ ಹೇಗಿದ್ದೀಯಾ? ಸಕಾರಾತ್ಮಕವಾಗಿ ಬದುಕುವ ನೀನು ಸದಾ ಆರಾಮಾಗಿಯೇ ಇರುತ್ತೀ. ಗಂಡನಿಗೆ divorce apply ಮಾಡಿ ಏನೋ ಕಾರಣಕ್ಕೆ ನಿನ್ನ ಭೇಟಿ ಆದಾಗ ನಿನ್ನ ಕಂಗಳ ಚೈತನ್ಯಕ್ಕೆ ಅವಾಕ್ಕಾದೆ. ಅದೆಂತಹ ಸೆಳೆತ ನಿನ್ನ ಮಾತು-ನಡೆಯಲಿ. ಸಂಗೀತಕ್ಕೆ ನನ್ನನ್ನು ಅರ್ಪಿಸಿಕೊಂಡು ರಾಗತಾಳಗಳ ಮೇಳದಲಿ ಕಾಲ ದೂಡುತ್ತಿರುವಾಗ ನೀನು ಅಷ್ಟೊಂದು ಹತ್ತಿರವಾಗಿತ್ತೀ ಅಂದುಕೊಂಡಿರಲಿಲ್ಲ. ಅವನಿಂದ ಬಿಡುಗಡೆಯಾಗಿ ಕಾಯುತ್ತಿದ್ದ ನಾನು, ನಿನ್ನ ಸಾಮಿಪ್ಯವನ್ನೇನು ಬಯಸಿರಲಿಲ್ಲ. ಎರಡನೇ counselling ನಲ್ಲಿ ನೀನು ನೇರವಾಗಿ ಹೇಳಿದ್ದು ಅಚ್ಚರಿ. Divorce application ವಾಪಾಸು ಪಡೆಯಲು ಸೂಚಿಸಿದ್ದು ಸಣ್ಣ ಸಂಗತಿಯಲ್ಲ. ಅವನೊಂದಿಗೆ ಬೇರ್ಪಡುವ ವಾದವನ್ನು ನಿಧಾನವಾಗಿ ಆಲಿಸಿ ನೀನು ನೀಡಿದ ತೀರ್ಮಾನ ಅನುಪಮ. No you have to go back & live with him. ಅಂದಾಗ shock ಆಯಿತು. ಅವನ ಎಲ್ಲ ಕಿರುಕುಳಗಳನ್ನು ವಿವರಿಸಿದಾಗಲೂ ಅವನೊಂದಿಗೆ ಬಾಳಬಹುದಾದ ನಿನ್ನ ಸಲಹೆಯನ್ನು ನಾನು ಅಂದು ಒಪ್ಪಲಿಲ್ಲ.
ನಿನ್ನ ಆತ್ಮವಿಶ್ವಾಸ,positive approach ನೆನಸಿಕೊಂಡರೆ ಈಗಲೂ ಅಚ್ಚರಿ.
ನಿನ್ನ ಮಾರ್ಗದರ್ಶನದಂತೆ case ವಾಪಾಸು ಪಡೆದೆ. ಆದರೆ ನಾನು ಅವನೊಂದಿಗೆ ಮರುಜೀವ ಪಡೆಯುವ ಭರವಸೆ ಇಲ್ಲದಿದ್ದರೂ ನಿನ್ನ ನಂಬಿಕೆ ಅಸಾಮಾನ್ಯ.
ಮತ್ತೊಮ್ಮೆ ಎಲ್ಲ settle ಆಗಲು ವರ್ಷಗಳೇ ಉರುಳಿದವು.
ಸಂಗೀತ ಸಂಜೆಯಲಿ ನನ್ನ ಕಂಠದಿಂದ ಹೊರಡುತ್ತಿದ್ದ ರಾಗಕೆ ತಾಳಹಾಕುತ್ತಿದ್ದ ನಿನ್ನ ಕಣ್ಣುಗಳಿಗೆ ಸೋತು ಹೋದೆ. ದೆಹಲಿ ಕಾರ್ಯಕ್ರಮಕ್ಕೆ ನಿನ್ನನ್ನು ಆಹ್ವಾನಿಸಿದಾಗ ನನ್ನಲ್ಲಿ ಒಂದು ಭಂಡ ಧೈರ್ಯದ ನಿರ್ಧಾರವಿತ್ತು. ನೀನು ಅಷ್ಟೇ ಮಗುವಿನ ಹಾಗೆ ಹಿಂಬಾಲಿಸಿದೆ.
ದೆಹಲಿ ಕಾರ್ಯಕ್ರಮ ಮುಗಿಸಿ ಕುಲು-ಮನಾಲಿಗೆ ತೆರಳುವ ನಮ್ಮ ನಿರ್ಧಾರವನ್ನು ನೀನು ಪ್ರಶ್ನಿಸಲೇ ಇಲ್ಲವಲ್ಲ. ಅದೆಂತಹ ಸಹನೆ ಮಾರಾಯ ನಿನಗೆ.
ಮನಾಲಿ ಪರ್ವತ ಶ್ರೇಣಿಗಳ ಮಧ್ಯ ನಡುಗುವ ಛಳಿಯಲಿ ನಿನ್ನ ಬಿಗಿದಪ್ಪಿದಾಗಲೂ ಅದೇ ಸಾಹಸಿ, ಅದೇ ಮೌನ ನಾನು ಅವನಿಗೆ divorce ಕೊಡುತ್ತೇನೆ.
ನಿನ್ನೊಂದಿಗೆ ಹೊಸ ಜೀವನ ಪ್ರಾರಂಭಿಸುತ್ತೇನೆ ಎಂದು ಅತ್ತು ಕರೆದು ರಂಪ ಮಾಡಿದರೂ ನೀನು ಜಪ್ಪಯ್ಯ ಅನ್ನಲಿಲ್ಲ. ಅವನೊಂದಿಗೆ case settle ಆಗೋವರೆಗೆ ನನ್ನೊಂದಿಗಿರು, ನನ್ನ ಪ್ರೀತಿಯ ಸರೋವರದಲ್ಲಿ ಈಜಾಡು ಎಂದದ್ದು ಸಣ್ಣ ಸಂಗತಿಯೇ?
ನಿನ್ನದು ಒಂದೇ ಹಟ ನಾನು ಅವನೊಂದಿಗೆ ಮತ್ತೆ ಒಂದಾಗಬೇಕು.
ಮನಾಲಿಯ ತಂಪು ವಾತಾವರಣ, ಸುಂದರ ಪ್ರಕೃತಿ, ನಾವಿಬ್ಬರೂ ಮಂಜಿನಲಿ ಕರಗಿ ಲೀನವಾದದ್ದು, ಅಬ್ಬಾ! ಈಗಲೂ ಅದೇ ರೋಮಾಂಚನ!!
ಹಿಮದ ಬಂಡೆಗಳು ಮೌನದಿಂದ ನಮ್ಮ ಮಿಲನಕ್ಕೆ ಸಾಕ್ಷಿ ನುಡಿದವು. ಈ ಹಿತಾನುಭವದ ಸ್ಪರ್ಶದಿಂದ ಉಲ್ಲಸಿತನಾದ ನೀನು ನಿರ್ಧಾರ ಬದಲಾಯಿಸುತ್ತೀ ಅಂದು ಕೊಂಡು ಮನಾಲಿ ಬಿಡುವಾಗ ಮತ್ತೊಮ್ಮೆ ಕೇಳಿದರೂ ಅದೇ ಉತ್ತರ, ಛೇ! ಅಂದುಕೊಂಡು ಮನಸ್ಸಿಲ್ಲದೆ ವಾಪಾಸಾದೆ.
ಅಂದು ಸಂಜೆ ಮನಾಲಿ ರೋಟಾಂಗ್ ಪಾಸ್ ನ ಹಿಮದಲಿ ಬಾನಲ್ಲೆ ಮಧುಚಂದ್ರಕೆ ಕಾದಂಬರಿಯ ನಾಯಕ, ಹೆಂಡತಿಯನ್ನು ದೂಡಿದ ಜಾಗ ತೋರಿಸಿದಾಗ ಕೇವಲ ನಕ್ಕು, ಯಾಕೆ ನನ್ನುನ್ನು ದೂಡುತ್ತಿಯಾ ಎಂದಾಗ ಏನೋ ಅರ್ಥವಿತ್ತು. ಆಗಲೂ ಕೇಳಿದೆ. ಹಿಮದ ಛಳಿಯಲಿ ಬಿಸಿ ಅಪ್ಪುಗೆಯ ಸೆಳೆತದಲಿ ಒಪ್ಪುತ್ತಿಯಾ ಎಂಬ ಭರವಸೆಯಿಂದ. you said no! ಈ ಜೀವನಕ್ಕೆ ಇಷ್ಟು ಸಾಕಲ್ಲ, ಅತೀ ಆಸೆ ಒಳ್ಳೆಯದಲ್ಲ, ನೀನು ಎಲ್ಲಿರಬೇಕು, ಅಲ್ಲಿರು. ಈ ಭೂಮಿಯ ಮೇಲಿನ ಪ್ರತಿಯೊಂದು ವಸ್ತುವಿನೊಂದಿಗೆ ಕಾಲ ಕಳೆದು ಅನುಭವಿಸುವುದು ಪೂರ್ವ ನಿಯೋಜಿತವಾಗಿರುತ್ತದೆ.
ನಿನ್ನೊಂದಿಗೆ ವರ್ಷಾನುಗಟ್ಟಲೆ ಇದ್ದೇನಲ್ಲ ಸಾಕು. ಜೀವನ ಪರ್ಯಂತ ಇರಬೇಕು ಎಂಬ ಭ್ರಮೆ ಸಲ್ಲದು ಇದ್ದಷ್ಟು ದಿನಗಳನ್ನು ಅತ್ಯಂತ ಖುಷಿಯಿಂದ, ರಸಮಯವಾಗಿ ಕಳೆದಿದ್ದೇವೆ. ಮುಂದೆ ಹೀಗೆಯೇ ಕಳೆಯಲು ಸಾಧ್ಯ ಎಂಬ ನಂಬಿಕೆ ನನಗಿಲ್ಲ. ಅದು ಭ್ರಮೆ ಕೂಡಾ ಪರಸ್ಪರ ಒಲವಿನ ಧಾರೆ ಉಕ್ಕುವಾಗ ಬೇರ್ಪಡುವ ಮನಸ್ಸಾಗುವುದಿಲ್ಲ. ಆದರೆ ಅನಿವಾರ್ಯವಾಗಿ ಒಮ್ಮೆ ಬೇರ್ಪಟ್ಟರೆ ಕಾಲ ಎಲ್ಲವನ್ನು ಮರೆಸುತ್ತದೆ ಅಂದದ್ದು ಈಗ ಪೂರ್ಣ ಸತ್ಯವೆನಿಸುತ್ತದೆ. ನೀನು ನನ್ನಿಂದ ದೂರಾಗಿ ವರ್ಷಗಳೇ ಉರುಳಿದವು. ನಾನು ಅವನೊಂದಿಗೆ ಬಾಳುತ್ತಿದ್ದೇನೆ. ಆದರೂ..........
ಕ್ರಿಕೆಟ್ ಹಣಾಹಣಿಯಲ್ಲಿ ಮೂರ್ಖರು ನಾವು
ಶಶಿ ತರೂರ ಎಂಬ ಕೇಂದ್ರ ಸಚಿವ ನಿರ್ಗಮಿಸಿದ್ದಾರೆ. ಈಗ ಕ್ರಿಕೆಟ್ ಪೀಡೆ IPL ಅಧ್ಯಕ್ಷ ಮೋದಿಗೆ ತಗುಲಿದೆ. ಭಾರತದಂತಹ ಬಡರಾಷ್ಟ್ರದಲ್ಲಿ ಕ್ರಿಕೆಟ್ ಎಂಬ ಕ್ರೀಡಾ ವೈರಸ್ ತನ್ನ ರೋಗವನ್ನು ಎಲ್ಲೆಡೆ ಹಬ್ಬಿಸಿದೆ.
ಜಗತ್ತಿನ ಪ್ರಗತಿಪರ ರಾಷ್ಟ್ರಗಳಾದ ಜಪಾನ್, ಅಮೇರಿಕಾ ಕ್ರಿಕೆಟ್ ವೈರಸ್ ನ್ನು ಒಳ ಸೇರಿಸಿಕೊಂಡಿಲ್ಲ. ಮೋಜು, ಮೇಜವಾನಿಗೆ ಹೆಸರಾದ ಇಂಗ್ಲಿಷರು ತಮ್ಮ ಭಾಷೆಯನ್ನು ಇಲ್ಲಿ ಬಿಟ್ಟು ಹೋಗುವುದರೊಂದಿಗೆ ಬ್ಯಾಟ್, ಬಾಲ್ ನ್ನು ತೂರಿ ಹೋದರು.
Test match, one day match ನಿಂದ ಈಗ 20-20 ಗೆ ರೂಪಾಂತರಗೊಂಡಿರುವ ರೋಗ ಬೇರೆ, ಬೇರೆ ರೂಪದಲ್ಲಿ ಹಬ್ಬುತ್ತಲೇ ಇದೆ. ಲಕ್ಷಾಂತರ ಯುವಕರು ತಮ್ಮ ಅಮೂಲ್ಯ energy ಯನ್ನು ಈ ಆಟ ಆಡುವವರಲ್ಲಿ, ನೋಡುವುದರಲ್ಲಿ ಹಾಳುಮಾಡುತ್ತಾರೆ.
ಶರದ್ ಪವಾರರಂತಹ ಹಿರಿಯ ರಾಜಕೀಯ ನಾಯಕರು ತಮ್ಮ ಮಂತ್ರಿ ಸ್ಥಾನಕ್ಕಿಂತ ಬಿಸಿಸಿಐ ದೊಡ್ಡದೆಂದು ಭಾವಿಸಿರಬೇಕಾದರೆ ಇದರ ಆಳ ಎಷ್ಟಿರಬೇಕು.
ರಾಜಕಾರಣದಲ್ಲಿ ಗಳಿಸಿದ ಕಪ್ಪು ಹಣವನ್ನು, ಬಿಳಿಯಾಗಿಸಲು ಕ್ರಿಕೆಟ್ ಎಂಬ ಪೀಡೆ ದುರ್ಬಳಕೆಯಾಗುತ್ತಲಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟಿನ ನಿರ್ವಹಣೆ ಮಾಡಲು, ರಾತ್ರೋರಾತ್ರಿ ಹೆಸರು, ಖ್ಯಾತಿ ಗಳಿಸಲು ಎಂತೆಂತಹ ರಂಗಿನಾಟ.
ಮಂತ್ರಿಯಾಗುವ ಅವಕಾಶ ಕಳೆದುಕೊಂಡಿರುವ ತರೂರ, ಈಗ ಮೊದಿಯ ಮೇಲೆ ತಿರುಗಿಬಿದ್ದಿದ್ದಾರೆ. ಕೊಟ್ಯಾಂತರ ರೂಪಾಯಿ ಅವ್ಯವಹಾರವನ್ನು ಮೀರಿದ ಸಂಗತಿಯೊಂದಿದೆ ಎಂದು ಮಾಧ್ಯಮಗಳು ಬೊಬ್ಬೆಯಿಡುತ್ತವೆ. ಈ ಮಧ್ಯ ಸುನಂದಾ ಪುಷ್ಕರ ಎಂಬ ಮಹಿಳೆ ಈ ಗದ್ದಲದಲ್ಲಿ ಮಿಂಚುತ್ತಿದ್ದಾಳೆ. Internation standard ನಲ್ಲಿರುವ affair ಗಳು ಕ್ರಿಕೆಟ್ ವ್ಯಾಪಾರಕ್ಕೆ ತಗುಲಿ, ಮಂತ್ರಿಸ್ಥಾನವನ್ನು ಕಿತ್ತುಕೊಳ್ಳುತ್ತವೆ ಎಂದರೆ ಏನರ್ಥ. ಮದುವೆ, divorce ಗಳ ಗೊಂದಲದಲ್ಲಿರುವ ಈ so called ನಾಯಕರುಗಳು ತಮ್ಮ ಎಲ್ಲ ರಾಸಲೀಲೆಗಳಿಗೆ, ಕೊಟ್ಯಾಂತರ ಅವ್ಯವಹಾರಕ್ಕೆ ಕ್ರೀಡೆಯಲ್ಲಿ ಬಳಸಿಕೊಳ್ಳುತ್ತಿರುವುದು ನಾಚಿಕೆ ಪಡುವ ಸಂಗತಿ. ಅದನ್ನು ಅಷ್ಟೇ sportive ಆಗಿ enjoy ಮಾಡಿ match fixing ಆದ ಆಟ ನೋಡುವ ನಮ್ಮಂತಹ ಮೂರ್ಖರಿರುವಾಗ ಯಾರ್ಯಾರೋ ತಮಗೆ ಬೇಕಾದ ಹಾಗೆ ತೆವಲು ತೀರಿಸಿಕೊಳ್ಳುತ್ತಾರೆ ಅಷ್ಟೇ!.

Wednesday, April 21, 2010

Sub conscious mind ನ ಪಾತ್ರ

* ನಿಮ್ಮ ವಿವರಣೆಯಲ್ಲಿ ಪ್ರಸ್ತಾಪವಾಗುವ Sub conscious mind ಕುರಿತು ವಿವರಿಸಿ?
_______ ನಮ್ಮ ಎಲ್ಲ ರೀತಿಯ ಕಾರ್ಯಚಟುವಟಿಕೆಗಳ ಸೂತ್ರಧಾರಿಯಂತೆ ನಮ್ಮ ಮೈಂಡ್. psychologists ಹಂತ, ಹಂತವಾಗಿ ಮನಸ್ಸನ್ನು ಅಧ್ಯಯನ ಮಾಡುತ್ತಾ ಮೆದಳಿಗಿರುವ ಹಂತಗಳನ್ನು ಗುರುತಿಸಿದ್ದಾರೆ. conscious, unconscious & sub conscious ಎಂದು 3 ಹಂತಗಳಲ್ಲಿ ವಿಂಗಡಿಸಿದ್ದಾರೆ. ಇತ್ತೀಚಿಗೆ subconscious mind ಬಗ್ಗೆ ವಿಪರೀತ ಚರ್ಚೆ ಸಾಗಿದೆ. ಅದರಲ್ಲೂ ವಿಶೇಷವಾಗಿ ವ್ಯಕ್ತಿತ್ವ ವಿಕಸನದ ಅಧ್ಯಯನದಲ್ಲಿ ಇದರ ಪಾತ್ರ ಹೆಚ್ಚಿದೆ.
ನಮ್ಮ negative ಭಾವನೆಗಳನ್ನು, positive ಆಗಿ ಪರಿವರ್ತಿಸುವಲ್ಲಿ sub-conscious ಹಂತಕ್ಕೆ ಪ್ರಾಧಾನ್ಯತೆ ಇದೆ.
ನಾವು ದಿನವಿಡೀ ನಮ್ಮ ಕೆಲಸ ಕಾರ್ಯಗಳ್ಲಿ ನಿರತರಾಗಿದ್ದರೂ ಒಳಮನಸ್ಸು, ಸುಪ್ತ ಮನಸ್ಸು ಏನನ್ನೋ ಆಲೋಚಿಸುತ್ತದೆ. ಇತರ ಕಾರ್ಯಗಳಲ್ಲಿ ತೊಡಗಿರುವಾಗಲು ನಮ್ಮ conscious mind , subconscious mind ಗೆ ಸಂದೇಶಗಳನ್ನು ನೀಡುತ್ತಾ communicate ಮಾಡುತ್ತದೆ. ಈ ನಿರಂತರ ಸಂಭಾಷಣೆಯೇ giving suggestion to your subconscious mind.
ಕೆಲಸವನ್ನು ಪ್ರಾರಂಭಿಸುವ ಮುಂಚೆ ಎರಡು ವಿಚಾರಗಳು ನಮ್ಮೆದುರು ಪ್ರತ್ಯಕ್ಷವಾಗುತ್ತವೆ. ಆಗುತ್ತೆ-ಆಗಲ್ಲ ಎಂಬ ಸಂದೇಶವನ್ನು ನಾವೇ ನೀಡುತ್ತೇವೆ. ಈ ರೀತಿ ಆಲೋಚಿಸುವ ಮನೋಸ್ಥಿತಿಗೆ subconscious stage ಎನ್ನುತ್ತೇವೆ. ಎಚ್ಚರಾವಸ್ಥೆ (conscious)ಯ mind ನಮ್ಮ ನೇರ ನಿಯಣತ್ರಣದಲ್ಲಿದ್ದರೆ, subconscious ಪರೋಕ್ಷ ನಿಯಂತ್ರಣದಲ್ಲಿರುತ್ತದೆ.
ಮೇಲ್ನೋಟಕ್ಕೆ ನಾವು ಹಲವಾರು ಕೆಲಸಗಳಲ್ಲಿ ನಿರತರಾಗಿರುತ್ತೇವೆ ಆದರೆ ಒಳಮನಸ್ಸು ನಿರಂತರವಾಗಿ ರಾತ್ರಿ ನಿದ್ದೆಗೆ ಜಾರುವವರೆಗೆ ಆಲೋಚಿಸುತ್ತಾ yes or no ಸಂದೇಶಗಳಲ್ಲಿ ಕೊಡುತ್ತಲೇ ಇರುತ್ತದೆ.
Human Resource development (HRD) ತರಬೇತಿಗಳಲ್ಲಿನ ಚರ್ಚೆಯಲ್ಲಿ ಈ ಪದ ಹೆಚ್ಚು ಬಳಕೆಯಾಗುತ್ತದೆ. ಇಂದು ಈ ಕುರಿತು ಆಶಾದಾಯಕ ಚರ್ಚೆ ಸಾಗಿ, ಸೂಕ್ತ ಪರಿಹಾರವು ಸಿಕ್ಕಿದೆ.
HRD ತರಬೇತಿಯ ಜೀವಾಳವಾಗಿರುವ positive attitue ವೃದ್ಧಿಯಾಗಬೇಕಾದರೆ auto suggestion ಗೆ ಹೆಚ್ಚು ಜವಾಬ್ದಾರಿಯಿದೆ. ಇದು ಒಂದೆರಡು ದಿನಗಳಲ್ಲಿ ಸಾಧಿಸುವ ಕಾರ್ಯವಲ್ಲ. ಇದಕ್ಕೆ ನಿರಂತರ ಸಾಧನೆ ಬೇಕಾಗುತ್ತದೆ.
ನಮ್ಮ ಆಲೋಚನಾ ಕ್ರಮದಲ್ಲಿ ನಮ್ಮ ಹಗಲುಗನುಸುಗಳು ನಿರ್ವಹಿಸುವ ಪಾತ್ರಕ್ಕೆ ಈ ಹಂತ ನೆರವಾಗುತ್ತದೆ. ಪದೇ ಪದೇ negative ಸಂದೇಶಗಳನ್ನು ಕೊಡುತ್ತಾ ಹೋದರೆ ಹಿಡಿದ ಕೆಲಸದಲ್ಲಿ success ಸಿಗಲು ಸಾಧ್ಯವೇ ಇಲ್ಲ . ಎಚ್ಚರಾಗಿರುವಾಗ ನೀಡುವ ಸಂದೇಶಗಳನ್ನು ಗ್ರಹಿಸುವ ಮನಸ್ಸಿಗೆ subconscious ಎನ್ನುತ್ತೇವೆ. ನಾವು ಮಲಗಿದ ಮೇಲೆಯೂ ಮನಸ್ಸು-ಮೆದಳು ಕೆಲಸದಲ್ಲಿರುತ್ತವೆ ಆದರೆ ಅವು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಮನೋಪರದೆಯ ಮೇಲೆ ಮೂಡುವ ಅಸ್ಪಷ್ಟ ಚಿತ್ರಗಳ ಸರಮಾಲೆ unconscious mind ನ ನಿಯಂತ್ರಣ ನಮ್ಮ ಕೈಯಲ್ಲಿರುವುದಿಲ್ಲ. conscious ಹಾಗೂ subconscious ಮನೋಸ್ಥಿತಿಯ ನಿಯಂತ್ರಣ ಎಚ್ಚರವಿದ್ದಾಗ ನಡೆಯುವುದರಿಂದ ನಾವಿದರ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ನಿರ್ವಹಿಸಬೇಕು.
ಇದು ಅಷ್ಟು ಬೇಗ convince ಆಗುವ ಸಂಗತಿಯಲ್ಲ ನನ್ನ ಮುಂದಿನ ಚರ್ಚೆಯಲ್ಲಿ ಇಂತಹ ಗಂಭೀರ ಸಂಗತಿಗಳನ್ನು ವಿವರಿಸುತ್ತೇನೆ. ಈಗಿನ ಚರ್ಚೆಯಲ್ಲಿ light ಆಗಿರುವ ವಿಷಯಗಳನ್ನು ಆರಂಭಿಸಿದ್ದೇನೆ. ಒಮ್ಮೆ ಆಸಕ್ತಿ ಬೆಳಸಿಕೊಂಡ ಮೇಲೆ ಗಂಭೀರ ವಿಷಯಗಳ ಗ್ರಹಿಕೆಯಾಗುತ್ತವೆ ಎಂಬ ಕಾರಣಕ್ಕೆ ಇಲ್ಲಿಯವರೆಗೆ ಸಣ್ಣ ಪುಟ್ಟ ಸಂಗತಿಗಳನ್ನು ಚರ್ಚಿಸಿದ್ದೇನೆ. ಅಲ್ಲಿಯವರೆಗೆ basic ಅಂಶಗಳನ್ನು ಗ್ರಹಿಸೋಣ.
Total personality ಎಂದರೆ ದೇಹ-ಮನಸ್ಸು ಎರಡರ ಪರಿವರ್ತನೆಯಾಗಿರುತ್ತದೆ. ಮನಸು ಆಲೋಚಿಸಿದಂತೆ ದೇಹ ವರ್ತಿಸುತ್ತದೆ. ಕೇವಲ ದೇಹದ ನಿಯಂತ್ರಣದಲ್ಲಿದ್ದರೆ ದುರ್ಬಲರಾಗುತ್ತೇವೆ. ದೇಹವನ್ನೂ ಮನಸ್ಸಿನ ಹಿಡಿತದಲ್ಲಿಡುವ process ನ್ನು development ಎಂದು transformation ಎಂದು ಕರೆಯಲಾಗಿದೆ. It is easy to change but difficult to transform.
So let us transform our personality.

Tuesday, April 20, 2010

Affair ಗಳ ನಿರಾಕರಣೆ

* Affair ಗಳಿಲ್ಲದೆ ಬದುಕಲು ಸಾಧ್ಯವಿಲ್ಲವೆ?
ನಿಮ್ಮ ಹಿಂದಿನ ಲೇಖನದಲ್ಲಿ ನಿರ್ವಹಣೆ ಇದೆ ಆದರೆ ನಿರಾಕರಿಸುವುದಕ್ಕೆ ಸಲಹೆಗಳಿಲ್ಲ.
_______ Management is important than rejection ಎಂಬ ವಾದವಿದೆ. ನೀವು negative ಸಂಗತಿಗಳನ್ನು ಪೂರ್ಣವಾಗಿ ನಿರಾಕರಿಸಿದರೆ ಸಂತಸರಾಗುತ್ತೀರಿ. ಹಾಗೆ ಸಂತರಾಗುವ ಬಯಕೆ ನನಗೂ ಇದೆ. ಆದರೆ ಸಾಧ್ಯವಾಗಬೇಕಲ್ಲ. So always we have to choice less dangerous one.
ಮನದ ಮುಂದಣೆ ಆಸೆಯೇ affairಗಳಿಗೆ ಕಾರಣ, ಕೆಲವರು ಚಪಲಕ್ಕಾಗಿ, ನಿಜವಾದ ಅಗತ್ಯಕ್ಕಾಗಿ, ಮತ್ತೆ ಕೆಲವರು ಚಟವಾಗಿ affair ಗಳನ್ನು ರೂಪಿಸಿಕೊಂಡಿರುತ್ತಾರೆ. ಇದಕ್ಕಿಂತಲೂ ಅಪಾಯವೆಂದರೆ ಕೆಲವರು prestige ಗಾಗಿ ಹೇಳಿಕೊಳ್ಳುತ್ತಾ ತಿರುಗುತ್ತಾರೆ. ಅನಾದಿ ಕಾಲದಿಂದಲೂ ಈ ಕುರಿತು ಚರ್ಚೆ ನಡೆದು ಇದು ಪಾಪದ ಕೆಲಸ, ಅನೈತಿಕತೆ ಎಂದು ವಿವರಿಸಲಾಗಿದೆ.ಆದರಿದು ಎಂದೂ ನಿಲ್ಲದ ಮಾನವ ದೌರ್ಬಲ್ಯವಾಗಿದೆ.
ನಾವು ಯಾಕೆ ಈ ಆಮಿಷಕ್ಕೆ ಒಳಗಾಗುತ್ತೇವೆ ಎಂಬುದನ್ನು ನಾವೇ ಆಲೋಚಿಸಬೇಕು. ಇದರಲ್ಲಿ involve ಆದ ಇಬ್ಬರಿಗೂ ಇದು ಖಂಡಿತಾ ಹಿತಾನಿಭವ ನೀಡಿ ಸುಖ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಪರಿಣಾಮ ಮಾತ್ರ "ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು:ಖ ನೋಡಾ" ಎಂಬಂತಾಗುತ್ತದೆ.
ಸಾಗರದಷ್ಟು ದು:ಖಕ್ಕಿಂತಲೂ, ಸಾಸಿವೇ ಮುಖ್ಯವೆಂದು ವಾದಿಸುವವರು ಈ ಹಿತಾನುಭವದ ಸುಳಿಗೆ ಸಿಲುಕುತ್ತಾರೆ. ಈ ರೀತಿ ಬಿದ್ದ ತೊಡಕು ತನ್ನಷ್ಟಕ್ಕೆ ತಾನೇ ತೆವಲು ತೀರಿದ ಮೇಲೆ, ಒಂದೆರಡು ಅಪಾಯದ ಸಂಗತಿಗಳು ಗೋಚರವಾದ ಮೇಲೆ ಸಡಿಲಗೊಳ್ಳುತ್ತದೆ. ಅದು ಸಡಿಲಗೊಳ್ಳುವುದರೊಳಗೆ expose ಆದರೆ ಅಪಾಯ ಗ್ಯಾರಂಟಿ. ಅದಕ್ಕೆ ಹಿರಿಯರು ಹೇಳುತ್ತಾರೆ ಕೆಮ್ಮು, ಹಾದರ ಮುಚ್ಚಿಡಲು ಬರುವುದಿಲ್ಲ ಎಂದು ಎಂದು ಕೆಮ್ಮು ಸಹಜ ಎನಿಸಿದೆ ಹಾಗಾಗಿ ಸಹಜವಾಗಿ ಕೆಮ್ಮುತ್ತೇವೆ. ಹಾದರ ಸಹಜವೆನಿಸಿದರೆ ಅದೂ ಸಾರ್ವತ್ರಿಕವಾಗುತ್ತದೆ. ಆದರೆ ನಮ್ಮ ಮಡಿವಂತ ದೇಶದಲ್ಲಿ ಹಾದರಗಳನ್ನು affair ಅನ್ನುವಷ್ಟು ಔದಾರ್ಯ ತೋರುವ ಸಾಧ್ಯತೆ ಕಡಿಮೆ. ನಾವೇ ಅದನ್ನು ಸಮಾಧಾನಕ್ಕಾಗಿ affair ಎಂದು ಸುಧಾರಿಸಿಕೊಂಡಿದ್ದೇವೆ. ಅನೈತಿಕ ಲೇಬಲ್ ಹಚ್ಚುವವರು ಕೂಡಾ ಖಾಸಗಿಯಾಗಿ ಅದನ್ನು ಮೀರಿ ಬೆಳೆಯಲು - ಬದುಕಲು ಸಾಧ್ಯವಾಗಲಿಲ್ಲ.
ನಾವು ಯಾವ ಕಾರಣಕ್ಕೆ ಈ ರೀತಿ affair ಗಳನ್ನು ಬಯಸುತ್ತೇವೆ ಎಂಬುದರ ಬಗ್ಗೆ ನಮ್ಮೊಳಗೆ ಆಂತರಿಕ ಚರ್ಚೆಯಾಗಬೇಕು. ನಿಯಂತ್ರಣದ ಮಾರ್ಗಗಳನ್ನು ಖಾಸಗಿಯಾಗಿ affair ಹೊಂದಿದವರೊಂದಿಗೆ ಚರ್ಚಿಸಿ ಸಿಕ್ಕು ಬಿಡಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಒಂದು ಎಲ್ಯಾಸ್ಟಿಕ್ limit ಇರುತ್ತದೆ. ಅದು ಹರಿಯದಂತೆ ನೋಡಿಕೊಳ್ಳಬೇಕು.
ನಿಮ್ಮ affair ಗಳನ್ನು ಜಗಜ್ಞಾಹೀರು ಮಾಡದ counselling centre ಗಳೊಂದಿಗೆ ಚರ್ಚಿಸಬೇಕು. ನಮ್ಮ ದೌರ್ಬಲ್ಯದಿಂದ ಹೊರ ಬರಬೇಕಾದರೆ Subcounscion mind ಗೆ auto suggestion ನೀಡಬೇಕು. ನಮ್ಮ ಚಟುವಟಿಕೆಗಳು shift ಆಗಿ ಯೋಗ, ಧ್ಯಾನದ ಕಡೆ ತಿರುಗಬೇಕು. ಕುಡಿತ, ಸಿಗರೇಟ್, ಏಕಾಂತ ಇನ್ನೂ ಹೆಚ್ಚು ಅಪಾಯಕಾರಿ.
ಇಂತಹ ಒಂದು ಘಟನೆಯಲ್ಲಿ ಹೆಚ್ಚು ತೊಡಕಾದ ಮೂವರನ್ನು ಕೂಡಿಸಿಕೊಂಡು ಮಾತನಾಡಿದ ಅನುಭವ ನನ್ನ ಪಾಲಿನದು. ಮಾನಸಿಕವಾಗಿ ಪೂರ್ಣ ಒಪ್ಪಿಸಿ ಸಂಬಂಧವನ್ನು detach ಮಾಡಲು success ಆದೆ. counselling ಮುಗಿಸಿ ಹೊರಟ ಮಹಿಳೆ ನನ್ನನ್ನು ಕೇಳಿದರು . ಸರ್ ನೀವು ಇಷ್ಟೆಲ್ಲ ತಿಳಿಸಿಹೇಳುತ್ತಿರಲ್ಲ, ನಿಮಗೆ ಈ ಅನುಭವ ಬಹಳ ಇದೆಯೊ ಸರ್ ಎಂದು ಕೇಳಬೇಕೆ? ಕೇವಲ ನಕ್ಕು ಸುಮ್ಮನಾದೆ. ಮತ್ತೆ ಆಕೆಯೇ ಅಂದಳು ಇದ್ರೂ manage ಮಾಡೋ ಜಾಣತನ ಇದೆ ಅನಿಸುತ್ತದೆ ಬಿಡಿ ಸರ್ ಅನ್ನಬೇಕೆ.
ಈ ರೀತಿ ಪ್ರಕರಣಗಳನ್ನು ಗಂಭೀರವಾಗಿ ಆಲಿಸುವಾಗ ಯಾವುದೇ ಕಾರಣಕ್ಕೂ biased ಆಗಿರಬಾರದು, encourage ಕೂಡಾ ಮಾಡಬಾರದು. ಹಾಗಂತ ಮಹಾನ ಪಾಪ ನೀವು ನರಕಕ್ಕೆ ಹೋಗತ್ತೀರಾ ಎಂಬ ಭಯವನ್ನು ಬಿತ್ತದೆ ನಿರಾಕರಣಾ ಭಾವ ಬೆಳೆಸಬೇಕು. ನಿಮ್ಮ ಬದುಕು - ಭಾವನೆ ಹಾಳಗದಂತೆ ಜಾಗರೂಕತೆಯಿಂದ ಮುಳ್ಳಿನ ಬೇಲಿಯ ಮೇಲಿನ ಬಟ್ಟೆ ತಗೆಯುವ ಹಾಗೆ ತಗೆಯಬೇಕು. ಇಂತಹ ಒಂದು ಸಣ್ಣ ಗುಮಾನಿಯಿಂದ ನಾಶವಾದ ಒಂದು ದೊಡ್ಡ educated family ಯ ದುರಂತ ಕಥೆ ನಮ್ಮ ಮುಂದೆ ನಡೆದು ಇಡೀ ವಂಶವೇ ಮೃತ್ಯುವಿನ ಪಾಲಾದದ್ದನ್ನು ನೋಡಿದ ವ್ಯಥೆಯೂ ನನ್ನ ಪಾಲಿಗಿದೆ. ಆದ್ದರಿಂದ please be careful, accept-it in positive way & avoid it in diplomatic way also.

ಅನಿವಾಸಿ ಭಾರತೀಯರ ಭಾಷಾ ಪ್ರೇಮ-ಸಕಾರಾತ್ಮಕ ನಿಲುವು

ನಾವು ಹುಟ್ಟಿ ಬೆಳೆದ ಪರಿಸರದಲ್ಲಿ ನಾವಿದ್ದಾಗ, ನಾವಿರುವ ರೀತಿ ಸರಿ ಅಂದುಕೊಂಡಿರುತ್ತೇವೆ. ಜಗದ ಜನಪರ ಆಲೋಚನೆ ಹೇಗಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಅದರ ಅಗತ್ಯವು ಕಂಡುಬರುವುದಿಲ್ಲ. ಅದನ್ನೇ ನಾವು Global thinking ಅಥವಾ Universal thinking ಅನ್ನುವುದು.
ವೃತ್ತಿ ಕಾರಣದಿಂದ ದೇಶ ಬಿಡುವ ಸಂದರ್ಭ ಬಂದಾಗ ಆಯಾ ದೇಶದ ಆಲೋಚನಾ ಲಹರಿಗೆ ನಾವು ಹೊಂದಿಕೊಳ್ಳಬೇಕಾಗುತ್ತದೆ. ಆಗ ನಮ್ಮ attitude ಬದಲಾಗಲೇಬೇಕು. ಆಗ ದೇಶ ಬಿಡುವಾಗ ಇದ್ದ ಸ್ಥಿತಿ, ಈಗ MNC ಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ಪ್ರಾರಂಭವಾಗಿದೆ.
ಇದೇ ಕಾರಣಕ್ಕಾಗಿಯೇ personality development course ಗಳಿಗೆ, ಅದರ ಮೇಲೆ ಬರೆಯುವ books ಗಳಿಗೆ ಮನ್ನಣೆ ಹೆಚ್ಚಾಗಿದೆ.
ವ್ಯಕ್ತಿ ತನ್ನ ದೌರ್ಬಲ್ಯಗಳ ಗಡಿದಾಟಿ positive attitude ರೂಢಿಸಿಕೊಳ್ಳುವ ಅಗತ್ಯ ಈಗ ಎಲ್ಲಡೆ ಕಾಣುತ್ತದೆ. ಇದು ಕೇವಲ gentleman ಅನಿಸಿಕೊಳ್ಳುವ ಪ್ರಶ್ನೆ ಅಲ್ಲ, gentleman ಆಗುವ ಪ್ರಶ್ನೆ.
ಇಂತಹ gentle attitude ನ್ನು ನಾವು ಅನಿವಾಸಿ ಭಾರತಿಯರಲ್ಲಿ ಕಾಣುತ್ತೇವೆ. Simplicity, positive ಹೀಗೆ ಹತ್ತು ಹಲವು ಅಂಶಗಳೊಂದಿಗೆ hardworkers ಕೂಡಾ ಆಗಿರುತ್ತಾರೆ. ನಮ್ಮವರು, ನಮ್ಮೊಂದಿಗೆ ಬೆಳೆದವರು ಬೇರೆ ನೆಲದಲ್ಲಿ ಹೀಗೆ ಸೌಮ್ಯರಾಗಿರುವುದನ್ನು ಕಂಡಾಗ ಅಚ್ಚರಿ, ಬೆರಗು ಎನಿಸಿತು. ಲಿವರ್ ಪೂಲ್ ನಲ್ಲಿರುವ ಸೋದರ ರಾಜು, ಬೆಲ್ ಫಾಸ್ಟ್ ನಲ್ಲಿರುವ ಮುರುಡಪ್ಪ, ಸ್ಪಾನ್ ಸೀಯಲ್ಲಿರುವ ಡಾ. ರವಿ ಅವರ ಸ್ವಭಾವ-ಗುಣಧರ್ಮಗಳನ್ನು ಮೆಲಕು ಹಾಕುವಾಗಲೆಲ್ಲ ಒಂದು ರೀತಿಯ pleasure ಸಿಗುತ್ತದೆ.
ಮೊನ್ನೆ ಆಸ್ಟ್ರೇಲಿಯಾದಲ್ಲಿರುವ ಶಿವಾ ಮರೆಗುದ್ದಿ ಅವರು phone ನಲ್ಲಿ ಚರ್ಚಿಸುವಾಗಲೂ ಹಾಗೆ ಎನಿಸಿತು. All NRTS are same. ನನ್ನ ಬ್ಲಾಗ್ ಓದಿ ಮುಕ್ತವಾಗಿ ಮಾತನಾಡಿದ ಮರೆಗುದ್ದಿ ಅವರು ಅನೇಕ ಸಂಗತಿಗಳನ್ನು ವಿವರಿಸಿದರು.
ಎಲ್ಲ ಹೊರನಾಡ ಕನ್ನಡಿಗರು ತುಂಬಾ ಆಸ್ಥೆಯಿಂದ ನನ್ನ blogನ್ನು ಓದಿ react ಮಾಡುತ್ತಲಿದ್ದಾರೆ. They are really serious readers. ಅಪರಿಚಿತರಾಗಿದ್ದರೂ ಕೇವಲ ಅಕ್ಷರ ಸಾಂಗತ್ಯದ ಮೂಲಕ ಭಾಷಾ ಪ್ರೇಮ ಮರೆಯುತ್ತಿರುವ ಅವರಿಗೆ ಋಣಿ.

ಗಿಡಕ್ಕೆ ಕಟ್ಟಿದ ಅರಿಶಿಣ ಕೊಂಬು - ಮನದ ಮದುವೆ......

ಎಷ್ಟೊಂದು ಸೋಜಿಗ. ನೆನಸಿಕೊಂಡರೆ ಅಚ್ಚರಿ. ಮದುವೆ ಆಗುವುದಿಲ್ಲ ಎಂದು ಗೊತ್ತಾದ ಮೇಲಿನ ನಿನ್ನ ವರ್ತನೆ ಅಚ್ಚರಿ ಎನಿಸಿತು.
ಪ್ರೀತಿ-ಪ್ರೇಮದ ವ್ಯಾಪ್ತಿ ಅರಿಯುವುದು ಸರಳವಲ್ಲ. ಪ್ರೀತಿ ಅಂತಹ ಸಂಗತಿಗಳನ್ನು ಪರಿಚಯಿಸುತ್ತದೆ.
ಅಂದು ಏಕಾಏಕಿ ಏನೂ ಹೇಳದೆ ಶಾಲ್ಮಲಾ ಹಾಸ್ಟೇಲಿನ ಹಿಂದಿರುವ ಕಾಡಿಗೆ ಹೋಗೋಣವೆಂದಾಗ ಏನೂ ತಿಳಿಯಲಿಲ್ಲ.
ಅಂದು ಮಾತಿಗಿಂತ ಮೌನವೇ ಕೆಲಸ ಮಾಡಿತು, ಕೇಳುವ ಶಬ್ದಗಳಿಗಿಂತ, ಕೇಳದ ಶಬ್ದಗಳು ನೀಡುವ ಅರ್ಥ ಅಷ್ಟಿಷ್ಟಲ್ಲ. Heard melodies are sweet but those unheard are sweeter ಎನ್ನೊ keats ಸಾಲುಗಳು ರಿಂಗಣವಾಡಿದವು.
ಅತ್ತ-ಇತ್ತ ಸುತ್ತಲೂ ತಿರುಗಾಡಿದಾಗ ನಮ್ಮ ಮಧ್ಯ ಮಾತುಗಳು ಮಾಯವಾಗಿದ್ದವು. ಬದುಕಿನಲ್ಲಿ ಮತ್ತೆಂದೂ ಒಂದಾಗಿ ಬಾಳುವುದಿಲ್ಲ ಎಂದು ಗೊತ್ತಾದಾಗ ಆದ ತಲ್ಲಣ ಅಷ್ಟಿಷ್ಟಲ್ಲ.
ವಾಸ್ತವದ ಪಾಠ ಭಾವನಾತ್ಮಕ ಪ್ರೀತಿಗೆ ಅರ್ಥವಾಗುವುದೇ ಇಲ್ಲ. ಆದರೆ ಪ್ರೇಮ ಭಾವನೆಗಳಿಗೆ ಪರಿಮಿತಿ ಹಾಕುವುದು ಅಷ್ಟೇ ಕಷ್ಟ.
ಇದ್ದಕ್ಕಿದ್ದ ಹಾಗೆ ನಿನ್ನ ಚೀಲದಿಂದ ಅರಿಶಿನ ಕೊಂಬು ಕಟ್ಟಿದ ದಾರ ತೆಗೆದಾಗ ನನಗೇನು ಅರ್ಥವಾಗಲಿಲ್ಲ. ಬಾನೆತ್ತರಕ್ಕೆ ಬೆಳೆದ ಆಲದ ಮರವನ್ನು ಏಳು ಸಲ ಪ್ರದಕ್ಷಿಣೆ ಹಾಕಿ ಇಲ್ಲದ ನಂಬಿಕೆಗಳನ್ನು ಸೃಷ್ಟಿಸಿದಾಗ ಮೌನವಾಗಿದ್ದು ಯಾಕೆ ಎಂದು ಇಂದಿಗೂ ಅರ್ಥವಾಗಿಲ್ಲ. ಮದುವೆಗೆ ಭಿನ್ನ ವಾಖ್ಯಾನ ನೀಡಿದ ನಿನ್ನ ಭಾಷೆ ಅನುಪಮ. ನನ್ನ ಕೈಗಿತ್ತ ಅರಿಶಿನ ದಾರವನ್ನು ಕೊರಳಿಗೆ ಕಟ್ಟಲು ಆದೇಶಿಸಿದಾಗ ದಿವ್ಯಮೌನ. ನಿರ್ಜನ ಕಾಡು ಮಾತನಾಡಲು ಅಸಹಾಯಕ. ಕಟ್ಟಲು ಒತ್ತಯಿಸಿದ ನಿನ್ನ ಶಬ್ದಗಳು ಅರ್ಥವಾಗದಿದ್ದರೂ ನೀ ಹೇಳಿದಂತೆ ನಿನ್ನ ಕೊರಳಿನ ದಾರ ಬಿಗಿದೆ. ಅಲ್ಲಿ ಹಾಕಿದ ಮೂರು ಗಂಟುಗಳು ಶಾಶ್ವತವಾಗಿ ನಿಲ್ಲುವುದಿಲ್ಲ ಎಂದು ಗೊತ್ತಿದ್ದರೂ, ಕಟ್ಟಿಸಿಕೊಂಡ ನಿನ್ನ ಹಠಮಾರಿತನ ಅರ್ಥವಾಗಲಿಲ್ಲ. ಅದರ ಬದಲು ಎಲ್ಲವನ್ನು, ಎಲ್ಲದನ್ನು ಎದುರಿಸಿ ಮದುವೆ ಆಗಿದ್ದರೆ ಸುಖವಿತ್ತಲ್ಲ.
ಇರಲಿ ಬಿಡು ಪ್ರಕೃತಿ ಮಡಿಲಲ್ಲಿ ನಡೆದ ಮದುವೆಗೆ ಮನಸಾಕ್ಷಿ ಶಾಶ್ವತ ಅಕ್ಷತೆ ಹಾಕಿತು. ಕತ್ತಲಾಗುವ ತನಕ ಮದುಮಗಳಂತೆ ಸಂರ್ಭಮಿಸಿದ ನಿನ್ನ ವರ್ತನೆ ಅರಿಯಲಾಗಲಿಲ್ಲ. ಕತ್ತಲಾದರೂ ಕಾಡು ಬಿಡುವ ಮನಸ್ಸಾಗಲಿಲ್ಲ, ಇರುವ ಧೈರ್ಯವೂ ಇರಲಿಲ್ಲ. ಗೋಧೂಳಿ ಸಮಯದಲಿ ಅರಿಶಿನ ದಾರವನ್ನು ಗಿಡಕ್ಕೆ ಕಟ್ಟಿಹಾಕಿ ಮರಳುವಾಗ ಮುಗಿದ ಮನದ ಮದುವೆಗೆ ನೂರೆಂಟು ಸಾಕ್ಷಿಗಳಿದ್ದವು........... ಆದರೆ ಈಗ...........

Monday, April 19, 2010

Affair ಗಳ ನಿರ್ವಹಣೆ

* Sex Scandals ಬಗ್ಗೆ ಮಾತನಾಡಬಾರದು ಎಂದಿದ್ದೀರಿ ಆದರೆ ಈ ರೀತಿ ಸಂಬಂಧಗಳು ಸರಿಯೆ?
________ ಬೇರೋಬ್ಬರ sex ಹಗರಣಗಳ ಬಗ್ಗೆ ಹಗುರವಾಗಿ ಮಾತನಾಡುವುದರಿಂದ ನಾವೇನು ಸಾಚಾ ಆಗುವುದಿಲ್ಲ. ಈ ರೀತಿ affair ಗಳು ಇರುವುದು ಒಳ್ಳೆಯದೆಂದು ನನ್ನ ವಾದವಲ್ಲ.
ಸರಿಯಲ್ಲ ಎಂದು ಉಪದೇಶ ಮಾಡಿದರೆ ಮನಸು ಬಿಡಬೇಕಲ್ಲ. ಇದ್ದ ಈ ರೀತಿ affair ಗಳನ್ನು ಎಲ್ಲ negative ಪರಿಣಾಮಗಳನ್ನು ಊಹಿಸಿ ಬಿಡಲೇಬೇಕು. ಮಾಗಿದ ವಯಸ್ಸು ಈ ಸಂಬಂಧಗಳನ್ನು ಖಂಡಿತಾ ತಡೆಯುತ್ತದೆ. ಆದರೆ ಹರೆಯದಲ್ಲಿನ ಅವಘಡಗಳು ನಿರಂತರ ಕಾಡುತ್ತವೆ.
ಜೀವನದ ಏರಿಳಿತದಲ್ಲಿ, ತಪ್ಪು, ಒಪ್ಪುಗಳು ಸಹಜ ಆದರೆ ಅವುಗಳ ನಿಯಂತ್ರಣ, ಅವುಗಳು ಗಮನಿಸುವಿಕೆ ಮಹತ್ವದ್ದು. ಹಳ್ಳಿಗಳಲ್ಲಿ ನಡೆಯುವ ಬಹುಪಾಲು ಕೊಲೆಗಳಿಗೆ ಕಾರಣ ಅನೈತಿಕ ಸಂಬಂಧ ಹಾಗೂ ಅನೈತಿಕ ಸಂಬಂಧಗಳ ಗುಮಾನಿಗಳೇ. ಹಾಗಂತ ಅವು ನಿಂತಿಲ್ಲವಲ್ಲ. ತಪ್ಪಾಗುತ್ತಿರುವುದು ಅವುಗಳ ಅರ್ಥೈಸುವಿಕೆ ಹಾಗೂ ನಿರ್ವಹಣೆಯಲ್ಲಿ.
ಅವುಗಳನ್ನು ತುಂಬಾ serious ಆಗಿ ವಿಶ್ಲೇಷಿಸುವುದೇ ಇವುಗಳ ವಿಕಾರ ಪರಿಣಾಮಕ್ಕೆ ಕಾರಣ. ವೈಯಕ್ತಿಕ ಆತಂಕಗಳು, public issues ಆಗಿ ಬಿಡುತ್ತವೆ. Uneducated ಇದ್ದವರು,emotional ಇದ್ದವರು ಇವುಗಳನ್ನು ವೈಭವಿಕರಿಸುತ್ತಾರೆ.
ಮನಸಿನ ನೆಮ್ಮದಿ ಹಾಳು ಮಾಡುವ, ಶಿಥಿಲಗೊಳಿಸುವ affair ಗಳ control ಗೆ ಇದಕ್ಕೆ ಒಳಗಾದವರು ಪ್ರಯತ್ನಿಸಬೇಕು.
control ಮಾಡಲು ವಿಫಲರಾಗುವುದಲ್ಲದೆ ಇತರ unwanted ಕೆಲಸಗಳನ್ನು ಮಾಡುತ್ತಾರೆ.
ನನ್ನ ಗಮನಕ್ಕೆ ಬಂದ ಒಂದು incident ಇಲ್ಲಿ ವಿವರಿಸುತ್ತೇನೆ.
ಜನಪ್ರಿಯ ವ್ಯಕ್ತಿಯೊಬ್ಬರು ತಾವು ಹೊಂದಿದ affair ನ್ನು ರಹಸ್ಯವಾಗಿಯೇ ಇಟ್ಟಿದ್ದರು. ಅವರಿಗೆ ಒಳ್ಳೆಯ social image ಇತ್ತು. ಅವರು ಕೂಡಾ ತಮ್ಮ gentleman image ನ್ನು ಉಳಿಸಿಕೊಂಡು ಬರುವುದಕ್ಕೆ, ಒಳ್ಳೆಯ ಮನುಷ್ಯ ಎಂದೆನಿಸಿಕೊಳ್ಳುವ ಕಾರಣಕ್ಕೆ affairನ್ನು ಗುಟ್ಟಾಗಿಯೇ ಇಟ್ಟಿದ್ದರು.
ಆದರೆ ಅವರ weakmen ಎಂದರೆ ಸ್ವಲ್ಪ ಕುಡಿದರೆ ಸಾಕು ಖಾಸಗಿ ವಿಷಯಗಳನ್ನು, ಮನದಾಳದ secret ಯೋಜನೆಗಳನ್ನು ಸ್ಪೋಟಿಸುತ್ತಿದ್ದರು. ಕುಡಿತದಲ್ಲಿ ತಮ್ಮೊಂದಿಗೆ ಕುಳಿತವರೆಲ್ಲ ತುಂಬಾ ವಿಶ್ವಾಸಿಕರು ಎಂಬ ಭ್ರಮೆಯಿರುತ್ತಿತ್ತು.
ಅಂತಹ ಒಂದು ಭ್ರಮೆಯಲ್ಲಿದ್ದಾಗ ತಾವು ಹತ್ತಾರು ವರ್ಷ ರಹಸ್ಯವಾಗಿಟ್ಟಿದ್ದ affair ನ್ನು ಕೊಚ್ಚಿಕೊಂಡರು. ಅದರ ಪರಿಣಾಮ ಅವರು ಊಹಿಸಿರಲಿಲ್ಲ. ಮುಂದೆ ಆದ ಅನಾಹುತಗಳು ಇಂದಿಗೂ ಅವರ ಗಮನಕ್ಕೆ ಬಾರದಿರುವುದು ಅಷ್ಟೇ ಆಶ್ಚರ್ಯಕರ ಕೂಡಾ.
ಗುಂಡು partyಯಲ್ಲಿ ಶಾಮಿಲಾಗಿದ್ದ ಒಬ್ಬನಿಗೆ ಇವರ affair thrill ಉಂಟುಮಾಡಿತು. ತನಗಾದ ಅಚ್ಚರಿಯಲ್ಲಿ ಇತರರೊಂದಿಗೆ ಹಂಚಿಕೊಳ್ಳುವ ಧಾವಂತ ಶುರು ಆಯಿತು.
ಅವನು ಅಷ್ಟೇ ಚಪಲದ ಮನುಷ್ಯ. ಅಲ್ಕೊಹಾಲ್ ಒಳಗಿಳಿದಾಗಲೇ ಈ ವಿಷಯವನ್ನು ಹಂಚಿಕೊಳ್ಳುವ ಇರಾದೆಯನ್ನು subconscious mind ಗೆ ರವಾನಿಸಿದ.
ಈ ಅಪಾಯಕಾರಿ ಮನುಷ್ಯ ಹಾಗೂ affair ಇಟ್ಟುಕೊಂಡಿರುವ ನಾಯಕರು ನನಗೆ ಚಿರಪರಿಚಿತರು. ಅಂತಹ ಒಂದು ಗುಂಡಿನ ಸುರಿಮಳೆ ನಡೆದಾಗ, ನಿಧಾನವಾಗಿ ಅವನು ಬಾಯಿ ಬಿಟ್ಟಾಗ ನನಗೆ shock! ಅವರ ನಾಯಕರ ಸಾಧನೆಯನ್ನು ರಸವತ್ತಾಗಿ ವರ್ಣಿಸಿದ.
ನಾನು ನಿಧಾನವಾಗಿ ಕೇಳಿದೆ ಇದು ಎಷ್ಟು ಜನರಿಗೆ ಗೊತ್ತಿದೆ? ಎಂದು. ಅವನು ಅಷ್ಟೇ ಅಭಿಮಾನದಿಂದ ಬಾಯಿ ಬಿಟ್ಟ ಇಲ್ಲ ಸರ್ ಇದನ್ನು ಅವರು ಕೆಲವೇ ಜನರ ಬಳಿ ಹೇಳಿದ್ದಾರೆ ಆಗ ನಾನು ಇದ್ದೆ ಎಂದೆ. ಸರಿ ಇದನ್ನು ನೀನೆಷ್ಟು ಜನರಿಗೆ ಹೇಳಿದ್ದೀಯಾ ಎಂದೆ.
God promise ಸರ್ ನಿಮ್ಮನ್ನು ಬಿಟ್ಟು ಯಾರಿಗೂ ಹೇಳಿಲ್ಲ. ಎಂದು ಮಹಾ ರೈಲು ಬಿಟ್ಟ. ಈ ಘಟನೆಯ ನಂತರ ನನಗೆ ನಿಧಾನವಾಗಿ ತಿಳಿಯಿತು ಈ ವಿಷಯವನ್ನು ನನ್ನಂತಹ ನೂರಾರು ಜನರೆದುರು ಸ್ಪೋಟಿಸಿ open secret ಮಾಡಿದ್ದಾನೆ ಎಂದು. ಈ ವಿಷಯ ರಹಸ್ಯವಾಗಿಯೇ ಇದೆ ಎಂದು ಹೇಳಿದವರು, ಕೇಳಿದವರು ಭಾವಿಸಿರುವುದು biggest irony.
ಇದನ್ನು ಪ್ರಸ್ತಾಪಿಸುವ ಕಾರಣ ಇಷ್ಟೇ ನೀವಿಟ್ಟುಕೊಂಡಿರುವ affair ಗಳನ್ನು ಎಂತಹ ಕಾರಣಕ್ಕೂ prestige ಎಂದು ಭ್ರಮಿಸಬೇಡಿರಿ. ಯಾವ ಕಾರಣಕ್ಕೂ affair ಇಟ್ಟುಕೊಂಡವರ ಹೆಸರು ಹೇಳಬೇಡಿರಿ. Negative ಸಂಗತಿಗಳನ್ನು ಕೇಳಿಸಿಕೊಳ್ಳುವವರೆಲ್ಲ ತುಂಬಾ ವಿಶ್ವಾಸಿಕರು ಎಂದು ಭ್ರಮಿಸಬೇಡಿರಿ.
ನಿಮ್ಮ weakness ಗಳು ಎಲ್ಲರಿಗೂ ಗೊತ್ತಿರಲಿ ಎಂಬ ಪಾರದರ್ಶಕತೆ ಬೇಡ. positive ಸಂಗತಿಗಳಿಗೆ ಮಾತ್ರ transferant ಆಗಿರಿ. ಇದರಿಂದ ನೀವು safe . ಇಲ್ಲದಿದ್ದರೆ ನಿಮ್ಮ ಮಾನ ಹೋಗುವುದಲ್ಲದೆ, ನಿಮ್ಮೊಂದಿಗೆ affair ಇಟ್ಟುಕೊಂಡವರ image ಹಾಳಾಗುವ ಎಚ್ಚರಿಕೆಯೂ ಇರಲಿ.

Romantic ಹಾಗೂ Flirt ಗೂ ಅಂತರ?

* ಗಂಡು ಹೆಣ್ಣಿನ ಸಂಬಂಧಗಳನ್ನು romantic ಅಥವಾ flirt ಎಂದು ಭಿನ್ನವಾಗಿ ಭಾವಿಸುವುದು ಯಾಕೆ?
............. ಗಂಡು ಹೆಣ್ಣಿನ ಸಂಬಂಧ ಜಾಗತಿಕವಾಗಿ ಸ್ವೀಕೃತವಾದದು. ಅದು ಅತೀಯಾದರೆ ಅನೈತಿಕತೆ ಪಟ್ಟ ದೊರಕುತ್ತದೆ. ಹೀಗೆ ಗಂಡು ಹೆಣ್ಣಿನ ಸಂಬಂಧವನ್ನು ವಿರೋಧಿಸುತ್ತಲೇ, ವೈಯಕ್ತಿಕವಾಗಿ ಅಪೇಕ್ಷಿಸುವ ಮನಸ್ಸಿನ ವ್ಯಾಪಾರ ವಿಚಿತ್ರವಾದದು.
ಗಂಡು ಹೆಣ್ಣಿನ ಖಾಸಗಿ ಸಂಬಂಧಗಳು ಬಯಲಾದರೆ ವ್ಯಭಚಾರ, ಗುಟ್ಟಾಗಿದ್ದರೆ ಕ್ಷೇಮ ಎಂದು ಆಲೋಚಿಸುವ ನಮ್ಮ ಕ್ರಮ ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ನನ್ನದಲ್ಲ.
ಲೋಕದ ವ್ಯಾಪಾರವೇ ಹೀಗೆ, ನಮಗೊಂದು, ಬೇರೆಯವರಿಗೊಂದು ಎಂಬ ನ್ಯಾಯ. ಬೇರೆಯವರ ಇಂತಹ ತಪ್ಪುಗಳನ್ನು(?) ಚರ್ಚಿಸುವ ನಾವು ಆತ್ಮವಿಮರ್ಶೆ ಮಾಡಿಕೊಳ್ಳಲು ಹಿಂಜರಿಯುತ್ತೇವೆ. ಪ್ರೇಮ ಪ್ರಕರಣಗಳು, Intercast ಮದುವೆಗಳು, ಹೀಗೆ negative ಅನಿಸಿದ ಘಟನೆಗಳನ್ನು ಸಾಚಾ ಅಲ್ಲ ಎಂದು ನಿರ್ಧರಿಸುತ್ತೇವೆ. ಗಂಡು-ಹೆಣ್ಣಿನ ಸಂಬಂಧ ಖಂಡಿತಾ ಸಾರ್ವತ್ರಿಕ ವಿಷಯವಲ್ಲ. ಅದು ಪರಸ್ಪರ ಅಗತ್ಯ ಅನಿವಾರ್ಯತೆ ಅದನ್ನು ಚರ್ಚಿಸುವ ಹಕ್ಕು ಬೇರೆಯವರಿಗಿಲ್ಲ. ಈ ವಿಷಯವಾಗಿ ನಾವಿನ್ನು ನಿರ್ಲಿಪ್ತರಾಗದೇ, ನಮ್ಮ ಸಮಸ್ಯ ಎಂಬ ರೀತಿಯಲ್ಲಿ ಚರ್ಚಿಸುತ್ತೇವೆ.
ಈ ರೀತಿಯ ಚರ್ಚೆ ಆಗುವಾಗಲೆಲ್ಲ, ಜೆ.ಎಚ್. ಪಟೇಲರು ಹೇಳಿದ ಕಥೆ ನೆನಪಾಗುತ್ತದೆ. "ಇಬ್ಬರು ಸನ್ಯಾಸಿಗಳು, ನದಿ ತೀರದಲ್ಲಿ ನಿಂತಿರುತ್ತಾರೆ. ಒಬ್ಬ ಸುಂದರವಾದ ಹುಡುಗಿ ನದಿ ದಾಟಿಸಲು ಸನ್ಯಾಸಿಗಳನ್ನು ವಿನಂತಿಸಿಕೊಳ್ಳುತ್ತಾಳೆ. ಆಗ ಒಬ್ಬ ಸನ್ಯಾಸಿ ಸುಂದರಿಯನ್ನು ಮುಟ್ಟುವುದರಿಂದ ತನ್ನ ಸನ್ಯಾಸಧರ್ಮ ಒಡೆದು ಅಪಚಾರವಾಗುತ್ತದೆ ಎಂದು ಹೆದರಿ ನಿರಾಕರಿಸುತ್ತಾನೆ. ಆದರೆ ಇನ್ನೊಬ್ಬ ಹುಡುಗಿಗೆ ನೆರವಾಗಬೇಕು ಎಂಬ ಕಾರಣಕ್ಕೆ ಸುಂದರಿಯನ್ನು ಹೆಗಲ ಮೇಲೆ ಕೂಡಿಸಿಕೊಂಡು ನದಿಯನ್ನು ದಾಟಿಸಲು ನೀರಿಗಿಳಿಯುತ್ತಾನೆ. ದಂಡೆಯ ಮೇಲೆ ನಿಂತ ಸನ್ಯಾಸಿ, ನೀರಿಗಿಳಿದ ಸನ್ಯಾಸಿಯ ಪಾವಿತ್ರ್ಯ ಹಾಳಾದ ಬಗ್ಗೆ ಚಿಂತಿಸುತ್ತಾನೆ. ನೀರಿಗಿಳಿದ ಸನ್ಯಾಸಿಯ ತಲೆಗೆ ತಲುಪಬಹುದಾದ ಸುಂದರಿಯ ತೊಡೆಗಳನ್ನು ನೆನಸಿಕೊಂಡು ವಿಚಲಿತನಾಗುತ್ತಾನೆ, ಕೆಲ ಕ್ಷಣ ಉದ್ರೇಕಗೊಳ್ಳುತ್ತಾನೆ. ಅಯ್ಯೋ ದಂಡೆ ಮೇಲೆ ನಿಂತುಕೊಂಡು ಊಹಿಸುವ ತನ್ನ ಗತೀಯೇ ಹೀಗಿರುವಾಗ, ನಿಜವಾಗಲು ಸುಂದರಿಯನ್ನು ಹೊತ್ತುಕೊಂಡು ಸಾಗಿರುವ ಸನ್ಯಾಸಿಯ ಪಾಡೇನು ಎಂದು ಆಲೋಚಿಸುತ್ತಾನೆ. ಹೀಗೆ ಆಲೋಚಿಸುತ್ತಲೇ ಸುಂದರಿಯ ದೇಹಸಿರಿಯನ್ನು ಕಲ್ಪಿಸುತ್ತಾ ಲೈಂಗಿಕಾನುಭವದಿಂದ ಕಂಪನಗೊಳ್ಳುತ್ತಾನೆ.
ಆದರೆ ಅತ್ತ ಆ ಕಡೆ ಸುಂದರಿಯೊಂದಿಗೆ ನದಿಯನ್ನು ದಾಟುತ್ತಿರುವ ಸನ್ಯಾಸಿ ಮನಸ್ಸಿನಲ್ಲಿ ಸುಂದರಿಯ ಬಗ್ಗೆ ಯಾವುದೇ ಕಾಮುಕ ಭಾವ ಇಟ್ಟುಕೊಳ್ಳದೇ ನದಿ ದಾಟುವ ಎಚ್ಚರಿಕೆಯಲ್ಲಿರುತ್ತಾನೆ. ಮೈ ಬೆಚ್ಚಗಾಗಿಸುವ ಯಾವುದೇ ಕಾಮ ಭಾವನೆಗಳು ಸುಂದರಿಯ ಸ್ಪರ್ಶದಿಂದ ಉತ್ಪನ್ನವಾಗುವುದಿಲ್ಲ. ಅತ್ಯಂತ safe ಆಗಿ ಸುಂದರಿಯನ್ನು ನದಿ ದಾಟಿಸಿ ಕೃತಜ್ಞನಾಗುತ್ತಾನೆ. ಅವನದು ನಿಜವಾದ ಸನ್ಯಾಸ. ಆದರೆ ನದಿ ತೀರದಲ್ಲಿ ನಿಂತುಕೊಂಡು ಸುಂದರಿಯನ್ನು ಮುಟ್ಟಿ ಪಾಪಿಯಾಗಲಿಲ್ಲ ಎಂದು ಕೊಚ್ಚಿಕೊಳ್ಳುವ ಸನ್ಯಾಸಿ ನಿಜವಾದ ಕಾಮುಕ. ಈ ಘಟನೆಯಿಂದ ಮನಸ್ಸಿನ ವ್ಯಾಪಾರದ ಸೂಕ್ಷ್ಮತೆ ಅರ್ಥವಾಗುತ್ತದೆ.
ಈ ಕಥೆಯನ್ನು ಮಾನ್ಯ ಜೆ.ಎಚ್. ಪಟೇಲರು ಬೇರೆ reference ನಲ್ಲಿ ಹೇಳಿದ್ದರು. ಅದು ಇಲ್ಲಿಯೂ ಹೊಂದುತ್ತದೆ. ಆದ್ದರಿಂದ ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಂಡೆ.ಕಾಮವೆಂಬುದು ಮನಸಿನ ವ್ಯಾಪಾರ, ಕೇವಲ ಕೊಚ್ಚಿಕೊಳ್ಳಲು ಮಾತ್ರ ಪವಿತ್ರತೆಯ ಸೋಗಲಾಡಿತನ.
ಬೇರೆಯವರ ಸಂಬಂಧಗಳ ವ್ಯಾಪ್ತಿ, ಮಿತಿ ಗೊತ್ತಿರದೇ ಮಾತನಾಡುವವರಿಗೆ ಮೇಲಿನ ಕಥೆ ಎಚ್ಚರಿಕೆ ಕೊಡುತ್ತದೆ. ಹೆಣ್ಣಿನ ಅಥವಾ ಗಂಡಿಗೆ ಪ್ರಿಯವೆನಿಸಿ, ಸಹ್ಯವೆನಿಸಿ ಸಂಬಂಧ ಉಂಟಾದರೆ romantic, ಇಚ್ಛೆಗೆ ವಿರೋಧವಾಗಿ ಕೆಣಕಿ ಸಂಬಂಧ ಹೊಂದಲು ಆಸೆ ಪಟ್ಟರೆ flirt ಆಗುತ್ತದೆ.
ಇದು ಪರಸ್ಪರ ಕಣ್ಣೊಟದಲ್ಲಿ, ಕಣ್ಣಾಟದಲ್ಲಿ, ಕಳ್ಳಾಟದಲ್ಲಿ ಸಾಬೀತಾಗುತ್ತದೆ. ಪರಸ್ಪರ ನೋಡುವ ನೋಟದಲ್ಲಿಯೇ ಸಂಬಂದವನ್ನು ಗ್ರಹಿಸಬಹುದು. ಮನಸಿಗೆ ಅಂತಹ ಶಕ್ತಿ ಇದೆ. ಅದರಲ್ಲೂ ಸೂಕ್ಷ್ಮ ಗ್ರಾಹಿ ಹೆಣ್ಣಿಗೆ, ಗಂಡು ಯಾವ ಅರ್ಥದಲ್ಲಿ ತನ್ನನ್ನು ನೋಡುತ್ತಾನೆ ಎಂದು ಗ್ರಹಿಸುವ ಶಕ್ತಿ ಇರುತ್ತದೆ. ಇದನ್ನು ನಾನು ಅನೇಕ counselling ಸಂದರ್ಭದಲ್ಲಿ ಹುಡುಗಿಯರ ಅಭಿಪ್ರಾಯದ ಮೂಲಕ ಅರಿತಿರುವುದನ್ನು ಮತ್ತೆ ವಿವರಿಸುತ್ತೇನೆ. so ಈಗ ನೀವು ಬೇರೆಯವರ ಸಂಬಂಧಗಳನ್ನು ಆಡಿಕೊಳ್ಳುವಾಗ ಮೇಲಿನ ಸನ್ಯಾಸಿಗಳನ್ನು ನೆನಪಿಸಿಕೊಂಡು ನಿರ್ಲಿಪ್ತತೆಯನ್ನು ರೂಢಿಸಿಕೊಲ್ಳಿರಿ.

Friday, April 16, 2010

ಎರಡು ದಶಕಗಳ ವೃತ್ತಿ ಜೀವನದ ತೃಪ್ತಿಯ ಕ್ಷಣಗಳು
ಪರ್ವ - 1
ಎಲ್ಲ ಹಿರಿಯರಿಂದ 'ಸಿದ್ದು' ಎಂದು ಕರೆಸಿಕೊಳ್ಳುವುದರಿಂದ ನನಗೆ ವಯಸ್ಸಾಗಿದೆ ಎಂದೆನಿಸುವುದಿಲ್ಲ. ನನಗೀಗ ನಲವತ್ತ್ಥೈದು ಎಂದಾಗ ಎಲ್ಲರಿಗೂ ಅಚ್ಚರಿ. ಎರಡು ದಶಕಗಳ ವಿದ್ಯಾರ್ಥಿ ಜೀವನ, ಎರಡು ದಶಕಗಳ ವೃತ್ತಿ ಜೀವನವನ್ನು ಮೆಲಕು ಹಾಕಲು ಖಂಡಿತಾ ತೃಪ್ತಿ ಎನಿಸುತ್ತದೆ.
ಒಬ್ಬ flop ವಿದ್ಯಾರ್ಥಿ, successful teacher ಆದದ್ದು ನಿಜವಾಗಲೂ ಪವಾಡವೇ ಸರಿ!
ವಿದ್ಯಾರ್ಥಿ ಜಿವನದಲ್ಲಿ ಅದರಲ್ಲೂ ವಿಶೇಷವಾಗಿ primary ಹಾಗೂ secondary ಹಂತದಲ್ಲಿ ನಾನು ಸರಿಯಾದ ಶಿಕ್ಷಣವನ್ನು ಪಡೆಯಲಿಲ್ಲ. ಕನ್ನಡ ಬಿಟ್ಟರೆ ನನಗೆ ಬೇರೆ ವಿಷಯಗಳು ತಲೆಗೆ ಹೋಗಲಿಲ್ಲ, ಹೋಗಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ.
17 ವರ್ಷದ PG. ಮುಗಿಸಲು 19 ವರ್ಷ ತಗೊಂಡಿದ್ದೇ ನನ್ನ poor performance ಗೆ ಸಾಕ್ಷಿ! ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನವನ್ನಂತೂ ಬಿಡಲಿಲ್ಲ.
1989 ರಲ್ಲಿ M.A. ಮುಗಿದಾಗ ಮುಂದೇನು? ಎನ್ನುವುದಕ್ಕೆ ಮಾರ್ಗದರ್ಶನ ನೀಡುವವರು ಇರಲಿಲ್ಲ.
ಸರಕಾರಿ, ಅರೆ ಸರಕಾರಿ ನೌಕರಿ ಎಂದರೇನು? approval, grant ಇತ್ಯಾದಿ ಪದಗಳ ಪರಿಚಯವೇ ಇರಲಿಲ್ಲ. ಒಮ್ಮೆ ಕಾಲೇಜು ಸೇರಿದರೆ ಸಾಕು ತಾನೇ ತಾನಾಗಿ salary start ಆಗುತ್ತದೆ ಎಂದು ಭ್ರಮಿಸಿದ ದಿನಗಳವು.
1993 ರಲ್ಲಿ ಗ್ರಾಮೀಣ ಕೋಟಾವಡಿಯಲ್ಲಿ ಸರಕಾರಿ ನೌಕರನಾಗುವ ಅವಕಾಶ ಕಳೆದುಕೊಂಡದ್ದು ಕೇವಲ 1\2% ರಲ್ಲಿ M.A. ದಲ್ಲಿ 54.5 % ತಗೊಂಡಿದ್ದು ಎಡವಟ್ಟಾಯಿತು.
KLE ಗೆ ಕೊಟ್ಟ Interview ಚನ್ನಾಗಿತ್ತು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆ ಯ ಮೇಲೆ ಹಿಡಿತ ಸಿಕ್ಕಿತ್ತು.
1989 ರಲ್ಲಿ 6 ತಿಂಗಳು ಚಿತ್ರದುರ್ಗದ ಮಹಾರಾಣಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು family welwisher ಆಗಿದ್ದ CPI. ಎಲ್. ಆರ್ ಮಾಲಿಪಾಟೀಲ ನೆರವಾದರು. ಸಂಸ್ಥೆಯ ಮುಖ್ಯಸ್ಥ ತಿಂಗಳಿಗೆ ಕೇವಲ 500/- ಕೊಡುತ್ತಿದ್ದರು. ಅದು room rent ಗೆ ಸಾಲುತ್ತಿರಲಿಲ್ಲ. ನಾನು ದುರ್ಗದಲ್ಲಿರುವವರೆಗೆ ಮಾಲಿಪಾಟೀಲರು ತುಂಬಾ ಪ್ರಿತಿಯಿಂದ ನೋಡಿಕೊಂಡು ದಿನಾ ಊಟ ಹಾಕಿ ನೆರವಾದರು.
Approval ತೊಂದರೆ ಎನಿಸಿದಾಗ ಸ್ನೇಹಿತರ ಸಲಹೆಯಂತೆ ದುರ್ಗ ಬಿಡಬೇಕಾಯಿತು. ಮೊದಲ ವರ್ಷದಲ್ಲಿ ತಂದು ಕೊಟ್ಟ success ಉಪನ್ಯಾಸಕ ವೃತ್ತಿಗೆ ಅಂಟಿಸಿ ಬಿಟ್ಟಿತು. Teaching profession ನಲ್ಲಿರುವ popularity ಇತರ ಗುರಿಗಳನ್ನು ನಾಶಮಾಡಿತು. ಬಂಧುಗಳ ಸಲಹೆ ಮೇರೆಗೆ 1990 ರಲ್ಲಿ ಗದಗ JT college ಗೆ Join ಆದೆ. part time ಇದ್ದಾಗಲೇ court ಗೆ ಹೋಗಿದ್ದರೆ regular ಆಗುತ್ತಿದ್ದೆ. court ಕಟ್ಟೆ ಹತ್ತುವ ಮನಸ್ಸಾಗದೇ ನಾಲ್ಕಾರು ಕಡೆ ಕೆಲಸ ಮಾಡಿದೆ. ಆಗ ನನಗೆ English teacher of Gadag-Betageri ಎಂದು ಕರೆಯುತ್ತಿದ್ದರು.
JT. college, KLE women's, Basaveshwar, Tontadarya polytechnic, KLE polytechnic Hubli, KR Bellad Mundaragi ಹೀಗೆ ಎಲ್ಲ ಕಡೆ ಕೆಲಸ ಮಾಡಿದಾಗ ತಿಂಗಳ ಕೊನೆಯಲ್ಲಿ Full time ಉಪನ್ಯಾಸಕರು ತಗೆದುಕೊಂಡಷ್ಟು salary ನನ್ನ ಪಾಲಿಗಿರುತ್ತಿತ್ತು. post regularisation ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. popularity ಬೆನ್ನು ಹತ್ತಿ, security ಕಳೆದುಕೊಂಡೆ.
ಒಂದು ಹೊಸ ಸೈಕಲ್ ತಗೆದುಕೊಂಡು ಎಲ್ಲ ಕಾಲೇಜುಗಳಿಗೂ ಅಲೆದಾಡಿದೆ. ವಿದ್ಯಾರ್ಥಿಗಳು ತೋರುತ್ತಿದ್ದ ಪ್ರೀತಿ ವಿಶ್ವಾಸ ನೆನಸಿಕೊಂಡರೆ ಈಗ ಅಚ್ಚರಿ ಎನಿಸುತ್ತದೆ. ವಿದ್ಯಾರ್ಥಿಗಳ ಪ್ರೀತಿ ನನ್ನೆಲ್ಲ ನೋವುಗಳನ್ನು ಮರೆಸಿತು. ಕನ್ನಡ ಹಾಗೂ ಇಂಗ್ಲಿಷ ಭಾಷೆಗಳ ಮೇಲಿನ ಹಿಡಿತ, ಪ್ರಖರ ನಿರೂಪಣೆ ವಿದ್ಯಾರ್ಥಿಗಳಿಗೆ like ಆಗ್ತಾ ಇತ್ತು. ಉಳಿದ ಸಾಮಾನ್ಯ ಸಂಗತಿಗಳನ್ನು ನಿರರ್ಗಳವಾಗಿ ಚರ್ಚಿಸುತ್ತಿದ್ದೆ.
JT ಯಲ್ಲಿ ಎಲ್ಲ science class ಗಳೇ. PU ಯಿಂದ ಪದವಿವರೆಗೆ science class ಗಳನ್ನು ಕೊಟ್ಟದ್ದು ನನಗೆ ಅನುಕೂಲವಾಯಿತು. J.T principal IR Neeli, HOD. Prof.Rao ನನ್ನನ್ನು ಪ್ರೋತ್ಸಾಹಿಸುತ್ತಿದ್ದರು.
ಈ ಸಂಧರ್ಭದ ಎರಡು ತಮಾಷೆಯ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.
ನಾನು ತುಂಬಾ neat ಆಗಿ dress ಮಾಡುತ್ತಿದ್ದೆ, Rayban sunglass ಹಾಕುತ್ತಿದ್ದೆ. ಇದು ಕೆಲವರಿಗೆ ಹೇಗೆ ಅನಿಸಿದೆ ಎಂದು ಅಂದೇ ಗೊತ್ತಾಯಿತು.
ವಿಶಾಲವಾದ staff ನ ಒಂದು ಮೂಲೆಯಲ್ಲಿ ಕುಳಿತಿದ್ದೆ, ಅತ್ಯಂತ ಹಿರಿಯ HOD ಒಬ್ಬರು ಹತ್ತಿರ ಬಂದು ಕುಳಿತು ತುಂಬಾ ವ್ಯಂಗ್ಯವಾಗಿ ಕೇಳಿದರು.
Mr.Yapalaparavi, What is your salary? ಎಂದರು, ಯಾಕೆ ಸರ್ ನಿಮಗೆ ಗೊತ್ತಿಲ್ಲ ನಾನು part time Rs. 600 per month that's to only for nine months ಅಂದೆ.
ಮುಂದೆ ಕೇಳಿದರು, what's the cost of your sunglass ಎಂದರು, Rs.3000/- ಎಂದೆ.
ವ್ಯಂಗ್ಯವಾಗಿ ನಗುತ್ತಾ ಅಲ್ಲಿಂದ ಕಾಲ್ಕಿತ್ತರು. ಅವರ ಉದ್ದೇಶ ನನಗೆ ಅರ್ಥವಾಯಿತು. ಹೊಟ್ಟಿಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯಂತಹ ನನ್ನ ಸ್ಥಿತಿಯನ್ನು ಅಣಕವಾಡಿದ್ದರೂ ನನಗೇನು ಶಿಸ್ತಿನ ಬಗ್ಗೆ ಬೇಸರವಾಗಲಿಲ್ಲ.
ಎರಡನೇ incident, ಪ್ರತಿಷ್ಠಿತರ ಮಗಳು ಆಗ ನನ್ನ ವಿದ್ಯಾರ್ಥಿನಿ ಆಕೆ ನನ್ನ fevourite, staff room ಗೆ ಬಂದಳು. may I ask you one personal question sir? ಎಂದಳು. yes ಎಂದೆ. ಸರ್ you are so popular and maintaining good dressing also but please don't ride bicycle sir ಎಂದಳು. why? ಎಂದೆ. ಸರ್ ನಾವು students ನಾವೇ ಮೊಪೆಡ್ ಮೇಲೆ ತಿರುಗಾಡುವಾಗ ನೀವು ಎದುರಿಗೆ ಸೈಕಲ್ ಮೇಲೆ ಬಂದರೆ insult ಎನಿಸುತ್ತದೆ. ನಿಮ್ಮ raybon glass ಮಾರಿಯಾದರೂ ಒಂದು bike ತಗೊಳ್ಳಿ ಸರ್ ಎಂದಳು. ಎಥಾರೀತಿಯಲ್ಲಿ ನಕ್ಕು ಸುಮ್ಮನಾದೆ.
women's college ನಲ್ಲಿ ತುಂಬಾ strict ಇರುತ್ತಿದ್ದೆ. ಹುಡುಗಿಯರ ಬಗ್ಗೆ ಭಯ , ಸಲಿಗೆಯಿಂದ ಇರುತ್ತಿರಲಿಲ್ಲ. ಹೆಸರು ಕೆಡಿಸಿಕೊಂಡರೆ permnent ಆಗುವುದಿಲ್ಲ ಎಂಬ ಆತಂಕ. ಹೀಗಾಗಿ ಯಾರೂ ನನ್ನೊಂದಿಗೆ ಅನುಚಿತವಾಗಿ ನಡೆದುಕೊಳ್ಳಲಿಲ್ಲ. ಅಂದಿನ ಪ್ರಾಚಾರ್ಯರು grammar ಕಲಿಸಲು ತುಂಬಾ ಒತ್ತಾಯಿಸಿದರು. ನನಗೆ grammar ಕಲಿಸಲು bore ಈ ತಿಕ್ಕಾಟದಲ್ಲಿ ವಿದ್ಯಾರ್ಥಿಗಳು ನನ್ನಪರವಾಗಿ ನಿಂತರು.
women's college grant ಆಗುವ ಸಮಯದಲ್ಲಿ ಎಲ್ಲ lady staff ಇರಲಿ ಎಂಬ ಕಾರಣಕ್ಕೆ JT ಗೆ shift. ಅಲ್ಲೊಬ್ಬ lady ಬಂದರು. ತುಂಬಾ ನಿರ್ಲಿಪ್ತತೆಯಿಂದ good buy ಹೇಳಿದೆ. ಈ ಮಧ್ಯ ಮುಂಡರಗಿ ಬೆಲ್ಲದ college ನಲ್ಲಿ part time ಮೂರು ದಿನ ಬೆಳಿಗ್ಗೆ ಹೋಗಿ ಬರಲಾರಂಭಿಸಿದೆ. ನಸುಕಿನ 6ಕ್ಕೆ ಬಸ್ಸು ಹಿಡಿದು ಅಲ್ಲಿ ಎರಡು class ತಗೊಂಡು 12 ಕ್ಕೆ ಗದುಗಿನಲ್ಲಿರುತ್ತಿದ್ದೆ. ಮತ್ತೆ ಅದೇ ಸೈಕಲ್ ತುಳಿತ, JT. ಬಸವೇಶ್ವರ, polytechnic.........ಹೀಗೆ ಸುತ್ತಾಟವೇ ಸುತ್ತಾಟ.
court ಗೆ ಹೋಗಿದ್ದ stop gap ಸ್ನೇಹಿತರು ಗೆದ್ದು ಬಂದು join ಆದಾಗ ನಾನು ನಿರ್ಗಮಿಸಲೇ ಬೇಕಾಯಿತು. ಎಲ್ಲಿ ಎಂದು ಗೊತ್ತಿಲ್ಲ ಅಲ್ಲಲ್ಲಿ interview ಕೊಟ್ಟು ಬಂದೆ.
ಎಲ್ಲಿಯಾದರೂ settle ಆಗಬೇಕೆನಿಸಿತು. ಅಷ್ಟೋತ್ತಿಗಾಗಲೇ approval, grant ಎಂಬ ಆತಂಕಕಾರಿ ಪದಗಳ ಪರಿಚಯವಾಗಿತ್ತು.
1993 ರಲ್ಲಿ ಮದುವೆಯೂ ಆಯಿತು. ಶಾಶ್ವತ ನೌಕರಿ ಇಲ್ಲದೆ, ಏನೋ ಒಂದು ಭರವಸೆಯೇ ಮೇಲೆ ಮದುವೆ ಆಗೋ ಧೈರ್ಯ ಮಾಡಿದ್ದು ಅಷ್ಟೇ ಆಶ್ಚರ್ಯಕರ. 1989 ರಲ್ಲಿ PG ಆದರೂ ಇನ್ನೂ ಹಾಗೆ ಅಲೆದೆ! ಅದು English subject ಇಟ್ಟುಕೊಂಡು!!
KVSR ನಲ್ಲಿ ಖಾಲಿ ಇರುವುದು ಗೊತ್ತಾಯಿತು, nature of vacancy ತಿಳಿದುಕೊಳ್ಳದೇ ಎರಡನೇ ಸುತ್ತಿನ ಸಂಚಾರ ಪ್ರಾರಂಭಿಸಿದೆ.
ಎಂತಹ ವಿಷಮ ಸ್ಥಿತಿಯಲ್ಲಿಯೂ ಸಹನೆ ಕಳೆದುಕೊಳ್ಳದೇ, ಹಸನ್ಮುಖಿಯಾಗಿ ಪಾಠಮಾಡುತ್ತಿದ್ದೆ, students were very happy ನಾನು part time, full time ಅದಾವುದು ಅವರಿಗೆ ಬೇಕಾಗಿದ್ದಿಲ್ಲ. Just they enjoyed my teaching, ನಾನು ಅಷ್ಟೆ, ಅವರ ನಂಬಿಕೆ ಹಸಿರಾಗಿರುವಾಗಲೇ....

Wednesday, April 14, 2010

Smile, Smile……

* Be smile, Be smiling ಎಂಬ ಸೂತ್ರ ಆತಂಕದಲ್ಲಿದ್ದಾಗಲೂ ಸಾಧ್ಯವೇ?
------------- ನಗುವಿಗೆ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಸ್ಥಾನವಿದೆ. ನಮ್ಮ, ನಿಮ್ಮ ನಗುವಿನಿಂದಲೇ ವ್ಯಕ್ತಿತ್ವವನ್ನು ಅಳೆಯುವ ಸಾಮರ್ಥ್ಯವಿದೆ. ಕುಹಕ ನಗು, ವ್ಯಂಗ್ಯ ನಗು, ವಿಕಟ ನಗು ಹೀಗೆ ಎಲ್ಲ negative ನಗುಗಳನ್ನು ದಾಟಿ ಉನ್ನತ ಸ್ಥಾನದಲ್ಲಿರುವದೇ natural smile.
ಹಾಗಾದರೆ ಈ ಸಹಜ ನಗುವನ್ನು ರೂಢಿಸಿಕೊಳ್ಳುವುದು ಹೇಗೆ ಎಂಬುದನ್ನು MNC ಗಳು ಅಧ್ಯಯನ ಮಾಡುತ್ತವೆ.
ಹಾಗಾದರೆ ಇದಕ್ಕಷ್ಟು ಮಹತ್ವವಿದೆಯೇ? ಎಂದರೆ ಹೌದು ಖಂಡಿತಾ ಇದೆ. ವಿಕಸನವೆಂದರೆ ಬಹಿರಂಗ ಶುದ್ಧಿಯಲ್ಲ, ಅಂತರಂಗ ಶುದ್ಧಿ. 'Internal process of cleaning will develop your personality' ಎಂಬುದನ್ನು ನಿರಾಕರಿಸಲಾಗುವುದಿಲ್ಲ. ತೋರಿಕೆ, ಆಡಂಬರದ ವರ್ತನೆಗಳು ಬೇಗ expose ಆಗುತ್ತವೆ.
ವಿಮಾನದಲ್ಲಿ ಪ್ರಯಾಣಿಸುವಾಗ ಗಗನ ಸಖಿಯರ ನಗುವನ್ನು ನೋಡಿದರೆ 'ನಗು'ವಿನ ಮಹತ್ವ ಗೊತ್ತಾಗುತ್ತದೆ. ಅವರ ದೇಹಸಿರಿಗೆ ಕೊಡುವಷ್ಟು ಮಹತ್ವವನ್ನು ಸಹಜ ನಗುವಿಗೆ ಕೊಡುತ್ತಾರೆ. ಒಂದು ವೇಳೆ ಮುಖದ ಮೇಲಿನ ಸಹಜ ನಗು ಮಂಕಾದರೆ ವೃತ್ತಿಯಿಂದ out. ಹೀಗೆ ನಾವು ನಮ್ಮ ಮನಸ್ಸನ್ನು train ಮಾಡುತ್ತಾ ಹೋಗಬೇಕು. ಉನ್ನತ ಹುದ್ದೆಯಲ್ಲಿರುವವರು, CEO ಗಳು, ಗಂಭಿರವಾಗಿ ಇರುವುದನ್ನೇ strictness ಎಂದು ತಪ್ಪಾಗಿ ಭಾವಿಸುತ್ತಾರೆ. Globalization concept ನಲ್ಲಿ strictness ಈಗ ಹೊಸರೂಪ ಪಡೆದಿದೆ.
ಸಹನೆ, ಸಹಜ ನಗುವಿನೊಂದಿಗೆ ಸಹೋದ್ಯೋಗಿಗಳ ಜೋತೆ ವರ್ತಿಸಬೇಕು ಎಂಬುದನ್ನು MNC ಗಳು ಕಲಿಸುತ್ತಾರೆ. Professional skill, soft skill ವ್ಯಾಪ್ತಿಯ ಪ್ರಮುಖ ಸೂತ್ರ ಧಾರಿಯೇ ಈ natural smile.
ನಾವು ಕೃತಕವಾಗಿ ನಗುತ್ತಾ Glad to meet you ಎನ್ನುತ್ತೇವೆ ಆದರೆ ಆ gladness ನಮ್ಮ ನಗುವಿನಲ್ಲಿ, ನಾವು shake ಮಾಡುವ ಕೈಯಲ್ಲಿರುವುದಿಲ್ಲ. ok. ಈ ವಿಷಯವನ್ನು ನಾವು ದೇಸಿಯವಾಗಿಯೇ ಆಲೋಚಿಸೋಣ. ಯಾರಾದರೂ ಎದುರಿಗೆ ಬಂದಾಗ ಭಾರತೀಯ ಸಂಪ್ರದಾಯದಂತೆ ಎರಡು ಕೈ ಮುಗಿದು ನಗು ನಗುತ್ತಾ 'ನಮಸ್ಕಾರ' ಎಂದಾಗ thrill ಆಗುತ್ತದೆ. ಆ thrill ಎರಡು ಬಗೆಯ ಸಂಸ್ಕೃತಿಯಲ್ಲಿದೆ. ಐರೋಪ್ಯರದು shake hand ಆದರೆ ನಮ್ಮದು ಮುಗಿದ ಕೈ.
ಅದನ್ನೇ ಬಸವಣ್ಣನವರು ಮುಗಿದ ಕೈ ಬಾಗಿದ ತಲೆ 'ಎನ್ನುತ್ತಾರೆ. ವಿನಯ, ಪ್ರೀತಿ, ಗೌರವ ಎಂಬುದು ಹೇರಿಕೊಂಡು ಪ್ರದರ್ಶಿಸುವುದಲ್ಲವಾದರೂ ವೃತ್ತಿಯಲ್ಲಿದ್ದಾಗ ಘನತೆ ಹೆಚ್ಚಿಸಲು ಸಾರ್ವತ್ರಿಕವಾಗಿ ಈ ನಿಯಮ ಪಾಲಿಸಬೇಕಾಗುತ್ತದೆ. ನಾನಿರೋದೆ ಹೀಗೆ, ನನ್ನ ಸ್ಟೈಲೇ ಹೀಗೆ ಎಂದರೆ ಈಗ ನಡೆಯುವುದಿಲ್ಲ. ನೀವು ಹೇಗಿದ್ದರೂ ಸಹಿಸಿಕೊಳ್ಳುವ ಕಾಲ ಇದಲ್ಲ. ನಾವು ಹೀಗೆ ಸದಾ ನಗುತ್ತಾ ಇದ್ದರೆ ನಮ್ಮ subordinates ಮಾತು ಕೇಳುವುದಿಲ್ಲ ಎಂದು ಮುಖಗಂಟಿಕ್ಕಿಕೊಂಡು ಆಡಳಿತ ನಡೆಸುವವರು ಆರೋಪಿಸುತ್ತಾರೆ. ಆದರೆ ಅದು ಶುದ್ಧ ಸುಳ್ಳು. ನಗುತ್ತಲೇ ನಿಮ್ಮ ದಕ್ಷತೆಯನ್ನು communicate ಮಾಡಬಹುದು. ನಿಮಗೆ ಬಂದಿರುವ ಬೇಸರವನ್ನು ಸಂಯಮದಿಂದಲೇ ಹೇಳಬಹುದು. ಮುಖ್ಯವಾಗಿ ನಿಮ್ಮ ತಕರಾರು register ಆದರೆ ಸಾಕು. ಅದಕ್ಕೆ ಗಂಟು ಮೋರೆ ಹಾಕಬೇಕು ಎಂಬ ನಿಯಮವಿಲ್ಲ. ನನ್ನ ಬಹುಪಾಲು ತರಬೇತಿಯಲ್ಲಿ ಈ ವಿಷಯವನ್ನು ಚರ್ಚಿಸುವಾಗ ಗಂಟು ಮುಖ ಹೊಂದಿದ ಮಹನೀಯರು ನೇರವಾಗಿ ಕೇಳಿದರು, ಸರ್ ಇದನ್ನು ರೂಢಿಸಿಕೊಳ್ಳುವುದು ಹೇಗೆ? ಎಂದು. ಸರ್, ನೀವು ಎಂದಾದರೂ ಸಹಜವಾಗಿ ನಕ್ಕವರನ್ನು ನೋಡಿದ್ದೀರಾ ಎಂದೆ. ಇಲ್ಲ ಬಿಡಿ ನಮಗದು ಗೊತ್ತಾಗುವುದಿಲ್ಲ ಎಂದಾಗ ನನ್ನ power p
oint ನಲ್ಲಿ ಸಹಜವಾಗಿ ನಗುವ ಬೊಚ್ಚುಬಾಯಿಯ ಮಗುವಿನ photo ತೋರಿಸಿದೆ. ಆಗವರು, ಅರೆ ಹೌದಲ್ಲ ಸರ್ ಇದು ಎಷ್ಟು ಛಂದ ನಗ್ಯಾಕ ಹತೈತಿ ಅಂದರು. ನಂತರ ಮತ್ತೆ ನಗುವಿನ ಮಹಿಮೆ ವಿವರಿಸಿದೆ. ನಗಬೇಕು ಎನಿಸಿದಾಗ ನಮ್ಮಮನಸು ತುಂಬಿ ಬರಬೇಕು. ಪ್ರೀತಿ ಉಕ್ಕಬೇಕು. ಎದುರಿಗಿದ್ದವರು ಅದಕ್ಕೆ ಯೋಗ್ಯರಲ್ಲದಿದ್ದರೂ ಒಮ್ಮೆ ಮನಸ್ಸಿನಲ್ಲಿ ಕಣ್ಣು ಮುಚ್ಚಿಕೊಂಡು ನೀವು ಆ ಮಗುವಿಗೆ react ಮಾಡುತ್ತಿದ್ದೇನೆ ಅಂದುಕೊಂಡರೆ ನಿಮ್ಮ ಮುಖದ ಮೇಲೂ ಆ ಸಹಜ ನಗು ತೇಲಿ ಬರುತ್ತದೆ.
ಆಗ ಅವರು, ಇಲ್ಲ ನಾವು ಸಹಜವಾಗಿ ಬಾಳುವ ಜನ ಈ ರೀತಿಯ ಕೃತಕ ನಗು ನಮ್ಮ ಮನೋಸ್ಥಿತಿಗೆ ಒಗ್ಗುವುದಿಲ್ಲ ಅಂದಾಗಲೂ ಹೇಳಿದೆ ನೀವು ನಗುತ್ತಾ ಇರಬೇಕಾದದ್ದು ಬೇರೆಯವರ ಮರ್ಜಿಗಾಗಿ ಅಲ್ಲ ನಮ್ಮ ಆಂತರಿಕ ಸಂತಸಕ್ಕಾಗಿ ಮನೋ ಉಲ್ಲಾಸಕ್ಕಾಗಿ ಎಂದೆ. ಹಾಗೆ ದಿನಾ ನಗುತ್ತಾ, ನಗುತ್ತಾ ಇದ್ದಾಗ ನಿಮ್ಮ ಸುತ್ತಲಿನ ಪರಿಸರದಲ್ಲಿ ಕಂಡುಬರುವ ಪರಿಣಾಮ ನೋಡಿ ಎಂದೆ.
ಒಂದು ತಿಂಗಳ ನಂತರ call ಮಾಡಿದ ಸದರಿ college ನ principal ಹೇಳಿದರು. ಹೌದು ಸರ್ ನಾನೀಗ ಬದಲಾಗಿದ್ದೇನೆ, ನನ್ನ ನಗು ಕಾಲೇಜಿನ ವಾತಾವರಣವನ್ನು ಬದಲಿಸಿದೆ. ಜನ ಹಿಂದೆ ನನಗೆ ನೀಡುತ್ತಿದ್ದ ಗೌರವಕ್ಕೂ, ಈಗ ಕೊಡುವ ಗೌರವದ ವ್ಯತ್ಯಾಸವನ್ನು ಗುರುತಿಸಿದ್ದೇನೆ. Thanks alot ಎಂದರು.
ನೀವೂ try ಮಾಡಿ ವ್ಯತ್ಯಾಸ ಅನುಭವಕ್ಕೆ ಬಂದರೆ ದಯವಿಟ್ಟು comment ಮಾಡಿ.
Be smile, be smiling and do get successful results.

Monday, April 12, 2010

ಮತ್ತೆ ಬರುತ್ತಾರೆ ಮುತ್ತು ಕೊಟ್ಟವರು ದಾರಿ ಬಿಡಿ


ರೇಣುಕಾ ಜಯ ಮಹಾತ್ಮೆಕರ್ನಾಟಕ ರಾಜಕೀಯ ಇತಿಹಾಸದಲ್ಲಿಯೇ ಪವಾಡ ಮೂಡಿದ ಪುಣ್ಯಪುರುಷರೆಂದರೆ ಮಾನ್ಯ ಶ್ರೀ ರೇಣುಕಾಚಾರ್ಯ ಅವರು. ಹಾಲಿ ಅಲ್ಕೊಹಾಲ್ ಸಚಿವರೂ ಆಗಿರುವ ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿ ಪ್ರಕರಣದಿಂದ ಜಗತ್ಪ್ರಸಿದ್ದರಾದವರು. ಭಿನ್ನಮತಕ್ಕಾಗಿ ಹೈದ್ರಾಬಾದ್ ಗೆ ತೆರಳಿದ್ದರೂ, ಅಧ್ಯಯನ ಪ್ರವಾಸವೆಂದು ಜನರ ಕಿವಿಯ ಮೇಲೆ ಹೂವಿಟ್ಟ ಮಹನೀಯರು.
ಭಿನ್ನ ಮತದ ಲಾಭ ಪಡೆದು ಸಚಿವರಾದದ್ದು ಇವರ ಮೊದಲ 'ಜಯ'ವಾದರೆ, ಈಗ ಇವರ ಮಾಜಿ ಸ್ನೇಹಿತೆ ನರ್ಸ್ ಜಯಲಕ್ಷ್ಮಿ ಅವರ ಮೇಲೆಯೂ ವಿಜಯಗಳಿಸಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅನೇಕ ರಸಿಕ ರಾಜಕೀಯ ನಾಯಕರಿದ್ದರು, ಸ್ವತ: ಜೆ.ಎಚ್.ಪಟೇಲರು ತಮ್ಮ ರಸಿಕತನದ ಹಿರಿಮೆಯನ್ನು ಘೋಷಿಸಿದ್ದರು ಆದರೆ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ಹೆಗ್ಗಳಿಕೆ ಮಾತ್ರ ರೇಣುಕಾಚಾರ್ಯರಿಗೆ ಸಲ್ಲುತ್ತದೆ.
ಇವರ ರಂಗುರಂಗಿನ ರಸಿಕತನ ನಾಡಿನ ಎಲ್ಲ ಮಾಧ್ಯಮಗಳಲ್ಲಿ ರಾರಾಜಿಸಿದ್ದಲ್ಲದೆ, ಅದನ್ನು ರಾಜಕೀಯ ನಾಯಕರು, ಮಾಧ್ಯಮದವರು ತಮ್ಮ ಹಿತಾಸಕ್ತಿಗೆ ಬಳಸಿದ್ದು ಕೂಡ ಅಷ್ಟೇ interesting!
ಇವರ ಬಿಸಿ ಅಪ್ಪುಗೆ, ಸಿಹಿ ಚುಂಬನದ photo ಹಾಕಿ ಲಾಭ ಮಾಡಿಕೊಂಡವರಿಗೆ, ಜಯಲಕ್ಷ್ಮಿಗೆ ಪುಟ ಗಟ್ಟಲೆ ಜಾಗ ಕೊಟ್ಟು ಬೆಂಬಲ ನೀಡಿದ ಮಾಧ್ಯಮದವರಿಗೆ shock ಆಗುವ ಸುದ್ದಿ ಹೊರಬಿದ್ದಿದೆ. ಈಗ ಜಯಲಕ್ಷ್ಮಿ-ರೇಣುಕಾಚಾರ್ಯರ ವೈರ ಮುಗಿದು, ದೋಸ್ತಿ ಚಾಲು ಆಗಿದೆಯಂತೆ, ಆಗ ರೇಣುಕಾಚಾರ್ಯ ಮಾನ ಹರಾಜು ಹಾಕಿದ್ದ ಜಯಮ್ಮ ಈಗ ರೇಣುಕರ ವಿರುದ್ಧ ಬಳಸಿಕೊಂಡವರ ಜನ್ಮಜಾಲಾಡಬಹುದೆಂಬ ಆತಂಕ ಶುರು ಆಗಿದೆ.
ದಿಢೀರೆಂದು ಮಾಧ್ಯಮಗಳಲ್ಲಿ ಪ್ರತ್ಯಕ್ಷಳಾದ ಜಯಲಕ್ಷ್ಮಿ ರೇಣುಕರನ್ನು ಹಾಡಿಹೊಗಳಿದ್ದಾರೆ. ಯಾರೋ ಒಬ್ಬ ಸ್ವಾಮಿಗಳು ಇವರನ್ನು ಮತ್ತೆ ಒಂದುಗೂಡಿಸಿ ರಾಜಿಮಾಡಿದ್ದಾರಂತೆ. ಅಬ್ಬಾ! ಇಂತಹ ಜಗದೋದ್ಧಾರ ಕಾರ್ಯ ಮಾಡಿದ ಸ್ವಾಮಿಗಳು ಅದೆಂತಹ ಪವಾಡ ಪುರುಷರಿರಬಹುದು. ನಿತ್ಯಾನಂದರ ಲೈಂಗಿಕ ಸಾಧನೆಗಳನ್ನು ನೋಡಿ ಆ ಗುಂಗಿನಿಂದ ಎದ್ದು ಬರಬೇಕೆನ್ನುವುದರಲ್ಲಿಯೇ, ಜಯಲಕ್ಷ್ಮಿ ರಂಗಾಗಿ ಪ್ರತ್ಯಕ್ಷರಾಗಿದ್ದಾರೆ. ಈಗ ಮತ್ತೇನು ಹೊಸ ಪವಾಡಗಳನ್ನು ಮಾಡಬಹುದೆಂಬ ಕುತೂಹಲವಿದೆ. ಜಯಲಕ್ಷ್ಮಿಯನ್ನು ಬೆಂಬಲಿಸಿದ, ರೇಣುಕಾಚಾರ್ಯರನ್ನು ನಿಂದಿಸಿದವರ ಬಗ್ಗೆ ಅಯ್ಯೋ ಎನಿಸುತ್ತದೆ.

ಸಾರ್ವಜನಿಕ ಬದುಕಿನಲ್ಲಿ ಒಮ್ಮೆ ನಾಚಿಕೆ ಬಿಟ್ಟರೆ ಏನೆಲ್ಲ ಆಗಬಹುದು ಎಂಬುದಕ್ಕೆ ಇವರ ಅವತಾರಗಳೇ ಸಾಕ್ಷಿ!
ದುಡ್ಡು, ಅಧಿಕಾರದಿಂದ ಏನೆಲ್ಲ ಸಾಧ್ಯ ಎಂಬುದನ್ನು ರೇಣುಕಾ ವಿ'ಜಯ' ಮಹಿಮೆ ಸಾಬೀತು ಪಡಿಸಿದೆ.

ಸಾನಿಯಾ ಶಾದಿಗೆ ಕೂಡಿ ಬಂದ ಕಾಲ
ನಮ್ಮ ದೇಶದಲ್ಲಿ starvalue ಇದ್ದವರು ಏನುಮಾಡಿದರೂ ಸುದ್ದಿಯಾಗುತ್ತದೆ. ಹಾಗಾದರೆ ಈ star souls ಯಾರು? ಸಿನೆಮಾ ತಾರೆಯರು, ಅಂತರಾಷ್ಟ್ರೀಯ ಕ್ರೀಡಾಪಟುಗಳು, ರಾಜಕೀಯ ನಾಯಕರುಗಳು ಹಾಗೂ ಸಾಹಿತ್ಯದಿಗ್ಗಜರು. ಈ ನಾಲ್ಕು ಕ್ಷೇತ್ರಗಳಲ್ಲಿ ನೀವು ಹೇಗೋ ಖ್ಯಾತಿ ಗಳಿಸಿದರೆ ಸಾಕು ನೀವು ರಾತ್ರೋ ರಾತ್ರಿ ಮಾಧ್ಯಮಗಳ ಮೂಲಕ ಜಗತ್ತೆಲ್ಲ ಸುತ್ತಬಹುದು.
ವಿವಾದದ ಬರಹಗಳ ಮೂಲಕ ಖ್ಯಾತಿ ಗಳಿಸಿರುವ ತಸ್ಲಿಮಾ, ಮದುವೆ ಮೂಲಕ ಗಮನ ಸೆಳೆದ ಸಾನಿಯಾ ಸುದ್ದಿಯಲ್ಲಿದ್ದರು.
ಸಾನಿಯಾ ಪಾಕಿಸ್ತಾನ ಹುಡುಗನನ್ನು ಮೆಚ್ಚಿದ್ದೇ ತಡ ವಿವಾದ ಶುರು. SMS ಗಳ ಸುರಿಮಳೆ ಸಾನಿಯಾ ಮೇಲೆ, ಅವಳ ಸೌಂದರ್ಯ ದಕ್ಕಿಸಿಕೊಳ್ಳಲಾಗದವರು ಕಾರಿಕೊಂಡ ಅಸಹನೆ ತುಂಬಾ ತಮಾಷೆಯಾಗಿದೆ. ಅಯ್ಯೋ! ಸಾನಿಯಾ ದೇಶ ಬಿಡುತ್ತಾಳೆ ಮುಂದೆ ನಮ್ಮ ಗತಿ ಏನು ಎಂದು ಪಡ್ಡೆ ಹುಡುಗರು ಏಕಾಂತದ ರಾತ್ರಿಗಳಲಿ ದಿಂಬಿನೊಂದಿಗೆ ಮಲ್ಲಯುದ್ಧಕ್ಕೆಇಳಿದಿದ್ದಾರೆ. ಭಾರತದ ಬಿಸಿರಕ್ತದ ಯುವಕರ ರಕ್ತ ತಣ್ಣಗಾಗಿಸಿ ದೇಶ ಬಿಟ್ಟು ಹಾರುತ್ತಿರುವ ಸಾನಿಯಾಗೆ ಶುಭ ಕೋರೋಣ. ಅಂತರಾಷ್ಟ್ರೀಯ ಮಾರುಕಟ್ಟೆಯಲಿ ಮದುವೆಗೀಗ demand ಇಲ್ಲ. ಬಂಡವಾಳವಿಲ್ಲದ ದಾಂಪತ್ಯ living together ಪರಿಕಲ್ಪನೆ ಹೆಚ್ಚಾದರೆ ಈ ಮದುವೆಗಳು ಇನ್ನೂ ಬೆಲೆಕಳೆದುಕೊಳ್ಳುತ್ತವೆ. ಸಾನಿಯಾಳ ಅಪರೂಪದ ಸೌಂದರ್ಯ, ಆಕರ್ಷಕ ದೇಹಸಿರಿ, ಕ್ರೀಡಾಕ್ಷೇತ್ರದ ಯಶಸ್ಸು ಪಡ್ಡೆಹುಡುಗರನ್ನು ಅಲ್ಲಲ್ಲ...........ಎಲ್ಲರನ್ನು ನಿದ್ದೆಗೆಡಿಸಿತು. ಮೂಗುತಿ ಸುಂದರಿಗೆ Happy married life ಅನ್ನೋಣ ಎಲ್ಲ ತಳಮಳ ಸಹಿಸಿಕೊಂಡು.

ಹುಟ್ಟುಹಬ್ಬದ ಲೆಕ್ಕಾಚಾರ
. ಆತ್ಮವಿಶ್ವಾಸ, ಪ್ರಾಮಾಣಿಕಪ್ರತಿ ಹುಟ್ಟು ಹಬ್ಬಗಳು ನಮ್ಮನ್ನು ಗಂಭೀರಗೊಳಿಸಬೇಕುತೆ ಹೆಚ್ಚಾಗಬೇಕು. ಮನಸು ಮಾಗಬೇಕು.
ನಡೆದು ಬಂದ ಹಾದಿಯನ್ನೊಮ್ಮೆ ಅವಲೋಕಿಸಿ, ಆಗಿರುವ ಲೋಪಗಳನ್ನು ಆತ್ಮಾವಲೋಕನ ಮಾಡಿಕೊಂಡು ನಮ್ಮಷ್ಟಕ್ಕೆ ನಾವೇ ಸರಿಪಡಿಸಿಕೊಳ್ಳಬೇಕು.
Negative ಆಲೋಚನೆಗಳನ್ನು ದೂರಮಾಡಲು ನಾವೇ ಹೆಣಗಬೇಕು. positive ಆಗಿ ಆಲೋಚನೆ ಮಾಡುವುದು ಹೇಳಿದಷ್ಟು ಸುಲಭವಲ್ಲ. ಆದರೂ ನಿರಂತರ ಅಂತರ್ ಸಂಘರ್ಷವಿರಲೇಬೇಕು. ಹೀಗೆ ನಮ್ಮ ಹುಟ್ಟುಹಬ್ಬಗಳು ಆಲೋಚನೆಗೆ ಹಚ್ಚಿಸುತ್ತವೆ.
ಮನದ ಮುಂದಣ ಆಸೆ-ಆಮಿಷಗಳು, ಅಪಾರವಾದ ಮಹತ್ವಾಕಾಂಕ್ಷೆಗಳು, ಹೆಸರು-ಖ್ಯಾತಿ ಗಳಿಸುವ ಹಪಾಹಪಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
ಮನಸ್ಸಾಕ್ಷಿಗಿಂತ ದೊಡ್ಡದು ಯಾವುದಿಲ್ಲವೆಂದು ಗೊತ್ತಿದ್ದರೂ ನಮ್ಮ ಸಾಚಾತನಕ್ಕೆ ಉಳಿದ ಸಾಕ್ಷಿಗಳು ಕೊಡಲು ಓಡಾಡುತ್ತೇವೆ.
ಸಾಕ್ಷಿ ಪಡೆಯುವವರಿಗೂ, ಹೇಳುವವರಿಗೂ ಗೊತ್ತು ಇದೊಂದು ಶುದ್ಧ ಸುಳ್ಳು ಎಂದು.
"ನಲವತ್ತೈದು" ಶುದ್ಧ ಆಲೋಚನೆ ಮಾಡುವ ಕಾಲ, ಸೆಕ್ಸನ ಹಪಾಹಪಿ ಕಡಿಮೆ ಆಗಿ ಉಳಿದ ಭಯಾನಕ ಆಸೆಗಳು ಚಿಗುರೊಡೆಯುವ ವಯಸ್ಸು. ಹಿಂದೆ ಹೇಳಿದಂತೆ ಹೆಣ್ಣು, ಹೊನ್ನು ಹಾಗೂ ಮಣ್ಣುಗಳ ಸುತ್ತ ಗಿರಕಿ ಹೊಡೆಯುವ ಮನುಷ್ಯ ಒಂದೊಂದು ಕಾಲಘಟ್ಟದಲ್ಲಿ ಒಂದನ್ನು ಹಿಡಿದುಕೊಳ್ಳುತ್ತಾನೆ. ಒಮ್ಮೆ ಹೆಣ್ಣು, ಹೊನ್ನು, ಮಣ್ಣು ಹೀಗೆ ಆಸೆಗಳನ್ನು shift ಮಾಡುತ್ತ weakness ಗಳಲ್ಲಿ ನರಳುತ್ತ ಸುಖ ಅನುಭವಿಸುತ್ತಾನೆ. ಇವುಗಳ ಸೆಳೆತವನ್ನು ಬಿಟ್ಟರೆ, ನಿರಾಕರಿಸಿದರೆ ಯೋಗಿಗಳಾಗುತ್ತೇವೆ. ಆದರೆ ನಮಗಾರಿಗೂ ಯೋಗಿಯಾಗುವ ಯೋಗವಿಲ್ಲವಲ್ಲ. ನಾವು ಕೇವಲ ದೌರ್ಬಲ್ಯಗಳ ಮಾಂಸದ ಮುದ್ದೆಗಳು. 1970 ರಿಂದ 1990 ರವರೆಗೆ ವಿದ್ಯಾರ್ಥಿ, ಬಾಲ್ಯದ ಬದುಕಿನ ಘಟನೆಗಳು ಸ್ಮೃತಿಪಟಲದಲ್ಲಿವೆ. 1990-2010 ರವರೆಗೆ ಎರಡನೇ ಕಾಲಘಟ್ಟದ ವೃತ್ತಿ ಬದುಕಿನ ವೈವಿದ್ಯಮಯ ಸಂಗತಿಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವ ತುಡಿತವಿದೆ. ಪ್ರಾಮಾಣಿಕವಾಗಿ ಹಂಚಿಕೊಳ್ಳುವ, ಯಾರನ್ನು ನೋಯಿಸದೇ, ಟೀಕಿಸದೇ ಬರೆಯುವ ಆಟೋಗ್ರಾಫ್ ಗೆ ನಿಮ್ಮ ಸಲಹೆ ಸದಾ ಇರಲಿ.

Sunday, April 11, 2010

ಜಗದ್ಗುರು ಡಾ.ತೋಂಟದ ಶ್ರೀಗಳ ಶಿವಯೋಗ ಮಂದಿರ ಪ್ರಕರಣ

ಸತ್ಯ ಸೂರ್ಯನಿಗಿಂತಲೂ ಪ್ರಖರ ತಡೆಯಲಾರದವರು ಕುದಿಯುತ್ತಾರೆ.

ಸ್ವಜನ ಪಕ್ಷಪಾತಿಗಳು, ಮೂಲಭೂತವಾದಿಗಳು ಸತ್ಯವನ್ನು ಸಹಿಸುವುದಿಲ್ಲ ಎಂಬುದನ್ನು 10-3-2010 ರಂದು ಶಿವಯೋಗ ಮಂದಿರದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕಾರಿನ ಮೇಲೆ ಕಲ್ಲು ಎಸೆದು, ಏಕವಚನದಲ್ಲಿ ನಿಂದಿಸಿದ ಮಹನೀಯರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲಾಗಿಲ್ಲ.
ಕೋಟ್ಯಾಂತರ ಹಣ ಖರ್ಚು ಮಾಡಿ ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರಸ್ವಾಮಿಗಳವರ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. ಅದ್ಧೂರಿತನ ಕೇವಲ ಭೌತಿಕವಾಗಿದೆ ಎಂಬುದನ್ನು ಎಲ್ಲರೂ ಸಾಬೀತುಪಡಿಸಿದ್ದಾರೆ. ಇಪ್ಪತ್ತೈದು ಸಾವಿರ ಕುರ್ಚಿಗಳಿರುವ ಪೆಂಡಾಲಿನಲ್ಲಿ ಕೇವಲ ಸಾವಿರ ಜನ ಇದ್ದರೆ ಹೇಗಾಗಬೇಡ. ಲಕ್ಷಾಂತರ ಲಿಂಗಾಯತರನ್ನು ಹೊಂದಿದ ಸಮಾಜ, ಶತಮಾನಗಳ ಇತಿಹಾಸವಿರುವ ಸಂಘಟನೆಗಳು ಆಯೋಜಿಸುವ ಸಂಭ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪಾಲ್ಗೊಳ್ಳುತ್ತಾರೆ ಎಂದರೆ ಏನರ್ಥ? ಹಾಗಾದರೆ ದೋಷವೆಲ್ಲಿದೆ? ಎಂಬುದನ್ನು ಮಠಾಧೀಶರು ಪರಾಮರ್ಶಿಸದಿದ್ದರೆ, ಇನ್ಯಾರು ಆ ಕೆಲಸ ಮಾಡಬೇಕು?
ಅಂದು ಆಗಿದ್ದು ಅದೇ ತಮ್ಮ ಭಾಷಣದಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಶಿವಯೋಗಮಂದಿರದ ಪೀಠಾಧಿಪತಿಗಳಾದ ಬಳ್ಳಾರಿ-ಹೊಸಪೇಟೆಯ ಜಗದ್ಗುರು ಸಂಗನಬಸವ ಸ್ವಾಮಿಗಳು ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಶ್ರೀ ಭೀಮಣ್ಣಖಂಡ್ರೆ ಅವರು ತಮ್ಮ ಸ್ಥಾನ ತ್ಯಜಿಸಿ ಹೊಸಬರಿಗೆ ಅವಕಾಶ ನೀಡಲಿ ಎಂದು ನೇರವಾಗಿ ಹೇಳಿದ್ದು ಸದರಿ ಅಧ್ಯಕ್ಷರುಗಳ ಪಿತ್ತ ನೆತ್ತಿಗೇರಿಸಿದೆ.
ಈಗ ಲಿಂಗಾಯತ ಧರ್ಮವು ಜಡವಾಗಿದೆ. ಸ್ಥಾವರವಾಗಿದೆ. ಬಸವಣ್ಣನಿಂದ ಆರಂಭಗೊಂಡ ಧರ್ಮ ಕೆಲವರ ತಪ್ಪು ಇತಿಹಾಸದಿಂದ ಪುರಾತನ ಧರ್ಮ ಎಂಬ ಭ್ರಮೆ ಹುಟ್ಟಿಸಿದೆ. ಲಿಂಗಾಯತ್ ಧರ್ಮದ so called ಮೇಲ್ವರ್ಗದ ಪುರೋಹಿತಶಾಹಿಗಳು ಬಸವಣ್ಣನನ್ನು ಧರ್ಮಗುರು ಎಂದು ಒಪ್ಪುತ್ತಿಲ್ಲ. ಅದ್ಯಾರು ಕಾಲ್ಪನಿಕ ವ್ಯಕ್ತಿ ಗುರು ಎಂಬ ಗುರಾವಣೆ ಶುರು ಆಗಿದೆ.

ಈ ಚರ್ಚೆಯ ಅಂತಿಮ ಹಂತಕ್ಕೆ ನಾವೀಗ ತಲುಪಿದ್ದೇವೆ. ಗುರು-ವಿರಕ್ತರ ಮಧ್ಯ ಬೆಸೆಯಲಾಗದ ಬಿರುಕು ಬಿಟ್ಟಿದೆ. ಗುರುಪರಂಪರೆಯ ಮಠಾಧೀಶರು ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪುತ್ತಿಲ್ಲ, ಕೆಲ ವಿರಕ್ತ ಪರಂಪರೆಯ ಮಠಾಧೀಶರು ಬಹಿರಂಗವಾಗಿ ಬಸವಣ್ಣ ಅಂದರೂ, ಆಂತರಿಕವಾಗಿ ಜಾತಿಜಂಗಮ ಮೇಲರಿಮೆಯಿಂದ ಮುಕ್ತರಾಗಿಲ್ಲ. ಗುರುಗಳಿಗೂ-ವಿರಕ್ತರಿಗೂ ಬಸವಣ್ಣ ಬೇಡವಾದರೆ ಸಮಾಜದ ವಿಕಸನ ಹೇಗೆ ಸಾಧ್ಯ?
ಲಿಂಗಾಯತ ಧರ್ಮಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವುದು ಬಸವಾದಿ ಶರಣ ತತ್ವಗಳಿಂದ. ಅವರು ರಚಿಸಿದ ವಚನ ಶಾಸ್ತ್ರ ಲಿಂಗಾಯತರ ಧರ್ಮಗ್ರಂಥ. ಬಸವ ಧರ್ಮದ ಜಾತ್ಯಾತೀತ ನಿಲುವನ್ನು ಮಾನಸಿಕವಾಗಿ ಸ್ವೀಕರಿಸದ ಜಾತಿವಾದಿಗಳಿಗೆ ಬಸವಣ್ಣನೆಂದರೆ ಅಷ್ಟಕ್ಕಷ್ಟೇ.
ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರ ಗವಾಯಿಗಳು ಹಾಗೂ ಡಾ. ಪಂಡಿತ ಪುಟ್ಟಾರಾಜ ಗವಾಯಿಗಳವರಿಗೆ ಇರುವ ತತ್ವ ನಿಷ್ಠೆ ಈಗಿನ ಮಠಾಧೀಶರಿಗಿಲ್ಲ. ಆದರೆ ಹಾನಗಲ್ ಕುಮಾರಸ್ವಾಮಿಗಳ ಹೆಸರಿನಲ್ಲಿ ಜಾತಿ ಸಂಘಟನೆಯಂತಹ ಸಣ್ಣ ಕಾರ್ಯಕ್ಕೆ ತೊಡಗಿದ್ದು ವಿಷಾದನೀಯ. ಒಳ್ಳೆಯದಿದ್ದರೆ ಮಾತ್ರ ಜನ ಸ್ವಿಕರಿಸುತ್ತಾರೆ, ಇಲ್ಲದಿದ್ದರೆ ಇಲ್ಲ ಎಂಬುದಕ್ಕೆ ಶಿವಯೋಗಮಂದಿರದ poor performance ಸಾಕ್ಷಿಯಾಗಿದೆ.
ಹಿಪೋಕ್ರಸಿ ಈಗ ಬಯಲಾಗಹತ್ತಿದೆ. ಕೇವಲ ಇಳಕಲ್ಲ, ಚಿತ್ರದುರ್ಗ ಹಾಗೂ ಗದುಗಿನ ಜಗದ್ಗುರುಗಳು ತಮ್ಮ ಕೆಲವು ಮಠಾಧೀಶರೊಂದಿಗೆ ಬಸವ ನಿಷ್ಠೆಯ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವುದು ವೀರಶೈವ ಮೂಲಭೂತವಾದಿಗಳನ್ನು ಕೆಣಕಿದ. ಜನ ಬಸವ ಧರ್ಮವನ್ನು ಸಮರ್ಪಕವಾಗಿ ಅರಿತುಕೊಂಡರೆ ಪುರೋಹಿತ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಪುರೋಹಿತ ವ್ಯವಸ್ಥೆಗೆ ಪೆಟ್ಟು ಬಿದ್ದರೆ ಜಾತಿ ಜಂಗಮ ಮಠಾಧೀಶರ ದೌಲತ್ತು ಕುಗ್ಗುತ್ತದೆ. ಜನ ಪ್ರಜ್ಞಾವಂತರಾದರೆ, ಲಿಂಗಾಯತ ಧರ್ಮವನ್ನು ಅರಿತುಕೊಂಡು, ಲಿಂಗಾಯತ ಒಳ ಪಂಗಡ ಸಮಾಜದವರು ಸ್ವಾಮಿಗಳಾದರೆ ಜಾತಿ ಜಂಗಮರನ್ನು ಮೆರೆಸುವವರು ಯಾರು? ಎಂಬ ಧಾವಂತ. ಜಾತಿಯಿಂದ ಜಂಗಮರಾದರೂ ವೀರಕ್ತ ಪೀಠಪರಂಪರೆಯ ಜವಾಬ್ದಾರಿ ಹೊತ್ತುಕೊಂಡಿರುವ ಗದಗ, ಇಳಕಲ್ಲ ಹಾಗೂ ಚಿತ್ರದುರ್ಗ ಶ್ರೀಗಳು ಮತ್ತಷ್ಟು ಒಗ್ಗಟ್ಟಾಗಿ ಬಸವ ತತ್ವ ಪ್ರಚಾರಕ್ಕಾಗಿ ಬದ್ಧರಾಗಬೇಕಾದ ಕಾಲ ಈಗ ಕೂಡಿಬಂದಿದೆ.
ನೈತಿಕವಾಗಿ ಈಗ ಇಳಕಲ್ ಶ್ರೀಗಳು ಹೆಚ್ಚು ಬಲಶಾಲಿಗಳಾಗಲು ಕಾರಣ ತಮ್ಮ ಉತ್ತರಾಧಿಕಾರಿಗಳನ್ನಾಗಿ ಜಂಗಮೇತರರನ್ನು ಅಯ್ದುಕೊಂಡು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದಕ್ಕೆ ಎಂಬುದನ್ನು ಎಲ್ಲರೂ ಅರಿತಿದ್ದಾರೆ.
ಅದೇ ಪರಂಪರೆಯನ್ನು ಭದ್ರ ಪಡಿಸಲು ಈಗ ಚಿತ್ರದುರ್ಗ ಹಾಗೂ ಗದುಗಿನ ಶ್ರೀಗಳು ಮುಂದಾಗಿ ಬಸವ ತತ್ವ ನಿಷ್ಠರ ನೈತಿಕ ಸ್ಥ್ಯರ್ಯ ಹೆಚ್ಚಿಸಬೆಕು.
ಬಸವ ತತ್ವದಲ್ಲಿ ನಂಬಿಕೆ ಇರದವರನ್ನು ವೀರಶೈವರೆಂದು, ಇದ್ದವರನ್ನು ಲಿಂಗಾಯತರೆಂದು ಪರಿಗಣಿಸಬೇಕು. ಅನಗತ್ಯ ವೀರಶೈವ ಧರ್ಮಿಯರನ್ನು ಕೆಣಕುವ ಅಗತ್ಯವಿಲ್ಲ. ಖಡಾ ತುಂಡಾಗಿ ತಾತ್ವಿಕ ಹಿನ್ನಲೆಯಲ್ಲಿ ವಿಭಜಿತರಾದಾಗ ಈ ಗೊಂದಲವೇ ಇರುವುದಿಲ್ಲ. ಈ ಹಿಂದೆ ಇಳಕಲ್ಲ ಶ್ರೀಗಳ ಮೇಲೆ ಕಲ್ಲು ಎಸೆಯಲು ಯತ್ನಿಸಿದವರೇ ಇಂದು ಈ ಕೃತ್ಯವನ್ನು ಮಾಡಿದ್ದಾರೆ. ಸತ್ಯ ಒರೆಗೆ ಹಚ್ಚಬೇಕಾದರೆ ಈ ರೀತಿಯ ಸಂಘರ್ಷ ಅನಿವಾರ್ಯ. ಬಸವ ತತ್ವ ತರಬೇತಿಗಾಗಿ ಇನ್ನೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿ positive ವಿಚಾರದ ದೊಡ್ಡಗೆರೆ ಎಳೆಯಬೇಕೇ ಹೊರತು ಈ ರೀತಿ ಸಾರ್ವಜನಿಕ ಸಂಘರ್ಷಕ್ಕೆ ಮುಂದಾಗಬಾರದು. ಲಿಂಗಾಯತ ಧರ್ಮದ ಸಾರವನ್ನು ಪ್ರಚುರ ಪಡಿಸಿ, ಜನಸಾಮಾನ್ಯರಲ್ಲಿರುವ ಗೊಂದಲ ನಿವಾರಿಸಬೇಕು. ಈ ಹಿನ್ನಲೆಯಲ್ಲಿ ಜಾತಿ ಜಂಗಮದ ಹಿನ್ನಲೆಯಲ್ಲಿ ಬಂದ ವಿರಕ್ತ ಮಠಾಧೀಶರು ಇನ್ನೂ ಹೆಚ್ಚು ಗಟ್ಟಿಯಾಗಬೇಕು. ಶಿವಯೋಗ ಮಂದಿರದ ಸದರಿ ಪ್ರಕರಣ ಇಂತಹ ಮನ್ವಂತರಕ್ಕೆ ನಾಂದಿ ಹಾಡಿ ಶುಭಸೂಚನೆ ನೀಡಿದೆ. ಪ್ರಗತಿಪರರೆಲ್ಲ ಒಗ್ಗಟ್ಟಾಗಿ ಬಸವಧರ್ಮ ಬೆಂಬಲಿಸಿ ತೋಂಟದ ಶ್ರೀಗಳ ಮೌಲ್ಯವನ್ನು ಇಮ್ಮಡಿಗೊಳಿಸಬೇಕು.

Saturday, April 10, 2010

ಡ್ರೆಸ್ ಕೋಡ್ ಎಂಬ ಆಕರ್ಷಣೆ

ಡ್ರೆಸ್ ಕೋಡ್ ದೇಶದಿಂದ ದೇಶಕ್ಕೆ ಭಿನ್ನ ಎಂದಿದ್ದೀರಿ? ಆದರೆ management ಒಂದೇ ರೀತಿ ಇರುವುದಿಲ್ಲವೆ?
ಅಮೇರಿಕಾ ಎಲ್ಲ ಸಂಗತಿಗಳಿಗೂ ತನ್ನದೇ ಆದ ಸಿದ್ದಾಂತವನ್ನು ನೀಡಿದೆ. management course ಗೂ ಹಾಗೇಯೆ. ಎಲ್ಲ ವಿಷಯಗಳಲ್ಲೂ ಪ್ರಾಭಲ್ಯ ಹೊಂದಿದ ಅಮೇರಿಕನ್ ಸಿದ್ದಾಂತಗಳು dress code ವಿಷಯಕ್ಕೂ readymade ಸಂಗತಿಗಳನ್ನು ಹೇಳುತ್ತವೆ.
But Importance of dressing differs from one to one and one to another.
Dress conscious is required to impress others ಹಾಗಾದರೆ ಕೇವಲ ಬಟ್ಟೆಯಿಂದಲೇ impress ಮಾಡುವುದಿದ್ದರೆ ಗಾಂಧೀಜಿ ಶ್ರೇಷ್ಟ ವ್ಯಕ್ತಿ ಆಗುತ್ತಿರಲಿಲ್ಲ.
Target oriened ಮಾತನಾಡುವ company ಗಳಿಗೆ ಇದರ ಅಗತ್ಯವಿದೆ. ಆದರೆ ನಮ್ಮ ನಿತ್ಯ ಜೀವನದಲ್ಲಿ dress culture ಭಿನ್ನ ಪಾತ್ರ ನಿರ್ವಹಿಸುತ್ತವೆ.
ನಮ್ಮ ತೃಪ್ತಿ, ಸಮಾಧಾನಕ್ಕೆ, ಸುಂದರವಾಗಿ ಕಾಣಲು ಹಿಗೆ ಹತ್ತು ಹಲವು ಬಗೆಯಲ್ಲಿ dress culture ಮಹತ್ವದೆನಿಸುತ್ತದೆ.
ನಮ್ಮ ಉಡುಗೆ ಆಕರ್ಷಕ ಅನಿಸುವುದರೊಂದಿಗೆ clean ಇರಬೇಕು. ಆ cleaness ಆಂತರಿಕವಾಗಿರಬೇಕು. ಉದಾ- ಒಗೆಯದ ಬನಿಯನ್ ಹಾಕಿಕೊಂಡರೆ ಯಾರಿಗೂ ಕಾಣುವುದಿಲ್ಲ ಖರೆ, ಆದರೆ ನಮಗೆ ಕಿರಿಕಿರಿ ಎನಿಸುತ್ತದೆ. ಹರಿದ, ಕೊಳೆಯಾದ, ತೂತು ಬಿದ್ದ ಒಳ ಉಡುಪುಗಳು dress code ವ್ಯಾಪ್ತಿಗೆ ಬರದೇ ಇರುವುದು ಆಶ್ಚರ್ಯಕರ.
suit ಹಾಕುವುದು ಸದಾ suit ಹಾಕಬೇಕೆಂದೆನಿಲ್ಲ. ಆಯಾ ಸಂದರ್ಭಕ್ಕನುಗುಣವಾಗಿ ಬಟ್ಟೆ ಬದಲಾಯಿಸುತ್ತಾ ಇರಬೇಕು. ನಮ್ಮ
ಹಾಗೂ ಕಾಲದ fashion ಗೆ ಹೊಂದುವಂತೆ dress ಮಾಡುವುದು ಅನಿವಾರ್ಯವಾಗುತ್ತದೆ.
ವಿಪರೀತ fat ಇದ್ದು, ಕುಲ್ಳಗಿದ್ದವರು ಉದ್ದನೆಯ ಕುರ್ತಾ ಪೈಜಾಮ ಧರಿಸಿದರೆ ಇನ್ನೂ ಕುಸಿದವರಂತೆ ಕಾಣುತ್ತಾರೆ. ಕೇವಲ ಅರ್ಧ ಇಂಚು ಹೆಚ್ಚು-ಕಡಿಮೆ ಆದರೂ look ನಲ್ಲಿ ವ್ಯತ್ಯಾಸವೆನಿಸುತ್ತದೆ. ಅದನ್ನು ನೋಡುಗರು ಸರಿಯಾಗಿ ಗುರಿತಿಸಬಲ್ಲರು.
ಎಷ್ಟೇ ಬೆಲೆ ಬಾಲುವ ಬಟ್ಟೆಗಳಿದ್ದರೂ, ಅದರ stitching ಸರಿಯಾಗಿರಲೇಬೇಕು. ನಂತರ ಅವುಗಳ ನಿರ್ವಹಣೆ ಕೂಡಾ. ಸೂಕ್ಷ್ಮ ಮನಸ್ಥಿತಿ ಹೊಂದಿದವರು ನಮ್ಮ ಇಡೀ ವ್ಯಕ್ತಿತ್ವವನ್ನು ನಾವು dress ನಿರ್ವಹಣೆ ಮಾಡುವ ರೀತಿಯ ಮೇಲೆ ಅಳೆಯುತ್ತಾರೆ. ಕಿತ್ತಿಹೋದ ಬಟನ್, ಬೇರೆ ಬಣ್ಣದ ಬಟನ್ ನುಸುಳಿಕೊಂಡಿದ್ದರೆ, ಒಂದು ತೊಳು fold ಮಾಡಿ ಇನ್ನೊಂದನ್ನು ಹಾಗೆ ಬಿಟ್ಟಿದ್ದರೆ. ಹೀಗೆ ಸಣ್ಣ ಸಂಗತಿಗಳು ಕೂಡಾ ನಮ್ಮೆದುರು ಕುಳಿತವರನ್ನು disturb ಮಾಡುತ್ತವೆ.
comfort ಗಾಗಿ ಅತೀ loose,fashion ಅತೀ fit ಹೊಲಿಸುವುದು ಅಸಮಂಜಸ. Dressing ವಿಷಯದಲ್ಲಿ europeans ತುಂಬಾ ಜಾಣರು ಎಂಬ ನಂಬಿಕೆಯಿದೆ ಆದರೆ ಅವರಿಗಿಂತಲೂ ನಮ್ಮ ಪೂರ್ವಜರು ತುಂಬಾ ಬುದ್ಧಿವಂತರು ಅನ್ನುವುದಕ್ಕೆ ಅವರು ಹಾಕುತ್ತಿದ್ದ ಕಚ್ಚೆ ಪಂಚೆ ಹಾಗೂ ಇತರ ದೇಸಿಯ ಉಡುಪುಗಳೇ ಸಾಕ್ಷಿ. ನೀಟಾಗಿ ಧೋತಿ ಉಡುವುದು ಸೂಟೂ ಟೈ ಹಾಕುವುದಕ್ಕಿಂತಲೂ ಕಠಿಣ. ಆದರೆ ಅದನ್ನು ನಮ್ಮ ಹಿರಿಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಣ್ಣವನಿದ್ದಾಗ ನಮ್ಮ ಅಜ್ಜ ರುಮಾಲು ಸುತ್ತಿಕೊಳ್ಳುವುದನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಮುಂದೆ ಅದನ್ನು ಯಾರು ಮುಂದುವರೆಸಿಕೊಂಡು ಹೊಗಲೇ ಇಲ್ಲ. ಕಾರಣ it is very difficult to maintain. ಇದೆಲ್ಲ ರಗಳೆ ಬೇಡವೆಂದೇ 'T' shirt, Jeans ಹೆಚ್ಚಾದವು. ಆದರೆ ಅವು ಎಲ್ಲ ಕಾಲಕ್ಕೂ relevent ಅಲ್ಲ.
white & white ಹಾಕುವವರು ತುಂಬಾ careful, neat ಆಗಿರುತ್ತಾರೆ. ಒಂದು ಕಾಲಕ್ಕೆ ಶ್ರಿಮಂತ ರಾಜಕಾರಣಿಗಳು ಮಾತ್ರ ಈ ರೀತಿ white ಬಟ್ಟೆ ಹಾಕುತ್ತಿದ್ದರು. ಈಗ ಬರೀ ವಿಧಾನ ಸೌಧ, ಪಾರ್ಲಿಮೆಂಟುಗಳ ಸುರಕ್ಷಿತ ಎಂಟ್ರಿಗಾಗಿ ಮರಿ ಪುಡಾರಿಗಳು ಕೂಡಾ white ಆಗಲು ಶುರು ಮಾಡಿದ್ದಾರೆ. ಹಿಗಾಗಿ white ಕೂಡಾ ಬಣ್ಣ ಕಳೆದುಕೊಂಡಿದೆ. ಇದನ್ನೆ ನಾವು ಬಣ್ಣಗೆಟ್ಟವರು ಎನ್ನುವುದು. suit ಹಾಕಲೇಬೇಕು ಎಂಬ ವೃತ್ತಿ ನಿಯಮ ಇದ್ದವರು ತುಂಬಾ ಉದಾಸೀನವಾಗಿ ಕೊಳೆತ fade ಆದ ಕೋಟ್ ಹಾಕಿಕೊಳ್ಳುತ್ತಾರೆ, ಎಫ್ರಾನ್ ಹಾಕಲೇಬೇಕೆಂಬ ನಿಯಮದಿಂದ unsize ಹಾಗೂ unclean ಆಗಿದ್ದರೂ ಹಾಕಿಕೊಳ್ಳುತ್ತಾರೆ ಯಾಕೆಂದರೆ ಅದು professional dress code ಅಲ್ಲವೇ? ಹಾಗಂತ ಅದಕ್ಕೆ ಬೆಲೆ ಬೇಡವೇ? profession ಕಾರಣಕ್ಕೆ ಹಾಕುವ uniform ಗಳು ಹೆಚ್ಚು ಆಕರ್ಷಕವಾಗಿರಬೇಕು ಎನ್ನುವುದು ಕೇವಲ ವೃತ್ತಿ ಗೌರವಕ್ಕಾಗಿ ಅಲ್ಲ, ವೈಯಕ್ತಿಕ ಶಿಸ್ತಿಗೆ ಕೂಡಾ!
ತುಂಬಾ neat dressing ಕೇವಲ first impression ಗೆ ನೆರವಾಗುತ್ತದೆ. ನಂತರ ನಮ್ಮ ವೈಯಕ್ತಿಕ ಪ್ರತಿಭೆ, ಸಾಮರ್ಥ್ಯದ ಮೇಲೆ ನಮ್ಮ ವ್ಯಕ್ತಿತ್ವ ರುಪಗೊಳ್ಳುತ್ತದೆ. ವ್ಯಕ್ತಿ ಸಾಮರ್ಥ್ಯವಿಲ್ಲದವರು ಪ್ರತಿಭೆ ಇಲ್ಲದ ಶತಧಡ್ಡರೂ ಕೂಡಾ ಸದಾ trim ಆಗಿದ್ದರೆ ಏನು ಪ್ರಯೋಜನ.
Dressing ವಿಷಯದಲ್ಲೂ ಇಂತಹ contradiction ಇವೆ. ಕೆಲವರು ಗೊತ್ತಿದ್ದರೂ, ಬೇಕಂತಲೇ odd dressing ಮಾಡುತ್ತಾರೆ. ಅದು ಕೇವಲ attention seeking ಅಷ್ಟೇ! ಎಲ್ಲೊ ಒಂದು ಸಣ್ಣ ಎಡವಟ್ಟು ಬೇರೆಯರ ಗಮನವನ್ನು ಕೆಟ್ಟರೀತಿಯ ಮೂಲಕವೂ ಸೆಳೆಯಬಹುದು. ಯಾವುದೋ ಒಂದು ಕನ್ನಡ ಸಿನೆಮಾದಲ್ಲಿ ಟೆನ್ನಿಸ್ ಕೃಷ್ಣ ಮಹಿಳೆಯರಿಗೆ ಸನ್ನೆ ಮಾಡಿ ಬಡಿಸಿಕೊಳ್ಳುತ್ತಿರುತ್ತಾನೆ. ಕಾರಣ ಅವನಿಗೆ ಹೆಣ್ಣು ಮಕ್ಕಳ ಒಳಉಡುಪು ಕಂಡ ಕೂಡಲೇ ಕಣ್ಸನ್ನೆ ಮಾಡಿ ಎಚ್ಚರಿಸಿ, ಸರಿಮಾಡಿಕೊಳ್ಳಿ ಎಂದು ಹೇಳುವ ಕೆಟ್ಟ ಚಾಳಿ ಇರುತ್ತದೆ. ಅದನ್ನು ಅಪಾರ್ಥ ಮಾಡಿಕೊಂಡ ಪ್ರತಿ ಸ್ತ್ರೀಯರು ಲಗಾಯಿಸುತ್ತಾರೆ. ಇಡೀ ಸಿನೆಮಾದಲ್ಲಿ ತೋರಿಸುವ ಇಂತಹ ದೃಶ್ಯಗಳ ಹಿಂದೆ ನಿರ್ಧೇಶಕನ ಸೂಕ್ತ ಸಲಹೆ ಮಹಿಳೆಯರಿಗಿದೆ. ಅದನ್ನು ನೋಡಿದ ಜನ undergarments ಬಗ್ಗೆ ಎಚ್ಚತ್ತು ಕೊಂಡಿದ್ದಾರೆ ಎಂಬುದು ಕೂಡಾ ಇಲ್ಲಿ ಅಪ್ರಸ್ತುತ. ನಾವು ಹೇಗೆ ಕಂಡರೆ, ಬಟ್ಟೆ ಹಾಕಿಕೊಂಡರೆ ನೋಡೊರದೇನು ತಕರಾರು ಎಂದು ಅಡ್ಡಡ್ಡ ಪ್ರಶ್ನೆ ಕೇಳುವುದು. ನಾನು ಬಟ್ಟೆ ಹಾಕಿಕೊಳ್ಳುವುದು ನನ್ನ ಸಲುವಾಗಿ ನೋಡುಗರ ಸಲುವಾಗಿ ಅಲ್ಲ ಎನ್ನುವವರು, ನಾನು ಹೇಗಿದ್ದರೆ ಬೇರೆಯವರದೇನು ಗಂಟುಹೋಗುತ್ತದೆ ಎಂದು ವಾದಿಸುವವರು ಒಂದು ಇಡೀ ದಿನ pant jip ಹಾಕಿಕೊಳ್ಳದೇ ಇದ್ದು ಬೇರೆಯವರು ತಮ್ಮೊಂದಿಗೆ ಹೇಗೆ react ಮಾಡುತ್ತಾರೆ ಎಂಬುದನ್ನು ಗಮನಿಸಲಿ ನೋಡೋಣ?

Thursday, April 8, 2010

ತುಂಡಾದ ಬ್ರೆಡ್ ಎಂಜಲಾದ ಜ್ಯೂಸ್


ನಮ್ಮ ಜಮಾನಾದ ಲವ್ ಸ್ಟೋರಿ ಯಾಕೋ ನೆನಪಾಯಿತು. ಅಂದು ಪ್ರೀತಿಯನ್ನು express ಮಾಡಬೇಕೆಂಬ ತುಡಿತವಿದ್ದರೂ ಹೇಳಲಾಗದ ಸಂಕೋಚ ನೆನಸಿಕೊಂಡರೆ ಅಚ್ಚರಿ.
ಈಗ ಏನಿದ್ದರೂ direct, ಒಂದೆರೆಡು visit ಆದರೆ ಸಾಕು, hugging & kissing ಅಯ್ಯೋ ಏನು ಕಾಲವಪ್ಪ, ಗೊಣಗಾಡುತ್ತೇವೆ ಅಷ್ಟೆ!
ಧಾರವಾಡ botanical garden ನಲ್ಲಿ ನಿನ್ನೊಂದಿಗೆ ಏಕಾಂತವಾಗಿ ಸುತ್ತಲೂ ಭಯ. ಎಲ್ಲಿ ಯಾರು ಏನು ಅಂದುಕೊಂಡಾರೋ ಎಂಬ ಧಾವಂತ. ಹೇಳಲೇಬೇಕಾದ ಎಷ್ಟೋ ಸಂಗತಿಗಳು ಮಂಗಮಾಯ. ಆದರೆ ಕಣ್ಣಲ್ಲೇ ವ್ಯಕ್ತಭಾವ ಗ್ರಹಿಸಿದರೂ ಪ್ರಯೋಜನವಿಲ್ಲ. ಏನೇನೋ ಅಡ್ಡಗೋಡೆಗಳು. ಭವಿತವ್ಯದ ಜವಾಬ್ದಾರಿಗಳು.
ಹೀಗಿದ್ದಾಗ I Love You, I Marry you ಎನ್ನೋ ಮಾತುಗಳಿಗೆ ಜಾಗವಿರಲಿಲ್ಲವಾದರೂ, ಪ್ರೀತಿಸದೆ ಇರಲಾಗಲಿಲ್ಲ.
ಕಾಲೇಜು ಕ್ಯಾಂಪಸ್ ನಲ್ಲಿ ಮಾತ್ರ ಇಬ್ಬರು ತಿರುಗಾಡುವ ಧೈರ್ಯ, ಆಕಸ್ಮಾತ್ ಕ್ಯಾಂಪಸ್ ದಾಟಬೇಕೆಂದರೆ ಹರಸಾಹಸ. ನೂರೆಂಟು ಆತಂಕಗಳು.
ಆದರೂ ಜೀವ ತಡೆಯಬೇಕಲ್ಲ! ಮುಟ್ಟದ, ತಟ್ಟದ, ತಬ್ಬದ ಪ್ರೀತಿಗಾಗಿ ಎಷ್ಟೊಂದು ತವಕ. ಮಾತು, ಮಾತು ಬರೀ ಮಾತು. ಏನೇನೋ ಆದರ್ಶದ ಕನಸುಗಳ ಸುತ್ತಲೇ ಗಿರಕಿ. ಮುಖ್ಯ ವಿಷಯಕ್ಕೆ ಒಮ್ಮೆಯೂ ಬರಲೇ ಇಲ್ಲ.
ಹೀಗೆ ಸಾಗಿದ degree ಯ ಕೊನೆ ವರ್ಷದಲ್ಲಿ ಏನೋ ಒಂದು ರೀತಿಯ ಭಂಡ ಧೈರ್ಯ. ಹೇಳಬೇಕೆಂಬ ಗಟ್ಟಿ ನಿರ್ಣಯ ನಾಲ್ಕರ ಇಳಿಬಿಸಿಲಿನಲ್ಲಿ ಹಾಸ್ಟೆಲ್ ಹಿಂದಿನ ಕ್ಯಾಂಟಿನ್ ನಲ್ಲಿ ಮತ್ತದೇ ಗೊಂದಲ.
ಇನ್ನೇನು degree final year ಮುಗಿತಾ ಬಂತು ಇನ್ನಾದರೂ ಹೇಳಬಹುದು ಎಂಬ ನಂಬಿಕೆ ಇಬ್ಬರಲ್ಲಿ.
ಒಂದು ದಿನ ದಾಂಡೇಲಿ ಕಾಡಿಗೆ ಪಯಣಿಸಲು ನಿರ್ಧಾರ. ಆದರೆ ಸ್ವಯಂ ನಿರ್ಬಂಧದ ಲಕ್ಷ್ಮಣ ರೇಖೆ. ನಮ್ಮೊಂದಿಗೆ ಯಾರಾದರೂ company ಇರಲಿ ಎಂಬ ಒಳ ಒಪ್ಪಂದ. ಸರಿ like minded ಸಂಗಾತಿ ಜೆಸ್ಸಿಕಾ ನಮ್ಮ ಜೊತೆಗೆ. ಮನಸ್ಸಿನಲ್ಲಿ ಕಳವಳ ತುಂಬಿಕೊಂಡೆ ದಾಂಡೇಲಿಗೆ ದಾಪುಗಾಲು.
ಅಲ್ಲಿ ಕಾಡ ತುಂಬಾ ಸುತ್ತಾಟ. ಈ ದಟ್ಟ ಕಾಡಾದರೂ ನಮ್ಮ ನೆರವಿಗೆ ಬಂದೀತೆಂಬ ಭರವಸೆ. ಊಹೂಂ! ಮತ್ತದೇ ಕಾಡ ಹರಟೆ.
ಹೇಳಬೇಕಾದ ಮಾತುಗಳು ಹೊರ ಬರಲೇ ಇಲ್ಲ. ಜೆಸ್ಸಿಕಾ ಕೇಳಿದಳು. ನೀವಿಲ್ಲಿ ಬಂದದ್ದಾದರು ಯಾಕೆ ಮಾರಾಯರೆ. ಹೇಳೋದಿದ್ದರೆ ಹೇಳಿ ಮುಂದಿನ ದಾರಿ ಕಂಡುಕೋಬೇಕು. ಬರೀ ಹೀಗೆ ಸುತ್ತಿ ಬಳಸಿ ಕಾಡು ತಿರುಗಿ, ಹಳೆ ಸಿನೆಮಾ ಹಿರೋಗಳ ತರಹ ಮರ ಸುತ್ತೋ ಡ್ಯುಯಟ್ ಆಯ್ತಲ್ಲ ನಿಮ್ಮದು ಎಂದರು ಧೈರ್ಯ ಇಲ್ಲವೇ ಇಲ್ಲ.
ಸಂಜೆ ವಾಪಾಸಾಗುವ ಧಾವಂತ, halt ಬೇಡ ಎಂಬ ಭಾವ ಎಲ್ಲರಲ್ಲೂ, ಆ ಕಾಲದ ಪ್ರೀತಿಯೇ ಹಾಗೆ. ತುಂಬ ನಿಷ್ಕಾಮ, ನಿರ್ಮಲ. ಇಷ್ಟು ಸಾಕಲ್ಲ. ಈ ಜನುಮಕೆ ಎಂಬ ಸಂಭ್ರಮ.
ಸಂಜೆ indirect ಆಗಿ ಪ್ರೀತಿಯನ್ನು ಹೇಳಲೇಬೇಕೆಂದು ತಿರ್ಮಾನಿಸಿದವಳು ನೀನು. ಹೇಗೆ ಹೇಳುತ್ತಿ ಎಂಬ ಕುತೂಹಲ.
ಮೂರು ಪ್ಲೇಟ್ ಬ್ರೆಡ್ ಟೋಸ್ಟ್, apple juice ಗೆ ಆರ್ಡರ್. ಒಂದು ತುಂಡು bread ಕಚ್ಬಿಟ್ಟೆ, ನಾಲ್ಕು ಹನಿ juice ಹೀರಿಕೊಂಡೆ. ಸಂಜೆ ಹಿಂತಿರುಗುವ ಸಮಯವಾಗಿದೆ ಕೇಳು ಮಾರಾಯ ಎಂಬ ನಿನ್ನ ಮಾತಿನ ಹಿನ್ನಲೆ ಅರ್ಥವಾಗಲಿಲ್ಲ. ಎದ್ದು cash counter ಗೆ ಹೋಗಿದ್ದೆ. ನನ್ನ ಮುಂದಿದ್ದ ಬ್ರೆಡ್ ತುಂಡನ್ನು, ಕುಡಿದಿಟ್ಟ juice ನ್ನು ಕಚ್ಚಿ ಎಂಜಲಾಗಿಸಿ ನೀನು ಸಂಭ್ರಮಿಸಿದ್ದನ್ನು ಓರೆಗಣ್ಣಿನಿಂದಲೆ ನೋಡಿದೆ. ಅಬ್ಬಾ! I Love You, I Kiss You ಅಂದಷ್ಟೇ ಖುಷಿಯಾಯಿತು.
ಮತ್ತೊಮ್ಮೆ ನಾನು ತಿಂದಿಟ್ಟ bread piece ನ್ನು ಎಂಜಲಾಗಿಸಿದ juice ನ್ನು ಮತ್ತೊಮ್ಮೆ ತುಟಿಗೆ ತಾಗಿಸಿಕೊಂಡಾಗಲೇ ನಿನ್ನ hugging & kissing ನನಗೆ reach ಆಯಿತು.
ಅಬ್ಬಾ! ಆ ಕಾಲದ ಪ್ರೀತಿ ಎಷ್ಟೊಂದು ದಟ್ಟ, symbolic ಈಗಿನ ನೇರ ಪ್ರೀತಿಯಲ್ಲಿ ಖಂಡಿತಾ ಆ ಮಜವಿಲ್ಲ ಬಿಡಿ!

Tuesday, April 6, 2010

ತೋoಟದಾರ್ಯ ಮಠದ ಸಾವಿರದ ಶಿವಾನುಭವಗಳು
ಗಿನ್ನಿಸ್ ದಾಖಲೆಯತ್ತ ದಾಪುಗಾಲು

ಕರ್ನಾಟಕ ರಾಜ್ಯದ ಸಾವಿರಾರು ಲಿಂಗಾಯತ ಧರ್ಮದ ಮಠಗಳು ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ನಿರತವಾಗಿವೆ. ಪ್ರತಿಯೊಂದು ಮಠಕ್ಕೂ ಪೀಠ ಪರಂಪರೆಯಿರುತ್ತದೆ.
ಶಿಕ್ಷಣ, ದಾಸೋಹ ಹಾಗೂ ಜಾತ್ರೆಯಂತಹ ಜನಮುಖಿ ಯೋಜನೆಗಳ ಮೂಲಕ ಕರ್ನಾಟಕದ ಲಿಂಗಾಯತ ಮಠಗಳು ಇಡೀ ನಾಡಿನ ಗಮನ ಸೆಳೆದಿವೆ.
ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ಪಿಠ ಪರಂಪರೆಯ ಡಂಬಳ-ಗದುಗಿನ ತೋಂಟದಾರ್ಯ ಮಠಕ್ಕೆ ತನ್ನದೇ ಆದ ಶ್ರೀಮಂತ ಭವ್ಯ ಪರಂಪರೆಯಿದೆ. ಗದಗ-ಎಡೆಯೂರು-ಡಂಬಳ ಮಠಗಳನ್ನು ಮುಖ್ಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
ಪ್ರಜಾಸತ್ತತೆಯ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು, ಧಾರ್ಮಿಕ ವ್ಯವಸ್ಥೆಯಲ್ಲಿ ಮಠಾಧೀಶರು, ರಾಜಸತ್ತತೆಯ ವ್ಯವಸ್ಥೆಯಲ್ಲಿನ ರಾಜರುಗಳು ತಮ್ಮ ವೈಯಕ್ತಿಕ ವರ್ಚಸ್ಸಿನ ಮೂಲಕ ಹೆಚ್ಚಿನ ಸಾಧನೆ ಮಾಡಿದಾಗ ಮಾತ್ರ ಇತಿಹಾಸ ಪುರುಷರಾಗುತ್ತಾರೆ. ಎಡೆಯೂರಲ್ಲಿ ನೆಲೆಗೊಂಡ 16 ನೆಯ ಶತಮಾನದ ತೋಂಟದ ಸಿದ್ಧಲಿಂಗ ಯತಿಗಳು ಜಂಗಮ ರೂಪಿಯಾಗಿ ನಾಡಿನಾದ್ಯಂತ ಸಂಚರಿಸಿ ಬಸವ ಧರ್ಮ ಪ್ರಚಾರ ಮಾಡಿದರು.
ಅದೇ ಪೀಠ ಪರಂಪರೆಯ ತೋಟದಾರ್ಯ ಮಠಕ್ಕೆ ತನ್ನ ಐತಿಹಾಸಿಕ ಹಿರಿಮೆಯನ್ನು ಹೆಚ್ಚಿಕೊಂಡಿದ್ದು 20 ಹಾಗೂ 21 ನೇ ಶತಮಾನದ ಕಾಲಘಟ್ಟದಲ್ಲಿ. ಇಂದಿನ ಪೀಠಾಧಿಪತಿಗಳಾದ ಪರಮ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 29-7-1974 ರಂದು ತಮ್ಮ ಅಧಿಕಾರ ಸೇವಾವಧಿಯ ಕಾಲದಲ್ಲಿ ಇಡೀ ಚಿತ್ರಣವನ್ನೇ ಬದಲಿಸಿದರು. ಆರ್ಥಿಕ ಮುಗ್ಗಟ್ಟಿನಿಂದ ಶ್ರೀಮಠ ಅನೇಕ ತೊಂದರೆಗಳನ್ನು ಎದುರಿಸುತ್ತಿತ್ತು. ಆರ್ಥಿಕ ದುರ್ಬಲ ಸ್ಥಿತಿಯಲ್ಲಿಯೂ ಜನರನ್ನು ಕಟ್ಟಿಕೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶ್ರೀಮಠದ ಭಕ್ತ ಸಮೂಹವನ್ನು ಸಂಘಟಿಸಿದರು. ಮೂವತ್ತಾರು ವರ್ಷಗಳ ಅತ್ಯಲ್ಪ ಕಾಲಘಟ್ಟದಲ್ಲಿ ಶ್ರೀಮಠ ಬೆಳೆದು ಬಂದಿರುವ ರೀತಿ ಅನನ್ಯವಾದದು. ಕಾಯಕ-ದಾಸೋಹ-ಶಿಕ್ಷಣ ಎಂಬ ಮೂರು ಸೂತ್ರಗಳನ್ನು ಹಿಡಿದ ಸ್ವಾಮಿಜಿಗಳು ತಾವೇ ಕೃಷಿ ಕಾಯಕದಲ್ಲಿ ನಿರತರಾದರು. ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಿದರು. ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಸ್ವತ: ತಾವೇ ನಾಡಿನುದ್ದಕ್ಕೂ ಸಂಚರಿಸಿದರು. ತಮ್ಮ ಪ್ರಖರ ವಾಣಿಯ ಮೂಲಕ ಲಿಂಗಾಯತ ಧರ್ಮದ ಸಂದೇಶಗಳನ್ನು ಅಧಿಕಾರಯುತವಾಗಿ ಸಾರಿದರು. ತೋಂಟದಾರ್ಯ ಶ್ರೀಗಳ ಮಾತುಗಳೆಂದರೆ ಸಿಂಹಘರ್ಜನೆ. ನೇರ-ನಿಷ್ಠುರ .
ಸಾರ್ವತ್ರಿಕವಾಗಿ ವಿಶಿಷ್ಠ ವ್ಯಕ್ತಿತ್ವ ರೂಪಿಸಿಕೊಂಡಿರುವ ಶ್ರೀಗಳು. ವಯಕ್ತಿಕವಾಗಿ ಭಕ್ತರ ಪಾಲಿನ ಮಾತೆಯಾಗಿದ್ದಾರೆ. ಸಾಮಾನ್ಯರ ಸ್ವಾಮೀಜಿ. ಕನ್ನಡದ ಜಗದ್ಗುರುಗಳು, ಪುಸ್ತಕ ಜಗದ್ಗುರುಗಳು ಎಂದು ಖ್ಯಾತಿ ಪಡೆದಿರುವ ಶ್ರೀಗಳು, ತೋಟದಾರ್ಯ ಮಠದ ಶಿವಾನುಬವ ಹಾಗೂ 'ಜಾತ್ರೆ' ಯ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ.
1976 ರಲ್ಲಿ ನಾನು ಮೊದಲ ಜಾತ್ರೆ ನೋಡಿದಾಗ ನನಗೆ ಹನ್ನೊಂದರ ಪ್ರಾಯ. 1981 ರಲ್ಲಿ ಧಾರವಾಡ ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದ ನಂತರ ಮೇಲಿಂದ ಮೇಲೆ ಮಠಕ್ಕೆ ಬರುತ್ತಿದ್ದೆ. ಮಠದ ಆರ್ಥಿಕ ಸ್ಥಿತಿ ನಿಧಾನವಾಗಿ ಚೇತರಿಸಿಕೊಂಡು ಪ್ರತಿವಾರ ನಡೆಯುವ ಶಿವಾನುಭವದ ರೂಪರೇಷೆ ಬದಲಾಯಿತು. 1974 ರಿಂದ ಪ್ರತಿ ಸೋಮವಾರ ಸಂಜೆ ನಡೆಯುವ ಶಿವಾನುಭವಕ್ಕೆ ದಣಿವೆಂಬುದಿಲ್ಲ. ರೋಟರಿ, ಲಾಯನ್ ನಂತಹ ಖಾಸಗಿ ಸೇವಾ ಸಂಸ್ಥೆಗಳನ್ನು ಬಿಟ್ಟರೆ ಅದೇ ಮಾದರಿಯಲ್ಲಿ ಧಾರ್ಮಿಕ ಕೇಂದ್ರವೊಂದರಲ್ಲಿ ಕಾರ್ಯಕ್ರಮ ತಪ್ಪದೆ ನಡೆಯುತ್ತಿರುವುದು ಗದುಗಿನ ತೋಂಟದಾರ್ಯಮಠದಲ್ಲಿ ಮಾತ್ರ.
ಪ್ರತಿ ಸೋಮವಾರ ಕಾರ್ಯಕ್ರಮ ರೂಪಿಸುವುದು ಸಣ್ಣ ಸಂಗತಿಯಲ್ಲ. ಅತಿಥಿಗಳನ್ನು, ಉಪನ್ಯಾಸಕರನ್ನು, ಸಂಗೀತಗಾರರನ್ನು, ಖರ್ಚು-ವೆಚ್ಚ ನಿರ್ವಹಿಸಲು ಪ್ರಾಯೋಜಕರನ್ನು ಹುಡುಕಬೇಕು. ಈಎಲ್ಲ ಕಾರ್ಯಗಳು ಸಾಂಗವಾಗಿ ಸಾಗಲು ಶ್ರೀಗಳು ಶ್ರೀಮಠದ ಲಿಂಗಾಯತ ಪ್ರಗತಿಶೀಲ ಸಂಘವನ್ನು ಕ್ರೀಯಾಶೀಲಗೊಳಿಸಿದರು. ಅಧಿಕಾರವನ್ನು ನಿಂತ ನೀರಾಗಿಸದೇ, ಪ್ರತಿ ಬಾರಿ ಪದಾಧಿಕಾರಿಗಳನ್ನು ಬದಲಿಸುವುದರ ಮೂಲಕ ಹೊಸ ಪ್ರತಿಭಾಸಂಪನ್ನ ಕ್ರೀಯಾಶೀಲ ಭಕ್ತರ ತಂಡವನ್ನು ರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ, ವಿವಿಧ ವೃತ್ತಿಗಳಲ್ಲಿ ತೊಡಗಿದ ಮಹನೀಯರು ಶ್ರೀಮಠದ ಶಿವಾನುಭವ ವೇದಿಕೆಯನ್ನು ಕೇವಲ social prestige ಎಂದು ಪರಿಭಾವಿಸದೆ ಸೇವಾ ಕೇಂದ್ರವೆಂದು ತಮ್ಮನ್ನು ತಾವು ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡರು. ಶ್ರೀ ಅಜ್ಜಣ್ಣ ಮಾನ್ವಿ, ಶ್ರೀವಿಶ್ವನಾಥ ಬುಳ್ಳಾ, ರಾಚಣ್ಣ, ಶೇಖಣ್ಣ ಮುನವಳ್ಳಿ ಪಿ.ಎಸ ಸಂಶಿಮಠ ಹಾಗೂ ಅನೇಕ ಹಿರಿಯರು ಶ್ರೀಗಳೊಂದಿಗೆ ಕೈಜೋಡಿಸಿದರು.
ಈಗ ಮೂರನೇ ತಲೆಮಾರಿನ ಯುವಕರು ಶ್ರೀಮಠದ ಪದಾಧಿಕಾರಿಗಳಾಗಿದ್ದಾರೆ.
2009 ಹಾಗೂ 2010 ರ ಸಾಲಿನ ಪದಾಧಿಕಾರಿಗಳಾಗುವ ಸುದೈವ ನನ್ನ ಪಾಲಿಗೆ ಅನಿರೀಕ್ಷಿತವಾಗಿ ಸಿಕ್ಕಿತು. ಶ್ರೀಗಳ ಪ್ರಭಾವವಲಯದಲ್ಲಿ ಬೆಳೆದಿದ್ದರಿಂದ ಮಠದ ಪದಾಧಿಕಾರಿಯಾಗುವ ಮನಸ್ಸಿರಲಿಲ್ಲ. ಡಾ. ಜಿ.ಬಿ. ಪಾಟೀಲರು ಅಧ್ಯಕ್ಷರಾಗುವ ಸಂದರ್ಭ ಬಂದಾಗ, ಶಿವಾನುಭವ ಸಮಿತಿಯ ಚೆರಮನ್ ಆಗುವ ಅವಕಾಶ ಬಂತು.
ಸಮಿತಿಯ ಚೇರಮನ್ ಆದ ಮೇಲೆ ಶಿವಾನುಭವದ difficulty ಗೊತ್ತಾಯಿತು. ಆದರೆ ಪ್ರತಿವಾರ ತಪ್ಪದಂತೆ ಭಾಗವಹಿಸಿ, ನಿರೂಪಣೆ ಮಾಡುತ್ತ ವಿಭಿನ್ನ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿದೆ. ಅತಿಥಿಗಳನ್ನು, ಉಪನ್ಯಾಸಕರನ್ನು ಹೊಂದಿಸುತ್ತ ವೈಯಕ್ತಿಕವಾಗಿ ಹೆಚ್ಚು ತೊಡಗಿಕೊಂಡೆ. ಇಲ್ಲಿ ಏನಿದ್ದರೂ ನನ್ನದು ನಿರ್ದೇಶಕ ಪಾತ್ರ. ಹೆಚ್ಚು ಜವಾಬ್ದಾರಿ ನಿರ್ವಹಿಸಿದ ಹೆಗ್ಗಳಿಕೆ ಉಳಿದ ಪದಾಧಿಕಾರಿಗಳಾಗಿ ಸಲ್ಲುತ್ತದೆ. ಅದರಲ್ಲೂ ವಿಶೇಷವಾಗಿ ಕೈಂಡ್ ಪರಿವಾರ ಅಧ್ಯಕ್ಷರಾದ ಸ್ನೇಹಿತ ಕೆ.ಪಿ.ಗುಳಗೌಡರ ಕಾರ್ಯದರ್ಶಿಯಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿದರು. ಶಿವಾನುಭವ ಭೌತಿಕ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ 60 ಶಿವಾನುಭವಗಳು ಯಶಸ್ವಿಯಾಗಿ ಜರುಗಿದವು. ನಿರ್ಮಾಪಕರಂತೆ ಕಾರ್ಯನಿರ್ವಹಿಸಿದ ಅಧ್ಯಕ್ಷರಾದ ಡಾ. ಜಿ.ಬಿ.ಪಾಟೀಲ, ಖಜಾಂಚಿ ಸಿದ್ಧರಾಮೇಶ ಪಟ್ಟೇದ, ಸಹ ಕಾರ್ಯದರ್ಶಿ ಡಾ. ಉಮೇಶ ಪುರದ ನೂತನ ಅಧ್ಯಕ್ಶ, ನಮ್ಮೊಂದಿಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಉದ್ಯಮಿ ಈಶಣ್ಣ ಮುನವಳ್ಳಿಯವರ ನೆರವನ್ನು ಮರೆಯಲಸಾಧ್ಯ.
ಸಾವಿರದ ಶಿವಾನುಭವಗಳ ಕೇವಲ ಪ್ರೇಕ್ಷಕನಾಗಿದ್ದ ನಾನು, ಉಪನ್ಯಾಸಕನಾಗಿ, ನಿರೂಪಕನಾಗಿ ಶಿವಾನುಭವಗಳ ರೂವಾರಿಯೂ ಆದದ್ದು ನನ್ನ ಪುಣ್ಯವೇ ಸರಿ.
ನಿನ್ನೆಯ ಹಸ್ತಾಂತರ ಕಾರ್ಯಕ್ರಮದ ಅತಿಥಿಗಳಾಗಿ ಡಾ. ಎಂ.ಎಂ. ಕಲಬುರ್ಗಿಯವರು ಪಾಲ್ಗೊಂಡು ಆಡಿದ ಮಾತುಗಳು ಹೆಚ್ಚು ಅರ್ಥ ಪೂರ್ಣ.

Monday, April 5, 2010ಸ್ನೇಹದ ಕಡಲಲಿ ಡಾ. ಜಿ.ಬಿ.ಪಾಟೀಲ
ಋಣ ಭಾರ ಹೊತ್ತು............
ಇವರು ಡಾ. ಜಿ.ಬಿ. ಪಾಟೀಲ ಗದುಗಿನ ಡಿ.ಜಿ.ಎಂ. ಆಯುರ್ವೇದ ಕಾಲೇಜಿನ ಪಾಚಾರ್ಯರು. 1996 ರಿಂದ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಾ ಕಾಲೇಜಿಗೆ ಅಂತರಾಷ್ಟ್ರೀಯ ಮಾನ್ಯತೆ ಒದಗಿಸಿ ಕೊಟ್ಟಿದ್ದಾರೆ. ಕಳೆದೆರೆಡು ದಶಕಗಳಿಂದ ಡಿ.ಜಿ.ಎಂ. ಕಾಲೇಜಿನೊಂದಿಗೆ ಬೆಳೆಯುತ್ತ, ಸಂಸ್ಥೆಯನ್ನು ಬೆಳೆಸುತ್ತ ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಸ್ನೇಹಪರ ಆಡಳಿತಗಾರರು. ದಕ್ಷತೆ ಎಂಬ ಕಿರಿಕಿರಿ ಆಡಳಿತ ನಡೆಸದೇ, ಮುಕ್ತ ಸ್ವಾತಂತ್ರ್ಯ ನೀಡಿ ಸಹೋದ್ಯೋಗಿಗಳ ಪ್ರೀತಿಯನ್ನು, ಕೆಲವು ಸಾರಿ ನಿಷ್ಠುರವನ್ನು ಸಂಪಾದಿಸಿದ್ದಾರೆ. ಇದಿಷ್ಟು ಇವರ ವೃತ್ತಿ ಚಿತ್ತಣ.
ಈಗ ನಾ ಹೇಳಬಯಸುವುದು ಇವರೊಂದಿಗಿನ ವೈಯಕ್ತಿಕ ಸ್ನೇಹದ ಕುರಿತು. ನನಗಿಂತಲೂ ವಯಸ್ಸಿನಲ್ಲಿ ಒಂಬತ್ತು ವರ್ಷ ಹಿರಿಯರು. ಹಿರಿಯರೊಂದಿಗೆ ಸದಾ ಸ್ನೇಹ ಇಟ್ಟುಕೊಂಡಿರುವುದು ನನ್ನ ಜಾಯಮಾನ. ಇವರೊಂದಿಗೆ ಸ್ನೇಹ ಬೆಸೆದದ್ದು ಸಾಹಿತ್ಯ ಪರಿಷತ್ತು ಹಾಗೂ ಇತರ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕ್ರಮಗಳಿಂದ. ಸಾಂಸ್ಕೃತಿಕ ನಂಟು ಖಾಸಗಿ ಸ್ನೇಹವಾಗಿ ಮಾರ್ಪಟ್ಟಿದ್ದು ಆಶ್ಚರ್ಯ!
ಗದುಗಿಗೆ ಬಂದು ಎರಡು ದಶಕಗಳಾದವು. ನಾಲ್ಕಾರು ಕಾಲೇಜುಗಳ ಪ್ರಾಧ್ಯಾಪಕನಾಗಿ, ಹತ್ತಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸಾವಿರಾರು ಜನರ ಸಂಪರ್ಕ ಹೊಂದಿದ್ದೇನೆ. ಹತ್ತು ಹಲವು ವಿವಾದಗಳಿಂದ, ನೇರ-ನಿಷ್ಠುರ ಮಾತುಗಳಿಂದ ಸ್ನೇಹಿತರೆಲ್ಲ, ಸ್ನೇಹಿತರಾಗಿ ಉಳಿಯಲಿಲ್ಲ ಎಂಬ ಬೇಸರವೂ ಇದೆ. ಹಾಗಂತ ನಿಷ್ಠುರತೆ ಬಿಡಲು ಸಾಧ್ಯವೆ! ಎಲ್ಲರಿಗೂ ಪೂಸಿ ಹೊಡೆಯುತ್ತ, diplomat ಆಗಿ gentleman ಎನಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ಹಾಗಂತ ಎಲ್ಲರೊಂದಿಗೆ confront ಮಾಡುತ್ತಾ, ಜಗಳ ಮಾಡುವುದು, ಸಿಟ್ಟಿಗೇಳುವುದನ್ನು ಮಾಡುವುದಿಲ್ಲ. ಇಪ್ಪತ್ತು ವರ್ಷದ ವೃತ್ತಿ ಜೀವನದಲ್ಲಿ ಎಂದೂ ಪ್ರಾಚಾರ್ಯರೊಂದಿಗೆ, ಸಹೋದ್ಯೋಗಿಗಳೊಂದಿಗೆ ಜಗಳ ತೆಗೆದಿಲ್ಲ. ಸದಾ ನಗುತ್ತ, ನಗಿಸುತ್ತ ಇದ್ದರು ಎಲ್ಲರೂ ಮೆಚ್ಚುವ ವ್ಯಕ್ತಿತ್ವ ನನ್ನದಂತೂ ಅಲ್ಲ. ಅದಕೆ ಕಾರಣವೂ ಗೊತ್ತಿಲ್ಲ. ಗೊತ್ತಾಗುವುದು ಬೇಡ ಬಿಡಿ.

ಸದಾ extrovert ಮಾತುಗಾರನೆನಿಸಿದರೂ ಸ್ನೇಹದ ವಿಷಯಕ್ಕೆ ತುಂಬಾ introvert, ಸ್ನೇಹಿತರ ಆಯ್ಕೆಯ ವಿಷಯದಲ್ಲಿ ತುಂಬಾ choosy. ಡಾ. ಜಿ.ಬಿ. ಅವರೊಂದಿಗೆ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ, ಸಂಸ್ಥೆಯ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಸಂಪರ್ಕಿಸುತ್ತಾ ನಂತರ ಜಗದ್ಗುರು ಶಿವಾನಂದ ವಿಜ್ಞಾನ ಕಾಲೇಜು ಪ್ರಾರಂಭಿಸುವುದಂರೊಂದಿಗೆ ನಂಟು ಬಿಡಿಸಲಾಗದ ಗಂಟಾಯಿತು. ಸ್ನೇಹ ಗಳಿಸುವುದು ಸುಲಭ, ಬೇರೆಯವರನ್ನು impress ಮಾಡುವುದು ಅದಕ್ಕಿಂತಲೂ ಸುಲಭ ಆದರೆ ಸ್ನೇಹವನ್ನು ಉಳಿಸಿಕೊಂಡು ಹೋಗುವುದು ಸರಳವಂತೂ ಅಲ್ಲವೇ ಅಲ್ಲ.
ನಮ್ಮ ದೌರ್ಬಲ್ಯಗಳನ್ನು ಸಹಿಸಿಕೊಂಡವರು ಮಾತ್ರ ಸ್ನೇಹಿತರಾಗಿ ಉಳಿಯುತ್ತಾರೆ. ಸ್ನೇಹ ನಿರೀಕ್ಷೆಗಳಿಲ್ಲದೆ ಬೆಳೆದಾಗ ಉಳಿಯುತ್ತದೆ ಎಂಬುದು ಗೊತ್ತಿದ್ದು ಸ್ನೇಹವನ್ನು ಸೂಕ್ಷ್ಮವಾಗಿ ಅನುಭವಿಸುವ ಇರಾದೆ ನನ್ನದು.
ಯಾರನ್ನಾದರೂ ಹೊಗಳಲು ಕೂಡಾ ನನ್ನ ವಿಮರ್ಶಕ ಮೆದುಳು ಅಡ್ಡಬರುತ್ತದೆ. ಅತೀಯಾದ psychological ಅಧ್ಯಯನ ವ್ಯಕ್ತಿಗಳನ್ನು frank ಆಗಿ ಸ್ವೀಕರಿಸಲು ಅವಕಾಶ ನೀಡುವುದಿಲ್ಲ, ನಂಬದಿದ್ದರೂ, ನಂಬಿದಂತೆ ನಟಿಸುವ ಈ ಜಗದ ವ್ಯಾಪಾರದಲಿ ನಿರ್ವಾಜ್ಯ ಸ್ನೇಹಿತರು ಸಿಗುವುದು ಕಡು ಕಷ್ಟ! ನೂರೆಂಟು ನಂಜಿನಾನುಭವದಲಿ ಬೆಳೆದ ನನಗೆ ಯಾರೊಂದಿಗಾದರೂ frank ಆಗಿ ಸ್ನೇಹ establish ಮಾಡುವುದು ಕಠಿಣ ಎನಿಸುತ್ತದೆ.
ಇರಲಿ ಬಿಡಿ, ಇಷ್ಟೆಲ್ಲ ನೇತಾತ್ಮಕ ಕಾರಣಗಳ ಮಧ್ಯಯೂ ಡಾ. ಜಿ.ಬಿ. ನನಗೆ ಆತ್ಮೀಯರಾಗಿ ಮಾರ್ಗದರ್ಶಕರಾದರು. ಪ್ರಖರ ಆಲೋಚನೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡ ಹೆಗ್ಗಳಿಕೆ ಅವರದು. ಸಮಾಧಾನ, ಒಳ್ಳೆಯತನ, ವ್ಯವಹಾರ ಕುಶಲತೆ, ಸೂಕ್ಷ್ಮ ಆಡಳಿತ ನಿರ್ಣಯಗಳು, ಉದಾರ ಮನೋಸ್ಥಿತಿ, ಕೆಲಸ ತೆಗೆಯುವ ಚಾಕಚಕ್ಯತೆ ಹೀಗೆ ಹತ್ತು ಹಲವು positive ಅಂಶಗಳಿಂದ ನಾನವರ ಸ್ನೇಹಕ್ಕೆ surrender ಆದೆ.
ಎಷ್ಟೇ ಎಚ್ಚರವಹಿಸಿದರೂ ಸಮಯ-ಸಂದರ್ಭದ ಒತ್ತಡಕ್ಕೆ ಬಿದ್ದು ತೊಂದರೆಗಳನ್ನು ಎದುರಿಸಿ ಯಾರಿಗೂ ಹೇಳದೇ ತೊಳಲಾಡಿದಾಗ ನನಗೆ ಮಾನಸಿಕ ಧೈರ್ಯ ನೀಡಿ, ಆರ್ಥಿಕ ನಿರ್ವಹಣೆಗೆ ದಾರಿ ತೋರಿ ಔದಾರ್ಯದ ಋಣ ಹೇರಿದ್ದಾರೆ.
ಅವರ ಸಂಸ್ಥೆಯ ರಜತಮಹೋತ್ಸವ ಸಂದರ್ಭದಲ್ಲಿ ಸ್ನೇಹದ ಸಣ್ಣ ಋಣ ತೀರಿಸುವ ಅವಕಾಶ ಒದಗಿಸಿಕೊಟ್ಟರು. ಮೂರು ತಿಂಗಳ ಕಾಲ ಅವರೊಂದಿಗೆ ನಿತ್ಯ ಚರ್ಚಿಸಿ, ಹೊಸ ಆಲೋಚನೆಗಳನ್ನು ನೀಡುವ, ಅವು ಯಶಸ್ವಿಯಾಗುವಂತೆ ಕಾರ್ಯಕ್ರಮ ರೂಪಿಸುವ ಮೆದುಳಾಗಿ ಕಾರ್ಯ ಮಾಡಿ ಅವರ ಭಾರ ಕಡಿಮೆ ಮಾಡಿದೆ. 3 ದಿನಗಳ ಐತಿಹಾಸಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡು, ಕೆಲವರ ನಿಷ್ಠುರ ಕಟ್ಟಿಕೊಂಡು ಆತ್ಮವಿಶ್ವಾಸದಿಂದ ಕೆಲಸ ಮಾಡಿದೆ. ಗದುಗಿನ ಪರಿಸರದಲ್ಲಿಯೇ ಅಪರೂಪ ಎಂದೆನಿಸಿದ ಡಿ.ಜಿ.ಎಂ. ರಜತ ಸಂಭ್ರಮದಲ್ಲಿ ಮಹಾದಾನಿ ದಾನಪ್ಪನವರ ಪ್ರತಿಮೆಯ ಅಡಿಯಲ್ಲಿ ಸುಂದರ ಕಾವ್ಯಚಿತ್ರ ಬರೆಯುವ ಅವಕಾಶವೂ ಸಿಕ್ಕಿದ್ದು ನನ್ನ ಪುಣ್ಯ. ಯಾವುದೋ ಜನ್ಮದ ಋಣಾನುಬಂಧ ನಮ್ಮನ್ನು ಎಲ್ಲಿಗೋ ಎಳೆದು ತಂದು ನಿಲ್ಲಿಸುತ್ತದೆ.
Life is totally predetermined. ಎಲ್ಲ ಕಾಲ ನಿರ್ಣಯದಂತೆ ನಡೆದು, ಬಾರದು ಬಪ್ಪದು, ಬಪ್ಪದು ತಪ್ಪದು ಎಂಬ ಅಣ್ಣನ ವಾಣಿ ಎಲ್ಲೊ ಒಂದು ಕಡೆ ನಮ್ಮನ್ನು ನಿಲ್ಲಿಸುತ್ತದೆ.
ಸ್ನೇಹ ಶಾಶ್ವತವಾಗಿರಲಿ ಎಂದು ಬಯಸುತ್ತೇವೆ. ಏಳು-ಬೀಳುಗಳ ಸಹಿಸುವ ಶಕ್ತಿಯನ್ನು ಸ್ನೇಹ ಕೊಡುತ್ತದೆ.
ಇತ್ತೀಚಿಗೆ ನಡೆದ 76 ನೆಯ ಸಾಹಿತ್ಯ ಸಮ್ಮೇಳನ, ಲಿಂಗಾಯತ ಪ್ರಗತಿಶೀಲ ಸಂಘದ ಒಂದು ವರ್ಷದ ಶಿವಾನುಭವ ಕಾರ್ಯಕ್ರಮಗಳನ್ನು ಇಬ್ಬರು ಒಟ್ಟಾಗಿ ಯಶಗೊಳಿಸಿದ್ದೇವೆ. ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ಖಾಸಗಿ ನೆಲೆಗಟ್ಟಿನಲ್ಲಿ ಸ್ನೇಹ ಗಟ್ಟಿಗೊಂಡಿದೆ. ಇವರ ಸ್ನೇಹದ ಕುರಿತು ಎಲ್ಲಾದರೂ ಬರೆಯುವ ಮನಸ್ಸಿತ್ತು. ಅಂತಹ ಪ್ರಸಂಗ ಬಂದಿರಲಿಲ್ಲ.

ಅವರ ಷಷ್ಠಬ್ದಿಪೂರ್ಣ ಸಮಾರಂಭದ ಅಭಿನಂದನಾ ಗ್ರಂಥದಲ್ಲಿ ಇಷ್ಟೆಲ್ಲ ಬರೆಯುವ ಸ್ವಾತಂತ್ರ್ಯ ಸಿಗದಿರಬಹುದೆಂಬ ಗುಮಾನಿಯಿಂದ ನಿಮ್ಮೆದುರು ದಾಖಲಿಸಿದ್ದೇನೆ.ಋಣಭಾರ ತೀರಿಸುವುದು ಅಸಾಧ್ಯ ಎನಿಸಿದಾಗ ಬ್ಲಾಗ್ ನಂತಹ ಖಾಸಗಿ ತಾಣಗಳಲ್ಲಿ ಸ್ನೇಹಿತರನ್ನು ಹಿಡಿದಿಡುವ ತವಕವಲ್ಲದೆ, ಆಕಸ್ಮಾತ್ ದಾಖಲಿಸುವ ಪ್ರಸಂಗ ಕೈತಪ್ಪಿದರೂ ಇಲ್ಲಿನ 'ಇ' ಜಗದಲ್ಲಿ ಸ್ನೇಹ ನೆಲೆನಿಲ್ಲಲಿ ಎಂಬ ತುಡಿತ.
ಡಾ. ಜಿ.ಬಿ. ನನ್ನ ಕವನ ಸಂಕಲನಕ್ಕೆ ಬೆನ್ನುಡಿ ಬರೆದು ವಿಮರ್ಶಿಸಿದ್ದಾರೆ. ಪ್ರತಿಯೊಂದು ಪುಟಗಳನ್ನು ತೀಕ್ಷ್ಣವಾಗಿ ಗಮನಿಸಿ ಪ್ರತಿಕ್ರೀಯಿಸುತ್ತಾರೆ. 'ನೆಲದ ಮರೆಯ ನಿಧಾನ' ಕವನ ಸಂಕಲನದಲ್ಲಿ ದಾಖಲಾದ ಅವರ ಕುರಿತಾದ ಪದ್ಯವೂ ಇಲ್ಲಿದೆ.
ಸ್ನೇಹ
ಜಗದ ಮಾರುಕಟ್ಟೆಯಲೆಲ್ಲೂ ಲಭ್ಯವಿರದ
ಮಂದಹಾಸ
ಪ್ರೀತಿ-ವಿಶ್ವಾಸ ನಿತ್ಯ ಶ್ವಾಸಕೋಶ
ಕನಸ ಕಾಣುವದು ಕಂಡ ಕನಸುಗಳಿಗೆ
ಬಣ್ಣ ತುಂಬಲು ಹೆಣಗುವರು
ಚಿತ್ತಾರ ಸುಂದರವಾದಾಗ ಮಕ್ಕಳ ಹಾಗೆ
ನಗು ಕೇಕೆ ಯಾರಿಗೆ ಬೇಕಿತ್ತು ಸದಾ ಗಡಿಬಿಡಿ
ಕ್ರಿಯಾಶೀಲತೆಗೆ ಒಂಚೂರು ವಿರಾಮ ಕೊಡಿ
ಟೋಪಿ ಹಾಕಲು ಯಾವ ಗೂಟವಾದರೇನು?
ಗರಿಗರಿ ಇಸ್ತ್ರಿ ಕೆಡದಿದ್ದರೆ ಸಾಕು - ತಲೆ
ಮಾಸದಿರಲು ಟೋಪಿಯೂ ಬೇಕು, ಗೂಟವೂ ಬೇಕು
ಸುಂದರ ಕನಸುಗಳಿಗೆ ಬಣ್ಣ ತುಂಬುವದಿದ್ದರೆ ಹಗಲು ಬರುವದೇ ಬೇಡ ಬಾಳಿನ ಪಯಣ ಮುಗಿಯದೇ
ಸಾಗಿರಲಿ ಸ್ನೇಹ ಬಂಡಿ.
ಬಾಳ ಕವಲುದಾರಿಯಲಿ ನಾವು ಭಿನ್ನಹಾದಿ ಹಿಡಿಯುವ ಸಮಯ ಸಂದರ್ಭ ಬರಬಹುದು. ಬಾಳಹಾದಿ ಸುದೀರ್ಘವಾದಾಗ ಉಪಕರಿಸಿದವರ ಮರೆಯುವ ಅಪಾಯವಿದೆ.
ಋಣ ಪ್ರಜ್ಞೆ, ಕೃತಜ್ಞತಾಭಾವನೆಗಳನ್ನು ಕಾಲ ಅಳಿಸಿ ಹಾಕುವುದು ದುರಂತವೇ ಸರಿ! ಯಾರನ್ನೊ ಆಶ್ರಯಿಸಿ, ಹಲವರ ಉಪಕಾರದಿಂದ ಮೇಲೆ ಬಂದಿರುತ್ತೇವೆ. ಆದರೆ ಹತ್ತಿದ ಏಣಿ ಒದ್ದಂತೆ ,ನಾನೇ ಮೇಲೆ ಬಂದೆ ಎಂದು ಬೀಗುವ ದುಷ್ಟ ಪ್ರಾಣಿ ಎಂದರೆ 'ಮನುಷ್ಯ'.

ಈ ಅರಿವಿನಿಂದಾಗಿ ಉಪಕರಿಸಿದವರ ಋಣ ಇಂದಿನದಿಂದೇ ತೀರಿಸುವುದು ಕ್ಷೇಮ. ಮುಂದೆ ಸ್ವೀಕರಿಸುವ ಸ್ಥಿತಿಯನ್ನು ಅವರು, ಹೇಳುವ ಸ್ಥಿತಿಯನ್ನು ನಾವು ಕಳೆದುಕೊಂದರೆ ಅಪಚಾರವಲ್ಲವೆ? ಜಗದ ಎಲ್ಲ ಬಂಧನಗಳು ಗಟ್ಟಿಗೊಳ್ಳುವ ಆಶಯದೊಂದಿಗೆ ಇಂತಹ ಅನೇಕ ಮಹನೀಯರನ್ನು ಸ್ಮರಿಸುತ್ತೇನೆ.

Saturday, April 3, 2010

ಬದುಕಿನ ಯಶಸ್ಸಿಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಹೇಗಿರಬೇಕು?

* ಆಧುನಿಕ ಸಂದರ್ಭದಲ್ಲಿ ಅತ್ಯಂತ ಸೂಕ್ತ ಪ್ರಶ್ನೆ. ಇಂದು ವ್ಯಕ್ತಿ ಸಂಬಂಧಗಳು ತೀರಾ ಕೃತಕವಾಗಿಬಿಟ್ಟಿವೆ ಎಂಬುದು ಪೂರ್ಣ ಸತ್ಯವಲ್ಲವಾದರೂ, ಸತ್ಯಕ್ಕೆ ಹತ್ತಿರ ಬರತೊಡಗಿವೆ.
ಹೆಚ್ಚಾದ urbanization, Single family system ಇದಕ್ಕೆ ಕಾರಣವಾಗಿದೆ. ಈಗ ಏನಿದ್ದರೂ ವ್ಯಕ್ತಿ ಕೇಂದ್ರಿತ ಬದುಕು. ವೈಯಕ್ತಿಕ ಯಶಸ್ಸಿನ ಬೆನ್ನು ಹತ್ತಿದಂತೆಲ್ಲ ಅಂತರ್ ಸಂಬಂಧಗಳು ಶಿಥಿಲಗೊಳ್ಳುತ್ತವೆ. ಆ ಬಿರುಕು ಕಣ್ಣಿಗೆ ಗೋಚರವಾಗದಿದ್ದರೂ ಬಿರುಕು ಬಿಟ್ಟಿರುವುದು ನಮಗೆ ಗೊತ್ತಿರುತ್ತದೆ. ಅದನ್ನೆ ಇಂಗ್ಲಿಷ್ ಕವಿ ಓಕಾರ once upon time ಎಂಬ ಪದ್ಯದಲ್ಲಿ ಗುರುತಿಸಿದ್ದಾನೆ.
ಇಷ್ಟಾಗಿಯೂ ಸಂಬಂಧಗಳನ್ನು ನಮ್ಮ ವೈಯಕ್ತಿಕ ತೃಪ್ತಿಗಾಗಿ ನಿಭಾಯಿಸಬೇಕಾಗುತ್ತದೆ. ಅದನ್ನೆ personal and social relationship ಎನ್ನುತ್ತೇವೆ. ಸಾರ್ವಜನಿಕ, ತಾತ್ವಿಕ ಸಂಬಂಧಗಳಿಗಿಂತ ವೈಯಕ್ತಿಕ ಸಂಬಂಧಗಳನ್ನು ತುಂಬಾ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ವೈಯಕ್ತಿಕ ಸಂಬಂಧ ನಿರ್ವಹಣೆಯಲ್ಲಿ ಸಾರ್ವತ್ರಿಕ ಹಾಗೂ ideological issue ಗಳನ್ನು ತಳಕು ಹಾಕಬಾರದು.
ಇದನ್ನು balance ಮಾಡುವುದು ಕಷ್ಟವೆನಿಸಿದರೂ ಜಾಣನಾದವನು manage ಮಾಡಲೇಬೇಕು. ಈ management ಕೇವಲ ತೋರಿಕೆಯಾಗಿರದೆ integrated ಆಗಿರಬೇಕು. ಹೊರಗೂ, ಒಳಗೂ ಎರಡೂ ಕೃತಕವಾಗಿದ್ದರೆ, ಅದು ಬೇರೆಯವರಿಗೆ ಕಂಡು ಬರದಿದ್ದರೂ ನಮ್ಮ ನಿಜವಾದ ಸಂತೋಷವಂತೂ ಹಾಳಗುತ್ತದೆ.
ಹೀಗೆ personal and public ಬಂಧನಗಳ compartment ಗೊತ್ತಿರದಿದ್ದರೆ ನಮ್ಮ ಸಂಬಂಧಗಳು , ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಸ್ನೇಹವೆಂಬುದು ತುಂಬಾ ಖಾಸಗಿ ವಿಷಯ ಅದೆಲ್ಲರ ಸಾರ್ವತ್ರಿಕ ವಿವರಣೆ ಬೇಕಾಗಿಲ್ಲ, ಬೇರೆಯವರು ಅದನ್ನು ಗುರುತಿಸುವ ಅಗತ್ಯವಿಲ್ಲ ಎಂಬ ಸ್ಪಷ್ಟತೆ ಮೊದಲು ನಮ್ಮಲ್ಲಿರಬೇಕು. ಬಹಳಷ್ಟು ಜನರು ಒಂದನ್ನೊಂದು ತಳಕು ಹಾಕಿ ಸಂಬಂಧ ಕೆಡಿಸಿಕೊಳ್ಳುತ್ತಾರೆ. personal & social relation ಗಳ ವ್ಯತ್ಯಾಸ ಗ್ರಹಿಸದವರ ಜೊತೆ ಆಳವಾದ ಸ್ನೇಹ ಬೆಳೆಸಬಾರದು.
ಈ ವಿಶಾಲವಾದ ಬದುಕಿನಲ್ಲಿ ನಮಗೆ ಲಕ್ಷಾಂತರ ಜನರ ಪರಿಚಯವಿರುತ್ತದೆ. ಆದರೆ ಅವರೆಲ್ಲರೂ ಖಂಡಿತಾ ಆತ್ಮೀಯರಲ್ಲ ಕೇವಲ ಪರಿಚಿತರು ಅಥವಾ ಚಿರಪರಿಚಿತರು.
ಒಮ್ಮೊಮ್ಮೆ ಕೆಲವರನ್ನು ಆತ್ಮೀಯರೆಂದು ಆಳವಾಗಿ ನಂಬಿರುತ್ತೇವೆ. ಅವರು ಕೈಕೊಟ್ಟಾಗ shock ಆಗುತ್ತದೆ. ಆ shock ನಿರ್ವಹಣೆಯ ಪರಿಹಾರ ಕಂಡುಕೊಳ್ಳಬೇಕು. ನಾನು ಅವರನ್ನು ತುಂಬಾ ಆತ್ಮೀಯರೆಂದು ಪರಿಗಣಿಸಿದ್ದೆ, ಅವರು ಆ ರೀತಿ ನನ್ನನ್ನು ಪರಿಗಣಿಸಿರಲಿಕ್ಕಿಲ್ಲ ಎಂಬ ಲೆಕ್ಕಾಚಾರದಿಂದ ನೊಂದುಕೊಳ್ಳದೇ ಸರಳವಾಗಿ ತಿರಸ್ಕರಿಸಿ ಕೇವಲ ಪರಿಚಿತರಂತೆ ನಡೆದುಕೊಳ್ಳಬೇಕು.
Window shopping ತರಹ ಸ್ನೇಹಿತರ ಆಯ್ಕೆಯಲ್ಲಿ ತೊಡಗಬಾರದು, ತಾನೇ ತಾನಾಗಿ ದಿನದಿಂದ ದಿನಕ್ಕೆ ರೂಪಗೊಳ್ಳಲು ಬಿಡಬೇಕು. ಒಲೈಕೆಯಿಂದ ರೂಪಿತಗೊಂಡ ಸ್ನೇಹ ಬಹಳ ದಿನ ಬಾಳುವುದಿಲ್ಲ.
personal relation ಗಟ್ಟಿಗೊಳ್ಳಬೇಕೆಂದರೆ, "you should love the strong weakness of your friend" ಎಂಬ ಮಾತಿದೆ. Unless and until you respect weaknesses along with values, terms will not be maintained.
ನಿಮ್ಮ ದೌರ್ಬಲ್ಯಗಳನ್ನು ಅವರು, ಅವರ ದೌರ್ಬಲ್ಯಗಳನ್ನು ನೀವು ಸ್ವೀಕರಿಸಿ ಪರಸ್ಪರ ಹೆಚ್ಚು ಪಾರದರ್ಶಕವಾಗಿದ್ದಲ್ಲಿ ಸ್ನೇಹಕ್ಕೆ ಧಕ್ಕೆ ಬರುವುದಿಲ್ಲ. ಏನಾದರು ಮುಚ್ಚಿಡುವ hidden agenda ಸ್ನೇಹದಲ್ಲಿ, ವೈಯಕ್ತಿಕ ಸಂಬಂಧದಲ್ಲಿ ಪ್ರಾರಂಭವಾದರೆ ಅಂತಹ ಬಂಧನಗಳು ಕಳಚಿಹೋಗುತ್ತವೆ.
ಹೀಗೆ ಬಹಳಷ್ಟು ಜನ ನಮ್ಮಿಂದ ಕಳಚಿಕೊಂಡರೆ, ಪದೇ,ಪದೇ ವಂಚಿತರಾದರೆ we are unfit to manage relation ಎಂದು ಅರಿತುಕೊಂಡು ನಮ್ಮನ್ನು ನಾವು ಆಂತರಿಕವಾಗಿ ಶೋಧಿಸುತ್ತ ಶುದ್ದವಾಗುವ ಕೆಲಸ ಪ್ರಾರಂಭವಾಗಬೇಕು. ಈ ದೃಷ್ಟಿಕೋನದಿಂದ ಸ್ನೇಹವನ್ನು ಬೆಸೆಯುವ ಕಾರ್ಯ ಪ್ರಾರಂಭವಾಗಲಿ Good Luck.

Friday, April 2, 2010

ಹೆಂಡತಿ ಮನೆಯೊಳಗಿದ್ದರೆ

ಹೆಂಡತಿ ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎಂಬ ಕೆ.ಎಸ್.ನ ಅವರ ಹಾಡು ಎಲ್ಲರಿಗೂ apply ಆಗಿದ್ದರೆ ಎಷ್ಟು ಚನ್ನಾಗಿತ್ತು.
"ನಿನಗೆ ಒಳ್ಳೆಯ ಹೆಂಡತಿ ಸಿಕ್ಕರೆ ಪರಮ ಸುಖಿಯಾಗಿರುತ್ತೀ, ಇಲ್ಲದಿದ್ದರೆ ನನ್ನ ಹಾಗೆ ತತ್ವಜ್ಞಾನಿಯಾಗುತ್ತೀ" ಎಂಬ ತತ್ವಜ್ಞಾನಿಯ ಮಾತು ಎಷ್ಟು ಜನರಿಗೆ ಅನ್ವಯಿಸುತ್ತದೆ. ನಾವೆಲ್ಲರೂ ಸುಖಿಗಳು ಅಲ್ಲ, ತತ್ವಜ್ಞಾನಿಗಳು ಅಲ್ಲವೆಂಬುದು ಅಷ್ಟೇ ಸತ್ಯ.
ಈ ಸತ್ಯ, ಮಿಥ್ಯದ ಮಧ್ಯ ಇಂಡಿಯಾ ದೇಶದಲ್ಲಿ ಮದುವೆ, ದಾಂಪತ್ಯ ಎಂಬುದೊಂದು ಪರಮ ಸೋಗಲಾಡಿತನವೆಂದು ಗೊತ್ತಿದ್ದರೂ, ನಾವೆಲ್ಲ ಸುಖಿಗಳಂತೆ ನಟಿಸುವ ಶ್ರೇಷ್ಠ ಕಲಾವಿದರು.
ಸಾಮಾಜಿಕ ಅನಿವಾರ್ಯತೆಯನ್ನುತ್ತಾ ಹೊಡೆದಾಡಿ, ಬಡಿದಾಡಿ, ಮನಸ್ತಾಪ ಮಾಡಿಕೊಂಡು, Happy wedding Anniversary ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತೇವೆ.
ಆದರೆ ಪರಸ್ಪರರಲ್ಲಿ ಎಷ್ಟು understanding ಇದೆ, ಪಾರದರ್ಶಕತೆ ಇದೆ ಎಂದು, ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಎಲ್ಲ ವಿಚಿತ್ರ ಅರ್ಧಸತ್ಯಗಳ ಸಂಕಟಗಳ ಮಧ್ಯ ನಾನು ಮದುವೆಯ ಸಂಕೋಲೆಯನ್ನು ಕಳೆದ ಹದಿನೇಳು ವರ್ಷಗಳಿಂದ ಬಂಧಿಯಾಗಿದ್ದೇನೆ. ಹೆಂಡತಿಗೆ ಹೆದರುವ ಧೈರ್ಯವನ್ನಂತು ಮಾಡಿಲ್ಲ. ಆಕೆ ನನಗೆ ಹೆದರಲಿ ಎಂದು ಬಯಸುವುದಿಲ್ಲ. ಆದರೆ ಪರಸ್ಪರರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇರಲಿ ಎಂದು ಆಶಿಸುತ್ತೇನೆ.
'ಊರಿಗೆ ಸರದಾರ ಹೆಂಡತಿಗೆ ಗುಲಾಮ' ಎಂಬ ಮಾತಿನಿಂದಲೇ ಎಲ್ಲ ಬಂಧುಗಳು ನಮ್ಮನ್ನು ನೋಡಲು ಬಯಸುತ್ತಾರೆ. ನನ್ನ ಕಡೆಯ ಬಂಧುಗಳಿಗೆ ನಾನು ಹೆಂಡತಿಯ ಗುಲಾಮ, ಹೆಂಡತಿ ಕಡೆಯ ಬಂಧುಗಳಿಗೆ ನಾನೊಬ್ಬ strict ಗಂಡ. ಅರೆ ಇದೆಂತ ವಿಪರ್ಯಾಸ. ಆದರೆ ನಾನೇನಿದ್ದೇನೆ ಎಂಬ ಪರಮಸತ್ಯ ನನಗೆ ಮಾತ್ರ ಗೊತ್ತಿದೆ.
ಎಲ್ಲ ವಿಷಯಗಳನ್ನು ಹೆಂಡತಿಗೆ ತಪ್ಪದೇ ಹೇಳುತ್ತೇನೆ. ಹೇಳಿದ್ದೇನೆ. ನನ್ನ ಹಾಳು-ಮೂಳು ದೌರ್ಬಲ್ಯಗಳು, ತೇಲಿ ಹೋದ affair ಗಳು ಆಕೆಗೆ ಗೊತ್ತಿವೆ. ಅದರಿಂದಲೇ ನಮ್ಮ ಸಂಬಂಧ ಕೊಂಚ ಗಟ್ಟಿಯಾಗಿದೆ. ಕೆಲವರ ದೃಷ್ಟಿಯಲ್ಲಿ ನಾನೊಬ್ಬ ಫ್ಯೂಡಲ್ ಗಂಡ ಅನಿಸಿಕೊಂಡಿದ್ದೇನೆ.
ಆದರೆ ನಾವು ಹೇಗೆ ಕಂಡರು, ಏನೇ ಅನಕೊಂಡರು ವಾಸ್ತವ ನಮಗೆ ಮಾತ್ರ ಗೊತ್ತಿರುತ್ತದೆ.
ಕೆಲವರು ಹೆಂಡತಿಯರಿಗೆ ಎಷ್ಟೊಂದು ಪ್ರಾಮಾಣಿಕವಾಗಿ ಹೆದರುತ್ತಾರೆಂದರೆ, ಅವರ ಫೋನ್ ಬಂದ ಕೂಡಲೆ PSIಯನ್ನು ಕಂಡ PC ಹಾಗೆ ಆಡುತ್ತಾರೆ. ಗೌರವ-ಆದರ ಭಕ್ತಿಯಿಂದ phone call ಸ್ವೀಕರಿಸಿ ಯಾವುದೇ ಒಂದು ಅದ್ಭುತ ಸುಳ್ಳುಹೇಳಿ best husband ಅನಿಸಿಕೊಳ್ಳುತ್ತಾರೆ.
ಗುಂಡು ಪಾರ್ಟಿಗಳಲಿ ಗುಂಡು ಹಾಕುತ್ತಿರುವ ಗಂಡಂದಿರು ಮನೆಯವರ phone ಬಂದ ಕೂಡಲೇ ಬಾಯಿಗೆ ಕರವಸ್ತ್ರ ಹಿಡಿದು ಮಾತನಾಡುತ್ತಾರೆ. ಯಾಕ್ರೀ ಅಂತ ಕೇಳಿದರೆ, ಇಲ್ಲಾರಿ ನಮ್ಮ ಮನೆಯವರಿಗೆ ಎಣ್ಣಿ ವಾಸನೆ ಗೊತ್ತಾಗುತ್ತೆ ಎಂದೆನ್ನುತ್ತಾ ಭಯ-ಭಕ್ತಿ ಪ್ರದರ್ಶಿಸುತ್ತಾರೆ.
phone ನಲ್ಲಿಯೇ ಈ ಪರಿ ಆದರೆ, ಇನ್ನೂ ಎದುರಿಗೆ ಹೇಗಾಡಬೇಡ ನೀವೆ ವಿಚಾರ ಮಾಡಿ.
pub,tub ಯಾವುದೇ ಸಂಗತಿಗಳಿದ್ದರೂ ಹೇಳುವ ಸಾಚಾತನ ರೂಢಿಸಿಕೊಂಡಿದ್ದೇನೆ. ಬಹಳಷ್ಟು ಜನ ಹೆಂಡತಿಯರಿಗೆ ಗಂಡ ಬೇರೆ ಹೆಣ್ಣಿನ ವಿಷಯ ತೆಗೆದರೆ ಸಿಟ್ಟು ಬರುತ್ತದೆ ಅಂತ ಕೊಚ್ಚಿಕೊಳ್ಳುತ್ತಾರೆ. ನನಗಂತೂ ಆ ಕಹಿ ಅನುಭವ ಆಗಿಲ್ಲ. ರಸ್ತೆಯಲ್ಲಿ ಹೋಗುವವರೆಲ್ಲ ನನ್ನನ್ನೇ ನೋಡ್ತಾರೆ ಹೆಂಗ್ ಮಾಡ್ಲಿ ಅಂತ ಕೇಳೋಕೆ ನಾನೇನು super ಸ್ಟಾರಾ!
ನನ್ನ ಅವ್ವನಿಗೆ ನಾನು ಹೆಂಡತಿ ಮೇಲೆ ಬಹಳ depend ಆಗಿರುವುದಕ್ಕೆ ಬೇಸರವಿದೆ. ಒಮ್ಮೆ ಅವ್ವ ಬಂದಾಗ, 'ರೇಖಾ cutting ಗೆ ಹೋಗ್ತೇನೆ 50 ರೂಪಾಯಿ ಕೊಡು' ಅಂದರು ಅವ್ವನಿಗೆ ಅಪಮಾನವಾದಂತೆನಿಸಿದೆ. ಸಾವಿರಾರು ರೂಪಾಯಿ ದುಡಿಯೋ ಮಗ ಕೇವಲ 50 ರೂಪಾಯಿಗಾಗಿ ಹೆಂಡತಿಯನ್ನು ಕೇಳುವದೆಂದರೆ ಹೇಗೆ ಎಂದು ಅವರಿವರ ಮುಂದೆ ಬೇಸರಮಾಡಿಕೊಂಡದ್ದು ಕೇಳಿ ಅಬ್ಬಾ! ತಾಯಿ ಕರುಳೆ ಎನಿಸಿತು. ಇಂತಹ ಅವಘಡಗಳು ಆಗದಂತೆ ಅವ್ವ ಬಂದಾಗ ಎಚ್ಚರಚಹಿಸುತ್ತೇನೆ.
ಉಳಿದ ಸಮಯದಲ್ಲಿ ತೀರಾ dependent. ಡ್ರೆಸ್, ಬುಕ್ಸ್, writing tabe ಹೀಗೆ ಎಲ್ಲದಕ್ಕೂ ಆಕೆಯೇ ಬೇಕು. ಒಮ್ಮೊಮ್ಮೆ ಮೀಸೆ trim ಮಾಡಲು ಕೂಡಾ.
ಇಷ್ಟೆಲ್ಲ ಹೆಂಡತಿ ಪುರಾಣ ಹೇಳಲು ಕಾರಣ ಇಂದು ಏಪ್ರಿಲ್ ಒಂದು (ಏಪ್ರಿಲ್ ಫೂಲ್ ಅಲ್ಲ) ಹೆಂಡತಿ ರೇಖಾಳ 37 ನೇ ಹುಟ್ಟುಹಬ್ಬ. Gift ತರಲು, ಹೊರಗಡೆ ಕರೆದುಕೊಂಡು ಹೋಗಲು ಬಿಡುವಾಗದಿದ್ದರೂ ಬ್ಲಾಗ್ ನಲ್ಲಿ ಆಕೆಯ+ ನನ್ನ ಸಂಬಂಧದ ನಂಟುಗಳನ್ನು ಬರೆಯಲು ಸಾಧ್ಯವಾಯ್ತಲ್ಲ ಅಷ್ಟೇ ಸಾಕು! I wish her along with you. Happy Birthaday to Rekha.

Thursday, April 1, 2010

ಸಿರಾಜ ಬಿಸರಳ್ಳಿ
ಜನವರಿ ತಿಂಗಳ ಮೊದಲ ವಾರದಲ್ಲಿ ಕೊಪ್ಪಳ ತಾಲೂಕ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಯಾಗಿ ಹೋಗಿದ್ದೆ. ಸ್ವಂತ ಜಿಲ್ಲೆ ಎಂಬ ಅಭಿಮಾನಕ್ಕೆ, ಸ್ನೇಹಿತರ ಒತ್ತಾಯಕ್ಕೆ ಮಣಿದು ಭಾಗ್ಯನಗರದ ಸಮ್ಮೇಳನದಲ್ಲಿ ಪ಻ಲ್ಗೊಂಡು ನ್ನ ೆಂದಿನ ಶೈಲಿಯಲ್ಲಿ ವಾಸ್ತವದ ಸ್ಥಿತಿಗತಿಯನ್ನು ಬಿಚ್ಚಿಟ್ಟೆ. ಅದು ಅನೇಕರಿಗೆ ಆಪ್ತವೆನಿಸಿತು.
ಕಾರ್ಯಕ್ರಮ ಮುಗಿಸಿ ಸ್ನೇಹಿತ ಪ್ರಹ್ಲಾದ ಬೆಟಗೇರಿ ಮನೆಯಲ್ಲಿ ಊಟಮುಗಿಸಿ ಗದುಗಿಗೆ ಮರಳಿದೆ.
ಎರೆಡು ದಿನಗಳ ನಂತರ ತಲುಪಿದ SMS ನನ್ನ ಪರಿಚಯ ಪತ್ರವನ್ನು ಕಳಿಸಲು ಸೂಚಿಸಿತ್ತು.
ಕೊಪ್ಪಳದಲ್ಲಿ Studio ಇಟ್ಟುಕೊಂಡಿರುವ B.E. ಪದವೀಧರ ಸಿರಾಜ್ ಬಿಸರಳ್ಳಿ Kannada net.com ನಲ್ಲಿ ಕೊಪ್ಪಳ ಜಿಲ್ಲೆಯ 'ಇ' ಪತ್ರಿಕೆಯನ್ನು ಪ್ರಾರಂಭಿಸಿದ್ದು ಅದರಲ್ಲಿ ನನ್ನ ಪರಿಚಯ ಹಾಗೂ Photo ಹಾಕುವುದಾಗಿ ವಿವರಿಸಿದ್ದರು.
ಇರಲಿ ಎಂದು ಕಳಿಸಿದೆ. ನಂತರ net ವೀಕ್ಷಿಸಿದಾಗ ನನ್ನ ಪರಿಚಯ ಸುಂದರವಾಗಿ ಪ್ರಕಟವಾಗಿತ್ತು.
ಕುತೂಹಲಕ್ಕೆ ಸಿರಾಜ್ ಫೋನಾಯಿಸಿದೆ. ಇಲ್ಲ ಸರ್ ನಿಮ್ಮದೊಂದು ಬ್ಲಾಗ್ ಪ್ರಾರಂಭಿಸುವ ಆಸೆ ಇದೆ. ಆ ಮೂಲಕ ನೀವು ಬೇರೆ ಬೇರೆ ಕಡೆ ಹೆಚ್ಚು ತಲುಪಲು ಸಾಧ್ಯ ಎಂದರು. 'ಇ' ಜಗತ್ತಿನ ಪೂರ್ಣ ಸಂಪರ್ಕವಿರದ ನಾನು ಆಯಿತು ನೋಡೋಣ ಎಂದೆ.
ಮತ್ತೆ 2ನೇ, ಫ್ರೆಬ್ರುವರಿ 2010 ರಂದು ಕೊಪ್ಪಳದ ಇನ್ನೊಂದು ಕಾರ್ಯಕ್ರಮಕ್ಕೆ ಹೋದಾಗ ಅವಸರದಲ್ಲಿಯೇ ಸಿರಾಜರ ಸ್ಟುಡಿಯೋಗೆ ಹೋದೆ. ಕೇವಲ ಹತ್ತೇ ನಿಮಿಷದಲ್ಲಿ ಬ್ಲಾಗ್ ಖಾತೆ ಆರಂಭಿಸಿಯೇ ಬಿಟ್ಟರು. ಅವಸರದಲ್ಲಿ 'ಸಿದ್ದು ಕಾಲ' ಎಂದು ಹೆಸರಿಟ್ಟು, ನನ್ನ ಹೆಸರಿನ್ನೇ ID ಯಾಗಿ ಸೂಚಿಸಿದೆ. ಸಾಧ್ಯವಾದರೆ ಬರೆದು ನಿಮಗೆ ಕಳಿಸುವೆ ನೀವೇ update ಮಾಡಿರಿ ಎಂದೆ. ಆದರೆ ಕೇವಲ ಎರಡು ತಿಂಗಳಲ್ಲಿ ನನ್ನನ್ನು ನಾನೇ ಬ್ಲಾಗ್ ಗೆ ಅರ್ಪಿಸಿಕೊಂಡೆ. ಆಗಷ್ಟು ಈಗಿಷ್ಟು ಬರೆಯಲಾರಂಭಿಸಿದೆ. ಈ ಮಧ್ಯ 76 ನೇ ಸಾಹಿತ್ಯ ಸಮ್ಮೇಳನ ಬರೆಯಲು ಪ್ರೇರೆಪಿಸಿತು. ಕೇವಲ 2 ತಿಂಗಳಲ್ಲಿ 20 ಲೇಖನಗಳನ್ನು ಬರೆದೆ. ಅವುಗಳನ್ನು ಒಪ್ಪ ಓರಣವಾಗಿ ಜೋಡಿಸಿ upload ಮಾಡಿದ ಸಿರಾಜ್, ನನ್ನ ಕಾಲೇಜಿನ ಕಂಪ್ಯೂಟರ್ ಸಂಗಾತಿಗಳಾದ ವೀರೇಶ, ಜಾದವ್ ಹಾಗೂ ದೀಪಾರಿಗೆ ಹೇಗೆ upload ಮಾಡಬೇಕು ಎಂಬುದನ್ನು ಕಲಿಸಿಕೊಟ್ಟರು. ಈಗ 500 ಜನ ಭೇಟಿ ಕೊಟ್ಟಿದ್ದಾರೆ. ಬ್ಲಾಗ್ ದಿನದಿಂದ ದಿನಕ್ಕೆ popular ಆಗುತ್ತಲಿದೆ. ಇಂತಹ ಒಂದು ಅಪರೂಪದ ಜಗತ್ತಿಗೆ, ನನ್ನ ಭಾಷಣ ಕೇಳಿ ಅಭಿಮಾನದಿಂದ ಪರಿಚಯಿಸಿದ ಸಿರಾಜ್ ಬಿಸರಳ್ಳಿಗೆ thanks ಹೇಳಿದರೆ ಕೃತಕವಾದೀತು. ಹೇಳದೇ ಮರೆತರೂ ಅಪಚಾರವಾದೀತು. I am always grateful to you Mr. siraj.

ಪ್ರೀತಿ ಪ್ರೇಮದ ಧ್ಯಾನದಲಿ


ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧ, ಪರಸ್ಪರ ಆಕರ್ಷಣೆ, ಅದೇ ಹೆಣಗಾಟದಲ್ಲಿ ಪೋಲಾಗುವ ಸಮಯ. ಕರಗುವ ಭಾವನೆಗಳನ್ನು ಈಗ ಒಂಚೂರು ವಯಸ್ಸು ಮಾಗಿದ ಮೇಲೆ ನೆನಪಿಸಿಕೊಂಡರೆ ಅಯ್ಯೋ ಎನಿಸುತ್ತದೆ.
ಹರೆಯದಲ್ಲಿ ಯಾರೋ ನೋಡಿ ನಕ್ಕರೆ ಸಾಕು, ಇಡೀ ದಿನ ನಗುವನ್ನು ಮೆಲುಕು ಹಾಕಿ ಅದಕೆ ನೂರೆಂಟು ಕನಸುಗಳ ಪೋಣಿಸಿ ಕಲ್ಪನಾ ಲೋಕದಲಿ ವಿಹರಿಸುವುದರಲ್ಲಿ ಎಂಥಾ ಮಜವಿತ್ತು.
ಆಕೆ ಅಥವಾ ಅವನು ಯಾಕೆ ನಕ್ಕ ಎಂಬುದು ಮುಖ್ಯವಲ್ಲ. ಆ ನಗು ತಂದೊಡ್ಡುವ thrill ಇದೆಯಲ್ಲ ಅದು ಕೋಟಿ ಕೊಟ್ಟರೂ ಸಿಗುವುದಿಲ್ಲ.
16 ರಿಂದ 25 ರವರೆಗೆ ಯುವಕರು ತೀರಾ ಭಾವುಕರಾಗಿರುತ್ತಾರೆ. ಇದು ನಾನು ಒಬ್ಬ ಶಿಕ್ಷಕನಾಗಿ ಇಂದಿನ ವಿದ್ಯಾರ್ಥಿಗಳ ಸ್ಥಿತಿಯಲ್ಲಿ ನೋಡಿ ಹೇಳುವ ಸಂಗತಿಯಲ್ಲ. ಆ ಹರೆಯದ ದಿನಗಳನ್ನು ನಾನೇ ಅನುಭವಿಸಿದ ಸಂಕಟಾನುಭವದ ಮಧುರ ಕ್ಷಣಗಳ ಆಧರಿಸಿ ಹೇಳುವ ಮಾತಿದು.
ಹರೆಯದ ನನ್ನ ತೀವ್ರ, ಅವಾಸ್ತವ ಭಾವುಕತೆಯನ್ನು ನನ್ನಷ್ಟಕ್ಕೆ ನಾನೇ ಸೂಕ್ಷ್ಮತೆ ಎಂದು ವಾಖ್ಯಾನಿಸಿಕೊಂಡಿದ್ದೂ ಇದೆ!
ಆದರೆ ಆ ಕಾಲದ ಸತ್ಯಾ ಸತ್ಯೆತೆಗಳನ್ನು ಈಗ ಮೆಲುಕು ಹಾಕಿದಾಗ ಎಂತಹ ಅಮೂಲ್ಯ ಸಮಯವನ್ನು ಬರೀ ಭ್ರಮೆಗಳಲಿ ಕಳೆದನಲ್ಲ ಎಂಬ ವ್ಯಥೆ.
ಇದೊಂದು ರೀತಿಯ ಮನಸಿಗೆ ಆವರಿಸುವ ಮಂಕು. ಅದು ತಪ್ಪೆಂದು ಗೊತ್ತಿದ್ದರೂ, ಅದೇ ತಪ್ಪನ್ನು ಮತ್ತೆ, ಮತ್ತೆ ಮಾಡಲು ಮನಸು ಹಾತೊರೆಯುತ್ತದೆ ಎಂದರೆ ಅದೆಂತಹ ಮಾಯೆ!
ಆ ಕಾಲ ಘಟ್ಟದಲ್ಲಿ, ಕಾಲೇಜು ಜೀವನದಲ್ಲಿ ಕನಸುಗಳನ್ನು ಬಿತ್ತಿದ ಚಲುವೆಯರನ್ನು ಅಲ್ಲಲ್ಲ ಎಲ್ಲರನು ಚಲುವೆಯರೆಂದು ಪರಿಭಾವಿಸಿದ ನನ್ನ ಮನಸ್ಸನ್ನು ನೆನಪಿಸಿಕೊಂಡು ಈಗಲೂ ಮಜಾ ಅನುಭವಿಸುತ್ತೇನೆ.20,30,40 ಮತ್ತೆ + ಆದಂತೆಲ್ಲ ಮನಸು ವಾಸ್ತವದ ಕಡೆಗೆ ವಾಲಬಹುದೆಂದು ನಾನಂತು ಅಂದುಕೊಂಡಿರಲಿಲ್ಲ.
20 ರಲ್ಲಿ ಸ್ನೇಹ ಹಸ್ತ ಚಾಚಿ ಭಾವನೆಗಳನ್ನು ಹಂಚಿಕೊಂಡು,(ದೇಹ ಹಂಚಿಕೊಳ್ಳುವ ವಾತಾವರಣ ಆಗಿನ್ನು ನಿರ್ಮಾಣವಾಗಿರಲಿಲ್ಲವಾದ್ದರಿಂದ) ಕ್ಯಾಂಪಸ್ ನಲ್ಲಿ ನಿಧಾನ ಗತಿಯಲ್ಲಿ ಹಾಕುವ ಹೆಜ್ಜೆಗಳ ಗುರುತಲ್ಲಿ ಅಚ್ಚೊತ್ತಿದ ದಿನಗಳು ಈಗ ಬರೀ ನೆನಪು.
ಹಾಗೆ 20 ರಲ್ಲಿ ಪ್ರೀತಿ ತೋರಿದ ಗೆಳತಿ ತೀರಾ ಅಚಾನಕಾಗಿ 25 ವರ್ಷಗಳ ನಂತರ ಫೋನಾಯಿಸಿದಾಗ ಹೇಗಾಗಿರಬೇಡ. ಬಹುಶ: ಈ ಸಾಲುಗಳನು ಓದುವ ಹರೆಯದ ಮನಸುಗಳಿಗೆ ಇಂತಹ ಅನುಭವ ಸಿಗಲು ಸಾಧ್ಯವೇ ಇಲ್ಲ. ಯಾಕೆಂದರೆ ನೀವು ಅದಕ್ಕಾಗಿ ಹತ್ತಾರು ವರ್ಷ ಕಾಯಬೇಕು.
ದೂರದ ಮುಂಬೈಯಲಿ ನೆಲೆಸಿರುವ ಗೆಳೆತಿ ತನ್ನೆಲ್ಲ ಬಾಳ ಕ್ಷಣಗಳನು ಹಂಚಿಕೊಂಡಾಗ ವಾಸ್ತವದ ದಂಡೆಯಲಿ ನಿಂತು, ಭ್ರಮೆಯ ಅಲೆಗಳನು ನೋಡಿ ನಗುತ್ತಿರುವಾಗ ಮತ್ತೆ ಆ ದಂಡೆಯಿಂದ ಅಲೆಗಳಲಿ ಧುಮುಕಿದ್ದು ಅಚ್ಚರಿಯಲ್ಲವೆ?
ವಾಸ್ತವ ವಾದಕ್ಕೆ ವಾಲಿದ್ದೇನೆ ಎಂಬ ನನ್ನ ಭ್ರಮೆಯನ್ನು ಕಳಚಿಹಾಕಿ ನಗ್ನಗೊಳಿಸುವ ಶಕ್ತಿ ಪ್ರೀತಿಗೆ ಇದೆ ಎಂದು ಮತ್ತೆ ಗೊತ್ತಾಯಿತು. ಆಗ ನನಗೆ ನಲವತ್ತರ ಆಜು-ಬಾಜು.
ದಿನಾ ತಪ್ಪದೇ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ, ನಂತರ ಮದುವೆಯಾಗಿ ಗಂಡನ ಮನೆ ಸೇರಿದ, ಕುಟುಂಬ ನಿರ್ವಹಣೆಯಲ್ಲಿ ಅನುಭವಿಸಿದ ನೋವು-ನಲಿವುಗಳ ರಸಾಯನ ವಿವರಿಸುತ್ತಾ ಹೋದ ಗೆಳತಿಗೆ ದಣಿವೇ ಇರಲಿಲ್ಲ. ಗಂಟೆಗಟ್ಟಲೆ ಭಾವನೆಗಳನ್ನು ರವಾನಿಸಿದ ಮೊಬೈಲ್ ಸೆಟ್ ಭಾವ ತೀವ್ರಗೊಂಡು ತನ್ನ ಮೈ ಬೆಚ್ಚಗಾಗಿಸಿ, ಚಾರ್ಜ ಕಳೆದುಕೊಂಡು ಅಸಹಾಯಕವಾದಾಗ ವಾಸ್ತವಕ್ಕೆ ಬಂದು Good Night ಅಂದಾಗ ಸರಿ ಸುಮಾರು ಮಧ್ಯ ರಾತ್ರಿ.
ನಿತ್ಯ ಮೆಗಾಸೀರಿಯಲ್ ನಂತೆ ಹೇಳುತ್ತ ಸಾಗಿದ ಗೆಳತಿಯ ಕಥೆಯ ಅಂತ್ಯ tragic ಆಗಿರಬಹುದು ಎಂದು ನಾನಂತು ಅಂದುಕೊಂಡಿರಲಿಲ್ಲ.
ಹೋಗಲಿ ಈಗ ಮಗ ಎಲ್ಲಿದ್ದಾನೆ? ಗಂಡ ಹೇಗಿದ್ದಾನೆ? ಯಾವಾಗ ಅವನನ್ನು ಪರಿಚಯಿಸುತ್ತಿಯಾ? ಎಂಬ ನನ್ನ ಪ್ರಶ್ನೆಗಳ ರಭಸ ಹೆಚ್ಚಾದಾಗ ಆಚೆ ಕಡೆಯ ಗೆಳತಿಯ ಧ್ವನಿಯಲ್ಲಿನ ನಗು ಮಾಯವಾಯಿತು. ಉತ್ಸಾಹ ಕುಗ್ಗಿ ಹೋಯಿತು. ಹಲೋ, ಹಲೋ ಎಂದರಚಿದರೂ ಉತ್ತರವಿಲ್ಲ. ಮತ್ತೆ, ಮತ್ತೆ ಕಡಲು ಶುರು ಮಾಡಿದಾಗ ಜೋರಾದ ಅಳು ನನಗೆ Shock. ಇಷ್ಟೊಂದು ದಿನ ಅತ್ಯಂತ ಸಂಭ್ರಮದಿಂದ ಮಾತಾಡಿದ ಗೆಳತಿ ಇಂದೇಕೆ ಕುಗ್ಗಿಹೋದಳೆನಿಸಿ ಕಸಿವಿಸಿಯಾಯಿತು. No, Please don't ask me anything more. ನಿನ್ನ ಇಷ್ಟು ದಿನದ ಮಾತುಗಳು ಬತ್ತಿಹೋದ ನನ್ನ ಬಾಳಿಗೆ ಹೊಸತನ, ಚೇತನ ನೀಡಿವೆ ಈಗ ಆ ಮಾತು ಬೇಡ ಎಂದಳು.
ನಾನು ಪ್ರಕಟಿಸಿದ ಪುಸ್ತಕಗಳು ಕಳಿಸಲು ಪಡೆದಿದ್ದ ಅಂಚೆ ವಿಳಾಸದ ಮೇಲೆ ಕಣ್ಣಾಡಿಸಿದೆ. ಮುಂಬೈ ಅಷ್ಟೇನು ದೂರವಿಲ್ಲ. ಬಾಲ್ಯದ ಗೆಳತಿಯಿಂದಾಗಿ ಇನ್ನೂ ಹತ್ತಿರವಾಗಿದೆ. ರೇಲ್ವೆ ಸ್ಟೇಶನ್ ಕಡೆ ಗಾಡಿ ಓಡಿಸಿ ಮುಂಬೈಗೆ ಟಿಕೇಟ್ ರಿಸರ್ವ ಮಾಡಿಸಿದೆ. ನಾನು ಮುಂಬೈಗೆ ಧಾವಿಸುವ ಯಾವುದೇ ಸೂಚನೆಯನ್ನು ಆಕೆಗೆ ನೀಡದೇ ಮುಂಬೈ ತಲುಪಿದೆ.

0