Thursday, April 8, 2010

ತುಂಡಾದ ಬ್ರೆಡ್ ಎಂಜಲಾದ ಜ್ಯೂಸ್


ನಮ್ಮ ಜಮಾನಾದ ಲವ್ ಸ್ಟೋರಿ ಯಾಕೋ ನೆನಪಾಯಿತು. ಅಂದು ಪ್ರೀತಿಯನ್ನು express ಮಾಡಬೇಕೆಂಬ ತುಡಿತವಿದ್ದರೂ ಹೇಳಲಾಗದ ಸಂಕೋಚ ನೆನಸಿಕೊಂಡರೆ ಅಚ್ಚರಿ.
ಈಗ ಏನಿದ್ದರೂ direct, ಒಂದೆರೆಡು visit ಆದರೆ ಸಾಕು, hugging & kissing ಅಯ್ಯೋ ಏನು ಕಾಲವಪ್ಪ, ಗೊಣಗಾಡುತ್ತೇವೆ ಅಷ್ಟೆ!
ಧಾರವಾಡ botanical garden ನಲ್ಲಿ ನಿನ್ನೊಂದಿಗೆ ಏಕಾಂತವಾಗಿ ಸುತ್ತಲೂ ಭಯ. ಎಲ್ಲಿ ಯಾರು ಏನು ಅಂದುಕೊಂಡಾರೋ ಎಂಬ ಧಾವಂತ. ಹೇಳಲೇಬೇಕಾದ ಎಷ್ಟೋ ಸಂಗತಿಗಳು ಮಂಗಮಾಯ. ಆದರೆ ಕಣ್ಣಲ್ಲೇ ವ್ಯಕ್ತಭಾವ ಗ್ರಹಿಸಿದರೂ ಪ್ರಯೋಜನವಿಲ್ಲ. ಏನೇನೋ ಅಡ್ಡಗೋಡೆಗಳು. ಭವಿತವ್ಯದ ಜವಾಬ್ದಾರಿಗಳು.
ಹೀಗಿದ್ದಾಗ I Love You, I Marry you ಎನ್ನೋ ಮಾತುಗಳಿಗೆ ಜಾಗವಿರಲಿಲ್ಲವಾದರೂ, ಪ್ರೀತಿಸದೆ ಇರಲಾಗಲಿಲ್ಲ.
ಕಾಲೇಜು ಕ್ಯಾಂಪಸ್ ನಲ್ಲಿ ಮಾತ್ರ ಇಬ್ಬರು ತಿರುಗಾಡುವ ಧೈರ್ಯ, ಆಕಸ್ಮಾತ್ ಕ್ಯಾಂಪಸ್ ದಾಟಬೇಕೆಂದರೆ ಹರಸಾಹಸ. ನೂರೆಂಟು ಆತಂಕಗಳು.
ಆದರೂ ಜೀವ ತಡೆಯಬೇಕಲ್ಲ! ಮುಟ್ಟದ, ತಟ್ಟದ, ತಬ್ಬದ ಪ್ರೀತಿಗಾಗಿ ಎಷ್ಟೊಂದು ತವಕ. ಮಾತು, ಮಾತು ಬರೀ ಮಾತು. ಏನೇನೋ ಆದರ್ಶದ ಕನಸುಗಳ ಸುತ್ತಲೇ ಗಿರಕಿ. ಮುಖ್ಯ ವಿಷಯಕ್ಕೆ ಒಮ್ಮೆಯೂ ಬರಲೇ ಇಲ್ಲ.
ಹೀಗೆ ಸಾಗಿದ degree ಯ ಕೊನೆ ವರ್ಷದಲ್ಲಿ ಏನೋ ಒಂದು ರೀತಿಯ ಭಂಡ ಧೈರ್ಯ. ಹೇಳಬೇಕೆಂಬ ಗಟ್ಟಿ ನಿರ್ಣಯ ನಾಲ್ಕರ ಇಳಿಬಿಸಿಲಿನಲ್ಲಿ ಹಾಸ್ಟೆಲ್ ಹಿಂದಿನ ಕ್ಯಾಂಟಿನ್ ನಲ್ಲಿ ಮತ್ತದೇ ಗೊಂದಲ.
ಇನ್ನೇನು degree final year ಮುಗಿತಾ ಬಂತು ಇನ್ನಾದರೂ ಹೇಳಬಹುದು ಎಂಬ ನಂಬಿಕೆ ಇಬ್ಬರಲ್ಲಿ.
ಒಂದು ದಿನ ದಾಂಡೇಲಿ ಕಾಡಿಗೆ ಪಯಣಿಸಲು ನಿರ್ಧಾರ. ಆದರೆ ಸ್ವಯಂ ನಿರ್ಬಂಧದ ಲಕ್ಷ್ಮಣ ರೇಖೆ. ನಮ್ಮೊಂದಿಗೆ ಯಾರಾದರೂ company ಇರಲಿ ಎಂಬ ಒಳ ಒಪ್ಪಂದ. ಸರಿ like minded ಸಂಗಾತಿ ಜೆಸ್ಸಿಕಾ ನಮ್ಮ ಜೊತೆಗೆ. ಮನಸ್ಸಿನಲ್ಲಿ ಕಳವಳ ತುಂಬಿಕೊಂಡೆ ದಾಂಡೇಲಿಗೆ ದಾಪುಗಾಲು.
ಅಲ್ಲಿ ಕಾಡ ತುಂಬಾ ಸುತ್ತಾಟ. ಈ ದಟ್ಟ ಕಾಡಾದರೂ ನಮ್ಮ ನೆರವಿಗೆ ಬಂದೀತೆಂಬ ಭರವಸೆ. ಊಹೂಂ! ಮತ್ತದೇ ಕಾಡ ಹರಟೆ.
ಹೇಳಬೇಕಾದ ಮಾತುಗಳು ಹೊರ ಬರಲೇ ಇಲ್ಲ. ಜೆಸ್ಸಿಕಾ ಕೇಳಿದಳು. ನೀವಿಲ್ಲಿ ಬಂದದ್ದಾದರು ಯಾಕೆ ಮಾರಾಯರೆ. ಹೇಳೋದಿದ್ದರೆ ಹೇಳಿ ಮುಂದಿನ ದಾರಿ ಕಂಡುಕೋಬೇಕು. ಬರೀ ಹೀಗೆ ಸುತ್ತಿ ಬಳಸಿ ಕಾಡು ತಿರುಗಿ, ಹಳೆ ಸಿನೆಮಾ ಹಿರೋಗಳ ತರಹ ಮರ ಸುತ್ತೋ ಡ್ಯುಯಟ್ ಆಯ್ತಲ್ಲ ನಿಮ್ಮದು ಎಂದರು ಧೈರ್ಯ ಇಲ್ಲವೇ ಇಲ್ಲ.
ಸಂಜೆ ವಾಪಾಸಾಗುವ ಧಾವಂತ, halt ಬೇಡ ಎಂಬ ಭಾವ ಎಲ್ಲರಲ್ಲೂ, ಆ ಕಾಲದ ಪ್ರೀತಿಯೇ ಹಾಗೆ. ತುಂಬ ನಿಷ್ಕಾಮ, ನಿರ್ಮಲ. ಇಷ್ಟು ಸಾಕಲ್ಲ. ಈ ಜನುಮಕೆ ಎಂಬ ಸಂಭ್ರಮ.
ಸಂಜೆ indirect ಆಗಿ ಪ್ರೀತಿಯನ್ನು ಹೇಳಲೇಬೇಕೆಂದು ತಿರ್ಮಾನಿಸಿದವಳು ನೀನು. ಹೇಗೆ ಹೇಳುತ್ತಿ ಎಂಬ ಕುತೂಹಲ.
ಮೂರು ಪ್ಲೇಟ್ ಬ್ರೆಡ್ ಟೋಸ್ಟ್, apple juice ಗೆ ಆರ್ಡರ್. ಒಂದು ತುಂಡು bread ಕಚ್ಬಿಟ್ಟೆ, ನಾಲ್ಕು ಹನಿ juice ಹೀರಿಕೊಂಡೆ. ಸಂಜೆ ಹಿಂತಿರುಗುವ ಸಮಯವಾಗಿದೆ ಕೇಳು ಮಾರಾಯ ಎಂಬ ನಿನ್ನ ಮಾತಿನ ಹಿನ್ನಲೆ ಅರ್ಥವಾಗಲಿಲ್ಲ. ಎದ್ದು cash counter ಗೆ ಹೋಗಿದ್ದೆ. ನನ್ನ ಮುಂದಿದ್ದ ಬ್ರೆಡ್ ತುಂಡನ್ನು, ಕುಡಿದಿಟ್ಟ juice ನ್ನು ಕಚ್ಚಿ ಎಂಜಲಾಗಿಸಿ ನೀನು ಸಂಭ್ರಮಿಸಿದ್ದನ್ನು ಓರೆಗಣ್ಣಿನಿಂದಲೆ ನೋಡಿದೆ. ಅಬ್ಬಾ! I Love You, I Kiss You ಅಂದಷ್ಟೇ ಖುಷಿಯಾಯಿತು.
ಮತ್ತೊಮ್ಮೆ ನಾನು ತಿಂದಿಟ್ಟ bread piece ನ್ನು ಎಂಜಲಾಗಿಸಿದ juice ನ್ನು ಮತ್ತೊಮ್ಮೆ ತುಟಿಗೆ ತಾಗಿಸಿಕೊಂಡಾಗಲೇ ನಿನ್ನ hugging & kissing ನನಗೆ reach ಆಯಿತು.
ಅಬ್ಬಾ! ಆ ಕಾಲದ ಪ್ರೀತಿ ಎಷ್ಟೊಂದು ದಟ್ಟ, symbolic ಈಗಿನ ನೇರ ಪ್ರೀತಿಯಲ್ಲಿ ಖಂಡಿತಾ ಆ ಮಜವಿಲ್ಲ ಬಿಡಿ!

2 comments:

  1. ಈಗಿನ ಫಾಸ್ಟ ಯುಗದಲ್ಲಿ ನಿಮ್ಮ ಕಾಲದ ಪ್ರೀತಿಯ ಮಾಧುರ್ಯವಿಲ್ಲ ಬಿಡಿ.

    ReplyDelete
  2. savi nenapina butti bicchittu manasannu becchage madiddakke thanks

    ReplyDelete