*ಅನಿಸಿದ್ದು ಹೇಳಲಾಗದು ನೋಡಿದ್ದು ಸಹಿಸಲಾಗದು*
*ಅಸಂಗತ ಬರಹಗಳು*
ಅನಿಸದ್ದೆಲ್ಲ ಹೇಳಲೇಬೇಕೆಂಬ ನಿಯಮವೇನೂ ಇಲ್ಲ ಆದರೆ ಹೇಳಲೇಬೇಕು ಹೇಳುವ ಸಮಯ ಬಂದಾಗ.
ನೋಡಿದ್ದೆಲ್ಲ ಸಹಿಸಲಾಗದು ಅದರೂ ಸಹಿಸಿಕೊಳ್ಳಲೇಬೇಕು.
ಹೀಗೆ ಯಾರಾದರೊಬ್ಬರು ಅಂತಹ ರಿಸ್ಕ್ ತೆಗೆದುಕೊಂಡಾಗಲೇ ಬರಹ ರೂಪದಲಿ ದಾಖಲಾಗುವುದು. ಹಾಗೆ ದಾಖಲಾದದ್ದನ್ನು ಓದಿದಾಗ ' ಅಯ್ಯೋ ಇದು ನನ್ನ ಅನುಭವ ' ಅನಿಸಿಬಿಟ್ಟರೆ ಬರಹ ಸಾರ್ಥಕ.
ಹೀಗೆ ಬರೆದಾಗ ಕಥೆ, ಕವನ,ಕಾದಂಬರಿ, ಸಿನೆಮಾ ರೂಪ ತಾಳಿ ಎದುರಿಗೆ ನಿಲ್ಲುವುದು.
ನಮ್ಮ ಬದುಕಿನಲ್ಲಿ ಬರುವ ಕೆಲವು ವ್ಯಕ್ತಿಗಳು ಅಂತಹ ಸ್ಪೂರ್ತಿಯಾಗುತ್ತಾರೆ. ಕಥೆಯಾಗಿ ಪಾತ್ರವಾಗಿ ಅರಳುತ್ತಾರೆ.
ಹೇಳಲಾಗದೇ ಒದ್ದಾಡಲು ಕಾರಣರಾಗುತ್ತಾರೆ. *ಪ್ರೀತಿ-ಪ್ರೇಮ-ಪ್ರಣಯ*,*ಊಟ-ನಿದ್ರೆ-ಕಾಮ* ತಡೆದುಕೊಳ್ಳಲಾಗದ ಅಗತ್ಯಗಳು.
ಅಗತ್ಯಗಳ ಅನುಭವಿಸಿ,ತಲ್ಲಣಿಸಿದ್ದನ್ನು ದಾಖಲಿಸಬೇಕು ಎಂಬ ತುಡಿತಕ್ಕೆ ಕಾಲ ಕೂಡಿ ಬರದಿರಲು ಸಾಮಾಜಿಕ ಭಯವೇ ಕಾರಣ.
*ಏನಾದರು ಅಂದುಕೊಂಡರೇ* ಎಂಬ ಭೀತಿಯಲಿ,
ಚರಿತ್ರೆ, ಚಾರಿತ್ರ್ಯದ ನೆಪದಲಿ ಸತ್ಯ ಸತ್ತು ಹೋಗುತ್ತದೆ.
ಆದರೆ...
ಮನಸು ಪಕ್ವವಾದ ಮೇಲೆ, ಕಾಲ ಕೂಡಿ ಬಂದಾಗ, ನಮ್ಮ ಭಾವನೆಗಳಿಗೆ, ಮರೆಯಲಾಗದ ಅನುಭವಗಳಿಗೆ ಜೀವ ತುಂಬಲೇಬೇಕು.
ಅಂತಹ ಹತ್ತಾರು ಘಟನೆಗಳ ಮೂರ್ತ ರೂಪವೇ ನನ್ನ ಹೊಸ ಪುಸ್ತಕ *ಅಸಂಗತ ಬರಹಗಳು*.
ಆಡಾಡ್ತಾ ಬರೆದದ್ದು 220 ಇಪ್ಪತ್ತು ಪುಟ ತಲುಪಿದೆ.
ಓದಲು ಒಂದೆರಡು ವಾರ ಕಾಯಬೇಕು ಅಷ್ಟೇ.
----ಸಿದ್ದು ಯಾಪಲಪರವಿ.
No comments:
Post a Comment