Tuesday, March 27, 2018

ಈ ರಂಗಿನಾಟ

ಬೇಡ ಕೃಷ್ಣ ಈ ರಂಗಿನಾಟವ ಎನ್ನಲಾದೀತೆ ?

ಉದ್ದೀಪನಗೊಂಡ ಮೈಮನಗಳ ಪುಳಕಗೊಳಿಸಿ
ಅರಳಿ ನಿಂತ ಭಾವನೆಗಳ ರಮಿಸಿ ಸಂತೈಸಿ
ಕೆರಳಿದ ಕಾಮನೆಗಳ ದಹಿಸಲು ಸಾಕು ಈ
ರಂಗಿನಾಟ ಮುದ್ದು ಕೃಷ್ಣ

ಎಲ್ಲೆಲ್ಲೂ ಸಿಗದ ಪರಮ ಸುಖ ನಿನ್ನ ಒಪ್ಪಿಗೆಯ
ಬಿಸಿಯಪ್ಪುಗೆಯಲಿ
ಬಿಗಿದ ಹಿಡಿತ ಸಡಿಲು ಬೇಡ ತಾಳಲಾರೆ ನಾ
ಈ ದೇಹ ಕಂಪನ

ಹಿಂಡಿ ಹಿಪ್ಪೆ ಮಾಡು ರಂಗಿನಾಟದ ನೆಪದಲಿ
ಪ್ರತಿ ಅಂಗುಲದಲಿ ಹೊಳೆವ ಮಿಂಚು ಹಿಗ್ಗಿಸಿದೆ
ದೇಹ ದಾಹವ

ಬಿಡಬೇಡ ಎನ್ನ ಕೈ ನಲುಗಿ ನುಗ್ಗಾಗಲಿ ಎನ್ನ
ಮೈಮಾಟ ನಿನ್ನ ಜಗ್ಗಾಟದಲಿ

ಹಿತವಾದ ಮುಲುಕಾಟ ಬೆವರು ಹನಿಗಳ
ಅಲೆದಾಟ ಸಾಕಲ್ಲ ನಿನ್ನ ಹುರಿದುಂಬಿಸಲು

ಬೇಕು ಇನ್ನು ಏನು ನಿನಗೆ ಅರ್ಪಿಸಿ ಬಿಡುವೆ
ಎಲ್ಲ ನಿನಗೆ ತೊರೆಯಬೇಡ ಎನ್ನ ನೀ ಹಣ್ಣು ಮಾಡದೇ

ನೀ ಸುರಿದ ರಂಗು ಹಬ್ಬಿಸಿ ಎಬ್ಬಿಸಿದೆ ಮೂಡಿಸಿದೆ
ಕಾಮನ ಬಿಲ್ಲ

ಅಡಿಯಿಂದ ಮುಡಿಯವರೆಗೆ ಮುಂದುವರೆಯಲಿ
ಅದರ ದಾಳಿ ತುಂಬುವವರೆಗೆ ಎನ್ನ ಉದರ

ಮುಲುಗಿ ನಲುಗಿ ಮೆಲ್ಲಗೆ ಚೀರಿ ಹಂಗು ಹರಿದು
ಎದೆ ಬಿರಿದು ಒಡಲ ತುಂಬ ಹರಿದು ಬಿಡಲಿ
ನಿನ್ನೊಲವ ಧಾರೆ

---ಸಿದ್ದು ಯಾಪಲಪರವಿ

No comments:

Post a Comment