*ನೀ ನಲುಗದಿರು*
ಇಡೀ ಬದುಕಲನುಭವಿಸಿದ ಭಯ
ತಲ್ಲಣಕೀಗ ಬಿದ್ದ ತೆರೆ
ಕರಿಯ ದೇಹದಲಡಗಿದ ಅನುಮಾನದ
ಕರಿನೆರಳ ಬಿಸಿಗೆ ಬಾಡಿದ ಮನ
ಸಹಿಸಲಾಗದ ಗಂಡಸಿನ ಮನದ
ಕಪ್ಪುಅನುಮಾನದ ಹುತ್ತದಲಡಗಿದ
ಹಾವ ಹೊರಗೆಳೆದು ಕಾಡಿಗಟ್ಟಿ
ನಿರ್ಭಯದಿ ನಸುನಗೆಯ ಬೆಳಕ
ಚಲ್ಲು
ನಾ
ಅವನು ಕಳಿಸಿದ ಕೊಡುಗೆ
ತೊಟ್ಟು ಸಂಭ್ರಮಿಸು ಮೈ
ಛಳಿ ಬಿಟ್ಟು
ನೋಡಲಾಗದೇ ನಿನ್ನ ನೋವಾ
ದೇವ ಕಳಿಸಿಹನು ಎನ್ನ
ನಿನ್ನ ಬರಸೆಳೆದು ರಮಿಸಿ
ಮುದ್ದು ಮಾಡಿ ಒಲವ
ಮುಲಾಮು ಸವರಿ ಮನದ
ಗಾಯವಳಿಸಲು
ನಿನ್ನ ನಗೆಯ ಉಳಿಸಲು
ಸಾಕು ಸಾಕು ಸಂಶಯದ
ಸುಳಿಯ ತಿರುಗುಣಿಯಲಿ ತಿರುಗಿ
ತಿರುಗಿ ಬೀಳಬೇಡ
ಏಳು ಎದ್ದೇಳು ಯಾವ
ಪ್ರೀತಿಯೂ ಅನಾಚಾರವಲ್ಲ
ದೇಹಸೆಳೆತ
ಮೀರದನುರಾಗಕಿಲ್ಲ ರಾಗ
ದ್ವೇಷಾಸುಯೆಯ ಸೋಂಕು
ಈಗ ಇದು ಕೇವಲ
ಒಲವ ನಲಿವಾಟ ಮೈಮನಗಳ
ಮಿಡುಕಾಟ
ನಿಷ್ಟೆಯ ದುಡಿತ ನಿಯತ್ತಿನ
ಬದುಕನರಿಯದವರ ಸಂಗ
ನಿಸ್ಸಂಗವಾದ ಬಳಿಕ ನೀ
ನೀ ನಲ್ಲ ಬರೀ ಅವನೇ ಎಲ್ಲ
ತೋಳಿಗಾಸರೆಯಾದ ಒಲವ ಭಾರವ
ಹಿತವಾಗಿ ಮೈದಡವಿ ಜೋಪಾನ
ಮಾಡಿ ಲಾಲಿ ಹಾಡಿ ನಕ್ಕು ನಲಿದು
ನಿರ್ಮಲ ತೋಳ ಬಂಧಿಯಲಿ
ಬಂಧಿಸಿ ನಿಶ್ಚಿಂತಳಾಗಿ ಹಾಯಾಗಿ
ಮಲಗಿ ಮೈಮರೆತು ಬಿಡು
ವಾಸ್ತವದ ಭೂತ ನುಂಗಿ
ನುಗ್ಗುವ ಮುನ್ನ
ಮುನ್ನಡೆಯಲಿ ಈ ಹೊಸ
ಒಲವ ಪಯಣ...*ನೀ ನಲುಗದಿರು*
ಇಡೀ ಬದುಕಲನುಭವಿಸಿದ ಭಯ
ತಲ್ಲಣಕೀಗ ಬಿದ್ದ ತೆರೆ
ಕರಿಯ ದೇಹದಲಡಗಿದ ಅನುಮಾನದ
ಕರಿನೆರಳ ಬಿಸಿಗೆ ಬಾಡಿದ ಮನ
ಸಹಿಸಲಾಗದ ಗಂಡಸಿನ ಮನದ
ಕಪ್ಪುಅನುಮಾನದ ಹುತ್ತದಲಡಗಿದ
ಹಾವ ಹೊರಗೆಳೆದು ಕಾಡಿಗಟ್ಟಿ
ನಿರ್ಭಯದಿ ನಸುನಗೆಯ ಬೆಳಕ
ಚಲ್ಲು
ನಾ
ಅವನು ಕಳಿಸಿದ ಕೊಡುಗೆ
ತೊಟ್ಟು ಸಂಭ್ರಮಿಸು ಮೈ
ಛಳಿ ಬಿಟ್ಟು
ನೋಡಲಾಗದೇ ನಿನ್ನ ನೋವಾ
ದೇವ ಕಳಿಸಿಹನು ಎನ್ನ
ನಿನ್ನ ಬರಸೆಳೆದು ರಮಿಸಿ
ಮುದ್ದು ಮಾಡಿ ಒಲವ
ಮುಲಾಮು ಸವರಿ ಮನದ
ಗಾಯವಳಿಸಲು
ನಿನ್ನ ನಗೆಯ ಉಳಿಸಲು
ಸಾಕು ಸಾಕು ಸಂಶಯದ
ಸುಳಿಯ ತಿರುಗುಣಿಯಲಿ ತಿರುಗಿ
ತಿರುಗಿ ಬೀಳಬೇಡ
ಏಳು ಎದ್ದೇಳು ಯಾವ
ಪ್ರೀತಿಯೂ ಅನಾಚಾರವಲ್ಲ
ದೇಹಸೆಳೆತ
ಮೀರದನುರಾಗಕಿಲ್ಲ ರಾಗ
ದ್ವೇಷಾಸುಯೆಯ ಸೋಂಕು
ಈಗ ಇದು ಕೇವಲ
ಒಲವ ನಲಿವಾಟ ಮೈಮನಗಳ
ಮಿಡುಕಾಟ
ನಿಷ್ಟೆಯ ದುಡಿತ ನಿಯತ್ತಿನ
ಬದುಕನರಿಯದವರ ಸಂಗ
ನಿಸ್ಸಂಗವಾದ ಬಳಿಕ ನೀ
ನೀ ನಲ್ಲ ಬರೀ ಅವನೇ ಎಲ್ಲ
ತೋಳಿಗಾಸರೆಯಾದ ಒಲವ ಭಾರವ
ಹಿತವಾಗಿ ಮೈದಡವಿ ಜೋಪಾನ
ಮಾಡಿ ಲಾಲಿ ಹಾಡಿ ನಕ್ಕು ನಲಿದು
ನಿರ್ಮಲ ತೋಳ ಬಂಧಿಯಲಿ
ಬಂಧಿಸಿ ನಿಶ್ಚಿಂತಳಾಗಿ ಹಾಯಾಗಿ
ಮಲಗಿ ಮೈಮರೆತು ಬಿಡು
ವಾಸ್ತವದ ಭೂತ ನುಂಗಿ
ನುಗ್ಗುವ ಮುನ್ನ
ಮುನ್ನಡೆಯಲಿ ಈ ಹೊಸ
ಒಲವ ಪಯಣ...
-----ಸಿದ್ದು ಯಾಪಲಪರವಿ
No comments:
Post a Comment