*ಪ್ರಕಾಶ್ ರೈ ಹಾಗೂ ಸತ್ಯಾನುಸಂಧಾನ*
ಪ್ರಕಾಶ್ ರಾಜ್ ಉರ್ಫ್ ರೈ ಅದ್ಭುತ ನಟ.
ಈಗ ಅಷ್ಟೇ ಚನ್ನಾಗಿ ಬರೆಯಲಾರಂಭಿಸಿದ್ದಾರೆ. ಸೆಲೆಬ್ರಿಟಿ ನಟರಿಗೂ ಏನಾದರೂ ಸಾಧಿಸಬೇಕು ಎಂಬ ಹುಚ್ಚಿರುತ್ತದೆ.
ನಮ್ಮಂಥ ಬರಹಗಾರರಿಗೆ ಕೇವಲ ಬರಹಗಳಿಂದ ಸೆಲೆಬ್ರಿಟಿ ಆಗಲ್ಲ ಇನ್ನೂ ಏನೇನೋ ಆಗಬೇಕು ಅನಿಸಿರುತ್ತೆ ಆದರೆ ಎಲ್ಲಾ ಸೆಲೆಬ್ರಿಟಿಗಳು ತಮಗರಿವಿಲ್ಲದಂತೆ ಮನದಾಳದಲ್ಲಿ ಬರಹ ಹಾಗೂ ಸಂಗೀತವನ್ನು ಆರಾಧಿಸುತ್ತಾರೆ.
ಅದಕ್ಕಾಗಿ ಒಂದು ಹಂತದಲ್ಲಿ ಅವರೂ ಬರಹಗಾರರಾಗಿ ಬೆಳೆದು, ಸಾರ್ವಜನಿಕ ಚಳುವಳಿಗಳಲ್ಲಿ ಭಾಗವಹಿಸಿ ಮುಖ್ಯವಾಹಿನಿಗೆ ಸೇರಲು ಚಡಪಡಿಸುತ್ತಾರೆ.
*ಇದೆಲ್ಲ ತುಂಬ ಹಣ ಹಾಗೂ ಖ್ಯಾತಿ ಗಳಿಸಿದ ನಂತರವೇ*!
ಈ ಹಿಂದೆ ರೈ ಬಗ್ಗೆ Weekend with Ramesh ನೋಡಿದಾಗ ಬರೆದಿದ್ದೆ ಈಗ ಪ್ರಜಾವಾಣಿ ಅಂಕಣ ಓದಿದ ಮೇಲೆ ಮತ್ತೆ ಬರೆಯಬೇಕೆನಿಸಿತು.
ಪ್ರಕಾಶ್ ಎಲ್ಲ ನಟರಂತೆ ಸೂಕ್ಷ್ಮಜೀವಿ. ಮಾತನಾಡುವ, ಬರೆಯುವ, ಆಲೋಚಿಸುವ ಶಕ್ತಿಯೂ ಇದೆ.
ಹೊರಗಡೆ ಹೋಗಿ ಹಣ-ಹೆಸರು ಮಾಡಿದ ಮೇಲೂ ಕನ್ನಡದಲ್ಲಿ ಬರೆಯುವಾಗ ರಾಜ್ ಆಗದೇ ರೈ ಆಗಿರುವುದೇ ಇದಕ್ಕೇ ಸಾಕ್ಷಿ. I congratulate him for the same.
ಪ್ರಜಾವಾಣಿಯ *ಅವರವರ ಭಾವಕ್ಕೆ...* ಅಂಕಣದಲ್ಲಿ ಬರೆದ *ಸತ್ಯ ನಗ್ನವಾಗಿ ನಿಂತಿದೆ...*
ಓದಿದ ಮೇಲೆ ಅರ್ಧಸತ್ಯ ಹೇಳಿದ್ದಾರೆ ಎಂಬ ಅನುಮಾನಕ್ಕೆ ಕ್ಷಮೆ ಇರಲಿ, ಅದೂ ನನ್ನ ಮಿತಿಯೂ ಇರಬಹುದು.
ರೈ ಹೆಚ್ಚು ಕಡಿಮೆ ನಮ್ಮ ವಾರಿಗೆಯವರು ಆದರೆ ಹೆಚ್ಚು ಹೆಸರು ಮಾಡಿದ್ದಾರೆ. ಆಲೋಚನಾ ಕ್ರಮದ ಹಾದಿಯಲ್ಲಿ ಸಮಕಾಲೀನತೆ ಇರುವುದೊಂದು ಖುಷಿ.
ಅಂಕಣದಲ್ಲಿ ಬರೆದಿರುವ ಸತ್ಯ ಸುಂದರವಾಗಿ ಓದಿಸಿಕೊಂಡು ಹೋಗುತ್ತೆ.
ಅನಿರೀಕ್ಷಿತ ಮದುವೆಯಾದ ಮೇಲೆ ಭೆಟಿಯಾದ ಹಳೆಯ ಗೆಳತಿ ಆಹ್ವಾನಿಸಿದಾಗ ಶೂಟಿಂಗ್ ನೆಪ ಹೇಳಿ ನಾನಾಗಿದ್ದರೆ ತಪ್ಪಿಸಿಕೊಳ್ಳುತ್ತಿರಲಿಲ್ಲ.
ಒಂದೇ ಮಂಚದ ಮೇಲೆ ಇನ್ನೂ ಸುಂದರವಾಗಿ ಕಾಣುತ್ತಿದ್ದ ಸಂಗಾತಿ ತಾನಾಗಿ ಆಹ್ವಾನಿಸಿದಾಗ ತಿರಸ್ಕಾರ ಮಾಡಿ ಅವಳ ಭಾವನಗಳ ಘಾಸಿಗೊಳಿಸುತ್ತಿದ್ದಿಲ್ಲ.
ಸಿಕ್ಕಷ್ಟು ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಇಬ್ಬರೂ ಸಂಭ್ರಮಿಸುತ್ತಿದ್ದೆವು.
You could have done the same thing Prakash.
ಒಂದು ವೇಳೆ ನೀವು ನನ್ನ ಹಾಗೆ ಆಲೋಚನೆ ಮಾಡಿ ಅನುಭವಿಸಿ ಅರ್ಧಸತ್ಯ ಹೇಳಿದ್ದರೂ ಸಂತೋಷ ಪಡುತ್ತೇನೆ.
*ಹೇಳು ಮಾರಾರ್ಯೆ ನಾ ಯಾರಿಗೂ ಹೇಳುವುದಿಲ್ಲ*.
ಇಂತಹ ಪ್ರಸಂಗ ನನ್ನ ಬದುಕಿಲ್ಲಿಯೂ ಬಂದಿತ್ತು. ಮದುವೆಯಾಗದೇ ಗಂಡ-ಹೆಂಡತಿ ಅನಿಸಿಕೊಳ್ಳದೇ ಕೇವಲ wanted to be friends without physical contact ಅಂದುಕೊಂಡಿದ್ದೆ.
ಹಾಗೆಂದುಕೊಂಡು ಜೇಬಿನಲ್ಲಿ ಹಣ ಇರದಿದ್ದರೂ Star hotel ನಲ್ಲಿ ಸಂಧಿಸಿದೆ.
ಸುಮಾರು ದಿನಗಳ ಗೆಳೆತನಕೊಂದು ತಾರ್ಕಿಕ ಅಂತ್ಯ ಹಾಡಬೇಕು ಅಂದುಕೊಂಡಿದ್ದೆ...
ಆದರೆ ಪ್ರಕಾಶ್ ಹಾಗಾಗಲಿಲ್ಲ. ಭಿನ್ನವಾಗಿ ನಡೆದುಹೋಯಿತು.
ಆದರೆ ಅದಕ್ಕೆ ಯಾವುದೋ ವಿಷಾದವಿಲ್ಲ. ಸತ್ಯದೊಂದಿಗೆ ನಾನೂ ನಗ್ನವಾದದ್ದು ಯಾರಿಗೂ ಹೇಳಿಲ್ಲ ಹೇಳಲಾಗಿಲ್ಲ.
ಹೇಳಿದರೇ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ.
ಅದಕ್ಕೆ ನಾ ನಿಜ ಹೇಳಿರುವೆ...
*ಏಕೆಂದರೆ I'm not celebrity like you...*
----ಸಿದ್ದು ಯಾಪಲಪರವಿ.
No comments:
Post a Comment